ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೇಯಿಂದ ಕಳೆದ 23 ದಿನಗಳಲ್ಲಿ 2600 ಶ್ರಮಿಕ ವಿಶೇಷ ರೈಲುಗಳ ಆರ್ಯಾಚರಣೆ

Posted On: 23 MAY 2020 4:35PM by PIB Bengaluru

ಭಾರತೀಯ ರೈಲ್ವೇಯಿಂದ ಕಳೆದ 23 ದಿನಗಳಲ್ಲಿ 2600 ಶ್ರಮಿಕ ವಿಶೇಷ ರೈಲುಗಳ ಆರ್ಯಾಚರಣೆ

ಇದುವರೆಗೆ ವಿವಿಧೆಡೆ ಸಿಲುಕಿದ್ದ ಸುಮಾರು 36 ಲಕ್ಷ ವಲಸೆಗಾರರನ್ನು ಅವರ ತವರು ರಾಜ್ಯಗಳಿಗೆ ತಲುಪಿಸಿದೆ

 

ದೇಶವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟ ಮಾಡುತ್ತಿರುವಾಗ, ಭಾರತೀಯ ರೈಲ್ವೇಯು ಸಂಕೀರ್ಣ ಸಮಯದಲ್ಲಿ ಅದರಿಂದ ತೀವ್ರವಾಗಿ ಬಾಧಿತರಾದವರಿಗೆ ಸಹಾಯ ಮಾಡಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಲಸೆಗಾರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅದು ಅವರನ್ನು ತವರು ರಾಜ್ಯಗಳಿಗೆ ತಲುಪಿಸಲು ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಮುಖ ನಿರ್ಧಾರವೊಂದರಲ್ಲಿ , ರೈಲ್ವೇ ಸಚಿವಾಲಯವು ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ ರಾಜ್ಯ ಸರಕಾರಗಳ ಆವಶ್ಯಕತೆಗಳಿಗೆ ಅನುಗುಣವಾಗಿ 2600 ಕೂ ಅಧಿಕ ಶ್ರಮಿಕ ವಿಶೇಷ ರೈಲುಗಳನ್ನು ಕಾರ್ಯಾಚರಿಸಲು ನಿರ್ಧರಿಸಿದೆ.

ಭಾರತೀಯ ರೈಲ್ವೇಯು ಶ್ರಮಿಕ ವಿಶೇಷರೈಲುಗಳನ್ನು 2020 ಮೇ 1 ರಿಂದ ಆರಂಭಿಸಿತು ಎಂಬುದನ್ನು ಇಲ್ಲಿ ಗಮನಿಸಬಹುದು. ವಲಸೆ ಕಾರ್ಮಿಕರನ್ನು, ಯಾತ್ರಿಕರನ್ನು , ಪ್ರವಾಸಿಗರನ್ನು, ವಿದ್ಯಾರ್ಥಿಗಳನ್ನು ಮತ್ತು ಲಾಕ್ ಡೌನ್ ನಿಂದಾಗಿ ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಇತರ ವ್ಯಕ್ತಿಗಳನ್ನು ಸಾಗಿಸಲು ಇವುಗಳ ಓಡಾಟವನ್ನು ಆರಂಭಿಸಲಾಯಿತು. ವಿಶೇಷ ರೈಲುಗಳು ಉಭಯ ರಾಜ್ಯಗಳ ಒಪ್ಪಿಗೆಯೊಂದಿಗೆ ಮತ್ತು ಸಿಲುಕಿ ಹಾಕಿಕೊಂಡಿರುವ ವ್ಯಕ್ತಿಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ರಾಜ್ಯಗಳ ಗುಣಮಟ್ಟ ಶಿಷ್ಟಾಚಾರಗಳನ್ವಯ ಒಂದು ನಿರ್ದಿಷ್ಟ ಸ್ಥಳದಿಂದ ಇನ್ನೊಂದು ನಿರ್ದಿಷ್ಟ ಸ್ಥಳದವರೆಗೆ ಓಡಾಟ ನಡೆಸುತ್ತವೆ. ರಾಜ್ಯ ಸರಕಾರಗಳು ಮತ್ತು ಮತ್ತು ರೈಲ್ವೇ ಗಳು ಹಿರಿಯ ಅಧಿಕಾರಿಗಳನ್ನು ಸಮನ್ವಯಕ್ಕಾಗಿ ಮತ್ತು ಶ್ರಮಿಕ ರೈಲುಗಳಸುಸೂತ್ರ ಕಾರ್ಯನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿವೆ.

ಕಳೆದ 23 ದಿನಗಳಲ್ಲಿ ಭಾರತೀಯ ರೈಲ್ವೇಯು 2600 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದೆ.

ವಿವಿಧೆಡೆ ಸಿಲುಕಿ ಹಾಕಿಕೊಂಡಿದ್ದ 36 ಲಕ್ಷ ವಲಸೆಗಾರರನ್ನು ಇದುವರೆಗೆ ಅವರ ತವರು ರಾಜ್ಯಗಳಿಗೆ ಸಾಗಿಸಲಾಗಿದೆ.

ಶ್ರಮಿಕ ವಿಶೇಷ ರೈಲುಗಳಲ್ಲದೆ, ರೈಲ್ವೇ ಸಚಿವಾಲಯವು 12.05.2020 ರಿಂದ 15 ಜೋಡಿ ವಿಶೇಷ ರೈಲುಗಳನ್ನು ಆರಂಭಿಸಿದೆ ಮತ್ತು 2020 ಜೂನ್ 1 ರಿಂದ ಆರಂಭ ಗೊಳ್ಳುವಂತೆ 200 ರೈಲುಗಳ ಸೇವೆಯನ್ನು ಪ್ರಕಟಿಸಿದೆ.

***


(Release ID: 1626506) Visitor Counter : 221