PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
09 JUN 2020 6:36PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)



ಕೋವಿಡ್ -19 ಪ್ರಕರಣಗಳು ಹೆಚ್ಚಾಗಿರುವ 50 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ತಂಡಗಳ ನಿಯೋಜನೆ
ಅತಿ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿರುವ 15 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 50 ಕ್ಕೂ ಹೆಚ್ಚು ಜಿಲ್ಲೆಗಳು / ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉನ್ನತ ಮಟ್ಟದ ಬಹು-ಶಿಸ್ತೀಯ ಕೇಂದ್ರ ತಂಡಗಳನ್ನು ನಿಯೋಜಿಸಿದೆ, ಈ ತಂಡಗಳು ರೋಗ ನಿಯಂತ್ರಣಕ್ಕಾಗಿ ತಾಂತ್ರಿಕ ಬೆಂಬಲವನ್ನು ನೀಡುತ್ತವೆ. ಕೋವಿಡ್-19 ನಿರ್ವಹಣೆಗೆ ನೆರವಾಗುವ ಮೂಲಕ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡುತ್ತವೆ. ತಂಡಗಳು ನಿಯೋಜನೆಗೊಂಡಿರುವ ಆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೆಂದರೆ: ಮಹಾರಾಷ್ಟ್ರ (7 ಜಿಲ್ಲೆಗಳು / ಪುರಸಭೆಗಳು), ತೆಲಂಗಾಣ (4), ತಮಿಳುನಾಡು (7), ರಾಜಸ್ಥಾನ (5), ಅಸ್ಸಾಂ (6), ಹರಿಯಾಣ (4), ಗುಜರಾತ್ (3), ಕರ್ನಾಟಕ (4), ಉತ್ತರಾಖಂಡ (3), ಮಧ್ಯಪ್ರದೇಶ (5), ಪಶ್ಚಿಮ ಬಂಗಾಳ (3), ದೆಹಲಿ (3), ಬಿಹಾರ (4), ಉತ್ತರ ಪ್ರದೇಶ (4), ಮತ್ತು ಒಡಿಶಾ (5). ಈ ತಂಡಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ತಂಡಗಳು ಆರೋಗ್ಯ ರಕ್ಷಣಾ ಸೌಲಭ್ಯಗಳಿಗೆ ಭೇಟಿ ನೀಡಿ, ನಿರ್ಬಂಧಿತ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಬೆಂಬಲ ನೀಡಲಿವೆ ಮತ್ತು ಜಿಲ್ಲೆಗಳು/ನಗರಗಳಲ್ಲಿ ಪ್ರಕರಣಗಳಿಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಕ್ಲಿನಿಕಲ್ ನಿರ್ವಹಣೆಗೆ ನೆರವು ನೀಡಲಿವೆ.
ವಿವರಗಳಿಗಾಗಿ: https://pib.gov.in/PressReleasePage.aspx?PRID=1630413
ಕೋವಿಡ್ ತುರ್ತು ಸಾಲ ಸೌಲಭ್ಯ ಎಮ್.ಎಸ್.ಎಮ್.ಇ.ಗಳಿಗೆ ಮಾತ್ರವಲ್ಲದೆ, ಇತರ ಕಂಪನಿಗಳಿಗೂ ಲಭ್ಯ: ಕೇಂದ್ರ ಹಣಕಾಸು ಸಚಿವರು
ಕೋವಿಡ್ ತುರ್ತು ಸಾಲ ಸೌಲಭ್ಯವು ಎಂಎಸ್ಎಂಇಗಳಿಗೆ ಮಾತ್ರವಲ್ಲದೆ ಎಲ್ಲಾ ಕಂಪನಿಗಳಿಗೆ ದೊರೆಯುತ್ತದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಾಲಾ ಸೀತಾರಾಮಣಸ್ ಹೇಳಿದ್ದಾರೆ. ಎಫ್ಐಸಿಸಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಭಾರತೀಯ ವ್ಯವಹಾರವನ್ನು ಬೆಂಬಲಿಸುವ ಮತ್ತು ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಸರ್ಕಾರವು ಎಲ್ಲ ರೀತಿಯ ಬೆಂಬಲವನ್ನು ಉದ್ಯಮಕ್ಕೆ ನೀಡುತ್ತದೆ ಎಂದು ಭರವಸೆ ನೀಡಿದರು. "ನಿಮ್ಮ ಸದಸ್ಯರಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ ಅಂಥವರಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದರು. ಪ್ರತಿ ಸರ್ಕಾರಿ ಇಲಾಖೆಗೆ ಬಾಕಿ ಹಣವನ್ನು ಪಾವತಿಸುವಂತೆ ತಿಳಿಸಲಾಗಿದೆ ಮತ್ತು ಯಾವುದೇ ಇಲಾಖೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಸರ್ಕಾರವು ಅದನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು. ಹೊಸ ಹೂಡಿಕೆಗಳ ಮೇಲೆ ಶೇ.15 ರಷ್ಟು ಕಾರ್ಪೊರೇಟ್ ತೆರಿಗೆ ದರ ಪಡೆಯಲು ಇರುವ ಗಡುವನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಪರಿಗಣಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
ವಿವರಗಳಿಗಾಗಿ: https://pib.gov.in/PressReleasePage.aspx?PRID=1630260
2020-2021ರ ಆರ್ಥಿಕ ವರ್ಷದಲ್ಲಿ ಎಂಜಿಎನ್ಆರ್ಇಜಿಎಸ್ ಅಡಿಯಲ್ಲಿ ಇದುರೆಗಿನ ಗರಿಷ್ಠ 1,01,500 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಈಗಾಗಲೇ 31,493 ಕೋಟಿ ರೂ. ಬಿಡುಗಡೆ
ಪ್ರಸಕ್ತ 2020-2021ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಜಿಎನ್ಆರ್ಇಜಿಎಸ್) 1,01,500 ಕೋಟಿ ರೂ. ನಿಗದಿಪಡಿಸಲಾಗಿದೆ. ಇದು ಯೋಜನೆಯಡಿಯಲ್ಲಿ ಇದುವರೆಗಿನ ಅತಿ ಹೆಚ್ಚು ಅನುದಾನವಾಗಿದೆ. . 2020-2021ರಲ್ಲಿ ಈಗಾಗಲೇ 31,493 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 60.80 ಕೋಟಿ ವ್ಯಕ್ತಿ ದಿನಗಳನ್ನು ಈವರೆಗೆ ಉತ್ಪಾದಿಸಲಾಗಿದೆ ಮತ್ತು 6.69 ಕೋಟಿ ಜನರಿಗೆ ಕೆಲಸ ನೀಡಲಾಗಿದೆ. ಮೇ ತಿಂಗಳಿನಲ್ಲಿ ಪ್ರತಿದಿನ ಸರಾಸರಿ 2.51 ಕೋಟಿ ಜನರಿಗೆ ಕೆಲಸ ನೀಡಲಾಗಿದೆ. ಪ್ರಸಕ್ತ 2020-21ರ ಆರ್ಥಿಕ ವರ್ಷದಲ್ಲಿ ಇದುವರೆಗೆ ಒಟ್ಟು 10 ಲಕ್ಷ ಕಾಮಗಾರಿಗಳು ಪೂರ್ಣಗೊಂಡಿವೆ. ನೀರಿನ ಸಂರಕ್ಷಣೆ ಮತ್ತು ನೀರಾವರಿ, ತೋಟ, ತೋಟಗಾರಿಕೆ ಮತ್ತು ಜೀವನೋಪಾಯಕಕ್ಕೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳುವಲ್ಲಿ ಗಮನ ಹರಿಸಲಾಗಿದೆ.
ವಿವರಗಳಿಗಾಗಿ: https://pib.gov.in/PressReleasePage.aspx?PRID=1630332
ಸರ್ಕಾರದಿಂದ ಎಸ್ಎಂಎಸ್ ಮೂಲಕ ಶೂನ್ಯ ಜಿಎಸ್ಟಿ ರಿಟರ್ನ್ ಸಲ್ಲಿಸುವ ಸೌಲಭ್ಯ
ತೆರಿಗೆದಾರಿಗೆ ಅನುಕೂಲ ಕಲ್ಪಿಸುವ ತ್ತ ಮಹತ್ವದ ಕ್ರಮದಲ್ಲಿ, ಇಂದಿನಿಂದ ಎಸ್ಎಂಎಸ್ ಮೂಲಕ ಶೂನ್ಯ ಜಿಎಸ್ಟಿ ಮಾಸಿಕ ರಿಟರ್ನ್ ಅನ್ನು ಫಾರ್ಮ್ ಜಿಎಸ್ಟಿಆರ್ -3 ಬಿ ಯಲ್ಲಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ಇದು ಸಾಮಾನ್ಯ ಪೋರ್ಟಲ್ನಲ್ಲಿ ತಮ್ಮ ಖಾತೆಗೆ ಲಾಗ್ ಇನ್ ಆಗಬೇಕಿದ್ದ ಮತ್ತು ನಂತರ ಪ್ರತಿ ತಿಂಗಳು ತಮ್ಮ ಆದಾಯವನ್ನು ಸಲ್ಲಿಸಬೇಕಾದ 22 ಲಕ್ಷಕ್ಕೂ ಹೆಚ್ಚು ನೋಂದಾಯಿತ ತೆರಿಗೆದಾರರಿಗೆ ಪ್ರಯೋಜನ ಕಲ್ಪಿಸುತ್ತದೆ.. ಈಗ, ಶೂನ್ಯ ಹೊಣೆಗಾರಿಕೆಯನ್ನು ಹೊಂದಿರುವ ಈ ತೆರಿಗೆದಾರರು ಜಿಎಸ್ಟಿ ಪೋರ್ಟಲ್ಗೆ ಲಾಗ್ ಇನ್ ಆಗಬೇಕಾಗಿಲ್ಲ. ಬದಲಿಗೆ ತಮ್ಮ ಶೂನ್ಯ ರಿಟರ್ನ್ಸ್ ಅನ್ನು ಎಸ್ಎಂಎಸ್ ಮೂಲಕ ಸಲ್ಲಿಸಬಹುದು.
ವಿವರಗಳಿಗಾಗಿ: https://pib.gov.in/PressReleasePage.aspx?PRID=1630258
ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರಿಂದ ಸಕ್ಕರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಪರಿಶೀಲನೆ
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ, ಸಕ್ಕರೆ ಉತ್ಪಾದನೆ, ಕಬ್ಬು ರೈತರ ಬಾಕಿ, ಎಥೆನಾಲ್ ಉತ್ಪಾದನೆ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬಾಕಿ ಹಣವನ್ನು ಸಕಾಲಕ್ಕೆ ಪಾವತಿಸಲು ಅಗತ್ಯ ಮಾರ್ಗಸೂಚಿಗಳನ್ನು ನೀಡುವಂತೆ ಶ್ರೀ ಪಾಸ್ವಾನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವರ್ಷ ಸಕ್ಕರೆ ಉತ್ಪಾದನೆಯು 270 ಲಕ್ಷ ಟನ್ ತಲುಪುವ ನಿರೀಕ್ಷೆಯಿದೆ ಎಂದು ಸಚಿವರಿಗೆ ತಿಳಿಸಲಾಯಿತು. ಪ್ರಸಕ್ತ ಸಕ್ಕರೆ ಋತುವಿನಲ್ಲಿ ಸಕ್ಕರೆ ಉದ್ಯಮಕ್ಕೆ ನೆರವು ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
ವಿವರಗಳಿಗಾಗಿ: https://pib.gov.in/PressReleasePage.aspx?PRID=1630318
ಪರಿಷ್ಕೃತ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಜ್ಯಗಳಿಂದ ಕಿರು ಅರಣ್ಯ ಉತ್ಪಾದನೆ ಖರೀದಿಯಿಂದಾಗಿ ಬುಡಕಟ್ಟ ಜನಾಂಗದವರ ಆದಾಯದ ಚಟುವಟಿಕೆಗಳಲ್ಲಿ ಹೆಚ್ಚಳ
ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಬಡ ಜನರ ಜೀವನಕ್ಕೆ ಸಹಾಯ ಮಾಡುವ ಪ್ರಯತ್ನವನ್ನು ಸರ್ಕಾರ ಮುಂದುವರಿಸುತ್ತಿರುವುದರಿಂದ ರಾಜ್ಯಗಳಿಂದ ಪ್ರೋತ್ಸಾಹದಾಯಕ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ .17 ರಾಜ್ಯಗಳು ಅಂದಾಜು 50 ಕೋಟಿ ರೂ. ಮೌಲ್ಯದ ಕಿರು ಅರಣ್ಯ ಉತ್ಪಾದನೆಗಳನ್ನು ಯೋಜನೆಯಡಿ ಖರೀದಿಸಿವೆ. ಈ ಪ್ರಯತ್ನಗಳಿಂದಾಗಿ, 7 ರಾಜ್ಯಗಳಲ್ಲಿನ ಖಾಸಗಿ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ 400 ಕೋಟಿ ರೂ ಮೌಲ್ಯದ ಕಿರು ಅರಣ್ಯ ಉತ್ಪಾದನೆಗಳನ್ನು ಖರೀದಿಸಿವೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕನಿಷ್ಠ ಬೆಂಬಲ ಬೆಲೆ ಕ್ರಮಗಳ ಸಮಯೋಚಿತ ಪ್ರಕಟಣೆ ಮತ್ತು ಕನಿಷ್ಠ ಬೆಂಬಲ ಬೆಲೆಗಳ ಪರಿಷ್ಕರಣೆ ಮತ್ತು ಟ್ರಿಫೆಡ್ ನ ಒಗ್ಗಟ್ಟಿನ ಪ್ರಯತ್ನಗಳಿಂದಾಗಿ ಬುಡಕಟ್ಟು ಜನಾಂಗದವರು ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಳಿಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1630390
2020 ರ ಅಂತರರಾಷ್ಟ್ರೀಯ ಯೋಗ ದಿನದ ಕರ್ಟನ್ ರೈಸರ್ ಜೂನ್ 10 ರಂದು ಡಿಡಿ ನ್ಯೂಸ್ನಲ್ಲಿ ಪ್ರಸಾರವಾಗಲಿದೆ
ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನ 2020 ರ ಕರ್ಟನ್ ರೈಸರ್ ದೂರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಇದನ್ನು ಡಿಡಿ ನ್ಯೂಸ್ ನಲ್ಲಿ 2020 ರ ಜೂನ್ 10 ರಂದು ಸಂಜೆ 07:00 ರಿಂದ ರಾತ್ರಿ 08:00 ರವರೆಗೆ ಪ್ರಸಾರ ಮಾಡಲಾಗುತ್ತದೆ. ಇದನ್ನು ಆಯುಷ್ ಸಚಿವಾಲಯದ ಫೇಸ್ಬುಕ್ ಪುಟದಲ್ಲು ಸಹ ನೇರ ಪ್ರಸಾರ ಮಾಡಲಾಗುತ್ತದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1630402
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ
- ಚಂಡೀಗಢ: ಬಾಪು ಧಾಮ್ ಕಾಲೋನಿಯ ನಿವಾಸಿಗಳಿಗೆ ಕಳಂಕ ತರದಂತೆ ಮತ್ತು ಸಮಾಜದಲ್ಲಿ ಬೆರೆಯಲು ಅವರಿಗೆ ಸಂಪೂರ್ಣ ಅವಕಾಶಗಳನ್ನು ನೀಡುವಂತೆ ಆಡಳಿತಾಧಿಕಾರಿಗಳು ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಖಾಸಗಿ ಉದ್ಯೋಗದಾತರೊಂದಿಗೆ ಈ ವಿಷಯವನ್ನು ಚರ್ಚಿಸುವಂತೆ ಅವರು ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದರು, ಇದರಿಂದಾಗಿ ಅವರ ಬಾಕಿ ಇರುವ ವೇತನವನ್ನು ಪಾವತಿಸಬಹುದು ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಬಹುದು.
- ಪಂಜಾಬ್: ಕೋವಿಡ್-19 ರಿಂದಾಗಿ ಉದ್ಭವಿಸಿರುವ ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ನಿಭಾಯಿಸಲು, ಪಂಜಾಬ್ ರೈತರು ಈಗ ಭತ್ತದ ಪೈರು ನಾಟಿಯ ಬದಲು ನೇರವಾಗಿ ಭತ್ತದ ಬಿತ್ತನೆಯಲ್ಲಿ (ಡಿಎಸ್ಆರ್) ತೊಡಗಿದ್ದಾರೆ. ಒಟ್ಟು ಪ್ರದೇಶದ ಸುಮಾರು ಶೇ.25 ರಷ್ಟು ಭತ್ತದ ಬಿತ್ತನೆಯು ಈ ನವೀನ ತಂತ್ರಜ್ಞಾನದ ಅಡಿಯಲ್ಲಿ ಬರುವ ನಿರೀಕ್ಷೆಯಿದೆ, ಇದು ಕಾರ್ಮಿಕರು ಮತ್ತು ನೀರಿನ ದೃಷ್ಟಿಯಿಂದ ಕೃಷಿ ವೆಚ್ಚವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ಡಿಎಸ್ಆರ್ ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ಅದನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ರೈತರನ್ನು ಪ್ರೇರೇಪಿಸಲು, ರಾಜ್ಯ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು 4000 ಡಿಎಸ್ಆರ್ ಯಂತ್ರಗಳು ಮತ್ತು 800 ಭತ್ತ ಕಸಿ ಯಂತ್ರಗಳನ್ನು ರೈತರಿಗೆ ಶೇ.40 ರಿಂದ ಶೇ.50 ವರೆಗಿನ ಸಹಾಯಧನದಲ್ಲಿ ಮಂಜೂರು ಮಾಡಿದೆ.
- ಹರಿಯಾಣ: ಲಾಕ್ಡೌನ್ ತೆರವು -1 ರ ಸಮಯದಲ್ಲಿ, ಕೆಲವು ಷರತ್ತುಗಳೊಂದಿಗೆ ಕ್ರೀಡಾಂಗಣಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹರಿಯಾಣದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರು ಹೇಳಿದ್ದಾರೆ, ಈ ಸಮಯದಲ್ಲಿ ವೈಯಕ್ತಿಕ ಫಿಟ್ನೆಸ್ಗೆ ಗಮನ ಹರಿಸಲಾಗುವುದು ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸಲಾಗುವುದು ಎಮದು ಅವರು ಹೇಳಿದ್ದಾರೆ. ಹರಿಯಾಣ ರಾಜ್ಯದ ಆಟಗಾರರು ಮತ್ತು ತರಬೇತುದಾರರು ಮತ್ತೆ ತಮ್ಮ ಆಟಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಹಿಂದೆ ಆಗಿರುವ ನಷ್ಟವನ್ನು ಸರಿದೂಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಪಿ ಐ ಬಿ ವಾಸ್ತವ ಪರಿಶೀಲನೆ


***
(Release ID: 1630601)
Visitor Counter : 290
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam