ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಶ್ರೀಲಂಕಾದ ಪ್ರಧಾನಮಂತ್ರಿ ಗೌರವಾನ್ವಿತ ಮಹಿಂದ ರಾಜಪಕ್ಸ ನಡುವೆ ದೂರವಾಣಿ ಸಮಾಲೋಚನೆ

Posted On: 27 MAY 2020 8:25PM by PIB Bengaluru

ಪ್ರಧಾನಮಂತ್ರಿ ಮತ್ತು ಶ್ರೀಲಂಕಾದ ಪ್ರಧಾನಮಂತ್ರಿ ಗೌರವಾನ್ವಿತ ಮಹಿಂದ ರಾಜಪಕ್ಸ ನಡುವೆ ದೂರವಾಣಿ ಸಮಾಲೋಚನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಲಂಕಾದ ಪ್ರಧಾನಮಂತ್ರಿ ಗೌರವಾನ್ವಿತ ಮಹಿಂದ ರಾಜಪಕ್ಸ ಅವರೊಂದಿಗೆ ಇಂದು ಮಾತನಾಡಿ, ಶ್ರೀಲಂಕಾದ ಸಂಸತ್ತು 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿದರು.

ಗೌರವಾನ್ವಿತ ರಾಜಪಕ್ಸ ಅವರು, ತಮ್ಮ ಸುದೀರ್ಘ ರಾಜಕೀಯ ವೃತ್ತಿಯಲ್ಲಿ ಶ್ರೀಲಂಕಾದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಭವಿಷ್ಯದಲ್ಲಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಅಲ್ಲದೆ ಶ್ರೀಲಂಕಾದಲ್ಲಿನ ಭಾರತೀಯ ಮೂಲದ ತಮಿಳು ಜನರ ಪ್ರಮುಖ ನಾಯಕರಾದ ಶ್ರೀ ಆರ್ಮುಗನ್ ಥೋಂಡಮನ್ ನಿನ್ನೆ ಅಕಾಲಿಕವಾಗಿ ಹಾಗೂ ದಿಢೀರ್ ನಿಧನರಾಗಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶೋಕ ಸಂತಾಪ ಸೂಚಿಸಿದರು. ಥೋಂಡಮನ್ ಅವರು, ಭಾರತ ಮತ್ತು ಶ್ರೀಲಂಕಾ ನಡುವಿನ ಅಭಿವೃದ್ಧಿ ಪಾಲುದಾರಿಕೆಯಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿದ್ದರು ಎಂದು ಅವರ ಪಾತ್ರವನ್ನು ಪ್ರಧಾನಮಂತ್ರಿ ಸ್ಮರಿಸಿದರು.

ಉಭಯ ನಾಯಕರು, ಕೋವಿಡ್-19 ಸಾಂಕ್ರಾಮಿಕದ ಸದ್ಯ ಸ್ಥಿತಿಗತಿ ಮತ್ತು ಆರೋಗ್ಯ ಹಾಗೂ ಆರ್ಥಿಕತೆಯ ಮೇಲೆ ಆಗಿರುವ ಪರಿಣಾಮಗಳು ಮತ್ತು ಅವುಗಳನ್ನು ಎದುರಿಸಲು ಎರಡೂ ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸವಾಲಿನ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ಸಾಧ್ಯವಾದ ಎಲ್ಲ ನೆರವನ್ನು ನೀಡಲು ಭಾರತ ಸಿದ್ಧವಿದೆ ಎಂದು ಗೌರವಾನ್ವಿತ ರಾಜಪಕ್ಸ ಅವರಿಗೆ ಭರವಸೆ ನೀಡಿದರು.

***



(Release ID: 1627314) Visitor Counter : 177