ಪ್ರಧಾನ ಮಂತ್ರಿಯವರ ಕಛೇರಿ
‘ಅಂಫಾನ್’ ಚಂಡಮಾರುತ ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ
प्रविष्टि तिथि:
18 MAY 2020 5:39PM by PIB Bengaluru
‘ಅಂಫಾನ್’ ಚಂಡಮಾರುತ ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ
ಪರಿಸ್ಥಿತಿಯನ್ನು ನಿರ್ವಹಿಸಲು 25 ಎನ್ಡಿಆರ್ಎಫ್ ತಂಡಗಳ ನಿಯೋಜನೆ
ಬಂಗಾಳಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ‘ಅಂಫಾನ್’ಚಂಡಮಾರುತದ ನಿರ್ವಹಣೆ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು.

ಪ್ರಧಾನಮಂತ್ರಿಯವರು ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ಪರಿಶೀಲಿಸಿದರು ಮತ್ತು ಪ್ರತಿಕ್ರಿಯೆಯ ಸಿದ್ಧತೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಾಣಾ ಪಡೆ (ಎನ್‌ಡಿಆರ್‌ಎಫ್) ಮಂಡಿಸಿದ ಸ್ಥಳಾಂತರ ಯೋಜನೆಯನ್ನು ಪರಿಶೀಲಿಸಿದರು. 25 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 12 ತಂಡಗಳು ಸಿದ್ಧವಾಗಿವೆ. ಇತರ 24 ಎನ್‌ಡಿಆರ್‌ಎಫ್ ತಂಡಗಳು ದೇಶದ ವಿವಿಧ ಭಾಗಗಳಲ್ಲಿ ಸನ್ನದ್ಧವಾಗಿವೆ ಎಂದು ಎನ್‌ಡಿಆರ್‌ಎಫ್ ಮಹಾ ನಿರ್ದೆಶಕರು ಮಾಹಿತಿ ನೀಡಿದರು.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿಯ ಪ್ರಧಾನ ಸಲಹೆಗಾರ ಶ್ರೀ ಪಿ.ಕೆ. ಸಿನ್ಹಾ, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ, ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***
(रिलीज़ आईडी: 1624959)
आगंतुक पटल : 227
इस विज्ञप्ति को इन भाषाओं में पढ़ें:
Urdu
,
Punjabi
,
Marathi
,
Assamese
,
Odia
,
Telugu
,
Tamil
,
English
,
हिन्दी
,
Bengali
,
Manipuri
,
Gujarati
,
Malayalam