ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಶ್ರೀ ಜಸ್ಟಿನ್ ಟ್ರುಡೊ ನಡುವೆ ದೂರವಾಣಿ ಮಾತುಕತೆ

Posted On: 16 JUN 2020 10:27PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಶ್ರೀ ಜಸ್ಟಿನ್ ಟ್ರುಡೊ ನಡುವೆ ದೂರವಾಣಿ ಮಾತುಕತೆ

 

ಕೆನಡಾ ಪ್ರಧಾನ ಮಂತ್ರಿ ಶ್ರೀ ಜಸ್ಟಿನ್ ಟ್ರುಡೊ ಅವರೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ದೂರವಾಣಿ ಮಾತುಕತೆ ನಡೆಸಿದರು.

ಉಭಯ ನಾಯಕರು ತಮ್ಮ ದೇಶಗಳಲ್ಲಿ ಕೋವೊಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಪರಿಸ್ಥಿತಿಯ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು ಮತ್ತು ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಯೋಗದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

ಭಾರತ-ಕೆನಡಾ ಸಹಭಾಗಿತ್ವವು ಕೋವಿಡ್ ನಂತರದ ಜಗತ್ತಿನಲ್ಲಿ ಜಾಗತಿಕವಾಗಿ ಮಾನವೀಯ ಮೌಲ್ಯಗಳನ್ನು ಮುನ್ನಡೆಸುವುದೂ ಸೇರಿದಂತೆ ಒಳ್ಳೆಯತನಕ್ಕೆ ಒಂದು ಶಕ್ತಿಯಾಗಬಹುದು ಎಂದು ಅವರು ಒಪ್ಪಿಕೊಂಡರು.

ಡಬ್ಲ್ಯುಎಚ್ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರುಆರೋಗ್ಯಸಾಮಾಜಿಕಆರ್ಥಿಕ ಮತ್ತು ರಾಜಕೀಯ ಕುರಿತು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಒಪ್ಪಿದರು.

ಕೆನಡಾದಲ್ಲಿರುವ ಭಾರತೀಯ ನಾಗರಿಕರಿಗೆ ಇತ್ತೀಚಿನ ದಿನಗಳಲ್ಲಿ ಕೆನಡಾದ ಆಡಳಿತವು ನೀಡಿದ ನೆರವು ಮತ್ತು ಅವರು ಭಾರತಕ್ಕೆ ವಾಪಸಾಗಲು ಕಲ್ಪಿಸಿದ ಅನುಕೂಲವನ್ನು ಪ್ರಧಾನಿ ಮೋದಿ ಶ್ಲಾಘಿಸಿದರುಪ್ರಧಾನ ಮಂತ್ರಿ ಟ್ರುಡೊ ಅವರು ಭಾರತದಿಂದ ಕೆನಡಾದ ನಾಗರಿಕರು ಹಿಂದಿರುಗಲು ನೀಡಿದ ಸೌಲಭ್ಯದ ಬಗ್ಗೆಯೂ ಸಂತೋಷ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಪರಸ್ಪರ ಸಮಾಲೋಚನೆಗಳನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿದರುಬೃಹತ್ ಆರ್ಥಿಕತೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಪ್ಪಿಕೊಂಡಿರುವುದರಿಂದಭಾರತ ಮತ್ತು ಕೆನಡಾ ಅನೇಕ ಜಾಗತಿಕ ವಿಷಯಗಳ ಬಗ್ಗೆ ಸ್ವಾಭಾವಿಕವಾದ ಸಹಮತವನ್ನು ಹೊಂದಿರುವ ಬಗ್ಗೆ ಅವರು ಸಮ್ಮತಿಸಿದರು.

***



(Release ID: 1632308) Visitor Counter : 187