ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 26 MAY 2020 5:26PM by PIB Bengaluru

ಕೋವಿಡ್-19 ಹೊಸ ಮಾಹಿತಿ

 

ಭಾರತ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಕೋವಿಡ್-19 ನಿರ್ವಹಣೆ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕುರಿತಂತೆ ಹಲವು ಹಂತಗಳಲ್ಲಿ ಪ್ರತಿಬಂಧಕ ಮತ್ತು ಕ್ರಿಯಾಶೀಲವಾಗಿ ಸಕ್ರಿಯ ಕಾರ್ಯತಂತ್ರಗಳನ್ನು ಕೈಗೊಂಡಿದೆ. ಇವುಗಳನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ನಿಗಾವಹಿಸಲಾಗುತ್ತಿದೆ.

ಸೋಂಕು ನಿಯಂತ್ರಣ ಮತ್ತು ನಿರ್ಬಂಧಿತ ಕ್ರಮಗಳ ಮೂಲಕ ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಡಳಿತ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದೆ. ಕೈಶುಚಿತ್ವ, ಉಸಿರಾಟದ ಶುಚಿತ್ವ ಮತ್ತು ಪರಿಣಾಮಕಾರಿ ಸ್ಯಾನಿಟೈಸೇಷನ್ ಮೂಲಕ ಪದೇ ಪದೇ ನೆಲವನ್ನು ಮುಟ್ಟುವುದನ್ನು ಕಡಿಮೆ ಮಾಡುವುದು. ಮೂಲಕ ಸೋಂಕು ಹರಡುವುದನ್ನು ತಪ್ಪಿಸುವುದಾಗಿದೆ. ಬಿಕ್ಕಟ್ಟಿನಿಂದ ಹೊರಬರಲು ಕೋವಿಡ್ ಗೆ ಸೂಕ್ತ ನಡವಳಿಕೆ ಖಾತ್ರಿಪಡಿಸುವ ಅಗತ್ಯವಿದೆ. ಅದರಲ್ಲಿ ನಿರಂತರವಾಗಿ ಮಾಸ್ಕ್/ಮುಖ ರಕ್ಷಾ ಕವಚ ಬಳಕೆ ಮಾಡುವುದು ಮತ್ತು ವೃದ್ಧರು ಹಾಗೂ ಗಂಭೀರ ಸ್ಥಿತಿಯಲ್ಲಿರುವವರನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದೂ ಸೇರಿದೆ. ಮಾರಕ ಕೊರೊನಾ ಸೋಂಕಿನ ವಿರುದ್ಧ ಸದ್ಯ ಜಗತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳವುದೊಂದೇ ಸಾಮಾಜಿಕ ಲಸಿಕೆಯಾಗಿದೆ.

ಭಾರತ ಅತ್ಯಂತ ಕ್ಷಿಪ್ರಗತಿಯಲ್ಲಿ ತನ್ನ ಸೋಂಕು ಪತ್ತೆ ಪರೀಕ್ಷೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ ಮತ್ತು ಅದು ಎದುರಾಗುತ್ತಿರುವ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಭಾರತದಲ್ಲಿ ಸದ್ಯ ಪ್ರತಿ ದಿನ ಸುಮಾರು 1.1 ಲಕ್ಷ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಅಲ್ಲದೆ, ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ/ವರ್ಗಾವಣೆ, ಆರ್ ಟಿ-ಪಿಸಿಆರ್ ಯಂತ್ರಗಳು ಮತ್ತು ಮಾನವ ಸಂಪನ್ಮೂಲ ಹೆಚ್ಚಳ ಸೇರಿದಂತೆ ಸಾಮರ್ಥ್ಯವೃದ್ಧಿ ಕೆಲಸಗಳು ನಡೆದಿವೆ. ಇಂದಿಗೆ ಭಾರತದಲ್ಲಿ 612 ಒಟ್ಟು ಪ್ರಯೋಗಾಲಯಗಳಲ್ಲಿ ಐಸಿಎಂಆರ್ ನಡೆಸುತ್ತಿರುವ 430 ಮತ್ತು ಖಾಸಗಿ ವಲಯದ 182 ಪ್ರಯೋಗಾಲಯಗಳಲ್ಲಿ ಕೋವಿಡ್-19 ಸೋಂಕಿನ ಜನರ ಪರೀಕ್ಷೆ ನಡೆಯುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ಲಕ್ಷಣಗಳಿರುವ ಮತ್ತು ಹೋಮ್ ಕ್ವಾರಂಟೈನ್ ನಲ್ಲಿರುವ ಸೋಂಕಿಲ್ಲದಿರುವ ವಲಸೆ ಕಾರ್ಮಿಕರಿಗೆ ತಕ್ಷಣ ಪರೀಕ್ಷೆ ನಡೆಸುವಂತೆ ಸೂಚಿಸಿ, ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ(ಎನ್ ಟಿಇಪಿ)ಗೆ ನಿಯೋಜಿಸಲ್ಪಟ್ಟ ಟ್ರೂನಾಟ್ ಯಂತ್ರಗಳನ್ನು ಬಳಸಿ, ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ವದೇಶಿ ಉತ್ಪಾದಕರು ಆರ್ ಟಿ-ಪಿಸಿಆರ್ ಕಿಟ್ ಗಳನ್ನು, ವಿಟಿಎಂ, ಸ್ವ್ಯಾಬ್ ಮತ್ತು ಆರ್ ಎನ್ಎ ತೆಗೆದು ಕಿಟ್ ಗಳ ಮೂಲಕ ಪರೀಕ್ಷೆಯನ್ನು ನಡೆಸಲು ಗುರುತಿಸಲಾಗಿದ್ದು, ಅವುಗಳ ಉತ್ಪಾದನೆ ಕಳೆದ ಕೆಲವು ತಿಂಗಳಿಂದೀಚೆಗೆ ಹೆಚ್ಚಾಗಿದೆ.

ಪ್ರಸ್ತುತ ದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಸುಧಾರಣೆಯಾಗುತ್ತಿದ್ದು, ಸದ್ಯ ಶೇ.41.61ರಷ್ಟಿದೆ. ವರೆಗೆ ಕೋವಿಡ್-19 ನಿಂದಾಗಿ 60,490 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ದೇಶದಲ್ಲಿ ಇಳಿಮುಖವಾಗುತ್ತಿದ್ದು, ಶೇ.3.30ಯಿಂದ(ಏಪ್ರಿಲ್ 15 ವೇಳೆಗೆ) ಸದ್ಯ ಶೇ.2.87ಕ್ಕೆ ಇಳಿಕೆಯಾಗಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಸೋಂಕು ತಗುಲಿದವರ ಮರಣ ಪ್ರಮಾಣ ಶೇ.6.45ರಷ್ಟಿದೆ.

ಪ್ರತಿ ಲಕ್ಷಕ್ಕೆ ಸಾವಿನ ದರವನ್ನು ವಿಶ್ಲೇಷಿಸಿ ನೋಡಿದರೆ, ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 0.3ರಷ್ಟು ಸಾವುಗಳು ಸಂಭವಿಸುತ್ತಿವೆ. ಇದು ವಿಶ್ವದಲ್ಲೇ ಅತಿ ಕಡಿಮೆಯಾಗಿದೆ. ಜಗತ್ತಿನಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 4.4 ಸಾವುಗಳು ಸಂಭವಿಸುತ್ತಿವೆ. ಪ್ರತಿ ಲಕ್ಷಕ್ಕೆ ಸಾವಿನ ಸಂಖ್ಯೆಯಲ್ಲೂ ಕಡಿಮೆ ಇರುವುದಲ್ಲದೆ, ಪ್ರಕರಣವಾರು ಸಾವಿನ ಸಂಖ್ಯೆಯೂ ಕಡಿಮೆ ಇದೆ. ಇದಕ್ಕೆ ಸಕಾಲದಲ್ಲಿ ಸೋಂಕಿರುವವರನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಮೂಲಕ ನಿರ್ವಹಣೆ ಮಾಡುತ್ತಿರುವುದು ಕಾರಣವಾಗಿದೆ.

ಕೋವಿಡ್-19 ಕುರಿತ ಎಲ್ಲ ಅಧಿಕೃತ ಮತ್ತು ತಾಜಾ ಮಾಹಿತಿಗೆ, ತಾಂತ್ರಿಕ ವಿಷಯಗಳಿಗೆ, ಮಾರ್ಗಸೂಚಿಗಳಿಗೆ ಮತ್ತು ಸಲಹಾ ಸೂಚಿಗಳಿಗೆ, ನಿರಂತರವಾಗಿ ಇಲ್ಲಿ ಭೇಟಿ ನೀಡಬಹುದು. https://www.mohfw.gov.in ಮತ್ತು @MoHFW_INDIA

ಕೋವಿಡ್-19 ಕುರಿತ ತಾಂತ್ರಿಕ ಸಂಬಂಧಿ ಪ್ರಶ್ನೆಗಳನ್ನು -ಮೇಲ್ ಮಾಡಬಹುದು. technicalquery.covid19[at]gov[dot]in ಮತ್ತು ಇತರೆ ಪ್ರಶ್ನೆಗಳನ್ನು ncov2019[at]gov[dot]in ಇಲ್ಲಿಗೆ ಕಳುಹಿಸಬಹುದು ಮತ್ತು ಟ್ವೀಟ್ ಮೂಲಕ ಕೇಳಲು @CovidIndiaSeva.

ಕೋವಿಡ್-19 ಕುರಿತಂತೆ ಯಾವುದೇ ದೂರುಗಳಿದ್ದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ +91-11-23978046 ಅಥವಾ 1075 (ಉಚಿತ ಕರೆಗೆ). ಕೋವಿಡ್-19 ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆ ಇಲ್ಲಿ ಲಭ್ಯ. https://www.mohfw.gov.in/pdf/coronvavirushelplinenumber.pdf .

***


(Release ID: 1627006) Visitor Counter : 241