ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಜಾಗೃತಿ ಹೆಚ್ಚಿಸುವ ಸಲುವಾಗಿ ‘ಕೋವಿಡ್ -19 ಸಮಯದಲ್ಲಿ ಸುರಕ್ಷಿತ ಆನ್ ಲೈನ್ ಕಲಿಕೆ’ಮಾಹಿತಿ ಕಿರುಹೊತ್ತಗೆ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

Posted On: 05 JUN 2020 3:51PM by PIB Bengaluru

ಜಾಗೃತಿ ಹೆಚ್ಚಿಸುವ ಸಲುವಾಗಿಕೋವಿಡ್ -19 ಸಮಯದಲ್ಲಿ ಸುರಕ್ಷಿತ ಆನ್ ಲೈನ್ ಕಲಿಕೆಮಾಹಿತಿ ಕಿರುಹೊತ್ತಗೆ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸುರಕ್ಷಿತ ಆನ್ ಲೈನ್ ಕುರಿತಂತೆ ಜಾಗೃತಿ ಹೆಚ್ಚಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್.ಸಿ..ಆರ್.ಟಿ.) ಮತ್ತು ಯುನೆಸ್ಕೋ ನವದೆಹಲಿ ಕಚೇರಿ ಅಭಿವೃದ್ಧಿ ಪಡಿಸಿದ ಕಿರುಹೊತ್ತಗೆ

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಂದು ದೆಹಲಿಯಲ್ಲಿ ವಿದ್ಯಾರ್ಥಇಗಳು ಮತ್ತು ಶಿಕ್ಷಕರಲ್ಲಿ ಆನ್ ಲೈನ್ ನಲ್ಲಿ ಸುರಕ್ಷಿತವಾಗಿರುವ ಕುರಿತಂತೆ ಜಾಗೃತಿ ಹೆಚ್ಚಿಸಲುಕೋವಿಡ್ 19 ಸಮಯದಲ್ಲಿ ಸುರಕ್ಷಿತ ಆನ್ ಲೈನ್ ಕಲಿಕೆಶೀರ್ಷಿಕೆಯ ಡಿಜಿಟಲ್ ಮಾಹಿತಿ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದರು. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್.ಸಿ..ಆರ್.ಟಿ.) ಮತ್ತು ಯುನೆಸ್ಕೋ ನವದೆಹಲಿ ಕಚೇರಿ ಕೈಪಿಡಿ ಅಭಿವೃದ್ಧಿ ಪಡಿಸಿದೆ. ಮಕ್ಕಳು, ಯುವಜನರು ಮೂಲಭೂತವಾಗಿ ಮಾಡಬಹುದಾದ್ದು ಮತ್ತು ಮಾಡಬಾರದ್ದನ್ನು ಪಾಲಿಸುವ ಮೂಲಕ ಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಕಿರುಹೊತ್ತಗೆ ಪ್ರಮುಖ ಪಾತ್ರ ವಹಿಸುತ್ತದೆ, ಮತ್ತು ಪೋಷಕರು ಮತ್ತು ಶಿಕ್ಷಣತಜ್ಞರು ತಮ್ಮ ಮಕ್ಕಳಿಗೆ ಅಂತರ್ಜಾಲವನ್ನು ಹೇಗೆ ಸುರಕ್ಷಿತವಾಗಿ ಬಳಸಬೇಕೆಂದು ಕಲಿಸಲು ಸಹಾಯ ಮಾಡುತ್ತದೆ.

ಕಿರುಹೊತ್ತಗೆ ಬಿಡುಗಡೆಯ ಬಳಿಕ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಾಲ್ಕೋವಿಡ್ 19 ಪರಿಸ್ಥಿತಿಯಲ್ಲಿ ಆನ್ ಲೈನ್ ಮತ್ತು ದೂರ ಕಲಿಕೆಯಲ್ಲಿ ದೊಡ್ಡ ಹೆಚ್ಚಳವಾಗಿದ್ದು, ಆನ್ ಲೈನ್ ವೇದಿಕೆಯನ್ನು ಬಳಸಿಕೊಂಡು ಹಲವು ಮಕ್ಕಳು ಮತ್ತು ಶಿಕ್ಷಕರು ಕಲಿಕೆಯಲ್ಲಿ ತೊಡಗಿದ್ದಾರೆಎಂದರು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಎನ್.ಸಿ..ಆರ್.ಟಿ. ಮಕ್ಕಳು ಮತ್ತು ಶಿಕ್ಷಕರಿಗೆ ಸುರಕ್ಷಿತ ಮತ್ತು ಸುರಕ್ಷಿತ ಆನ್ಲೈನ್ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಅವರನ್ನು ಸಬಲೀಕರಿಸಲು ಬದ್ಧವಾಗಿವೆ. ಸೈಬರ್ ಶೋಷಣೆಯ ಎಲ್ಲ ಬಲಿಪಶುಗಳಿಗೆ ಕುರಿತು ವರದಿ ಮಾಡಲು ಮತ್ತು ಬೆಂಬಲವನ್ನು ಪಡೆಯಲು ನಾವು ಒತ್ತಾಯಿಸುತ್ತೇವೆ.ಎನ್.ಸಿ..ಆರ್.ಟಿ. ಮತ್ತು ಯುನೆಸ್ಕೋ ಜಂಟಿಯಾಗಿ ಕಿರುಹೊತ್ತಗೆ ಅಭಿವೃದ್ಧಿಪಡಿಸಿವೆ ಎಂಬುದು ನನಗೆ ಸಂತಸ ತಂದಿದೆ, ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಜಾಗೃತಿ ಹೆಚ್ಚಿಸುತ್ತದೆ ಮತ್ತು ಸೈಬರ್ ಶೋಷಣೆ ವಿರುದ್ಧ ಸಕಾಲಿಕ ಕ್ರಮದ ಖಾತ್ರಿ ಒದಗಿಸುತ್ತದೆ.”

Banner English.jpg


ಕೋವಿಡ್ -19 ಪ್ರಸರಣ ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಶಾಲೆಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು 2020 ಮಾರ್ಚ್ 20ರಿಂದ ಭಾರತದಾದ್ಯಂತ ಮುಚ್ಚಲಾಗಿದೆ. ಇದು ಶಿಕ್ಷಣಕ್ಕೆ ಮತ್ತು ಶೇ.90ರಷ್ಟು ಶಾಲಾ ಜನಸಂಖ್ಯೆಗೆ ಅಭೂತಪೂರ್ವವಾದ ಅಡ್ಡಿಯನ್ನು ಉಂಟು ಮಾಡಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ಕಲಿಕೆಯ ನಿರಂತರತೆಯನ್ನು ಖಾತ್ರಿಪಡಿಸಿವೆ. ಹದಿಹರೆಯದವರನ್ನು ವಿಭಿನ್ನ ಡಿಜಿಟಲ್ ವೇದಿಕೆಗಳಿಗೆ ಒಡ್ಡಿಕೊಳ್ಳುವುದರಿಂದ ಸೈಬರ್ ಶೋಷಣೆಗೆ ಅವರ ದುರ್ಬಲತೆ ಹೆಚ್ಚಾಗುತ್ತದೆ.

ಭಾರತದಲ್ಲಿ 5 ರಿಂದ 11ವರ್ಷಗಳ ವಯೋಮಿತಿಯ 71 ದಶಲಕ್ಷ ಮಕ್ಕಳು ತಮ್ಮ ಕುಟುಂಬದ ಸದಸ್ಯರ ಸಾಧನಗಳ ಮೂಲಕ ಅಂತರ್ಜಾಲ ಪ್ರವೇಶಿಸುತ್ತಾರೆ, ಇದು ದೇಶದ 500 ದಶಲಕ್ಷ ಸಕ್ರಿಯ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಸುಮಾರು 14 ಪ್ರತಿಶತದಷ್ಟು ಆಗಿದೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಮೂರನೇ ಎರಡರಷ್ಟು ಬಳಕೆದಾರರು 12-29ವರ್ಷ ವಯೋಮಾನದವರಾಗಿದ್ದಾರೆ (ಅಂತರ್ಜಾಲ ಮತ್ತು ಎಎಂಪಿ, ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಂಚಿಕೊಂಡ ದತ್ತಾಂಶ). ದತ್ತಾಂಶ ಮತ್ತು ಅಂಕಿಅಂಶಗಳು ಲಾಕ್ಡೌನೋತ್ತರದಲ್ಲಿ, ಮಕ್ಕಳು ಮತ್ತು ಯುವಜನರಿಗೆ ಆನ್ಲೈನ್ ತಾರತಮ್ಯವನ್ನು ಒಳಗೊಂಡಂತೆ ಸೈಬರ್ ಶೋಷಣೆಯ ಅಪಾಯವನ್ನು ಅಂತರ್ಜಾಲವು ಹೆಚ್ಚಿಸಿದೆ. ಕಳವಳಗಳನ್ನು ಪರಿಹರಿಸುವ ಉದ್ದೇಶದಿಂದ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್‌.ಟಿ) ಮತ್ತು ಯುನೆಸ್ಕೋ ನವದೆಹಲಿ ಕಚೇರಿ ಮಾಹಿತಿ ಕಿರುಹೊತ್ತಗೆಯನ್ನು ಅಭಿವೃದ್ಧಿಪಡಿಸಿದೆ. ಯುನೆಸ್ಕೋ ನವದೆಹಲಿಯ ನಿರ್ದೇಶಕ ಮತ್ತು ಪ್ರತಿನಿಧಿ ಶ್ರೀ ಎರಿಕ್ ಫ್ಲಾಟ್ ಯುನೆಸ್ಕೋ ಸುರಕ್ಷಿತ, ಸಮಗ್ರ ಮತ್ತು ಆರೋಗ್ಯಪೂರ್ಣ ಕಲಿಕಾ ಪರಿಸರವನ್ನು ಎಲ್ಲ ಮಕ್ಕಳಿಗೂ ಖಾತ್ರಿಪಡಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪ್ರವೇಶಿಸಬೇಕಾದರೆ ವೆಬ್ಸೈಟ್ಗಳು, ಡಿಜಿಟಲ್ ವೇದಿಕೆಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸೈಬರ್ ಶೋಷಣೆಯಿಂದ ಮುಕ್ತವಾಗಿರುವುದು ಕಡ್ಡಾಯವಾಗಿದೆ.ಕೋವಿಡ್ - 19 ಸಮಯದಲ್ಲಿ ಸುರಕ್ಷಿತ ಆನ್ಲೈನ್ ಕಲಿಕೆಎಂಬ ಶೀರ್ಷಿಕೆಯ ಮಾಹಿತಿ ಕಿರುಹೊತ್ತಗೆ ಸೈಬರ್ ಶೋಷಣೆಯ ನೇತ್ಯಾತ್ಮಕ ಪರಿಣಾಮಗಳನ್ನು ಮತ್ತು ಅದನ್ನು ತೊಡೆದುಹಾಕುವ ಮತ್ತು ತಡೆಯುವ ಮಾರ್ಗಗಳನ್ನು ಎತ್ತಿ ತೋರಿಸುತ್ತದೆ. ಯುನೆಸ್ಕೋ ಮತ್ತು ಎನ್‌.ಸಿಇಆರ್‌.ಟಿ ಕಿರುಹೊತ್ತಗೆನ್ನು ಅಭಿವೃದ್ಧಿಪಡಿಸಲು ಹರ್ಷಿಸುತ್ತದೆ ಮತ್ತು ಸುರಕ್ಷಿತ ಆನ್ಲೈನ್ ಪರಿಸರವನ್ನು ಸೃಷ್ಟಿಸುವಲ್ಲಿ ಇದು ಅಮೂಲ್ಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸುತ್ತವೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ನಿರ್ದೇಶಕ ಪ್ರೊ. ಹೃಷಿಕೇಶ್ ಸೇನಾಪತಿನಾವು ಆನ್ ಲೈನ್ ಸುರಕ್ಷತೆ ಮತ್ತು ಸೈಬರ್ ಶೋಷಣೆಯ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ನಮ್ಮ ಹೂಡಿಕೆ ವ್ಯರ್ಥವಾಗುತ್ತದೆ. ಅಸುರಕ್ಷಿತ ಕಲಿಕಾ ವಾತಾವರಣ, ನಮ್ಮ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ಕಾರಣಾಗುತ್ತದೆ,ಇದು ಶೈಕ್ಷಣಿಕ ಸಾಧನೆ ಮತ್ತು ಭವಿಷ್ಯದ ಶಿಕ್ಷಣ, ಔದ್ಯೋಗಿಕ ಕ್ಷಮತೆಯ ಮೇಲೂ ಪ್ರತೀಕೂಲ ಪರಿಣಾಮ ಬೀರುತ್ತದೆ. ಆತಂಕ, ಭಯ ಮತ್ತು ಅಭದ್ರತೆಯ ವಾತಾವರಣವು ಕಲಿಕೆಗೆ ಹೊಂದಿಕೆಯಾಗುವುದಿಲ್ಲ, ಮತ್ತು ಯುವಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಮತ್ತು ಆನ್ಲೈನ್ ಶೋಷಣೆಯಿಂದ ರಕ್ಷಿಸಲು ಎನ್‌.ಸಿಇಆರ್‌.ಟಿ ಬದ್ಧವಾಗಿದೆ.ಎಂದು ತಿಳಿಸಿದ್ದಾರೆ.

Click here to see PDF on Safe to learn in English

Click here to see PDF on Safe to learn in Hindi

***



(Release ID: 1630166) Visitor Counter : 588