ಪ್ರಧಾನ ಮಂತ್ರಿಯವರ ಕಛೇರಿ

ಲಾಕ್ ಡೌನ್ ತೆರವಿನ ನಂತರದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ

Posted On: 16 JUN 2020 5:35PM by PIB Bengaluru

ಲಾಕ್ ಡೌನ್ ತೆರವಿನ ನಂತರದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ

ನಾವು ಜೀವ ಮತ್ತು ಬದುಕು ಎರಡರ ಬಗ್ಗೆಯೂ ಗಮನ ಹರಿಸಬೇಕು;

ಆರೋಗ್ಯ ಮೂಲಸೌಕರ್ಯಕ್ಕೆ ಉತ್ತೇಜನ ನೀಡಿಪರೀಕ್ಷೆ ಹಾಗೂ ಪತ್ತೆಹಚ್ಚುವಿಕೆ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಿಪ್ರಧಾನಿ

ಪ್ರತಿಯೊಂದು ಜೀವವನ್ನು ಉಳಿಸಲು ನಾವು ಪ್ರಯತ್ನಿಸಿದ್ದೇವೆದೇಶದಲ್ಲಿ ಚೇತರಿಕೆ ದರ ಈಗ ಶೇ.50 ಕ್ಕಿಂತ ಹೆಚ್ಚಿದೆಪ್ರಧಾನ ಮಂತ್ರಿ

ಕೊರೊನಾ ಸಾವು ಕಡಿಮೆಯಿರುವ ದೇಶಗಳಲ್ಲಿ ಭಾರತಪ್ರಧಾನಿ

ಕುಟುಂಬದ ಮತ್ತು ಸಮುದಾಯದ ಸುರಕ್ಷತೆಗಾಗಿಮುಖಗವಸು ಅಥವಾ ಮುಖಕವಚವಿಲ್ಲದೆ ಮನೆಯಿಂದ ಹೊರಗೆ ಹೋಗಬಾರದುಪ್ರಧಾನಿ

ಇತ್ತೀಚಿನ ಪ್ರಯತ್ನಗಳಿಂದಾಗಿಆರ್ಥಿಕತೆಯಲ್ಲಿ ಈಗ ಹೊಸ ಚಿಗುರುಗಳು ಕಾಣಿಸುತ್ತಿವೆನಾವು  ಮುಂದೆ ಸಾಗಲು ಇವು ಪ್ರೋತ್ಸಾಹಿಸುತ್ತಿವೆಪ್ರಧಾನಿ

ಮುಖ್ಯಮಂತ್ರಿಗಳಿಂದ ರಾಜ್ಯಗಳ ಪರಿಸ್ಥಿತಿಯ ಬಗ್ಗೆ ಫೀಡ್ ಬ್ಯಾಕ್ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯಗಳು ಮತ್ತು ಅವುಗಳ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ

 

ಕೋವಿಡ್ -19 ಸಾಂಕ್ರಾಮಿಕ ರೋಗದ ನಿಭಾವಣೆಯ ಮುಂದಿನ ಹಾದಿಗಳು ಹಾಗೂ ಲಾಕ್ ಡೌನ್ ತೆರವಿನ ನಂತರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದರುಇದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಯವರ ಆರನೇ ಸಂವಾದವಾಗಿದೆ ಮೊದಲು ಮಾರ್ಚ್ 20, ಏಪ್ರಿಲ್ 2, ಏಪ್ರಿಲ್ 11, ಏಪ್ರಿಲ್ 27 ಮತ್ತು ಮೇ 11 ರಂದು ಸಂವಾದ ನಡೆದಿತ್ತು.

ವೈರಸ್ ನಿಗ್ರಹಕ್ಕೆ ಸಮಯೋಚಿತ ನಿರ್ಧಾರಗಳು

ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೈಗೊಂಡ ಸಮಯೋಚಿತ ನಿರ್ಧಾರಗಳು ಅದರ ಹರಡುವಿಕೆಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿರುವ ಬಗ್ಗೆ  ಪ್ರಧಾನಿ ಗಮನಿಸಿದರುಸಹಕಾರಿ ಒಕ್ಕೂಟ ವ್ಯವಸ್ಥೆಗೆ ನಾವು ಒಂದು ಉದಾಹರಣೆಯನ್ನು ಜಗತ್ತಿಗೆ ಪ್ರಸ್ತುತಪಡಿಸಿರುವುದನ್ನು ಜನರು ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಪ್ರತಿಯೊಂದು ಜೀವವನ್ನೂ ಉಳಿಸಲು ನಾವು ಪ್ರಯತ್ನಿಸಿದ್ದೇವೆ ಎಂದ ಪ್ರಧಾನಿಯವರುಎಲ್ಲಾ ರೀತಿಯ ಸಾರಿಗೆ ಈಗ ಮುಕ್ತವಾಗಿವೆಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆಸಾವಿರಾರು ಭಾರತೀಯರು ವಿದೇಶದಿಂದ ಮರಳಿದ್ದಾರೆ ಎಂದರು.  ಭಾರತವು ಭಾರಿ ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಪ್ರಪಂಚದ ಉಳಿದ ಭಾಗದಂತೆ ಕೊರೊನಾವೈರಸ್ ಜೀವಕ್ಕೆ ಅಪಾಯಕಾರಿ ಎಂದು ಭಾವಿಸಿಲ್ಲಆರೋಗ್ಯ ತಜ್ಞರು ವಿಶ್ವವ್ಯಾಪಿ ಭಾರತೀಯರು ತೋರಿಸಿದ ಶಿಸ್ತನ್ನು ಶ್ಲಾಘಿಸುತ್ತಿದ್ದಾರೆದೇಶದಲ್ಲಿ ಚೇತರಿಕೆಯ ಪ್ರಮಾಣವು ಈಗ ಶೇ.50 ಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರುಕೊರೊನಾವೈರಸ್ನಿಂದ ಕಡಿಮೆ ಸಾವು ಸಂಭವಿಸುತ್ತಿರುವವ ರಾಷ್ಟ್ರಗಳಲ್ಲಿ ಭಾರತವೂ ಇದೆ ಎಂದು ಅವರು ಹೇಳಿದರುನಾವು ಶಿಸ್ತುಬದ್ಧವಾಗಿ ಎಲ್ಲಾ ನಿಯಮಗಳನ್ನು ಪಾಲಿಸಿದರೆಕೊರೊನಾವೈರಸ್ ಕನಿಷ್ಠ ಹಾನಿಯನ್ನುಂಟು ಮಾಡುತ್ತದೆ ಎಂಬುದು ಒಂದು ದೊಡ್ಡ ಪಾಠ ಎಂದು ಪ್ರಧಾನಿ ಹೇಳಿದರುಮುಖಗವಸುಮುಖಕವಚದ ಬಳಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರುಇವುಗಳಿಲ್ಲದೇ ಯಾರೂ ಹೊರಹೋಗಬಾರದುಇದು ಒಬ್ಬ ವ್ಯಕ್ತಿಗೆ ಮಾತ್ರವಲ್ಲಅವರ ಕುಟುಂಬ ಮತ್ತು ಸಮುದಾಯಕ್ಕೂ ಮುಖ್ಯವಾಗಿದೆ. ‘ದೋ ಗಜ್ ದೂರಿ’ ಎಂಬ ಮಂತ್ರವನ್ನು ಅನುಸರಿಸುವುದುಸಾಬೂನಿನಿಂದ ಕೈ ತೊಳೆಯುವುದು ಮತ್ತು ಸ್ಯಾನಿಟೈಜರ್ ಬಳಸುವ ಬಗ್ಗೆಯೂ ಅವರು ಮಾತನಾಡಿದರುಶಿಸ್ತಿನ ಯಾವುದೇ ಸಡಿಲತೆಯು ವೈರಸ್ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಪ್ರಧಾನಿಯವರು ಎಚ್ಚರಿಸಿದರು.

ಆರ್ಥಿಕತೆಯಲ್ಲಿ ಹೊಸ ಚಿಗುರುಗಳು

ಕಳೆದ ಕೆಲವು ವಾರಗಳ ಪ್ರಯತ್ನದಿಂದಆರ್ಥಿಕತೆಯಲ್ಲಿ ಹಸಿರು ಚಿಗುರುಗಳು ಗೋಚರಿಸುತ್ತಿವೆ ಹಿಂದೆ ಕುಸಿದಿದ್ದ ವಿದ್ಯುತ್ ಬಳಕೆಯಲ್ಲಿ ಏರಿಕೆಯಾಗಿದೆ ವರ್ಷದ ಮೇ ತಿಂಗಳಲ್ಲಿ ರಸಗೊಬ್ಬರ ಮಾರಾಟವು ಗಮನಾರ್ಹ ಏರಿಕೆ ಕಂಡಿದೆಖಾರಿಫ್ ಬಿತ್ತನೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆದ್ವಿಚಕ್ರ ವಾಹನಗಳ ತಯಾರಿಕೆ ಹೆಚ್ಚುತ್ತಿದೆಚಿಲ್ಲರೆ ವ್ಯಾಪಾರದಲ್ಲಿ ಡಿಜಿಟಲ್ ಪಾವತಿಯು ಲಾಕ್ಡೌನ್ ಪೂರ್ವದಲ್ಲಿ ಇದ್ದ ಮಟ್ಟವನ್ನು ತಲುಪುತ್ತಿದೆಮೇ ತಿಂಗಳಲ್ಲಿ ಟೋಲ್ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಮತ್ತು ರಫ್ತುಗಳಲ್ಲಿಯೂ ಚೇತರಿಕೆ ಕಂಡಿದೆ ಸಂಕೇತಗಳು ಮುಂದೆ ಸಾಗಲು ನಮ್ಮನ್ನು ಪ್ರೋತ್ಸಾಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು.

ಆತ್ಮನಿರ್ಭರ ಭಾರತ ಅಭಿಯಾನದ ಪ್ರಯೋಜನಗಳು

ರಾಜ್ಯಗಳಲ್ಲಿ ಕೃಷಿತೋಟಗಾರಿಕೆಮೀನುಗಾರಿಕೆ ಮತ್ತು ಎಂಎಸ್ಎಂಇಗಳಿಗೆ ಗಮನಾರ್ಹ ಪ್ರಾಮುಖ್ಯತೆ ಇದೆ ಎಂದು ಪ್ರಧಾನಿ ಹೇಳಿದರುಅತ್ಮನಿರ್ಭರ ಭಾರತ ಅಭಿಯಾನದಡಿ ಇವುಗಳಿಗೆ ಪ್ರೋತ್ಸಾಹ ನೀಡಲಾಗಿದೆಎಂಎಸ್ಎಂಇಗಳಿಗೆ ಸಮಯೋಚಿತ ಸಾಲವನ್ನು ಒದಗಿಸುವ ಕುರಿತು ಕುರಿತು ಮಾತನಾಡಿದ ಅವರುಬ್ಯಾಂಕರ್ಗಳ ಸಮಿತಿಗಳ ಮೂಲಕ ಕೈಗಾರಿಕೆಗಳಿಗೆ ತ್ವರಿತವಾಗಿ ಸಾಲವನ್ನು ವಿತರಿಸುವುದನ್ನು ಖಚಿತಪಡಿಸಿದರೆ ಕೈಗಾರಿಕೆಗಳು ತ್ವರಿತವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದನ್ನು ಖಾತ್ರಿಪಡಿಸುತ್ತವೆ ಎಂದರುಸಣ್ಣ ಕಾರ್ಖಾನೆಗಳಿಗೆ ಮಾರ್ಗದರ್ಶನ ಮತ್ತು ಬೆಂಬಲದ ಅಗತ್ಯವಿರುತ್ತದೆ ಎಂದು ಅವರು ಹೇಳಿದರುವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತೇಜನ ನೀಡಲು ಮೌಲ್ಯ ಸರಪಳಿಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಅವರು ಉಲ್ಲೇಖಿಸಿದರುರಾಜ್ಯಗಳಲ್ಲಿನ ನಿರ್ದಿಷ್ಟ ಆರ್ಥಿಕ ಚಟುವಟಿಕೆಯ ಕೇಂದ್ರಗಳು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಬೇಕುಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಲೋಡಿಂಗ್ ಮತ್ತು ಅನ್ ಲೋಡಿಂಗ್ ಅನ್ನು ತ್ವರಿತಗೊಳಿಸಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳ ಮೂಲಕ ರೈತರಿಗೆ ದಕ್ಕುವ ಪ್ರಯೋಜನಗಳನ್ನು ಪ್ರಧಾನಿ ಪ್ರಸ್ತಾಪಿಸಿದರುಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಮಾರ್ಗಗಳುಆದಾಯದ ಹೆಚ್ಚಳ ಮತ್ತು ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆಸಾವಯವ ಉತ್ಪನ್ನಗಳುಬಿದಿರಿನ ಉತ್ಪನ್ನಗಳು ಮತ್ತು ಇತರ ಬುಡಕಟ್ಟು ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವುದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಿದ್ಧವಾಗಿದೆಸ್ಥಳೀಯ ಉತ್ಪನ್ನಗಳಿಗೆ ಕ್ಲಸ್ಟರ್ ಆಧಾರಿತ ವಿಧಾನದಿಂದ ರಾಜ್ಯಗಳು ಸಹ ಪ್ರಯೋಜನ ಪಡೆಯಲಿವೆಉತ್ತಮ ಸಂಸ್ಕರಣೆ ಮತ್ತು ಹೆಚ್ಚು ಪರಿಣಾಮಕಾರಿ ಮಾರುಕಟ್ಟೆಗಾಗಿ ಅಂತಹ ಉತ್ಪನ್ನಗಳನ್ನು ಪ್ರತಿ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಗುರುತಿಸಬೇಕು ಎಂದು ಅವರು ಹೇಳಿದರುಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಮಾಡಿದ ಘೋಷಣೆಗಳು ಶೀಘ್ರದಲ್ಲಿಯೇ ಫಲ ನೀಡುವುದನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಿಯವರು ಒತ್ತಿ ಹೇಳಿದರು.

ಮುಖ್ಯಮಂತ್ರಿಗಳ ಮಾತು

ಇಂದಿನ ಸಂವಾದವು ಎರಡು ದಿನಗಳ ಸಂವಾದದ ಮೊದಲ ಭಾಗವಾಗಿತ್ತುಇಂದಿನ ಸಂವಾದದಲ್ಲಿ ಪಂಜಾಬ್ಅಸ್ಸಾಂಕೇರಳಉತ್ತರಾಖಂಡ್ಜಾರ್ಖಂಡ್ಛತ್ತೀಸ್ ಗಢತ್ರಿಪುರಹಿಮಾಚಲ ಪ್ರದೇಶಚಂಡೀಗಢಗೋವಾಮಣಿಪುರನಾಗಾಲ್ಯಾಂಡ್ಲಡಾಖ್ಪುದುಚೆರಿಅರುಣಾಚಲಪ್ರದೇಶಮೇಘಾಲಯಮಿಜೋರಾಂಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳುದಾದ್ರಾ ನಗರ ಹವೇಲಿ ಮತ್ತು ದಮನ್ ದಿಯುಸಿಕ್ಕಿಂ ಮತ್ತು ಲಕ್ಷದ್ವೀಪ ಸೇರಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು.

ಇಂತಹ ಸವಾಲಿನ ಸಮಯದಲ್ಲಿ ಮತ್ತು ವೈರಸ್ ವಿರುದ್ಧದ ಸಾಮೂಹಿಕ ಹೋರಾಟಕ್ಕಾಗಿ ಹೋರಾಡಲು ದೇಶವನ್ನು ಒಗ್ಗೂಡಿಸಿದ ಪ್ರಧಾನಮಂತ್ರಿಯವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಹೇಳಿದರುಅವರು ತಮ್ಮ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಫೀಡ್ ಬ್ಯಾಕ್ ನೀಡಿದರು ಮತ್ತು ವೈರಸ್ ಪರಿಣಾಮವನ್ನು ನಿಭಾಯಿಸಲು  ಮೂಲ ಸೌಕರ್ಯಗಳನ್ನು ಹೆಚ್ಚಿಸುವ  ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರುಜಾಗೃತಿ ಅಭಿಯಾನಗಳುಊರುಗಳಿಗೆ ಮರಳಿರುವ ಕಾರ್ಮಿಕರಿಗೆ ಸಹಾಯ ಒದಗಿಸುವುದುಆರೋಗ್ಯ ಸೇತು ಆ್ಯಪ್ ಬಳಕೆ ಮತ್ತು ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳ ಆರಂಭದ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು.

ಜೀವ ಮತ್ತು ಬದುಕು ಎರಡಕ್ಕೂ ಗಮನ ಕೊಡಿ

ಮುಖ್ಯಮಂತ್ರಿಗಳ ಅಭಿಪ್ರಾಯಗಳಿಗೆ ಪ್ರಧಾನಿಯವರು ಧನ್ಯವಾದ ಹೇಳಿದರುಜೀವ ಮತ್ತು ಬದುಕು ಎರಡರ ಬಗ್ಗೆಯೂ ಗಮನ ಕೇಂದ್ರೀಕರಿಸುವ ಮಹತ್ವವನ್ನು ಅವರು ಒತ್ತಿಹೇಳಿದರುಒಂದೆಡೆಪರೀಕ್ಷೆ ಮತ್ತು ಪತ್ತೆಹಚ್ಚುವಿಕೆಗೆ ಒತ್ತು ನೀಡುವ ಮೂಲಕ ಆರೋಗ್ಯ ಮೂಲಸೌಕರ್ಯವನ್ನು ವೃದ್ಧಿಸುವ ಅವಶ್ಯಕತೆಯಿದೆಆರ್ಥಿಕ ಚಟುವಟಿಕೆಯನ್ನೂ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರುಪ್ರಸ್ತುತ ಅಗತ್ಯಗಳು ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ವೈರಸ್ ಅಪಾಯ ಇನ್ನೂ ಕೊನೆಯಾಗಿಲ್ಲಆರ್ಥಿಕತೆಯನ್ನು ತೆರೆಯುವಾಗ ಇದರ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸಾಂಕ್ರಾಮಿಕ ರೋಗದ ವಿರುದ್ಧ ನಾವು ಇಲ್ಲಿಯವರೆಗೆ ಯಶಸ್ವಿ ಹೋರಾಟ ನಡೆಸುತ್ತಿದ್ದರೂಮುಂದಿನ ಹಾದಿ ದೀರ್ಘವಾಗಿದೆ ಮತ್ತು ಮುಖಗವಸು / ಮುಖದ ಕವಚದೈಹಿಕ ಅಂತರ ಇತ್ಯಾದಿಗಳನ್ನು ಪಾಲಿಸುವ ಬಗ್ಗೆ ಪ್ರಧಾನಿಯವರು ನೀಡಿದ ಸಲಹೆಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು .

ಸಿದ್ಧತೆಗಳ ಬಗ್ಗೆ ಹಿಂದಿನ ಪರಾಮರ್ಶೆ

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಭಾರತದ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಪ್ರಧಾನಿ ಜೂನ್ 13 ರಂದು ಹಿರಿಯ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಿದ್ದರುದೇಶದಲ್ಲಿ ಸಾಂಕ್ರಾಮಿಕದ ಪರಿಸ್ಥಿತಿ ಮತ್ತು ಸಿದ್ಧತೆಯನ್ನು ಸಭೆ ಪರಿಶೀಲಿಸಿತ್ತು.

ಒಟ್ಟು ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳು ರಾಜ್ಯಗಳಲ್ಲಿವೆವಿಶೇಷವಾಗಿ ದೊಡ್ಡ ನಗರಗಳು ಎದುರಿಸುತ್ತಿರುವ ಸವಾಲುಗಳ ದೃಷ್ಟಿಯಿಂದದೈನಂದಿನ ಪ್ರಕರಣಗಳ ಉಲ್ಬಣವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪರೀಕ್ಷೆಯನ್ನು ಹೆಚ್ಚಳ ಮತ್ತು ಹಾಸಿಗೆಗಳು ಮತ್ತು ಸೇವೆಗಳ ಸಂಖ್ಯೆಯನ್ನು ಬಗ್ಗೆ ಚರ್ಚಿಸಲಾಯಿತು.

ನಗರ ಮತ್ತು ಜಿಲ್ಲೆಗಳಲ್ಲಿ ಆಸ್ಪತ್ರೆ ಹಾಸಿಗೆಗಳು / ಪ್ರತ್ಯೇಕ ಹಾಸಿಗೆಗಳ ಅವಶ್ಯಕತೆಗಳ ಕುರಿತು ಸಶಕ್ತ ಗುಂಪಿನ ಶಿಫಾರಸುಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆದರುರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ತುರ್ತು ಯೋಜನೆಯನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವಾಲಯದ ಅಧಿಕಾರಿಗಳಿಗೆ ಅವರು ಸೂಚಿಸಿದರುಮುಂಗಾರು ಆರಂಭದ ದೃಷ್ಟಿಯಿಂದ ಸೂಕ್ತ ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸಚಿವಾಲಯಕ್ಕೆ ಸಲಹೆ ನೀಡಿದ್ದರು.

***



(Release ID: 1632307) Visitor Counter : 242