ಗೃಹ ವ್ಯವಹಾರಗಳ ಸಚಿವಾಲಯ

ಪ್ರಯಾಣ ಸಂಬಂಧ ಎಸ್ಒಪಿ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವಾಲಯ

Posted On: 24 MAY 2020 8:40PM by PIB Bengaluru

ಹೊರ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಸಂಚಾರ ಮತ್ತು ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು

ತುರ್ತು ಕಾರಣಗಳಿಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಲು ಇಚ್ಛಿಸುವ

ಪ್ರಯಾಣ ಸಂಬಂಧ ಎಸ್ಒಪಿ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವಾಲಯ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ), ಹೊರ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಪ್ರಯಾಣ ಹಾಗೂ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ತುರ್ತು ಕಾರಣಗಳಿಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಇಚ್ಛಿಸುವವರ ಪ್ರಯಾಣ ಸಂಬಂಧ ನಿರ್ದಿಷ್ಟ ಕಾರ್ಯಾಚರಣೆ ಮಾನದಂಡ(ಎಸ್ಒಪಿ) ಬಿಡುಗಡೆ ಮಾಡಿದೆ. ಆದೇಶ ಎಂಎಚ್ಎ ದಿನಾಂಕ 05.05.2020ರಂದು ಇದೇ ವಿಷಯದ ಕುರಿತು ಹೊರಡಿಸಿದ್ದ ಆದೇಶದ ಬದಲಿಗೆ ಜಾರಿಗೆ ಬರಲಿದೆ. ಎಸ್ಒಪಿ, ಗಡಿ ಭಾಗಗಳ ಮೂಲಕ ಬರುವ ಪ್ರಯಾಣಿಕರಿಗೂ ಸಹ ಅನ್ವಯವಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ ಲಾಕ್ ಡೌನ್ ಕ್ರಮಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿಷೇಧಿಸಲಾಗಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ ಉದ್ಯೋಗ, ಅಧ್ಯಯನ/ಇಂಟರ್ನ್ ಶಿಪ್, ಪ್ರವಾಸ, ವಾಣಿಜ್ಯ ಮತ್ತಿತರ ಉದ್ದೇಶಗಳಿಗಾಗಿ ಲಾಕ್ ಡೌನ್ ಗೂ ಮುಂಚೆ ವಿದೇಶಗಳಿಗೆ ಪ್ರಯಾಣ ಬೆಳೆಸಿದ್ದ ಹಲವು ಭಾರತೀಯ ಪ್ರಜೆಗಳು ಆಯಾ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ದೀರ್ಘಕಾಲ ವಿದೇಶಗಳಲ್ಲೇ ಉಳಿದಿರುವ ಕಾರಣ ಅವರು ಒತ್ತಡಕ್ಕೆ ಸಿಲುಕಿದ್ದಾರೆ ಮತ್ತು ತುರ್ತಾಗಿ ಭಾರತಕ್ಕೆ ವಾಪಸ್ಸಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮೇಲಿನ ಪ್ರಕರಣಗಳಲ್ಲದೆ, ಹಲವು ಭಾರತೀಯ ಪ್ರಜೆಗಳು ವೈದ್ಯಕೀಯ ತುರ್ತುಗಳಿಗಾಗಿ ಅಥವಾ ಕುಟುಂಬದಲ್ಲಿ ಸಂಭವಿಸಿದ ಸಾವಿನ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಲು ಬಯಸಿದ್ದಾರೆ. ಅಂತೆಯೇ ಭಾರತದಲ್ಲೂ ಸಹ ಹಲವರು ಸಿಲುಕಿಕೊಂಡಿದ್ದು ಅವರು, ನಾನಾ ಉದ್ದೇಶಗಳಿಗಾಗಿ ತುರ್ತಾಗಿ ವಿದೇಶಗಳಿಗೆ ಪ್ರಯಾಣ ಮಾಡುವ ಇಚ್ಛೆ ಹೊಂದಿದ್ದಾರೆ.

ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಪ್ರಯಾಣ, ಒತ್ತಡಕ್ಕೆ ಒಳಗಾಗಿರುವ ಹಲವು ಬಲವಾದ ಪ್ರಕರಣಗಳಲ್ಲಿ ಆದ್ಯತೆ ನೀಡಲಾಗುವುದು, ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರು/ಉದ್ಯೋಗಿಗಳು, ವೀಸಾ ಅವಧಿ ಪೂರ್ಣಗೊಂಡಿರುವ ಅಲ್ಪಾವಧಿ ವೀಸಾ ಹೊಂದಿರುವವರು ವೈದ್ಯಕೀಯ ತುರ್ತು ಅವಶ್ಯಕತೆ ಹೊಂದಿರುವವರು/ಗರ್ಭಿಣಿ ಸ್ತ್ರೀಯರು/ವೃದ್ಧರು ಅಥವಾ ಕುಟುಂಬದ ಸದಸ್ಯರಲ್ಲಿ ಯಾರಾದರು ಮೃತಪಟ್ಟಿದ್ದರೆ ಅದಕ್ಕಾಗಿ ಭಾರತಕ್ಕೆ ಬರಬೇಕಾಗಿರುವವರು ಮತ್ತು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು.

ಅಂತಹ ವ್ಯಕ್ತಿಗಳು ಯಾವ ದೇಶದಲ್ಲಿ ಸಿಲುಕಿಕೊಂಡಿರುವವರೋ ದೇಶದ ಭಾರತೀಯ ರಾಯಭಾರ ಕಚೇರಿಗಳಲ್ಲಿ ಎಂಇಎ ನಿಗದಿಪಡಿಸಿರುವಂತೆ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಅವರು ನಾಗರಿಕ ವಿಮಾನಯಾನ ಸಚಿವಾಲಯ(ಎಂಒಸಿಎ) ಅನುಮತಿ ನೀಡಲಾಗಿರುವ ನಿಗದಿಯಾಗದ ವಾಣಿಜ್ಯ ವಿಮಾನಗಳಲ್ಲಿ ಮತ್ತು ಬಂದರು ಸಚಿವಾಲಯ (ಎಂಒಎಸ್)/ಮಿಲಿಟರಿ ವ್ಯವಹಾರಗಳ ಇಲಾಖೆ(ಡಿಎಂಎ) ಅನುಮತಿಸಿರುವ ಹಡಗುಗಳಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸಬಹುದು. ಪ್ರಯಾಣದ ವೆಚ್ಚವನ್ನು ಆಯಾ ಪ್ರಯಾಣಿಕರೇ ಭರಿಸಬೇಕಾಗಿದೆ ಮತ್ತು ಯಾರಿಗೆ ಸೋಂಕಿನ ಲಕ್ಷಣಗಳಿಲ್ಲವೋ ಅಂತಹವರಿಗೆ ಮಾತ್ರ ಭಾರತಕ್ಕೆ ಪ್ರಯಾಣ ಮಾಡಲು ಅವಕಾಶ ನೀಡಲಾಗುವುದು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಅಂತಹ ಎಲ್ಲ ಪ್ರಯಾಣಿಕರ ವಿಮಾನವಾರು/ಹಡಗುಗಳ ಪಟ್ಟಿಯನ್ನು ಸಿದ್ಧಪಡಿಸಲಿದೆ ಮತ್ತು ಕುರಿತ ಎಲ್ಲ ದಾಖಲೆಗಳು ಹಾಗೂ ಮಾಹಿತಿಗಳನ್ನು ಮುಂಚಿತವಾಗಿಯೇ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುವುದು. ಅಲ್ಲದೆ ಎಂಇಎ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಿದೆ. ನೋಡಲ್ ಅಧಿಕಾರಿಗಳು ಉದ್ದೇಶಕ್ಕಾಗಿ ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ. ನಿಗದಿತ (ದಿನ, ಸ್ಥಳ ಮತ್ತು ಆಗಮನದ ಸಮಯ) ವಿಮಾನಗಳ ಆಗಮನ/ಹಡುಗಗಳ ಆಗಮನದ ವಿವರಗಳನ್ನು ಕನಿಷ್ಠ ಎರಡು ದಿನಗಳ ಮುಂಚೆ ಎಂಇಎ ತನ್ನ ಆನ್ ಲೈನ್ ಡಿಜಿಟಲ್ ವೇದಿಕೆಗಳಲ್ಲಿ ಪ್ರದರ್ಶಿಸಲಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಕ್ವಾರಂಟೈನ್ ವ್ಯವಸ್ಥೆ ಸೇರಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ (ಎಂಒಎಚ್ಎಫ್ ಡಬ್ಲ್ಯೂ) ಮಾರ್ಗಸೂಚಿಗಳನ್ನು ಎಂಎಚ್ಎ, ಎಸ್ಒಪಿ ಜೊತೆ ಕೆಳಗಿನ ಲಿಂಕ್ ನೊಂದಿಗೆ ಲಗತ್ತಿಸಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಎಲ್ಲ ಪ್ರಯಾಣಿಕರು ವಿಮಾನ ಹತ್ತುವ ಮುನ್ನ ಅವರು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಿರಬೇಕು ಏಳು ದಿನಗಳ ಕಾಲ ಸ್ವಯಂ ಪಾವತಿ ಸಾಂಸ್ಥಿಕ ಕ್ವಾರಂಟೈನ್, ಆನಂತರ ಏಳು ದಿನಗಳ ಕಾಲ ಮನೆಯಲ್ಲೇ ಗೃಹಬಂಧನಕ್ಕೆ ಒಳಪಟ್ಟಿರಬೇಕು.

ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ವಿದೇಶಿ ಪ್ರಯಾಣ ಇಚ್ಛಿಸುವ ವ್ಯಕ್ತಿಗಳು, ಅಂತಹವರು ನಾಗರಿಕ ವಿಮಾನಯಾನ ಸಚಿವಾಲಯ(ಎಂಒಸಿಎ) ಅಥವಾ ಎಂಒಸಿಎಯಿಂದ ನಿಯೋಜಿಸಿದ ಯಾವುದೇ ಸಂಸ್ಥೆ ಜೊತೆ ಉದ್ದೇಶಕ್ಕಾಗಿ ಅಗತ್ಯ ದಾಖಲಾತಿಗಳು, ನಿರ್ಗಮನ ಮತ್ತು ಆಗಮನದ ಸ್ಥಳಗಳು ಸೇರಿದಂತೆ ಎಂಒಸಿಎಯ ಎಲ್ಲ ಮಾಹಿತಿಗಳನ್ನು ಒದಗಿಸಬೇಕು. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಎಂಒಸಿಎ ಅನುಮತಿ ನೀಡಿರುವ ನಿಗದಿಪಡಿಸದ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕರು ಭಾರತದಿಂದ ಪ್ರಯಾಣ ಬೆಳೆಸಬಹುದು. ಪ್ರಯಾಣದ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.

ನಿಗದಿತ ಸ್ಥಳಗಳಿಗೆ ಪ್ರಯಾಣ ಬೆಳೆಸುವವರು, ಅವರು ದೇಶದ ಪ್ರಜೆಗಳಾಗಿರಬೇಕು; ಕನಿಷ್ಠ ಒಂದು ವರ್ಷ ಅವಧಿಯ ದೇಶದ ವೀಸಾ ಹೊಂದಿರಬೇಕು ಮತ್ತು ಗ್ರೀನ್ ಕಾರ್ಡ್ ಅಥವಾ ಒಸಿಐ ಕಾರ್ಡ್ ಹೊಂದಿರುವವರಾಗಿರಬೇಕು. ವೈದ್ಯಕೀಯ ತುರ್ತುಗಳಿಗೆ ಅಥವಾ ಕುಟುಂಬದಲ್ಲಿ ಸಾವನ್ನಪ್ಪಿದ ಪ್ರಕರಣಗಳಲ್ಲಿ ಆರು ತಿಂಗಳ ವೀಸಾ ಹೊಂದಿರುವ ಭಾರತೀಯ ಪ್ರಜೆಗಳ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಅಂತಹ ವ್ಯಕ್ತಿಗಳ ಟಿಕೆಟ್ ಖಚಿತವಾಗುವ ಮುನ್ನ ಎಂಒಸಿಎ ನಿಗದಿತ ರಾಷ್ಟ್ರ ಇಂತಹ ವ್ಯಕ್ತಿಗಳನ್ನು ತಮ್ಮ ರಾಷ್ಟ್ರಕ್ಕೆ ಪ್ರಯಾಣಿಸಲು ಅನುಮತಿ ನೀಡುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಭಾರತೀಯ ನಾವಿಕರು/ಚಾಲಕ ಸಿಬ್ಬಂದಿ ವಿದೇಶಿ ಹಡಗುಗಳಲ್ಲಿ ಸೇವೆ ಸಲ್ಲಿಸಲು ಒಪ್ಪಂದಗಳನ್ನು ಸ್ವೀಕರಿಸಲು ಬಂದರು ಸಚಿವಾಲಯ ನೀಡಿರುವ ಅನುಮೋದನೆ ಆಧರಿಸಿ, ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದಿಂದ ನಿರ್ಗಮಿಸುವ ನಿಗದಿಯಾಗದ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸಬಹುದು ಅಥವಾ ಆಯಾ ಸಂಸ್ಥೆಗಳು ವ್ಯವಸ್ಥೆ ಮಾಡಿರುವ ವಿಮಾನಗಳಲ್ಲಿ ಪ್ರಯಾಣಿಸಬಹುದು.

ವಿಮಾನಗಳನ್ನು ಹತ್ತುವ ಸಮಯದಲ್ಲಿ ಆರೋಗ್ಯ ಶಿಷ್ಟಾಚಾರದಂತೆ ಎಲ್ಲ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸುವುದನ್ನು ಎಂಒಸಿಎ ಖಾತ್ರಿಪಡಿಸಲಿದೆ. ಸೋಂಕು ಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ವಿಮಾನ ಹತ್ತಲು ಅವಕಾಶ ನೀಡಲಾಗುವುದು. ವಿಮಾನ ಏರಿದ ನಂತರ ಮಾಸ್ಕ್ ಧರಿಸುವುದು, ಪರಿಸರ ಸ್ವಚ್ಛತೆ, ಉಸಿರಾಟದ ಸ್ವಚ್ಛತೆ, ಕೈಶುಚಿತ್ವ ಇತ್ಯಾದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು. ವಿಮಾನದಲ್ಲಿರುವ ಪ್ರತಿಯೊಬ್ಬರ ಬಗ್ಗೆಯೂ ನಿಗಾ ವಹಿಸಬೇಕು.

ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಮತ್ತು ಎಸ್ಒಪಿ ದಾಖಲೆಯ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

***(Release ID: 1626838) Visitor Counter : 17