ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಕೈಗಾರಿಕಾ ಒಕ್ಕೂಟದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 02 JUN 2020 6:35PM by PIB Bengaluru

ನಮಸ್ತೇಮೊದಲಿಗೆ ನಾನು ನಿಮ್ಮೆಲ್ಲರಿಗೂ 125 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ಶುಭಾಶಯಗಳನ್ನು ಹೇಳುತ್ತೇನೆಶುಭಾಶಯಗಳು!. 125 ವರ್ಷಗಳ ಪ್ರಯಾಣ ಒಂದು ಧೀರ್ಘ ಪ್ರಯಾಣಅಲ್ಲಿ ಹಲವಾರು ಮೈಲಿಗಲ್ಲುಗಳಿರಬಹುದುನೀವೂ ಹಲವು ಏರು ಪೇರುಗಳನ್ನು ಅನುಭವಿಸಿರಬಹುದುಆದರೆ ಸಂಸ್ಥೆಯೊಂದನ್ನು 125 ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗುವುದು ಒಂದು ದೊಡ್ಡ ಸಂಗತಿಅದು ಮಾದರಿ ಬದಲಾವಣೆಗಳನ್ನು ಅಳವಡಿಸಿಕೊಂಡಿದೆವ್ಯವಸ್ಥೆಗಳು ಬದಲಾಗಿವೆಮೊದಲಿಗೆನಾನು  125 ವರ್ಷಗಳಲ್ಲಿ ಸಿ..ಯನ್ನು ಬಲಪಡಿಸಲು ಕೊಡುಗೆ ನೀಡಿದ ಹಿಂದಿನ ಮಹನೀಯರು ಸೇರಿದಂತೆ ಎಲ್ಲಾ ದಿಗ್ಗಜರಿಗೆ ಅಭಿನಂದನೆಯನ್ನು ಹೇಳಬಯಸುತ್ತೇನೆನಮ್ಮೊಂದಿಗೆ ಇಂದು ಇಲ್ಲದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆಮತು ಭವಿಷ್ಯದಲ್ಲಿ ಇದರ ಜವಾಬ್ದಾರಿ ಹೊರಲಿರುವವರಿಗೆ ನಾನು ಶುಭ ಹಾರೈಸುತ್ತೇನೆ.

ಕೊರೊನಾ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂತಹ ಆನ್ ಲೈನ್ ಕಾರ್ಯಕ್ರಮಗಳು ಹೊಸ ಸಹಜತೆಯಾಗುತ್ತಿವೆಪ್ರತೀ ಕಷ್ಟದ ಸಂಕಷ್ಟದ ಸಂದರ್ಭದಲ್ಲಿಯೂ ಅದನ್ನು ದಾಟಲು ಮನುಷ್ಯ ಹೊಸ ದಾರಿ ಹುಡುಕಿಕೊಳ್ಳುತ್ತಾನೆಇದು ಆತನ ಅತ್ಯಂತ ದೊಡ್ದ ಬಲಇಂದೂ ನಾವು ಒಂದೆಡೆಯಲ್ಲಿ  ವೈರಸ್ ವಿರುದ್ದ ಹೋರಾಟಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆಜೊತೆಗೆ ನಾವು ಆರ್ಥಿಕತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆಒಂದೆಡೆ ನಾವು ನಮ್ಮ ದೇಶವಾಸಿಗಳ ಪ್ರಾಣ ರಕ್ಷಣೆ ಮಾಡಬೇಕಾಗಿದೆಮತ್ತೊಂದೆಡೆ ನಾವು ದೇಶದ ಆರ್ಥಿಕತೆಗೆ ವೇಗ ದೊರಕಿಸಿಕೊಟ್ಟು ಅದನ್ನು ಸ್ಥಿರಗೊಳಿಸಬೇಕಾಗಿದೆಇಂತಹ ಸ್ಥಿತಿಯಲ್ಲಿ ನೀವು ಬೆಳವಣಿಗೆಯನ್ನು ಮತ್ತೆ ಪಡೆಯುವ ಮಾತುಗಳನ್ನು ಆಡುತ್ತಿದ್ದೀರಿಮತ್ತು ಇದು ಖಂಡಿತವಾಗಿಯೂ ಮೆಚ್ಚತಕ್ಕದ್ದು !. ನಾನು ಮತ್ತೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ ಮತ್ತು ಹೇಳುತ್ತೇನೆಹೌದುನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಗಳಿಸುತ್ತೇವೆನಿಮ್ಮಲ್ಲಿ ಕೆಲವರು ಆಶ್ಚರ್ಯಪಡುತ್ತಿರಬಹುದುಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ನಾನು ಇದನ್ನು ಇಷ್ಟೊಂದು ವಿಶ್ವಾಸಪೂರ್ವಕವಾಗಿ  ಹೇಗೆ ಹೇಳುತ್ತಿದ್ದೇನೆ  ಎಂಬುದಾಗಿ.

ನನ್ನ ದೃಢ ವಿಶ್ವಾಸಕ್ಕೆ ಹಲವು ಕಾರಣಗಳಿವೆನಾನು ಭಾರತದ ಸಾಮರ್ಥ್ಯಗಳಲ್ಲಿ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ನಂಬಿಕೆ ಇಟ್ಟಿದ್ದೇನೆನಾನು ಭಾರತದ ಪ್ರತಿಭೆ ಮತ್ತು ತಂತ್ರಜ್ಞಾನದಲ್ಲಿ ವಿಶ್ವಾಸ ಇರಿಸಿದ್ದೇನೆನಾನು ಅನ್ವೇಷಣೆಗಳಲ್ಲಿ ಮತ್ತು ಭಾರತದ ಬುದ್ದಿವಂತಿಕೆಯಲ್ಲಿ ಭರವಸೆ ಇಟ್ಟಿದ್ದೇನೆನಾನು ರೈತರನ್ನು ನಂಬುತ್ತೇನೆಎಂ.ಎಸ್.ಎಂ.ಗಳು ಮತ್ತು ಭಾರತದ ಉದ್ಯಮಶೀಲತ್ವದಲ್ಲಿ ನನಗೆ ವಿಶ್ವಾಸವಿದೆಮತ್ತು ನಾನು ಕೈಗಾರಿಕೆಗಳ ನಾಯಕರಾದಂತಹ ನಿಮ್ಮಲ್ಲಿ ನಂಬಿಕೆ ಇಟ್ಟಿದ್ದೇನೆಆದುದರಿಂದಾಗಿಯೇ ನಾನು ಹೇಳುತ್ತಿದ್ದೇನೆ ಹೌದು !. ನಾವು ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆಭಾರತ ತನ್ನ ಬೆಳವಣಿಗೆಯನ್ನು ಮರಳಿ ಗಳಿಸುತ್ತದೆ.

ಸ್ನೇಹಿತರೇ,

ಕೊರೊನಾ ನಮ್ಮ ಅಭಿವೃದ್ದಿಯ ವೇಗವನ್ನು ಕಡಿಮೆ ಮಾಡಿರಬಹುದುಆದರೆ ದೇಶದ ಅತ್ಯಂತ ದೊಡ್ದ ಸತ್ಯವೆಂದರೆ ಭಾರತವು ಲಾಕ್ ಡೌನ್ ದಾಟಿ ಅನ್ ಲಾಕ್ ಹಂತಕ್ಕೆ ಪ್ರವೇಶಿಸಿದೆ ಎಂಬುದುಅನ್ ಲಾಕ್ ಹಂತ ರಲ್ಲಿ ಆರ್ಥಿಕತೆಯ ಬಹಳ ದೊಡ್ದ ಭಾಗವನ್ನು ತೆರೆಯಲಾಗಿದೆಜೂನ್  ಬಳಿಕ ಇನ್ನೂ ಬಹಳಷ್ಟು ಕ್ಷೇತ್ರಗಳು ತೆರೆಯಲ್ಪಡಲಿವೆಅಂದರೆ ಬೆಳವಣಿಗೆ ಮರಳಿ ಆರಂಭವಾಗಿದೆ.

ಕೊರೊನಾ ವೈರಸ್ ತನ್ನ  ಬಾಹುಗಳನ್ನು ವಿಶ್ವದ ಸುತ್ತ ಹರಡುತ್ತಿರುವಾಗ ಇಂದು ನಾವು ಇದನ್ನೆಲ್ಲ  ಮಾಡಲು ಸಾಧ್ಯವಾಗುತ್ತಿದೆಭಾರತವು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಂಡಿದೆನಾವು ನಮ್ಮ ಪರಿಸ್ಥಿತಿಯನ್ನು ವಿಶ್ವದ ಇತರ ದೇಶಗಳ ಜೊತೆ ಹೋಲಿಸಿಕೊಂಡರೆ ಭಾರತದಲ್ಲಿ ಲಾಕ್ ಡೌನ್ ಪರಿಣಾಮ ಹೇಗೆ ವ್ಯಾಪಕವಾಯಿತು ಎಂಬುದನ್ನು ನಾವು ಕಾಣಬಹುದಾಗಿದೆ.  ಕೊರೊನಾ ವಿರುದ್ದ ಹೋರಾಡಲು ಭಾರತ ಭೌತಿಕ ಸಂಪನ್ಮೂಲಗಳನ್ನು  ತಯಾರು ಮಾಡಿದ್ದು ಮಾತ್ರವಲ್ಲ ಅದು ತನ್ನ ಮಾನವ ಸಂಪನ್ಮೂಲಗಳನ್ನೂ ಉಳಿಸಿಕೊಂಡಿತುಇಂತಹ ಪರಿಸ್ಥಿತಿಯಲ್ಲಿ ಮುಂದೇನು ಎಂಬ ಪ್ರಶ್ನೆ ಬಂದಿದೆಕೈಗಾರಿಕೆಗಳ ನಾಯಕರಾಗಿನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿರಬಹುದುಈಗ ಸರಕಾರ ಏನು ಮಾಡಬಹುದು ?  ಎಂಬುದಾಗಿಆತ್ಮನಿರ್ಭರ ಭಾರತದ ಬಗ್ಗೆಯೂ ನಿಮಗೆ ಕೆಲವು ಪ್ರಶ್ನೆಗಳಿರಬಹುದುಇದು ಬಹಳ ಸಹಜ ಮತ್ತು ಸರಿಯಾದುದು ಕೂಡಾ.

ಸ್ನೇಹಿತರೇ,

ಕೊರೊನಾ ವಿರುದ್ದ ಆರ್ಥಿಕತೆಗೆ ಚೇತರಿಕೆ ನೀಡುವುದು ನಮ್ಮ ಅತಿ ಮುಖ್ಯ ಆದ್ಯತೆಗಳಲ್ಲಿ ಒಂದುಇದಕ್ಕಾಗಿ ಸರಕಾರ ತಕ್ಷಣ ಕೈಗೊಳ್ಳಬೇಕಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆಮತ್ತು ಇದರ ಜೊತೆಗೆ ಅಂತಹ ನಿರ್ಧಾರಗಳನ್ನು ದೇಶಕ್ಕೆ ಧೀರ್ಘಾವಧಿಯಲ್ಲಿ ಸಹಾಯವಾಗುವಂತೆ ಕೈಗೊಳ್ಳಲಾಗುತ್ತದೆ.

ಸ್ನೇಹಿತರೇ,

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾವು ಬಡವರಿಗೆ ತಕ್ಷಣಕ್ಕೆ ಪ್ರಯೋಜನಗಳನ್ನು ಒದಗಿಸುವಲ್ಲಿ ಬಹಳ ಸಹಾಯ ಮಾಡಿತು ಯೋಜನೆಯಡಿ  74 ಕೋಟಿ ಫಲಾನುಭವಿಗಳಿಗೆ ಪಡಿತರವನ್ನು ಒದಗಿಸಲಾಯಿತುವಲಸೆ ಕಾರ್ಮಿಕರಿಗೆ ಉಚಿತ ರೇಶನ್ ಒದಗಿಸಲಾಯಿತುಇದಲ್ಲದೆ ಬಡ ಕುಟುಂಬಗಳಿಗೆ ಇದುವರೆಗೆ ಐವತ್ತಮೂರು ಸಾವಿರ ಕೋ.ರೂ.ಗಳ ಹಣಕಾಸು ಸಹಾಯ ನೀಡಲಾಯಿತುಮಹಿಳೆಯರಿರಲಿದಿವ್ಯಾಂಗರಿರಲಿಹಿರಿಯರಿರಲಿಅಥವಾ ಕಾರ್ಮಿಕರಿರಲಿ ಇದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆದರುಲಾಕ್ ಡೌನ್ ನಲ್ಲಿ ಸರಕಾರ ಕೋಟಿಗೂ ಅಧಿಕ ಅನಿಲ ಸಿಲಿಂಡರುಗಳನ್ನು ಬಡವರಿಗಾಗಿ ಒದಗಿಸಿತುಅದೂ ಉಚಿತವಾಗಿಇದೆಲ್ಲಕ್ಕಿಂತ ಹೆಚ್ಚಾಗಿ ಸರಕಾರವು ಖಾಸಗಿ ವಲಯದ 50 ಲಕ್ಷ ಸಿಬ್ಬಂದಿಗಳ ಖಾತೆಗೆ 24 ಶೇಕಡಾ .ಪಿ.ಎಫ್ದೇಣಿಗೆಯನ್ನು ಜಮಾ ಮಾಡಿತುಸುಮಾರು 800 ಕೋ.ರೂಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.

ಸ್ನೇಹಿತರೇ,

ಸ್ವಾವಲಂಬೀ ಭಾರತ ನಿರ್ಮಾಣ ಮಾಡಲು ಐದು ವಿಷಯಗಳು ಬಹಳ ಮುಖ್ಯಭಾರತವನ್ನು ಮತ್ತೆ ತ್ವರಿತಗತಿಯ ಅಭಿವೃದ್ದಿ ಪಥಕ್ಕೆ ತರಲುಇಚ್ಚೆಒಳಗೊಳ್ಳುವಿಕೆಹೂಡಿಕೆ ಮೂಲಸೌಕರ್ಯ ಮತ್ತು ಅನ್ವೇಷಣೆಗಳು ಬೇಕುಇತ್ತೀಚೆಗೆ ಕೈಗೊಂಡ ಧೈರ್ಯದ ನಿರ್ಧಾರಗಳಲ್ಲಿ ಇದರ ಹೊಳಹುಗಳನ್ನು ನೀವು ಕಾಣಬಹುದು ನಿರ್ಧಾರಗಳೊಂದಿಗೆ ನಾವು ಪ್ರತೀ ವಲಯವನ್ನೂ ಭವಿಷ್ಯಕ್ಕೆ ಸಿದ್ದ ಮಾಡಿಟ್ಟಿದ್ದೇವೆಹೀಗಾಗಿ ಭಾರತವಿಂದು ಹೊಸ ಬೆಳವಣಿಗೆಯ ಭವಿಷ್ಯತ್ತಿನತ್ತ ದೊಡ್ಡ ಹೆಜ್ಜೆ ಇಡಲು ಸಿದ್ದವಾಗಿದೆಸ್ನೇಹಿತರೇಸುಧಾರಣೆಗಳು ನಮಗೆ ಯಾದೃಚ್ಚಿಕವಾದವಲ್ಲಅಥವಾ ಅಲ್ಲಲ್ಲಿ ಮಾತ್ರವೇ ಆಗಿರುವಂತಹವಲ್ಲನಮಗೆ ಸುಧಾರಣೆಗಳೆಂದರೆ ಅವು ವ್ಯವಸ್ಥಿತಯೋಜನಾಬದ್ಧಸಮಗ್ರ ಅಂತರ್ ಸಂಪರ್ಕಿತ ಮತ್ತು ಭವಿಷ್ಯವಾದೀ ಪ್ರಕ್ರಿಯೆಗಳು.

ನಮಗೆ ಸುಧಾರಣೆಗಳೆಂದರೆ ನಿರ್ಧಾರ ಕೈಗೊಳ್ಳುವ ಛಾತಿ ಮತ್ತು ಅವುಗಳನ್ನು ತಾರ್ಕಿಕ ಮುಕ್ತಾಯದತ್ತ ಕೊಂಡೊಯ್ಯುವುದುಅದು  .ಬಿ.ಸಿಇರಲಿಬ್ಯಾಂಕ್ ವಿಲಯನ ಇರಲಿಜಿ.ಎಸ್.ಟಿಮುಖ ರಹಿತ ಆದಾಯ ತೆರಿಗೆ ಮೌಲ್ಯಮಾಪನ ಇರಲಿನಾವು ಸದಾ ವ್ಯವಸ್ಥೆಗಳಲ್ಲಿ ಸರಕಾರದ ಮಧ್ಯಪ್ರವೇಶವನ್ನು ಕಡಿಮೆ ಮಾಡುವುದಕ್ಕೆ ಒತ್ತು ಕೊಟ್ಟಿದೇವೆಮತ್ತು ಖಾಸಗಿ ಉದ್ಯಮಗಳಿಗಾಗಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತಿದ್ದೇವೆ ಕಾರಣಕ್ಕಾಗಿ ಸರಕಾರವು ಇಂತಹ ನೀತಿ ಸುಧಾರಣಾ ನಿರ್ದಾರಗಳನ್ನು ಕೈಗೊಳ್ಳುತ್ತಿದೆನಾನು ಕೃಷಿ ವಲಯದ ಬಗ್ಗೆ ಮಾತನಾಡುವುದಾದರೆ ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ಮಾಡಲಾದ ನಿಯಮ ಮತ್ತು ನಿಯಂತ್ರಣಾವಳಿಗಳು ರೈತರನ್ನು ಮಧ್ಯವರ್ತಿಗಳ ಕರುಣೆಗೆ ಒಳಗಾಗುವಂತಹ ಸ್ಥಿತಿಯನ್ನು ತಂದಿದ್ದವುರೈತರು ತಮ್ಮ ಉತ್ಪನ್ನ ಮಾರಾಟ ಮಾಡುವುದಕ್ಕೆ ಸಂಬಂಧಿಸಿ ನಿಯಮಗಳು ಕಠಿಣವಾಗಿದ್ದವುನಮ್ಮ ಸರಕಾರ ದಶಕಗಳಿಂದ ರೈತರಿಗೆ ಆಗುತ್ತಿದ್ದ ಅಂತಹ ಅನ್ಯಾಯವನ್ನು ತೊಡೆದು ಹಾಕುವ ಧೈರ್ಯ ತೋರಿತು.

.ಪಿ.ಎಂ.ಸಿಕಾಯ್ದೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತಂದ ಬಳಿಕ ಈಗ ರೈತರು ತಮ್ಮ ಹಕ್ಕುಗಳನ್ನು ಪಡೆಯಲಾರಂಭಿಸಿದ್ದಾರೆ. . ಅವರು ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ ಯಾವಾಗ  ಬೇಕಾದರೂ ಮಾರಾಟ ಮಾಡಬಹುದುಈಗ ರೈತರು ತಮ್ಮ ಕೃಷ್ಯುತ್ಪನ್ನಗಳನ್ನು ದೇಶದ ಯಾವ ರಾಜ್ಯಕ್ಕಾದರೂ ಕೊಂಡೊಯ್ದು ಮಾರಾಟ ಮಾಡಬಹುದುದಾಸ್ತಾನುಗಾರಗಳಲ್ಲಿ ಇಟ್ಟ ಆಹಾರ ಧಾನ್ಯಗಳುಕೃಷಿ ಉತ್ಪನ್ನಗಳನ್ನು ಇಲೆಕ್ಟ್ರಾನಿಕ್ ವ್ಯಾಪಾರದ ಮೂಲಕ ಮಾರಾಟ ಮಾಡಬಹುದುಸುಮ್ಮನೆ ಕಲ್ಪಿಸಿಕೊಳ್ಳಿ,! . ಎಷ್ಟೊಂದು ಹೊಸ ಹಾದಿಗಳು ಕೃಷಿ-ವ್ಯಾಪಾರದಲ್ಲಿ ತೆರೆದುಕೊಳ್ಳುತ್ತಿವೆ!. ಸ್ನೇಹಿತರೇಅದೇ ರೀತಿನಮ್ಮ ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರ್ಮಿಕ ಸುಧಾರಣೆಗಳನ್ನೂ ಮಾಡಲಾಗಿದೆ.

ವ್ಯೂಹಾತ್ಮಕವಲ್ಲದ ವಲಯಗಳಲ್ಲಿ ಇದುವರೆಗೆ ಖಾಸಗಿ ವಲಯಕ್ಕೆ ಅವಕಾಶಗಳಿಲ್ಲದಿರುವ ಕ್ಷೇತ್ರಗಳನ್ನು ಈಗ ಖಾಸಗಿಯವರಿಗೆ ತೆರೆಯಲಾಗಿದೆನಿಮ್ಮ ಗಮನಕ್ಕೂ ಬಂದಿರಬಹುದುನಾವು ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಂಡಿದ್ದೇವೆಅದೂ ಸಬ್ ಕಾ ಸಾಥ್ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್’ ಹಾದಿಯಲ್ಲಿ ನಡೆಯುತ್ತಾ ಇವುಗಳನ್ನು ಮಾಡಿದ್ದೇವೆಸ್ನೇಹಿತರೇ ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕಲ್ಲಿದ್ದಲು ಸಂಪತ್ತು ಹೊಂದಿರುವ  ರಾಷ್ಟ್ರಗಳಲ್ಲಿ  ಮೂರನೇಯದ್ದು ! ಮತ್ತು ಭಾರತವು ನಿಮ್ಮಂತಹ ಧೈರ್ಯಶಾಲೀ ಮತ್ತು ಪರಿಶ್ರಮೀ ಉದ್ಯಮ ನಾಯಕರನ್ನು ಹೊಂದಿದೆಹಾಗಿರುವಾಗ ಯಾಕೆ ಕಲ್ಲಿದ್ದಲು ಹೊರಗಿನಿಂದ ಬರಬೇಕು?. ಕಲ್ಲಿದ್ದಲನ್ನು ಯಾಕೆ ಆಮದು ಮಾಡಬೇಕು? . ಕೆಲವೊಮ್ಮೆ  ಸರಕಾರ ದಾರಿಯಲ್ಲಿ ನಿಲ್ಲುತ್ತದೆ ಮತ್ತು ಕೆಲವೊಮ್ಮೆ ನೀತಿಗಳಲ್ಲಿ ನಿಲ್ಲುತ್ತದೆಈಗ ಕಲ್ಲಿದ್ದಲನ್ನು  ಅಡೆ ತಡೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ.

ಈಗ ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯಿಕ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆಆಂಶಿಕವಾಗಿ ಅನ್ವೇಷಿಸಿದ ಬ್ಲಾಕುಗಳ ಮಂಜೂರಾತಿಗೂ ಅನುಮತಿ ನೀಡಲಾಗಿದೆಅದೇ ರೀತಿ ಖನಿಜ ಗಣಿಗಾರಿಕೆಯಲ್ಲೂ ಈಗ ಕಂಪೆನಿಗಳು ಗಣಿಗಾರಿಕೆ ಕೆಲಸವನ್ನು ಅನ್ವೇಷಣೆಯ ಜೊತೆ ಜೊತೆಯಲ್ಲಿಯೇ ನಡೆಸಬಹುದು ವಲಯದಲ್ಲಿಯ ಅನುಭವಿಗಳು  ನಿರ್ಧಾರಗಳ ದೂರಗಾಮಿ ಪರಿಣಾಮಗಳ ಬಗ್ಗೆ ಸ್ಪಷ್ಟವಾದ ಅರಿವು ಹೊಂದಿದ್ದಾರೆ.

ಸ್ನೇಹಿತರೇ,

ಸರಕಾರ ಸಾಗುತ್ತಿರುವ ದಿಕ್ಕು ಅದು ಗಣಿಗಾರಿಕೆ ವಲಯವಿರಲಿಇಂಧನ ಕ್ಷೇತ್ರಸಂಶೋಧನಾ ಮತ್ತು ತಂತ್ರಜ್ಞಾನ ಕ್ಷೇತ್ರವೇ ಇರಲಿ,  ಕೈಗಾರಿಕೆಗಳು ಮತ್ತು ಯುವಕರಿಗೆ  ಪ್ರತೀ ಕ್ಷೇತ್ರದಲ್ಲಿಯೂ ಅವಕಾಶಗಳು ಲಭಿಸುತ್ತವೆಇದರಿಂದಲೂ ಮುಂದೆ ಹೋಗಿಈಗ ದೇಶದ ವ್ಯೂಹಾತ್ಮಕ ವಲಯಗಳಲ್ಲಿ ಖಾಸಗಿಯವರ ಪಾಲುದಾರಿಕೆ ವಾಸ್ತವವಾಗುತ್ತಿದೆನೀವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಾಗಿದ್ದರೆ ಅಥವಾ ಅಣು ಶಕ್ತಿ ವಲಯದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡುವವರಾಗಿದ್ದರೆ ಅಲ್ಲಿ ನಿಮಗೆ ಸಂಪೂರ್ಣವಾಗಿ ತೆರೆದಿರುವ ಹಲವಾರು ಅವಕಾಶಗಳಿವೆ.

ಸ್ನೇಹಿತರೇ,

ನಿಮಗೆಲ್ಲರಿಗೂ ಗೊತ್ತಿದೆಎಂ.ಎಸ್.ಎಂ.ವಲಯದ ಲಕ್ಷಾಂತರ ಘಟಕಗಳು ನಮ್ಮ ದೇಶದ ಆರ್ಥಿಕತೆಯ ಇಂಜಿನುಗಳಿದ್ದಂತೆಅವು ದೇಶದ  ಜಿ.ಡಿ.ಪಿ.ಗೆ  ದೊಡ್ದ ಕಾಣಿಕೆ ಕೊಡುತ್ತವೆ ಕೊಡುಗೆ 30 ಶೇಕಡಾದಷ್ಟಿದೆಬಹಳ ಧೀರ್ಘ ಕಾಲದಿಂದ ಉದ್ಯಮವು ಎಂ.ಎಸ್.ಎಂ. ವ್ಯಾಖ್ಯೆಯನ್ನು ಸ್ಪಷ್ಟ ಮಾಡುವಂತೆ ಆಗ್ರಹಿಸುತ್ತಲೇ ಬಂದಿತ್ತುಅದನ್ನೀಗ ಈಡೇರಿಸಲಾಗಿದೆ.ಇದು ಎಂ.ಎಸ್.ಎಂ.ಗಳು ಯಾವುದೇ ಚಿಂತೆ ಇಲ್ಲದೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆಮತು ಅವು ಎಂ.ಎಸ್.ಎಂ.ಸ್ಥಾನಮಾನಗಳನ್ನು ಕಾಪಾಡಿಕೊಳ್ಳಲು  ಇತರ ಹಾದಿಗಳಲ್ಲಿ ನಡೆಯಬೇಕಿಲ್ಲ.  200 ಕೋ.ರೂ.ಗಳವರೆಗಿನ ಸರಕಾರಿ ಖರೀದಿಗೆ ಜಾಗತಿಕ ಟೆಂಡರುಗಳನ್ನು ತೆಗೆದುಹಾಕಲಾಗಿದೆಇದರಿಂದ ದೇಶದ ಎಂ.ಎಸ್ಎಂ.ವಲಯದಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಜನರಿಗೆ ಪ್ರಯೋಜನವಾಗಲಿದೆಇದು ನಮ್ಮ ಸಣ್ಣ ಕೈಗಾರಿಕೆಗಳಿಗೆ ಇನ್ನಷ್ಟು ಅವಕಾಶಗಳನ್ನು ತೆರೆಯಲಿದೆ ರೀತಿಯಲ್ಲಿ ಆತ್ಮನಿರ್ಭರ  ಭಾರತ್ ಪ್ಯಾಕೇಜ್ ಎಂ.ಎಸ್.ಎಂ.ವಲಯದ ಇಂಜಿನಿಗೆ ಇಂಧನವಾಗಲಿದೆ.

ಸ್ನೇಹಿತರೇ,

 ನಿರ್ಧಾರಗಳ ಪ್ರಸ್ತುತತೆಯನ್ನು ತಿಳಿದುಕೊಳ್ಳಬೇಕಿದ್ದರೆ ಇಂದಿನ ಜಾಗತಿಕ ಪರಿಸ್ಥಿತಿಗಳನ್ನು ನೋಡುವುದು ಮತ್ತು ತಿಳಿದುಕೊಳ್ಳುವುದು ಬಹಳ ಮುಖ್ಯಇಂದು ವಿಶ್ವದ ಎಲ್ಲಾ ದೇಶಗಳೂ ಪರಸ್ಪರ ಬೆಂಬಲವನ್ನು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನಿರೀಕ್ಷೆ ಮಾಡುತ್ತಿವೆವಿಶ್ವದಲ್ಲಿ ಒಬ್ಬರಿಗೊಬ್ಬರು ಅವಶ್ಯಕತೆ ಬಹಳ ಹೆಚ್ಚಿದೆಆದರೆ ಹಳೆಯ ಚಿಂತನೆಹಳೆಯ ಸಂಪ್ರದಾಯಗಳುಮತ್ತು ಹಳೆಯ ನೀತಿಗಳು ಎಷ್ಟು ಸಮರ್ಪಕ ಎಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಸಂದರ್ಭದಲ್ಲಿ ಹೊಸ ಆಲೋಚನೆಗಳು ಸಹಜವಾಗಿಯೇ ನಡೆಯುತ್ತಿವೆಇಂತಹ ಸಮಯದಲ್ಲಿ ಭಾರತದಿಂದ ವಿಶ್ವದ ಅಪೇಕ್ಷೆ ಗಳು ಇನ್ನಷ್ಟು ಹೆಚ್ಚಾಗಿವೆಇಂದು ಭಾರತದ ಮೇಲೆ ವಿಶ್ವದ ನಂಬಿಕೆಯೂ ಹೆಚ್ಚಿದೆ ಮತ್ತು ಹೊಸ ಭರವಸೆಗಳೂ ಮೂಡಿವೆ ಕೊರೋನಾ ಬಿಕ್ಕಟ್ಟಿನ ನಡುವೆ ಒಂದು ದೇಶ ಇನ್ನೊಂದು ದೇಶಕ್ಕೆ ಸಹಾಯ ಮಾಡಲು ಕಷ್ಟದ ಸ್ಥಿತಿ ಇರುವಾಗ ಭಾರತವು 150 ಕ್ಕೂ ಅಧಿಕ ದೇಶಗಳಿಗೆ ವೈದ್ಯಕೀಯ ಪೂರೈಕೆಗಳನ್ನು ಕಳುಹಿಸುವ ಮೂಲಕ ನೆರವಿನ ಹಸ್ತ ಚಾಚಿದೆ.

ಸ್ನೇಹಿತರೇ,

ವಿಶ್ವವಿಂದು ನಂಬಿಕೆ ಇಡಬಹುದಾದ ವಿಶ್ವಾಸಾರ್ಹ ಭಾಗೀದಾರರನ್ನು ಭಾರತದಲ್ಲಿ ಹುಡುಕುತ್ತಿದೆಅಲ್ಲಿ ಭಾರೀ ಅವಕಾಶಗಳು ಮತ್ತು ಶಕ್ತಿ ಹಾಗು ಸಾಮರ್ಥ್ಯಗಳಿವೆ.

ಇಂದು ನೀವೆಲ್ಲರೂ ಭಾರತದ ಕೈಗಾರಿಕಾ ವಲಯವು,  ವಿಶ್ವವು ಭಾರತದ ವಿಷಯದಲ್ಲಿ ಬೆಳೆಸಿಕೊಳ್ಳುತ್ತಿರುವ ನಂಬಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.ಇದು ನಿಮ್ಮೆಲ್ಲರ ಜವಾಬ್ದಾರಿಇದು ಸಿ...ಯಂತಹ ಸಂಘಟನೆಗಳ ಜವಾಬ್ದಾರಿಯೂ ಹೌದುಸಿ...ಯು “ ಭಾರತದ ಉತ್ಪಾದನೆ” ಗೆ ಸಂಬಂಧಿಸಿದ ನಂಬಿಕೆ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಖಾತ್ರಿಪಡಿಸಬೇಕುನೀವು ಎರಡು ಹೆಜ್ಜೆ ಮುಂದಿಟ್ಟರೆ ಸರಕಾರ ನಾಲ್ಕು ಹೆಜ್ಜೆ ಮುಂದಿಟ್ಟು ನಿಮ್ಮನ್ನು ಬೆಂಬಲಿಸುತ್ತದೆಪ್ರಧಾನ ಮಂತ್ರಿಯಾಗಿ


(Release ID: 1629278) Visitor Counter : 204