PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 05 JUN 2020 6:41PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

Image

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19ಅಪ್ಡೇಟ್

ಭಾರತವು ತನ್ನ ಲಾಕ್ ಡೌನ್ ಆವಶ್ಯಕತೆಯನ್ನು ಹಂತ ಹಂತವಾಗಿ ಸಾಕಷ್ಟು ಪೂರ್ವ ತಯಾರಿ ಧೋರಣೆಯೊಂದಿಗೆ ಸಡಿಲಿಕೆ ಮಾಡುತ್ತಾ ಬರುತ್ತಿರುವಂತೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್ -19 ಹರಡುವಿಕೆ ಸಾಧ್ಯತೆ ಅತ್ಯಂತ ಹೆಚ್ಚು ಇರುವ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಪರಿಸರಗಳ ಕಾರ್ಯಾಚರಣೆಗೆ ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗದರ್ಶಿಗಳು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡುವಾಗ ಕೋವಿಡ್ ಹರಡುವಿಕೆಯ ಸರಪಳಿಯನ್ನು ಪ್ರತಿಬಂಧಿಸಲು ಸೂಕ್ತ ವರ್ತನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿವೆ

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 5,355 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ, ಇದರಿಂದ ಇದುವರೆಗೆ ಒಟ್ಟು 1,09,462 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ, ಕೋವಿಡ್ -19 ರೋಗಿಗಳ ಚೇತರಿಕೆ ದರ 48.27% . ಪ್ರಸ್ತುತ 1,10,960 ಆಕ್ಟಿವ್ ಪ್ರಕರಣಗಳಿದ್ದು, ಇವೆಲ್ಲವೂ ವೈದ್ಯಕೀಯ ನಿಗಾದಲ್ಲಿವೆ.

ಸರಕಾರಿ ಪ್ರಯೋಗಾಲಯಗಳ ಸಂಖ್ಯೆ ಈಗ 507 ತಲುಪಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳವಾಗಿ 217ಕ್ಕೆ ತಲುಪಿದೆ. (ಒಟ್ಟು 727 ಪ್ರಯೋಗಾಲಯಗಳು) ಕಳೆದ 24 ಗಂಟೆಗಳಲ್ಲಿ 1,43,661 ಸ್ಯಾಂಪಲ್ ಗಳನ್ನು ಪರೀಕ್ಷ್ಗೆ ಒಳಪಡಿಸಲಾಗಿದೆ. ಇದುವರೆಗೆ ಪರೀಕ್ಷೆ ಮಾಡಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ 43,86,379. 2020 ಜೂನ್ 5 ರವರೆಗೆ ಕೋವಿಡ್ ಸಂಬಂಧಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲಾಗಿದ್ದು, 957 ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಗಳು ಲಭ್ಯ ಇವೆ. ಇಲ್ಲಿ 1,66,460 ಐಸೋಲೇಶನ್ ಹಾಸಿಗೆಗಳು, 21,473 .ಸಿ.ಯು. ಹಾಸಿಗೆಗಳು, 72,497 ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳು , 2,362  ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ 1,32,593 ಐಸೋಲೇಶನ್ ಹಾಸಿಗೆಗಳು, 10,903 .ಸಿ.ಯು. ಹಾಸಿಗೆಗಳು, 45,562 ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳು ಲಭ್ಯ ಇವೆ. 11,210 ಕ್ವಾರಂಟೈನ್ ಕೇಂದ್ರಗಳು ಮತು 7,529 ಕೋವಿಡ್ ನಿಗಾ ಕೇಂದ್ರಗಳು 7,03,786 ಹಾಸಿಗೆಗಳೊಂದಿಗೆ ದೇಶದಲ್ಲಿ ಕೋವಿಡ್ -19 ವಿರುದ್ದ ಹೋರಾಟಕ್ಕೆ ಲಭ್ಯ ಇವೆ.

https://static.pib.gov.in/WriteReadData/userfiles/image/image005AO3Q.jpg

ವರ್ಚುವಲ್ ಜಾಗತಿಕ ಲಸಿಕೆ ಶೃಂಗ 2020 ನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ; ಭಾರತದಿಂದ ಅಂತಾರಾಷ್ಟ್ರೀಯ ಲಸಿಕೆ ಮಿತ್ರಕೂಟ ಗವಿಗೆ 15 ಮಿಲಿಯನ್ ಅಮೆರಿಕನ್ ಡಾಲರ್ ವಾಗ್ದಾನ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯು.ಕೆ . ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ನಿನ್ನೆ ಆಯೋಜಿಸಿದ್ದ ವರ್ಚುವಲ್ ಜಾಗತಿಕ ಲಸಿಕೆ ಶೃಂಗವನ್ನುದೇಶಿಸಿ ಮಾತನಾಡಿದರು. ಇದರಲ್ಲಿ 50 ಕ್ಕೂ ಅಧಿಕ ದೇಶಗಳು, ವ್ಯಾಪಾರೋದ್ಯಮದ ಪ್ರಮುಖರು, ವಿಶ್ವ ಸಂಸ್ಥೆಯ ಏಜೆನ್ಸಿಗಳು, ನಾಗರಿಕ ಸಮಾಜ, ಸರಕಾರಿ ಸಚಿವರು, ಸರಕಾರಗಳು, ದೇಶಗಳ ಮುಖ್ಯಸ್ಠರು ಪಾಲ್ಗೊಂಡಿದ್ದರು. ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಅವರು ಸವಾಲಿನ ಸಮಯದಲ್ಲಿ ಭಾರತವು ವಿಶ್ವದ ಜೊತೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದರು. ಭಾರತವು ಅಂತಾರಾಷ್ಟ್ರೀಯ ಲಸಿಕೆ ಮಿತ್ರಕೂಟವಾದ ಗವಿಗೆ 15 ಮಿಲಿಯನ್ ಅಮೆರಿಕನ್ ಡಾಲರ್ ನೀಡುವ ವಾಗ್ದಾನ ಮಾಡಿತು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹಲವು  ರೀತಿಯಲ್ಲಿ ಜಾಗತಿಕ ಸಹಕಾರದ ಮಿತಿಗಳನ್ನು ತೋರಿಸಿದೆ. ಮತ್ತು ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾನವ ಕುಲ ಸಾಮಾನ್ಯ ಸ್ಪಷ್ಟ ವೈರಿಯನ್ನು ಎದುರಿಸುತ್ತಿದೆ ಎಂದರು. ಪ್ರಧಾನ ಮಂತ್ರಿ ಅವರು ಭಾರತವು ಜಗತ್ತಿನ ಜೊತೆ ಒಗ್ಗೂಡಿ ನಿಲ್ಲುತ್ತದೆ, ಅದು ಗುಣಮಟ್ಟದ ಔಷಧಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ತೋರ್ಪಡಿಸಿದೆ ಮತ್ತು ಲಸಿಕೆಯನ್ನು ಕಡಿಮೆ ಖರ್ಚಿನಲ್ಲಿ ತಯಾರಿಸುವ ಸಾಮರ್ಥ್ಯವನ್ನು ತೋರ್ಪಡಿಸಿರುವುದನ್ನು ಪುನರುಚ್ಚರಿಸಿದರು ಹಾಗು  ಭಾರತದ ದೇಶೀಯವಾದ ವ್ಯಾಪಕ ಲಸಿಕಾ ಕಾರ್ಯಕ್ರಮದ ಅನುಭವ ಮತ್ತು ಅದರ ಗಮನಾರ್ಹ ಸಂಶೋಧನಾ ಪ್ರತಿಭೆಯ ಬಗ್ಗೆ ಅವರು ಉಲ್ಲೇಖಿಸಿದರು.

ರಾಜ್ಯಗಳಿಗೆ ಜಿ.ಎಸ್.ಟಿ ಪರಿಹಾರವಾಗಿ ಕೇಂದ್ರದಿಂದ 36,400 ಕೋ.ರೂ.ಗಳ ಬಿಡುಗಡೆ

ಕೇಂದ್ರ  ಸರಕಾರವು ರಾಜ್ಯಗಳು/ ಶಾಸಕಾಂಗ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ 2019 ಡಿಸೆಂಬರ್ ತಿಂಗಳಿನಿಂದ 2020 ಫೆಬ್ರವರಿ ವರೆಗಿನ ಅವಧಿಗೆ ಜಿ.ಎಸ್.ಟಿ. ಪರಿಹಾರವಾಗಿ 36,400 ಕೋ.ರೂ.ಗಳನ್ನು ನಿನ್ನೆ ಬಿಡುಗಡೆ ಮಾಡಿದೆ. ಕೋವಿಡ್ -19 ಹಾಲಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳ ಆದಾಯದ ಮೇಲೆ ಪ್ರತಿಕೂಲ ಪರಿಣಾಮಗಳು ಬೀರಲ್ಪಟ್ಟಿರುವಾಗ ಮತ್ತು ಅವುಗಳು ಕೋವಿಡ್ ಗಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇರುವಾಗ ಸರಕಾರ ಪರಿಹಾರವನ್ನು ಬಿಡುಗಡೆ ಮಾಡಿದೆ.

ಡಿಜಿಟಲ್ ವೇದಿಕೆ ಮೂಲಕ .ವೈ.ಡಿ 2020 ಜಾಗತಿಕ ಆಚರಣೆ

ಕೋವಿಡ್ -19 ಕಾರಣದಿಂದಾಗಿ ದೇಶದಲ್ಲಿ ಆರೋಗ್ಯ ತುರ್ತುಸ್ಥಿತಿ ಇರುವ ಹಿನ್ನೆಲೆಯಲ್ಲಿ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಅಂತಾರಾಷ್ಟ್ರೀಯವಾಗಿ ಡಿಜಿಟಲ್ ವೇದಿಕೆಯಲ್ಲಿ ಅಚರಿಸಲಾಗುವುದು. ಆಯುಷ್  ಸಚಿವಾಲಯದ ಜೊತೆ ಇಂದು ನಡೆಸಿದ  ಜಂಟಿ  ಸುದ್ದಿಗೋಷ್ಟಿಯಲ್ಲಿ ವಿಷಯವನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಅಧ್ಯಕ್ಷ ಡಾ. ವಿನಯ ಸಹಸ್ರಬುದ್ದೆ ತಿಳಿಸಿದರು. ವರ್ಷ ಕಾರ್ಯಕ್ರಮವು ವ್ಯಕ್ತಿಗಳಿಗೆ ಯೋಗದ ಸೌಕರ್ಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ , ಜಾಗತಿಕ ಸಾಂಕ್ರಾಮಿಕದ ವಿರುದ್ದ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ದಿಪಡಿಸಿಕೊಳ್ಳುವುದನ್ನು ಮತ್ತು ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ವಿಷಯಗಳನ್ನು ನಿಭಾಯಿಸುವಾಗ ಸಮುದಾಯವನ್ನು ಬಲಪಡಿಸುವುದನ್ನು ಇದು ಪ್ರಮುಖವಾಗಿ ಒಳಗೊಂಡಿರುತ್ತದೆ ಎಂದು ಡಾ. ಸಹಸ್ರಬುದ್ದೆ ಹೇಳಿದರು. ಆಯುಷ್ ಕಾರ್ಯದರ್ಶಿ ,ವೈದ್ಯ ರಾಜೇಶ್ ಕೊಟೇಚಾ, ಉಪಸ್ಥಿತರಿದ್ದರು. ಕೋವಿಡ್ -19 ಖಾಯಿಲೆ ಹರಡುವ ಅತ್ಯಂತ ತೀವ್ರತೆಯ ಸಾಂಕ್ರಾಮಿಕ ವೈರಸ್ ಕಾರಣದಿಂದಾಗಿ ಬಾರಿ ಬೃಹತ್ ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳು ಇಲ್ಲ.

ಕೋವಿಡ್ -19 ಸಮಯದಲ್ಲಿ ಸುರಕ್ಷಿತ ಆನ್ ಲೈನ್ ಕಲಿಕೆಕುರಿತು ಜಾಗೃತಿ ಮೂಡಿಸುವ ಕಿರು ಹೊತ್ತಿಗೆ, ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಂದ ಬಿಡುಗಡೆ

ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಾಗಿರುವ ರಾಷ್ಟ್ರೀಯ ಮಂಡಳಿ (ಎನ್.ಸಿ..ಆರ್.ಟಿ.) ಮತ್ತು ಯುನೆಸ್ಕೋ  ಹೊಸದಿಲ್ಲಿ ಕಚೇರಿಗಳು ಪುಸ್ತಕವನ್ನು ಅಭಿವೃದ್ದಿಪಡಿಸಿವೆ. ಪುಸ್ತಕವು ಮಕ್ಕಳಿಗೆ, ಯುವ ಜನತೆಗೆ ಯಾವುದನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂಬುದನ್ನು ತಿಳಿಸಿಕೊಡುವ ಮೂಲಕ ಸುರಕ್ಷಿತ ಆನ್ ಲೈನ್ ಕಲಿಕೆಗೆ ನೆರವಾಗುತ್ತದೆ ಮತ್ತು ಪೋಷಕರಿಗೆ ಹಾಗು ಶಿಕ್ಷಕರಿಗೆ ಮಕ್ಕಳಿಗೆ ಅಂತರ್ಜಾಲವನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು ಎಂಬುದರ ಬಗ್ಗೆಯೂ ಮಾಹಿತಿ ಒದಗಿಸುತ್ತದೆ.

ಕೊಚ್ಚಿಯ ನೌಕಾ ನೆಲೆಯಲ್ಲಿ ಬೆಹರಿನ್ ಮತ್ತು ಒಮಾನ್ ನಿಂದ ಬಂದಿದ್ದ 176 ಭಾರತೀಯ ನಾಗರಿಕರ ಕ್ವಾರಂಟೈನ್ ಮುಕ್ತಾಯ

ಬೆಹರಿನ್ ಮತ್ತು ಒಮಾನ್ ಗಳಿಂದ ಬಂದಿದ್ದ 176 ಭಾರತೀಯರು,  ಅವರ ಕಡ್ಡಾಯ ಕ್ವಾರಂಟೈನ್ ನ್ನು ಕೊಚ್ಚಿಯ ನೌಕಾ ನೆಲೆಯಲ್ಲಿ ನಿನ್ನೆ ಮುಕ್ತಾಯಗೊಳಿಸಿದರು. ದಕ್ಷಿಣ ನೌಕಾ ಕಮಾಂಡಿನ ಕೋವಿಡ್ ಆರೈಕೆ ಕೇಂದ್ರ (ಸಿ.ಸಿ.ಸಿ.) ನಿವಾಸಿಗಳು ಇನ್ನು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಬಹುದು. ಅವರ ವಾಸ್ತವ್ಯದ ಅವಧಿಯಲ್ಲಿ ಎಲ್ಲಾ ನಿವಾಸಿಗಳೂ ಆರ್.ಟಿ- ಪಿ.ಸಿ.ಆರ್. ಪರೀಕ್ಷೆಗಳಿಗೆ ಒಳಗಾಗಿದ್ದಾರೆ , ಮತ್ತು ಅವರ ಬಿಡುಗಡೆಗೆ ಮೊದಲು ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸಿ.ಸಿ.ಸಿ. ಯಿಂದ ನಿನ್ನೆ ಹೊರಗೆ ಬಂದ ಕೊನೆಯ ತಂಡದಲ್ಲಿದ್ದ 49 ಮಂದಿ ಭಾರತೀಯರು ಒಮಾನ್ ನಿಂದ ಬಂದವರು. ಬೆಹರಿನ್ ನಿಂದ ಬಂದ 127 ಮಂದಿ ಭಾರತೀಯ ನೌಕಾ ಸೌಲಭ್ಯದಿಂದ ಜೂನ್ 1 ಮತ್ತು 2 ರಂದು ಹೊರಬಂದಿದ್ದಾರೆ.

ಚಾಲ್ತಿಯಲ್ಲಿರುವ ಕೋವಿಡ್ ಬಿಕ್ಕಟ್ಟಿನಲ್ಲಿ ಬುಡಕಟ್ಟು ಜನತೆಗೆ ಸಹಾಯ ಮಾಡಲು ಮಹಾರಾಷ್ಟ್ರದಲ್ಲಿ ವನ ಧನ ವಿಕಾಸ ಕೇಂದ್ರಗಳಿಂದ ನವೀನ ಉಪಕ್ರಮ

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಟ್ರೈಫೆಡ್ ನಿಂದ ಅನುಷ್ಟಾನಗೊಂಡ ಯೋಜನೆ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವನ್ ಧನ್ ಕೇಂದ್ರಗಳು ಹತಾಶ ಪರಿಸ್ಥಿತಿಯಲ್ಲಿ ಬುಡಕಟ್ಟು ಜನತೆಗೆ ಅವರ ಜೀವನೋಪಾಯವನ್ನು ಗಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ. ಈಗ ಚಾಲ್ತಿಯಲ್ಲಿರುವ ಬಿಕ್ಕಟ್ಟಿನಲ್ಲಿ ತೊಂದರೆಗೆ ಸಿಲುಕಿರುವ ಒಂದು ವರ್ಗವೆಂದರೆ ಬುಡಕಟ್ಟು ವರ್ಗ .ಬುಡಕಟ್ಟು ಜನರ ಆದಾಯ ಮೂಲ ಕಿರು ಅರಣ್ಯ ಉತ್ಪನ್ನಗಳುಅರಣ್ಯ ಉತ್ಪನ್ನಗಳ ಸಂಗ್ರಹ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುತ್ತದೆ. ಕೋವಿಡ್ -19 ರಿಂದ ಭಾರೀ ಬಾಧೆಗೆ  ಒಳಪಟ್ಟಿರುವ ಮಹಾರಾಷ್ಟ್ರದಲ್ಲಿ ವನ್ ಧನ್ ಯೋಜನೆಯ ಯಶೋಗಾಥೆ ಒಂದು ಶ್ಲಾಘನೀಯ ಸಾಧನೆ.

2019 ನಾಗರಿಕ ಸೇವೆಗಳ ಪರೀಕ್ಷೆಗಳ ಉಳಿದ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ 2020 ಜುಲೈ 20 ರಿಂದ ನಡೆಯಲಿದೆ

ಕೋವಿಡ್ -19 ಹಾಲಿ ಇರುವ ಸ್ಥಿತಿಯ ಪುನರಾವಲೋಕನ ಮಾಡಲು ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗವಿಂದು ವಿಶೇಷ ಸಭೆ ನಡೆಸಿತು. ಲಾಕ್ ಡೌನ್ ತೆರವು ಮತ್ತು ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳು ಸತತವಾಗಿ ಸಡಿಲಿಕೆ ಕ್ರಮಗಳನ್ನು ಘೋಷಿಸುತ್ತಿರುವುದನ್ನು ಆಯೋಗವು ಗಮನಕ್ಕೆ ತೆಗೆದುಕೊಂಡು ಪರೀಕ್ಷೆಗಳು/ ನೇಮಕಾತಿ ಪರೀಕ್ಷೆಗಳ (ಆರ್. ಟಿ. ಗಳು) ಪರಿಷ್ಕೃತ ವೇಳಾ ಪಟ್ಟಿಯನ್ನು ಹೊರಡಿಸಲು ನಿರ್ಧರಿಸಿತು. ಪರಿಷ್ಕೃತ ಪರೀಕ್ಷಾ / ಆರ್.ಟಿ. ಗಳ ವೇಳಾ ಪಟ್ಟಿಯನ್ನು ಯು.ಪಿ.ಎಸ್.ಸಿ. ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಆಯೋಗವು 2019 ನಾಗರಿಕ ಸೇವಾ ಪರೀಕ್ಷೆಗಳ ಉಳಿದ ಅಭ್ಯರ್ಥಿಗಳಿಗಾಗಿ ವ್ಯಕ್ತಿತ್ವ ಪರೀಕ್ಷೆಯನ್ನು 2020 ಜುಲೈ 20 ರಿಂದ ಆರಂಭಿಸಲು ನಿರ್ಧರಿಸಿದೆ. ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ತಿಳಿಸಲಾಗುವುದು.

ಈಶಾನ್ಯವು ಭಾರತದ ಹೊಸ ವ್ಯಾಪಾರೋದ್ಯಮ ತಾಣವಾಗಿ ಮೂಡಿ ಬರಲಿದೆ : ಡಾ. ಜಿತೇಂದ್ರ ಸಿಂಗ್

ಈಶಾನ್ಯ ವಲಯ ಅಭಿವೃದ್ದಿ ಸಚಿವ (ಉಸ್ತುವಾರಿ) ಮತ್ತು ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಈಶಾನ್ಯ ವಲಯವು ನಿಧಾನವಾಗಿ ಮತ್ತು ದೃಢವಾಗಿ ಭಾರತದ ಹೊಸ ವ್ಯಾಪಾರೋದ್ಯಮದ ತಾಣವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಕೋವಿಡೋತ್ತರ  ಕಾಲದಲ್ಲಿ ಕೆಲವು ಮಾದರಿಗಳು ಉದಯಿಸಲಿವೆ, ಅವು ಆರ್ಥಿಕತೆ, ವ್ಯಾಪಾರ, ವೈಜ್ಞಾನಿಕ ಸಂಶೋಧನೆ, ಮತ್ತು ಇತರ ಹಲವಾರು ವೈವಿಧ್ಯಮಯ ವಲಯಗಳಲ್ಲಿ ಹೊಸ ಅವಕಾಶಗಳು, ಸಾಮರ್ಥ್ಯಗಳನ್ನು ಸೃಷ್ಟಿ ಮಾಡಲಿವೆ ಎಂದ ಅವರು ಈಶಾನ್ಯವು ದೇಶದ ಆರ್ಥಿಕ ತಾಣವಾಗಿ ಮತ್ತು ನವೋದ್ಯಮಗಳ ಆಯ್ಕೆಯ ತಾಣವಾಗಿ ರೂಪುಗೊಳ್ಳಲಿದೆ ಎಂದೂ ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರಿಂದ ಮೋದಿ ಸರಕಾರ 2.0 ರಡಿಯಲ್ಲಿ ಡಿ..ಪಿ.ಪಿ. ಡಬ್ಲ್ಯು, ಸಾಧನೆಗಳನ್ನು ಒಳಗೊಂಡ -ಪುಸ್ತಕ ಬಿಡುಗಡೆ

ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ನಿನ್ನೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಿವೃತ್ತಿ ವೇತನ ಮತ್ತು ನಿವೃತ್ತಿ ವೇತನದಾರರ ಕಲ್ಯಾಣ (ಡಿ..ಪಿ.ಪಿ. ಡಬ್ಲ್ಯು.) ಇಲಾಖೆಯ ಒಂದು ವರ್ಷದ ಸಾಧನೆಗಳನ್ನು ಒಳಗೊಂಡ -ಪುಸ್ತಕವನ್ನು ಬಿಡುಗಡೆ ಮಾಡಿದರು. ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಕೋವಿಡ್ -19 ಕ್ಕೆ ಸಂಬಂಧಿಸಿ ವೆಬಿನಾರ್ ಸಂಘಟಿಸುವ ಮೂಲಕ ಇಲಾಖೆಯು ತನ್ನ ಕರ್ತವ್ಯದ ಆವರಣವನ್ನು ದಾಟಿ ನಿವೃತ್ತಿ ವೇತನದಾರರ ಭಯ ಮತ್ತು ಆತಂಕವನ್ನು ನಿವಾರಣೆ ಮಾಡಿದೆ, ಇದರಲ್ಲಿ ಪ್ರಮುಖ ವೈದ್ಯರು ಪಾಲ್ಗೊಂಡು ಸಲಹೆಗಳನ್ನು ನೀಡಿದ್ದರು ಎಂದು ಹೇಳಿದರು. ಇಲಾಖೆಯು ಹಿರಿಯರಿಗೆ ಮತ್ತು ನಿವೃತ್ತರಿಗೆ ಸೇವೆ ಸಲ್ಲಿಸುವಂತಹ ವಿಶೇಷ ಅವಕಾಶವನ್ನು ಹೊಂದಿದೆ, ಇತರ ಇಲಾಖೆಗಳಿಗೆ ಅವಕಾಶ ಇಲ್ಲ ಎಂಬುದರತ್ತ ಸಚಿವರು ಬೆಟ್ಟು ಮಾಡಿದರು.

ಸಿ.ಎಸ್..ಆರ್. ಪ್ರಯೋಗಾಲಯದಿಂದ ರಾಷ್ಟ್ರವ್ಯಾಪೀ ಬೇಸಿಗೆ ಸಂಶೋಧನಾ ತರಬೇತಿ ಕಾರ್ಯಕ್ರಮ

ಈಶಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ( ಎನ್...ಎಸ್.ಟಿ.) ಯು ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ದೇಶದ ಶೈಕ್ಷಣಿಕ ವಾತಾವರಣದಲ್ಲಿ ಉಂಟು ಮಾಡಿರುವ ಚಲನೆ ರಹಿತ ಸ್ಥಿತಿಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಜೋರ್ಹತ್ ಮೂಲದ ಸಿ.ಎಸ್..ಆರ್. –ಎನ್...ಎಸ್.ಟಿ. ಯು ದೇಶವ್ಯಾಪೀ ಸಿ.ಎಸ್..ಆರ್. –ಬೇಸಿಗೆ ಸಂಶೋಧನಾ ತರಬೇತಿ ಕಾರ್ಯಕ್ರಮ (ಸಿ.ಎಸ್..ಆರ್. –ಎಸ್.ಆರ್.ಟಿ.ಪಿ. -2020) ಆಯೋಜಿಸಿ ಸಮನ್ವಯಗೊಳಿಸಲಿದೆ. . ಇದು ಆನ್ ಲೈನ್ ಕಾರ್ಯಕ್ರಮವಾಗಿದ್ದು (ಸಿ.ಎಸ್..ಆರ್. –ಎಸ್.ಆರ್.ಟಿ.ಪಿ. -2020) ದೇಶಾದ್ಯಂತ ಹರಡಿರುವ 38 ಸಿ.ಎಸ್..ಆರ್. ಪ್ರಯೋಗಾಲಯಗಳ ಮೂಲಕ ಅದರ ಬೋಧಕ ವರ್ಗ ಮತ್ತು ಇತರ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡಲಿದೆ.

ಎಸ್. ಆಂಡ್ ಟಿ ಮಧ್ಯಪ್ರವೇಶ ಮೂಲಕ ಕೋವಿಡ್ -19 ವಿರುದ್ದ ಎಸ್.ಸಿ. ಮತ್ತು ಎಸ್.ಟಿ. ಗಳ ಪುನಶ್ಚೇತನ ಸಾಧಿಸುತ್ತಿರುವ ಡಿ.ಎಸ್.ಟಿ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.) ಸಮಾನ ಸಶಕ್ತೀಕರಣ ಮತ್ತು ಅಭಿವೃದ್ದಿಗಾಗಿರುವ  ವಿಜ್ಞಾನ (ಸೀಡ್) ವಿಭಾಗವು ಹಲವಾರು ಜ್ಞಾನ ಸಂಸ್ಥೆಗಳಿಗೆ (ಕೆ..ಗಳು) ಮತ್ತು ವಿಜ್ಞಾನ ಹಾಗು ತಂತ್ರಜ್ಞಾನ (ಎಸ್.ಆಂಡ್ ಟಿ.) ಆಧಾರಿತ ಸರಕಾರೇತರ ಸಂಸ್ಥೆಗಳಿಗೆ (ಎನ್.ಜಿ.. ಗಳು) ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಅನುದಾನ ಬೆಂಬಲವನ್ನು ನೀಡುತ್ತಿದೆ.  ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ರಾಷ್ಟ್ರವ್ಯಾಪೀ ಲಾಕ್ ಡೌನ್ ಅವಧಿಯಲ್ಲಿ ಅವರ ಜೀವನೋಪಾಯ ಮತ್ತು ಸಮುದಾಯದ  ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ನೆರವು ಒದಗಿಸಲಾಗುತ್ತದೆ.

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಕೋವಿಡ್ -19  ರೋಗಿಗಳನ್ನು ಸಕಾಲದಲ್ಲಿ ಪತ್ತೆ ಹಚ್ಚುವುದಕ್ಕಾಗಿ ಮತ್ತು ಜಾಗತಿಕ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಜನತೆಗೆ ವೈದ್ಯಕೀಯ ತಪಾಸಣೆಯನ್ನು ಬಲಪಡಿಸಲು ಪಂಜಾಬ್ ಸರಕಾರವು ನೊಂದಾಯಿತ ಖಾಸಗಿ ಆಸ್ಪತ್ರೆಗಳು/ ಕ್ಲಿನಿಕ್ ಗಳು ಮತ್ತು ಖಾಸಗಿ ಪ್ರಯೋಗಾಲಯಗಳು ಕಳುಹಿಸುವ ಕೋವಿಡ್ -19 ಸ್ಯಾಂಪಲ್ ಗಳಿಗೆ ಉಚಿತವಾಗಿ ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಖಾಸಗಿ ಪ್ರಯೋಗಾಲಯಗಳು ಅವಶ್ಯಕ ಸಾಗಾಟ ವ್ಯವಸ್ಥೆ ಮತ್ತು ಸ್ಯಾಂಪಲ್ ಸಂಗ್ರಹಣೆ, ಅವುಗಳ ಪ್ಯಾಕಿಂಗ್, ಮತ್ತು ಅದನ್ನು ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಶಿಷ್ಟಾಚಾರದಂತೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ
  • ಹರ್ಯಾಣ:  ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಉಂಟಾಗಿರುವ ಸಂಕಷ್ಟದ , ಸವಾಲಿನ ಅವಧಿಯ ನಡುವೆ ವ್ಯಾಪಾರೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಕಡಿಮೆ ಮಾಡಲು ವಿವಿಧ ಸಂಘಟನೆಗಳನ್ನು ಬೆಂಬಲಿಸಲು, ಹರ್ಯಾಣ ಸರಕಾರವು ವರ್ಚುವಲ್ ಸಲಹಾ ಕಾರ್ಯಾಗಾರವನ್ನು ಸ್ಟಾರ್ಟಪ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲು ಯೋಜನೆ ಹಾಕಿಕೊಂಡಿದೆ. ನವೋದ್ಯಮಗಳ ದೃಷ್ಟಿಕೋನ ವಿಸ್ತರಣೆ ಮತ್ತು ಮೂಲಕ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಅವುಗಳಲ್ಲಿ ವಿಶ್ವಾಸ , ಭರವಸೆ ಮೂಡಿಸುವ ನಿಟ್ಟಿನಲ್ಲಿ ಸಹಾಯ ಮಾಡುವುದು ಸರಣಿ ಕಾರ್ಯಾಗಾರಗಳ ಉದ್ದೇಶ. ಇದು ಮೂರು ತಿಂಗಳ ಕಾರ್ಯಕ್ರಮವಾಗಿದ್ದು, ಮೊದಲ ಹಂತದಲ್ಲಿರುವ ನವೋದ್ಯಮಗಳಿಗೆ ಕೈಗಾರಿಕೋದ್ಯಮಗಳ ತಜ್ಞರೊಂದಿಗೆ ಸಂವಾದದ ಅವಕಾಶವನ್ನು , ಅವರ ಜ್ಞಾನದೊಂದಿಗೆ ಕಲಿಯುವ ಅವಕಾಶವನ್ನು ಮತ್ತು ವ್ಯೂಹಗಳನ್ನು ಅಭಿವೃದ್ದಿಪಡಿಸಿಕೊಳ್ಳುವ ಅವಕಾಶಗಳನ್ನು ಮತ್ತು ಮೂಲಕ ವ್ಯಾಪಾರೋದ್ಯಮವನ್ನು ವರ್ಧಿಸಿಕೊಳ್ಳುವ ಅವಕಾಶವನ್ನು ಒದಗಿಸಿಕೊಡುತ್ತದೆ. ಕಾರ್ಯಕ್ರಮವು ಗುಂಪು ಅಧಿವೇಶನ ಮತ್ತು ವೈಯಕ್ತಿಕ  ಅಧಿವೇಶನವನ್ನು ಒಳಗೊಂಡಿದೆ
  • ಕೇರಳ: ಅನ್ ಲಾಕ್ 1.0 ಭಾಗವಾಗಿ ಧಾರ್ಮಿಕ ಸ್ಥಳಗಳನ್ನು ಮತ್ತು ಮಾಲ್ ಗಳನ್ನು ತೆರೆಯುವ ಕ್ರಮದ ವಿರುದ್ದ .ಎಂ..ಯು ರಾಜ್ಯ ಸರಕಾರಕ್ಕೆ ಎಚ್ಚರಿಕೆ  ನೀಡಿದೆ. ಇದರಿಂದ ಅಪರಿಚಿತ ಮೂಲಗಳಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ ಮತ್ತು ಸಮುದಾಯ ಹರಡುವಿಕೆ ಅಪಾಯ ಇದೆ ಎಂದು ಅದು ಹೇಳಿದೆ. ರಾಜ್ಯ ಸರಕಾರವು ಇಂದು,  ಕೇಂದ್ರವು ಹೊರಡಿಸಿದ ಹೊಸ ಎಸ್..ಪಿ. ಗಳನ್ನು ಆಧರಿಸಿ ಅನ್ ಲಾಕ್ -1.0 ಕ್ಕೆ ಮಾರ್ಗದರ್ಶಿಗಳನ್ನು ಹೊರತಂದಿದೆ. ಕೋಝಿಕ್ಕೋಡಿನಲ್ಲಿ ಗರ್ಭಿಣಿ ಮಹಿಳೆ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ ಬಳಿಕ ವೈದ್ಯರು ಸಹಿತ ಹಲವು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಹಲವು ಮಂದಿಗೆ ಕೋವಿಡ್ -19 ದೃಢಪಟ್ತ ಬಳಿಕ ಮಾವೂರು ಪಂಚಾಯತನ್ನು ಕಂಟೈನ್ ಮೆಂಟ್ ವಲಯವನ್ನಾಗಿ ಕೋಝಿಕ್ಕೋಡ್ ಕಲೆಕ್ಟರ್ ಘೋಷಿಸಿದ್ದಾರೆ. ನಿನ್ನೆ ರಾಜ್ಯದಲ್ಲಿ 94 ಹೊಸ ಕೋವಿಡ್ -19 ಪ್ರಕರಣಗಳು  ದೃಢಪಟ್ಟಿವೆ. ಇದರಿಂದ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 1,588 ಕ್ಕೇರಿದೆ ಮತ್ತು 884 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಚೆನ್ನೈಯ 15 ವಲಯಗಳಲ್ಲಿ ಕೋವಿಡ್ -19 ನಿಯಂತ್ರಣ ಮೇಲುಸ್ತುವಾರಿ ನೋಡಲು ಐದು ಮಂದಿ ತಮಿಳುನಾಡು ಸಚಿವರ ನೇಮಕ. ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಚಿಕಿತ್ಸೆಗೆ ರಾಜ್ಯದ ಅವಕಾಶ , ಚಿಕಿತ್ಸಾ ವೆಚ್ಚದ ಮೇಲೆ ಮಿತಿ ಜಾರಿ. ನಿನ್ನೆ ತಮಿಳುನಾಡಿನಲ್ಲಿ 1,384 ಪ್ರಕರಣಗಳು  ಮತ್ತು 12 ಸಾವುಗಳು ವರದಿಯಾಗಿವೆ. ಚೆನ್ನೈಯಲ್ಲಿ 1,072 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 27,256, ಆಕ್ಟಿವ್ ಪ್ರಕರಣಗಳು: 12,132, ಸಾವುಗಳು :220, ಬಿಡುಗಡೆಯಾದವರು : 14,901. ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು : 9066.
  • ಕರ್ನಾಟಕ: ಮಹಾರಾಷ್ಟ್ರದಿಂದ ಮರಳಿರುವ ವಲಸೆ ಕಾರ್ಮಿಕರಿಗೆ ಎಂ.ಜಿ. ನರೇಗಾ ಅಡಿಯಲ್ಲಿ ಉದ್ಯೋಗ ನೀಡಲು ರಾಜ್ಯ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವರು ಹೇಳಿದ್ದಾರೆ. ಪ್ಲಾಸ್ಮಾ ಥೆರಪಿ ವಿಧಾನದ ಮೂಲಕ ಚಿಕಿತ್ಸೆ ನೀಡಲಾದ 2 ನೇ ಕೋವಿಡ್ -19 ರೋಗಿಯು ಗುಣಮುಖನಾಗಿ .ಸಿ.ಯು. ನಿಂದ ವರ್ಗಾಯಿಸಲ್ಪಟ್ಟಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ನಿನ್ನೆ 257 ಹೊಸ ಪ್ರಕರಣಗಳು, 106 ಬಿಡುಗಡೆಗಳು ಮತ್ತು ನಾಲ್ಕು ಸಾವುಗಳು ವರದಿಯಾಗಿವೆ. ನಿನ್ನೆಯವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳು 4320, ಆಕ್ಟಿವ್ ಪ್ರಕರಣಗಳು ;2651, ಸಾವುಗಳು: 57, ಗುಣಮುಖರಾದವರು ;1610.
  • ಆಂಧ್ರ ಪ್ರದೇಶ: ಜೂನ್ 8 ರಂದು ಕಾರ್ಯಾಚರಣೆಯನ್ನು ಪುನರಾರಂಭಿಸುವಾಗ .ಪಿ.ಟಿ.ಡಿ.ಸಿ. ಹೊಟೇಲುಗಳು ಸಹಿತ ಎಲ್ಲಾ ಹೊಟೇಲುಗಳು ಮತ್ತು ರೆಸ್ಟೋರೆಂಟ್ ಗಳು ಅನುಸರಿಸಬೇಕಾದ ಎಸ್..ಪಿ.ಗಳನ್ನು ರಾಜ್ಯ ಸರಕಾರ ನಿಗದಿ ಮಾಡಿದೆ. ತಿರುಮಲ ದರ್ಶನವು ಜೂನ್ 11 ರಿಂದ ಆರಂಭಗೊಳ್ಳಲಿದೆ. ದಿನವೊಂದಕ್ಕೆ 6,000 ಭಕ್ತರಿಗೆ ಮಾತ್ರ ಅವಕಾಶ. ವಿಶ್ವ ಪರಿಸರ ದಿನದಂದು .ಪಿ. ಪರಿಸರ ನಿರ್ವಹಣಾ ಏಜೆನ್ಸಿ ಆಶ್ರಯದಲ್ಲಿ ತ್ಯಾಜ್ಯವನ್ನು ವರ್ಗಾಯಿಸುವ ಆನ್ ಲೈನ್ ವೇದಿಕೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ಕಳೆದ 24 ಗಂಟೆಗಳಲ್ಲಿ 50 ಹೊಸ ಪ್ರಕರಣಗಳು, 21 ಬಿಡುಗಡೆಗಳು ಮತ್ತು ಎರಡು ಸಾವುಗಳು ವರದಿಯಾಗಿವೆ. ಅವಧಿಯಲ್ಲಿ 9831 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. . ಒಟ್ಟು ಪ್ರಕರಣಗಳು: 3427. ಆಕ್ಟಿವ್ : 1060, ಗುಣಮುಖರಾದವರು: 2294, ಸಾವುಗಳು: 73 . ಒಟ್ಟು 700 ವಲಸೆಗಾರರು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದು, ಅವರಲ್ಲಿ 442 ಮಂದಿ ಆಕ್ಟಿವ್ ಆಗಿದ್ದಾರೆ. ವಿದೇಶಗಳಿಂದ ಬಂದ 123 ಪಾಸಿಟಿವ್ ಪ್ರಕರಣಗಳಲ್ಲಿ 119 ಪಾಸಿಟಿವ್ ಆಗಿ ಉಳಿದಿದ್ದಾರೆ. ಇದುವರೆಗೆ ಪರೀಕ್ಷೆ  ಮಾಡಲಾದ ಸ್ಯಾಂಪಲ್ ಗಳ ಸಂಖ್ಯೆ: 4,23,564
  • ತೆಲಂಗಾಣ: ಪ್ರಸ್ತುತ ಚಾಲ್ತಿಯಲ್ಲಿರುವ ವಂದೇ ಭಾರತ ಮಿಷನ್ ಮೂರನೇ ಹಂತ ಅನುಷ್ಟಾನಕ್ಕೆ ಸರಕಾರ ಸಿದ್ದತೆಗಳನ್ನು ಮಾಡುತ್ತಿರುವಂತೆಯೇ ನಗರಕ್ಕೆ ಮರಳಲು ಇಚ್ಚಿಸಿ ಕಾಯುತ್ತಿರುವ ನೂರಾರು ಜನರು ಸಹಾಯಕ್ಕಾಗಿ ಅಧಿಕಾರಿಗಳ ಮೊರೆ ಹೋಗಿದ್ದಾರೆ. ರಾಜ್ಯ ಸರಕಾರದ ಅಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 37 ವೈದ್ಯರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್  ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಹೈಕೋರ್ಟ್ , ಸರಕಾರ ತನ್ನ ವೈದ್ಯರು, ದಾದಿಯರು, ಅರೆ-ವೈದ್ಯಕೀಯ ಸಿಬ್ಬಂದಿಗಳು  ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ರಕ್ಷಣಾ ಕವಚಗಳನ್ನು(ಪಿ.ಪಿ..) ಮತ್ತು ಇತರ ಸುರಕ್ಷಾ ಸಲಕರಣೆಗಳನ್ನು  ಒದಗಿಸಲಾಗುತ್ತಿದೆ ಎಂದು  ಹೇಳಿಕೊಳ್ಲುತ್ತಿರುವಾಗ ವೈದ್ಯರಿಗೆ ಕೊರೊನಾವೈರಸ್ ಹರಡಿರುವುದು ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ಜೂನ್ 3 ರವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 3147, ಇಂದಿನವರೆಗೆ 448 ವಲಸೆಗಾರರು ಮತ್ತು ವಿದೇಶಗಳಿಂದ ಮರಳಿದವರು  ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.

***



(Release ID: 1630172) Visitor Counter : 251