PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 21 MAY 2020 6:32PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್-19 ಕುರಿತು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ ಒಟ್ಟು 45,299 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,002 ರೋಗಿಗಳು ಗುಣಮುಖರಾಗಿದ್ದಾರೆ. ಚೇತರಿಕೆ ದರವು ನಿರಂತರವಾಗಿ ಸುಧಾರಿಸುತ್ತಿದೆ. ಈಗ ಅದು ಶೇ.40.32 ಆಗಿದೆ. ಭಾರತದಲ್ಲಿ ಪ್ರಸ್ತುತ 63,624 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ, ಅಂದಾಜು ಶೇ.2.94 ಪ್ರಕರಣಗಳು ಮಾತ್ರ  ಐಸಿಯುನಲ್ಲಿವೆ. ಭಾರತದಲ್ಲಿ ಮರಣ ಪ್ರಮಾಣವು ಶೇ.3.06 ಆಗಿದೆ. ಇದು ಜಾಗತಿಕ ಪ್ರಕರಣಗಳ ಮರಣ ಪ್ರಮಾಣವಾದ ಶೇ.6.65 ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಸಾವಿನ ಪ್ರಮಾಣವು ಪುರುಷರಲ್ಲಿ ಶೇ.64 ಮತ್ತು ಮಹಿಳೆಯರಲ್ಲಿ ಶೇ.36 ಇದೆ. ವಯೋಮಾನಕ್ಕೆ ಸಂಬಂಧಿಸಿದಂತೆ ಸಾವುಗಳಲ್ಲಿ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.0.5, 15-30 ವರ್ಷ ವಯಸ್ಸಿನವರಲ್ಲಿ ಶೇ.2.5, 30-45 ವರ್ಷ ವಯಸ್ಸಿನವರಲ್ಲಿ ಶೇ.11.4, 45-60 ವರ್ಷ ವಯಸ್ಸಿನವರಲ್ಲಿ ಶೇ.35.1 ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 50.5 ಇದೆ. ಇದಲ್ಲದೆ, ಶೇ.73 ರಷ್ಟು ಸಾವಿನ ಪ್ರಕರಣಗಳು ಇತರ ಅಸ್ವಸ್ಥತೆಗಳನ್ನು ಹೊಂದಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625744

ಕೋವಿಡ್-19 ಅಪ್ ಡೇಟ್-II

ಲಾಕ್ಡೌನ್ ಅವಧಿಯನ್ನು ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳಲಾಗಿದೆ. 21.05.2020 ರವರೆಗೆ 26,15,920 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಕಳೆದ 24 ಗಂಟೆಗಳಲ್ಲಿ 555 ಪ್ರಯೋಗಾಲಯಗಳ ಮೂಲಕ (391 ಸರ್ಕಾರಿ  ಮತ್ತು 164 ಖಾಸಗಿ ಪ್ರಯೋಗಾಲಯಗಳು) 103532 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾರತದ ಜನರಲ್ಲಿ SARS-CoV-2 ಸೋಂಕಿನ ಹರಡುವಿಕೆಯನ್ನು ಅಂದಾಜು ಮಾಡಲು ಐಸಿಎಂಆರ್ ಸಮುದಾಯ ಆಧಾರಿತ ಸಿರೊ-ಸಮೀಕ್ಷೆಯನ್ನು ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಪ್ರಯತ್ನದೊಂದಿಗೆ, 3027 ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 650930 ಕೋವಿಡ್ ಆರೈಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ಪ್ರತ್ಯೇಕ ಕೋವಿಡ್  ಆಸ್ಪತ್ರೆಗಳು ಮತ್ತು ಕೋವಿಡ್  ಆರೋಗ್ಯ ಕೇಂದ್ರಗಳಲ್ಲಿ 2.81 ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳು, 31,250 ಲಕ್ಷಕ್ಕೂ ಹೆಚ್ಚು ಐಸಿಯು ಹಾಸಿಗೆಗಳು ಮತ್ತು 109888 ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ. ಅಲ್ಲದೆ, ಭಾರತ ಸರ್ಕಾರವು 65.0 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಮತ್ತು 101.07 ಲಕ್ಷ ಎನ್ 95 ಮುಖಗವಸುಗಳನ್ನು ರಾಜ್ಯಗಳಿಗೆ ಪೂರೈಸಿದೆ. ದೇಶದಲ್ಲಿ ದಿನವೊಂದಕ್ಕೆ ಸುಮಾರು 3 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳು ಮತ್ತು 3 ಲಕ್ಷ ಎನ್ 95 ಮುಖಗವಸುಗಳನ್ನು ದೇಶೀಯ ಉತ್ಪಾದಕರು ತಯಾರಿಸುತ್ತಿದ್ದಾರೆ. ಮೊದಲು ದೇಶದಲ್ಲಿ ಇವುಗಳ ಉತ್ಪಾದನೆಯೇ ಇರಲಿಲ್ಲ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625819

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಅರೋಗ್ಯ ಯೋಜನೆಯಡಿ ಒಂದು ಕೋಟಿ ಚಿಕಿತ್ಸೆಗಳು

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ), ಭಾರತ ಸರ್ಕಾರದ ಪ್ರಮುಖ ಆರೋಗ್ಯ ಭರವಸೆಯ ಯೋಜನೆಯಾಗಿದ್ದು, ಇಂದು ಒಂದು ಕೋಟಿ ಚಿಕಿತ್ಸೆಯನ್ನುಪೂರೈಸಿದೆ. ಮೈಲಿಗಲ್ಲನ್ನು ದಾಟಿದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಸಾರ್ವಜನಿಕ ಆರೋಗ್ಯದ ವಿಷಯಗಳ ಕುರಿತು ಚರ್ಚಿಸಲು ಮುಕ್ತ ವೇದಿಕೆಯ ವೆಬಿನಾರ್ಗಳ ಸರಣಿ ಆರೋಗ್ಯ ಧಾರ ಮೊದಲ ಆವೃತ್ತಿಯನ್ನು ಉದ್ಘಾಟಿಸಿದರು. ಕೋವಿಡ್-19 ಸಂಕಷ್ಟ ಕಾಲದಲ್ಲಿ ಯೋಜನೆಯು ತನ್ನ ಉದ್ದೇಶವನ್ನು ಪೂರೈಸುವುದನ್ನು ಖಚಿತಪಡಿಸಿಕೊಂಡಿರುವ ಎಲ್ಲಾ ರಾಜ್ಯಗಳಿಗೆ ಸಚಿವರು ತಮ್ಮ ಶುಭಾಶಯಗಳನ್ನು ಮತ್ತು ಕೃತಜ್ಞತೆಯನ್ನು ತಿಳಿಸಿದರು. "ಆಯುಷ್ಮಾನ್ ಭಾರತ್ ಪಿಎಂಜೆಎಯ ಎಲ್ಲಾ 53 ಕೋಟಿ ಫಲಾನುಭವಿಗಳಿಗೆ ಕೋವಿಡ್-19 ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಭಾರತ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ, ಇದು ಭಾರತ ಸರ್ಕಾರದ ಸಂಕಲ್ಪ, ವ್ಯಾಪ್ತಿ ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯತ್ತ ಸಾಗುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರು ಮತ್ತು ಯೋಜನೆಯ ಪಟ್ಟಿಯಲ್ಲಿರುವ ಎಲ್ಲಾ ಆಸ್ಪತ್ರೆಗಳು ಮಾಡಿರುವ ಪ್ರಯತ್ನಗಳು ಒಂದು ಕೋಟಿ ಸಂಖ್ಯೆಯನ್ನು ಸಾಧಿಸಲು ನಮಗೆ ಸಹಾಯ ಮಾಡಿವೆಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625833

1 ಜೂನ್, 2020 ರಿಂದ ರೈಲು ಸೇವೆಗಳಿಗೆ ಮಾರ್ಗಸೂಚಿಗಳು

ಅನುಬಂಧದಲ್ಲಿ ತಿಳಿಸಿರುವಂತೆ ಭಾರತೀಯ ರೈಲ್ವೆಯು 200 ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆಯನ್ನು ಆರಂಭಿಸಲಿದೆ. ರೈಲುಗಳು 1/6/2020 ರಿಂದ ಓಡುತ್ತವೆ ಮತ್ತು ಎಲ್ಲಾ ರೈಲುಗಳ ಬುಕಿಂಗ್ 21/05/20 ರಂದು ಬೆಳಿಗ್ಗೆ 10 ರಿಂದ ಪ್ರಾರಂಭವಾಗಿವೆ. ವಿಶೇಷ ರೈಲು ಸೇವೆಗಳು ಮೇ 01 ರಿಂದ ಸಂಚರಿಸುತ್ತಿರುವ ಶ್ರಮಿಕ್ ವಿಶೇಷ ರೈಲುಗಳು ಮತ್ತು 12 ಮೇ 2020 ರಿಂದ ಸಂಚರಿಸುತ್ತಿರುವ ವಿಶೇಷ ಎಸಿ ರೈಲುಗಳಿಗೆ (30 ರೈಲುಗಳು) ಹೆಚ್ಚುವರಿಯಾಗಿವೆ. ಎಲ್ಲಾ ಮೇಲ್ / ಎಕ್ಸ್ಪ್ರೆಸ್, ಪ್ಯಾಸೆಂಜರ್ ಮತ್ತು ಉಪನಗರ ಸೇವೆಗಳು ಸೇರಿದಂತೆ ಇತರ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳು ಮುಂದಿನ ಸೂಚನೆಯವರೆಗೂ ರದ್ದಾಗಿರುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625585

ಭಾರತದಾದ್ಯಂತ ಸಿಲುಕಿರುವ ಜನರಿಗೆ ದೇಶೀಯ ವಿಮಾನಯಾನಕ್ಕೆ ಅನುಕೂಲ ಕಲ್ಪಿಸಲು ಗೃಹ ಸಚಿವಾಲಯ ಲಾಕ್ಡೌನ್ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಿದೆ

ಭಾರತದಲ್ಲಿ ಸಿಲುಕಿರುವ ವ್ಯಕ್ತಿಗಳ ದೇಶೀಯ ವಿಮಾನಯಾನಕ್ಕೆ ಅನುಕೂಲ ಕಲ್ಪಿಸಲು ಕೋವಿಡ್ -19 ವಿರುದ್ಧ ಹೋರಾಟದ ಲಾಕ್ಡೌನ್ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ (ಎಂಎಚ್) ತಿದ್ದುಪಡಿ ಮಾಡಿದೆ. ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತು ಪ್ರಯಾಣಿಕರ ವಿಮಾನ ಪ್ರಯಾಣದ ವಿವರವಾದ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಹೊರಡಿಸುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625578

6.8 ಕೋಟಿ ಉಚಿತ ಅಡುಗೆ ಅನಿಲ ಸಿಲಿಂಡರ್ಗಳನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ವಿತರಿಸಲಾಗಿದೆ

ಕೋವಿಡ್-19 ಆರ್ಥಿಕ ಸ್ಪಂದನೆಯ ಭಾಗವಾಗಿ, ಭಾರತ ಸರ್ಕಾರವುಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್”(ಪಿಎಂಜಿಕೆಪಿ) ಎಂಬ ಬಡವರ ಪರವಾದ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯಡಿಯಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 8 ಕೋಟಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 1.4.2020 ರಿಂದ 3 ತಿಂಗಳವರೆಗೆ ಉಚಿತವಾಗಿ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ಗಳನ್ನು ಒದಗಿಸುತ್ತಿದೆ. ಏಪ್ರಿಲ್, 2020 ರಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಪಿಎಂಜಿಕೆಪಿ ಅಡಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 453.02 ಲಕ್ಷ ಸಿಲಿಂಡರ್ಗಳನ್ನು ವಿತರಿಸಿವೆ. 20.5.20 ರವರೆಗೆ, ಒಎಂಸಿಗಳು ಒಟ್ಟು 679.92 ಸಿಲಿಂಡರ್ಗಳನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ಯಾಕೇಜ್ ಅಡಿಯಲ್ಲಿ ತಲುಪಿಸಿವೆ. ಫಲಾನುಭವಿಗಳ ಖಾತೆಗಳಿಗೆ ನೇರ ಹಣ ವರ್ಗಾವಣೆ  (ಡಿಬಿಟಿ) ಮೂಲಕ ಮುಂಚಿತವಾಗಿಯೇ ಹಣವನ್ನು ನೀಡಲಾಗಿತ್ತು, ಇದರಿಂದಾಗಿ ಸೌಲಭ್ಯವನ್ನು ಪಡೆಯಲು ಅವರಿಗೆ ಯಾವುದೇ ತೊಂದರೆಗಳಾಗಿಲ್ಲ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625736

ಉದ್ಯಮದ ಮೇಲೆ ಸರ್ಕಾರಕ್ಕೆ ಸಂಪೂರ್ಣ ಮತ್ತು ಸಮಗ್ರವಾದ ವಿಶ್ವಾಸವಿದೆ: ಸಿಐಐ ಜೊತೆ ಸಂವಾದದಲ್ಲಿ ಹಣಕಾಸು ಸಚಿವರು

ಸರ್ಕಾರವು ಉದ್ಯಮವನ್ನು ಸಂಪೂರ್ಣವಾಗಿ ಮತ್ತು ಸಮಗ್ರವಾಗಿ ನಂಬುತ್ತದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೆಚ್ಚು ವೃತ್ತಿಪರ ವಿಧಾನಗಳು ಮತ್ತು ಕೌಶಲ್ಯ ವಿಧಾನಗಳ ಮೂಲಕ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ಅವರು ಉದ್ಯಮಕ್ಕೆ ಒತ್ತಾಯಿಸಿದರು. " ಎಲ್ಲರಿಗೂ ಸ್ವೀಕಾರಾರ್ಹವಾದ ರೀತಿಯಲ್ಲಿ ಕಾರ್ಮಿಕರನ್ನು ನಿಭಾಯಿಸುವ ಮಾದರಿಗಳನ್ನು ಉದ್ಯಮದಲ್ಲಿರುವ ಮನಸ್ಥಿತಿಯು ರೂಪಿಸಬೇಕಾಗಿದೆ" ಎಂದು ಹಣಕಾಸು ಸಚಿವರು ಹೇಳಿದರು. ಎಂಎಸ್ಎಂಇ ವಲಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಮತಿ ಸೀತಾರಾಮನ್, ಕೋವಿಡ್-19 ಕ್ಕೂ ಮೊದಲೇ, ಗ್ರಾಮೀಣ ಪ್ರದೇಶದ ಉದ್ಯಮಗಳಿಗೆ ಸಹಾಯ ಮಾಡಲು ಎಂಎಸ್ಎಂಇ ಮತ್ತು ಎನ್ಬಿಎಫ್ಸಿಗಳಿಗೆ ಸ್ಪಷ್ಟವಾದ ಬೆಂಬಲ ಘೋಷಿಸಲಾಗಿದೆ ಎಂದು ಹೇಳಿದರು. ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುವುದನ್ನು ತಪ್ಪಿಸಲು ಸರ್ಕಾರವು ಬ್ಯಾಂಕುಗಳಿಗೆ ಗ್ಯಾರಂಟಿ ನೀಡಿರುವುದರಿಂದ ಹೆಚ್ಚುವರಿ ಅವಧಿ ಸಾಲ ಮತ್ತು ಮೂಲ ಬಂಡವಾಳ ಸಾಲ ಲಭ್ಯತೆಯು ಎಲ್ಲಾ ಎಂಎಸ್ಎಂಇಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು. "ಲಾಕ್ಡೌನ್ನಂತರದಲ್ಲಿ ವಿಶೇಷ ಉದ್ದೇಶ ವಾಹಕದೊಂದಿಗೆ ಸರ್ಕಾರವು ಸಂಪೂರ್ಣ ಮತ್ತು ಭಾಗಶಃ ಖಾತರಿಗಳನ್ನು ಒದಗಿಸುವ ಮೂಲಕ, ಬ್ಯಾಂಕುಗಳ ಹಿಂಜರಿಕೆಯನ್ನು ಪರಿಹರಿಸಲಾಗಿದೆ" ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625500

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಂದ ನಾಳೆ ದೇಶದ ಸಮುದಾಯ ರೇಡಿಯೋಗಳನ್ನು ಉದ್ದೇಶಿಸಿ ಭಾಷಣ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು 2020 ಮೇ 22 ರಂದು ಸಂಜೆ 7 ಗಂಟೆಗೆ ದೇಶದ ಸಮುದಾಯ ರೇಡಿಯೊಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾಷಣವನ್ನು ದೇಶದ ಎಲ್ಲಾ ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರಸಾರ ಮಾಡಲಾಗುವುದು. ಮಾತುಕತೆಯು ಹಿಂದಿ ಮತ್ತು ಇಂಗ್ಲಿಷ್ ವಿಭಾಗಗಳಲ್ಲಿ ಪ್ರಸಾರವಾಗಲಿದೆ. ಎಫ್ಎಂ ಗೋಲ್ಡ್ (100.1 ಮೆಗಾಹರ್ಟ್) ನಲ್ಲೂ ಸಂಜೆ 7: 30 ಕ್ಕೆ ಹಿಂದಿಯಲ್ಲಿ ಮತ್ತು  ರಾತ್ರಿ 9: 10 ಕ್ಕೆ ಇಂಗ್ಲಿಷ್ನಲ್ಲಿ ಇದನ್ನು ಕೇಳಬಹುದು. ಕೋವಿಡ್ ಸಂಬಂಧಿತ ಸಂವಹನಕ್ಕಾಗಿ ದೇಶದ ಎಲ್ಲಾ ವಿಭಾಗಗಳನ್ನು ತಲುಪಲು ಸರ್ಕಾರ ಶ್ರಮಿಸುತ್ತಿದೆ. ದೇಶದಲ್ಲಿ ಸುಮಾರು 290 ಸಮುದಾಯ ರೇಡಿಯೋ ಕೇಂದ್ರಗಳಿವೆ. ಭಾರತದ ಮೂಲೆ ಮೂಲೆಗಳಲ್ಲಿರುವ ಜನರನ್ನು ತಲುಪಲು ಅವುಗಳ ಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಮಾತುಕತೆ ನಡೆಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625761

ಮಾನವ ಸಂಪನ್ಮೂಲ ಸಚಿವಾಲಯದಿಂದ ಜವಾಹರ್ ನವೋದಯ ವಿದ್ಯಾಲಯದ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ

ಲಾಕ್ಡೌನ್ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 173 ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ತಂಗಿದ್ದ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಳಾಂತರವನ್ನು ನವೋದಯ ವಿದ್ಯಾಲಯ ಸಮಿತಿಯು 2020 ಮೇ 15 ರಂದು  ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಹೇಳಿದ್ದಾರೆ. ಜವಾಹರ್ ನವೋದಯ ವಿದ್ಯಾಲಯಗಳು ಸಹ-ಶೈಕ್ಷಣಿಕ ವಸತಿ ಶಾಲೆಗಳಾಗಿವೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625743

82 ಸ್ನಾತಕ ಮತ್ತು 42 ಸ್ನಾತಕೋತ್ತರ ಎಂಜಿನಿಯರಿಂಗೇತರ ಎಂಒಒಸಿಗಳನ್ನು ಜುಲೈ 2020 ಸೆಮಿಸ್ಟರ್ ನ್ನು SWAYAM ನಲ್ಲಿ ನೀಡಲಾಗುವುದು

ವಿಶ್ವವಿದ್ಯಾನಿಲಯಗಳು ಮತ್ತು ಅಂಗಸಂಸ್ಥೆಯ ಕಾಲೇಜುಗಳಿಗೆ ದಾಖಲಾದ ವಿದ್ಯಾರ್ಥಿಗಳು SWAYAM ಕೋರ್ಸ್ಗಳನ್ನು ಕೈಗೊಳ್ಳಬಹುದು ಮತ್ತು ಆನ್ಲೈನ್ ಕಲಿಕಾ ಕೋರ್ಸ್ಗಳನ್ನು ಕುರಿತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪ್ರಸ್ತುತ ನಿಯಮಗಳ ಪ್ರಕಾರ ಕೋರ್ಸ್ಗಳನ್ನು ಪೂರ್ಣಗೊಳಿಸಬಹುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಅವರು ಮಾಹಿತಿ ನೀಡಿದರು.  ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು, ಜೀವಮಾನವಿಡೀ ಕಲಿಯುವವರು, ಹಿರಿಯ ನಾಗರಿಕರು ಮತ್ತು ಗೃಹಿಣಿಯರು ತಮ್ಮ ಕಲಿಕೆಯ ಪರಿಧಿಯನ್ನು ವಿಸ್ತರಿಸಲು SWAYAM ಕೋರ್ಸ್ಗಳಿಗೆ ದಾಖಲಾಗಿ ಅದರ ಪ್ರಯೋಜನಗಳನ್ನು ದಾಖಲಿಸಬಹುದು ಎಂದು ಸಚಿವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625826

ಸಿಬಿಎಸ್ ವಿದ್ಯಾರ್ಥಿಗಳಿಗಾಗಿ  ಸಿದ್ಧಪಡಿಸಿರುವ ಸೈಬರ್ಸುರಕ್ಷತೆ, 21 ನೇ ಶತಮಾನದ ಕೌಶಲ್ಯ ಮತ್ತು ಪ್ರಾಂಶುಪಾಲರ ಕೈಪಿಡಿಗಳನ್ನು ಬಿಡುಗಡೆ ಮಾಡಿದ ಮಾನವ ಸಂಪನ್ಮೂಲ ಸಚಿವರು

ಮೌಲ್ಯಾಧಾರಿತ ಶಿಕ್ಷಣದ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಮಂಡಳಿಯು ಕೈಗೊಂಡ ಕ್ರಮಗಳ ಕುರಿತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಸಿದ್ಧಪಡಿಸಿದ ಮೂರು ಕೈಪಿಡಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಮೂರು ಕಿರುಪುಸ್ತಕಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಕೈಪಿಡಿ 'ಸೈಬರ್ ಸುರಕ್ಷತೆ-ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಕೈಪಿಡಿ' ಸಿದ್ಧಪಡಿಸಲಾಗಿದೆ ಎಂದರು. ಅಂತರ್ಜಾಲ ಮತ್ತು ಇತರ ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಆಗಾಗ್ಗೆ ಬಳಸುವ ಹದಿಹರೆಯದವರಿಗೆ ಕಿರುಹೊತ್ತಗೆ ಸೂಕ್ತ ಮಾರ್ಗದರ್ಶಿಯಾಗಲಿದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625457

ಗರ್ಭಿಣಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಚೇರಿ ಹಾಜರಾತಿಗೆ ವಿನಾಯಿತಿ ನೀಡಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಗರ್ಭಿಣಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಚೇರಿ ಹಾಜರಾತಿಗೆ ವಿನಾಯಿತಿ ನೀಡಿದೆ. ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ ಮತ್ತು ಇದನ್ನು ವಿವಿಧ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯ / ಕೇಂದ್ರಾಡಳಿತ ಸರ್ಕಾರಗಳು ಅನುಸರಿಸುತ್ತವೆ. ಈಗಾಗಲೇ ಮಾತೃತ್ವ ರಜೆಯಲ್ಲಿಲ್ಲದ ಗರ್ಭಿಣಿ ಮಹಿಳಾ ಉದ್ಯೋಗಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ. ವಿಕಲಚೇತನರಿಗೆ ಕಚೇರಿಗೆ ಹಾಜರಾಗುವುದರಿಂದ ಇದೇ ರೀತಿಯ ವಿನಾಯಿತಿ ನೀಡಬೇಕು. ಲಾಕ್ಡೌನ್ಗೆ ಮುಂಚಿತವಾಗಿ ಸಹ-ಅಸ್ವಸ್ಥತೆಗಳನ್ನು ಹೊಂದಿರುವ ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ನೌಕರರು, ವೈದ್ಯರ ಸಲಹಾ ಚೀಟಿಯನ್ನು ನೀಡುವ ಮೂಲಕ ಸಿಜಿಎಚ್ಎಸ್/ಸಿಎಸ್ (ಎಂಎ) ನಿಯಮಗಳ ಪ್ರಕಾರ ವಿನಾಯಿತಿ ಪಡೆಯಬಹುದು ಎಂದು ಡಿಒಪಿಟಿ ಬಿಡುಗಡೆ ಮಾಡಿದ ಇತ್ತೀಚಿನ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625529

ಕೋವಿಡ್-19 ರಿಂದಾಗಿ ರಕ್ಷಣಾ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ: ರಕ್ಷಣಾ ಸಚಿವರು

ಜಾಗತಿಕ ಕೊರೊನಾವೈರಸ್ (ಸಿಒವಿಐಡಿ -19) ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರದ ಹೋರಾಟದಲ್ಲಿ ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಡಿಎಂ) ಮತ್ತು ಇತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ವಹಿಸಿರುವ ಪಾತ್ರವನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಜಿಡಿಪಿ ಬೆಳವಣಿಗೆಯನ್ನು ವೇಗಗೊಳಿಸುವ, ರಫ್ತು ಮೂಲಕ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸುವ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಎಂಎಸ್ಎಂಇಗಳು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿವೆ, ಎಂಎಸ್ಎಂಇಗಳನ್ನು ಸದೃಢವಾಗಿಡುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. “8,000 ಕ್ಕೂ ಹೆಚ್ಚು ಎಂಎಸ್ಎಂಇಗಳು ಆರ್ಡನೆನ್ಸ್ ಕಾರ್ಖಾನೆಗಳು, ಡಿಪಿಎಸ್ಯುಗಳು ಮತ್ತು ಸೇವಾ ಸಂಸ್ಥೆಗಳಂತಹ ನಮ್ಮ ಅನೇಕ ಸಂಸ್ಥೆಗಳ ಪಾಲುದಾರರು. ಸಂಸ್ಥೆಗಳ ಒಟ್ಟು ಉತ್ಪಾದನೆಯಲ್ಲಿ ಎಂಎಸ್ಎಂಇಗಳು ಶೇಕಡಾ 20 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿವೆ. ” ಎಂದು ಅವರು  ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625732

ಜೂನ್ 5 ಸಭೆಯ ನಂತರ ಯುಪಿಎಸ್ಸಿಯು ಪರೀಕ್ಷೆಗಳ ಹೊಸ ವೇಳಾಪಟ್ಟಿ ಪ್ರಕಟಿಸಲಿದೆ

ಕೋವಿಡ್-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ನ ಮೂರನೇ ಹಂತದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಲೋಕಸೇವಾ ಆಯೋಗವು ವಿಶೇಷ ಸಭೆ ನಡೆಸಿತು. ಹಲವಾರು ನಿರ್ಬಂಧಗಳ ವಿಸ್ತರಣೆಯನ್ನು ಗಮನಿಸಿದ ಆಯೋಗವು ಸದ್ಯಕ್ಕೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿತು. ಆದಾಗ್ಯೂ, ಆಯೋಗವು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯಗಳು ಘೋಷಿಸುತ್ತಿರುವ ಸಡಿಲಿಕೆಗಳನ್ನು ಗಮನಿಸಿ, ನಾಲ್ಕನೇ ಅವಧಿಯ ಲಾಕ್ಡೌನ್ ನಂತರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ನಿರ್ಧರಿಸಿದೆ. ಕಳೆದ ಎರಡು ತಿಂಗಳುಗಳಿಂದ ಮುಂದೂಡಲ್ಪಟ್ಟಿರುವ ವಿವಿಧ ಪರೀಕ್ಷೆಗಳು ಮತ್ತು ಸಂದರ್ಶನಗಳ ಅಭ್ಯರ್ಥಿಗಳಿಗೆ ಸ್ಪಷ್ಟತೆ ನೀಡುವ ಉದ್ದೇಶದಿಂದ, ಆಯೋಗವು 2020 ಜೂನ್ 5 ರಂದು ನಡೆಯಲಿರುವ ತನ್ನ ಮುಂದಿನ ಸಭೆಯಲ್ಲಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625485

ಲೋಕಲ್ ಟು ಗ್ಲೋಬಲ್: ವಿದೇಶಿ ಮಾರುಕಟ್ಟೆಗಳಿಗೆ ಖಾದಿ ಮುಖಗವಸುಗಳು

ವ್ಯಾಪಕವಾಗಿ ಜನಪ್ರಿಯವಾಗಿರುವ ಖಾದಿ ಮುಖಗವಸುಜಾಗತಿಕಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ಖಾದಿ ಹತ್ತಿ ಮತ್ತು ರೇಷ್ಮೆಯ ಮುಖಗವಸುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಸಾಧ್ಯತೆಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಈಗ ಅನ್ವೇಷಿಸುತ್ತಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಲೋಕಲ್ ಟು ಗ್ಲೋಬಲ್ಕರೆಆತ್ಮನಿರ್ಭರ್ ಭಾರತ್ ಅಭಿಯಾನ್ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಖಗವಸುಗಳ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆವಿಐಸಿ ಕ್ರಮವಾಗಿ ಎರಡು ಮಡಿಕೆ ಮತ್ತು ಮೂರು ಮಡಿಕೆಯ ಹತ್ತಿ ಮತ್ತು ರೇಷ್ಮೆ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದೆ. ಕೆವಿಐಸಿ ಇದುವರೆಗೆ 8 ಲಕ್ಷ ಮುಖಗವಸುಗಳನ್ನು ಪೂರೈಸಲು ಆದೇಶಗಳನ್ನು ಸ್ವೀಕರಿಸಿದೆ ಮತ್ತು ಲಾಕ್ಡೌನ್ ಅವಧಿಯಲ್ಲಿ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಮುಖಗವಸುಗಳನ್ನು ಪೂರೈಸಿದೆ. ಮಾರಾಟದ ಹೊರತಾಗಿ, ದೇಶಾದ್ಯಂತ ಖಾದಿ ಸಂಸ್ಥೆಗಳಿಂದ 7.5 ಲಕ್ಷಕ್ಕೂ ಹೆಚ್ಚು ಖಾದಿ ಮುಖಗವಸುಗಳನ್ನು ಜಿಲ್ಲಾಡಳಿತಗಳಿಗೆ ಉಚಿತವಾಗಿ ವಿತರಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625755

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ಕೋವಿಡ್ ದತ್ತಾಂಶಗಳ ವಿಶ್ಲೇಷಣೆಗಾಗಿ ಅಮೇರಿಕ ಮೂಲದ ದೊಡ್ಡ ದತ್ತಾಂಶ ಕಂಪನಿ ಸ್ಪ್ರಿಂಕ್ಲರ್ ಜೊತೆಗಿನ ವಿವಾದಾತ್ಮಕ ಒಪ್ಪಂದ ಕೈಬಿಡಲಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೈಕೋರ್ಟ್ಗೆ ಮಾಹಿತಿ ನೀಡಿದೆ. ಎಲ್ಲಾ ದತ್ತಾಂಶವನ್ನು ಸರ್ಕಾರಿ ಸ್ವಾಮ್ಯದ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಇಮೇಜಿಂಗ್ ಟೆಕ್ನಾಲಜಿ (ಸಿ-ಡಿಐಟಿ) ಗೆ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ. ಇನ್ನೂ ಇಬ್ಬರು ಕೇರಳಿಗರು ಕೊಲ್ಲಿ ವಲಯದಲ್ಲಿ ಕೋವಿಡ್ -19 ಗೆ ಬಲಿಯಾಗಿದ್ದಾರೆ; ಅವರಲ್ಲಿ ಒಬ್ಬರು ಆರೋಗ್ಯ ವೃತ್ತಿಪರರಾಗಿದ್ದಾರೆ. ಮುಂಬೈಯಲ್ಲಿ ಇತರ ಇಬ್ಬರು ಮಲಯಾಳಿಗಳು ಜೀವ ಕಳೆದುಕೊಂಡಿದ್ದಾರೆ. ವಂದೇ ಭಾರತ್ 2 ನೇ ಹಂತದ ಅಭಿಯಾನದ ಭಾಗವಾಗಿ ಇಂದು ಮೂರು ವಿಮಾನಗಳು ರಾಜ್ಯಕ್ಕೆ ಆಗಮಿಸಲಿವೆ. ಕೊಲ್ಲಿಯಿಂದ ಬಂದವರೂ ಸೇರಿದಂತೆ ಕೇರಳದ ಕೋವಿಡ್ ಪ್ರಕರಣಗಳು 12 ದಿನಗಳಲ್ಲಿ 16 ರಿಂದ 161 ಕ್ಕೆ ಹತ್ತು ಪಟ್ಟು ಹೆಚ್ಚಾಗಿದೆ.
  • ತಮಿಳುನಾಡು: ವಲಸೆ ಕಾರ್ಮಿಕರು ಮನೆಗೆ ತೆರಳುವುದರಿಂದ ಎಂಎಸ್‌.ಎಂಇ ವಲಯ ಮತ್ತು ನಿರ್ಮಾಣ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿವೆ. ಚೆಂಗಲ್ಪಟ್ಟು ಆಡಳಿತದ ಮ್ಯಾಪ್ ಕರೋನ ವೈರಸ್ ರೋಗಿಗಳ ವಿವರಗಳನ್ನು ನೀಡುತ್ತಿದೆ; ಶಿಷ್ಟಾಚಾರದ ಪ್ರಕಾರ, ಹೆಸರನ್ನು ಮಾತ್ರ ಬಹಿರಂಗಪಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ತಮಿಳುನಾಡಿನಲ್ಲಿ 743 ಹೊಸ ಪ್ರಕರಣಗಳು ದಾಖಲಾಗಿದ್ದು, 13,000 ಗಡಿದಾಟಿದೆ. ಸಕ್ರಿಯ ಪ್ರಕರಣಗಳು: 7219, ಸಾವು: 87, ಡಿಸ್ಚಾರ್ಜ್ ಮಾಡಲಾಗಿದೆ: 5882. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು ಮೇ 20 ವೇಳೆಗೆ 5345 ಆಗಿದೆ.
  • ಕರ್ನಾಟಕ: ರಾಜ್ಯದಲ್ಲಿ ಇಂದು ಮಧ್ಯಾಹ್ನ 12 ರವರೆಗೆ 116 ಹೊಸ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ; ಒಟ್ಟು ಪ್ರಕರಣಗಳ ಸಂಖ್ಯೆ 1578 ಕ್ಕೆ ಏರಿದೆ. ಇಂದು 14 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇಲ್ಲಿಯವರೆಗೆ 570 ಜನರು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 41. ಸಕ್ರಿಯ ಪ್ರಕರಣಗಳು 966. ರಾಜ್ಯವು ಪ್ರಸ್ತುತ ಪಿಪಿಇ ಕಿಟ್ಗಳನ್ನು ಉತ್ಪಾದಿಸುವ 22 ಘಟಕಗಳನ್ನು ಹೊಂದಿದೆ ಮತ್ತು ವೆಂಟಿಲೇಟರ್ಗಳನ್ನು ತಯಾರಿಸುವ 4 ಕಂಪನಿಗಳನ್ನು ಹೊಂದಿದೆ. ಚೀನಾದ ಕೈಗಾರಿಕೋದ್ಯಮಿಗಳು ಇತರ ದೇಶಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದರಿಂದ, ವಾರದ ಆಧಾರದ ಮೇಲೆ ಹೊಸ ಹೂಡಿಕೆಗಳ ಮೇಲ್ವಿಚಾರಣೆಗೆ ವಿಶೇಷ ಕಾರ್ಯಪಡೆಯ ಚಟುವಟಿಕೆಗಳ ಅವಲೋಕನ ಮಾಡಲು ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
  • ಆಂಧ್ರಪ್ರದೇಶ: ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ರಾಜ್ಯವು ಬಸ್ ಸೇವೆಗಳನ್ನು ಪ್ರಾರಂಭಿಸಿದೆ ಮತ್ತು ನಗರ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ಸಂಸ್ಥೆಗಳ ಕಾರ್ಯಾಚರಣೆಗೆ ಮಾರ್ಗಸೂಚಿಗಳನ್ನು ನೀಡಿದೆ. ಇತರ ರಾಜ್ಯಗಳಿಗೆ ಸೇರಿದ 61,781 ಜನರು ತಮ್ಮ ರಾಜ್ಯಗಳಿಗೆ ಹಿಂತಿರುಗಲು ಅನುಕೂಲ ಮಾಡಿಕೊಟ್ಟಿದೆ. 8092 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 45 ಹೊಸ ಪ್ರಕರಣಗಳು ವರದಿಯಾಗಿದ್ದರೆ, 41 ಮಂದಿ ಬಿಡುಗಡೆ ಆಗಿದ್ದಾರೆ. ಒಟ್ಟು ಪ್ರಕರಣಗಳು: 2452. ಸಕ್ರಿಯ: 718, ಗುಣವಾದವರು: 1680, ಸಾವು: 54. ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ 153 ಜನರಲ್ಲಿ ಸೋಂಕು ದೃಢವಾಗಿದೆ. 128 ಸಕ್ರಿಯ ಪ್ರಕರಣಗಳಿವೆ.
  • ತೆಲಂಗಾಣ: ಅಂಗಡಿಗಳನ್ನು ತೆರೆಯಲು ರೂಪಿಸಲಾದ ಸಮ ಬೆಸ ಯೋಜನೆ ಇನ್ನೂ ಕಗ್ಗಂಟಾಗಿದೆ; ಹೈದರಾಬಾದ್ ನಲ್ಲಿನ ಅಂಗಡಿ ಮಾಲೀಕರಿಗೆ ಬಾಡಿಗೆಯದೇ ದೊಡ್ಡ ಚಿಂತೆಯಾಗಿದೆ. ಬೃಹತ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ 45 ಬಸ್ತಿ ದವಾಖಾನೆಗಳ ಉದ್ಘಾಟನೆಯ ಮೇಲ್ವಿಚಾರಣೆ ಮತ್ತು ಸಂಯೋಜನೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಮೇ 21 ರಂತೆ ತೆಲಂಗಾಣದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳು 1661. ನಿನ್ನೆವರೆಗೆ ವಲಸಿಗರಲ್ಲಿ 89 ಜನರಲ್ಲಿ ಸೋಂಕು ದೃಢವಾಗಿದೆ.
  • ಚಂಡೀಗಢ: ಇತ್ತೀಚೆಗೆ ತಮ್ಮ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿರುವ ವ್ಯಾಪಾರಿಗಳ ಸಂಘಗಳು, ಮಾರುಕಟ್ಟೆ ಸಂಘಗಳು ಮತ್ತು ಅಂಗಡಿ ಮಾಲೀಕರಿಗೆ, ಸರಿಯಾದ ರೀತಿಯಲ್ಲಿ ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಗ್ರಾಹಕರು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಆಡಳಿತಾಧಿಕಾರಿ ಮನವಿ ಮಾಡಿದ್ದಾರೆ. ಕರೋನಾ ವೈರಾಣು ಹೊಂದಿರುವವರ ಪ್ರವೇಶವನ್ನು ತಡೆಗಟ್ಟಲು ಅಂತರ-ರಾಜ್ಯ ಗಡಿಗಳಲ್ಲಿ ತಪಾಸಣೆಯಲ್ಲಿ ಯಾವುದೇ ಸಡಿಲಿಕೆ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
  • ಪಂಜಾಬ್: ವಿದೇಶದಿಂದ ವಿಶೇಷ ವಿಮಾನಗಳಲ್ಲಿ ಹಿಂತಿರುಗುತ್ತಿರುವ ಪಂಜಾಬಿಗಳು ರಾಜ್ಯದ ಆಯಾ ಜಿಲ್ಲೆಗಳಿಗೆ ಮರಳಲು ನೆರವಾಗಲು ಪಂಜಾಬ್ ಸರ್ಕಾರವು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದೆ. ಸಂಬಂಧಪಟ್ಟ ಜಿಲ್ಲೆಗಳಲ್ಲಿನ ಹೋಟೆಲ್ಗಳಲ್ಲಿ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲು ವ್ಯವಸ್ಥೆ ಮಾಡಲಾಗಿದೆ, ಮತ್ತು ಹೋಟೆಲ್ಗಳ ವೆಚ್ಚವನ್ನು ಭರಿಸಲಾಗದ ವಿದ್ಯಾರ್ಥಿಗಳಿಗೆ ಅಥವಾ ವಲಸಿಗರಿಗೆ ಉಚಿತ ಕ್ವಾರಂಟೈನ್ ಮಾಡಲಾಗಿದೆ. ಎಸ್..ಎಸ್. ನಗರ ಜಿಲ್ಲಾಡಳಿತ (ಪಂಜಾಬ್) ಐಎಂಎ, ಮೊಹಾಲಿ ಸಹಯೋಗದೊಂದಿಗೆ ಜನರಿಗೆ ಪ್ರತ್ಯೇಕೀಕರಣ ಮತ್ತು ಕ್ವಾರಂಟೈನ್ ನಲ್ಲಿರುವ ಜನರೊಂದಿಗೆ ಸಮಾಲೋಚನೆ ಮತ್ತು ಮಾನಸಿಕ ಬೆಂಬಲ ನೀಡಲು ಸಹಾಯವಾಣಿಯನ್ನು ಪ್ರಾರಂಭಿಸಿದೆ. ಜನರು ತಮ್ಮ ಭಾವನೆಗಳನ್ನು, ಆತಂಕ, ಖಿನ್ನತೆ ಮತ್ತು ದುಃಖವನ್ನು ಪ್ರಮುಖ ವೈದ್ಯರು ಮತ್ತು ಕ್ಷೇತ್ರ ತಜ್ಞರೊಂದಿಗೆ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
  • ಹರಿಯಾಣ: ತಮ್ಮ ತವರಿಗೆ ತೆರಳಲು ಇಚ್ಛಿಸುವ ವಲಸೆ ಕಾರ್ಮಿಕರನ್ನು ಕಳುಹಿಸಲು ಹರಿಯಾಣ ಸರ್ಕಾರ ಬದ್ಧವಾಗಿದೆ. ಯಾವುದೇ ವಲಸೆ ಕಾರ್ಮಿಕ ಅಥವಾ ಕೆಲಸಗಾರರು ಆತನ / ಆಕೆಯ ತವರು ರಾಜ್ಯಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಲು ರೈಲುಗಳು ಮತ್ತು ಬಸ್ಸುಗಳ ಸಂಪೂರ್ಣ ವೆಚ್ಚವನ್ನು ಹರಿಯಾಣ ಸರ್ಕಾರ ಭರಿಸಲಿದೆ. ವಲಸೆ ಕಾರ್ಮಿಕರನ್ನು ಪರಿಹಾರ ಕೇಂದ್ರಗಳಲ್ಲಿ ಇರಿಸಲು ಮತ್ತು ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಗೆ ಕರೆತರಲು ರಾಜ್ಯ ಸರ್ಕಾರವು ಉಚಿತ ವ್ಯವಸ್ಥೆ ಮಾಡುತ್ತಿದೆ.
  • ಹಿಮಾಚಲ ಪ್ರದೇಶ: ಲಾಕ್ಡೌನ್ನಲ್ಲಿ ಸಿಲುಕಿರುವ ವಲಸಿಗರಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಅಥವಾ ರಾಜ್ಯ ಯೋಜನೆಯಲ್ಲಿ ಯಾವುದೇ ಪಡಿತರ ಚೀಟಿ ಇಲ್ಲದಿದ್ದರೂ ಸಹ ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಯೋಜನೆಯಡಿ 2020 ಮೇ ಮತ್ತು ಜೂನ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂ ಅಕ್ಕಿ ಮತ್ತು ಕಲಾ ಚನ್ನಾ ನೀಡಲಾಗುವುದು. ಅವರು ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು, ಮೇಯರ್, ಉಪ ಮೇಯರ್, ಕೌನ್ಸಿಲರ್ ಅಥವಾ ಗೆಜೆಟೆಡ್ ಅಧಿಕಾರಿ ಸಹಿ ಮಾಡಿರುವ ಅರ್ಜಿ ನಮೂನೆಯನ್ನು ಅಂಗಡಿಯವರಿಗೆ ವಿವರಗಳೊಂದಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯನ್ನು ಜಿಲ್ಲಾಧಿಕಾರಿಗಳು ಅಥವಾ ಆಹಾರ ಪೂರೈಕೆ ಇನ್ಸ್ ಪೆಕ್ಟರ್ ಅಥವಾ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯಬಹುದು.
  • ಅರುಣಾಚಲ ಪ್ರದೇಶ: ಕರ್ನಾಟಕದಲ್ಲಿ ಸಿಲುಕಿದ್ದ 209 ಅರುಣಾಚಲದ ವಿದ್ಯಾರ್ಥಿಗಳು ಗುವಾಹಟಿಯನ್ನು ತಲುಪಿದ್ದಾರೆ. ಅವರನ್ನು ರಸ್ತೆ ಮೂಲಕ ಇಟಾನಗರಕ್ಕೆ ಕರೆದೊಯ್ಯಲಾಗುವುದು.
  • ಅಸ್ಸಾಂ: ಆರು ರೋಗಿಗಳಿಗೆ ಎರಡು ಬಾರಿ ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ದೃಢವಾದ ಬಳಿಕ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 130.
  • ಮಣಿಪುರ: ಮಣಿಪುರದಲ್ಲಿ, ಮರಳಿದ ಎಲ್ಲರಿಂದ ವ್ಯವಸ್ಥಿತ ಮಾದರಿ ಸಂಗ್ರಹ ನಡೆಯುತ್ತಿದೆ. ಉಕ್ರುಲ್ನಲ್ಲಿ ಒಟ್ಟು 139 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸರ್ಕಾರಿ ಐಡಿಯಲ್ ಬ್ಲೈಂಡ್ ಶಾಲೆಯಲ್ಲಿ ತೃತೀಯ ಲಿಂಗಿಗಳಿಗೆ ಕ್ಯಾರೆಂಟೈನ್ ಕೇಂದ್ರ ತೆರೆಯಲಾಗಿದೆ, ಟಕಿಯಲ್ಪಾಟ್ ಈಗ ಇತರ ರಾಜ್ಯಗಳಿಂದ ಬರುವ ತೃತೀಯ ಲಿಂಗಿಗಳನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ.
  • ಮೇಘಾಲಯ: ಕೋವಿಡ್ -19 ಪರಿಹಾರ ಕ್ರಮಗಳಿಗಾಗಿ ಇಲ್ಲಿಯವರೆಗೆ 69 ಕೋಟಿ ರೂ. ಖರ್ಚು ಮಾಡಲಾಗಿದೆ ಮತ್ತು ಕಳೆದ 2 ತಿಂಗಳಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳ ಸುಧಾರಣೆಗೆ 46 ಕೋಟಿ ರೂ. ಖರ್ಚು ಮಾಡಲಾಗಿದೆ: ಮೇಘಾಲಯ ಮುಖ್ಯಮಂತ್ರಿ.
  • ಮಿಜೋರಾಂ: ಸಿಹಾ ಜಿಲ್ಲೆಯ ಗ್ರಾಮಸ್ಥರು, ಮಿಜೋರಾಂನ ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳು ಮತ್ತು ಕಷ್ಟಪಟ್ಟು ಸಂಗ್ರಹಿಸಿದ ಅರಣ್ಯ ಉತ್ಪನ್ನಗಳನ್ನು ಸಿಹಾ ಪಟ್ಟಣದ ಕ್ವಾರಂಟೈನ್ ಸೌಲಭ್ಯಗಳ ಪಾಕಶಾಲೆ ನಿರ್ವಹಣಾ ಸಮಿತಿಗಳಿಗೆ ದಾನ ಮಾಡಿದ್ದಾರೆ.
  • ನಾಗಾಲ್ಯಾಂಡ್: ಪಶ್ಚಿಮ ಸುಮಿ ಸಂಸ್ಥೆಗಳು ಮರಳಿದ 200 ಜನರಿಗೆ ಪ್ರಾಯೋಜಕತ್ವ ನೀಡಲು ನಿರ್ಧರಿಸಿದೆ, ಥಾಬೆಕು ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗುವುದು.
  • ಮಹಾರಾಷ್ಟ್ರ: 2250 ಹೊಸ ಪ್ರಕರಣಗಳು ವರದಿಯಾಗಿದ್ದು, ಮೂಲಕ ರಾಜ್ಯದಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳ ಸಂಖ್ಯೆ 39,297 ಕ್ಕೆ ಏರಿದೆ. ಆದಾಗ್ಯೂ, ಇತ್ತೀಚಿನ ವರದಿಯ ಪ್ರಕಾರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 27,581 ಆಗಿದೆ. ಹಾಟ್ ಸ್ಪಾಟ್ ಮುಂಬೈನಲ್ಲಿ 1372 ಹೊಸ ಪ್ರಕರಣಗಳನ್ನು ವರದಿಯಾಗಿವೆ, ಒಟ್ಟು ವರದಿಯಾದ ಪ್ರಕರಣಗಳು 23,935 ಕ್ಕೆ ತಲುಪಿದೆ. ಮುಂಬೈನಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಬೈನ ಎಲ್ಲಾ 24 ವಾರ್ಡ್ಗಳಲ್ಲಿ ಐಸಿಯುಗಳಲ್ಲಿ 10 ಸೇರಿದಂತೆ ಕನಿಷ್ಠ 100 ಹಾಸಿಗೆಗಳನ್ನು, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಮತ್ತು ಸಣ್ಣ ಆಸ್ಪತ್ರೆಗಳಲ್ಲಿ ಸ್ವಾಧೀನಪಡಿಸಿಕೊಳ್ಳಲು ಬಿಎಂಸಿ ನಾಗರಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
  • ಗುಜರಾತ್: ಹೊಸದಾಗಿ 398 ಪ್ರಕರಣಗಳು ಮತ್ತು 30 ಸಾವುಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 12,539 ಕ್ಕೆ ಏರಿದೆ. ಪ್ರಸ್ತುತ ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ 6,571 ರೋಗಿಗಳು ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಪೈಕಿ 47 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.ನಾನು ಕೂಡ ಕರೋನಾ ವಾರಿಯರ್ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾರ್ವಜನಿಕರ ಬೆಂಬಲ ಕೋರಿದ್ದಾರೆ. ಕರೋನ ವೈರಸ್ ವಿರುದ್ಧ ಹೋರಾಡಲು ಮೂರು ಮೂಲಭೂತ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಾರ ಪೂರ್ತಿ ನಡೆಯುವ ಅಭಿಯಾನದಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಮನೆಯಲ್ಲೇ ಇರಬೇಕು, ಮಾಸ್ಕ್ ಇಲ್ಲದೆ ಹೊರಹೋಗಬಾರದು ಮತ್ತು ಯಾವಾಗಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
  • ರಾಜಸ್ಥಾನ: ರಾಜ್ಯದಲ್ಲಿ ಇಂದು 83 ಜನರಲ್ಲಿ ಕೋವಿಡ್ – 19 ಸೋಂಕು ದೃಢಪಟ್ಟಿದೆ. ಒಟ್ಟು ಪೀಡಿತ ಜನರ ಸಂಖ್ಯೆ 6098 ಕ್ಕೆ ಏರಿದೆ. ಇದುವರೆಗೆ 3421 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚಿಕಿತ್ಸೆಯಲ್ಲಿರುವವರ ಸಂಖ್ಯೆ 2527 ಆಗಿದೆ.
  • ಮಧ್ಯಪ್ರದೇಶ: 227 ಹೊಸ ಪ್ರಕರಣಗಳು ವರದಿಯಾಗಿದ್ದು, ಕೋವಿಡ್ -19 ರೋಗಿಗಳ ಸಂಖ್ಯೆಯನ್ನು 5875 ಕ್ಕೆ ಏರಿಸಿದೆ. ಇಂದೋರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು- 2774 ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ಸಾವಿನ ಸಂಖ್ಯೆ ಮಧ್ಯಪ್ರದೇಶದಲ್ಲಿ 267 ಕ್ಕೆ ಏರಿದೆ. ಇಂದೋರ್ನಲ್ಲಿ ಗರಿಷ್ಠ 107 ರೋಗಿಗಳು ಸಾವನ್ನಪ್ಪಿದ್ದಾರೆ.
  • ಚಂಢೀಗಢ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 14 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 115 ಆಗಿದೆ.
  • ಗೋವಾ: 4 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಇದು ಸೋಂಕಿತ ರೋಗಿಗಳ ಸಂಖ್ಯೆಯನ್ನು 50 ಕ್ಕೆ ಹೆಚ್ಚಿಸಿದೆ. ಇಬ್ಬರು ಹೊಸ ರೋಗಿಗಳು ಭಾನುವಾರ ರಾಜಧಾನಿ ಎಕ್ಸ್ಪ್ರೆಸ್ನಿಂದ ಆಗಮಿಸಿದ್ದಾರೆ, ಪುಣೆಯಿಂದ ಬಸ್ನಲ್ಲಿ ಒಬ್ಬ ವ್ಯಕ್ತಿ ಮತ್ತು ನಾಲ್ಕನೇ ರೋಗಿಯು ಕರಾವಳಿ ಸಿಬ್ಬಂದಿಯಾಗಿದ್ದು ಅವರು ಹಡಗಿನ ಮೂಲಕ ಬಂದಿದ್ದಾರೆ.

***


(Release ID: 1625877) Visitor Counter : 404