PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 18 MAY 2020 6:33PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಭಾರತದಲ್ಲಿ ಪ್ರಸ್ತುತ 56,316 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 36,824 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,715 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಚೇತರಿಕೆ ಪ್ರಮಾಣ ಶೇ. 38.29 ಆಗಿದೆ. ದೃಢಪಟ್ಟ ಪ್ರಕರಣಗಳ ಪ್ರಕಾರ, ಭಾರತವು ಪ್ರತಿ ಲಕ್ಷ ಜನಸಂಖ್ಯೆಗೆ ಸುಮಾರು 7.1 ಪ್ರಕರಣಗಳನ್ನು ಹೊಂದಿದೆ. ಇದು  ಒಟ್ಟಾರೆ ವಿಶ್ವದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 60 ಪ್ರಕರಣಗಳಾಗಿದೆ.

ಕೆಂಪು / ಕಿತ್ತಳೆ / ಹಸಿರು ವಲಯಗಳ ವರ್ಗೀಕರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ 17.05.20 ರಂದು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಗಳು / ಪುರಸಭೆಗಳು/ ಉಪವಿಭಾಗ / ವಾರ್ಡ್ ಅಥವಾ ಇನ್ನಾವುದೇ ಆಡಳಿತ ಘಟಕವನ್ನು ರಾಜ್ಯಗಳು ತಮ್ಮ ಕ್ಷೇತ್ರ ಮೌಲ್ಯಮಾಪನದ ಪ್ರಕಾರ ಕೆಂಪು / ಕಿತ್ತಳೆ / ಹಸಿರು ವಲಯ ಎಂದು ವರ್ಗೀಕರಿಸಬಹುದಾಗಿದೆ. ಆರೋಗ್ಯ ಸಚಿವಾಲಯ ಹಂಚಿಕೊಂಡ ನಿಯತಾಂಕಗಳ ಸಂಯೋಜನೆಯ ಮೇಲೆ ಬಹುಕ್ರಿಯಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ ಇದನ್ನು ಮಾಡಬೇಕಾಗಿದೆಅವುಗಳೆಂದರೆ, ಒಟ್ಟು ಸಕ್ರಿಯ ಪ್ರಕರಣಗಳು, ಒಂದು ಲಕ್ಷ ಜನಸಂಖ್ಯೆಗೆ ಸಕ್ರಿಯ ಪ್ರಕರಣಗಳು, ದ್ವಿಗುಣ ದರ (7 ದಿನಗಳ ಅವಧಿಗೆ ಲೆಕ್ಕಹಾಕಲಾಗಿದೆ), ಪ್ರಕರಣದ ಸಾವಿನ ಪ್ರಮಾಣ, ಪರೀಕ್ಷಾ ಅನುಪಾತ ಮತ್ತು ಪರೀಕ್ಷಾ ದೃಢೀಕರಣ ದರ. ಕಂಟೈನ್ ಮೆಂಟ್ ಮತ್ತು ಬಫರ್ ವಲಯಗಳನ್ನು ಸೂಕ್ಷ್ಮವಾಗಿ ನಿರೂಪಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಕಂಟೈನ್ ಮೆಂಟ್ ವಲಯಗಳಲ್ಲಿ ನಿಗ್ರಹ ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ತಿಳಿಸಲಾಗಿದೆ. ಇದಲ್ಲದೆ, ಪ್ರತಿ ಕಂಟೈನ್ ಮೆಂಟ್ ವಲಯದ ಸುತ್ತಲೂ, ಪಕ್ಕದ ಪ್ರದೇಶಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಬಫರ್ ವಲಯವನ್ನು ವಿವರಿಸಬೇಕಾಗಿದೆ. ಬಫರ್ ವಲಯಗಳಲ್ಲಿ, ಆರೋಗ್ಯ ಸೌಲಭ್ಯಗಳಲ್ಲಿನ ILI / SARI ಪ್ರಕರಣಗಳ ಮೇಲ್ವಿಚಾರಣೆಯ ಮೂಲಕ ಪ್ರಕರಣಗಳನ್ನು ವ್ಯಾಪಕ ಕಣ್ಗಾವಲು ಮಾಡಬೇಕು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624985

2020 ಮೇ. 31ರವರೆಗೆ ಲಾಕ್ ಡೌನ್ ವಿಸ್ತರಣೆ:ನಾನಾ ವಲಯಗಳು ಮತ್ತು ವಲಯಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ರಾಜ್ಯಗಳು ನಿರ್ಧರಿಸಬೇಕು: ದೇಶಾದ್ಯಂತ ಕೆಲವು ಚಟುವಟಿಕೆಗಳ ನಿರ್ಬಂಧ ಮುಂದುವರಿಕೆ

ಮಾರ್ಚ್ 24, 2020 ರಿಂದ ಜಾರಿಯಲ್ಲಿರುವ ಲಾಕ್ಡೌನ್ ಕ್ರಮಗಳು ಕೋವಿಡ್-19  ಹರಡುವಿಕೆಯನ್ನು ನಿಗ್ರಹಿಸುವಲ್ಲಿ ಸಾಕಷ್ಟು ಸಹಾಯ ಮಾಡಿವೆ. ಆದ್ದರಿಂದ 2020 ಮೇ 31 ರವರೆಗೆ ಲಾಕ್ಡೌನ್ ಅನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ, ಸಚಿವಾಲಯವು ಹಂಚಿಕೊಂಡಿರುವ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನು ವಿವರಿಸುತ್ತದೆ. ರಾಜ್ಯಗಳು ಮತ್ತು ಯುಟಿಗಳು ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಿದಂತೆ ವಲಯಗಳು ಒಂದು ಜಿಲ್ಲೆ/ನಗರಸಭೆ / ಪುರಸಭೆ ಅಥವಾ ಉಪ-ವಿಭಾಗಗಳು ಮುಂತಾದ ಸಣ್ಣ ಆಡಳಿತ ಘಟಕಗಳಾಗಿರಬಹುದು. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ, ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸ್ಥಳೀಯ ಅಧಿಕಾರಿಗಳು ಕಂಟೈನ್ಮೆಂಟ್ ಮತ್ತು ಬಫರ್ ವಲಯಗಳನ್ನು ಗುರುತಿಸುತ್ತಾರೆ. ಕಂಟೈನ್ಮೆಂಟ್ ವಲಯಗಳಲ್ಲಿ, ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ ಇರುತ್ತದೆ. ದೇಶಾದ್ಯಂತ ಸೀಮಿತ ಸಂಖ್ಯೆಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ರಾತ್ರಿ ಕರ್ಫ್ಯೂ ಎಲ್ಲಾ ಅಗತ್ಯವಲ್ಲದ ಚಟುವಟಿಕೆಗಳು ಮತ್ತು ವ್ಯಕ್ತಿಗಳ ಚಲನೆಯ ಮೇಲೆ ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಜಾರಿಯಲ್ಲಿರುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624801

ಲಾಕ್ಡೌನ್ 4.0 - ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಗೃಹಸಚಿವಾಲಯದ ಮಾರ್ಗಸೂಚಿಯ ನಿರ್ಬಂಧಗಳನ್ನು ದುರ್ಬಲಗೊಳಿಸುವಂತಿಲ್ಲ, ಸ್ಥಳೀಯ ಮಟ್ಟದ ಮೌಲ್ಯಮಾಪನ ಮತ್ತು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಆಧಾರದ ಮೇಲೆ ಮಾತ್ರ ಅವುಗಳನ್ನು ಕಠಿಣಗೊಳಿಸಬಹುದು: ಗೃಹ ಸಚಿವಾಲಯ

ಕೋವಿಡ್-19 ನಿಗ್ರಹಕ್ಕೆ ಕೇಂದ್ರ ಗೃಹ ಸಚಿವಾಲಯವು 17.05.2020 ರಂದು ಲಾಕ್ಡೌನ್ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಾಕ್ಡೌನ್ ಅನ್ನು 31.05.2020 ರವರೆಗೆ ವಿಸ್ತರಿಸಿ, ನಿರ್ಬಂಧಗಳಲ್ಲಿ ವ್ಯಾಪಕವಾದ ಸಡಿಲಿಕೆ ನೀಡಲಾಗಿದೆ. ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ಲಾಕ್ಡೌನ್ ನಿರ್ಬಂಧಗಳಲ್ಲಿ ವ್ಯಾಪಕವಾದ ಸಡಿಲಿಕೆ ನೀಡಿದ್ದರೂ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಂಹೆಚ್ ಮಾರ್ಗಸೂಚಿಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಎಂಎಚ್ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪಷ್ಟಪಡಿಸಿದೆ. ಪರಿಸ್ಥಿತಿಯ ವಿಶ್ಲೇಷಣೆಯ ಆಧಾರದ ಮೇಲೆ ಅಗತ್ಯ ಕಂಡುಬಂದರೆ ಅವರು ಇತರ ಕೆಲವು ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ನಿರ್ಬಂಧಗಳನ್ನು ವಿಧಿಸಬಹುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624937

ಸಿಬಿಎಸ್ಇಯ ಹತ್ತು ಮತ್ತು ಹನ್ನೆರಡನೇ ತರಗತಿಗೆ ಉಳಿದ ಪರೀಕ್ಷೆಗಳ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪ್ರಕಟಿಸಿದ್ದಾರೆ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ನವದೆಹಲಿಯಲ್ಲಿಂದು, ಸಿಬಿಎಸ್ಇಯ ಹತ್ತು ರಗತಿ ಮತ್ತು ಹನ್ನೆರಡನೇ ತರಗತಿಯ ಉಳಿದ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದರು. ಹತ್ತನೇ ತರಗತಿಯ ಪರೀಕ್ಷೆಗಳನ್ನು ಈಶಾನ್ಯ ದೆಹಲಿಯ ವಿದ್ಯಾರ್ಥಿಗಳಿಗೆ ಮಾತ್ರ ನಡೆಸಲಾಗುವುದು ಎಂದು ಹೇಳಿದ ಸಚಿವರು, ಈಶಾನ್ಯ ದೆಹಲಿ ಸೇರಿದಂತೆ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಹನ್ನೆರಡನೇ ತರಗತಿಯ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಇರುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624944

ಒಂದು ರಾಷ್ಟ್ರ, ಒಂದು ಡಿಜಿಟಲ್ ವೇದಿಕೆಮತ್ತುಒಂದು ತರಗತಿ ಒಂದು ಚಾನಲ್ಗುಣಮಟ್ಟದ ಶಿಕ್ಷಣವನ್ನು ದೇಶದ ಮೂಲೆ ಮೂಲೆಗಳಿಗೂ ತಲುಪುವುದನ್ನು ಖಚಿತಪಡಿಸುತ್ತದೆ: ಮಾನವ ಸಂಪನ್ಮೂಲ ಸಚಿವರು

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಶಿಕ್ಷಣ ಕ್ಷೇತ್ರದ ಉತ್ತೇಜನಕ್ಕೆ ಹಲವಾರು ಉಪಕ್ರಮಗಳನ್ನು ಪ್ರಕಟಿಸಿದ್ದಾರೆ, ಮೇ 17 ರಂದು ನವದೆಹಲಿಯಲ್ಲಿ. ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ಅವರುಒಂದು ರಾಷ್ಟ್ರ, ಒಂದು ಡಿಜಿಟಲ್ ವೇದಿಕೆಮತ್ತುಒಂದು ತರಗತಿ ಒಂದು ಚಾನೆಲ್ಗುಣಮಟ್ಟದ ಶಿಕ್ಷಣ ಸಾಮಗ್ರಿಗಳು ದೇಶದ ದೂರದ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳನ್ನು ತಲುಪುವುದನ್ನು ಖಚಿತಪಡಿಸುತ್ತವೆ ಎಂದು ಹೇಳಿದರು. ಉಪಕ್ರಮಗಳು ಶಿಕ್ಷಣದಲ್ಲಿ ಲಭ್ಯತೆ ಮತ್ತು ಈಕ್ವಿಟಿಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು ಸುಧಾರಿಸುತ್ತವೆ ಎಂದು ಅವರು ಹೇಳಿದರು. ದಿವ್ಯಾಂಗ ಮಕ್ಕಳಿಗೂ ಸೂಕ್ತ ಪರಿಗಣನೆ ನೀಡಲಾಗುತ್ತಿದ್ದು, ಕ್ರಮಗಳು ಹೊಸ ಭಾರತದ ಸೃಷ್ಟಿಗೆ ಹೊಸ ಮಾದರಿಯನ್ನು ನೀಡುತ್ತವೆ ಎಂದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624949

ಹೊಸ ಆರ್ಥಿಕ ಸುಧಾರಣೆಗಳು ಭಾರತದ ಬಾಹ್ಯಾಕಾಶ ಮತ್ತು ಪರಮಾಣು ಕ್ಷೇತ್ರಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಒಂದು ಅಪೂರ್ವ ಅವಕಾಶವನ್ನು ನೀಡಿವೆ: ಡಾ. ಜಿತೇಂದ್ರ ಸಿಂಗ್

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಇತರ ವಿಷಯಗಳ ಜೊತೆಗೆ, ವೈದ್ಯಕೀಯ ಐಸೊಟೋಪ್ಗಳನ್ನು ಬಳಸಿಕೊಂಡು ಕೈಗೆಟುಕುವ ಕ್ಯಾನ್ಸರ್ ಚಿಕಿತ್ಸೆಯನ್ನು ಉತ್ತೇಜಿಸುತ್ತದೆ ಮತ್ತು ಪರಮಾಣು ಶಕ್ತಿ ಇಲಾಖೆಯ (ಡಿಎಇ) ಅಡಿಯಲ್ಲಿ ಪಿಪಿಪಿ (ಸಾರ್ವಜನಿಕ-ಖಾಸಗಿ-ಭಾಗವಹಿಸುವಿಕೆ) ಮಾದರಿಯಲ್ಲಿ ವಿಶೇಷ ರಿಯಾಕ್ಟರ್ ಸ್ಥಾಪಿಸಲು ಉದ್ದೇಶಿಸಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624746

ಕೋವಿಡ್-19 ನ್ನು ಎದುರಿಸುವ ಭಾರತದ ಪ್ರಯತ್ನಗಳನ್ನು ಹೆಚ್ಚಿಸಲು ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯಿಂದ ತಂತ್ರಜ್ಞಾನಗಳಿಗೆ ಅನುಮೋದನೆ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಸ್ವಾಯತ್ತ ಸಂಸ್ಥೆಯಾದ ತಂತ್ರಜ್ಞಾನ ಅಭಿವೃದ್ದಿ ಮಂಡಳಿ (ಟಿಡಿಬಿ)ಯು ಕೋವಿಡ್-19 ನಿಗ್ರಹಕ್ಕಾಗಿ ವಿಜ್ಞಾನಿಗಳು, ತಂತ್ರಜ್ಞರು, ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಪ್ರಯತ್ನಗಳನ್ನು ಹಣಕಾಸು ನೆರವು ನೀಡುವ ಮೂಲಕ ತಂತ್ರಜ್ಞಾನಗಳ ವ್ಯಾಪಾರೀಕರಣಕ್ಕೆ ಬೆಂಬಲ ನೀಡುತ್ತಿದೆ. ಇದಲ್ಲದೆ, ಜಗತ್ತು ಎದುರಿಸುತ್ತಿರುವ ಆರೋಗ್ಯ ರಕ್ಷಣೆಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ದೇಶದ ಪ್ರಯತ್ನಗಳನ್ನು ಬೆಂಬಲಿಸಲು ಟಿಡಿಬಿ ಹೊಸ ಪರಿಹಾರಗಳನ್ನು ಹುಡುಕುತ್ತಿದೆ. ಕಳೆದ ಕೆಲವು ವಾರಗಳಲ್ಲಿ, ಟಿಡಿಬಿ ತನ್ನ ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ವಿವಿಧ ಡೊಮೇನ್ಗಳ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದೆ. ಇಲ್ಲಿಯವರೆಗೆ, ಟಿಡಿಬಿ ವಾಣಿಜ್ಯೀಕರಣದತ್ತ ಆರು ಯೋಜನೆಗಳನ್ನು ಅನುಮೋದಿಸಿದೆ, ಇದರಲ್ಲಿ ಥರ್ಮಲ್ ಸ್ಕ್ಯಾನರ್ಗಳು, ವೈದ್ಯಕೀಯ ಸಾಧನಗಳು, ಮುಖಗವಸುಗಳು ಮತ್ತು ರೋಗನಿರ್ಣಯದ ಕಿಟ್ಗಳು ಸೇರಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624707

ಕೊರೊನಾದಿಂದ ಕಲಿತ ಪಾಠಗಳಿಂದ ಹೊಸ ಜೀವನ ವಿಧಾನಗಳನ್ನು ರೂಢಿಸಿಕೊಳ್ಳುವಂತೆ  ಉಪ ರಾಷ್ಟ್ರಪತಿ ಕರೆ ಕೊಟ್ಟಿದ್ದಾರೆ

ಕೊರೊನಾ ಕಾಲದಲ್ಲಿ ಹೊಸ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಒತ್ತಿಹೇಳಿದ್ದಾರೆ. ವೈರಾಣುವನ್ನು ಎದುರಿಸಿ ಹೊಸ ಸಾಮಾನ್ಯ ಜೀವನ ನಡೆಸಲು 12 ಅಂಶಗಳನ್ನೂ ಸೂಚಿಸಿರುವ ಅವರು, ಕೊರೊನಾ ಸಾಂಕ್ರಾಮಿಕವು ಇಲ್ಲಿಯವರೆಗೆ ಕಲಿಸಿರುವ ಕಲಿಕೆಯು ಪಾಠಗಳನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ. ವೈರಾಣು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯುವ ಸಾಧ್ಯತೆಯ ಸೂಚನೆಗಳ ನಡುವೆ ಜೀವನ ಮತ್ತು ಮಾನವೀಯತೆಯ ಬಗ್ಗೆ ಹೊಸ ವರ್ತನೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624953

ಪ್ರವಾಸೋದ್ಯಮ ಸಚಿವಾಲಯವು "ಸ್ವರ್ಗ ಸದೃಶ ಉತ್ತರಾಖಂಡ" ಎಂಬ ಶೀರ್ಷಿಕೆಯ 20 ನೇ ವೆಬಿನಾರ್ ಅನ್ನು "ದೇಖೋ ಅಪ್ನಾ ದೇಶ್" ವೆಬಿನಾರ್ ಸರಣಿಯಡಿಯಲ್ಲಿ ಆಯೋಜಿಸಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1624939

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: 2020-21ರ ಸಾಲಿನಲ್ಲಿ 2019-20ರಲ್ಲಿ ವಿಧಿಸಲಾಗಿದ್ದ ಶುಲ್ಕಕ್ಕಿಂತ ಹೆಚ್ಚಿಗೆ ಯಾವುದೇ ಶಾಲಾ ಶುಲ್ಕ ವಿಧಿಸದಂತೆ ಖಾಸಗಿ ಶಾಲೆಗಳಿಗೆ ಪಂಜಾಬ್ ಸರ್ಕಾರ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ / ಪ್ರಾಂಶುಪಾಲರಿಗೆ ಪತ್ರ ಬರೆಯಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಹೊಸ ಪ್ರಕರಣಗಳ ದೈನಂದಿನ ಎಣಿಕೆ ಕುಸಿತದ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿಗಳು ಮೇ 31 ರವರೆಗೆ ಕಟ್ಟುನಿಟ್ಟಿನ ಕರ್ಪ್ಯೂ ಸಹಿತವಾದ ಲಾಕ್‌ ಡೌನ್‌ ಘೋಷಿಸಿದ್ದಾರೆ. ಸೀಮಿತ ಸಾರ್ವಜನಿಕ ಸಾರಿಗೆಯ ಪುನರಾರಂಭ ಮತ್ತು ಮೇ 18 ರಿಂದ ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ಗರಿಷ್ಠ ಸಡಿಲಿಕೆ ನೀಡಲಾಗುತ್ತಿದೆ.
  • ಹರಿಯಾಣ: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಕೇಂದ್ರದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಅಂತಿಮ ಕಂತನ್ನು ಹರಿಯಾಣ ಮುಖ್ಯಮಂತ್ರಿಗಳು ಸ್ವಾಗತಿಸಿದ್ದು, ರಾಜ್ಯಗಳ ಸಾಲ ಮಿತಿಯನ್ನು ರಾಜ್ಯಗಳ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 3 ರಿಂದ 2020-21ರಲ್ಲಿ ಪ್ರತಿಶತ 5ಕ್ಕೆ ಹೆಚ್ಚಿಸಿರುವುದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರಮೋದಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಸಂಪನ್ಮೂಲಗಳು ದೊರೆಯಲಿವೆ. ಈ ನಿರ್ಧಾರವು ಖಂಡಿತವಾಗಿಯೂ ಹರಿಯಾಣ ಸರ್ಕಾರವು ಮಾಡುತ್ತಿರುವ ಪ್ರಯತ್ನಗಳಿಗೆ ಉತ್ತೇಜನವನ್ನು ನೀಡುತ್ತದೆ ಮತ್ತು ಕೋವಿಡ್-19ರಿಂದ ಪ್ರತೀಕೂಲ ಪರಿಣಾಮ ಎದುರಿಸುತ್ತಿರುವ ವಿವಿಧ ಕ್ಷೇತ್ರಗಳಿಗೆ ಉದ್ದೇಶಿತ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಸಹಾಯ ಮಾಡುತ್ತದೆ.
  • ಹಿಮಾಚಲ ಪ್ರದೇಶ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ 5ನೇ ಕಂತಿನಲ್ಲಿ ಮಾಡಿದ ಘೋಷಣೆಯನ್ನು ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ. ಮನ್ರೇಗಾ ಅಡಿಯಲ್ಲಿ 2020-21ನೇ ಸಾಲಿನ ಬಜೆಟ್ ನಲ್ಲಿ ಹಂಚಿಕೆ ಮಾಡಲಾಗಿದ್ದ 61 ಸಾವಿರ ಕೋಟಿಗೆ ಹೆಚ್ಚುವರಿಯಾಗಿ ರೂ. 40,000 ಕೋಟಿ ನೀಡುವ ನಿರ್ಧಾರ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಜನರಿಗೆ ಹೆಚ್ಚು ಉದ್ಯೋಗ ಖಾತ್ರಿ ಒದಗಿಸುವಲ್ಲಿ ಬಹು ದೂರ ಸಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯಗಳ ಸಾಲ ಮಿತಿಯನ್ನು ಈಗಿರುವ 3 ಪ್ರತಿಶತದಿಂದ ಜಿಎಸ್‌ಡಿಪಿಯ ಶೇ. 5ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸ್ವಾಗತಿಸಿದ್ದಾರೆ. ಇದು ತನ್ನದೇ ಆದ ಸಂಪನ್ಮೂಲಗಳನ್ನು ಸೃಷ್ಟಿಸಲು ರಾಜ್ಯಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಒಂದೇದಿನದಲ್ಲಿ 2,347 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿವೆ. ಇದು ರಾಜ್ಯದ ಸೋಂಕಿತರ ಸಂಖ್ಯೆಯನ್ನು 33,053 ಕ್ಕೆ ತೆಗೆದುಕೊಂಡು ಹೋಗಿದೆ. ಪ್ರಸ್ತುತ ರಾಜ್ಯದಲ್ಲಿ 24,161 ಸಕ್ರಿಯ ಪ್ರಕರಣಗಳು ಇದ್ದು, ಇತ್ತೀಚಿನ ವರದಿಯ ಪ್ರಕಾರ, 7688 ರೋಗಿಗಳು ಚೇತರಿಸಿಕೊಂಡಿದ್ದಾರೆ. ಬೆಸ್ಟ್ ಉದ್ಯೋಗಿಗಳ ಕ್ರಿಯಾ ಸಮಿತಿಯು ಅಗತ್ಯ ಸೇವಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಚಾಲಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡದಿರುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸಾರಿಗೆ ಬಸ್ಸುಗಳು ಇನ್ನೂ ಓಡುತ್ತಿರುವುದರಿಂದ ಪ್ರತಿಭಟನೆಯಿಂದ ರಸ್ತೆ ಸಾರಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬೆಸ್ಟ್ ಆಡಳಿತ ಹೇಳಿದೆ. ಏತನ್ಮಧ್ಯೆ, ಕೋವಿಡ್-19 ಸೋಂಕಿನ ಪ್ರಕರಣಗಳ ಹೆಚ್ಚಳದಿಂದಾಗಿ ಕಳೆದ ಸೋಮವಾರ ಮುಚ್ಚಲಾಗಿದ್ದ ನವೀ ಮುಂಬಯಿಯ ಎಪಿಎಂಸಿ ಮಾರುಕಟ್ಟೆ ಇಂದು ಮತ್ತೆ ತೆರೆಯಿತು.
  • ಗುಜರಾತ್: 391 ಹೊಸ ಪ್ರಕರಣಗಳು ವರದಿಯಾಗಿದ್ದು, ರೋಗಿಗಳ ಸಂಖ್ಯೆ 11,379 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 4499 ಆಗಿದೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ಚೇತರಿಕೆಯ ಪ್ರಮಾಣವೂ ಸುಧಾರಿಸಿದ್ದು ರಾಜ್ಯದಲ್ಲಿ ಶೇ 39.53 ಕ್ಕೆ ಏರಿದೆ. ಕಂಟೈನ್ಮೆಂಟ್ ಪ್ರದೇಶ ಮತ್ತು ಕಂಟೈನ್ಮೆಂಟ್ ಅಲ್ಲದ ಪ್ರದೇಶಗಳ ಸ್ಥಿತಿಯ ವಿವರ ಪಡೆಯಲು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಂದು ಜಿಲ್ಲಾಧಿಕಾರಿಗಳು, ಪುರಸಭೆ ಆಯುಕ್ತರು, ಡಿಡಿಒ, ಮತ್ತು ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
  • ರಾಜಸ್ಥಾನ: ಇಂದು,ಮಧ್ಯಾಹ್ನ 2 ರವರೆಗೆ 173 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದ ಒಟ್ಟು ಸೋಂಕಿತ ರೋಗಿಗಳ ಸಂಖ್ಯೆಯನ್ನು 5375 ಕ್ಕೆ ಹೆಚ್ಚಿಸಿದೆ. ಡುಂಗಾರ್ಪುರ್ ನಲ್ಲಿ 64 ಹೊಸ ಪ್ರಕರಣಗಳನ್ನು ವರದಿ ಆಗಿವೆ. ಇಲ್ಲಿಯವರೆಗೆ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 3072 ಆಗಿದ್ದರೆ, 2718 ರೋಗಿಗಳನ್ನು ಇಲ್ಲಿಯವರೆಗೆ ಬಿಡುಗಡೆ ಆಗಿದ್ದಾರೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ 187 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣ 4977 ಕ್ಕೆ ತಲುಪಿದೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆ 2403. ಇತ್ತೀಚಿನ ವರದಿಯ ಪ್ರಕಾರ ರಾಜ್ಯದಲ್ಲಿ 2326 ಸಕ್ರಿಯ ಪ್ರಕರಣಗಳಿವೆ.
  • ಗೋವಾ: ನಿನ್ನೆ 9 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಗೋವಾದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು 22 ಕ್ಕೆ ಹೆಚ್ಚಿಸಿದೆ. ಈ ಎಂಟು ಹೊಸ ಕೋವಿಡ್-19 ರೋಗಿಗಳು ಮಹಾರಾಷ್ಟ್ರದಿಂದ ರಸ್ತೆ ಮಾರ್ಗವಾಗಿ ಗೋವಾಕ್ಕೆ ಬಂದಿದ್ದರೆ, ಒಬ್ಬರು ರಸ್ತೆಯ ಮೂಲಕ ಕರ್ನಾಟಕದಿಂದ ಬಂದವರಾಗಿದ್ದಾರೆ. ಎಲ್ಲಾ ರೋಗಿಗಳು ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಛತ್ತೀಸಗಢ: ಛತ್ತೀಸಗಢದಲ್ಲಿ ಇನ್ನೂ 19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಕೋವಿಡ್ ಸೋಂಕಿನ ಪ್ರಕರಣಗಳು 86 ಕ್ಕೆ ಹೆಚ್ಚಳವಾಗಿದೆ. ಕೋವಿಡ್ ಸಂಬಂಧಿತ ಸಾವು ಸಂಭವಿಸಿಲ್ಲ ಎಂದು ರಾಜ್ಯ ವರದಿ ಮಾಡಿದೆ.
  • ಕೇರಳ: ಲಾಕ್‌ ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ: ಕೆಂಪು ವಲಯಗಳನ್ನು ಹೊರತುಪಡಿಸಿ ಜಿಲ್ಲೆಗಳಲ್ಲಿ ಅಲ್ಪ ದೂರ ಬಸ್ ಸೇವೆಗಳು ಮತ್ತು ಆಟೋ ರಿಕ್ಷಾಗಳನ್ನು ಸಂಚರಿಸುತ್ತಿವೆ. ಅಂತರ ಜಿಲ್ಲಾ ಸಾರಿಗೆಗೆ ಅಧಿಕಾರಿಗಳಿಂದ ಪಾಸ್ ಅಗತ್ಯವಿರುತ್ತದೆ. ಬೆವ್ಕೊ ಪಾನೀಯ ಮಳಿಗೆಗಳು, ಬಾರ್‌ ಗಳಲ್ಲಿ ವಿಶೇಷ ಕೌಂಟರ್‌ಗಳು ಮತ್ತು ಬಿಯರ್ ಮತ್ತು ವೈನ್ ಪಾರ್ಲರ್‌ಗಳು ಬುಧವಾರದಿಂದ ರಾಜ್ಯದಲ್ಲಿ ತೆರೆಯಲಿವೆ; ಮದ್ಯವನ್ನು ಖರೀದಿಸಲು ಟೋಕನ್ ಗಳನ್ನು ಮೊಬೈಲ್ ಆಪ್ ಮೂಲಕ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು +2 ರಾಜ್ಯ ಮಂಡಳಿ ಉಳಿದ ಪರೀಕ್ಷೆಗಳನ್ನು ಜೂನ್‌ ನಲ್ಲಿ ನಡೆಸಲಾಗುವುದು. ವಲಸೆ ಕಾರ್ಮಿಕರಿಗಾಗಿ ಕೊಟ್ಟಾಯಂನಿಂದ ಮೊದಲ ವಿಶೇಷ ರೈಲು ಇಂದು ಸಂಜೆ ಪಶ್ಚಿಮ ಬಂಗಾಳಕ್ಕೆ ತೆರಳಲಿದೆ. ಅಬುಧಾಬಿ ಮತ್ತು ದೋಹಾದಿಂದ ಎರಡು ವಿಮಾನಗಳು ಸಂಜೆ ಆಗಮಿಸಲಿವೆ. ಈಗಿನಂತೆ ರಾಜ್ಯದಲ್ಲಿ 101 ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 23 ಹಾಟ್ ಸ್ಪಾಟ್‌ಗಳಿವೆ.
  • ತಮಿಳುನಾಡು: 'ಅಮ್ಫಾನ್' ಚಂಡಮಾರುತದ ಪರಿಣಾಮವನ್ನು ರಾಜ್ಯವು ಎದುರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ, ಆದರೆ, ಭಾರತೀಯ ಹವಾಮಾನ ಇಲಾಖೆಯೊಂದಿಗೆ ಅದು ನಿರಂತರವಾಗಿ ಪರಿಸ್ಥಿತಿಯ ನಿಗಾ ವಹಿಸಿದೆ. ರಾಜ್ಯದಲ್ಲಿ 639 ಹೊಸ ಸೋಂಕು ವರದಿಯಾಗಿದ್ದು, ಕೋವಿಡ್ ಸಂಖ್ಯೆ ಭಾನುವಾರ 11 ಸಾವಿರವನ್ನು ದಾಟಿದೆ. ನಾಲ್ವರು ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳಲ್ಲಿ ದೇಶದ ಇದರ ಪ್ರದೇಶಗಳಿಂದ ಬಂದ 81 ಜನರು ಸೇರಿದ್ದಾರೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 11224 ತಲುಪಿದೆ, 6971 ಸಕ್ರಿಯ ಪ್ರಕರಣಗಳ ಪೈಕಿ 6750 ಚೆನ್ನೈನಲ್ಲಿವೆ.
  • ಕರ್ನಾಟಕ: ಇಂದು ಮಧ್ಯಾಹ್ನ 12 ರವರೆಗೆ 84 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 1231 ತಲುಪಿದೆ; ಸಾವು 37; ಚೇತರಿಸಿಕೊಂಡವರು 521; ಸಕ್ರಿಯ ಪ್ರಕರಣಗಳು 672. ಲಾಕ್‌ ಡೌನ್ ಮಾನದಂಡಗಳಲ್ಲಿ ಸಡಿಲಿಕೆಯನ್ನು ರಾಜ್ಯ ಪ್ರಕಟಿಸಿದೆ: ಎಲ್ಲಾ ಕೆಎಸ್‌.ಆರ್‌.ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ಶೇ.30 ಸಾಮರ್ಥ್ಯದೊಂದಿಗೆ ನಾಳೆ ಸಂಚರಿಸಲಿವೆ, ಆಟೋ ಮತ್ತು ಕ್ಯಾಬ್‌ ಗಳಿಗೆ ಇಬ್ಬರು ಪ್ರಯಾಣಿಕರೊಂದಿಗೆ ಅವಕಾಶ ನೀಡಲಾಗಿದೆ, ಸಲೂನ್ಸ್ ತೆರೆಯಲು ಅನುಮತಿಸಲಾಗಿದೆ ಮತ್ತು ಉದ್ಯಾನವನಗಳು ಬೆಳಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 5 ರಿಂದ 7ರವರೆಗೆ ತೆರೆಯುತ್ತವೆ ಮಾಲ್‌ ಗಳು ಮತ್ತು ಸಾರ್ವಜನಿಕ ಕೂಟಗಳಿಗೆ ನಿರ್ಬಂಧಗಳಿದ್ದು, ರಾತ್ರಿ ಕರ್ಫ್ಯೂ ಮುಂದುವರೆಯುತ್ತದೆ.
  • ಆಂಧ್ರಪ್ರದೇಶ: ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ರಾಜ್ಯವು ಮೇ 31 ರವರೆಗೆ ಲಾಕ್‌ ಡೌನ್ ವಿಸ್ತರಿಸಿದೆ; ಕೆಂಪು ವಲಯಗಳಲ್ಲಿ ಕಠಿಣ ಕ್ರಮಗಳು. ಎಂಎಸ್‌.ಎಂಇಗಳಿಗೆ ನೆರವಾಗಲು ಮೊದಲ ಕಂತಿನ 904.89 ಕೋಟಿ ರೂ.ಗಳ ಪ್ಯಾಕೇಜನ್ನು ಮೇ 22 ರಂದು ಬಿಡುಗಡೆ ಮಾಡಲಾಗುವುದು. ಕಳೆದ 24 ಗಂಟೆಗಳಲ್ಲಿ 52 ಹೊಸ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. 94 ಜನರನ್ನು ಬಿಡುಗಡೆ ಮಾಡಲಾಗಿದೆ. ಇತರ ರಾಜ್ಯಗಳಿಂದ ಹಿಂದಿರುಗಿದ 150 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 125 ಸಕ್ರಿಯವಾಗಿವೆ ಮತ್ತು 2 ರೋಗಿಗಳು ಗುಣಮುಖರಾದ ನಂತರ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು: 2282. ಸಕ್ರಿಯ: 705, ಬಿಡುಗಡೆಯಾದವರು: 1527, ಸಾವುಗಳು: 50. ಸೋಂಕಿರುವ ಪ್ರಮುಖವಾಗಿರುವ ಜಿಲ್ಲೆಗಳು: ಕರ್ನೂಲ್ (615), ಗುಂಟೂರು (417), ಕೃಷ್ಣ (382).
  • ತೆಲಂಗಾಣ: ಸರ್ಕಾರಿ ಆಸ್ಪತ್ರೆಗಳಲ್ಲಿ, ಗಾಂಧಿ ಆಸ್ಪತ್ರೆಯಲ್ಲಿ, ಎಲ್ಲಾ ಸೇವೆಗಳು ಪುನಾರಂಭವಾಗಲಿವೆ. ಚೆಸ್ಟ್ ಆಸ್ಪತ್ರೆ ನೋಡಲ್ ಕೋವಿಡ್ -19 ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಮಂಚೇರಿಯಲ್ ಜಿಲ್ಲೆಗೆ ಆಗಮಿಸಿದ ಮತ್ತೆ ಏಳು ವಲಸಿಗರಲ್ಲಿ ಮತ್ತು ಮುಂಬೈನಿಂದ ಹಿಂದಿರುಗಿದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 9 ವಲಸಿಗರಲ್ಲಿ ಇಂದು ಸೋಂಕು ದೃಢವಾಗಿದೆ. ನಿನ್ನೆ ತನಕ ಒಟ್ಟು ಸಕಾರಾತ್ಮಕ ಪ್ರಕರಣಗಳು 1551.
  • ಅರುಣಾಚಲ ಪ್ರದೇಶ: ರಾಜ್ಯ ಸಾರಿಗೆ ಬಸ್ಸುಗಳು ಇಂದಿನಿಂದ ಅಂತರ ಜಿಲ್ಲಾ ಪ್ರಯಾಣಕ್ಕಾಗಿ ಮಾತ್ರ ಪ್ರಾರಂಭವಾಗಿವೆ. ಕೇವಲ ಐವತ್ತು ಪ್ರತಿಶತ ಬಸ್ಸುಗಳು ಮಾತ್ರ ರಸ್ತೆಗಿಳಿದಿವೆ.
  • ಅಸ್ಸಾಂ: ಅಸ್ಸಾಂನಲ್ಲಿ, ಮುಂಬೈನಿಂದ ಮರಳಿದ್ದ ಕೋವಿಡ್ -19 ಮ್ತತು ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ; ಗೋಲಾಘಾಟ್‌ ನಲ್ಲಿ ಇನ್ನೂ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ; ಒಟ್ಟು 104 ಪ್ರಕರಣಗಳಿದ್ದು ಸಕ್ರಿಯ ಪ್ರಕರಣಗಳು 58 ಮತ್ತು ಸಾವು 3.
  • ಮಣಿಪುರ: ಮಣಿಪುರದಲ್ಲಿ 1208 ಜನರು ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿದ್ದು 4165 ಜನರು ಸಮುದಾಯ ಕ್ಯಾರೆಂಟೈನ್ ಕೇಂದ್ರಗಳಲ್ಲಿದ್ದಾರೆ.
  • ಮೇಘಾಲಯ: ಮೇಘಾಲಯದಲ್ಲಿ ಏಕೈಕ ಕೋವಿಡ್ 19 ಸೋಂಕಿನ ಪ್ರಕರಣದ ಎರಡನೇ ಮರು ತಪಾಸಣೆ ಮಾಡಲಾಯಿತು ಮತ್ತು ಪರೀಕ್ಷೆಯಲ್ಲಿ ಸೋಂಕಿಲ್ಲ ಎಂಬ ವರದಿ ಬಂದಿದೆ. ರೋಗಿಯನ್ನು ಚೇತರಿಸಿಕೊಡಿದ್ದಾರೆ ಎಂದು ಘೋಷಿಸಬಹುದು ಎಂದು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ.
  • ಮಿಜೋರಾಂ: ಮಿಜೋರಾಂನಾದ್ಯಂತ 131 ಲಾಕ್‌ ಡೌನ್ / ಕರ್ಫ್ಯೂ ಉಲ್ಲಂಘನೆಯ ಘಟನೆಗಳು ವರದಿಯಾಗಿವೆ. 19 ಎಫ್‌.ಐಆರ್‌ಗಳನ್ನು ದಾಖಲಿಸಲಾಗಿದ್ದು, 87 ಜನರನ್ನು ಬಂಧಿಸಲಾಗಿದೆ.
  • ನಾಗಾಲ್ಯಾಂಡ್: ಮೇ 18 ರಿಂದ ರಾಜ್ಯಕ್ಕೆ ಪ್ರವೇಶಿಸುವ ಎಲ್ಲ ವ್ಯಕ್ತಿಗಳಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಮತ್ತು ನಂತರ 14 ದಿನಗಳ ಕಡ್ಡಾಯ ಹೋಂ ಕ್ಯಾರೆಂಟೈನ್ ಗೆ ಸರ್ಕಾರ ಆದೇಶಿಸಿದೆ. ದಿಮಾಪುರ್ ಡಿಸಿ ಇನ್ನೂ 5 ಕ್ಯಾರೆಂಟೈನ್ ಕೇಂದ್ರಗಳಿಗೆ ಕೋರಿಕೆ ಸಲ್ಲಿಸಿದ್ದಾರೆ. ಕೇಂದ್ರಗಳು ಈದ್ಗಾ, ಮದರಸಾ, ಜೈನ ಭವನ, ಹಿಂದೂ ಮಂದಿರ ಸಮುದಾಯ ಭವನ, ಗುರುದ್ವಾರ ಲಾಡ್ಜ್ ಮತ್ತು ದುರ್ಗಾಮಂದಿರ್ ಲಾಡ್ಜ್.
  • ಸಿಕ್ಕಿಂ: ದೇಶದ ವಿವಿಧ ಭಾಗಗಳಿಂದ ಸಿಕ್ಕಿಂ ಜನರನ್ನು ಸ್ಥಳಾಂತರಿಸುವ ಪ್ರಗತಿಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ರಾಜ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
  • ತ್ರಿಪುರ: ಶ್ರಮಿಕ್ ವಿಶೇಷ ರೈಲು ಚೆನ್ನೈನಲ್ಲಿ ಸಿಲುಕಿದ್ದ ನಾಗರಿಕರೊಂದಿಗೆ ಅಗರ್ತಲಾ ತಲುಪಿತು. ಮತ್ತೊಂದು ರೈಲು ಇಂದು ಬೆಂಗಳೂರಿನಿಂದ ಅಗರ್ತಲಾ ತಲುಪುವ ನಿರೀಕ್ಷೆಯಿದೆ.

ಪಿ ಐ ಬಿ ವಾಸ್ತವ ಪರೀಶೀಲನೆ

***



(Release ID: 1624962) Visitor Counter : 250