PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 19 MAY 2020 6:34PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

http://164.100.117.97/WriteReadData/userfiles/image/image002482A.png

http://164.100.117.97/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಜಾಗತಿಕವಾಗಿ ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 4.1 ಸಾವುಗಳಿದ್ದರೆ, ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 0.2 ಸಾವುಗಳಿವೆ. ಇದುವರೆಗೆ 24 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ

ಕಳೆದ 24 ಗಂಟೆಗಳಲ್ಲಿ ಒಟ್ಟು 2,350 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಹೀಗಾಗಿ, ಈವರೆಗೆ ಒಟ್ಟು 39,174 ರೋಗಿಗಳು ಗುಣಮುಖರಾದಂತಾಗಿದೆ. ಇದರಿಂದಾಗಿ ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣ ಶೇ.38.73 ರಷ್ಟಾಗಿದೆ. ಚೇತರಿಕೆಯ ದರ ನಿರಂತರವಾಗಿ ಸುಧಾರಿಸುತ್ತಿದೆ. ಭಾರತದಲ್ಲಿ ಪ್ರಸ್ತುತ 58,802 ಸಕ್ರಿಯ ಪ್ರಕರಣಗಳಿವೆ. ಈ ಎಲ್ಲ ಪ್ರಕರಣಗಳೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ. ಸಕ್ರಿಯ ಪ್ರಕರಣಗಳಲ್ಲಿ, ಅಂದಾಜು ಶೇ.2.9 ಪ್ರಕರಣಗಳು ಮಾತ್ರ ಐಸಿಯುನಲ್ಲಿವೆ. ಒಂದು ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣಕ್ಕೆ ಸಂಬಂಧಿಸಿದಂತೆ, ಭಾರತವು ಇಲ್ಲಿಯವರೆಗೆ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 0.2 ಸಾವುಗಳನ್ನು ಹೊಂದಿದೆ. ಇದು ಜಾಗತಿಕವಾಗಿ ಒಂದು ಲಕ್ಷ ಜನಸಂಖ್ಯೆಗೆ 4.1 ಸಾವುಗಳಾಗಿದೆ.

ದೇಶದಲ್ಲಿ ನಿನ್ನೆ ದಾಖಲೆಯ 1,08,233 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು 24,25,742 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜನವರಿಯಲ್ಲಿದ್ದ ಕೋವಿಡ್-19 ಪರೀಕ್ಷೆಯನ್ನು ನಡೆಸುವ ಒಂದು ಪ್ರಯೋಗಾಲಯದಿಂದ, ಭಾರತವು 385 ಕ್ಕೂ ಹೆಚ್ಚು ಸರ್ಕಾರಿ ಪ್ರಯೋಗಾಲಯಗಳನ್ನು ಮತ್ತು 158 ಖಾಸಗಿ ಪ್ರಯೋಗಾಲಯಗಳನ್ನು ದೇಶದಲ್ಲಿ ಪರೀಕ್ಷೆ ನಡೆಸುವ ಜಾಲಕ್ಕೆ ಸೇರಿಸುವ ಮೂಲಕ ತನ್ನ ಪರೀಕ್ಷಾ ಸಾಮರ್ಥ್ಯವನ್ನು ತ್ವರಿತವಾಗಿ ಹೆಚ್ಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್-19 ಕುರಿತು ಪರಿಷ್ಕೃತ ಪರೀಕ್ಷಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೊದಲ ಮಾನದಂಡಗಳ ಜೊತೆಗೆ, ಕೋವಿಡ್-19 ನಿಗ್ರಹ ಮತ್ತು ತಗ್ಗಿಸುವ ಕಾರ್ಯದಲ್ಲಿ ತೊಡಗಿರುವ ಮುಂಚೂಣಿ ಕೆಲಸಗಾರರು, ಐಎಲ್ಐ ರೋಗಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳು ಮತ್ತು 7 ದಿನಗಳಲ್ಲಿ ಐಎಲ್ಐ ರೋಗಲಕ್ಷಣ ಕಾಣಿಸಿಕೊಂಡ ಮರಳಿದವರು ಮತ್ತು ವಲಸಿಗರನ್ನು ಪರೀಕ್ಷೆಗೊಳಪಡಿಸಲು ಪರೀಕ್ಷಾ ಕಾರ್ಯತಂತ್ರವನ್ನು ವಿಸ್ತರಿಸಲಾಗಿದೆ. ಈ ಕೆಲಸದ ಸ್ಥಳಗಳಲ್ಲಿ  ಕೋವಿಡ್-19ರ ಶಂಕಿತ ಅಥವಾ ದೃಢಪಡಿಸಿದ ಪ್ರಕರಣ ಪತ್ತೆಯಾದರೆ ಅದನ್ನು ನಿಭಾಯಿಸಲು ಕೆಲಸದ ಸ್ಥಳಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ನೀಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದಂತವೈದ್ಯರು, ಸಹಾಯಕರು ಮತ್ತು ರೋಗಿಗಳು ಅಡ್ಡ-ಸೋಂಕಿನ ಅಪಾಯವನ್ನು ಹೊಂದಿರುವುದರಿಂದ ದಂತ ವೈದ್ಯರಿಗೆ ಮಾರ್ಗಸೂಚಿಗಳನ್ನು ಸಚಿವಾಲಯವು ಬಿಡುಗಡೆ ಮಾಡಿದೆ,

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625183

ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕಾಗಿ ಹೆಚ್ಚಿನ ರೈಲುಗಳನ್ನು ಓಡಿಸಲು ರಾಜ್ಯಗಳು ಮತ್ತು ರೈಲ್ವೆ ನಡುವೆ ಸಕ್ರಿಯ ಸಮನ್ವಯ ಅಗತ್ಯ; ಜಿಲ್ಲಾಡಳಿತಗಳು ತಮ್ಮ ಅವಶ್ಯಕತೆಗಳನ್ನು ರೈಲ್ವೆಗೆ ನೀಡಬೇಕು

ಕೋವಿಡ್-19 ಸೋಂಕು ಮತ್ತು ಜೀವನೋಪಾಯದ ನಷ್ಟದ ಭೀತಿಯಿಂದ ಇತರೆಡೆ ಸಿಲುಕಿರುವ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಲು ಪ್ರಮುಖ ಕಾರಣವಾಗಿದೆ ಎಂದು ರಾಜ್ಯಗಳಿಗೆ ನೀಡಿದ ಸೂಚನೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಹೇಳಿದೆ. ವಲಸೆ ಕಾರ್ಮಿಕರ ಸಂಕಷ್ಟವನ್ನು ತಗ್ಗಿಸುವ ಸಲುವಾಗಿ, ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಸಮನ್ವಯದಿಂದ ಸಕ್ರಿಯವಾಗಿ ತೆಗೆದುಕೊಳ್ಳಬಹುದಾದ ಹಲವಾರು ಕ್ರಮಗಳ ಮೇಲೆ ಈ ಸೂಚನೆಯು ಒತ್ತು ನೀಡಿದೆ, ಇವುಗಳಲ್ಲಿ ಹೆಚ್ಚಿನ ಬಸ್ಸುಗಳನ್ನು ಓಡಿಸುವುದು, ರಾಜ್ಯಗಳು ಮತ್ತು ಅಂತರ-ರಾಜ್ಯ ಗಡಿಗಳಲ್ಲಿ ಅವುಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು, ಕಾಲ್ನಡಿಗೆಯಲ್ಲಿ ಹೊರಟವರು ಬಸ್ / ರೈಲು ನಿಲ್ದಾಣಗಳಿಗೆ ತಲುಪುವ ಮಾರ್ಗದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ವಿಶ್ರಾಂತಿ ಸ್ಥಳಗಳನ್ನು ಸೃಷ್ಟಿಸುವುದು, ವದಂತಿಗಳನ್ನು ಹೋಗಲಾಡಿಸಿ, ರೈಲು / ಬಸ್ ನಿರ್ಗಮನದ ಬಗ್ಗೆ ಸ್ಪಷ್ಟತೆಯನ್ನು ನೀಡುವುದು- ಇವು  ರಾಜ್ಯಗಳಿಗೆ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಸೂಚನೆಗಳಾಗಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625119

ಇತರೆಡೆ ಸಿಲುಕಿರುವ ವಲಸೆ ಕಾರ್ಮಿಕರ ರೈಲು ಸಂಚಾರ ಕುರಿತು ಸಾಮಾನ್ಯ ಕಾರ್ಯನಿರ್ವಹಣೆ ಶಿಷ್ಟಾಚಾರ  (ಎಸ್ಒಪಿ)

ಲಾಕ್‌ಡೌನ್ ಕ್ರಮಗಳ ಪರಿಷ್ಕೃತ ಮಾರ್ಗಸೂಚಿಗಳ ಮುಂದುವರಿಕೆಯಾಗಿ 17.05.2020 ರಂದು ಗೃಹ ಸಚಿವಾಲಯವು ವಲಸೆ ಕಾರ್ಮಿಕರ ರೈಲು ಸಂಚಾರ ಕುರಿತು ಪರಿಷ್ಕೃತ ಸಾಮಾನ್ಯ ಕಾರ್ಯನಿರ್ವಹಣೆ ಶಿಷ್ಟಾಚಾರ (ಎಸ್‌ಒಪಿ) ಹೊರಡಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625204

ವಿಡಿಯೋ ಕಾನ್ಫರೆನ್ಸ್ ಮೂಲಕ 73ನೇ ವಿಶ್ವ ಆರೋಗ್ಯ ಸಭೆಯಲ್ಲಿ ಭಾಗವಹಿಸಿದ ಡಾ. ಹರ್ಷವರ್ಧನ್

ಕೋವಿಡ್-19 ನಿರ್ವಹಣೆಗೆ ಭಾರತ ಕೈಗೊಂಡ ಸಮಯೋಚಿತ, ಶ್ರೇಣೀಕೃತ ಮತ್ತು ಸಕ್ರಿಯ ಕ್ರಮಗಳನ್ನು ವಿವರಿಸಿದ ಆರೋಗ್ಯ ಸಚಿವರು, ಪ್ರವೇಶದ ಹಂತಗಳಲ್ಲಿ ಕಣ್ಗಾವಲು, ವಿದೇಶದಲ್ಲಿ ಸಿಲುಕಿರುವ ನಾಗರಿಕರ ಸ್ಥಳಾಂತರ, ಬೃಹತ್ ಸಮುದಾಯ ಕಣ್ಗಾವಲು, ದೃಢವಾದ ರೋಗ ಕಣ್ಗಾವಲು ಜಾಲ, ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ, ಎರಡು ದಶಲಕ್ಷಕ್ಕೂ ಹೆಚ್ಚಿನ ಮುಂಚೂಣಿ ಕೆಲಸಗಾಗರಿಗೆ ಸಾಮರ್ಥ್ಯ ವೃದ್ಧಿ, ಅಪಾಯ ಸಂವಹನ ಮತ್ತು ಸಮುದಾಯದ ಒಳಗೊಳ್ಳುವಿಕೆ ಸೇರಿದಂತೆ ಭಾರತವು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಮಯೋಚಿತವಾಗಿ ತೆಗೆದುಕೊಂಡಿದೆ ಎಂದು ಹೇಳಿದರು. ನಾವು ಸಾಧ್ಯವಾದ್ದನ್ನೆಲ್ಲಾ ಮಾಡಿದ್ದೇವೆ ಮತ್ತು ನಾವು ಅದನ್ನು ಚೆನ್ನಾಗಿ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವಿನ್ನೂ ಕಲಿಯುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625003

ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಲಹೆಯಂತೆ, 2020 ಜೆಇಇ (ಮುಖ್ಯ) ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಎನ್ಟಿಎ ಒಂದು ಕೊನೆಯ ಅವಕಾಶವನ್ನು ನೀಡಿದೆ

ವಿದೇಶದಲ್ಲಿ ಕಾಲೇಜುಗಳಿಗೆ ಸೇರಲು ನಿರ್ಧರಿಸಿದ್ದ ಆದರೆ ಈಗ ಕೋವಿಡ್-19 ರಿಂದ ಬದಲಾಗಿರುವ ಸನ್ನಿವೇಶಗಳಿಂದಾಗಿ ದೇಶದಲ್ಲಿಯೇ ತಮ್ಮ ಅಧ್ಯಯನವನ್ನು ಮುಂದುವರಿಸಲು ಹಾಗೆಯೇ 2020 ಜೆಇಇ (ಮುಖ್ಯ) ಪರೀಕ್ಷೆ ತೆಗೆದುಕೊಳ್ಳಲು ಉತ್ಸುಕರಾಗಿರುವ ವಿವಿಧ ಭಾರತೀಯ ವಿದ್ಯಾರ್ಥಿಗಳು ಮಾಡಿದ ಮನವಿಯನ್ನು ಪರಿಶೀಲಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು, 2020, ಜೆಇಇ (ಮುಖ್ಯ) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವನ್ನು ನೀಡುವಂತೆ ಎನ್‌ಟಿಎಗೆ ಸಲಹೆ ನೀಡಿದ್ದಾರೆ. 2020 ಜೆಇಇ (ಮುಖ್ಯ) ಪರೀಕ್ಷೆಗಾಗಿ ಹಲವಾರು ಕಾರಣಗಳಿಂದಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಥವಾ ಸಲ್ಲಿಸಲು ಸಾಧ್ಯವಾಗದ ಇತರ ವಿದ್ಯಾರ್ಥಿಗಳಿಗೂ ಇದು ಅನ್ವಯಿಸುತ್ತದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625189

ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸೇನೆಯು ಮಾಡಿರುವ ವೈದ್ಯಕೀಯ ಕೋವಿಡ್ ಸಂಬಂಧಿತ ನೆರವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಶ್ಲಾಘಿಸಿದ್ದಾರೆ

ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸೈನ್ಯದ ವೈದ್ಯಕೀಯ ಕೋವಿಡ್ ಸಂಬಂಧಿತ ಸಹಾಯವನ್ನು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಶ್ಲಾಘಿಸಿದ್ದಾರೆ. ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಪೂರಕವಾದ ಸೌಲಭ್ಯಗಳನ್ನು ಸನ್ನದ್ಧತೆಯ ಆರಂಭಿಕ ಹಂತದಲ್ಲಿ ಪೂರೈಸಲು ಸ್ಪಂದಿಸಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳನ್ನು (ಎಎಫ್‌ಎಂಎಸ್) ಅವರು ಶ್ಲಾಘಿಸಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625004

ತ್ಯಾಜ್ಯ ಮುಕ್ತ ನಗರಗಳ ಸ್ಟಾರ್ ರೇಟಿಂಗ್ ಫಲಿತಾಂಶಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ

2019-2020ರ ಮೌಲ್ಯಮಾಪನ ವರ್ಷಕ್ಕೆ ಒಟ್ಟು ಆರು ನಗರಗಳನ್ನು (ಅಂಬಿಕಾಪುರ, ರಾಜ್‌ಕೋಟ್, ಸೂರತ್, ಮೈಸೂರು, ಇಂದೋರ್ ಮತ್ತು ನವೀ ಮುಂಬೈ) 5-ಸ್ಟಾರ್ ಎಂದು, 3 ಸ್ಟಾರ್ ನಗರಗಳಾಗಿ 65 ನಗರಗಳು ಮತ್ತು 1-ಸ್ಟಾರ್ ನಗರಗಳಾಗಿ 70 ನಗರಗಳನ್ನು ಪ್ರಮಾಣೀಕರಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ತಿಳಿಸಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳನ್ನು ವಿಶೇಷ ಶುಚಿಗೊಳಿಸುವುದು ಮತ್ತು ಕ್ವಾರಂಟೈನ್ ಮನೆಗಳಿಂದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ ಬಗ್ಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ನಗರಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ. ನಾಗರಿಕರು ತಮ್ಮ ಕೋವಿಡ್ ಸಂಬಂಧಿತ ಸಮಸ್ಯೆಗಳನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಿಂದ ಪರಿಹರಿಸಿಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಏಪ್ರಿಲ್ ಮೊದಲ ವಾರದಲ್ಲಿ ತನ್ನ ಅತ್ಯಂತ ಜನಪ್ರಿಯ ನಾಗರಿಕ ಕುಂದುಕೊರತೆ ಪರಿಹಾರ ವೇದಿಕೆಯಾದ ಸ್ವಚ್ಚತಾ ಆ್ಯಪ್ ಅನ್ನು ಪರಿಷ್ಕರಿಸಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625076

ಲಾಕ್ಡೌನ್ ಮಧ್ಯೆಯೂ ವಿದರ್ಭ ಮತ್ತು ಮರಾಠವಾಡ ಪ್ರದೇಶದಲ್ಲಿ ಡೈರಿ ಪೂರೈಕೆಯನ್ನು ಸ್ಥಿರವಾಗಿರಿಸಿರುವ ಮದರ್ ಡೈರಿ

ದೇಶವು ಕೋವಿಡ್ -19 ಸಾಂಕ್ರಾಮಿಕ ವಿರುದ್ದಧ ಹೋರಾಡಲು ಲಾಕ್ ಡೌನ್ ನಲ್ಲಿರುವಾಗ ಆಹಾರ ಮತ್ತು ಆರೋಗ್ಯ ಸೇವೆಗಳಂತಹ ಅಗತ್ಯ ವಸ್ತುಗಳು ಜನಸಾಮಾನ್ಯರಿಗೆ ಲಭ್ಯವಾಗುವುದು ನಿರ್ಣಾಯಕವಾಗಿರುತ್ತದೆ. ಗ್ರಾಹಕರಿಗೆ ಸಾಮಗ್ರಿಗಳು ದೊರೆಯುವುದು ಮುಖ್ಯವಾಗಿರುತ್ತದೆ. ರೈತರು ನಿರ್ಬಂಧಗಳ ಅಡಿಯಲ್ಲಿಯೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲೇ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಂಗಸಂಸ್ಥೆಯಾದ ಮದರ್ ಡೈರಿಯು, ಲಾಕ್‌ಡೌನ್ ಮಧ್ಯೆಯೂ ವಿದರ್ಭ ಮತ್ತು ಮರಾಠವಾಡ ಪ್ರದೇಶದಲ್ಲಿ ಡೈರಿ ಪೂರೈಕೆ ಸರಪಳಿಯನ್ನು ಸ್ಥಿರಗೊಳಿಸುವಲ್ಲಿ ಕೊಡುಗೆ ನೀಡಿದೆ. ನಾಗ್ಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಮದರ್ ಡೈರಿ ರೈತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ ಮತ್ತು ವಿದರ್ಭ ಮತ್ತು ಮರಾಠವಾಡ ಪ್ರದೇಶದಲ್ಲಿ ದಿನಕ್ಕೆ ಸರಾಸರಿ 2.55 ಲಕ್ಷ ಲೀಟರ್ ಹಾಲಿನ ಪ್ರಮಾಣವನ್ನು ಸಂಗ್ರಹಿಸುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1625040

ಸಂಸ್ಕೃತಿ ಸಚಿವಾಲಯದ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸ್ಥಳಗಳ ಅಭಿವೃದ್ಧಿ ಇಲಾಖೆಯು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಅಂಗವಾಗಿವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಪುನರುಜ್ಜೀವನಕುರಿತು ವೆಬಿನಾರ್ ಆಯೋಜನೆ

ಕೋವಿಡ್ -19 ಸಾಂಕ್ರಾಮಿಕವು ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮದ ಮೇಲೆ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರಿದೆ. ಪ್ರಮುಖ ಭಾರತೀಯ ಮತ್ತು ಜಾಗತಿಕ ಸಾಂಸ್ಕೃತಿಕ ಸಂಸ್ಥೆಗಳು, ಸೃಜನಶೀಲ ವ್ಯವಹಾರಗಳು, ಉದ್ಯಮಗಳು, ನೀತಿ ನಿರೂಪಕರು ಮತ್ತು ಮಾಧ್ಯಮಗಳಿಗಾಗಿ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ತಜ್ಞರು ಸಂಸ್ಕೃತಿ ಮತ್ತು ಸೃಜನಶೀಲ ಉದ್ಯಮದ ಮುಂದಿನ ದಾರಿ ಕುರಿತು ಚರ್ಚಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624975

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಚಂಡೀಗಢ: ಲಾಕ್ ಡೌನ್ ನಿಂದಾಗಿ, ಕೆಲವು ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ಚಂಡೀಗಢದಲ್ಲಿ ಸಿಲುಕಿಕೊಂಡಿದ್ದಾರೆ. ಈ ವ್ಯಕ್ತಿಗಳ ಸುಗಮ ಸಂಚಾರಕ್ಕಾಗಿ, ಸಿಲುಕಿಸುವ ವ್ಯಕ್ತಿಗಳ ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಿಕೊಳ್ಳಲು ಚಂಡೀಗಢ ಆಡಳಿತವು ವ್ಯಾಪಕ ವ್ಯವಸ್ಥೆಗಳನ್ನು ಮಾಡಿದೆ. 18.05.2020 ರಂದು, ಸಿಲುಕಿದ್ದ ವ್ಯಕ್ತಿಗಳನ್ನು ಕೆಳಕಂಡ ಸ್ಥಳಗಳಿಗೆ ಕಳುಹಿಸಲಾಗಿದೆ: ಎ) ಉತ್ತರ ಪ್ರದೇಶದ ಅಮೇಥಿಗೆ ಶ್ರಮಿಕ್ ವಿಶೇಷ ರೈಲು ಸಂಜೆ 05.00 ಗಂಟೆಗೆ 1296 ಜನರೊಂದಿಗೆ ಪ್ರಯಾಣಿಸಿದೆ; ಬಿ) ಪಂಜಾಬ್‌ನ ಸಿರ್ ಹಿಂದ್ ನಿಂದ ಶ್ರಮಿಕ್ ವಿಶೇಷ ರೈಲಿನ ಮೂಲಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ 10 ಜನರು ತೆರಳಿದ್ದಾರೆ. ಚಂಡೀಗಢದಿಂದ ಪಂಜಾಬ್ ಸಿರ್ಹಿಂದ್ ವರೆಗೆ ಅವರ ಪ್ರಯಾಣವನ್ನು ವಿಶೇಷ ಸಿಟಿಯು ಬಸ್ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
 • ಪಂಜಾಬ್: ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಲೂಧಿಯಾನ ಮತ್ತು ಕೋವಿಡ್ -19ಸೇರಿದಂತೆ ವಿವಿಧ ವೈದ್ಯಕೀಯ ಸಮಸ್ಯೆಗಳಿಗೆ ಭಾರತದಲ್ಲಿನ ತಜ್ಞ ವೈದ್ಯರಿಗೆ ಅಮೆರಿಕದ ಕ್ಲೇವ್ ಲ್ಯಾಂಡ್ ಕ್ಲೀನಿಕ್ (ಅಮೆರಿಕ) ತಜ್ಞವೈದ್ಯರೊಂದಿಗೆ ವಿಡಿಯೋ ಸಮಾಲೋಚನೆ ವ್ಯವಸ್ಥೆ ಕಲ್ಪಿಸುವ ಐಎಂಎಎಸ್ ಹೆಲ್ತ್‌ ಕೇರ್ ಪ್ರೈವೇಟ್ ಲಿಮಿಟೆಡ್ ನಡುವಿನ ಸಹಭಾಗಿತ್ವದ ಭಾಗವಾಗಿ ಟೆಲಿಮೆಡಿಸಿನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಪಂಜಾಬ್ ಸರ್ಕಾರ ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸಲು ನಿರ್ಧರಿಸಿದೆ. ಬುಧವಾರದಿಂದ, ರಾಜ್ಯ ಸಾರಿಗೆ ಸಂಸ್ಥೆ ಬಸ್‌ ಗಳು ಪ್ರಮುಖ ನಗರಗಳು ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳ ನಡುವೆ ಆಯ್ದ ಮಾರ್ಗಗಳಲ್ಲಿ ಒಂದು ತಾಣದಿಂದ ಮತ್ತೊಂದಕ್ಕೆ ಸಂಚರಿಸಲಿದ್ದು, ಅವುಗಳ ಸಂಪೂರ್ಣ ಸಾಮರ್ಥ್ಯದ ಶೇ.50 ರಷ್ಟಕ್ಕೆ ಮಾತ್ರ ಅನುಮತಿಸಲಾಗುವುದು. ಈ ಬಸ್ಸುಗಳು ಬಸ್ ನಿಲ್ದಾಣಗಳಿಂದ ಮಾತ್ರ ಹೊರಡುತ್ತವೆ, ಅಲ್ಲಿ ಎಲ್ಲಾ ಪ್ರಯಾಣಿಕರಿಗೆ ಬಸ್ಸುಗಳನ್ನು ಹತ್ತಲು ಅನುಮತಿಸುವ ಮೊದಲು ಅವರುಗಳನ್ನು ಪರೀಕ್ಷಿಸಲಾಗುತ್ತದೆ. ಎಲ್ಲಾ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ, ಎಲ್ಲರೂ ಮಾಸ್ಕ್ ಗಳನ್ನು ಧರಿಸಲೇಬೇಕು ಮತ್ತು ಚಾಲಕರು ಒದಗಿಸುವ ಸ್ಯಾನಿಟೈಜರ್ ಮೂಲಕ ಅವರ ಕೈಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಎಂದು ಖಚಿತಪಡಿಸಲಾಗಿದೆ..
 • ಹರಿಯಾಣ: ಖಾಸಗಿ ವೈದ್ಯರಿಗೆ ಸರ್ಕಾರಿ ದರದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳು, ಎನ್ -95 ಮಾಸ್ಕ್ ಗಳು ಮತ್ತು ಹ್ಯಾಂಡ್ ಸ್ಯಾನಿಟೈಜರ್‌ ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಲ್ಲದೆ, ಖಾಸಗಿ ವೈದ್ಯರಿಗೆ ಕೋವಿಡ್-19 ಸೋಂಕು ತಗುಲಿದರೆ, ಅವರ ಚಿಕಿತ್ಸೆಯನ್ನು ಸರ್ಕಾರದ ವೆಚ್ಚದಲ್ಲಿಯೇ ನಡೆಸಲಾಗುತ್ತದೆ. ಕರೋನಾದ ನಂತರ, ಆರೋಗ್ಯ ಸೇವೆಗಳು, ಸಾರ್ವಜನಿಕ ಆರೋಗ್ಯ, ರೋಗ ಸಂಶೋಧನೆ ಇತ್ಯಾದಿಗಳಲ್ಲಿ ಹೂಡಿಕೆಯನ್ನು ರಾಜ್ಯದಲ್ಲಿ ಹೆಚ್ಚಿಸಲಾಗುವುದು. ಹರಿಯಾಣ ಸರ್ಕಾರ ಸರ್ಕಾರಿ ಶಾಲೆಗಳ ಆಡಳಿತ ಕಚೇರಿ ತೆರೆದು ತುರ್ತು ಮತ್ತು ಅನಿವಾರ್ಯವಾದ ಆಡಳಿತಾತ್ಮಕ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಿದ್ದು, ಈ ವೇಳೆ ಕೋವಿಡ್ -19 ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ. ಈಗಾಗಲೇ ಖಾಸಗಿ ಶಾಲೆಗಳ ಆಡಳಿತ ಕಚೇರಿಗಳ ಕಾರ್ಯ ನಿರ್ವಹಣೆಗೆ ಹರಿಯಾಣ ಸರ್ಕಾರ ಅನುಮತಿ ನೀಡಿದೆ.
 • ಹಿಮಾಚಲ ಪ್ರದೇಶ: ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ರಾಜ್ಯಕ್ಕೆ ಒಂದು ಬೃಹತ್ ಔಷಧ ಪಾರ್ಕ್ ಅನ್ನು ಮಂಜೂರು ಮಾಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ನಿರ್ಣಾಯಕ ಚಾಲಕ ಸರಕುಗಳು / ಡ್ರಗ್ ಮಧ್ಯಸ್ಥಿಕೆಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಉಪಯುಕ್ತ ಯೋಜನೆಯನ್ನು ಘೋಷಿಸಿದೆ ಎಂದು ಅವರು ಹೇಳಿದ್ದಾರೆ.
 • ಕೇರಳ: ಕೆಎಸ್‌.ಆರ್‌.ಟಿಸಿ ನಾಳೆಯಿಂದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲಿದೆ. ಕಣ್ಣೂರಿನಲ್ಲಿ, ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಉತ್ತರ ಪ್ರದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ ಸುಮಾರು 100 ವಲಸಿಗರನ್ನು ಪೊಲೀಸರು ತಡೆದಿದ್ದಾರೆ. ಕೋಳಿಕೋಡ್ ಪೆರಾಂಬ್ರಾದಲ್ಲಿ ಪ್ರತಿಭಟನಾ ನಿರತ ಕಾರ್ಮಿಕರು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ. ಕಳೆದ ರಾತ್ರಿ ಗಲ್ಫ್‌ ನಿಂದ ಕೇರಳ ತಲುಪಿದ ಕೋವಿಡ್ ರೋಗ ಲಕ್ಷಣಗಳನ್ನು ತೋರಿಸುವ ಏಳು ವಲಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ಕು ವಿಮಾನಗಳು ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ 700 ಕ್ಕೂ ಹೆಚ್ಚು ಜನರನ್ನು ತವರಿಗೆ ಕರೆತರುತ್ತಿವೆ. ರಾಜ್ಯಕ್ಕೆ ನಿನ್ನೆ ಮರಳಿರುವ. ವಲಸಿಗರು ಮತ್ತು ಅನಿವಾಸಿ ಕೇರಳಿಗರಲ್ಲಿ 29 ಪ್ರಕರಣ ವರದಿಯಾಗಿದೆ.
 • ತಮಿಳುನಾಡು: ಪುದುಚೇರಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುವುದು; ಮದ್ಯ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದ ಹೆಚ್ಚಿನ ಸಂಖ್ಯೆಯ ತಮಿಳುನಾಡು ವಲಸೆ ಕಾರ್ಮಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.. ಗ್ರಾಮೀಣ ತಮಿಳುನಾಡಿನಲ್ಲಿ ಹೇರ್ ಕಟಿಂಗ್ ಸಲೊನ್ ಗಳನ್ನು ಇಂದಿನಿಂದ ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ತಮಿಳುನಾಡಿನಲ್ಲಿ 10 ನೇ ತರಗತಿ ಪರೀಕ್ಷೆಗಳನ್ನು ಮರು ನಿಗದಿಪಡಿಸಲಾಗಿದ್ದು, ಜೂನ್ 15 ರಿಂದ ಜೂನ್ 25 ರವರೆಗೆ ನಡೆಯಲಿದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 11,760, ಸಕ್ರಿಯ ಪ್ರಕರಣಗಳು: 7270, ಸಾವು: 81, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5460.
 • ಕರ್ನಾಟಕ: ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ 127 ಪ್ರಕರಣಗಳು ವರದಿಯಾಗಿದ್ದು, ಮೂರು ಸಾವು ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 1373; ಸಕ್ರಿಯ: 802, ಚೇತರಿಸಿಕೊಂಡವರು: 530, ಸಾವು: 40. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ನಿಂದ ಬಂದ ಜನರ ಪ್ರವೇಶವನ್ನು ರಾಜ್ಯ ನಿಷೇಧಿಸಿದ್ದು ಅನಿವಾಸಿ ಕನ್ನಡಿಗರು ನಿರ್ಲಕ್ಷಿತರಾಗಿದ್ದಾರೆ; ಇತರ ರಾಜ್ಯಗಳಿಂದ ಹಿಂದಿರುಗಿದ ಜನರಿಂದ ಶೇ. 50 ಪ್ರಕರಣಗಳು ವರದಿಯಾಗಿವೆ. ಕರ್ನಾಟಕವು ಇಂಟರ್ಸಿಟಿ ವಿಶೇಷ ರೈಲುಗಳಿಗಾಗಿ ಕೇಂದ್ರದ ಅನುಮತಿಯನ್ನು ಕೋರಿದೆ.
 • ಆಂಧ್ರಪ್ರದೇಶ: ಕೋವಿಡ್ -19 ತಡೆಗಟ್ಟುವ ಕ್ರಮಗಳತ್ತ ತನ್ನ ದೃಷ್ಟಿಯನ್ನು ತೆಗೆಯದೆ, ಆರ್ಥಿಕತೆಯನ್ನು ಪುನರಾರಂಭಿಸುವತ್ತ ರಾಜ್ಯ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣ ಶೇಕಡಾ 53.44 ರಷ್ಟಿದೆ, ಇದು ರಾಷ್ಟ್ರದ ಸರಾಸರಿ ಶೇ. 32.9 ಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 9739 ಮಾದರಿಗಳ ಪರೀಕ್ಷೆಯ ಬಳಿಕ 57 ಹೊಸ ಪ್ರಕರಣಗಳು, ಎರಡು ಸಾವುಗಳು ವರದಿಯಾಗಿದ್ದು, 69 ಜನರು ಬಿಡುಗಡೆಯಾಗಿದ್ದಾರೆ. ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ 150 ಪ್ರಕರಣಗಳಿವೆ. ಒಟ್ಟು ಪ್ರಕರಣಗಳು: 2339. ಸಕ್ರಿಯ: 691, ಬಿಡುಗಡೆಯಾದವರು: 1596, ಸಾವು: 52.
 • ತೆಲಂಗಾಣ: ತೆಲಂಗಾಣದಲ್ಲಿ ಲಾಕ್‌ ಡೌನ್ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ, ಆರ್‌ಟಿಸಿ ಬಸ್‌ ಗಳು ಸಿಕಂದರಾಬಾದ್‌ ನಿಂದ ವಿವಿಧ ಜಿಲ್ಲೆಗಳಿಗೆ ಇಂದಿನಿಂದ ಸಂಚರಿಸಲು ಪ್ರಾರಂಭಿಸಿವೆ. ಜಿಎಚ್‌.ಎಂಸಿ ವ್ಯಾಪ್ತಿಯೂ ಒಳಗೊಂಡಂತೆ ಎಲ್ಲಾ ವಲಯಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಪುನರಾರಂಭಿಸಲು ರಾಜ್ಯವು ಅನುಮತಿಸಿದೆ. ನಿನ್ನೆವರೆಗೆ ಒಟ್ಟು ಪ್ರಕರಣಗಳು 1,592; ನಿನ್ನೆ 26 ಹೊಸ ಪ್ರಕರಣಗಳು ವರದಿಯಾಗಿದ್ದು, ಹೈದರಾಬಾದ್ ಅಧಿಕಾರಿಗಳಿಗೆ ಆತಂಕವನ್ನುಂಟುಮಾಡಿದೆ. 5,000 ಆಸ್ಪತ್ರೆ ಹಾಸಿಗೆಗಳು ರಾಜ್ಯದಲ್ಲಿ ಕೋವಿಡ್ ಗಾಗಿ ಸಿದ್ಧವಾಗಲಿವೆ.
 • ಅಸ್ಸಾಂ: ಪ್ರಾದೇಶಿಕ ತಪಾಸಣಾ ಕೇಂದ್ರದ ಕಾರ್ಯಾಚರಣೆಗಾಗಿ ಮತ್ತು ಕೋವಿಡ್ -19 ಪರೀಕ್ಷೆ ಮತ್ತು ರೋಗಿಗಳ ಆರೈಕೆಯಲ್ಲಿ ಹೆಚ್ಚಳಕ್ಕಾಗಿ ಆರೋಗ್ಯ ಸಚಿವರು ಬಾರ್ಪೆಟಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
 • ಮಣಿಪುರ: ಮಣಿಪುರದಲ್ಲಿ, 64 ವರ್ಷದ ಮಹಿಳೆ ಮತ್ತು ನವದೆಹಲಿಯಿಂದ ಹಿಂದಿರುಗಿದ 23 ವರ್ಷದ ಮಗಳಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದೆ. ರಾಜ್ಯದ ಒಟ್ಟು 9 ಪ್ರಕರಣಗಳಲ್ಲಿ 2 ಪ್ರಕರಣಗಳು ಚೇತರಿಸಿಕೊಂಡಿದ್ದು, ಉಳಿದವುಗಳು ಚಿಕಿತ್ಸೆಯಲ್ಲಿವೆ.
 • ಮಿಜೋರಾಂ: ಮಿಜೋರಾಂನ ಸರ್ಕಾರಿ ಕೋಲಾಸಿಬ್ ಕಾಲೇಜಿನ ಎನ್‌.ಎಸ್‌.ಎಸ್ ಸ್ವಯಂಸೇವಕರು ಕೋಲಾಸಿಬ್‌ನಲ್ಲಿ ತರಕಾರಿ ಮಾರಾಟಗಾರರು ಮತ್ತು ಪೊಲೀಸ್ ಸಿಬ್ಬಂದಿಗೆ 150 ಕೈಯಲ್ಲಿ ತಯಾರಿಸಿದ ಮಾಸ್ಕ್ ವಿತರಿಸಿದರು.. ಮಿಜೋರಾಂನಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಐಜಾಲ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
 • ನಾಗಾಲ್ಯಾಂಡ್: ನಾಗಾಲ್ಯಾಂಡ್‌ ನ ಮುಸ್ಲಿಮರು ತಮ್ಮ ಮನೆಗಳಲ್ಲಿ ಪವಿತ್ರ ರಂಜಾನ್ ಮಾಸ ಆಚರಿಸುತ್ತಿದ್ದಾರೆ ಮತ್ತು ಲಾಕ್ ಡೌನ್ ನಿಂದಾಗಿ ಈದ್ ಅನ್ನು ಮನೆಯಲ್ಲಿ ಆಚರಿಸಲು ಯೋಜಿಸುತ್ತಿದ್ದಾರೆ. ದಿಮಾಪುರ ಗ್ರಾಮ ಪಂಚಾಯ್ತಿಗಳು ತಮ್ಮ ಪ್ರದೇಶಗಳಲ್ಲಿ ಸರ್ಕಾರ ಗುರುತಿಸಿರುವ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಒಪ್ಪಿವೆ.
 • ಸಿಕ್ಕಿಂ: ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಸಿಕ್ಕಿಂ ಸರ್ಕಾರ ಬೆಂಗಳೂರಿನಿಂದ ಸುಮಾರು 1054 ಸಿಕ್ಕಿಮೀಸ್ ಗಳನ್ನು ಸ್ಥಳಾಂತರಿಸಿದೆ.
 • ಮಹಾರಾಷ್ಟ್ರ: ರಾಜ್ಯದಲ್ಲಿ 2033 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇದರಿಂದಾಗಿ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 35,058 ತಲುಪಿದೆ. ಪ್ರಸ್ತುತ ರಾಜ್ಯದಲ್ಲಿ 25,392 ಸಕ್ರಿಯ ಪ್ರಕರಣಗಳಿದ್ದು, ಇತ್ತೀಚಿನ ವರದಿಯ ಪ್ರಕಾರ 8437 ರೋಗಿಗಳು ಸಹ ಚೇತರಿಸಿಕೊಂಡಿದ್ದಾರೆ. ಮೇ ಮತ್ತು ಜೂನ್ ತಿಂಗಳಿಗೆ 3.08 ಕೋಟಿ ಬಡತನ ರೇಖೆಗಿಂತ ಮೇಲಿರುವ ಕಿತ್ತಳೆ ಬಣ್ಣದ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯವನ್ನು ಸಬ್ಸಿಡಿ ದರದಲ್ಲಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯ ಮಧ್ಯೆ, ರಾಜ್ಯ ಸರ್ಕಾರವು ರಾಜ್ಯದ 52,422 ಪಡಿತರ ಅಂಗಡಿಗಳಿಂದ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಿದೆ.
 • ಗುಜರಾತ್: ರಾಜ್ಯದಲ್ಲಿ 366 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 35 ಸಾವು ವರದಿಯಾಗಿವೆ. ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 11,746 ಕ್ಕೆ ತಲುಪಿದೆ. ಈ ಪೈಕಿ 4,804 ಮಂದಿ ಚೇತರಿಸಿಕೊಂಡಿದ್ದಾರೆ.. ರಾಜ್ಯದಲ್ಲಿ ಈಗ 6,248 ಸಕ್ರಿಯ ಪ್ರಕರಣಗಳಿವೆ, ಅವುಗಳಲ್ಲಿ 38 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಏತನ್ಮಧ್ಯೆ, ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ಐವತ್ತು ದಿನಗಳಿಗಿಂತ ಹೆಚ್ಚಿನ ಅಂತರದ ನಂತರ ಅಂಗಡಿಗಳು, ಕಚೇರಿಗಳು, ಸಾರಿಗೆ ಮತ್ತು ಮಾರುಕಟ್ಟೆಗಳು ಬೆಸ-ಸಮ-ಆಧಾರದ ಮೇಲೆ ಮತ್ತೆ ತೆರೆದಿವೆ.
 • ರಾಜಸ್ಥಾನ: ಇಂದು, ಮಧ್ಯಾಹ್ನ 2 ರವರೆಗೆ 250 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದ ಒಟ್ಟು ಸೋಂಕಿತ ರೋಗಿಗಳ ಸಂಖ್ಯೆಯನ್ನು 5757 ಕ್ಕೆ ಹೆಚ್ಚಿಸಿದೆ. ಇಲ್ಲಿಯವರೆಗೆ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 3232 ಆಗಿದೆ.
 • ಮಧ್ಯಪ್ರದೇಶ: ರಾಜ್ಯದಲ್ಲಿ 259 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು 5,326 ಕ್ಕೆ ತಲುಪಿವೆ. ಇತ್ತೀಚಿನ ವರದಿಯ ಪ್ರಕಾರ ರಾಜ್ಯದಲ್ಲಿ 2549 ಸಕ್ರಿಯ ಪ್ರಕರಣಗಳಿವೆ.
 • ಗೋವಾ: ಇನ್ನೂ 9 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ಇದು ಕರೋನ ವೈರಸ್ ಸೋಂಕಿತ ರೋಗಿಗಳ ಸಂಖ್ಯೆಯನ್ನು 31 ಕ್ಕೆ ಹೆಚ್ಚಿಸಿದೆ.

ಪಿ ಐ ಬಿ ವಾಸ್ತವ ಪರೀಶೀಲನೆ

***(Release ID: 1625180) Visitor Counter : 18