ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೋವಿಡ್ -19 ಹಿನ್ನೆಲೆಯಲ್ಲಿ ನಗರ ಸಾರಿಗೆ ಸೇವೆಗಳನ್ನು ಒದಗಿಸುವಾಗ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು/ ನಗರಗಳು/ ಮೆಟ್ರೋ ರೈಲು ಕಂಪೆನಿಗಳು ಕೈಗೊಳ್ಳಬೇಕಾದ ಕ್ರಮಗಳು

Posted On: 12 JUN 2020 11:44AM by PIB Bengaluru

ಕೋವಿಡ್ -19 ಹಿನ್ನೆಲೆಯಲ್ಲಿ ನಗರ ಸಾರಿಗೆ ಸೇವೆಗಳನ್ನು ಒದಗಿಸುವಾಗ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು/ ನಗರಗಳು/ ಮೆಟ್ರೋ ರೈಲು ಕಂಪೆನಿಗಳು ಕೈಗೊಳ್ಳಬೇಕಾದ ಕ್ರಮಗಳು

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂ ಸಲಹಾಸೂಚಿ

 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು , ನಗರಗಳು, ಮತ್ತು ಮೆಟ್ರೋ ರೈಲು ಕಂಪೆನಿಗಳಿಗೆ ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕಾದ ಧೀರ್ಘ ವ್ಯೂಹಾತ್ಮಕ ಕ್ರಮಗಳನ್ನು ಒಳಗೊಂಡ ಸಲಹಾಸೂಚಿಯನ್ನು ಹೊರಡಿಸಿದೆ. [ ಕಿರು ಅವಧಿ (ಆರು ತಿಂಗಳೊಳಗಿನವು) , ಮಧ್ಯಮ ( ಒಂದು ವರ್ಷದವರೆಗಿನವು) ಮತ್ತು ಧೀರ್ಘಾವಧಿ (1-3 ವರ್ಷದವರೆಗೆ )]. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಅವರು ಹೊರಡಿಸಿದ ಸಲಹಾಸೂಚಿ ಕೆಳಗಿನ ಕ್ರಮಗಳನ್ನು ಸಲಹೆ ಮಾಡಿದೆ: -

(i). ಮೋಟಾರು ರಹಿತ ಸಾರಿಗೆಯನ್ನು ಪ್ರೋತ್ಸಾಹಿಸುವುದು ಮತ್ತು ಅದಕ್ಕೆ ಪುನಃಶ್ಚೇತನ ನೀಡುವುದು (ಎನ್.ಎಂ.ಟಿ.) ನಗರ ಸಂಚಾರ ವ್ಯಾಪ್ತಿ ಹೆಚ್ಚಿನ ಸಂದರ್ಭಗಳಲ್ಲಿ 5 ಕಿಲೋ ಮೀಟರ್ ನೊಳಗೆ ಇರುವ ಕಾರಣಕ್ಕೆ , ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಡಿಮೆ ಖರ್ಚಿನ, ಕಡಿಮೆ ಮಾನವ ಸಂಪನ್ಮೂಲ ಆವಶ್ಯಕತೆ ಇರುವ , ಸುಲಭ ಮತ್ತು ತ್ವರಿತವಾಗಿ ಕೈಗೊಳ್ಳಬಹುದಾದ , ಪರಿಸರ ಸ್ನೇಹಿಯಾದ ಎನ್.ಎಂ.ಟಿ. ಯು ಅನುಷ್ಟಾನಕ್ಕೆ ಅತ್ಯುತ್ತಮವಾದ ಅವಕಾಶವನ್ನು ಒದಗಿಸುತ್ತದೆ. .

(ii). ನಗರ ಪ್ರದೇಶಗಳ ಬೆನ್ನೆಲುಬಿನಂತಿರುವ ಸಾರ್ವಜನಿಕ ಸಾರಿಗೆಯನ್ನು , ಕಡಿಮೆ/ ಮಧ್ಯಮ ಆದಾಯದ ಗುಂಪಿನವರ ದೈನಂದಿನ ಸಾರಿಗೆಯೂ ಆಗಿರುವ ಕಾರಣಕ್ಕೆ ಅವರ ಸಂಚಾರ ಸಾರಿಗೆಯ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಬಳಕೆದಾರರ ಸಾರ್ವಜನಿಕ ಸಾರಿಗೆಯಾಗಿ ಅದನ್ನು ಹೆಚ್ಚಿನ ವಿಶ್ವಾಸಾರ್ಹ ರೀತಿಯಲ್ಲಿ ಮರು ಆರಂಭಿಸುವುದೂ ಅವಶ್ಯ. ಆದರೆ ಸಾರ್ವಜನಿಕ ಸಾರಿಗೆ ಬಳಕೆಯ ಮೂಲಕ ಸೋಂಕು ಹಬ್ಬದಂತೆ ತಡೆಯುವುದು ಕೂಡಾ ಅತ್ಯಾವಶ್ಯ. ಇದಕ್ಕಾಗಿ ಸೂಕ್ತ ಸ್ಯಾನಿಟೈಸೇಶನ್ , ಕಂಟೈನ್ ಮೆಂಟ್ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಅನುಸರಿಸುವುದೂ ಅಗತ್ಯವಿದೆ.

(iii) ವೈರಸ್ ಹರಡುವಿಕೆ ತಡೆಯಲು ತಂತ್ರಜ್ಞಾನದ ಸಮರ್ಪಕ ಬಳಕೆ : ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ (.ಟಿ.ಎಸ್.), ದೇಶೀಯ ನಗದು ರಹಿತ ಮತ್ತು ಸ್ಪರ್ಶ ರಹಿತ ವ್ಯವಸ್ಥೆಗಳಾದ ಭೀಮ್, ಫೋನ್ ಪೇ, ಗೂಗಲ್ ಪೇ, ಪೇಟಿಮ್ ಇತ್ಯಾದಿಗಳನ್ನು ಬಳಸುವುದು. ಮತ್ತು ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (ಎನ್.ಸಿ.ಎಂ.ಸಿ.) ಗಳ ಬಳಕೆ ಮೂಲಕ ಸಾರ್ವಜನಿಕ ಸಾರಿಗೆಯಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಬಹುದು.

ಸಲಹಾಸೂಚಿಯನ್ನು ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ಇದ್ದಕ್ಕಿದ್ದಂತೆ ನಮ್ಮ ಜೀವನ ವಿಧಾನದ ಮೇಲೆ, ಮತ್ತು ನಮ್ಮ ಸ್ಥಳೀಯ, ಪ್ರಾದೇಶಿಕ, ಹಾಗು ಜಾಗತಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರತೊಡಗಿದ ಹಿನ್ನೆಲೆಯಲ್ಲಿ ನೀಡಲಾಗಿದೆ.

1.ಸಾರ್ವಜನಿಕ ಸಾರಿಗೆ ಬಳಸಿ ಸಂಚರಿಸುವವರ ಸಂಖ್ಯೆ 90% ನಷ್ಟು ಕುಸಿದಿರುವುದಾಗಿ ಸಾಕ್ಷ್ಯಾಧಾರಗಳು ಹೇಳುತ್ತವೆ. ಮತ್ತು ಇದರಿಂದ 60 % ವರೆಗೆ ವಾಯು ಮಾಲಿನ್ಯ ಕಡಿಮೆಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಮೊದಲಿನ ಪ್ರಯಾಣಿಕ ಮಟ್ಟವನ್ನು ಮತ್ತೆ ಸ್ಥಾಪನೆ ಮಾಡುವುದು ನಗರಗಳಿಗೆ ಒಂದು ದೊಡ್ಡ ಸವಾಲಾಗಿದೆ, ಅದರಲ್ಲೂ ವಿಶೇಷವಾಗಿ ಜನರು ಲಾಕ್ ಡೌನೋತ್ತರ ಪರಿಸ್ಥಿತಿಯಲ್ಲಿ ಹೆಚ್ಚು ಸುರಕ್ಷಿತ ವೈಯಕ್ತಿಕ ಸಾರಿಗೆ ಸಂಚಾರ ವಿಧಾನಗಳತ್ತ ಮುಖ ಮಾಡಲೂ ಬಹುದಾಗಿದೆ.

ಕಾರು ಮತ್ತು ಇತರ ಖಾಸಗಿ ವಾಹನಗಳ ಬಳಕೆ ಮತ್ತೆ ಹೆಚ್ಚುವುದನ್ನು ತಡೆಯಲು ವಿಶ್ವದಾದ್ಯಂತ ಹಲವು ನಗರಗಳು -ಟಿಕೇಟಿಂಗ್ ಮತ್ತು ಡಿಜಿಟಲ್ ಪಾವತಿಯಂತಹ ಕ್ರಮಗಳನ್ನು , ಬೀದಿಯ ಸ್ಥಳಗಳನ್ನು ಸೈಕ್ಲಿಂಗ್ ಗೆ ಒದಗಿಸುವ ಹಾಗು ಬೀದಿಗಳನ್ನು ಮುಚ್ಚುವ ಮೂಲಕ ಪಾದಚಾರಿಗಳಿಗೆ ಸ್ಥಳಾವಕಾಶ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಮೂಲಕ ಮೋಟಾರೇತರ ಸಾರಿಗೆ ಆದ್ಯತಾ ವಲಯಗಳನ್ನು ಬೈಕ್ ಲೇನ್ ಮತ್ತು ನಡಿಗೆ ಪಥಗಳನ್ನು ರೂಪಿಸುವುದಕ್ಕೆ ,ಹಾಗು ಸೈಕ್ಲಿಂಗ್ ನ್ನು ಹೆಚ್ಚು ಲಭ್ಯ ಇರುವಂತೆ ಮಾಡಲು ಪಾರ್ಕಿಂಗ್ ಸವಲತ್ತು ಒದಗಿಸುವಿಕೆ , ಚಾರ್ಜಿಂಗ್ ಸಲಕರಣೆಯ ಸೌಕರ್ಯ ಒದಗಿಸುವಿಕೆ , ಮತ್ತು ಹಣಕಾಸು ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾಡಲಾಗುತ್ತಿದೆ. ನಗರಗಳು ಇತ್ತೀಚೆಗೆ ಕೋವಿಡ್ -19 ಸಂದರ್ಭದಲ್ಲಿ ಎನ್.ಎಂ.ಟಿ. ಉತ್ತೇಜಿಸಲು ಕೈಗೊಂಡ ಕ್ರಮಗಳು ಇಂತಿವೆ. :

  • ಸೈಕಲ್ ಸವಾರರನ್ನು ಬೆಂಬಲಿಸಲು ನ್ಯೂಯಾರ್ಕ್ 40 ಮೈಲುಗಳಷ್ಟು ಹೊಸ ಎನ್.ಎಂ.ಟಿ. ಪಥ (ಲೇನ್) ಗಳನ್ನು ರೂಪಿಸಿದೆ.
  • ಯು.ಎಸ್.. ಓಕ್ಲ್ಯಾಂಡ್ ತನ್ನ 10 % ಬೀದಿಗಳನ್ನು ಮೋಟಾರು ವಾಹನಗಳಿಗೆ ಮುಚ್ಚಿದೆ.
  • ಕೊಲಂಬಿಯಾದ ಬೊಗೋಟಾ ರಾತ್ರಿ ಬೆಳಗಾಗುವುದರೊಳಗೆ 76 ಕಿಲೋ ಮೀಟರ್ ಸೈಕಲ್ ಪಥವನ್ನು ಸೇರಿಸಿಕೊಂಡಿದೆ.
  • ಇಟೆಲಿಯ ಮಿಲಾನ್ ನಲ್ಲಿ 22 ಮೈಲು ಬೀದಿಗಳನ್ನು ಸೈಕಲ್ ಪಥಗಳಾಗಿ ಮಾರ್ಪಡಿಸಲಾಗಿದೆ.
  • ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್, ಬೀದಿಗಳಲ್ಲಿ ಕಾರ್ ಪಾರ್ಕಿಂಗ್ ತೆಗೆದು ಹಾಕಿ ಈಗಿರುವ ಬೈಕ್ ಲೇನ್ ಗಳನ್ನು ಅಗಲಗೊಳಿಸಿದೆ ಮತ್ತು ಕಾಲು ಹಾದಿಗಳನ್ನು (ಫುಟ್ ಪಾತ್) ಅಗಲಗೊಳಿಸುವುದರ ಜೊತೆಗೆ 17 ಕಿಲೋ ಮೀಟರಿನಷ್ಟು ತಾತ್ಕಾಲಿಕ ಬೈಕ್ ಲೇನ್ ಗಳನ್ನು ನಿರ್ಮಾಣ ಮಾಡಿದೆ. ಬೈಕ್ ಲೇನ್ ಗಳನ್ನು ಹೆಚ್ಚಿಸಲು ಅದಕ್ಕಾಗಿ ನಿಧಿ ಒದಗಿಸಲು ನಗರವು ಕಾರ್ಯಕ್ರಮವನ್ನು ರೂಪಿಸಿಕೊಂಡಿದೆ.
  • ಚೀನಾದಲ್ಲಿ ಬೈಕ್ ಹಂಚಿಕೊಳ್ಳುವಿಕೆಗೆ ನೀಡಲಾದ ಉತ್ತೇಜನದಿಂದ ರಾಷ್ಟ್ರವ್ಯಾಪೀ ಲಾಕ್ ಡೌನ್ ಅವಧಿಯಲ್ಲಿ ಬೈಕ್ ಪ್ರಯಾಣದಲ್ಲಿ 150 % ಹೆಚ್ಚಳವಾಗಿದೆ.
  • ಯು.ಕೆ. ಯಲ್ಲಿ , ಸ್ಥಳೀಯ ವ್ಯಾಪಾರೋದ್ಯಮಗಳನ್ನು ಸ್ಥಳಾಂತರಿಸಿ ಅಂಗಡಿ ಮುಂಗಟ್ಟುಗಳೆದುರಿಗೆ ಜನರು ಸರತಿ ಸಾಲಿನಲ್ಲಿ ನಿಲ್ಲಲು ಅನುಕೂಲವಾಗುವಂತೆ ರಸ್ತೆಯ ಸ್ಥಳಾವಕಾಶವನ್ನು ಪಾದಚಾರಿಗಳಿಗೆ , ನಿವಾಸಿಗಳು ಸಾಮಾಜಿಕ ಅಂತರ ಪಾಲನೆ ಮಾರ್ಗದರ್ಶಿಗಳನ್ನು ಅನುಸರಿಸುವುದಕ್ಕಾಗಿ ಬಿಟ್ಟು ಕೊಡಲಾಗಿದೆ.
  1. ಎಂ..ಎಚ್.ಯು.. ಕೈಗೊಂಡ ವಿವಿಧ ಅದ್ಯಯನಗಳು ನಗರದಲ್ಲಿ ಪ್ರಯಾಣಿಸುವವರಲ್ಲಿ ಆಯಾ ನಗರಗಳ ವಿಸ್ತೀರ್ಣವನ್ನು ಅವಲಂಬಿಸಿ 16-57 % ನಗರವಾಸಿಗಳು ಪಾದಚಾರಿಗಳು ಮತ್ತು ಸುಮಾರು 30-40% ಪ್ರಯಾಣಿಕರು ಬೈಸಿಕಲ್ ಗಳನ್ನು ಬಳಸುತ್ತಾರೆ ಎಂದು ಹೇಳಿವೆ. ಇದನ್ನೊಂದು ಅವಕಾಶವಾಗಿ ಪರಿಗಣಿಸಿಕೊಂಡು , ಮಾದರಿಗಳ ಆದ್ಯತೆಯನ್ನು ಪರೀಕ್ಷಾ ಸಮಯದಲ್ಲಿ ಹೆಚ್ಚಿಸಿಕೊಂಡು ಪ್ರಯಾಣಿಕರಿಗೆ ಇನ್ನೊಂದು ಸ್ವಚ್ಚ , ಸುರಕ್ಷಿತ, ಭದ್ರತೆಯ ಪರ್ಯಾಯ ಖಾಸಗಿ ವಾಹನ ಸೌಲಭ್ಯವನ್ನು ಒದಗಿಸಬಹುದಾಗಿದೆ.ಅದನ್ನು ಸಮಗ್ರಗೊಳಿಸಿದರೆ ಅದು ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ. ಕ್ಷೇತ್ರವು ನಗರ ಸಾರಿಗೆ ನೀತಿ -2006 (ಎನ್.ಯು.ಟಿ.ಪಿ.-2006) ರಲ್ಲಿ ಆದ್ಯತೆಯ ಕ್ಷೇತ್ರಗಳಲ್ಲಿ ಸೇರಿದೆ. ಇದು ಎನ್.ಎಂ.ಟಿ. ಕೈಗಾರಿಕೋದ್ಯಮದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
  2. 18 ಪ್ರಮುಖ ನಗರಗಳಲ್ಲಿ ಭಾರತವು 700 ಕಿಲೋ ಮೀಟರಿನಷ್ಟು ಕಾರ್ಯಾಚರಣೆ ನಡೆಸುತ್ತಿರುವ ಮೆಟ್ರೋ ರೈಲುಗಳನ್ನು ಹೊಂದಿದೆ, ಮತ್ತು ದೇಶಾದ್ಯಂತ 11 ನಗರಗಳಲ್ಲಿ 450 ಕಿಲೋ ಮೀಟರಿನಷ್ಟು ಕಾರ್ಯಾಚರಣಾ ಬಿ.ಆರ್.ಟಿ. ಜಾಲವನ್ನು ಹೊಂದಿದೆ. ದಿನ ನಿತ್ಯ 10 ಮಿಲಿಯನ್ ಪ್ರಯಾಣಿಕರು ಸಾರಿಗೆ ಸೌಲಭ್ಯವನ್ನು ಬಳಸುತ್ತಿದ್ದಾರೆ. ಆದರೆ ಸಾಮಾಜಿಕ ಅಂತರ ಪಾಲನೆ ಮಾಡಬೇಕಿರುವಾಗ ಕೊರೊನಾ ಪೂರ್ವದಲ್ಲಿ ಇವುಗಳು ಹೊಂದಿದ್ದ ಸಾಮರ್ಥ್ಯದ 25 ರಿಂದ 50 ಶೇಕಡಾ ಸಾಮರ್ಥ್ಯಗಳನ್ನು ಮಾತ್ರವೇ ಬಳಸಲು ಸಾಧ್ಯವಾಗುತ್ತದೆ. ಬೇಡಿಕೆಯಲ್ಲಿ ಮತ್ತು ಪೂರೈಕೆಯಲ್ಲಿ ಒದಗುವ ಇಂತಹ ನಾಟಕೀಯ ಮತ್ತು ಚಲನ ಶೀಲ ಬದಲಾವಣೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾದ ಪರ್ಯಾಯ ಮಾದರಿಯ ಸಾರಿಗೆಯ ಅಗತ್ಯವನ್ನು ಸೃಷ್ಟಿ ಮಾಡಿವೆ.
  3. ಎಂ..ಎಚ್.ಯು..ಯು ಬಗ್ಗೆ ದೇಶದ ಮತ್ತು ವಿಶ್ವದ ಇತರ ಭಾಗಗಳ ವಿಷಯ ತಜ್ಞರು, ಕೈಗಾರಿಕೋದ್ಯಮಗಳ ತಜ್ಞರು, ಆಪರೇಟರುಗಳು, ವಿಶ್ವ ಬ್ಯಾಂಕ್, ಮತ್ತು ಇತರ ಪ್ರಮುಖ ನಗರ ಸಾರಿಗೆ ತಜ್ಞರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಅವರು ಅತ್ಯಂತ ಸ್ಪಷ್ಟವಾಗಿ ಕೋವಿಡ್ -19 ಬಳಿಕದ ಕಾಲದಲ್ಲಿ ನಗರ ಸಂಚಾರದಲ್ಲಿ ಭಾರೀ ಬದಲಾವಣೆಗಳು ಕಾಣಸಿಗಲಿವೆ ಎಂದಿದ್ದಾರೆ. ಪರೀಕ್ಷಾ ಸಮಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಅಭದ್ರತೆಯ ಭಾವ ಇರುವುದರಿಂದ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಲಿದೆ. ಇದು ಮಾಲಿನ್ಯವನ್ನು ಉಂಟು ಮಾಡುವುದಲ್ಲದೆ ಇತರ ಸಾರ್ವಜನಿಕ ಸಾರಿಗೆಗೆ ಲಭ್ಯವಾಗುವ ಸ್ಥಳಾವಕಾಶವನ್ನು ಕಬಳಿಸುತ್ತದೆ ಮತ್ತು ರಸ್ತೆ ಸುರಕ್ಷೆಗೂ ಅಪಾಯ ತಂದಿಡುತ್ತದೆ. ರಸ್ತೆಯಲ್ಲಿ ಇಕ್ಕಟ್ಟು ಉಂಟಾಗುವುದಲ್ಲದೆ , ವಾಯು ಮಾಲಿನ್ಯವೂ ಹೆಚ್ಚುತ್ತದೆ.
  4. ಆದಾಗ್ಯೂ ಭಾರತದಲ್ಲಿ , ವೈಯಕ್ತಿಕ ರೀತಿಯ ವಾಹನಗಳ ಮಾಲಕತ್ವವು ತುಲನಾತ್ಮಕವಾಗಿ ಕಡಿಮೆ ಇರುವುದರಿಂದ ಮತ್ತು ಸಾರ್ವಜನಿಕ ಸಾರಿಗೆ ಬಳಸುವ ಹೆಚ್ಚಿನ ಬಳಕೆದಾರರು ಸ್ಥಿರವಾಗಿ ಇದೇ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳುವವರಾಗಿರುವುದರಿಂದ , ಬಳಕೆದಾರರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಚಾರದ ಸೌಕರ್ಯಗಳನ್ನು ಒದಗಿಸಿಕೊಡುವುದು ನಗರಗಳ ಆದ್ಯತೆಯಾಗಿದೆ. ಸಾಮಾಜಿಕ ಅಂತರ ಪಾಲನೆ ನಿಯಮ ಜಾರಿಯಿಂದ ಸಾಮರ್ಥ್ಯ ಮಿತಿಯೂ ಇರುವುದರಿಂದ ಅವರಿಗೆ ಸಾರಿಗೆ ವ್ಯವಸ್ಥೆ ಕಷ್ಟ ಸಾಧ್ಯವಾಗಲಿದೆ. ಬಸ್ಸುಗಳು ಮತ್ತು ಮೆಟ್ರೋಗಳು ಸಹಿತ ಸಾರ್ವಜನಿಕ ಸಾರಿಗೆ ಹಲವು ನಗರಗಳ ಬೆನ್ನೆಲುಬಾಗಿದೆ. ಸಾಮರ್ಥ್ಯವು ಅರ್ಧದಷ್ಟು ಕುಸಿಯುವುದರಿಂದ , ಆರ್ಥಿಕತೆಗಳು ಪುನರಾರಂಭಗೊಳ್ಳುವಾಗ ನಗರಗಳಲ್ಲಿ ಚಲನಶೀಲತೆಯನ್ನು ಸಾಧಿಸಲು ಪರ್ಯಾಯ ಸಂಚಾರ ಸಾಧ್ಯತೆಗಳನ್ನು ಖಚಿತಪಡಿಸಿಕೊಳ್ಳಬೇಕಾದ ಅಗತ್ಯವಿದೆ.
  5. ಕೋವಿಡ್ -19 ನಮಗೆ ವಿವಿಧ ಸಾರ್ವಜನಿಕ ಸಾರಿಗೆ ಸಾಧ್ಯತೆಗಳ ಅವಕಾಶಗಳನ್ನು ಮತ್ತು ಪರಿಹಾರಗಳನ್ನು ಒದಗಿಸಿಕೊಟ್ಟಿದೆ. ಅವು ಹಸಿರು, ಮಾಲಿನ್ಯ ರಹಿತ, ಅನುಕೂಲಕರ, ಮತ್ತು ಸುಸ್ಥಿರವಾದಂತಹವುಗಳಾಗಿವೆ. ಇಂತಹ ವ್ಯೂಹಾತ್ಮಕ ವಿಧಾನಕ್ಕೆ ಮೋಟಾರು ರಹಿತ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆಯನ್ನು ತಂತ್ರಜ್ಞಾನ ಬೆಂಬಲಿತವಾಗಿ ಮಾಡುವುದು ಹಾಗು ಎಲ್ಲಾ ಮಾದರಿಯ ಪಾವತಿಗಳನ್ನು ಸಂಚಾರಕ್ಕೆ ಮೊದಲು ಅಥವಾ ಸಂಚಾರದ ಸಂದರ್ಭದಲ್ಲಿ ಮಾಡುವುದು ಮತ್ತು ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆಯನ್ನು ಒದಗಿಸುವುದು ಬಹಳ ಮುಖ್ಯ. ಶಾಪಿಂಗ್ ಪ್ರದೇಶವನ್ನು ಕೂಡಾ ನಿಧಾನವಾಗಿ ಪಾದಚಾರಿಗಳಿಗೆ ಮಾತ್ರ ಎಂದು ಸೀಮಿತಗೊಳಿಸಿ ಅಲ್ಲಿ ಇಕ್ಕಟ್ಟನ್ನು ನಿವಾರಿಸುವುದು ಮತ್ತು ಸಾರ್ವಜನಿಕರಿಗೆ ಸಂತೋಷ ಹಾಗು ಸುರಕ್ಷಿತ ಭಾವನೆ ಮೂಡಿಸುವಂತಹ ವ್ಯವಸ್ಥೆ ಲಭ್ಯವಾಗುವಂತೆ ಮಾಡಬೇಕಾಗುತ್ತದೆ.

***



(Release ID: 1631618) Visitor Counter : 228