PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 20 MAY 2020 6:46PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್:

ಜಾಗತಿಕವಾಗಿರುವ ಪ್ರತಿ ಲಕ್ಷಕ್ಕೆ 62.3 ಕೋವಿಡ್-19 ಪ್ರಕರಣಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಕೇವಲ 7.9 ಪ್ರಕರಣಗಳಿವೆ; ಚೇತರಿಕೆಯ ದರ ಶೇ.39.6 ಕ್ಕೆ ಸುಧಾರಿಸಿದೆ

ಭಾರತವು ಕೋವಿಡ್-19 ರ ವೇಗವನ್ನು ಕಡಿಮೆ ಮಾಡಲು ಸಮರ್ಥವಾಗಿದೆ. ಕೋವಿಡ್-19 ಪ್ರಕರಣಗಳ ದತ್ತಾಂಶಗಳಲ್ಲಿ ಇದರ ಪರಿಣಾಮವನ್ನು ಕಾಣಬಹುದಾಗಿದೆ. ಜಾಗತಿಕ ಮಟ್ಟದಲ್ಲಿ, ಪ್ರತಿ ಲಕ್ಷಕ್ಕೆ 62.3 ಪ್ರಕರಣಗಳಿವೆ, ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಇನ್ನೂ ಕೇವಲ 7.9 ಪ್ರಕರಣಗಳು ಇವೆ. ಅಂತೆಯೇ, ಪ್ರತಿ ಲಕ್ಷ ಜನಸಂಖ್ಯೆಗೆ ಮರಣ ಪ್ರಮಾಣವು, ಜಾಗತಿಕ ಸರಾಸರಿ ದರ 4.2 ಆಗಿದ್ದರೆ, ಭಾರತದಲ್ಲಿ 0.2 ರಷ್ಟಿದೆ. ತುಲನಾತ್ಮಕವಾಗಿ ಕಡಿಮೆಯಿರುವ ಸಾವಿನ ಅಂಕಿಅಂಶಗಳು ಸಮಯೋಚಿತವಾದ ಪ್ರಕರಣ ಗುರುತಿಸುವಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯನ್ನು ಹೇಳುತ್ತವೆ. ದೃಢಪಟ್ಟ ಪ್ರಕರಣಗಳ ಪೈಕಿ 42,298 ಮಂದಿ ಗುಣಮುಖರಾಗಿದ್ದು ಚೇತರಿಕೆಯ ದರ ಶೇ.39.6 ಕ್ಕೆ ಏರಿದೆ. ಇದರಿಂದ ರೋಗವನ್ನು ಗುಣಪಡಿಸಬಹುದಾಗಿದೆ ಮತ್ತು ಭಾರತವು ಅಳವಡಿಸಿಕೊಂಡ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳು ಪರಿಣಾಮಕಾರಿಯಾಗಿವೆ ಎಂಬುದನ್ನು ಸಾಬೀತುಪಡಿಸಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625480

ನ್ಯಾಮ್ ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದ ಡಾಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು, ಅಲಿಪ್ತ ಚಳವಳಿ (ಎನ್‌ಎಎಂ) ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿರುವ ಸಾಂಕ್ರಾಮಿಕ ರೋಗವನ್ನು ಅಂತರರಾಷ್ಟ್ರೀಯ ಸಮುದಾಯವು ಎದುರಿಸುತ್ತಿರುವ ಸಮಯದಲ್ಲಿ ನ್ಯಾಮ್ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಕೋವಿಡ್-19 ರಿಂದ ಉಂಟಾಗಿರುವ ಜಾಗತಿಕ ಭೀತಿಯ ಬಗ್ಗೆ NAM ತನ್ನ ಕಳವಳವನ್ನು ವ್ಯಕ್ತಪಡಿಸಿತು ಮತ್ತು ಸೂಕ್ತ ಸಿದ್ಧತೆ, ತಡೆಗಟ್ಟುವಿಕೆ, ಸ್ಥಿತಿಸ್ಥಾಪಕತ್ವ ನಿರ್ಮಾಣ ಮತ್ತು ಹೆಚ್ಚಿನ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಹಯೋಗದೊಂದಿಗೆ ಸಾಂಕ್ರಾಮಿಕದ ವಿರುದ್ದ ಹೋರಾಡಲು ನಿರ್ಧರಿಸಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625462

ಅಸ್ತಿತ್ವದಲ್ಲಿರುವ ಭಾಗಶಃ ಸಾಲ ಖಾತ್ರಿ ಯೋಜನೆಯ ಮಾರ್ಪಾಡುಗಳಿಗೆ ಸಂಪುಟದ ಅನುಮೋದನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, AA ಮತ್ತು ಅದಕ್ಕಿಂತ ಕಡಿಮೆ ರೇಟಿಂಗ್‌ನೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ಎನ್‌ಬಿಎಫ್‌ಸಿ / ಎಂಎಫ್‌ಸಿ / ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್‌ಐ) ನೀಡುವ / ಬಾಂಡ್‌ಗಳು ಅಥವಾ ವಾಣಿಜ್ಯ ಪತ್ರಗಳ (ಸಿಪಿಗಳು) ಖರೀದಿಯ ಮೊದಲ ನಷ್ಟದ ಶೇ.20 ವರೆಗಿನ ಸಾರ್ವಭೌಮ ಬಂಡವಾಳ ಖಾತರಿಯನ್ನು ಭಾಗಶಃ ಸಾಲ ಖಾತ್ರಿ ಯೋಜನೆ (ಪಿಸಿಜಿಎಸ್) ವಿಸ್ತರಣೆಯ ಮೂಲಕ ಅನುಮೋದಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625321

"ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ (ಎಫ್ಎಂಇ) ವಿಧ್ಯುಕ್ತ ಯೋಜನೆ" ಗೆ ಸಂಪುಟದ ಅಂಗೀಕಾರ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, " ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ ವಿಧ್ಯುಕ್ತ ಯೋಜನೆ" (ಎಫ್‌ಎಂಇ) ಎಂಬ 10,000 ಕೋಟಿ ರೂ.ಗಳ ಹೊಸ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗೆ ಅನುಮೋದನೆ ನೀಡಿದೆ. ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625320

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ವಿಸ್ತರಣೆಗೆ ಸಚಿವ ಸಂಪುಟದ ಅನುಮೋದನೆ

2020 ರ ಮಾರ್ಚ್ 31 ರ ನಂತರದ ಮೂರು ವರ್ಷಗಳ ಅವಧಿಗೆ 2023 ರ ಮಾರ್ಚ್ 31 ರವರೆಗೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ) ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪಿಎಂವಿವಿವೈ ಖರೀದಿ ಬೆಲೆ / ಚಂದಾದಾರಿಕೆ ಮೊತ್ತದ ಮೇಲಿನ ಖಚಿತ ಲಾಭದ ಆಧಾರದ ಮೇಲೆ ಕನಿಷ್ಠ ಪಿಂಚಣಿ ಭರವಸೆ ನೀಡುವ ಹಿರಿಯ ನಾಗರಿಕರಿಗಾಗಿ ಇರುವ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದು ಆರಂಭದಲ್ಲಿ 2020-21ನೇ ಸಾಲಿಗೆ ವಾರ್ಷಿಕ ಶೇ.7.40 ರಷ್ಟು ಆದಾಯ ದರಕ್ಕೆ ಅನುಮತಿ ನೀಡಿದೆ. ನಂತರ ಪ್ರತಿ ವರ್ಷ ಇದನ್ನು ಮರುಹೊಂದಿಸಲು ಅವಕಾಶ ಮಾಡಿಕೊಡಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625318

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಸಂಪುಟದ ಅನುಮೋದನೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯನ್ನು ತರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. ಕೇಂದ್ರ ವಲಯ ಯೋಜನೆ (ಸಿಎಸ್) ಮತ್ತು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಎಂದು  ಎರಡು ಘಟಕಗಳ ಅಡಿಯಲ್ಲಿ ಅನುಷ್ಠಾನಗೊಳ್ಳಲಿರುವ ೀ ಯೋಜನೆಯ ಅಂದಾಜು ವೆಚ್ಚ 20,050 ಕೋಟಿ.ರೂ.ಗಳು. ಇದರಲ್ಲಿ (I) ಕೇಂದ್ರ ಪಾಲು. 9,407 ಕೋಟಿ.ರೂ (ii) ರಾಜ್ಯ ಪಾಲು ರೂ. 4,880 ಕೋಟಿ.ರೂ ಮತ್ತು (iii) ಫಲಾನುಭವಿಗಳ ಪಾಲು ರೂ. 5,763 ಕೋಟಿ. ರೂ.ಆಗಿರುತ್ತದೆ. 2020-21ನೇ ಸಾಲಿನಿಂದ 2024-25ರವರೆಗೆ 5 ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.

ವಲಸಿಗರು/ ಇತರೆಡೆ ಸಿಲುಕಿರುವ ವಲಸಿಗರಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಗೆ ಸಂಪುಟದ ಅಂಗೀಕಾರ

ಸುಮಾರು 8 ಕೋಟಿ ವಲಸಿಗರು/ ಸಿಕ್ಕಿಬಿದ್ದ ವಲಸಿಗರಿಗೆ ತಿಂಗಳಿಗೆ ತಲಾ 5 ಕೆಜಿ ಎರಡು ತಿಂಗಳು (ಮೇ ಮತ್ತು ಜೂನ್, 2020) ಉಚಿತವಾಗಿ ಆಹಾರ ಧಾನ್ಯವನ್ನು ಕೇಂದ್ರ ಸಂಗ್ರಹದಿಂದ ಹಂಚಿಕೆ ಮಾಡಲು ಕೇಂದ್ರ ಸಚಿವ ಸಂಪಟ ಸಭೆಯು ಪೂರ್ವಾನ್ವಯ ಅನುಮೋದನೆಯನ್ನು ನೀಡಿದೆ. ಇದು ಅಂದಾಜು 2,982.27 ಕೋಟಿ ರೂ.ಗಳ ಆಹಾರ ಸಹಾಯಧನವನ್ನು ನೀಡುತ್ತದೆ. ಅಂತರ-ರಾಜ್ಯ ಸಾರಿಗೆ ಮತ್ತು ನಿರ್ವಹಣಾ ಶುಲ್ಕಗಳು ಮತ್ತು ವ್ಯಾಪಾರಿಗಳ ಲಾಭ/ ಹೆಚ್ಚುವರಿ ವ್ಯಾಪಾರಿಗಳ ಲಾಭಗಳ ವೆಚ್ಚ ಸುಮಾರು 127.25 ಕೋಟಿ ರೂ. ಗಳಾಗಿದ್ದು ಇದನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ. ಕೋವಿಡ್-19 ರಿಂದ ನಿಂದ ಉಂಟಾಗಿರುವ ಆರ್ಥಿಕ ತೊಂದರೆಗಳಿಂದಾಗಿ ವಲಸೆ / ಸಿಕ್ಕಿಬಿದ್ದ ವಲಸಿಗರು ಎದುರಿಸುತ್ತಿರುವ ಕಷ್ಟಗಳನ್ನು ಈ ಹಂಚಿಕೆಯು ಕಡಿಮೆ ಮಾಡುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625313

ಎನ್ಬಿಎಫ್ಸಿ/ ಎಚ್ಎಫ್ಸಿಗಳು ತಮ್ಮ ಹಣಕಾಸು ಒತ್ತಡವನ್ನು ಬಗೆಹರಿಸಿಕೊಳ್ಳಲು ವಿಶೇಷ ದ್ರವ್ಯತೆ ಯೋಜನೆಗೆ ಸಂಪುಟದ ಅನುಮೋದನೆ

ಎನ್‌ಬಿಎಫ್‌ಸಿ/ ಎಚ್‌ಎಫ್‌ಸಿಗಳ ಹಣದ ಹರಿವನ್ನು ಸುಧಾರಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಮತ್ತು ವಸತಿ ಹಣಕಾಸು ಸಂಸ್ಥೆಗಳಿಗೆ (ಎಚ್‌ಎಫ್‌ಸಿ) ಹೊಸ ವಿಶೇಷ ದ್ರವ್ಯತೆ ಯೋಜನೆಯನ್ನು ಪ್ರಾರಂಭಿಸುವ ಹಣಕಾಸು ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಸರ್ಕಾರಕ್ಕೆ ನೇರ ಆರ್ಥಿಕ ಪರಿಣಾಮ 5 ಕೋಟಿ ರೂ.ಗಳಾಗಿದ್ದು, ಇದು ವಿಶೇಷ ಉದ್ದೇಶದ ವಾಹಕಕ್ಕೆ (ಎಸ್‌ಪಿವಿ) ಈಕ್ವಿಟಿ ಕೊಡುಗೆಯಾಗಿರಬಹುದು. ಒಳಗೊಂಡಿರುವ ಖಾತರಿ ನೀಡುವವರೆಗೂ ಸರ್ಕಾರಕ್ಕೆ ಯಾವುದೇ ಆರ್ಥಿಕ ಪರಿಣಾಮಗಳಿಲ್ಲ. ಆದಾಗ್ಯೂ, ಅದನ್ನು ಮನವಿಯಮೇರೆಗೆ ನೀಡಿದರೂ, ಸರ್ಕಾರದ ಹೊಣೆಗಾರಿಕೆಯ ವ್ಯಾಪ್ತಿಯು ಖಾತ್ರಿಯ ಮಿತಿಗೆ ಒಳಪಟ್ಟ ಡೀಫಾಲ್ಟ್ ಮೊತ್ತಕ್ಕೆ ಸಮಾನವಾಗಿರುತ್ತದೆ. ಒಟ್ಟು ಖಾತ್ರಿಯ 30,000 ಕೋಟಿ ಮಿತಿಯನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625310

ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್ಜಿಎಸ್) ಮೂಲಕ ಮೂರು ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ಹಣ ನೀಡಿಕೆಗೆ ಸಂಪುಟದ ಅನುಮೋದನೆ

"ತುರ್ತು ಸಾಲ ಖಾತ್ರಿ ಯೋಜನೆ" ಮೂಲಕ ಅರ್ಹ ಎಂಎಸ್ಎಂಇಗಳು ಮತ್ತು ಆಸಕ್ತ ಮುದ್ರಾ ಸಾಲಗಾರರಿಗೆ ಹೆಚ್ಚುವರಿಯಾಗಿ ಮೂರು ಲಕ್ಷ ಕೋಟಿ ರೂ.ಹಣಕಾಸು ನೆರವು ನೀಡಲು ಕೇಂದ್ರ ಸಂಪುಟ ಸಭೆ ಅಂಗೀಕಾರ ನೀಡಿದೆ.ಯೋಜನೆಯಡಿಯಲ್ಲಿ, ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ ಲಿಮಿಟೆಡ್ (ಎನ್‌ಸಿಜಿಟಿಸಿ) ನಿಂದ ಶೇ.100 ಖಾತ್ರಿಯೊಂದಿಗೆ ಅರ್ಹ ಎಂಎಸ್‌ಎಂಇ ಮತ್ತು ಆಸಕ್ತ ಮುದ್ರಾ ಸಾಲಗಾರರಿಗೆ ಖಾತರಿಪಡಿಸಿದ ತುರ್ತು ಸಾಲ (ಜಿಇಸಿಎಲ್) ಸೌಲಭ್ಯದ ರೂಪದಲ್ಲಿ ಹೆಚ್ಚುವರಿಯಾಗಿ ಮೂರು ಲಕ್ಷ ಕೋಟಿ ರೂ. ನಿಡಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಮತ್ತು ಮುಂದಿನ ಮೂರು ಹಣಕಾಸು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 41,600 ಕೋಟಿ ರೂ. ಮೂಲಧನವನ್ನು ಒದಗಿಸಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625306

ಆಯುಷ್ಮಾನ್ ಭಾರತ್ ಯೋಜನೆಯ  ಒಂದು ಕೋಟಿಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂತಸ ವ್ಯಕ್ತಪಡಿಸಿದ್ದಾರೆ. ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿದೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ ಎಂದು ಪ್ರಧಾನಿಯವರು ಸರಣಿ ಟ್ವೀಟ್‌ ಮಾಡಿದ್ದಾರೆ. “ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಈ ಉಪಕ್ರಮವು ಅನೇಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಎಲ್ಲಾ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ” ಎಂದು ಅವರು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625278

ಭಾರತೀಯ ರೈಲ್ವೆಯು 20 ದಿನಗಳಲ್ಲಿ ಶ್ರಮಿಕ್ ವಿಶೇಷರೈಲುಗಳ ಮೂಲಕ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಅವರ ರಾಜ್ಯಗಳಿಗೆ ತಲುಪಿಸಿದೆ

20 ಮೇ 2020 ರ ಹೊತ್ತಿಗೆ (10:00 ಗಂಟೆಯವರೆಗೆ), ದೇಶದ ವಿವಿಧ ರಾಜ್ಯಗಳಿಂದ ಒಟ್ಟು 1773 “ಶ್ರಮಿಕ್ ವಿಶೇಷ” ರೈಲುಗಳನ್ನು ಓಡಿಸಲಾಗಿದೆ. ಈ “ಶ್ರಮಿಕ್ ವಿಶೇಷ” ರೈಲುಗಳಿಂದ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ರಾಜ್ಯವನ್ನು ತಲುಪಿದ್ದಾರೆ. ನಿನ್ನೆ ಅಂದರೆ 19 ಮೇ 2020 ರಂದು ದಾಖಲೆಯೊಂದಿಗೆ ಒಟ್ಟು 205 “ಶ್ರಮಿಕ್ ವಿಶೇಷ” ರೈಲುಗಳ ಮೂಲಕ ದೇಶದ ವಿವಿಧ ರಾಜ್ಯಗಳಿಂದ 2.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ 1773 ರೈಲುಗಳು ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳದಿಂದ ಹೊರಟಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625335

ಭಾರತೀಯ ರೈಲ್ವೆಯು ಜೂನ್ 1, 2020 ರಿಂದ ವೇಳಾಪಟ್ಟಿಯೊಂದಿಗೆ 200 ದೈನಿಕ ಹೊಸ ರೈಲುಗಳನ್ನು ಓಡಿಸಲಿದೆ; ಶ್ರಮಿಕ್ ರೈಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು

ಭಾರತೀಯ ರೈಲ್ವೆಯು ವಲಸಿಗರಿಗೆ ಹೆಚ್ಚಿನ ಪರಿಹಾರವನ್ನು ಅನುಕೂಲ ಕಲ್ಪಿಸಲು ಶ್ರಮಿಕ್ ರೈಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಈ ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ, ಜೂನ್ 1, 2020 ರಿಂದ ವೇಳಾಪಟ್ಟಿಯೊಂದಿಗೆ 200 ಹೊಸ ರೈಲುಗಳನ್ನು ಪ್ರಾರಂಭಿಸಲಿದೆ. ಈ ರೈಲುಗಳ ಮಾರ್ಗಗಳು ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಬುಕಿಂಗ್ ಕೇವಲ ಆನ್‌ಲೈನ್‌ನಲ್ಲಿರುತ್ತದೆ ಮತ್ತು ಶೀಘ್ರದಲ್ಲೇ ಆರಂಭವಾಗುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625228

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಲಾಕ್ಡೌನ್ ಕ್ರಮಗಳಿಂದ ವಿನಾಯಿತಿ ನೀಡಲಾಗಿದೆ: ಶ್ರೀ ಅಮಿತ್ ಶಾ

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದಾಗಿ, ಲಾಕ್‌ಡೌನ್ ಕ್ರಮಗಳಿಂದ 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಲಾಕ್‌ಡೌನ್ ಕ್ರಮಗಳ ಮಾರ್ಗಸೂಚಿಗಳ ಅಡಿಯಲ್ಲಿ ಶಾಲೆಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದ್ದರಿಂದ, 10 ಮತ್ತು 12 ನೇ ತರಗತಿಗಳಿಗೆ ರಾಜ್ಯ ಶಿಕ್ಷಣ ಮಂಡಳಿಗಳು / ಸಿಬಿಎಸ್‌ಇ/ ಐಸಿಎಸ್‌ಇ ಇತ್ಯಾದಿಗಳು ನಡೆಸುವ ವಾರ್ಷಿಕ ಮಂಡಳಿ ಪರೀಕ್ಷೆಗಳನ್ನು ಅಮಾನತುಗೊಳಿಸಲಾಗಿತ್ತು. ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳು ಮತ್ತು ಸಿಬಿಎಸ್‌ಇಯಿಂದ ಬಂದ ಮನವಿಗಳನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಸರಿಸಬೇಕಾದ ಷರತ್ತುಗಳನ್ನು ವಿವರಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=16252407

ಇಪಿಎಫ್ ಕೊಡುಗೆಯ ದರ ಕಡಿತದ ಶೇ.10 ಅಧಿಸೂಚನೆಯೊಂದಿಗೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರ ಬಳಿ ಹೆಚ್ಚಿದ ಹಣದ ಹರಿವು

ಇಪಿಎಫ್ ಮತ್ತು ಎಂಪಿ ಕಾಯ್ದೆ, 1952 ರ ವ್ಯಾಪ್ತಿಗೆ ಒಳಪಡುವ ಎಲ್ಲಾ ವರ್ಗದ ಸಂಸ್ಥೆಗಳಿಗೆ 2020ರ ಮೇ, ಜೂನ್ ಮತ್ತು ಜುಲೈ ವೇತನ ತಿಂಗಳುಗಳಿಗೆ ಶಾಸನಬದ್ಧ ದರಗಳ ಕೊಡುಗೆಯನ್ನು ಶೇ.12 ರಿಂದ ಶೇ.10 ಕ್ಕೆ ಇಳಿಸಿ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಭಾಗವಾಗಿ 13.05.2020 ರಂದು ಕೇಂದ್ರ ಸರ್ಕಾರವು ಘೋಷಿಸಿತು. ಮೇಲಿನ ಕೊಡುಗೆ ದರ ಕಡಿತವು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಿಗೆ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಯಾವುದೇ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಇವುಗಳು ಮೂಲ ವೇತನ ಮತ್ತು ತುಟ್ಟಿಭತ್ಯೆಗಳ ಶೇ.12 ರಷ್ಟು ಕೊಡುಗೆಯನ್ನು ನೀಡುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625152

2020 ಜೆಇಇ ಮುಖ್ಯ ಪರೀಕ್ಷೆ, ನೀಟ್ ಪರೀಕ್ಷೆಯ  ಅಣಕು ಪರೀಕ್ಷೆಗಳಿಗಾಗಿ ಮಾನವ ಸಂಪನ್ಮೂಲ ಸಚಿವರಿಂದ ಕೃತಕ ಬುದ್ಧಿಮತ್ತೆ ಚಾಲಿತ ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ

ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ‘ನ್ಯಾಷನಲ್ ಟೆಸ್ಟ್ ಅಭ್ಯಾಸ್’ ಎಂಬ ಹೊಸ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ಜೆಇಇ ಮುಖ್ಯ ಪರೀಕ್ಷೆ, ನೀಟ್ ನಂತಹ ಮುಂಬರುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಎನ್‌ಟಿಎ ಇದನ್ನು ಅಭಿವೃದ್ಧಿಪಡಿಸಿದೆ. ಲಾಕ್ ಡೌನ್ ನಿಂದಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಟಿಎಯ ಪರೀಕ್ಷಾ ಅಭ್ಯಾಸ ಕೇಂದ್ರಗಳನ್ನು (ಟಿಪಿಸಿ) ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ನಷ್ಟವನ್ನು ಭರಿಸಬೇಕೆಂಬ ಬೇಡಿಕೆ ಇತ್ತು. ಅಭ್ಯರ್ಥಿಗಳು ತಮ್ಮ ಮನೆಗಳಲ್ಲ್ಲಿಯೇ ಸುರಕ್ಷಿತವಾಗಿ ಉತ್ತಮ ಗುಣಮಟ್ಟದ ಅಣಕು ಪರೀಕ್ಷೆಗಳಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625181

ಕೋವಿಡ್ ನಂತರದ ಸನ್ನಿವೇಶವನ್ನು ಎದುರಿಸಲು ತಂತ್ರಜ್ಞಾನದ ಉನ್ನತೀಕರಣ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕು: ಎಂಎಸ್ಎಂಇ ಸಚಿವರು

ಕೋವಿಡ್ ನಂತರದ ಸನ್ನಿವೇಶದಲ್ಲಿ ತಂತ್ರಜ್ಞಾನದ ಉನ್ನತೀಕರಣವನ್ನು ಪರಿಗಣಿಸಬೇಕು ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕೆಂದು ಶ್ರೀ ನಿತಿನ್ ಗಡ್ಕರಿ ಅವರು ಎಂಎಸ್‌ಎಂಇ ವಲಯಕ್ಕೆ ಕರೆ ನೀಡಿದ್ದಾರೆ. ಎಂಎಸ್‌ಎಂಇ ವಲಯಕ್ಕೆ ಪ್ರಧಾನಿಯವರು ಘೋಷಿಸಿದ ಪರಿಹಾರ ಪ್ಯಾಕೇಜ್ ಅನ್ನು ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಮತ್ತೆ ಕಾರ್ಯತತ್ಪರವಾಗಲು ಬಳಸಿಕೊಳ್ಳಬೇಕು ಎಂದರು. ಈ ಮಾರ್ಚ್ 31 ರ ಹೊತ್ತಿಗೆ ಸುಮಾರು 6 ಲಕ್ಷ ಎಂಎಸ್‌ಎಂಇಗಳನ್ನು ಪುನರ್ರಚಿಸಲಾಗಿದೆ ಮತ್ತು ವರ್ಷ ಡಿಸೆಂಬರ್ 31 ರೊಳಗೆ ಸಂಖ್ಯೆಗೆ ಇನ್ನೂ 25 ಲಕ್ಷದಷ್ಟನ್ನು ಸೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 10 ಸಾವಿರ ಕೋಟಿ ರೂ.ಗಳ ಮೌಲ್ಯದ ನಿಧಿಯನ್ನು ಇತರ ನಿಧಿಗಳನ್ನು ಸೇರಿಸುವ ಮೂಲಕ 50 ಸಾವಿರ ಕೋಟಿ ರೂ.ಗೆ ಬಲಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625431

ಆರೋಗ್ಯ ಕ್ಷೇತ್ರದ ಉನ್ನತ ಮಟ್ಟದ ತಂಡದೊಂದಿಗೆ ಹದಿನೈದನೇ ಹಣಕಾಸು ಆಯೋಗದ ಸಭೆ

ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ನೇತೃತ್ವದಲ್ಲಿ ಆರೋಗ್ಯ ಕ್ಷೇತ್ರದ ಶ್ರೇಷ್ಠ ವೃತ್ತಿಪರರಿರುವ ಆರೋಗ್ಯ ಕ್ಷೇತ್ರ ಕುರಿತ ಉನ್ನತ ಮಟ್ಟದ ತಂಡವನ್ನು (ಎಚ್‌ಎಲ್‌ಜಿ) ಹದಿನೈದನೇ ಹಣಕಾಸು ಆಯೋಗವು ಮೇ, 2018 ರಂದು ರಚಿಸಿತ್ತು. ಈ ತಂಡವು ತನ್ನ ಅಂತಿಮ ವರದಿಯನ್ನು 2019 ರ ಆಗಸ್ಟ್ ನಲ್ಲಿ ಸಲ್ಲಿಸಿತು ಮತ್ತು ಅದರ ಕೆಲವು ಪ್ರಮುಖ ಶಿಫಾರಸುಗಳನ್ನು 2020-21ನೇ ಸಾಲಿನ 15 ನೇ ಹಣಕಾಸು ಆಯೋಗದ ಮೊದಲ ವರದಿಯಲ್ಲಿ ಸೇರಿಸಲಾಗಿದೆ. ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆಯ ಪ್ರಕಾರ 15 ನೇ ಹಣಕಾಸು ಆಯೋಗವು ಸದ್ಯದ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್‌ಎಲ್‌ಜಿಯನ್ನು ಮತ್ತೆ ಆಯೋಜಿಸಲು ನಿರ್ಧರಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625371

ಕೊರೊನಾ ನಿರ್ವಹಣೆಯ ಈಶಾನ್ಯ ಮಾದರಿ

ಕೊರೊನಾ ನಿರ್ವಹಣೆ ಕುರಿತು ಕೇಂದ್ರ ಈಶಾನ್ಯ ಪ್ರದೇಶಾಭಿವೃದ್ಧಿ ರಾಜ್ಯ ಸಚಿವ (ಸ್ವತಂತ್ರ) ಡಾ.ಜಿತೇಂದ್ರ ಸಿಂಗ್ ಅವರು ಲೇಖನವೊಂದನ್ನು ಬರೆದಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625332

ಗ್ರಾಮೀಣ ರಸ್ತೆ ನಿರ್ಮಾಣದಲ್ಲಿ ನಾರಿನ ಜವಳಿ ಬಳಕೆಗೆ ಅನುಮತಿ

ಯಾವುದೇ ಸೂಕ್ಷ್ಮಜೀವಿಯ ದಾಳಿಯಿಂದ ಮುಕ್ತವಾದ, ನೈಸರ್ಗಿಕವಾದ, ಶಕ್ತಿಯುತವಾದ, ಹೆಚ್ಚು ಬಾಳಿಕೆ ಬರುವ, ಕೊಳೆಯದ, ತೇವಾಂಶ ನಿರೋಧಕವಾದ ನಾರಿನ ಜವಳಿ ಅಂತಿಮವಾಗಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಉತ್ತಮ ವಸ್ತುವಾಗಿ ಸ್ವೀಕರಿಸಲ್ಪಟ್ಟಿದೆ. ಪಿಎಂಜಿಎಸ್‌ವೈ -3 ರ ಅಡಿಯಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ನಾರಿನ ಜವಳಿಗಳನ್ನು ಬಳಸಲಾಗುತ್ತದೆ. ಈ ಕುರಿತು ಮಾತನಾಡಿದ ನಾರಿನ ಜವಳಿಯ ಪರ್ಯಾಯ ಬಳಕೆಯನ್ನು ಅನ್ವೇಷಣೆಯ ಕ್ರಮದ ಹಿಂದಿರುವ, ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು, "ನಾವು ಈಗ ರಸ್ತೆ ನಿರ್ಮಾಣದಲ್ಲಿ ನಾರಿನ ಜವಳಿ ಬಳಕೆಯಲ್ಲಿ ಯಶಸ್ವಿಯಾಗಿರುವುದರಿಂದ ಇದು ಬಹಳ ಮಹತ್ವದ ಬೆಳವಣಿಗೆಯಾಗಿದೆ. ಈ ನಿರ್ಧಾರವು ನಾರು ಉದ್ಯಮಕ್ಕೆ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ದೊಡ್ಡ ಉತ್ತೇಜನವನ್ನು ನೀಡುತ್ತದೆ" ಎಂದು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625286

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಪಂಜಾಬ್: 19.05.2020 ರಂದು ಅಮೃತಸರದಿಂದ 200ನೇ ರೈಲು ಹೊರಡುವುದರೊಂದಿಗೆ, ಪಂಜಾಬ್ ಸರ್ಕಾರವು 2,50,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಮರಳಲು ಅನುಕೂಲ ಮಾಡಿಕೊಟ್ಟಿದೆ. ಗರಿಷ್ಠ ರೈಲುಗಳು ಉತ್ತರ ಪ್ರದೇಶಕ್ಕೆ ಹೋಗಿವೆ, ನಂತರ ಬಿಹಾರ ಮತ್ತು ಜಾರ್ಖಂಡ್. ಛತ್ತೀಸಗಢ, ಮಣಿಪುರ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶಕ್ಕೂ ಪಂಜಾಬ್ ಸರ್ಕಾರ ರೈಲುಗಳನ್ನು ಕಳುಹಿಸುತ್ತಿದೆ. ಬಿಕ್ಕಟ್ಟು ಭುಗಿಲೆದ್ದಾಗಿನಿಂದಲೂ, ತಮ್ಮ ತವರು ರಾಜ್ಯಕ್ಕೆ ಮರಳಲು ಬಯಸುವವರಿಗೆ ಎಲ್ಲ ಸಾಧ್ಯ ನೆರವು ಮತ್ತು ಸಹಕಾರ ನೀಡುವುದಾಗಿ ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ ವಲಸಿಗರಿಗೆ ಮುಖ್ಯಮಂತ್ರಿ ಭರವಸೆ ನೀಡಿದ್ದರು.
 • ಹರಿಯಾಣ: ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಲಾಕ್ ಡೌನ್ 4.0 ಅವಧಿಗೆ ಪ್ರಯಾಣಿಕರ ವಾಹನಗಳ ಆಸನ ಸಾಮರ್ಥ್ಯದ ಮಿತಿಗಳ ಬಗ್ಗೆ ಹರಿಯಾಣ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಂಟೈನ್ಮೆಂಟ್ ವಲಯದೊಳಗಿನ ಓಡಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ ಮತ್ತು ತುರ್ತು ಮತ್ತು ಅಗತ್ಯ ಸರಕು / ಸೇವೆಗಳ ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವೈಯಕ್ತಿಕ ಅಂತರವನ್ನು ಎಲ್ಲಾ ವ್ಯಕ್ತಿಗಳು ಎಲ್ಲಾ ಸಮಯದಲ್ಲೂ ಅನುಸರಿಸಬೇಕಾಗಿದೆ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಜಾರಿಗೆ ತರಲಾದ ಲಾಕ್ಡೌನ್ ನಾಲ್ಕನೇ ಹಂತದಲ್ಲಿ ಸರ್ಕಾರಿ ಕಚೇರಿಗಳನ್ನು ತೆರೆಯುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಏಕೀಕೃತ ಮಾರ್ಗಸೂಚಿಗಳನ್ನು ಅನುಸರಿಸಿ ಹರಿಯಾಣ ಸರ್ಕಾರ, ರಾಜ್ಯ ಸರ್ಕಾರಿ ಕಚೇರಿಗಳನ್ನು ಮತ್ತೆ ತೆರೆಯಲು ನಿರ್ಧರಿಸಿದೆ ಹರಿಯಾಣ ಮತ್ತು ಚಂಡೀಗಢದಲ್ಲಿ ಗ್ರೂಪ್ ಮತ್ತು ಬಿ ಉದ್ಯೋಗಿಗಳ ಶೇ. 100 ರಷ್ಟು ಮತ್ತು ಗ್ರೂಪ್-ಸಿ ಮತ್ತು ಡಿ ಉದ್ಯೋಗಿಗಳ 50 ಪ್ರತಿಶತ ಹಾಜರಾತಿಯೊಂದಿಗೆ ತೆರೆಯಲು ನಿರ್ಧರಿಸಲಾಗಿದೆ.
 • ಹಿಮಾಚಲ ಪ್ರದೇಶ: ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್ಗೆ ಸೇರಿದ ಜನರನ್ನು ಸ್ಥಳಾಂತರಿಸಲು ಸಾಮಾನ್ಯ ರೈಲು ಪ್ರಾರಂಭಿಸಲು ಸಮನ್ವಯ ನೀಡುವಂತೆ ಮುಖ್ಯಮಂತ್ರಿ ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. ಈಶಾನ್ಯ ರಾಜ್ಯಗಳಿಂದ ಹಿಮಾಚಲ ಪ್ರದೇಶಕ್ಕೆ ರಸ್ತೆಯ ಮೂಲಕ ಸಂಚಾರ ಕಾರ್ಯಸಾಧ್ಯವಾದ ಕಾರಣ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಜನರನ್ನು ಸ್ಥಳಾಂತರಿಸಲು ಸಾಮಾನ್ಯ ರೈಲು ಓಡಿಸಲು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಜಂಟಿ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ. ಹೀಗಾಗಿ, ರಾಜ್ಯಗಳ ಜನರನ್ನು ಈಶಾನ್ಯ ರಾಜ್ಯಗಳಿಂದ ಸ್ಥಳಾಂತರಿಸಲು ರೈಲು ಒದಗಿಸುವುದಕ್ಕಾಗಿ ಭಾರತ ರೈಲ್ವೆಯೊಂದಿಗೆ ವಿಷಯದಲ್ಲಿ ಜಂಟಿಯಾಗಿ ವ್ಯವಹರಿಸಬೇಕಾಗಿದೆ.
 • ಅರುಣಾಚಲ ಪ್ರದೇಶ: ಕೋವಿಡ್ 19 ಪರೀಕ್ಷೆಗಾಗಿ ರಾಜ್ಯ ಸರ್ಕಾರವು ಇನ್ನೂ ನಾಲ್ಕು ಟ್ರೂನಾಟ್ ಯಂತ್ರಗಳನ್ನು ಸಂಗ್ರಹಿಸುತ್ತಿದೆ.
 • ಅಸ್ಸಾಂ: ಪ್ರಧಾನಮಂತ್ರಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನವನ್ನು ಸಾಧಿಸಲು ಮುಖ್ಯಮಂತ್ರಿಯವರು,ಸಾಲ ಮತ್ತು ಬ್ಯಾಂಕಿಂಗ್ ಅನ್ನು ಬಲಪಡಿಸಲು ಗುವಾಹಟಿಯಲ್ಲಿ ಬ್ಯಾಂಕಿಂಗ್ ಅಧಿಕಾರಿಗಳೊಂದಿಗೆ ವಿಶೇಷ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
 • ಮಣಿಪುರ: ರೋಗಲಕ್ಷಣದ ವ್ಯಕ್ತಿಗಳಿಗೆ ಮಾತ್ರವಲ್ಲದೆ ರಾಜ್ಯಕ್ಕೆ ಮರಳಿದ ಎಲ್ಲರಿಗೂ ಕೋವಿಡ್ 19 ಪರೀಕ್ಷೆಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈವರೆಗೆ ಮಾಡಲಾದ ಪರೀಕ್ಷೆಗಳ ಸಂಖ್ಯೆ 2743, ದೃಢಪಟ್ಟ ಪ್ರಕರಣಗಳು ಶೇಕಡಾವಾರು ಶೇ. 0.32.
 • ನಾಗಾಲ್ಯಾಂಡ್: ಈಶಾನ್ಯದ ಪ್ರಥಮ ವಿಶೇಷ ಆರ್ಥಿಕ ವಲಯ (ಎಸ್..ಝಡ್) ದೀಮಾಪುರದ ಗಣೇಶ ನಗರದಲ್ಲಿ ಪ್ರಧಾನ ಕ್ವಾರಂಟೈನ್ ಕೇಂದ್ರ ರೂಪಿಸಲು ರಾಜ್ಯ ಸಂಪುಟ ಸಮ್ಮತಿಸಿದೆ. ಇಲ್ಲಿ 6 ಸಾವಿರಕ್ಕೂ ಹೆಚ್ಚು ಜನರಿಗೆ ಸೌಲಭ್ಯ ಕಲ್ಪಿಸಬಹುದಾಗಿದೆ.
 • ಸಿಕ್ಕಿಂ: ಪೂರ್ವ ಸಿಕ್ಕಿಂ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ರಾಜ್ಯದ ರಂಗ್ಪೋ ಗೋಲಿ ಮೈದಾನದಲ್ಲಿ ರಾಜ್ಯಕ್ಕೆ ಮರಳುವವರ ಹೆಚ್ಚುವರಿ ತಪಾಸಣೆಯ ಕೇಂದ್ರಕ್ಕೆ ಭೇಟಿ ನೀಡಿದರು.
 • ತ್ರಿಪುರ: ಅಗರ್ತಲಾದಿಂದ ಪ್ರಯಾಗ ರಾಜ್ಗೆ 1584 ಪ್ರಯಾಣಿಕರನ್ನು ಹೊತ್ತ ಶ್ರಮಿಕ್ ವಿಶೇಷ ರೈಲು ಪ್ರಯಾಣ ಬೆಳೆಸಿತು. ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸಲಾಯಿತು. ಉಚಿತ ಆಹಾರ ಮತ್ತು ನೀರನ್ನು ಸಹ ಒದಗಿಸಲಾಯಿತು.
 • ಕೇರಳ: ಶಾಲಾ ಪರೀಕ್ಷೆಗಳನ್ನು ನಡೆಸಲು ಕೇಂದ್ರವು ಕೇರಳಕ್ಕೆ ಅನುಮತಿ ನೀಡಿದೆ. ಪರೀಕ್ಷಾ ಕೇಂದ್ರಗಳು ಕಂಟೈನ್ಮೆಂಟ್ ವಲಯಗಳಲ್ಲಿ ಇರಬಾರದು ಮತ್ತು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು. ಮೇ 26 ರಂದು ಪ್ರಾರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಮತ್ತು +2 ಪರೀಕ್ಷೆಗಳನ್ನು ಮುಂದೂಡಲು ರಾಜ್ಯ ನಿರ್ಧರಿಸಿತ್ತು. ಎಲ್ಲಾ ಎನ್‌.ಆರ್‌.ಐಗಳು ಭಾರತಕ್ಕೆ ಮರಳುವ ಮುನ್ನ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಕೆ.ಎಸ್.ಆರ್.ಟಿ.ಸಿ. ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಿಲ್ಲೆಗಳ ಒಳಗೆ ಸೇವೆಗಳನ್ನು ಪುನಾರಂಭಿಸಿದೆ. ಕ್ಷೌರಿಕರ ಅಂಗಡಿಗಳು, ಬ್ಯೂಟಿ ಪಾರ್ಲರ್ಗಳು, ಡಿಜಿಟಲ್ ಸ್ಟುಡಿಯೋಗಳು ಮತ್ತು ಆಭರಣ ಮಳಿಗೆಗಳು ಸುಮಾರು ಎರಡು ತಿಂಗಳ ಬಿಡುವಿನ ನಂತರ ಇಂದು ತೆರೆದವು. ಗಲ್ಫ್ ಮತ್ತು ರಷ್ಯಾದಿಂದ ಆರು ವಿಮಾನಗಳು ಇಂದು ರಾತ್ರಿ ಬರಲಿವೆ. ಎರಡು ಎನ್‌.ಆರ್‌.ಕೆಗಳು ಒಮಾನ್ನಲ್ಲಿ ಕೋವಿಡ್ 19 ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ ಇನ್ನೂ 12 ಪ್ರಕರಣಗಳನ್ನು ವರದಿ ಮಾಡಿದೆ, ಇವೆಲ್ಲವೂ ಸೋಂಕಿನ ಪ್ರಕರಣಗಳೂ ಹೊರಗಿನಿಂದ ಬಂದವುಗಳೇ ಆಗಿವೆ.
 • ತಮಿಳುನಾಡು: ಕಲ್ಯಾಣ ಮಂಡಳಿಯ ಸದಸ್ಯರಲ್ಲದ ತಮಿಳುನಾಡು ಕೈಮಗ್ಗ ನೇಕಾರರಿಗೆ 2000 ರೂ.ಗಳ ಲಾಕ್ಡೌನ್ ಪರಿಹಾರ; ಕಲ್ಯಾಣ ಮಂಡಳಿಯ ಸದಸ್ಯರಾಗಿರುವ 1,03,343 ಕೈಮಗ್ಗ ನೇಕಾರರಿಗೆ ಎರಡು ಕಂತುಗಳಲ್ಲಿ 2,000 ರೂ. ವಿತರಿಸಲು ಈಗಾಗಲೇ ಆದೇಶ ನೀಡಲಾಗಿದೆ. ತಮಿಳುನಾಡಿನ ಖಾಸಗಿ ಶಾಲೆಗಳಿಗೆ ಕೆಳ ತರಗತಿಗಳ ಪರೀಕ್ಷೆಗಳನ್ನು ನಡೆಸದಂತೆ ಮೆಟ್ರಿಕ್ಯುಲೇಷನ್ ಶಾಲೆಗಳ ನಿರ್ದೇಶನಾಲಯ ಎಚ್ಚರಿಸಿದೆ. ಕೋವಿಡ್ 19 ರೋಗಿಗಳಿಗೆ ಬಿಡುಗಡೆ ನೀತಿಯನ್ನು ರಾಜ್ಯ ಪರಿಷ್ಕರಿಸಿದೆ ಮತ್ತು ಸಾಂಕ್ರಾಮಿಕ ರೋಗದ ನಿರ್ವಹಣೆಗಾಗಿ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 12,448, ಸಕ್ರಿಯ ಪ್ರಕರಣಗಳು: 7466, ಸಾವು: 84, ಡಿಸ್ಚಾರ್ಜ್: 4895. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5691.
 • ಕರ್ನಾಟಕ: ಇಂದು ಮಧ್ಯಾಹ್ನ 12 ರವರೆಗೆ ರಾಜ್ಯದಲ್ಲಿ 63 ಹೊಸ ಪ್ರಕರಣಗಳು ವರದಿಯಾಗಿವೆ; ಹಾಸನ 21, ಬೀದರ್ 10, ಮಂಡ್ಯ 8, ಕಲ್ಬುರ್ಗಿ 7, ಉಡುಪಿ 6, ಬೆಂಗಳೂರು ಮತ್ತು ತುಮಕೂರಿನಲ್ಲಿ ತಲಾ ನಾಲ್ಕು ಮತ್ತು ಯಾದಗಿರಿ, ಉತ್ತರಾ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದು. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1458 ಕ್ಕೆ ಏರಿದೆ. ಇಂದು 10 ರೋಗಿಗಳು ಚೇತರಿಸಿಕೊಂಡಿದ್ದು ಬಿಡುಗಡೆ ಆಗಿದ್ದಾರೆ ಮತ್ತು ಇದುವರೆಗೆ 553 ಜನರು ಚೇತರಿಸಿಕೊಂಡಂತಾಗಿದೆ. ಒಟ್ಟು ಸಾವಿನ ಸಂಖ್ಯೆ 40. ಸಕ್ರಿಯ ಪ್ರಕರಣಗಳು