ಹಣಕಾಸು ಸಚಿವಾಲಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ - ಈವರೆಗಿನ ಪ್ರಗತಿ

Posted On: 03 JUN 2020 9:09AM by PIB Bengaluru

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ - ಈವರೆಗಿನ ಪ್ರಗತಿ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಸುಮಾರು 42 ಕೋಟಿ ಬಡ ಜನತೆಗೆ 53,248 ಕೋಟಿ ರೂ. ಆರ್ಥಿಕ ನೆರವು

 

ಕೇಂದ್ರ ಸರ್ಕಾರ ಘೋಷಿಸಿದ್ದ 1.70 ಲಕ್ಷ ಕೋಟಿ ರೂ.ಗಳ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಭಾಗವಾಗಿ ಬಡವರು, ಹಿರಿಯ ನಾಗರಿಕರು, ರೈತರು ಮತ್ತು ಮಹಿಳೆಯರಿಗೆ ಉಚಿತ ಆಹಾರ ಧಾನ್ಯ ಹಾಗು ನಗದು ಪಾವತಿ ಮಾಡಲಾಗಿದೆ. ಕ್ಷಿಪ್ರಗತಿಯಲ್ಲಿ ಪ್ಯಾಕೇಜ್ ಅನುಷ್ಠಾನಗೊಳಿಸಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ನಿರಂತರ ನಿಗಾ ಇರಿಸಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್(ಪಿಎಂಜಿಕೆಪಿ) ಅಡಿಯಲ್ಲಿ ಈವರೆಗೆ ಸುಮಾರು 42 ಕೋಟಿ ಬಡಜನರು 53,248 ರೂ. ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಪಿಎಂಜಿಕೆಪಿ ಅಡಿಯ ನಾನಾ ವಿಭಾಗಗಳಲ್ಲಿ ಈವರೆಗೆ ಸಾಧಿಸಿರುವ ಪ್ರಗತಿಯ ವಿವರ ಕೆಳಗಿನಂತಿದೆ.

· ಪಿಎಂ-ಕಿಸಾನ್ ಯೋಜನೆ ಅಡಿ ಮೊದಲ ಕಂತಿನ ಪಾವತಿಗೆ 8.19 ಕೋಟಿ ಫಲಾನುಭವಿಗಳಿಗೆ 16394 ಕೋಟಿ ರೂ. ಹಣ ಪಾವತಿಸಲಾಗಿದೆ.

· ಮಹಿಳಾ ಜನ್ ಧನ್ ಖಾತೆ ಹೊಂದಿರುವ 20.5 ಕೋಟಿ ಫಲಾನುಭವಿಗಳಿಗೆ (ಶೇ.98.33) ಮಂದಿಗೆ ಮೊದಲ ಕಂತಿನ 10029 ಕೋಟಿ ರೂ. ಜಮೆ ಮಾಡಲಾಗಿದೆ. ಪಿಎಂಜೆಡಿವೈ ಮಹಿಳಾ ಖಾತೆದಾರರ ಸಂಖ್ಯೆಗೆ ಗ್ರಾಹಕ ಪ್ರೇರಿತ ಮೊದಲ ಕಂತಿನ 8.72 (ಶೇ.44ರಷ್ಟು) ಹಣ ಪಾವತಿಸಲಾಗಿದೆ. 20.62 ಕೋಟಿ (ಶೇ.100ರಷ್ಟು) ಮಹಿಳಾ ಜನ್ ಧನ್ ಖಾತೆದಾರರಿಗೆ ಎರಡನೇ ಕಂತಿನ 10,315 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಪಿಎಂಜೆಡಿವೈ ಖಾತೆ ಹೊಂದಿರುವ ಮಹಿಳೆಯರಿಗೆ ಅವರ ಖಾತೆಗಳಿಗೆ ಎರಡನೇ ಕಂತಿನ ಗ್ರಾಹಕ ಪ್ರೇರಿತ ಹಣ 9.7 ಕೋಟಿ(ಶೇ.47ರಷ್ಟು) ಪಾವತಿಸಲಾಗಿದೆ.

· ಒಟ್ಟು ಸುಮಾರು 2.81 ಕೋಟಿ ವೃದ್ಧರಿಗೆ, ವಿಧವೆಯರಿಗೆ ಮತ್ತು ವಿಶೇಷಚೇತನರಿಗೆ ಎರಡು ಕಂತಿನಲ್ಲಿ 2814.5 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಎರಡು ಕಂತಿನಲ್ಲಿ ಎಲ್ಲಾ 2.81 ಕೋಟಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲಾಗಿದೆ.

· ಸುಮಾರು 2.3 ಕೋಟಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು 4312.82 ಕೋಟಿ ರೂ. ಆರ್ಥಿಕ ನೆರವು ಸ್ವೀಕರಿಸಿದ್ದಾರೆ.

· ಈವರೆಗೆ ಏಪ್ರಿಲ್ ತಿಂಗಳಿಗೆ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 101 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ಎತ್ತುವಳಿ ಮಾಡಿವೆ. ಪೈಕಿ 36.93 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು 2020 ಏಪ್ರಿಲ್ ನಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 73.86 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಮೇ 2020ರಲ್ಲಿ 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 65.85 ಕೋಟಿ ಫಲಾನುಭವಿಗಳಿಗೆ 32.92 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ವಿತರಿಸಲಾಗಿದೆ. ಜೂನ್ 2020ರಲ್ಲಿ 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 7.16 ಕೋಟಿ ಫಲಾನುಭವಿಗಳಿಗೆ 3.58 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ವಿತರಿಸಲಾಗಿದೆ. ನಾನಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 5.06 ಲಕ್ಷ ಮೆಟ್ರಿಕ್ ಟನ್ ಬೇಳೆಯನ್ನು ರವಾನಿಸಲಾಗಿದೆ. ಈವರೆಗೆ 19.4 ಕೋಟಿ ಫಲಾನುಭವಿಗಳ ಪೈಕಿ 17.9 ಕೋಟಿ ಕುಟುಂಬಗಳಿಗೆ 1.91 ಲಕ್ಷ ಮೆಟ್ರಿಕ್ ಟನ್ ಬೇಳೆಯನ್ನು ವಿತರಿಸಲಾಗಿದೆ.

· ಪಿಎಂಯುವೈ ಯೋಜನೆ ಅಡಿಯಲ್ಲಿ ಈವರೆಗೆ ಒಟ್ಟು 9.25 ಕೋಟಿ ಸಿಲಿಂಡರ್ ಗಳನ್ನು ಬುಕ್ ಮಾಡಲಾಗಿದೆ. ಈವರೆಗೆ 8.58 ಕೋಟಿ ಪಿಎಂಯುವೈ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.

· ಮರುಪಾವತಿಸಲಾಗದ ಮುಂಗಡ ಆನ್ ಲೈನ್ ವಾಪಸ್ ಪ್ರಯೋಜನದ ಮೂಲಕ 16.1 ಲಕ್ಷ ಇಪಿಎಫ್ಒ ಸದಸ್ಯರು ಈವರೆಗೆ ತಮ್ಮ ಇಪಿಎಫ್ಒ ಖಾತೆಗಳಿಂದ 4725 ಕೋಟಿ ರೂ. ವಾಪಸ್ ಪಡೆದಿದ್ದಾರೆ.

· ಮನ್ರೇಗಾದಡಿ ಹೆಚ್ಚಳ ಮಾಡಲಾದ ಕೂಲಿ ದರದ ಅಧಿಸೂಚನೆಯನ್ನು 01-04-2020ರಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 48.13 ಕೋಟಿ ಮಾನವ ದಿನದ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ ವೇತನ ಮತ್ತು ಸಾಮಗ್ರಿಗಳಿಗಾಗಿ ರಾಜ್ಯಗಳಿಗೆ ಬಾಕಿ ಇದ್ದ 28,729 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

· 59.23 ಲಕ್ಷ ಉದ್ಯೋಗಿಗಳ ಖಾತೆಗೆ ಶೇ.24ರಷ್ಟು ಇಪಿಎಫ್ ವಂತಿಗೆ ಪಾವತಿಗೆ 895.09 ಕೋಟಿ ರೂ. ಹಣ ವರ್ಗಾಯಿಸಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್

2/06/2020ವರೆಗೆ ಆಗಿರುವ ಒಟ್ಟು ನೇರ ನಗದು ವರ್ಗಾವಣೆ

ಯೋಜನೆಗಳು

ಫಲಾನುಭವಿಗಳ ಸಂಖ್ಯೆ

ಮೊತ್ತ

ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಬೆಂಬಲ

1ನೇ ಕಂತು - 20.05 ಕೋಟಿ (98.3%)

2ನೇ ಕಂತು–20.63 ಕೋಟಿ

1ನೇ ಕಂತು - 10029 ಕೋಟಿ

2ನೇ ಕಂತು – 10315 ಕೋಟಿ

ಎನ್ಎಸ್ಎಪಿ ಅಡಿ ಬೆಂಬಲ(ವಯಸ್ಸಾದ ವಿಧವೆಯರು, ದಿವ್ಯಾಂಗರು, ಹಿರಿಯ ನಾಗರಿಕರು)

2.81 ಕೋಟಿ (100%)

1ನೇ ಕಂತು - 1407 ಕೋಟಿ

2ನೇ ಕಂತು - 1407 ಕೋಟಿ

ಪಿಎಂ-ಕಿಸಾನ್ ಅಡಿಯಲ್ಲಿ ಮೊದಲ ಕಂತಿನ ಹಣ ಪಾವತಿ

8.19 ಕೋಟಿ

16394 ಕೋಟಿ

ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಬೆಂಬಲ

2.3 ಕೋಟಿ

4313 ಕೋಟಿ

ಇಪಿಎಫ್ಒಗೆ ಶೇ.24ರಷ್ಟು ವಂತಿಗೆ

.59 ಕೋಟಿ

895 ಕೋಟಿ

ಉಜ್ವಲ

1ನೇ ಕಂತು - 7.48

1ನೇ ಕಂತು - 4.48

8488 ಕೋಟಿ

ಒಟ್ಟಾರೆ

42 ಕೋಟಿ

53248 ಕೋಟಿ

 

***(Release ID: 1628926) Visitor Counter : 140