ಪ್ರಧಾನ ಮಂತ್ರಿಯವರ ಕಛೇರಿ

2020ರ ಜೂನ್ 18ರಂದು ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲು ಗಣಿಗಳ ಹರಾಜು ವೇಳೆ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 17 JUN 2020 7:16PM by PIB Bengaluru

2020 ಜೂನ್ 18ರಂದು ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲು ಗಣಿಗಳ ಹರಾಜು ವೇಳೆ ಭಾಷಣ ಮಾಡಲಿರುವ ಪ್ರಧಾನಮಂತ್ರಿ

 

1. ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯವು ಎಫ್.ಐ.ಸಿ.ಸಿ.ಐ. ಸಹಯೋಗದಲ್ಲಿ 41 ಕಲ್ಲಿದ್ದಲು ಗಣಿಗಳನ್ನು ಸಿಎಂ(ಎಸ್.ಪಿ.) ಕಾಯಿದೆ ಮತ್ತು ಎಂಎಂಡಿಆರ್ ಕಾಯಿದೆ ಅಡಿಯಲ್ಲಿ ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದೆ. ಈ ಹರಾಜು ಪ್ರಕ್ರಿಯೆಯು ಭಾರತೀಯ ಕಲ್ಲಿದ್ದಲು ಕ್ಷೇತ್ರವನ್ನು ವಾಣಿಜ್ಯ ಗಣಿಗಾರಿಕೆಗೆ ಮುಕ್ತಗೊಳಿಸುವಿಕೆಯ ಆರಂಭಕ್ಕೆ ಸಾಕ್ಷಿಯಾಗಲಿದೆ. ಇದು ದೇಶದ ಇಂಧನ ಅಗತ್ಯವನ್ನು ಪೂರೈಸಿಕೊಳ್ಳುವಲ್ಲಿ ಸ್ವಾವಲಂಬನೆ ಸಾಧಿಸಲು ಅವಕಾಶ ನೀಡುತ್ತದೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಇಂಬು ನೀಡುತ್ತದೆ. ಕಲ್ಲಿದ್ದಲು ಮಾರಾಟಕ್ಕಾಗಿ ಕಲ್ಲಿದ್ದಲು ಗಣಿಗಳ  ಹರಾಜು ಪ್ರಕ್ರಿಯೆ ಪ್ರಾರಂಭಿಸುತ್ತಿರುವುದು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಭಾರತ ಸರ್ಕಾರದ ಪ್ರಕರಟಣೆಗಳ ಸರಣಿಯ ಭಾಗವಾಗಿದೆ. ಈ ವರ್ಚುವಲ್ ಕಾರ್ಯಕ್ರಮ 2020ರ ಜೂನ್ 18ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಎನ್.ಐ.ಸಿ., ಎಂಇಐಟಿವೈನ ಎನ್ಇಜಿಡಿ  ಮತ್ತು ಎಫ್.ಐ.ಸಿ.ಸಿ.ಐ.ನ ವಿವಿಧ ಜಾಲಗಳ ಮೂಲಕ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.

ಹರಾಜು ಪ್ರಕ್ರಿಯೆಯ ಆರಂಭ

2. ಮಾನ್ಯ ಪ್ರಧಾನಮಂತ್ರಿಯವರು ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವ ವೇಳೆ ಭಾಷಣವನ್ನು ಮಾಡಲಿದ್ದು, ವಿದ್ಯುತ್, ಉಕ್ಕು, ಅಲ್ಯೂಮಿನಿಯಂ, ಸ್ಪಾಂಜ್ ಕಬ್ಬಿಣದಂತಹ ಅನೇಕ ಮೂಲಭೂತ ಕೈಗಾರಿಕೆಗಳಿಗೆ ಪ್ರಮುಖ ಮೂಲವಾಗಿರುವ ಗಣಿಗಾರಿಕೆ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ತಮ್ಮ ದೃಷ್ಟಿಕೋನವನ್ನು ಒತ್ತಿ ಹೇಳಲಿದ್ದಾರೆ. ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾನ್ಯ ಶ್ರೀ ಪ್ರಲ್ಹಾದ್ ಜೋಶಿ  ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

3. ಈ ಹೆಗ್ಗುರುತಿನ ಕ್ರಮವು ಖಾಸಗಿ ಪಾಲ್ಗೊಳ್ಳುವಿಕೆಗೆ ಚೈತನ್ಯ ನೀಡಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದು ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಸ್ಪರ್ಧೆಯನ್ನು ಪ್ರೇರೇಪಿಸುತ್ತದೆ, ಹೆಚ್ಚಿನ ಹೂಡಿಕೆಗಳ ಮೂಲಕ ಇತ್ತೀಚಿನ ಉಪಕರಣಗಳು, ತಂತ್ರಜ್ಞಾನ ಮತ್ತು ಸೇವೆಗಳನ್ನು ಬಳಸಲು ಅನುಕೂಲವಾಗುವಂತೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಸುಸ್ಥಿರ ಗಣಿಗಾರಿಕೆಗೆ ದಾರಿ ಮಾಡಿಕೊಡುತ್ತದೆ ಮತ್ತು ದೇಶದ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿಗೆ ಮಾರ್ಗಗಳನ್ನು ತೆರೆಯುತ್ತದೆ. ವಾಣಿಜ್ಯ ಗಣಿಗಾರಿಕೆಗೆ ಚಾಲನೆ ನೀಡುವುದರೊಂದಿಗೆ, ಭಾರತವು ಕಲ್ಲಿದ್ದಲು ವಲಯವನ್ನು ಗಣಿಗಾರಿಕೆ ಸಂಬಂಧಿತ, ಇಂಧನ ಮತ್ತು ಶುದ್ಧ ಕಲ್ಲಿದ್ದಲು ವಲಯದ ಹೂಡಿಕೆದಾರರಿಗೆ ಸಂಪೂರ್ಣ ಅವಕಾಶದೊಂದಿಗೆ ಮುಕ್ತಗೊಳಿಸಲಿದೆ.

4. ಎಫ್.ಐ.ಸಿ.ಸಿ.ಐನ ಅಧ್ಯಕ್ಷ ಶ್ರೀ ಡಾ. ಸಂಗೀತಾ ರೆಡ್ಡಿ, ವೇದಾಂತ ಸಮೂಹದ ಅಧ್ಯಕ್ಷ ಶ್ರೀ ಅನಿಲ್ ಅಗರ್ವಾಲ್ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಶ್ರೀ ಎನ್. ಚಂದ್ರಶೇಖರನ್ ಅವರೂ  ಸಂದರ್ಭದಲ್ಲಿ ಮಾತನಾಡಲಿದ್ದಾರೆ.

5. ಈ ಕಾರ್ಯಕ್ರಮವನ್ನು ವೆಬ್ ನಲ್ಲ ನೇರ ಪ್ರಸಾರ ಮಾಡಲಾಗುತ್ತಿದ್ದು ಪ್ರಮುಖ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳು, ಬ್ಯಾಂಕಿಂಗ್ ವೃತ್ತಿಪರರು, ಗಣಿಗಾರಿಕೆ ಕೈಗಾರಿಕೆಯ ಉದ್ದಿಮೆದಾರರು, ರಾಜತಾಂತ್ರಿಕರು, ವಿದೇಶೀ ನಿಯೋಗಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹರಾಜು ಪ್ರಕ್ರಿಯೆಯ ಪ್ರಮುಖ ನಿಯಮಗಳು

6. ಕಲ್ಲಿದ್ದಲು ಗಣಿಗಳ ಹಂಚಿಕೆಗಾಗಿ ಎರಡು ಹಂತದ ವಿದ್ಯುನ್ಮಾನ ಹರಾಜು ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ. ಬಿಡ್ ದಸ್ತಾವೇಜು, ಮಾದರಿ ಒಪ್ಪಂದ, ಹರಾಜು ಪ್ರಕ್ರಿಯೆಯ ಸವಿವರವಾದ ಕಾಲಾನುಕ್ರಮಣಿಕೆ ಸೇರಿದಂತೆ ಹರಾಜು ಪ್ರಕ್ರಿಯೆಯ ವಿವರಗಳನ್ನು  http://cma.mstcauction.com/auctionhome/coalblock/index.jsp ನಲ್ಲಿ ವೀಕ್ಷಿಸಬಹುದು. ಇದನ್ನು ಹರಾಜು ವೇದಿಕೆ ಪೂರೈಕೆದಾರ ಎಂಎಸ್.ಟಿ.ಸಿ. ಲಿಮಿಟೆಡ್ ಆಯೋಜನೆ ಮಾಡಿದೆ.

7ದೇಶಕ್ಕೆ ಆಗಲಿರುವ ಪ್ರಯೋಜನಗಳು:

·         225 ಮೆ.ಟನ್ ಉತ್ಪಾದನೆಯ ಗರಿಷ್ಠ ದರದ ಸಾಮರ್ಥ್ಯವನ್ನು ಸಾಧಿಸಿದ ತರುವಾಯ, ಈ ಗಣಿಗಳು 2025-26ರಲ್ಲಿ ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆಯ ಶೇ.15ರಷ್ಟು ಕೊಡುಗೆ ನೀಡುತ್ತವೆ.

·         2.8 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ: ಸುಮಾರು 70,000ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಮತ್ತು ಸುಮಾರು 2,10,000 ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ

·         ಮುಂದಿನ 5-7 ವರ್ಷಗಳ ಅವಧಿಯಲ್ಲಿ ದೇಶಕ್ಕೆ ಸುಮಾರು 33,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಸೃಷ್ಟಿಸುವ ನಿರೀಕ್ಷೆ ಇದೆ.

·          ಗಣಿಗಳು ರಾಜ್ಯ ಸರ್ಕಾರಗಳಿಗೆ ವಾರ್ಷಿಕ 20,000 ಕೋಟಿ ರೂಪಾಯಿ ಆದಾಯ ತರಲಿವೆ

·         ಶೇಕಡಾ 100 ರಷ್ಟು ಎಫ್‌.ಡಿಐ,  ಅಂತಾರಾಷ್ಟ್ರೀಯ ರೂಢಿಗಳು, ಇತ್ತೀಚಿನ ತಂತ್ರಜ್ಞಾನಗಳು ಮತ್ತು ಗಣಿಗಾರಿಕೆ ಕಾರ್ಯಾಚರಣೆಯಲ್ಲಿ ಯಾಂತ್ರೀಕರಣವನ್ನು ತರುವ ಸಾಧ್ಯತೆಯಿದೆ.

·         ಸ್ವತಂತ್ರ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಮತ್ತು ಕ್ಯಾಪ್ಟ್ಯೂ ವಿದ್ಯುತ್ ಸ್ಥಾವರಗಳಿಂದ ಆಮದಿನ ಬದಲಾಗಿ ಸ್ವಾವಲಂಬನೆಯ ಸಾಧನೆ ವಿದೇಶಿ ವಿನಿಮಯವನ್ನು ಉಳಿಸುತ್ತದೆ.

·         ಹೆಚ್ಚಿನ ವಿಶ್ವಾಸಾರ್ಹತೆಯೊಂದಿಗೆ ಕೈಗಾರಿಕೆಗಳಿಗೆ ನಿರಂತರ ಕಲ್ಲಿದ್ದಲು ದಾಸ್ತಾನು ಖಾತರಿ ಪಡಿಸುವ ಮೂಲಕ ನಿಯಂತ್ರಿತ ಮತ್ತು ಅನಿಯಂತ್ರಿತ ವಲಯಕ್ಕೆ ಉತ್ತೇಜನ ನೀಡುತ್ತದೆ.

·         ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ ಜಾರಿಯೊಂದಿಗೆ ಮುಕ್ತ ಮಾರುಕಟ್ಟೆ ಸ್ವರೂಪದೆಡೆಗೆ ಸಾಗುತ್ತದೆ.

·         ಶುದ್ಧ ಇಂಧನ ಸಮರ್ಥ ಬಳಕೆಯ ರೂಢಿಯ ಉತ್ತೇಜನ ಮತ್ತು ಕಲ್ಲಿದ್ದಲು ಅನಿಲೀಕರಣ ಮತ್ತು ದ್ರವೀಕರಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ಪರಿಸರ ಮಾಲಿನ್ಯ ತಗ್ಗಿಸುತ್ತದೆ.

***


(Release ID: 1632305)