ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
18 JUN 2020 4:10PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಡಾ. ಹರ್ಷ ವರ್ಧನ್ ಅವರಿಂದ ಭಾರತದ ಮೊದಲ ಮೊಬೈಲ್ ಐ-ಲ್ಯಾಬ್ (ಸಾಂಕ್ರಾಮಿಕ ರೋಗ ರೋಗನಿರ್ಣಯ ಪ್ರಯೋಗಾಲಯ)ಗೆ ಚಾಲನೆ
ಚೇತರಿಕೆಯ ಪ್ರಮಾಣ 52.96% ಕ್ಕೆ ಹೆಚ್ಚಳ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ್ ರವರು ಕೋವಿಡ್-19 ಪರೀಕ್ಷೆಯ ಕೊನೆಯ ಹಂತದ ಪರೀಕ್ಷಾ ಸೌಲಭ್ಯಕ್ಕಾಗಿ ಭಾರತದ ಮೊದಲ ಮೊಬೈಲ್ ಐ-ಲ್ಯಾಬ್ (ಸಾಂಕ್ರಾಮಿಕ ರೋಗ ರೋಗನಿರ್ಣಯ ಪ್ರಯೋಗಾಲಯ)ಗೆ ಚಾಲನೆ ನೀಡಿದರು. ಇದನ್ನು ದೇಶದ ದೂರದ, ಒಳನಾಡುಗಳಲ್ಲಿ ಮತ್ತು ಪ್ರವೇಶಿಸಲಾಗದ ಭಾಗಗಳಲ್ಲಿ ನಿಯೋಜಿಸಲಾಗುವುದು ಮತ್ತು ಸಿಜಿಹೆಚ್ಎಸ್ ದರಗಳ ಪ್ರಕಾರ ದಿನವೊಂದಕ್ಕೆ 25 ಕೋವಿಡ್-19 ಆರ್.ಟಿ-ಪಿಸಿಆರ್ ಪರೀಕ್ಷೆಗಳು, 300 ಎಲಿಸಾ ಪರೀಕ್ಷೆಗಳು, ಟಿಬಿ, ಎಚ್ಐವಿ ಇತ್ಯಾದಿಗಳಿಗೆ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಂಕ್ರಾಮಿಕ ರೋಗ ರೋಗನಿರ್ಣಯ ಪ್ರಯೋಗಾಲಯ (ಐ-ಎಲ್ಎಬಿ) ವನ್ನು ಕೋವಿಡ್ ಕಮಾಂಡ್ ಕಾರ್ಯತಂತ್ರದಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವನ್ನು ಹೊಂದಿರುತ್ತದೆ.
ಕಳೆದ 24 ಗಂಟೆಗಳಲ್ಲಿ 7390 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಯಿತು. ಒಟ್ಟು 1,94,324 ರೋಗಿಗಳನ್ನು ಈವರೆಗೆ ಕೋವಿಡ್-194ರಿಂದ ಗುಣಪಡಿಸಲಾಗಿದೆ. ಚೇತರಿಕೆ ಪ್ರಮಾಣವು 52.96% ಕ್ಕೆ ಏರಿದೆ. ಪ್ರಸ್ತುತ, 1,60,384 ಸಕ್ರಿಯ ಪ್ರಕರಣಗಳು ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.
ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 699 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳನ್ನು 254 ಕ್ಕೆ ಹೆಚ್ಚಿಸಲಾಗಿದೆ (ಒಟ್ಟು 953). ಅವುಗಳ ವಿವರಣೆ ಈ ಕೆಳಗಿನಂತಿವೆ:
ರಿಯಲ್-ಟೈಮ್ ಆರ್ಟಿ ಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 540 (ಸರ್ಕಾರಿ: 349 + ಖಾಸಗಿ: 191)
ಟ್ರೂನಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 340 (ಸರ್ಕಾರಿ: 325 + ಖಾಸಗಿ: 15)
ಸಿಬಿಎನ್ಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 73 (ಸರ್ಕಾರಿ: 25 + ಖಾಸಗಿ: 48)
ಕಳೆದ 24 ಗಂಟೆಗಳಲ್ಲಿ 1,65,412 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು 62,49,668 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಈ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1632564)
Visitor Counter : 203
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam