PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 08 JUN 2020 6:18PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ಡೇಟ್: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳ ಡಿ.ಎಂ. ಗಳು, ಮುನ್ಸಿಪಲ್ ಆಯುಕ್ತರು, ಮುಖ್ಯ ವೈದ್ಯಾಧಿಕಾರಿಗಳ ಜೊತೆ ಆರೋಗ್ಯ ಕಾರ್ಯದರ್ಶಿ ಸಂವಾದ

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸೂಡಾನ್ ಅವರು ಕೋವಿಡ್ -19 ಪ್ರಕರಣಗಳು ಏರು ಗತಿಯಲ್ಲಿರುವ ಹತ್ತು ರಾಜ್ಯಗಳ ವ್ಯಾಪ್ತಿಯಲ್ಲಿ ,38 ಜಿಲ್ಲೆಗಳಲ್ಲಿರುವ 45 ನಗರಸಭೆ/ ನಗರಪಾಲಿಕೆಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳು, ಮುನ್ಸಿಪಲ್ ಆಯುಕ್ತರುಗಳು, ಮುಖ್ಯ ವೈದ್ಯಾಧಿಕಾರಿಗಳು, ಜಿಲ್ಲಾಸ್ಪತ್ರೆಗಳ ಸುಪರಿಂಟೆಂಡೆಂಟ್ ಗಳ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರ ಜೊತೆ ಸಭೆ ನಡೆಸಿದರು. ಈ ಜಿಲ್ಲೆಗಳು ಕೆಳಗಿನ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ : ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಹರ್ಯಾಣಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಉತ್ತರಾಖಂಡ ಮತ್ತು ಮಧ್ಯಪ್ರದೇಶಗಳಿಗೆ ಸೇರಿದವುಗಳು. ಜನದಟ್ಟಣೆ ಇರುವ ನಗರ ಪ್ರದೇಶಗಳಲ್ಲಿ ವ್ಯಾಪಕ ಸೋಂಕು ಹರಡುತ್ತಿರುವ ಬಗ್ಗೆ , ಸಾರ್ವಜನಿಕ ಸೌಲಭ್ಯಗಳನ್ನು ಹಂಚಿಕೊಳ್ಳಲಾಗುತ್ತಿರುವ ಕುರಿತು; ಮನೆ ಮನೆ ಸಮೀಕ್ಷೆ, ಸರಿಯಾಗಿ ಪರೀಕ್ಷೆ ಮತ್ತು ಸರಿಯಾಗಿ ಐಸೋಲೇಶನ್ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಮತ್ತು ಹರಡುವಿಕೆ ತಡೆಗೆ ಪ್ರತಿಬಂಧಕ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಸಕಾಲಿಕ ಪ್ರಕರಣ ಪತ್ತೆಗೆ ಸಮರ್ಪಕವಾಗಿ ಮನೆ ಮನೆ ಸಮೀಕ್ಷೆ, ಸಮೀಕ್ಷಾ ತಂಡಗಳ ಒಗ್ಗೂಡಿಸುವಿಕೆ, ದಕ್ಷ ಅಂಬುಲೆನ್ಸ್ ನಿರ್ವಹಣೆ, ಆಸ್ಪತ್ರೆಗಳ ರೋಗಿಗಳ ನಿರ್ವಹಣೆ, ಮತ್ತು ಹಾಸಿಗೆಗಳ ನಿರ್ವಹಣೆ, ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳ ಕ್ಲಿನಿಕಲ್ ನಿರ್ವಹಣೆ, ಮೃತ್ಯು ದರ ಕಡಿಮೆ ಮಾಡಲು 24*7  ಅವಧಿಯೂ ಕಾರ್ಯನಿರ್ವಹಿಸುವಂತೆ ತಂಡಗಳ ಮರು ನಿಯೋಜನೆ ಇತ್ಯಾದಿಗಳ ಬಗ್ಗೆ ಸತತ ಗಮನ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ರೋಗಿಗಳನ್ನು ಮುಂಚಿತವಾಗಿ ಗುರುತಿಸುವಂತಾಗಲು ಮತ್ತು ಸಕಾಲದಲ್ಲಿ ಚಿಕಿತ್ಸೆ ಒದಗಿಸುವಂತಾಗಲು ಪ್ರಯೋಗಾಲಯಗಳಿಂದ ಪರೀಕ್ಷಾ ಫಲಿತಾಂಶಗಳು ಸಕಾಲದಲ್ಲಿ ಬರುವುದನ್ನು ಖಾತ್ರಿಪಡಿಸುವ ಬಗ್ಗೆಯೂ ಸಲಹೆ ನೀಡಲಾಯಿತು. ಇದುವರೆಗೆ ಒಟ್ಟು 1,24,430 ಮಂದಿ ಕೋವಿಡ್ -19 ರಿಂದ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. 5,137 ಮಂದಿ ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 48.49 % . ಪ್ರಸ್ತುತ ಆಕ್ಟಿವ್ ಪ್ರಕರಣಗಳ ಸಂಖ್ಯೆ 1,24,981

ವಿವರಗಳಿಗೆ: https://pib.gov.in/PressReleasePage.aspx?PRID=1630201

ಲಾಕ್ ಡೌನ್ ಅವಧಿಯಲ್ಲಿ 3965 ರೈಲ್ ರೇಕುಗಳ ಮೂಲಕ ಸುಮಾರು 111.02 ಎಲ್.ಎಂ.ಟಿ. ಆಹಾರ ಧಾನ್ಯಗಳ ಎತ್ತುವಳಿ

2020 ರ ಮಾರ್ಚ್ 24 ರಂದು ಲಾಕ್ ಡೌನ್ ಘೋಷಣೆಯಾದ ಬಳಿಕ ಸುಮಾರು 111.02 ಎಲ್.ಎಂ.ಟಿ.ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ 3965 ರೈಲ್ ರೇಕುಗಳ ಮೂಲಕ ಸಾಗಾಟ ಮಾಡಲಾಗಿದೆ. ರೈಲು ಮಾರ್ಗವಲ್ಲದೆ ರಸ್ತೆ ಮತ್ತು ಜಲ ಮಾರ್ಗಗಳ ಮೂಲಕವೂ ಸಾಗಾಟ ಮಾಡಲಾಗಿದೆ. ಒಟ್ಟು 234.51 ಎಲ್.ಎಂ.ಟಿ. ಯಷ್ಟನ್ನು ಸಾಗಾಟ ಮಾಡಲಾಗಿದೆ. 15,500 ಎಂ.ಟಿ. ಆಹಾರ ಧಾನ್ಯಗಳನ್ನು 13 ಹಡಗುಗಳ ಮೂಲಕ ಸಾಗಾಟ ಮಾಡಲಾಗಿದೆ. ಒಟ್ಟು 11.30 ಎಲ್.ಎಂ.ಟಿ.ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡಲಾಗಿದೆ. ಆತ್ಮನಿರ್ಭರ ಭಾರತ್ ಪ್ಯಾಕೇಜಿನಡಿಯಲ್ಲಿ ಭಾರತ ಸರಕಾರವು 8 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎನ್.ಎಫ್.ಎಸ್.ಎ. ಗಳಡಿಯಲ್ಲಿ ಅಥವಾ ರಾಜ್ಯ ಪಡಿತರ ಕಾರ್ಡ್ ಯೋಜನೆಗಳಲ್ಲಿ ಒಳಗೊಂಡಿರದ 8 ಕೋಟಿ ವಲಸೆ ಕಾರ್ಮಿಕರು, ವಿವಿಧೆಡೆ ಸಿಲುಕಿ ಹಾಕಿಕೊಂಡವರು, ಮತ್ತು ಆವಶ್ಯಕತೆ ಇರುವ ಕುಟುಂಬಗಳಿಗೆ ಒದಗಿಸಲು ನಿರ್ಧರಿಸಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಎಲ್ಲಾ ವಲಸೆಗಾರರಿಗೆ ಓರ್ವರಿಗೆ 5 ಕಿಲೋಗಳಂತೆ  ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 4.42 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ, 10.131 ಎಂ.ಟಿ. ಆಹಾರ ಧಾನ್ಯಗಳನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿವೆ. ಭಾರತ ಸರಕಾರವು 39,000 ಎಂ.ಟಿ. ಬೇಳೆ ಕಾಳುಗಳನ್ನು 1.66 ಕೋಟಿ ವಲಸೆಗಾರರ ಕುಟುಂಬಗಳಿಗೆ ವಿತರಿಸಲು ಅನುಮೋದನೆ ನೀಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630075

ಸಮುದ್ರ ಸೇತು” –ಇಸ್ಲಾಮಿಕ್ ಗಣರಾಜ್ಯ ಇರಾನಿನಿಂದ ನಾಗರಿಕರ ಸ್ಥಳಾಂತರ ಆರಂಭಿಸಿದ ಭಾರತೀಯ ನೌಕಾ ಪಡೆ

2020 ರ ಮೇ 8 ರಿಂದ ವಿದೇಶಗಳಲ್ಲಿರುವ ಭಾರತೀಯ ನಾಗರಿಕರನ್ನು ಭಾರತಕೆ ಕರೆತರಲು ಸಮುದ್ರ ಸೇತು ಕಾರ್ಯಾಚರಣೆಯನ್ನು ಭಾರತೀಯ ನೌಕಾದಳವು ಆರಂಭಿಸಿದೆ. ಭಾರತೀಯ ನೌಕಾ ಹಡಗು ಜಲಾಶ್ವ ಮತ್ತು ಮಗರ್ ಗಳು ಈಗಾಗಲೇ ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳಿಂದ 2874 ಮಂದಿಯನ್ನು ಕೊಚ್ಚಿ ಮತ್ತು ಟ್ಯುಟಿಕೋರಿನ್ ಬಂದರುಗಳಿಂದ  ಕರೆ ತಂದಿವೆ. ಸಮುದ್ರಸೇತುವಿನ ಮುಂದಿನ ಹಂತದಲ್ಲಿ  ಭಾರತೀಯ ನೌಕಾ ಹಡಗು ಶಾರ್ದೂಲವು ಭಾರತೀಯ ನಾಗರಿಕರನ್ನು ಜೂನ್ 8 ರಂದು ಇಸ್ಲಾಮಿಕ ಗಣರಾಜ್ಯ  ಇರಾನಿನ ಬಂದರ್ ಅಬ್ಬಾಸ್ ಬಂದರಿನಿಂದ ಗುಜರಾತಿನ ಪೋರ್ ಬಂದರಿಗೆ ಕರೆತರಲಿದೆ. ಇಸ್ಲಾಮಿಕ್ ಗಣರಾಜ್ಯ ಇರಾನಿನಲ್ಲಿರುವ ಭಾರತೀಯ ಮಿಷನ್ ಸ್ಥಳಾಂತರಗೊಳಿಸಬೇಕಾದ ಭಾರತೀಯ ನಾಗರಿಕರ ಪಟ್ಟಿಯನ್ನು ತಯಾರಿಸುತ್ತಿದೆ ಮತ್ತು ಅದು ಅವಶ್ಯ ವೈದ್ಯಕೀಯ ತಪಾಸಣೆಯ ಬಳಿಕ ಅವರು ಹಡಗು ಏರುವಂತೆ ವ್ಯವಸ್ಥೆಗಳನ್ನು ಮಾಡಿಕೊಡಲಿದೆ.

ವಿವರಗಳಿಗೆ: :https://pib.gov.in/PressReleseDetail.aspx?PRID=1630162

ಮಿಷನ್ ಸಾಗರ್ - ಸಿಚೆಲಿಸ್ ವಿಕ್ಟೋರಿಯಾ ಬಂದರಿನಲ್ಲಿ .ಎನ್.ಎಸ್. ಕೇಸರಿ

ಮಿಶನ್ ಸಾಗರದ ಅಂಗವಾಗಿ ಭಾರತೀಯ ನೌಕಾದಳದ ಹಡಗು ಕೇಸರಿಯು ಸಿಚೆಲಿಸ್ ನ ವಿಕ್ಟೋರಿಯಾ ಬಂದರನ್ನು 2020 ರ ಜೂನ್ 7 ರಂದು ಪ್ರವೇಶಿಸಿದೆ. ಈ ಕಠಿಣ ಸಂದರ್ಭದಲ್ಲಿ ಭಾರತ ಸರಕಾರ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ನಿಭಾಯಿಸುವುದಕ್ಕಾಗಿ ಸ್ನೇಹಾಚಾರ ಹೊಂದಿರುವ ವಿದೇಶಗಳಿಗೆ ನೆರವನ್ನು ನೀಡುತ್ತಿದೆ, ಮತ್ತು ಇದರಂಗವಾಗಿ ಐ.ಎನ್.ಎಸ್. ಕೇಸರಿಯು ಕೋವಿಡ್ ಸಂಬಂಧಿ ಅವಶ್ಯಕ ಔಷಧಿಗಳನ್ನು ಸಿಚೆಲಿಸ್ ನ ಜನತೆಗೆ ಪೂರೈಕೆ ಮಾಡಲು ಕೊಂಡೊಯ್ದಿದೆ.

ಸಮುದ್ರ ಸೇತು ಕಾರ್ಯಾಚರಣೆ: ಮಾಲ್ದೀವ್ಸ್ ನಿಂದ 700 ಭಾರತೀಯ ನಾಗರಿಕರೊಂದಿಗೆ ಟ್ಯುಟಿಕೋರಿನ್ ಗೆ .ಎನ್.ಎಸ್. ಜಲಾಶ್ವ ಆಗಮನ

ಭಾರತೀಯ ನೌಕಾದಳದಿಂದ “ಸಮುದ್ರ ಸೇತು ಕಾರ್ಯಾಚರಣೆಗಾಗಿ”  ನಿಯೋಜಿಸಲ್ಪಟ್ಟ ಐ.ಎನ್.ಎಸ್. ಜಲಾಶ್ವ ಮಾಲ್ದೀವ್ಸ್ ನ ಮಾಲೆಯಿಂದ ಸ್ಥಳಾಂತರಿಸಲ್ಪಟ್ಟ 700 ಭಾರತೀಯ ನಾಗರಿಕರೊಂದಿಗೆ 2020 ರ ಜೂನ್ 7 ರಂದು ಟ್ಯುಟಿಕೋರಿನ್ ಬಂದರು ಪ್ರವೇಶಿಸಿದೆ. ಇದರೊಂದಿಗೆ ಐ.ಎನ್.ಎಸ್. ಜಲಾಶ್ವ ವಂದೇ ಭಾರತ್ ಮಿಷನ್ನಿನಡಿಯಲ್ಲಿ ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳಿಂದ 2672 ಭಾರತೀಯ ನಾಗರಿಕರನ್ನು ಸ್ಥಳಾಂತರಿಸಿದಂತಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630084

ಕೋವಿಡ್-19 ಕ್ಕೆ ಆದ್ಯತೆ ನೀಡಿ ಆರೋಗ್ಯ ಮತ್ತು ಅಪಾಯ ಮಾಹಿತಿಯನ್ನು ಒಳಗೊಂಡ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದ ಡಿ.ಎಸ್.ಟಿ.

ವಿಜ್ಞಾನ ಮತ್ತು ತಂತ್ರಜ್ಞಾನ ಸಂಪರ್ಕಕ್ಕಾಗಿರುವ ರಾಷ್ಟ್ರೀಯ ಮಂಡಳಿ (ಎನ್.ಸಿ.ಎಸ್.ಟಿ.ಸಿ.) , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.) ಯು ಕೋವಿಡ್ -19 ಕ್ಕೆ ಆದ್ಯ ಗಮನ ನೀಡಿ ವಿಜ್ಞಾನ ಮತ್ತು ಆರೋಗ್ಯ ಕುರಿತ ಜಾಗೃತಿ ವರ್ಷ (ವೈ.ಎ.ಎಸ್.ಎಚ್.) ’ ಕುರಿತಂತೆ ಇತ್ತೀಚೆಗೆ ಮಾಹಿತಿ ಪತ್ರವನ್ನು ಹೊರತಂದಿದೆ. ಮಾಹಿತಿ ಪತ್ರವು ದೇಶದಲ್ಲಿ ಅಪಾಯಗಳು, ಬಿಕ್ಕಟ್ಟುಗಳು, ದುರಂತಗಳು, ಮತ್ತು ವಿಶೇಷವಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕಗಳು ತಂದಿಟ್ಟಿರುವ ಅನಿರ್ದಿಷ್ಟತೆಗೆಳನ್ನು ಎದುರಿಸಲು ಇಂತಹ ಬೃಹತ್ ಕಾರ್ಯಕ್ರಮಗಳ   ರೂಪಿಸುವಿಕೆ ಮತ್ತು ಅವಶ್ಯಕತೆಗಳನ್ನು ಒಳಗೊಂಡ ಮಾಹಿತಿಯನ್ನು ಹೊಂದಿದೆ. ಕಾರ್ಯಕ್ರಮವು ಹಾಲಿ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾರ್ವಜನಿಕರಲ್ಲಿ ವಿಜ್ಞಾನ ಮತ್ತು ಆರೋಗ್ಯ ಸಂಬಂಧಿ ತಿಳುವಳಿಕೆ ಮತ್ತು ಜಾಗೃತಿ ಹೆಚ್ಚಳಕ್ಕೆ ಆದ್ಯತೆ ನೀಡುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630192

ವ್ಯಕ್ತಿಗತ ಅಥವಾ ಪ್ರತ್ಯೇಕಿತ ವಾಯು ಯಾನ ಮೂಲಕ ರಕ್ಷಣಾ ಕಾರ್ಯಕ್ಕಾಗಿ ಭಾರತೀಯ ವಾಯುಪಡೆಯಿಂದ ರಕ್ಷಣಾ ಗೂಡು (ಪಾಡ್)  ಅಭಿವೃದ್ದಿ (ಅರ್ಪಿತ್)

ಭಾರತೀಯ ವಾಯುಪಡೆಯು ಪ್ರತ್ಯೇಕಿತ ಸಾರಿಗೆಗಾಗಿ ವಾಯುಯಾನ ಮೂಲಕ ರಕ್ಷಣಾ ಕಾರ್ಯಕ್ಕಾಗಿ ಗೂಡು ಮಾದರಿಯನ್ನು - ಪಾಡ್ (ಎ.ಆರ್.ಪಿ.ಐ.ಟಿ-ಅರ್ಪಿತ್) ನ್ನು ವಿನ್ಯಾಸಗೊಳಿಸಿ ಅಭಿವೃದ್ದಿ ಮಾಡಿದೆಯಲ್ಲದೆ ಅದನ್ನು ತಯಾರಿಸಿದೆ. ಕೋವಿಡ್ -19 ನ್ನು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿದಾಗ ಕೋವಿಡ್ -19 ರೋಗಿಯ ವಿಮಾನ ಯಾನ ಸಂದರ್ಭದಲ್ಲಿ ರೋಗಿಯ ಸೋಂಕಿನ ಹನಿಗಳು (ಏರೋಸೋಲ್) ಹರಡುವುದನ್ನು ತಡೆಯಲು ಸೂಕ್ತವಾದ  ರಕ್ಷಣಾ ವ್ಯವಸ್ಥೆಯ ಆವಶ್ಯಕತೆಯನ್ನು ಭಾರತೀಯ ವಾಯು ಪಡೆಯು ಮನಗಂಡಿತು.ಈ ಪಾಡ್ ಕೋವಿಡ್ -19  ಸಹಿತ ಸಾಂಕ್ರಾಮಿಕ ರೋಗಗಳಿಂದ ಬಾಧಿತರಾಗಿರುವ ರೋಗಿಗಳನ್ನು ಅತಿ ಎತ್ತರದ, ಪ್ರತ್ಯೇಕಿಸಲ್ಪಟ್ಟ ಸ್ಥಳಗಳಿಂದ ಅಥವಾ ದುರ್ಗಮ ಪ್ರದೇಶಗಳಿಂದ ಸ್ಥಳಾಂತರ ಮಾಡುವ ಸಂದರ್ಭಗಳಲ್ಲಿ   ಬಳಕೆಗೆ ಬರುತ್ತದೆ. ಇದರ ಮೂಲ ಮಾದರಿಯನ್ನು 3 ಬಿ.ಆರ್.ಡಿ. ಎ.ಎಫ್. ನಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಬಳಿಕ ಅದರಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರ “ಆತ್ಮನಿರ್ಭರ ಭಾರತ” ಕರೆಯನ್ನು ಬೆಂಬಲಿಸಿ,  ಬರೇ ದೇಶೀಯ ಸಲಕರಣೆಗಳನ್ನು ಬಳಸಿ ಅರವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ. ಆಮದು ಮಾಡುವ ವ್ಯವಸ್ಥೆಗಳಿಗೆ 60 ಲಕ್ಷ ರೂಪಾಯಿವರೆಗೆ ಖರ್ಚು ಬರುತ್ತಿತ್ತು. , ಅದಕ್ಕೆ ಹೋಲಿಸಿದರೆ  ಇದು ಕಡಿಮೆ ಖರ್ಚಿನದ್ದು.

ವಿವರಗಳಿಗೆ: https://pib.gov.in/PressReleseDetail.aspx?PRID=1630227

ಎನ್..ಪಿ..ಆರ್. ಗುವಾಹಟಿ ಮತ್ತು ಹಿಂದೂಸ್ಥಾನ್ ಆಂಟಿ ಬಯೋಟಿಕ್ಸ್ ಲಿಮಿಟೆಡ್ ನಡುವೆ  ಕೋವಿಡ್ -19 ಹರಡುವಿಕೆ ನಿಯಂತ್ರಣಕ್ಕೆ 3ಡಿ ಆಂಟಿ ಮೈಕ್ರೋಬಿಯಲ್ ಮುಖ ಕವಚಗಳ ಬೃಹತ್ ಪ್ರಮಾಣದ ಕೈಗಾರಿಕಾ ಗ್ರೇಡಿನ ಉತ್ಪಾದನೆ ಮತ್ತು ವಾಣಿಜ್ಯೀಕರಣಕ್ಕೆ ತಿಳುವಳಿಕಾ ಒಡಂಬಡಿಕೆ

ಔಷದಿ ವಿಜ್ಞಾನ ಇಲಾಖೆಯಡಿ ಬರುವ ಫಾರ್ಮಾಸ್ಯೂಟಿಕಲ್ ಶಿಕ್ಷಣ ಮತ್ತು ಸಂಶೋಧನೆ ( ಎನ್.ಐ.ಪಿ.ಇ.ಆರ್.) ಗಾಗಿರುವ ರಾಷ್ಟ್ರೀಯ ಸಂಸ್ಥೆ, ಗುವಾಹಟಿಯು ಮಾರಕ ರೋಗ ಕೋವಿಡ್ -19 ಹರಡುವಿಕೆ ತಡೆಯುವ ವೈಯಕ್ತಿಕ ರಕ್ಷಣಾ ಸಲಕರಣೆ(ಪಿ.ಪಿ.ಇ.) ಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಉಪಯುಕ್ತ ಪರಿಹಾರಗಳನ್ನು ಒದಗಿಸಲು ಬದ್ದವಾಗಿದೆ. ಅದು ಹಿಂದೂಸ್ಥಾನ್ ಆಂಟಿ ಬಯೋಟಿಕ್ ಲಿಮಿಟೆಡ್ ( ಔಷಧಿ ವಿಜ್ಞಾನ ಇಲಾಖೆಯಡಿಯ ಸಾರ್ವಜನಿಕ ರಂಗದ ಉದ್ಯಮವಾದ -ಎಚ್.ಎ.ಎಲ್. ) ಪಿಂಪ್ರಿ, ಪುಣೆ ಯೊಂದಿಗೆ 3 ಡಿ ಮುದ್ರಿತ ಸೂಕ್ಷ್ಮಾಣುಜೀವಿ ನಿರೋಧಿ (ಆಂಟಿ ಮೈಕ್ರೋಬಿಯಲ್)  ಮುಖ ಕವಚಗಳ ಬೃಹತ್ ಪ್ರಮಾಣದ ಕೈಗಾರಿಕಾ ಗ್ರೇಡಿನ ಉತ್ಪಾದನೆ ಮತ್ತು ವಾಣಿಜ್ಯೀಕರಣಕ್ಕೆ ತಿಳುವಳಿಕಾ ಒಡಂಬಡಿಕೆ ಮಾಡಿಕೊಂಡಿದೆ. ಎನ್.ಐ.ಪಿ.ಇ.ಆರ್. –ಗುವಾಹಟಿಯು ಭಾರತೀಯ ವಿನ್ಯಾಸ ಪೇಟೆಂಟ್ ಮತ್ತು ತಾತ್ಕಾಲಿಕ ಪೇಟೆಂಟ್ ಗಾಗಿ ಹೊಸದಿಲ್ಲಿಯ ಭಾರತೀಯ ಪೇಟೆಂಟ್  ಕಚೇರಿಯಲ್ಲಿ ಅದರ 3 ಡಿ. ಮುದ್ರಿತ ಸೂಕ್ಷ್ಮಾಣುಜೀವಿ ನಿರೋಧಿ ಮುಖ ಕವಚಗಳಿಗೆ ಸಂಬಂಧಿಸಿ  ಅರ್ಜಿ ಸಲ್ಲಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1630215

ದೇಖೋ ಅಪ್ನಾ ದೇಶ್ ಸರಣಿಯ 20 ನೇ ವೆಬಿನಾರಿನಲ್ಲಿ ಪ್ರವಾಸೋದ್ಯಮ ಸಚಿವಾಲಯದಿಂದ ಮಧ್ಯ ಪ್ರದೇಶದ ವನ್ಯ ಆಶ್ಚರ್ಯಗಳನ್ನು ಕುರಿತ ವರ್ಚುವಲ್ ಸಫಾರಿ ಪ್ರದರ್ಶನ

ವಿಶ್ವದ ಅತ್ಯಂತ ಶ್ರೀಮಂತ ಜೀವ ವೈವಿಧ್ಯ ಹಾಟ್ ಸ್ಪಾಟ್ , ಮಧ್ಯ ಪ್ರದೇಶ ರಾಜ್ಯದ ವರ್ಚುವಲ್ ಸಫಾರಿ ಅನುಭವವನ್ನು ವೆಬಿನಾರ್ ಮೂಲಕ ಒದಗಿಸಿತು. ಮಧ್ಯಪ್ರದೇಶವು ರೋಮಾಂಚಕ ಭಾರತದ ಹೃದಯ ಭಾಗವಾಗಿದೆ. ಪ್ರವಾಸೋದ್ಯಮದ ಮೇಲೆ ಕೋವಿಡ್ -19 ಪರಿಣಾಮವನ್ನು ಪರಿಗಣಿಸಿ ಮಧ್ಯ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಹಾಸಿಗೆಗಳು, ರೆಫ್ರಿಜರೇಟರ್, ಮತ್ತು ಇತರ ಅವಶ್ಯಕ ಸೌಲಭ್ಯಗಳುಳ್ಳ ಕಾರವಾನ್ ವಾಹನಗಳನ್ನು ಬಾಡಿಗೆಗೆ ನೀಡುವ ಚಿಂತನೆಯನ್ನು ಆರಂಭಿಸಿದೆ. ಇದರಿಂದ ಸಾಮಾಜಿಕ ಅಂತರ ಪಾಲನೆಯ ಹಿನ್ನೆಲೆಯಲ್ಲಿ ಜನರು ತಮ್ಮ ಪ್ರವಾಸಗಳಲ್ಲಿ ಹೊಟೇಲುಗಳಲಿ ತಂಗುವ ಆವಶ್ಯಕತೆ ಇಲ್ಲ.

ವಿವರಗಳಿಗೆ : https://pib.gov.in/PressReleseDetail.aspx?PRID=1630243

ಪಿ ಐ ಬಿ ಕ್ಷೇತ್ರಿಯ ಕಚೇರಿಗಳ ವರದಿ

  • ಕೇರಳ: ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ಮಹಿಳೆ ಇಂದು ಮಧ್ಯಾಹ್ನ ಸಾವಿಗೀಡಾಗುವುದರೊಂದಿಗೆ ಕೇರಳದಲ್ಲಿ ಕೋವಿಡ್ -19 ಕ್ಕೆ ಬಲಿಯಾದವರ ಸಂಖ್ಯೆ 17 ಕ್ಕೇರಿತು. ಈ ನಡುವೆ ರಾಜ್ಯ ಆರೋಗ್ಯ ಸಚಿವರಾದ ಕೆ. ಶೈಲಜಾ ಕೋವಿಡ್ -19 ಸಮುದಾಯಕ್ಕೆ ಹರಡದಂತೆ ತಡೆಯುವುದು ಸರಕಾರದ ಪ್ರಥಮಾದ್ಯತೆಯಾಗಿದೆ ಎಂದಿದ್ದಾರೆ. ಈ ಪ್ರಯತ್ನದಲ್ಲಿ ಜನತೆಯ ಸಹಕಾರ ಮತ್ತು ಸರಕಾರದ ಮಾರ್ಗದರ್ಶಿಗಳ ಕಟ್ಟು ನಿಟ್ಟಿನ ಅನುಸರಣೆ ಬಹಳ ನಿರ್ಣಾಯಕ ಎಂದಿದ್ದಾರೆ.ರಾಜ್ಯದಲ್ಲಿ ರೋಗ ಹರಡುವಿಕೆ ಈಗ 10 ರಿಂದ 15 ಶೇಕಡಾದಷ್ಟಿದೆ ಎಂಬುದರತ್ತಲೂ ಅವರು ಗಮನ ಸೆಳೆದಿದ್ದಾರೆ. ಕೋಝಿಕ್ಕೋಡ್ ಮತ್ತು ಪಟ್ಟಣಂತಿಟ್ಟ ಗಳಲ್ಲಿ ಕ್ವಾರಂಟೈನ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅವರ  ಸ್ಯಾಂಪಲ್ ಗಳನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ದುಬೈ ತಲುಪಿದ ಕೇರಳೀಯರೊಬ್ಬರು ಯು.ಎ.ಇ.ಯಲ್ಲಿಂದು ವೈರಸ್ ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ ಓರ್ವರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಮತ್ತು  107 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 1,095 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: “ಭಾರತದಲ್ಲಿ ತಮಿಳುನಾಡು ಗರಿಷ್ಟ ಚೇತರಿಕೆ ದರವನ್ನು ದಾಖಲಿಸಿದೆ , ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ” ಎಂದು ತಮಿಳುನಾಡು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೋವಿಡ್ -19 ಪ್ರಕರಣಗಳು ಸತತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ದೇವಾಲಯಗಳು ಇನ್ನೂ ತೆರೆದಿಲ್ಲ. ರಾಜ್ಯದಲ್ಲಿ ಖಾಸಗಿಯವರಿಗೆ ಕೋವಿಡ್ ಪರೀಕ್ಷಾ ಶುಲ್ಕವಾಗಿ ರೂಪಾಯಿ 3,000 ವನ್ನು ಮಿತಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ ಮತ್ತು ಮನೆ ಭೇಟಿಗಾದರೆ 500 ರೂ. ಹೆಚ್ಚುವರಿ ಶುಲ್ಕ ವಿಧಿಸಬಹುದಾಗಿದೆ. ಪ್ರಯೋಗಾಲಯಗಳನ್ನು ಗುಣಮಟ್ಟಕ್ಕಾಗಿ ತಪಾಸಣೆ ಮಾಡಬಹುದಾಗಿದೆ. ಚೆನ್ನೈ ಸುತ್ತಮುತ್ತಲ ಮೂರು ಜಿಲ್ಲೆಗಳಿಗೆ ಕಂಟೈನ್ಮೆಂಟ್ ವ್ಯೂಹವನ್ನು ರೂಪಿಸಲಾಗಿದೆ. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಸೂಕ್ಷ್ಮ ನಿರ್ವಹಣೆ ಇದರಲ್ಲಿ ಸೇರಿದೆ.  ತಮಿಳುನಾಡಿನಲ್ಲಿ ವರದಿಯಾದ 70 % ಪ್ರಕರಣಗಳು ಚೆನ್ನೈಯವು. ನಿನ್ನೆ 1515 ಹೊಸ ಪ್ರಕರಣಗಳು,604 ಮಂದಿ ಗುಣಮುಖರಾಗಿರುವ , 18 ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.  ಒಟ್ಟು ಪ್ರಕರಣಗಳು;31. ಆಕ್ಟಿವ್ ಪ್ರಕರಣಗಳು: 14,396, ಸಾವುಗಳು: 269. ಗುಣಮುಖರಾಗಿ ಬಿಡುಗಡೆಯಾದವರು: 16,999, ಚೆನೈಯಲ್ಲಿ ಆಕ್ಟಿವ್ ಪ್ರಕರಣಗಳು 10,982.
  • ಕರ್ನಾಟಕ: ಇಂದಿನಿಂದ ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳು ಪ್ರಾರ್ಥನೆಗೆ ತೆರೆದುಕೊಂಡಿವೆ. ಆದರೆ ಸರಕಾರ ದೊಡ್ಡ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ನಿರ್ಬಂಧಗಳನ್ನು ವಿಧಿಸಿ ಕಠಿಣ ಮಾರ್ಗದರ್ಶಿಗಳನ್ನು ಜಾರಿ ಮಾಡಿದೆ. ಮಾರುಕಟ್ಟೆಗಳು, ಮಾಲ್ ಗಳು, ಹೊಟೇಲುಗಳು, ತೆರೆದಿವೆ. ಏತನ್ಮಧ್ಯೆ ಬಿ.ಬಿ.ಎಂ.ಪಿ. ಯು ಗೃಹ ಕ್ವಾರಂಟೈನ್ ಗೆ ಸಂಬಂಧಿಸಿ ಎಸ್.ಒ.ಪಿ.  ಗಳನ್ನು ಹೊರಡಿಸಿದೆ. ಗೃಹ ಕ್ವಾರಂಟೈನ್ ನಲ್ಲಿರುವಂತೆ ಶಿಫಾರಸು ಮಾಡಲ್ಪಟ್ಟವರ ಮೇಲೆ ನಿಗಾ ಇರಿಸಲು 460 ತಂಡಗಳನ್ನು ರಚಿಸಲಾಗಿದೆ. ನಿನ್ನೆ 239 ಹೊಸ ಪ್ರಕರಣಗಳು , 143 ಬಿಡುಗಡೆಗಳು ಮತ್ತು ಎರಡು ಸಾವುಗಳು ವರದಿಯಾಗಿವೆ. ಒಟ್ಟು ದೃಢೀಕೃತ ಪ್ರಕರಣಗಳು ;5452, ಆಕ್ಟಿವ್ ಪ್ರಕರಣಗಳು : 3257. ಸಾವುಗಳು: 61, ಗುಣಮುಖರಾದವರು ; 2132
  • ಆಂಧ್ರ ಪ್ರದೇಶ: ದೇವರ ದರ್ಶನಾವಕಾಶವನ್ನು ಖಾಯಂ ಆಗಿ ಪುನರಾರಂಭಿಸುವುದಕ್ಕೆ ಮೊದಲು,  ಸುಮಾರು 80 ದಿನಗಳ ಬಳಿಕ ತಿರುಮಲ ದೇವಾಲಯದಲ್ಲಿ ಪ್ರಯೋಗ ಮಾದರಿಯಲ್ಲಿ ಭಕ್ತಾದಿಗಳಿಗೆ ದರ್ಶನಾವಕಾಶ ಒದಗಿಸಲಾಗಿದೆ. ಸಾಮಾನ್ಯ ಸರಾಸರಿಯಾದ 37.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರೀಫ್ ಋತುವಿನ ಬೆಳೆಗಳಿಗೆ ಬದಲಾಗಿ 39.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿಯನ್ನು ನಿಗದಿ ಮಾಡಲಾಗಿದೆ. ಕೈಗಾರಿಕಾ ಆವಶ್ಯಕತೆಗಳ “ಕೌಶಲ್ಯ ಅಂತರ” ವನ್ನು ಜಿಲ್ಲಾವಾರು ಅಂದಾಜಿಸಲು ಸಮೀಕ್ಷಾ ಪೂರ್ವ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಮತ್ತು ಅವಶ್ಯ ಕೌಶಲ್ಯಯುಕ್ತ ಮಾನವ ಶಕ್ತಿಯನ್ನು ಶೋಧಿಸಲೂ ಇದು ಅನುಕೂಲಗಳನ್ನು ಒದಗಿಸಲಿದೆ. ಕೌಶಲ್ಯಯುಕ್ತ ವಲಸೆಗಾರರ ನಿರ್ಗಮನ ಬಳಿಕ ಇಲ್ಲಿ ಕೊರತೆ ತಲೆದೋರಿದೆ. ಇದು ಜೂನ್ ಮಧ್ಯಭಾಗದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಕಳೆದ 24 ಗಂಟೆಗಳಲ್ಲಿ 125 ಹೊಸ ಪ್ರಕರಣಗಳು, 34 ಬಿಡುಗಡೆಗಳು ವರದಿಯಾಗಿವೆ. ಈ ಅವಧಿಯಲ್ಲಿ 14,246 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಪ್ರಕರಣಗಳು : 3843. ಆಕ್ಟಿವ್ : 1381, ಗುಣಮುಖರಾದವರು: 2387, ಸಾವುಗಳು : 75.
  • ತೆಲಂಗಾಣ: ಇಂದಿನಿಂದ ದೇವಾಲಯಗಳು ಭಕ್ತಾದಿಗಳಿಗೆ ತೆರೆದಿರುತ್ತವೆ. ರಾಜ್ಯಾದ್ಯಂತ ದೇವಾಲಯಗಳಲ್ಲಿ ಮಾರ್ಗದರ್ಶಿಗಳನ್ನು ಅನುಸರಿಸಲಾಗುತ್ತದೆ. ತೆಲಂಗಾಣ ರಾಜ್ಯಪಾಲರಾದ ತಮಿಳಿಸಾಯಿ ಸುಂದರರಾಜನ್ ಅವರು ಸೋಮವಾರದಂದು,  ತಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಕೋವಿಡ್ -19 ರಿಂದ ಬಾಧಿತರಾಗಿರುವ ಆರೋಗ್ಯ ರಕ್ಷಣಾ ಕ್ಷೇತ್ರದ ಕಾರ್ಯಕರ್ತರಿಗೆ ತಮ್ಮ ಬೆಂಬಲ ಸೂಚಿಸಲು ನಿಜಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಎನ್.ಐ.ಎಂ.ಎಸ್.)  ಭೇಟಿ ನೀಡಿದರು. 7 ನೇ ಜೂನ್ ವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 3650 . ಇದುವರೆಗೆ 448 ಮಂದಿ ವಲಸೆಗಾರರು, ವಿದೇಶಗಳಿಂದ ಮರಳಿದವರು ಕೋವಿಡ್ -19 ರಿಂದ ಬಾಧಿತರಾಗಿದ್ದಾರೆ.
  • ಮಹಾರಾಷ್ಟ್ರ: 3,007 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಇದರಿಂದ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 85,975 ಕ್ಕೇರಿದೆ. ಇದರಲ್ಲಿ 43,591 ಆಕ್ಟಿವ್ ಪ್ರಕರಣಗಳು. ಹಾಟ್ ಸ್ಪಾಟ್ ಮುಂಬಯಿಯಲ್ಲಿ ಭಾನುವಾರದಂದು 1,421 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ  48,549 ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಖಾಸಗಿ ಕಚೇರಿಗಳು 10 % ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲು ಆರಂಭ ಮಾಡಿವೆ. ಉಳಿದ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ 5.0 ರಲ್ಲಿ  ರಾಜ್ಯ ಸರಕಾರವು ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಯನ್ನು ಘೋಷಿಸಿದೆ. ಕಂಟೈನ್ ಮೆಂಟ್ ಮತ್ತು ಕಂಟೈನ್ಮೆಂಟ್ ಅಲ್ಲದ ವಲಯಗಳ ಸ್ಪಷ್ಟ ವಿಂಗಡಣೆಯೊಂದಿಗೆ ಈ ಸಡಿಲಿಕೆ ಜಾರಿಗೆ ಬರಲಿದೆ ಎಂದೂ ಅದು ಹೇಳಿದೆ.
  • ಗುಜರಾತ್: 480 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದ ಒಟ್ಟು ಕೊರೊನಾವೈರಸ್ ಪೀಡಿತ ಪ್ರಕರಣಗಳ  ಸಂಖ್ಯೆ 20,070 ಕ್ಕೇರಿದೆ.ಇದರಲ್ಲಿ 5186 ಆಕ್ಟಿವ್ ಪ್ರಕರಣಗಳು. 30 ರೋಗಿಗಳು ಕಳೆದ 24 ಗಂಟೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಇದರಿಂದ ಒಟ್ಟು ಸಾವುಗಳ ಸಂಖ್ಯೆ 1249 ಕ್ಕೇರಿದೆ. ಗುಜರಾತಿನ ಸೋಮನಾಥ ದೇವಾಲಯ ಮತ್ತು ದ್ವಾರಕಾಧೀಶ ದೇವಾಲಯಗಳು ಇಂದು ಭಕ್ತರ ದರ್ಶನಕ್ಕಾಗಿ ತೆರೆದಿವೆ. ಆದಾಗ್ಯೂ ಭಕ್ತಾದಿಗಳಿಗೆ ಜೂನ್ 12 ರ ಬಳಿಕವೇ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವಂತೆ ಸಲಹೆ ನೀಡಲಾಗುತ್ತಿದೆ, ಆನ್ ಲೈನ್ ಬುಕ್ಕಿಂಗ್ ಸೇವೆ ಆ ವೇಳೆಗೆ ಲಭ್ಯವಾಗಲಿದೆ. ಸಮುದ್ರ ಸೇತು ಭಾಗವಾಗಿ ಐ.ಎನ್.ಎಸ್. ಶಾರ್ದೂಲ ಇರಾನಿನ ಬಂದರ್ ಅಬ್ಬಾಸ್ ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಿ ಗುಜರಾತಿನ ಪೋರ್ ಬಂದರಿಗೆ ಕರೆತರಲಿದೆ. ಇರಾನಿನಲ್ಲಿರುವ ಭಾರತೀಯ ಮಿಶನ್ ಸ್ಥಳಾಂತರಗೊಳ್ಳಲಿರುವ ಭಾರತೀಯ ನಾಗರಿಕರ  ಪಟ್ಟಿ ತಯಾರಿಸಿ , ಅವಶ್ಯ ವೈದ್ಯಕೀಯ ತಪಾಸಣೆ ಬಳಿಕ ಅವರು ಹಡಗನ್ನೇರುವುದಕ್ಕೆ ಸಹಾಯ ಮಾಡಲಿದೆ.  
  • ರಾಜಸ್ಥಾನ: ಇದುವರೆಗೆ 97 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 10,696 ಕ್ಕೇರಿದೆ. ಇದರಲ್ಲಿ 7814 ರೋಗಿಗಳು ಗುಣಮುಖರಾಗಿದ್ದಾರೆ. ರಾಜಸ್ಥಾನದಲ್ಲಿ ಹೊಟೇಲುಗಳು, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ಶಾಪಿಂಗ್ ಮಾಲ್ ಗಳು, ಮತ್ತು ಎಲ್ಲಾ ವನ್ಯಜೀವಿ ಧಾಮಗಳು ಇಂದು ತೆರೆಯಲ್ಪಟ್ಟಿವೆ. ಎ.ಎಸ್.ಐ. ಮಾಲಕತ್ವದ ಚಾರಿತ್ರಿಕ ಸ್ಮಾರಕಗಳು ಇಂದು ಪ್ರವಾಸಿಗರಿಗೆ ತೆರೆಯಲ್ಪಟ್ಟಿವೆ.
  • ಮಧ್ಯ ಪ್ರದೇಶ: 173 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಪಾಸಿಟಿವ್ ಬಾಧಿತರ ಸಂಖ್ಯೆ 9,401 ಕ್ಕೇರಿದೆ. ಇದರಲ್ಲಿ 2658 ಆಕ್ಟಿವ್ ಪ್ರಕರಣಗಳು . ಬಹುತೇಕ ಹೊಸ ಪ್ರಕರಣಗಳು ಭೋಪಾಲ ಮತ್ತು ಇಂದೋರ್ ಗಳಿಂದ ವರದಿಯಾಗಿವೆ.
  • ಛತ್ತೀಸ್ ಗಢ: ಭಾನುವಾರದಂದು 76 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು ಇಂದು ಬೆಳಿಗ್ಗೆಯವರೆಗೆ ಮತ್ತೆ 31 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದ ಒಟ್ಟು ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ  1,073 ಕ್ಕೇರಿದೆ. ಆಕ್ಟಿವ್  ಪ್ರಕರಣಗಳ ಸಂಖ್ಯೆ 834. ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ಇಂದಿನಿಂದ ತೆರೆಯಲ್ಪಟ್ಟಿವೆ.
  • ಗೋವಾ: ಭಾನುವಾರದಂದು 33 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ -19 ದೃಢೀಕೃತ ಪ್ರಕರಣಗಳ ಸಂಖ್ಯೆ 300 ಕ್ಕೇರಿದೆ. ಇದರಲ್ಲಿ 235 ಆಕ್ಟಿವ್ ಪ್ರಕರಣಗಳು. ಪ್ರಕರಣಗಳ ಸಂಖ್ಯೆಯ ಹೆಚ್ಚಳದಿಂದಾಗಿ ರಾಜ್ಯವು ಕೇಂದ್ರಕ್ಕೆ 200 ವೆಂಟಿಲೇಟರುಗಳ ಬೇಡಿಕೆಯನ್ನು ಸಲ್ಲಿಸಿದೆ. ಇದರಲ್ಲಿ 100 ನಾಳೆ ಪೂರೈಕೆಯಾಗುವ ನಿರೀಕ್ಷೆ ಇದೆ, ಎಂದು ರಾಜ್ಯ ಆರೋಗ್ಯ ಸಚಿವರು ಹೇಳಿದ್ದಾರೆ. 
  • ಮಣಿಪುರ: ಮಣಿಪುರದಲ್ಲಿ ಮತ್ತೆ 37 ಮಂದಿಗೆ  ಕೋವಿಡ್ -19 ದೃಢಪಟ್ಟಿದೆ. ಅವರನ್ನು ಇಂಫಾಲಾದಲ್ಲಿರುವ ಕೋವಿಡ್ ನಿಗಾ ಸೌಲಭ್ಯಕ್ಕೆ ವರ್ಗಾಯಿಸಲಾಗಿದೆ. ಒಟ್ಟು ಪ್ರಕರಣಗಳು 209 , ಇದರಲ್ಲಿ 157 ಆಕ್ಟಿವ್ ಪ್ರಕರಣಗಳು.
  • ಮಿಜೋರಾಂ: ಮುಖ್ಯಮಂತ್ರಿ ಅವರು ಕೋವಿಡ್ -19 ಕ್ಕೆ ಸಂಬಂಧಿಸಿ ಶಾಸಕರು, ಸರಕಾರಿ ಅಧಿಕಾರಿಗಳು, ಸರಕಾರೇತರ ಆಸ್ಪತ್ರೆಗಳ ಸಂಘಟನೆಗಳು, ಚರ್ಚ್ ನಾಯಕರು, ಗ್ರಾಮಗಳು ಮತ್ತು ಸ್ಥಳೀಯ ಮಂಡಳಿಗಳ ಸದಸ್ಯರು, ಕಾರ್ಯ ಪಡೆಗಳು ಮತ್ತು ಎನ್.ಜಿ.ಒ.ಗಳ ಸಲಹಾ ಸಭೆ ಕರೆದು, ರಾಜ್ಯದ ಮುಂದಿನ ಹಾದಿಯ ಬಗ್ಗೆ ಚರ್ಚಿಸಿದರು. ಮಿಜೋರಾಂನಲ್ಲಿ ಇಂದು ಮಧ್ಯರಾತ್ರಿಯಿಂದ ಆರಂಭಗೊಳ್ಳುವಂತೆ ಮತ್ತೆ 21 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಲಾಗಿದೆ.ತೀರಾ ನಿರಾಕರಿಸಲಾಗದ, ಅನಿವಾರ್ಯ  ಪರಿಸ್ಥಿತಿಗಳಲ್ಲಿ ಮಾತ್ರ ಗೃಹ ಕ್ವಾರಂಟೈನ್ ಗೆ ಅವಕಾಶ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಝೋರಾಮ್ಥಂಗಾ ಹೇಳಿದರು.
  • ನಾಗಾಲ್ಯಾಂಡ್: ಇದುವರೆಗೆ  ಇತರ ರಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡವರಿಗೆ ರಾಜ್ಯ ಸರಕಾರ 24 ಕೋ.ರೂ.ಗಳ ಹಣಕಾಸು ಸಹಾಯವನ್ನು ವಿತರಿಸಿದೆ. ನಾಗಾಲ್ಯಾಂಡಿನಲ್ಲಿ 13 ಸಾವಿರ ಹಾಸಿಗೆಗಳ , 238 ಕ್ವಾರಂಟೈನ್ ಕೇಂದ್ರಗಳು ಇವೆ. ಕಠಿಣ ಕ್ವಾರಂಟೈನ್ ನಿಯಮಗಳನ್ನು ಅನುಷ್ಟಾನಿಸುತ್ತಿರುವ ರಾಜ್ಯಗಳಲ್ಲಿ ನಾಗಾಲ್ಯಾಂಡ್ ದೇಶದ ರಾಜ್ಯಗಳಲ್ಲಿ 5 ನೇ ಸ್ಥಾನದಲ್ಲಿದೆ.

***



(Release ID: 1630600) Visitor Counter : 264