PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 22 MAY 2020 6:49PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್; ಶೇ.40.98 ಕ್ಕೆ ಗೆ ಸುಧಾರಿಸಿದ ಚೇತರಿಕೆಯ ದರ

ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 6088 ಹೆಚ್ಚಳ ಕಂಡುಬಂದಿದೆ. ಈಗ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,18,447. ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 66,330. ಇದುವರೆಗೆ ಒಟ್ಟು 48,533 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 3234 ರೋಗಿಗಳು ಗುಣಮುಖರಾಗಿದ್ದಾರೆ. ಇದು ನಮ್ಮ ಒಟ್ಟು ಚೇತರಿಕೆ ದರವನ್ನು ಶೇ.40.98 ಕ್ಕೆ ಹೆಚ್ಚಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626139

ದೇಶದ ವಿವಿಧೆಡೆ ಗೃಹ ಸಚಿವಾಲಯದ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ವರದಿಯಾಗಿವೆ

ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅತ್ಯಗತ್ಯ. ಆದಾಗ್ಯೂ, ಗೃಹ ಸಚಿವಾಲಯದ ಮಾರ್ಗಸೂಚಿಗಳ ಅನುಷ್ಠಾನದಲ್ಲಿ ಉಲ್ಲಂಘನೆಗಳು ದೇಶಾದ್ಯಂತ ವಿವಿಧೆಡೆ ವರದಿಯಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಆಡಳಿತವು ಇದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಿಹೇಳಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625886

ಕೋವಿಡ್-19 ನಿಗ್ರಹಕ್ಕಾಗಿ ವಿಧಿಸಿದ್ದ ವೀಸಾ ಮತ್ತು ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದ ಗೃಹ ಸಚಿವಾಲಯ, ವಿದೇಶದಲ್ಲಿ ಸಿಲುಕಿರುವ ಕೆಲವು ವರ್ಗದ OCI ಕಾರ್ಡ್ದಾರರಿಗೆ ಭಾರತಕ್ಕೆ ಮರಳಲು ಅನುಮತಿ

ಕೋವಿಡ್-19 ನಿಗ್ರಹಕ್ಕಾಗಿ ವಿಧಿಸಿದ್ದ ವೀಸಾ ಮತ್ತು ಪ್ರಯಾಣದ ನಿರ್ಬಂಧಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಸಡಿಲಗೊಳಿಸಿದೆ. ವಿದೇಶದಲ್ಲಿ ಸಿಲುಕಿರುವ ಕೆಲವು ವರ್ಗಗಳ ಸಾಗರೋತ್ತರ ಭಾರತೀಯ (ಒಸಿಐ) ಕಾರ್ಡುದಾರರಿಗೆ ಭಾರತಕ್ಕೆ ಬರಲು ಅನುಮತಿ ನೀಡಿದೆ. ವಿದೇಶದಲ್ಲಿ ಸಿಲುಕಿರುವ ಒಸಿಐ ಕಾರ್ಡುದಾರರ ಕೆಳಕಂಡ ವರ್ಗಗಳು ಭಾರತಕ್ಕೆ ಬರಲು ಅನುಮತಿ ನೀಡಲಾಗಿದೆ: ವಿದೇಶಿ ಭಾರತೀಯರಿಗೆ ಜನಿಸಿದ ಮತ್ತು ಒಸಿಐ ಕಾರ್ಡ್ಗಳನ್ನು ಹೊಂದಿರುವ ಅಪ್ರಾಪ್ತರು; ಕುಟುಂಬದಲ್ಲಿ ಸಾವಿನಂತಹ ತುರ್ತು ಪರಿಸ್ಥಿತಿಗಳ ಕಾರಣದಿಂದ ಭಾರತಕ್ಕೆ ಬರಲು ಬಯಸುವ ಒಸಿಐ ಕಾರ್ಡುದಾರರು; ಒಬ್ಬ ಸಂಗಾತಿಯು ಒಸಿಐ ಕಾರ್ಡುದಾರರಾಗಿದ್ದು ಮತ್ತು ಇನ್ನೊಬ್ಬರು ಭಾರತೀಯ ಪ್ರಜೆಯಾಗಿದ್ದು, ಅವರಿಗೆ ಭಾರತದಲ್ಲಿ ಶಾಶ್ವತ ನಿವಾಸವಿದ್ದವರು; ಒಸಿಐ ಕಾರ್ಡುದಾರರಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು (ಕಾನೂನುಬದ್ಧವಾಗಿ ಅಪ್ರಾಪ್ತರಲ್ಲದವರು) ಆದರೆ ಅವರ ಪೋಷಕರು ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿದ್ದರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625864        

ಆರ್ಥಿಕತೆಯನ್ನು ಬಲಪಡಿಸಲು ಆರ್ಬಿಐನಿಂದ ಒಂಬತ್ತು ಹೆಚ್ಚುವರಿ ಕ್ರಮಗಳು; ಬಡ್ಡಿದರಗಳ ಕಡಿತ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ಪ್ರಕ್ಷುಬ್ಧ ಮತ್ತು ಅನಿಶ್ಚಿತ ಹಣಕಾಸಿನ ಹರಿವನ್ನು ಸುಗಮಗೊಳಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಮತ್ತೆ ಒಂಬತ್ತು ಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ. ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಲಾಗಿದೆ; ಸಿಡ್ಬಿಗೆ ಮರು ಸಾಲ ಸೌಲಭ್ಯವನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಲಾಗಿದೆ; ಸ್ವಯಂಪ್ರೇರಿತ ಧಾರಣ ಮಾರ್ಗದ ಅಡಿಯಲ್ಲಿ ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆಗಾಗಿ ನಿಯಮಗಳ ಸಡಿಲಿಕೆ; ರಫ್ತುದಾರರು ಈಗ ಹೆಚ್ಚಿನ ಅವಧಿಗೆ ಬ್ಯಾಂಕ್ ಸಾಲಗಳನ್ನು ಪಡೆಯಬಹುದು; ಎಕ್ಸಿಮ್ ಬ್ಯಾಂಕಿಗೆ ಸಾಲ ಸೌಲಭ್ಯ; ಆಮದುದಾರರಿಗೆ  ಆಮದು ಪಾವತಿಗೆ ಹೆಚ್ಚಿನ ಸಮಯ; ನಿಯಂತ್ರಕ ಕ್ರಮಗಳ ವಿಸ್ತರಣೆಯನ್ನು ಇನ್ನೂ 3 ತಿಂಗಳವರೆಗೆ ವಿಸ್ತರಿಸುವುದು; ಮೂಲ ಬಂಡವಾಳದ ಮೇಲಿನ ಬಡ್ಡಿಯನ್ನು ಬಡ್ಡಿಯ ಅವಧಿ ಸಾಲವಾಗಿ ಪರಿವರ್ತಿಸಲು ಅವಕಾಶ; ಕಾರ್ಪೊರೇಟ್ಗಳಿಗೆ ಹಣದ ಹರಿವನ್ನು ಹೆಚ್ಚಿಸಲು ಗುಂಪು ಮಾನ್ಯತೆ ಮಿತಿಯ ಹೆಚ್ಚಳ. ಕನ್ಸಾಲಿಡೇಟೆಡ್ ಸಿಂಕಿಂಗ್ ಫಂಡ್ನಿಂದ ಹೆಚ್ಚು ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. 2020-21ರಲ್ಲಿ ಜಿಡಿಪಿ ಬೆಳವಣಿಗೆಯು ನಕಾರಾತ್ಮಕವಾಗಿರಲಿದೆ ಎಂದು ಅಂದಾಜಿಸಲಾಗಿದೆ, 2020-21 ಎರಡನೇ ಅರ್ಧವಾರ್ಷಿಕದ ನಂತರ ಬೆಳವಣಿಗೆಯಲ್ಲಿ ಸ್ವಲ್ಪ ಉತ್ತೇಜನ ಕಾಣಬಹುದು ಎಂದು ಅವರು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626058

2020 ಏಪ್ರಿಲ್ 1 ರಿಂದ 26,242 ಕೋಟಿ ರೂ. ಮರು ಪಾವತಿ ಮಾಡಲಾಗಿದೆ

ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) 2020 ಏಪ್ರಿಲ್ 1 ರಿಂದ 2020 ಮೇ 21 ರವರೆಗೆ 26,242 ಕೋಟಿ ರೂ.ಗಳನ್ನು 16,84,298 ತೆರಿಗೆದಾರರಿಗೆ ಮರು ಪಾವತಿ ಮಾಡಿದೆ. 15,81,906 ತೆರಿಗೆದಾರರಿಗೆ 14,632 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು ಅವಧಿಯಲ್ಲಿ 1,02,392 ತೆರಿಗೆದಾರರಿಗೆ 11,610 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=16269051

ಮುಂಗಡ ಕಾಯ್ದಿರಿಸುವ ಕೌಂಟರ್ಗಳನ್ನು ಮತ್ತೆ ತೆರೆಯಲು ಮತ್ತು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಹಾಗೂ ಏಜೆಂಟರ ಮೂಲಕ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯಿಂದ ಹಸಿರು ನಿಶಾನೆ

ಭಾರತೀಯ ರೈಲ್ವೆಯು ಟಿಕೆಟ್ಗಳನ್ನು ಕಾಯ್ದಿರಿಸಲು ಹಂತಹಂತವಾಗಿ ಬುಕಿಂಗ್ ಕೌಂಟರ್ಗಳನ್ನು ತೆರೆಯಲಿದೆ. ಸ್ಥಳೀಯ ಅಗತ್ಯಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಕಾಯ್ದಿರಿಸುವ ಕೌಂಟರ್ಗಳನ್ನು ತೆರೆಯಲು ನಿರ್ಧರಿಸಲು ಮತ್ತು ಪ್ರಕಟಿಸಲು ವಲಯ ರೈಲ್ವೆಗೆ ಸೂಚನೆ ನೀಡಲಾಗಿದೆ. ಕಾಯ್ದಿರಿಸುವ ಕೌಂಟರ್ಗಳು ಸ್ಥಳೀಯ ಅಗತ್ಯಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಆಯಾ ಸ್ಥಳಗಳು ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದರೊಂದಿಗೆ ನಾಳೆಯಿಂದ ಹಂತ ಹಂತವಾಗಿ ತೆರೆಯುತ್ತವೆ. ಭಾರತೀಯ ರೈಲ್ವೆಯು ಶುಕ್ರವಾರದಿಂದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಟಿಕೆಟಿಂಗ್ ಏಜೆಂಟರ ಮೂಲಕ ಟಿಕೆಟ್ ಕಾಯ್ದಿರಿಸಲು ಅನುಮತಿ ನೀಡಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625992

ದಲ್ಲಾಳಿ ಚಟುವಟಿಕೆಯನ್ನು ಗುರುತಿಸಲು ಮತ್ತು ಹತ್ತಿಕ್ಕಲು ರೈಲ್ವೆ ಸುರಕ್ಷಾ ದಳ (ಆರ್ಪಿಎಫ್) ದಿಂದ ರಾಷ್ಟ್ರವ್ಯಾಪಿ ಪ್ರಯತ್ನ

ಭಾರತೀಯ ರೈಲ್ವೆಯು  2020 ಮೇ 12 ರಂದು 15 ಜೋಡಿ ಎಸಿ ವಿಶೇಷ ರೈಲುಗಳನ್ನು ಆರಂಭಿಸಿದೆ, 2020 ಜೂನ್ 01 ರಿಂದ 100 ಜೋಡಿ ಹೆಚ್ಚುವರಿ ರೈಲುಗಳನ್ನು ಪ್ರಕಟಿಸಿದೆ. ಇದರಿಂದಾಗಿ -ಟಿಕೆಟ್ಗಳ ದಲ್ಲಾಳಿಗಳು ಬಹು ವೈಯಕ್ತಿಕ ಗುರುತಿನ ಚೀಟಿಗಳನ್ನು ಬಳಸಿಕೊಂಡು ವಿಶೇಷ ರೈಲುಗಳ ಕಾಯ್ದಿರಿಸಿದ ಬರ್ತ್ ಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವ ಬಗ್ಗೆ ದೂರುಗಳು ಬರಲಾರಂಭಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಸುರಕ್ಷಾ ದಳವು ಇಂತಹ ಕೆಲಸಗಳನ್ನು ಗುರುತಿಸಲು ಮತ್ತು ಹತ್ತಿಕ್ಕಲು ರಾಷ್ಟ್ರವ್ಯಾಪಿ ಪ್ರಯತ್ನಗಳನ್ನು ಪ್ರಾರಂಭಿಸಿದೆ. ದಲ್ಲಾಳಿಗಳನ್ನು ಹತ್ತಿಕ್ಕಲು PRABAL ಮಾಡ್ಯೂಲ್ ಮೂಲಕ PRS ಡೇಟಾದ ವಿಶ್ಲೇಷಣೆಯನ್ನು ಬಳಸಲಾಗುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625862

ಪೈಪ್ಲೈನ್ ಯೋಜನೆಗಳಲ್ಲಿ ಆತ್ಮನಿರ್ಭರ ಭಾರತ್ ಗೆ ಪ್ರಾಧಾನ್ಯತೆ ನೀಡುವಂತೆ ಶ್ರೀ ಧರ್ಮೇಂದ್ರ ಪ್ರಧಾನ್ ಕರೆ

ಸುಮಾರು 8000 ಕೋಟಿ ರೂ. ಮೌಲ್ಯದ ಪೈಪ್ಲೈನ್ ಯೋಜನೆಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಗುರುವಾರ ಪರಿಶೀಲಿಸಿದರು. ಆತ್ಮನಿರ್ಭರ ಭಾರತ್ಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ, ತೈಲ ಮತ್ತು ಅನಿಲ ಕಂಪನಿಗಳು ಅನುಷ್ಠಾನಗೊಳಿಸುವ ಯೋಜನೆಗಳಲ್ಲಿ ಸಂಪೂರ್ಣ ದೇಶೀಕರಣಕ್ಕೆ ಸಚಿವರು ಕರೆ ನೀಡಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626031

ಆಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕುರಿತು ಪ್ರಧಾನಿಯವರಿಂದ ಭಾಷಣ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626042

ಭಾರತವು ಜೀವವೈವಿಧ್ಯತೆ ಸಂರಕ್ಷಣೆಯ ಅತ್ಯುತ್ತಮ ಅಭ್ಯಾಸಗಳು ಮತ್ತು ಅನುಭವಗಳನ್ನು ವಿಶ್ವದ ಇತರರೊಂದಿಗೆ ಹಂಚಿಕೊಳ್ಳಲಿದೆ: ಕೇಂದ್ರ ಪರಿಸರ ಸಚಿವರು

ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ 2020 ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಇಂದು ಜೀವವೈವಿಧ್ಯತೆಯ ಸಂರಕ್ಷಣೆಗಾಗಿ ಐದು ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು. ವರ್ಷದ ವಿಷಯ ನಮ್ಮ ಪರಿಹಾರಗಳು ಪ್ರಕೃತಿಯಲ್ಲಿವೆಬಗ್ಗೆ ಒತ್ತು ನೀಡಿದ ಶ್ರೀ ಜಾವಡೇಕರ್, ನಮ್ಮ ಪರಿಸರವನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ, ವಿಶೇಷವಾಗಿ ಕೋವಿಡ್-19 ಪ್ರಸ್ತುತ ಸಂದರ್ಭದಲ್ಲಿ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳು ಸೇರಿದಂತೆ ವಿವಿಧ ದುರಂತಗಳಿಂದ ನಮ್ಮನ್ನು ರಕ್ಷಿಸುತ್ತಿದೆ ಎಂದರು. ನಮ್ಮ ಬಳಕೆಯನ್ನು ಮಿತಿಗೊಳಿಸುವ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಅಗತ್ಯವನ್ನು ಪರಿಸರ ಸಚಿವರು ಒತ್ತಿ ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626054

ಯಾರೂ ಹಸಿವಿನಿಂದ ಬಳಲದಂತೆ ರಾಜ್ಯಗಳು ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು: ಶ್ರೀ ರಾಮ್ ವಿಲಾಸ್ ಪಾಸ್ವಾನ್

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಮತ್ತು ಆಹಾರ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಸಮಾವೇಶದಲ್ಲಿ ಪರಿಶೀಲನಾ ಸಭೆ ನಡೆಸಿದರು. ಯಾರೂ ಹಸಿವಿನಿಂದ ಬಳಲದಂತೆ ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಪಾಸ್ವಾನ್ ಹೇಳಿದರು. ‘ಆಂಫಾನ್ಚಂಡಮಾರುತದಿಂದ ಸಂತ್ರಸ್ತವಾಗಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಚಂಡಮಾರುತದಿಂದ ಹಾನಿಗೊಳಗಾದವರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದು ಸಚಿವರು ಒತ್ತಿ ಹೇಳಿದರು. ಎಫ್ಸಿಐ ಆಹಾರ ವಿತರಣೆಯ ಜೀವನಾಡಿಯಾಗಿ ಮಾರ್ಪಟ್ಟಿದೆ ಮತ್ತು ರಸ್ತೆ, ರೈಲು ಮತ್ತು ವಾಯು ಮಾರ್ಗದ ಮೂಲಕ ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ದೇಶಾದ್ಯಂತ ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳ ವಿತರಣೆಯನ್ನು ಸಚಿವರು ಪರಿಶೀಲಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626109

ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಡಾ.ಹರ್ಷವರ್ಧನ್ ಆಯ್ಕೆ

2020-21ನೇ ಸಾಲಿನ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಆಯ್ಕೆಯಾಗಿದ್ದಾರೆ. ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ಡಾ.ಹರ್ಷವರ್ಧನ್ ಅವರು, ಜಾಗತಿಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜೀವ ಕಳೆದುಕೊಂಡ ಲಕ್ಷಾಂತರ ಜನರಿಗೆ ಗೌರವ ಸಲ್ಲಿಸಿದರು. ಎಲ್ಲಾ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕೋವಿಡ್ ಯೋಧರ ಘನತೆ, ದೃಢತೆ ಮತ್ತು ಸಮರ್ಪಣೆಗೆ ಎದ್ದು ನಿಂತು ಗೌರವ ಸಲ್ಲಿಸುವಂತೆ ಅವರು ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಗಣ್ಯರಿಗೆ ವಿನಂತಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626111

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಕಾರ್ಯಸಾಧ್ಯತೆಯು ನಿರ್ಣಾಯಕವಾದುದು- ಶ್ರೀ ನಿತಿನ್ ಗಡ್ಕರಿ

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಕಾರ್ಯಸಾಧ್ಯತೆಯು ನಿರ್ಣಾಯಕವಾದುದು ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಸ್ಥೆಗಳು ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ತಮ್ಮ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬೇಕಾಗುತ್ತದೆ ಎಮದು ಅವರು ಹೇಳಿದ್ದಾರೆ. ಉನ್ನತ ಶಿಕ್ಷಣದ ಭವಿಷ್ಯದ ಕುರಿತು ಎಂಐಟಿ ಎಡಿಟಿ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿಶ್ವವಿದ್ಯಾಲಯಗಳ ಉನ್ನತೀಕರಣ ಅಗತ್ಯ ಮತ್ತು ಮೌಲ್ಯ ಆಧಾರಿತ ಶಿಕ್ಷಣ ಸಮಾಜದ ಶಕ್ತಿ ಎಂದು ಸಚಿವರು ಹೇಳಿದರು. ನಮ್ಮ ಯುವಕರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬಹುದು ಎಂದರು. ಹಂತದಲ್ಲಿ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವುದು ದೇಶಕ್ಕೆ ಪ್ರಮುಖವಾಗಿದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625827

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಮಾದರಿ ಪರೀಕ್ಷೆಗಳನ್ನು ತ್ವರಿತಗೊಳಿಸುವ ಕ್ರಮಗಳ ಬಗ್ಗೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಚರ್ಚೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಮಾದರಿ ಪರೀಕ್ಷಾ ವಿಧಾನವನ್ನು ತ್ವರಿತಗೊಳಿಸುವ ಕ್ರಮಗಳ ಬಗ್ಗೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಚರ್ಚೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಸ್ಕಿಮ್ಸ್ ಮುಖ್ಯಸ್ಥರು ಮತ್ತು ಬೋಧಕವರ್ಗದೊಂದಿಗಿನ ಸಭೆಯಲ್ಲಿ ಡಾ.ಜಿತೇಂದ್ರ ಸಿಂಗ್ ಅವರು ಕೊರೊನಾ ಮಾದರಿ ಪರೀಕ್ಷೆಯನ್ನು ಸಮಯಕ್ಕೆ ಸರಿಯಾಗಿ ಮಾಡಲು ಮತ್ತು ಯಾವುದೇ ಅನಗತ್ಯ ವಿಳಂಬ ಅಥವಾ ಅನಾನುಕೂಲತೆಗೆ ಒಳಗಾಗುವುದಿಲ್ಲ ಎಂಬ ಭರವಸೆಯ ಮೇಲೆ ತಮ್ಮ ಮಾದರಿಗಳನ್ನು ನೀಡುವಂತೆ ಜನರಿಗೆ ಧೈರ್ಯ ತುಂಬಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625854

ಭಾರತದ ಔಷಧ ಮತ್ತು ವೈದ್ಯಕೀಯ ಸಾಧನಗಳ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ  ಜಪಾನ್ ಕಂಪನಿಗಳಿಗೆ ಆಹ್ವಾನ

ಕೋವಿಡ್-19 ನಂತರದ ಸನ್ನಿವೇಶದಲ್ಲಿ ಭಾರತ ಮತ್ತು ಜಪಾನ್ ನಡುವಿನ ವ್ಯಾಪಾರ ಮತ್ತು ವ್ಯವಹಾರ ಸಹಯೋಗಕ್ಕಾಗಿವೈದ್ಯಕೀಯ ಸಾಧನಗಳು ಮತ್ತು ಎಪಿಐ ವಲಯ: ಸವಾಲುಗಳು ಮತ್ತು ಅವಕಾಶಗಳುಕುರಿತು 2020 ಮೇ 22 ರಂದು ಬೆಳಿಗ್ಗೆ 11.30 ಕ್ಕೆ ವೆಬಿನಾರ್ ನಡೆಯಿತು. ಟೋಕಿಯೊದ ಭಾರತದ ರಾಯಭಾರ ಕಚೇರಿಯು ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಸಹಯೋಗದಿಂದಿಗೆ ವೆಬಿನಾರ್ ಅನ್ನು ಆಯೋಜಿಸಿತ್ತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626121

ಕೋವಿಡ್19 ಪತ್ತೆಗಾಗಿ ಆರ್ಎನ್ ಎಕ್ಸಾಟ್ರ್ಯಾಕ್ಷನ್ ಕಿಟ್ ಅಗಾಪ್ಪೆ ಚಿತ್ರ ಮ್ಯಾಗ್ನಾದ ವಾಣಿಜ್ಯಿ ಬಳಕೆ ಆರಂಭ

ಕೋವಿಡ್-19 ವೈರಸ್ಗೆ ಅಗ್ಗದ, ವೇಗದ ಮತ್ತು ನಿಖರವಾದ ಪರೀಕ್ಷೆಯು ಅದರ ಹರಡುವಿಕೆಯನ್ನು ನಿಯಂತ್ರಿಸುವ ಮತ್ತು ಸೋಂಕಿತರಿಗೆ ಸೂಕ್ತವಾದ ಸಹಾಯವನ್ನು ನೀಡುವುದು ಬಹು ಮುಖ್ಯವಾಗಿದೆ. ಎಸ್ಸಿಟಿಐಎಂಎಸ್ಟಿ ಅಭಿವೃದ್ಧಿಪಡಿಸಿದ ಚಿತ್ರ ಮ್ಯಾಗ್ನಾವನ್ನು ಆರ್ಎನ್ ಎಕ್ಸಾಟ್ರ್ಯಾಕ್ಷನ್ ಕಿಟ್ನ್ನು ಏಪ್ರಿಲ್ 2020 ರಲ್ಲಿ ಅಗಾಪೆ ಡಯಾಗ್ನೋಸ್ಟಿಕ್ಸ್ಗೆ ವರ್ಗಾಯಿಸಲಾಗಿತ್ತು. ಈಗ ಅದು ಮಾರುಕಟ್ಟೆಯಲ್ಲಿ ಅಗಾಪ್ಪೆ ಚಿತ್ರ ಮ್ಯಾಗ್ನಾ ಆರ್ಎನ್ ಐಸೊಲೇಷನ್ ಕಿಟ್ ಆಗಿ ಲಭ್ಯವಿದೆ. ಕೋವಿಡ್ -19 ಆರ್ಎನ್ಎ ಪ್ರತ್ಯೇಕತೆಗಾಗಿ ಉತ್ಪನ್ನವನ್ನು ರಾಷ್ಟ್ರೀಯ ವೈರಾಣು ಸಂಸ್ಥೆಯು ಮಾನ್ಯ ಮಾಡಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625870

ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ

 

 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ 2,345 ಹೊಸ ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ರಾಜ್ಯದ ಕೋವಿಡ್ -19 ಸೋಂಕು ದೃಢಪಟ್ಟ ಪ್ರಕರಣಗಳು 41,642 ಕ್ಕೆ ತಲುಪಿದೆ. ರಾಜ್ಯದಲ್ಲಿ 28,454 ಸಕ್ರಿಯ ಪ್ರಕರಣಗಳಿದ್ದು, 11,726 ರೋಗಿಗಳು ಚೇತರಿಸಿಕೊಂಡಿದ್ದಾರೆ. ಹಾಟ್ ಸ್ಪಾಟ್ ಮುಂಬೈಯಿಂದ 1382 ಹೊಸ ಪ್ರಕರಣಗಳು ವರದಿಯಾಗಿವೆ, ನಗರದ ಒಟ್ಟು ಪ್ರಕರಣಗಳ ಸಂಖ್ಯೆ 25,500 ಕ್ಕೆ ತಲುಪಿದೆ. ಖಾಸಗಿ ಮತ್ತು ದತ್ತಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಮಹಾರಾಷ್ಟ್ರ ಸರ್ಕಾರ ಮೂರು ಹಂತದ ವೆಚ್ಚದ ದೈನಿಕ ವೆಚ್ಚದ ಯೋಜನೆ ಹೊರತಂದಿದೆ ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಶೇ .80 ರಷ್ಟು ಹಾಸಿಗೆಗಳ ಕಾರ್ಯಾಚರಣಾ ಸಾಮರ್ಥ್ಯದ ದರವನ್ನು ನಿಯಂತ್ರಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಇಂದು ಹೊರಡಿಸಿರುವ ಹೊಸ ಮಾರ್ಗಸೂಚಿಗಳು, ಶುಲ್ಕ ನಿಯಂತ್ರಣ ನಿರ್ಧಾರಗಳುಖಾಸಗಿ ಮತ್ತು ದತ್ತಿ ಆಸ್ಪತ್ರೆಗಳಲ್ಲಿನ ಪ್ರತ್ಯೇಕೀಕರಣ ಮತ್ತು ಪ್ರತ್ಯೇಕೀಕರಣವಲ್ಲದ ಹಾಸಿಗೆಗಳಿಗೂ ಅನ್ವಯಿಸುತ್ತದೆ.
 • ಗುಜರಾತ್: 371 ಹೊಸ ಸೋಂಕಿನ ಪ್ರಕರಣ ವರದಿಯಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 12,910 ಕ್ಕೆ ಏರಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 773 ಕ್ಕೆ ಏರಿದೆ. ಅಹಮದಾಬಾದ್‌ ನಲ್ಲಿ ಕೋವಿಡ್ -19 ಪ್ರಕರಣಗಳ ತೀವ್ರ ಏರಿಕೆ ಮುಂದುವರೆದಿದೆ. ನಗರದಲ್ಲಿ ಇಲ್ಲಿಯವರೆಗೆ 9,449 ಕರೋನಾ ವೈರಸ್ ಪ್ರಕರಣಗಳನ್ನು ವರದಿಯಾಗಿದೆ, ಇದು ಮುಂಬೈ ನಂತರ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ನಗರವಾಗಿದೆ.
 • ರಾಜಸ್ಥಾನ: ಮಧ್ಯಾಹ್ನ 2 ರವರೆಗೆ ಕೋವಿಡ್-19 ಸೋಂಕಿನ 150 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 6,377 ಕ್ಕೆ ಏರಿದೆ. 3562 ರೋಗಿಗಳು ಚೇತರಿಸಿಕೊಂಡಿದ್ದರೆ, ಅವರಲ್ಲಿ 3187 ರೋಗಿಗಳನ್ನು ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. 2 ತಿಂಗಳ ನಂತರ ಆಯ್ದ 55 ಮಾರ್ಗಗಳಲ್ಲಿ ರಾಜಸ್ಥಾನ್ ರಸ್ತೆಮಾರ್ಗದ ಬಸ್ಸುಗಳು ನಾಳೆಯಿಂದ ಚಲಿಸಲಿವೆ.
 • ಮಧ್ಯಪ್ರದೇಶ: ಕೋವಿಡ್ -19ರ 248 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳು 5,981 ಕ್ಕೆ ತಲುಪಿವೆ. ಈ ಹೊಸ ಸೋಂಕಿನ ಪ್ರಕರಣಗಳಲ್ಲಿ 59 ಹಾಟ್‌ ಸ್ಪಾಟ್ ಇಂದೋರ್‌ ನಿಂದ ಬಂದಿದ್ದರೆ, 61 ಪ್ರಕರಣಗಳು ಉಜ್ಜಯನಿಯಿಂದ ವರದಿಯಾಗಿದೆ. ಏಪ್ರಿಲ್ 1 ರಿಂದ, ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ 35.45 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಮನ್ರೇಗಾ ಅಡಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಅವರಲ್ಲಿ ಶೇ 42.2 ರಷ್ಟು ಮಹಿಳೆಯರು.
 • ಛತ್ತೀಸ್‌ಗಢ: 17 ಹೊಸ ಪ್ರಕರಣಗಳ ವರದಿಯಾಗುವುದರೊಂದಿಗೆ ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 132 ಕ್ಕೆ ಏರಿದೆ. ಲಾಕ್ ಡೌನ್ ಕಾರಣ ಇತರ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಈಗ ಛತ್ತೀಸಗಢಕ್ಕೆ ಮರಳುತ್ತಿದ್ದಾರೆ. ಹಿಂದಿರುಗಿದ ವಲಸಿಗರು ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಲಾದ ಕೇಂದ್ರಗಳಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ.
 • ಚಂಡೀಗಢ: ಕಂಟೈನ್ಮೆಂಟ್ ವಲಯಗಳಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಕೇಂದ್ರಾಡಳಿತ ಪ್ರದೇಶ.ಚಂಡೀಗಢದ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ನಿರ್ಗತಿಕ ಮತ್ತು ಅಗತ್ಯ ಇರುವ ವ್ಯಕ್ತಿಗಳಿಗೆ 69,088 ಬೇಯಿಸಿದ ಆಹಾರ ಪ್ಯಾಕೆಟ್‌ ಗಳನ್ನು ವಿತರಿಸಲಾಗಿದೆ ಮತ್ತು 2,94,592 ಜನರು ಚಂಡೀಗಢದ ಕೇಂದ್ರಾಡಳಿತ ಪ್ರದೇಶದಲ್ಲಿ ಆರೋಗ್ಯಸೇತು ಆ್ಯಪ್ ಡೌನ್‌ ಲೋಡ್ ಮಾಡಿಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
 • ಪಂಜಾಬ್: ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂದಿನ ಹಂತಕ್ಕೆ ಸಜ್ಜಾಗಿರುವ ಪಂಜಾಬ್ ಸರ್ಕಾರವು ಸುಮಾರು 22000 ಉದ್ಯೋಗಿಗಳನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಐಜಿಓಟಿ ವೇದಿಕೆಯಲ್ಲಿ ವಿವಿಧ ರೋಲ್-ನಿರ್ದಿಷ್ಟ ತರಬೇತಿ ಮಾಡ್ಯೂಲ್‌ ಗಳನ್ನು ಹೊಂದಿದೆ. ಆನ್‌ ಲೈನ್ ತರಬೇತಿ ಮಾಡ್ಯೂಲ್ ಅನ್ನು ನೋಂದಾಯಿಸುವ ಮತ್ತು ಪ್ರವೇಶಿಸುವ ಕೋರ್ಸ್ ವಿವರಗಳು ಮತ್ತು ಸಂಬಂಧಿತ ಸೂಚನೆಗಳನ್ನು ರಾಜ್ಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಮಂಡಳಿಗಳ ಮತ್ತು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ವಿತರಿಸಲಾಗಿದೆ, ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ರೋಲ್-ನಿರ್ದಿಷ್ಟ ಐಜಿಓಟಿ ತರಬೇತಿ ಪಡೆಯಲು https://igot.gov.in/igot/, ತರಬೇತಿ, ಕೇಂದ್ರ ಸಿಬ್ಬಂದಿ ಸಚಿವಾಲಯದ ಉಪಕ್ರಮವಾಗಿದೆ.
 • ಹರಿಯಾಣ: ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ 82 ಮಕ್ಕಳ ಸಂರಕ್ಷಣಾ ಸಂಸ್ಥೆಗಳಲ್ಲಿ ವಾಸಿಸುವ 2375 ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮತ್ತು ಅವಧಿಯಲ್ಲಿ ಅವರನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಂದಿದೆ. 'ಸುರಕ್ಷಿತವಾಗಿರೋಣ- ಕರೋನಾ ವಿರುದ್ಧ ಹೋರಾಡೋಣ' ('Safe Rahona- Fight Corona') ಶೀರ್ಷಿಕೆಯಡಿಯಲ್ಲಿ ವಿವಿಧ ಆನ್‌ ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೋವಿಡ್-19 ಅನ್ನು ತಡೆಗಟ್ಟಲು ಸಾಮಾಜಿಕ ಅಂತರ ನಿಯಮ ಪಾಲಿಸಲು, ಮಾಸ್ಕ್ ಧರಿಸಲು, ಸಾಬೂನು ಅಥವಾ ಸ್ಯಾನಿಟೈಜರ್‌ ನಿಂದ ಪದೇ ಪದೇ ಕೈ ಸ್ವಚ್ಛಗೊಳಿಸಲು ಮತ್ತು ಮಕ್ಕಳನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಲು ಎಲ್ಲಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
 • ಕೇರಳ: ಸೋಂಕು ಪೀಡಿತ ರಾಜ್ಯಗಳಿಂದ ಹಿಂದಿರುಗಿದವರಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿರುವುದರಿಂದ ರಾಜ್ಯ ಕೋವಿಡ್ ಪ್ರಮಾಣ ಹೆಚ್ಚುತ್ತಿದ್ದು, ಕೋವಿಡ್ 19 ರ ನಿಗಾ ವ್ಯವಸ್ಥೆಯನ್ನು ಕಠಿಣಗೊಳಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವರು ಹೇಳಿದ್ದಾರೆ. ದೇಶೀಯ ವಿಮಾನಗಳಲ್ಲಿ ಬರುವವರನ್ನು ಸಹ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಇಂದು ರಾಜ್ಯದ ಅನೇಕ ಭಾಗಗಳಲ್ಲಿ ಹೋಂ ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಉತ್ತೇಜಿಸಲಾಗಿದೆ. ಹೈದರಾಬಾದ್‌ ನ ಕಾಯಮ್‌ ಕುಲಂ ಮೂಲದವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಐವರು ಕೇರಳಿಗರಲ್ಲಿ ಕೋವಿಡ್ 19 ದೃಢಪಟ್ಟಿದೆ. ಗಲ್ಫ್‌ ನಿಂದ ಮೂರು ವಿಮಾನಗಳು ಇಂದು ತಡರಾತ್ರಿ ಬರಲಿವೆ. ನಿನ್ನೆ ರಾಜ್ಯದಲ್ಲಿ ಒಂದು ಸಾವು ಸಂಭವಿಸಿದ್ದು 24 ಹೊಸ ಸೋಂಕು ದೃಢಪಟ್ಟಿವೆ.
 • ತಮಿಳುನಾಡು ಮತ್ತು ಪುದುಚೇರಿ: ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟ ಬಳಿಕ ಪುದುಚೇರಿಯಲ್ಲಿ ಕೋವಿಡ್ ಪ್ರಕರಣಗಳು 19 ಕ್ಕೆ ಏರಿವೆ. ಚೆನ್ನೈ ಮತ್ತು ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಮೇ 23 ರಿಂದ ತಮಿಳುನಾಡಿನಾದ್ಯಂತ ಆಟೋರಿಕ್ಷಾಗಳನ್ನು ಓಡಿಸಲು ರಾಜ್ಯವು ಅವಕಾಶ ನೀಡಿದೆ. ರಾಜ್ಯ ಸರ್ಕಾರ ಸಾಂಕ್ರಾಮಿಕ ರೋಗದಿಂದಾಗಿ ಆದಾಯದಲ್ಲಿ ಭಾರಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭಾರಿ ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿನ್ನೆ 776 ಹೊಸ ಪ್ರಕರಣಗಳೊಂದಿಗೆ ತಮಿಳುನಾಡಿನಲ್ಲಿ ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳು 13,967 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು: 7588, ಸಾವು: 94, ಬಿಡುಗಡೆ: 6282, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5681.·
 • ಕರ್ನಾಟಕ: ಇಂದು ಮಧ್ಯಾಹ್ನ 12 ರವರೆಗೆ ರಾಜ್ಯದಲ್ಲಿ 105 ಹೊಸ ಪ್ರಕರಣಗಳು ವರದಿಯಾಗಿದ್ದು 17 ಜನರನ್ನು ಬಿಡುಗಡೆ ಮಾಡಲಾಗಿದೆ; ಒಟ್ಟು ಪ್ರಕರಣಗಳ ಸಂಖ್ಯೆ 1710 ಕ್ಕೆ ಏರಿದೆ. ಈಗ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 1080 ಮತ್ತು ಈವರೆಗೆ ಚೇತರಿಸಿಕೊಂಡವರು 588. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 41. ಮುಖ್ಯಮಂತ್ರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪರಿಶೀಲನಾ ಸಭೆ ನಡೆಸಿ ಮುಂಬರುವ 10 ನೇ ತರಗತಿ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ, ಪರೀಕ್ಷೆ 2020 ರ ಜೂನ್ 25 ರಿಂದ ಪ್ರಾರಂಭವಾಗಲಿದೆ.
 • ಆಂಧ್ರಪ್ರದೇಶ: ವಂದೇ ಭಾರತ್ ಅಭಿಯಾನದಡಿಯಲ್ಲಿ ಕುವೈತ್‌ ನಿಂದ 147 ಪ್ರಯಾಣಿಕರು ಮತ್ತು ಒಂದು ಶಿಶು ಇಂದು ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ದಕ್ಷಿಣ ಮಧ್ಯ ರೈಲ್ವೆ ಜೂನ್ 1 ರಿಂದ ಪ್ರಾರಂಭವಾಗುವ ರೈಲು ಸೇವೆಗಳಿಗಾಗಿ ಆಂಧ್ರದಲ್ಲಿ ಟಿಕೆಟ್ ನೀಡಲು 44 ಆನ್‌ ಲೈನ್ ಮೀಸಲಾತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ರಾಜ್ಯ ಮರುಪ್ರಾರಂಭದ ಪ್ಯಾಕೇಜಿನ ಭಾಗವಾಗಿ ಎಂಎಸ್‌.ಎಂಇಗಳಿಗೆ 1110 ಕೋಟಿ ರೂ. ಮಂಜೂರು ಮಾಡಿದೆ. ಕಳೆದ 24 ಗಂಟೆಗಳಲ್ಲಿ 62 ಹೊಸ ಪ್ರಕರಣಗಳು, ಒಂದು ಸಾವು ಮತ್ತು 51 ಬಿಡುಗಡೆಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 2514. ಸಕ್ರಿಯ: 728, ಚೇತರಿಸಿಕೊಂಡವರು: 1731, ಸಾವುಗಳು: 55. ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ 153 ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ 128 ಸಕ್ರಿಯವಾಗಿವೆ.
 • ತೆಲಂಗಾಣ: ತೆಲಂಗಾಣದ ವಾರಂಗಲ್ ಪಟ್ಟಣದ ಬಳಿಯ ಬಾವಿಯಲ್ಲಿ ಎಂಟು ವಲಸಿಗರು ಸೇರಿದಂತೆ ಒಂಬತ್ತು ಶವಗಳು ಶುಕ್ರವಾರ ಪತ್ತೆಯಾಗಿವೆ. ಮೃತರಲ್ಲಿ ಪಶ್ಚಿಮ ಬಂಗಾಳದ ವಲಸೆ ಕುಟುಂಬದ ಆರು ಸದಸ್ಯರು, ಬಿಹಾರದ ಇಬ್ಬರು ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿ ಸೇರಿದ್ದಾರೆ. 3 ಲಕ್ಷಕ್ಕೂ ಹೆಚ್ಚು ವಲಸಿಗರು ತಮ್ಮ ಸ್ಥಳೀಯ ರಾಜ್ಯಗಳಿಗೆ ಹಿಂತಿರುಗಲು ಆನ್‌ಲೈನ್‌ ನಲ್ಲಿ ಮತ್ತು ತೆಲಂಗಾಣ ಪೊಲೀಸರು ಮತ್ತು ಇತರ ಪ್ರಾಧಿಕಾರಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೇ 22 ರಂದು ತೆಲಂಗಾಣದಲ್ಲಿ ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳು 1699. ನಿನ್ನೆವರೆಗೆ 99 ವಲಸಿಗರಲ್ಲಿ ಸೋಂಕು ದೃಢಪಟ್ಟಿದೆ.
 • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ, ಏಪ್ರಿಲ್ 2020 ರಿಂದ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ರಾಜ್ಯದಲ್ಲಿ ಒಟ್ಟು 44209 ಉಚಿತ ಎಲ್ಪಿಜಿ ಸಿಲಿಂಡರ್ ಗಳನ್ನು ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಹಿಂದಿರುಗಿದವರನ್ನು ಗೊತ್ತುಪಡಿಸಿದ ಚೆಕ್ ಪಾಯಿಂಟ್‌ ಗಳಿಂದ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯುವ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳನ್ನು (ಚಾಲಕ ಮತ್ತು ಕಂಡಕ್ಟರ್‌ಗಳು) ಅರುಣಾಚಲ ರಾಜ್ಯ ಸಾರಿಗೆ ಇಲಾಖೆ ಕೋವಿಡ್ 19 ಮುಂಚೂಣಿ ಕಾರ್ಯಕರ್ತರು ಎಂದು ಘೋಷಿಸಿದೆ.
 • ಅಸ್ಸಾಂ: ಅಸ್ಸಾಂನಲ್ಲಿ, ತೇಜ್ಪುರ್ ಕ್ವಾರಂಟೈನ್ ಕೇಂದ್ರದ ಆರು ಜನರು ಕೋವಿಡ್ 19 ಪರೀಕ್ಷೆಯಲ್ಲಿ ಸೋಂಕಿತರೆಂದು ದೃಢವಾಗಿದೆ. ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳು ಈಗ 222 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
 • ಮಣಿಪುರ: ಮಣಿಪುರದಲ್ಲಿ ದೆಹಲಿಯಿಂದ ರಸ್ತೆ ಮೂಲಕ ಹಿಂದಿರುಗಿದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು ಈಗ 24. ಮಣಿಪುರ ರಾಜ್ಯ ಆರೋಗ್ಯ ಇಲಾಖೆಯು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿರುವ ಏಕೈಕ ಸಂಗ್ರಹ ಕಿಯೋಸ್ಕ್ ಅನ್ನು ಅವಲಂಬಿಸುವುದನ್ನು ತಪ್ಪಿಸಲು ಕ್ವಾರಂಟೈನ್ ಕೇಂದ್ರಗಳಿಂದ ಮುಕ್ತ ಸ್ಥಳಗಳಲ್ಲಿ ಮಾದರಿ ಸಂಗ್ರಹ ಪ್ರಾರಂಭಿಸಿದೆ.
 • ಮಿಜೋರಾಂ: ಕೋವಿಡ್ -19 ವಿರುದ್ಧ ಹೋರಾಡಲು ಸರಬರಾಜು ಮತ್ತು ಉಪಕರಣಗಳು ಇಂದು ಐಜ್ವಾಲ್‌ ನ ಲೆಂಗ್‌ಪುಯಿ ವಿಮಾನ ನಿಲ್ದಾಣಕ್ಕೆ ಬಂದಿವೆ.
 • ನಾಗಾಲ್ಯಾಂಡ್: ನಾಗಾಲ್ಯಾಂಡ್‌ ನಲ್ಲಿ, ಹೊರಗೆ ಸಿಲುಕಿದ್ದ ಸುಮಾರು 100 ಜನರು ರಾಜ್ಯಕ್ಕೆ ಬಂದಿದ್ದಾರೆ; ಎಲ್ಲರನ್ನೂ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ನಾಗಾಲ್ಯಾಂಡ್ ಯೋಜನಾ ಸಚಿವರು ಮರಳಿರುವವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಡ್ಡಿ ಪಡಿಸಿದರೆ ದಂಡ ತೆರಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
 • ಸಿಕ್ಕಿಂ: ಸಿಬಿಎಸ್‌.ಇ ಜುಲೈ 1, 2020 ರಿಂದ ಹನ್ನೆರಡನೇ ತರಗತಿಯ ಉಳಿದ ಪರೀಕ್ಷೆಗಳನ್ನು ನಡೆಸಲು ದಿನಾಂಕ ಪ್ರಕಟಿಸುತ್ತಿರುವುದರಿಂದ ರಾಜ್ಯ ಶಿಕ್ಷಣ ಇಲಾಖೆ ಸಿಕ್ಕಿಂನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತಿಸುತ್ತಿದೆ. ಸಿಕ್ಕಿಂ ರಾಜ್ಯಕ್ಕೆ ಮುಂದಿನ 3-4 ದಿನಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ಬೇರೆಡೆ ಸಿಲುಕಿರುವ ಸಿಕ್ಕಿಮಿಗರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಿಕ್ಕಿಂ ರಾಜ್ಯ ಪ್ರಾಧಿಕಾರಗಳು ತಪಾಸಣೆ ಮತ್ತು ಕ್ವಾರಂಟೈನ್ ಸೌಲಭ್ಯಗಳನ್ನು ಹೆಚ್ಚಿಸಿವೆ.

ಪಿ ಐ ಬಿ ವಾಸ್ತವ ಪರೀಶೀಲನೆ

***(Release ID: 1626260) Visitor Counter : 54