ಗೃಹ ವ್ಯವಹಾರಗಳ ಸಚಿವಾಲಯ

ಲಾಕ್ ಡೌನ್ 4.0 - ಎಂಎಚ್ಎ ಮಾರ್ಗಸೂಚಿಯಲ್ಲಿನ ನಿರ್ಬಂಧಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ದುರ್ಬಲಗೊಳಿಸುವಂತಿಲ್ಲ

Posted On: 18 MAY 2020 1:43PM by PIB Bengaluru

ಲಾಕ್ ಡೌನ್ 4.0 - ಎಂಎಚ್ಎ ಮಾರ್ಗಸೂಚಿಯಲ್ಲಿನ ನಿರ್ಬಂಧಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ದುರ್ಬಲಗೊಳಿಸುವಂತಿಲ್ಲ;

ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಮತ್ತು ಸ್ಥಳೀಯ ಮಟ್ಟದಲ್ಲಿ ಮೌಲ್ಯಮಾಪನ ಆಧರಿಸಿ ಮತ್ತಷ್ಟು ಕಠಿಣಗೊಳಿಸಬಹುದಷ್ಟೆ: ಎಂಎಚ್ಎ

 

ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) 17.05.2020ರಂದು ಲಾಕ್ ಡೌನ್ ನಿರ್ಬಂಧಗಳ ಕುರಿತಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಾಕ್ ಡೌನ್ ಅವಧಿಯನ್ನು 31.05.2020 ವರೆಗೆ ವಿಸ್ತರಣೆ ಮಾಡಲಾಗಿದ್ದು, ನಿರ್ಬಂಧಗಳಲ್ಲಿ ವ್ಯಾಪಕ ವಿನಾಯಿತಿಗಳನ್ನು ನೀಡಲಾಗಿದೆ.

ಇಂದಿನಿಂದ ಜಾರಿಗೆ ಬಂದಿರುವ ಹೊಸ ಮಾರ್ಗಸೂಚಿಗಳ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) 17.05.2020ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಂತೆ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ರೂಪಿಸಬಹುದು. ಕೆಂಪು/ಕಿತ್ತಳೆ ವಲಯಗಳೊಳಗೆ ನಿರ್ಬಂಧಿತ ಮತ್ತು ಬಫರ್ ವಲಯಗಳನ್ನು ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಮತ್ತು ಸ್ಥಳೀಯ ಮಟ್ಟದ ತಾಂತ್ರಿಕ ಮಾಹಿತಿ ಆಧರಿಸಿ ಸ್ಥಳೀಯ ಅಧಿಕಾರಿಗಳು ಗುರುತಿಸಬೇಕು.

ನಿರ್ಬಂಧಿತ ಪ್ರದೇಶದ ಒಳಗೆ ಹಿಂದೆ ಕಾಯ್ದುಕೊಂಡಂತೆ ಕಠಿಣ ಮಾನದಂಡಗಳನ್ನು ಅನುಸರಿಸಬೇಕು ಮತ್ತು ಕೇವಲ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ದೇಶಾದ್ಯಂತ ಸೀಮಿತ ಚಟುವಟಿಕೆಗಳಿಗೆ ಹೇರಿರುವ ನಿರ್ಬಂಧ ಮುಂದುವರಿಯಲಿದೆ. ಎಂಎಚ್ಎ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿರುವ ನಿಗದಿತ ನಿಷೇಧಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಎಂಎಚ್ಎ ಪರಿಷ್ಕೃತ ಲಾಕ್ ಡೌನ್ ನಿಯಮಾವಳಿಗಳಲ್ಲಿ ವ್ಯಾಪಕ ವಿನಾಯಿತಿಗಳನ್ನು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಂಎಚ್ಎ ವಿಧಿಸಿರುವ ಮಾರ್ಗಸೂಚಿಗಳಲ್ಲಿನ ನಿರ್ಬಂಧಗಳನ್ನು ದುರ್ಬಲಗೊಳಿಸಬಾರದು ಎಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪುನರುಚ್ಛರಿಸಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ತಳಮಟ್ಟದ ಸ್ಥಿತಿಗತಿ ಆಧರಿಸಿ ಅಗತ್ಯಬಿದ್ದರೆ ಇನ್ನೂ ಕೆಲವು ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ನಿರ್ಬಂಧಗಳನ್ನು ಹೇರಬಹುದು.

ಸ್ಥಳೀಯ ಮಟ್ಟದಲ್ಲಿ ವಲಯಗಳನ್ನು ರೂಪಿಸುವ ವೇಳೆ ಎಂಒಎಚ್ಎಫ್ ಡಬ್ಲ್ಯೂಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿರುವ ಮಾನದಂಡಗಳನ್ನು ಪರಿಗಣಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಅಲ್ಲದೆ ಪರಿಷ್ಕೃತ ಮಾರ್ಗಸೂಚಿಗಳ ಬಗ್ಗೆ ಜನಸಾಮಾನ್ಯರ ಅನುಕೂಲಕ್ಕಾಗಿ ಸ್ಥಳೀಯ ಮಟ್ಟದಲ್ಲಿ ರಾಜ್ಯಗಳ ಮಾರ್ಗಸೂಚಿ ಮತ್ತು ಕೇಂದ್ರದ ಮಾರ್ಗಸೂಚಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಲಾಗಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿರುವ ಅಧಿಕೃತ ಸಂವಹನ ಪತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

***



(Release ID: 1624937) Visitor Counter : 209