ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕಾಂಬೋಡಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸಮ್ಡೇಚ್ ಅಕ್ಕಾ ಮೊಹ ಸೇನ್ ಪಡೈ ಟೆಕೊ ಹುನ್ ಸೇನ್ ಅವರೊಂದಿಗೆ ದೂರವಾಣಿ ಸಮಾಲೋಚನೆ

Posted On: 10 JUN 2020 8:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕಾಂಬೋಡಿಯಾದ ಪ್ರಧಾನಮಂತ್ರಿ

ಗೌರವಾನ್ವಿತ ಸಮ್ಡೇಚ್ ಅಕ್ಕಾ ಮೊಹ ಸೇನ್ ಪಡೈ ಟೆಕೊ ಹುನ್ ಸೇನ್ ಅವರೊಂದಿಗೆ ದೂರವಾಣಿ ಸಮಾಲೋಚನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಂಬೋಡಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸಮ್ಡೇಚ್ ಅಕ್ಕಾ ಮೊಹ ಸೇನ್ ಪಡೈ ಟೆಕೊ ಹುನ್ ಸೇನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಉಭಯ ನಾಯಕರು ಕೋವಿಡ್ -19 ಸಾಂಕ್ರಾಮಿಕದ ಬಗ್ಗೆ ಚರ್ಚಿಸಿದರು. ಅವರು ಗಡಿಪಾರು ವಿಚಾರದಲ್ಲಿ ಪರಸ್ಪರ ಸಹಕಾರ ನೀಡುವುದನ್ನು ಮತ್ತು ಅವರ ಸ್ಥಳಾಂತರ ವಿಚಾರದಲ್ಲಿ ಸಹಕಾರ ಮುಂದುವರಿಸುವುದನ್ನು ವಿಸ್ತರಿಸಲು ಒಪ್ಪಿದರು.

ಪ್ರಧಾನಮಂತ್ರಿ ಅವರು ಅಸಿಯಾನ್ ರಾಷ್ಟ್ರಗಳಲ್ಲಿ ಪ್ರಮುಖ ಸದಸ್ಯವಾಗಿರುವ ಕಾಂಬೋಡಿಯಾದೊಂದಿಗಿನ ಸಂಬಂಧ ಮತ್ತಷ್ಟು ಬಲವರ್ಧನೆಗೆ ಭಾರತ ಬದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದರು ಮತ್ತು ಭಾರತದೊಂದಿಗೆ ಅದು ನಾಗರಿಕತೆ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿದೆ ಎಂದರು.‌

ಉಭಯ ನಾಯಕರು ಎರಡೂ ದೇಶಗಳ ನಡುವಿನ ಅಭಿವೃದ್ಧಿ ಉತ್ತೇಜನಪಾಲುದಾರಿಕೆ, ಐಟಿಇಸಿ ಯೋಜನೆಯಡಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಮತ್ತು ಮೇಕೊಂಗ್ - ಗಂಗಾ ಸಹಕಾರ ಒಪ್ಪಂದದಡಿ ಕ್ಷಿಪ್ರ ಪರಿಣಾಮ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಸಿದರು.‌

ಕಾಂಬೋಡಿಯಾದ ಪ್ರಧಾನಮಂತ್ರಿಗಳು, ಭಾರತದೊಂದಿಗೆ ಕಾಂಬೋಡಿಯಾ ಹೊಂದಿರುವ ಸಂಬಂಧಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತದ ಪೂರ್ವ ಕ್ರಿಯಾ ನೀತಿಯಲ್ಲಿ ಕಾಂಬೋಡಿಯಾದ ಮೌಲ್ಯಯುತ ಪಾತ್ರ ಮತ್ತು ಭಾವನೆಗಳನ್ನು ಪ್ರಧಾನಮಂತ್ರಿಗಳು ಪುನರುಚ್ಛರಿಸಿದರು.‌

***



(Release ID: 1630818) Visitor Counter : 176