ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸಮಾಹಿತಿ
Posted On:
18 MAY 2020 5:53PM by PIB Bengaluru
ಕೋವಿಡ್-19 ಹೊಸಮಾಹಿತಿ
ಪ್ರಸ್ತುತ ಸ್ಥಿತಿ:
ಕೋವಿಡ್-19ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ಪೂರ್ವಭಾವಿ ಮತ್ತು ಸಕ್ರಿಯ ವಿಧಾನವನ್ನು ಅನುಸರಿಸುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಭಾರತದಲ್ಲಿ ಪ್ರಸ್ತುತ 56,316 ಪ್ರಕರಣಗಳು ಸಕ್ರಿಯ ಪ್ರಕರಣಗಳಲ್ಲಿವೆ. ಈವರೆಗೆ ಒಟ್ಟು 36,824 ಜನರನ್ನು ಕೋವಿಡ್-19 ನಿಂದ ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,715 ರೋಗಿಗಳು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ನಾವು ಪ್ರಸ್ತುತ 38.29% ರ ಚೇತರಿಕೆಯ ಪ್ರಮಾಣವನ್ನು ಹೊಂದಿದ್ದೇವೆ.
ಪ್ರತಿ ಲಕ್ಷ ಜನಸಂಖ್ಯೆಗೆ ದೃಢಪಡಿಸಿದ ಪ್ರಕರಣಗಳ ಪ್ರಕಾರ, ಭಾರತವು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 7.1 ಪ್ರಕರಣಗಳನ್ನು ಹೊಂದಿದೆ. ಒಟ್ಟಾರೆಯಾಗಿ ವಿಶ್ವಕ್ಕೆ ಒಂದು ಲಕ್ಷ ಜನಸಂಖ್ಯೆಗೆ 60 ಪ್ರಕರಣಗಳು ಇವೆ. ಅತಿ ಹೆಚ್ಚು ದೃಢ ಪಡಿಸಿದ ಪ್ರಕರಣಗಳನ್ನು ಹೊಂದಿರುವ ದೇಶಗಳಿಗೆ ಒಂದು ಲಕ್ಷ ಜನಸಂಖ್ಯೆಗೆ ಪ್ರಕರಣಗಳ ಸ್ಥಿತಿ, ವಿಶ್ವ ಆರೋಗ್ಯ ಸಂಸ್ಥೆಯ ಪರಿಸ್ಥಿತಿ 118ನೆ ವರದಿ ನೋಡಿ, ಈ ಕೆಳಗಿನಂತಿವೆ:
ದೇಶಗಳು
|
ಒಟ್ಟು ದೃಡೀಕರಿಸಿದ
ಪ್ರಕರಣಗಳು
|
ಅಂದಾಜು. ಪ್ರತಿ ಲಕ್ಷ ಜನರಿಗೆ ಪ್ರಕರಣಗಳು
|
ವಿಶ್ವ
|
45,25,497
|
60
|
ಅಮೇರಿಕ
|
1,409,452
|
431
|
ರಷ್ಯಾ
|
281,752
|
195
|
ಯುನೈಟೆಡ್ ಕಿಂಗ್ ಡಮ್
|
240,165
|
361
|
ಸ್ಪೈನ್
|
230,698
|
494
|
ಇಟಲಿ
|
224,760
|
372
|
ಬ್ರೆಜಿಲ್
|
218,223
|
104
|
ಜರ್ಮನಿ
|
174,355
|
210
|
ಟರ್ಕಿ
|
148,067
|
180
|
ಫ್ರಾನ್ಸ್
|
140,008
|
209
|
ಇರಾನ್
|
118,392
|
145
|
ಭಾರತ
|
96,169*
|
7.1
|
* 18 ಮೇ 2020ಕ್ಕೆ ಇತ್ತೀಚಿನ ಅಂಕಿಅಂಶಗಳನ್ನು ನವೀಕರಿಸಲಾಗಿದೆ
ತೀವ್ರ ಮತ್ತು ಆರಂಭಿಕ ಕ್ರಮಗಳು ಉತ್ತೇಜಕ ಫಲಿತಾಂಶಗಳನ್ನು ತೋರಿಸಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೊಸ ಮಾರ್ಗಸೂಚಿಗಳು
ಕೆಂಪು/ ಕಿತ್ತಳೆ/ ಹಸಿರು ವಲಯಗಳ ವರ್ಗೀಕರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ 17.05.20 ರಂದು ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳ ಪ್ರಕಾರ ರಾಜ್ಯಗಳನ್ನು ಜಿಲ್ಲೆಗಳು / ಪುರಸಭೆ ನಿಗಮಗಳನ್ನು ಅಥವಾ ತಮ್ಮ ಕ್ಷೇತ್ರ ಮೌಲ್ಯಮಾಪನದ ಪ್ರಕಾರ ಉಪವಿಭಾಗ / ವಾರ್ಡ್ ಅಥವಾ ಇನ್ನಾವುದೇ ಆಡಳಿತ ಘಟಕವನ್ನು ಕೆಂಪು / ಕಿತ್ತಳೆ / ಹಸಿರು ವಲಯ ಎಂದು ವರ್ಗೀಕರಿಸಲು ಕೇಳಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲವು ಹಂಚಿಕೊಂಡ ನಿಯತಾಂಕಗಳ ಸಂಯೋಜನೆಯ ಮೇಲೆ ಬಹುಕ್ರಿಯಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ ಇದನ್ನು ಮಾಡಬೇಕಾಗಿದೆ, ಅವುಗಳೆಂದರೆ, ಒಟ್ಟು ಸಕ್ರಿಯ ಪ್ರಕರಣಗಳು, ಒಂದು ಲಕ್ಷ ಜನಸಂಖ್ಯೆಗೆ ಸಕ್ರಿಯ ಪ್ರಕರಣಗಳು, ದ್ವಿಗುಣಗೊಳ್ಳುವ ಪ್ರಮಾಣ (7 ದಿನಗಳ ಅವಧಿಯಲ್ಲಿ ಲೆಕ್ಕಹಾಕಲಾಗಿದೆ), ಪ್ರಕರಣದ ಸಾವಿನ ಪ್ರಮಾಣ, ಪರೀಕ್ಷಾ ಅನುಪಾತ ಮತ್ತು ಪರೀಕ್ಷಾ ದೃಢೀಕರಣ ದರ.
ಕ್ಷೇತ್ರ ಕ್ರಿಯೆಯ ದೃಷ್ಟಿಯಿಂದ, ನಿಯಂತ್ರಣ ಮತ್ತು ಬಫರ್ ವಲಯಗಳನ್ನು ಸೂಕ್ಷ್ಮವಾಗಿ ನಿರೂಪಿಸಲು ರಾಜ್ಯಗಳನ್ನು ಕೇಳಲಾಗಿದೆ. ಈ ನಿರ್ಭಂದಿತ ವಲಯಗಳಲ್ಲಿ ನಿಯಂತ್ರಣ ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ತಿಳಿಸಲಾಗಿದೆ.
ನಿರ್ಭಂದಿತ ವಲಯಗಳಲ್ಲಿ, ವಿಶೇಷ ತಂಡಗಳಿಂದ ಮನೆ ಮನೆ ಕಣ್ಗಾವಲಿಗಾಗಿ ಸಕ್ರಿಯ ಶೋಧ, ಮಾದರಿ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಪ್ರಕರಣಗಳ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ, ದೃಢಪಡಿಸಿದ ಎಲ್ಲಾ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಆದ್ಯತೆಯ ಕಾರ್ಯಗಳಾಗಿವೆ. ಈ ನಿಟ್ಟಿನಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಯಸಬೇಕು.
ಇದಲ್ಲದೆ, ಪ್ರತಿ ನಿರ್ಬಂಧಿತ ವಲಯದ ಸುತ್ತಲೂ, ಪಕ್ಕದ ಪ್ರದೇಶಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಬಫರ್ ವಲಯವನ್ನು ವಿವರಿಸಬೇಕಾಗಿದೆ. ಬಫರ್ ವಲಯಗಳಲ್ಲಿ, ಆರೋಗ್ಯ ಸೌಲಭ್ಯಗಳಲ್ಲಿನ ತೀವ್ರ ಉಸಿರಾಟದ ಸೋಂಕುಗಳ (ಎಸ್‌ಎಆರ್ ಐ)/ ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್‌ಐ) ಪ್ರಕರಣಗಳ ಮೇಲ್ವಿಚಾರಣೆಯ ಮೂಲಕ ಪ್ರಕರಣಗಳ ವ್ಯಾಪಕ ಕಣ್ಗಾವಲನ್ನು ಸಮನ್ವಯಗೊಳಿಸಬೇಕಾಗಿದೆ.
ದೈಹಿಕ ಅಂತರವಿಡುವುದು ಮತ್ತು.ವರ್ಧಿತ ಐಇಸಿ ಚಟುವಟಿಕೆಗಳ ಮೂಲಕ ಮುಖಗವಸಿನ ಬಳಕೆಯನ್ನು ಉತ್ತೇಜಿಸುವುದು, ವೈಯಕ್ತಿಕ ನೈರ್ಮಲ್ಯ, ಕೈಗಳ ನೈರ್ಮಲ್ಯ ಮತ್ತು ಉಸಿರಾಟದ ಶಿಷ್ಟಾಚಾರಗಳಂತಹ ತಡೆಗಟ್ಟುವ ಕ್ರಮಗಳ ಬಗ್ಗೆ ಪರಿಣಾಮಕಾರಿ ಸಮುದಾಯ ಜಾಗೃತಿಯನ್ನು ಖಚಿತಪಡಿಸುವುದು ಮುಖ್ಯವಾಗಿದೆ,
***
(Release ID: 1624985)
Visitor Counter : 257
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam