ಹಣಕಾಸು ಸಚಿವಾಲಯ
ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಕೃಷಿ ಮೂಲಸೌಕರ್ಯ ಲಾಜಿಸ್ಟಿಕ್ಸ್, ಸಾಮರ್ಥ್ಯ ವೃದ್ಧಿ, ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಬಲಪಡಿಸುವ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು
Posted On:
15 MAY 2020 7:42PM by PIB Bengaluru
ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಕೃಷಿ ಮೂಲಸೌಕರ್ಯ ಲಾಜಿಸ್ಟಿಕ್ಸ್, ಸಾಮರ್ಥ್ಯ ವೃದ್ಧಿ, ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಬಲಪಡಿಸುವ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು
- ರೈತರಿಗಾಗಿ ಫಾರ್ಮ್-ಗೇಟ್ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿ
- ಮೈಕ್ರೋ ಫುಡ್ ಎಂಟರ್ಪ್ರೈಸಸ್ (ಎಂಎಫ್ಇ) ಔಪಚಾರಿಕೀಕರಣಕ್ಕಾಗಿ 10,000 ಕೋಟಿ ರೂ.
- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಮೂಲಕ ಮೀನುಗಾರರಿಗೆ 20,000 ಕೋಟಿ ರೂ.
- ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ
- ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ - ರೂ. 15,000 ಕೋಟಿ
- ಗಿಡಮೂಲಿಕೆ ಕೃಷಿಗೆ ಪ್ರೋತ್ಸಾಹ: 4,000 ಕೋಟಿ ರೂ
- ಜೇನುಸಾಕಣೆಯ ಉಪಕ್ರಮಗಳು - 500 ಕೋಟಿ ರೂ
- ‘TOP’ to TOTAL - 500 ಕೋಟಿ ರೂ
- ಕೃಷಿ ಕ್ಷೇತ್ರದಲ್ಲಿ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣಾ ಕ್ರಮಗಳು
- ರೈತರಿಗೆ ಉತ್ತಮ ಬೆಲೆ ಒದಗಿಸಲು ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ
- ರೈತರಿಗೆ ಮಾರುಕಟ್ಟೆ ಆಯ್ಕೆಗಳನ್ನು ಒದಗಿಸಲು ಕೃಷಿ ಮಾರುಕಟ್ಟೆ ಸುಧಾರಣೆಗಳು
- ಕೃಷಿ ಉತ್ಪಾದನೆ ಬೆಲೆ ಮತ್ತು ಗುಣಮಟ್ಟದ ಭರವಸೆ
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೇ, 12 2020 ರಂದು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಘೋಷಿಸಿದ್ದಾರೆ - ಇದು ಭಾರತದ ಜಿಡಿಪಿಯ ಶೇ.10 ಕ್ಕೆ ಸಮಾನವಾಗಿದೆ. ಅವರು आत्मनिर्भर भारत अभियान ಅಥವಾ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸ್ಪಷ್ಟ ಕರೆ ನೀಡಿದರು. ಸ್ವಾವಲಂಬಿ ಭಾರತದ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಅವರು ವಿವರಿಸಿದ್ದರು.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಮೂಲಸೌಕರ್ಯ ಲಾಜಿಸ್ಟಿಕ್ಸ್, ಸಾಮರ್ಥ್ಯ ವೃದ್ಧಿ, ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಬಲಪಡಿಸುವ 3 ನೇ ಹಂತದ ಕ್ರಮಗಳನ್ನು ಪ್ರಕಟಿಸಿದರು.
ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹ ಮಿತಿಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದೂ ಸೇರಿದಂತೆ ಈ 11 ಕ್ರಮಗಳಲ್ಲಿ 8 ಕ್ರಮಗಳು ಕೃಷಿ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು 3 ಕ್ರಮಗಳು ಆಡಳಿತಾತ್ಮಕ ಮತ್ತು ಆಡಳಿತ ಸುಧಾರಣೆಗಳಾಗಿವೆ ಎಂದು ಶ್ರೀಮತಿ ಸೀತಾರಾಮನ್ ವಿವರಿಸಿದರು..
ರೈತರನ್ನು ಬೆಂಬಲಿಸಲು ಕೃಷಿ ಸಂಬಂಧಿತ ಎರಡು ಮಹತ್ವದ ಕ್ರಮಗಳನ್ನು ನಿನ್ನೆ ಸಹ ಘೋಷಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು, ಹಿಂಗಾರು ನಂತರದ ಸುಗ್ಗಿ ಮತ್ತು ಮುಂಗಾರು ಕೃಷಿ ವೆಚ್ಚಗಳಿಗಾಗಿ ಆರ್ಆರ್ಬಿಗಳು ಮತ್ತು ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ಒದಗಿಸಲು ನಬಾರ್ಡ್ ಮೂಲಕ ಹೆಚ್ಚುವರಿ ತುರ್ತು ಮೂಲ ಬಂಡವಾಳ ಸೌಲಭ್ಯವಾಗಿ 30,000 ಕೋಟಿ ರೂ. ಮತ್ತು 2020 ರ ಡಿಸೆಂಬರ್ ವೇಳೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 2.5 ಕೋಟಿ ಪಿಎಂ-ಕಿಸಾನ್ ಫಲಾನುಭವಿಗಳನ್ನು ಒಳಗೊಳ್ಳುವ ಮೂಲಕ ಕೃಷಿ ಕ್ಷೇತ್ರಕ್ಕೆ 2 ಲಕ್ಷ ಕೋಟಿ ರೂ. ಯೋಜನೆಗಳನ್ನು ನಿನ್ನೆ ಪ್ರಕಟಿಸಲಾಗಿದೆ.
ಕಳೆದ 2 ತಿಂಗಳುಗಳಲ್ಲಿ ಸರ್ಕಾರ ಮಾಡಿರುವ ಕ್ರಮಗಳನ್ನುವಿವರಿಸಿದ ಹಣಕಾಸು ಸಚಿವರು, ಲಾಕ್ಡೌನ್ ಅವಧಿಯಲ್ಲಿ 74,300 ಕೋಟಿ ರೂ.ಗೂ ಅಧಿಕ ಮೌಲ್ಯದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖರೀದಿ, 18,700 ಕೋಟಿ ರೂ.ಗಳ ಪಿಎಂ ಕಿಸಾನ್ ನಿಧಿ ವರ್ಗಾವಣೆ ಮತ್ತು 6,400 ಕೋಟಿ ರೂ.ಪಿಎಂ ಫಸಲ್ ಬೀಮಾ ಯೋಜನೆಯ ಕ್ಲೈಮುಗಳ ಪಾವತಿ ಮಾಡಲಾಗಿದೆ ಎಂದರು.
ಇದಲ್ಲದೆ, ಲಾಕ್ಡೌನ್ ಸಮಯದಲ್ಲಿ ಹಾಲಿನ ಬೇಡಿಕೆ ಶೇ.20-25 ರಷ್ಟು ಕಡಿಮೆಯಾಗಿದೆ. ಅದರಂತೆ, 360 ಎಲ್ಎಲ್ಪಿಡಿ ದೈನಂದಿನ ಮಾರಾಟಕ್ಕೆ ಬದಲಾಗಿ ಸಹಕಾರಿ ಸಂಸ್ಥೆಗಳಿಂದ ದಿನಕ್ಕೆ 560 ಲಕ್ಷ ಲೀಟರ್ (ಎಲ್ಎಲ್ಪಿಡಿ) ಸಂಗ್ರಹಿಸಲಾಗಿದೆ. ಒಟ್ಟು 111 ಕೋಟಿ ಲೀಟರ್ ಹಾಲನ್ನು ಹೆಚ್ಚುವರಿಯಾಗಿ ಖರೀದಿಸಿ 4,100 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ.
ಇದರೊಂದಿಗೆ, 2020-21ರವರೆಗೆ ಡೈರಿ ಸಹಕಾರಿ ಸಂಸ್ಥೆಗಳಿಗೆ ವಾರ್ಷಿಕವಾಗಿ ಶೇ.2 ಬಡ್ಡಿ ಸಹಾಯಧನ ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಪ್ರಾಮಾಣಿಕ ಪಾವತಿ / ಬಡ್ಡಿ ಸೇವೆಯ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ ಶೇ.2 ಬಡ್ಡಿ ಸಹಾಯಧನವನ್ನು ಸಹ ಒದಗಿಸಲಾಗುತ್ತದೆ. ಈ ಯೋಜನೆಯು 5,000 ಕೋಟಿ ರೂ. ಹೆಚ್ಚುವರಿ ಹಣದ ಹರಿವನ್ನು ಒದಗಿಸಲಿದ್ದು, 2 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಮಾರ್ಚ್ 24 ರಂದು ಮೀನುಗಾರಿಕೆ ಕ್ಷೇತ್ರಕ್ಕಾಗಿ ಮಾಡಿದ ಎಲ್ಲಾ 4 ಕೋವಿಡ್ ಸಂಬಂಧಿತ ಘೋಷಣೆಗಳನ್ನು ಜಾರಿಗೆ ತರಲಾಗಿದೆ. ಇದಲ್ಲದೆ, 31.03.2020 ರಂದು ಮುಕ್ತಾಯಗೊಳ್ಳುವ 242 ನೋಂದಾಯಿತ ಸೀಗಡಿ ಮೊಟ್ಟೆ ಕೇಂದ್ರಗಳು ಮತ್ತು ನೌಪ್ಲಿ ಸಾಕಾಣಿಕೆ ಮೊಟ್ಟೆ ಕೇಂದ್ರಗಳ ನೋಂದಣಿಯನ್ನು 3 ತಿಂಗಳವರೆಗೆ ವಿಸ್ತರಿಸಲಾಗಿದೆ. ಒಳನಾಡು ಮೀನುಗಾರಿಕೆಯನ್ನು ಒಳಗೊಳ್ಳಲು ಕಡಲ ಮೀನುಗಾರಿಕೆ ಮತ್ತು ಮತ್ಸೋದ್ಯಮ ಕಾರ್ಯಾಚರಣೆಯನ್ನು ಸಡಿಲಿಸಲಾಗಿದೆ.
ಇಂದು ಮಾಡಿರುವದ ಘೋಷಣೆಗಳು ರೈತರು, ಮೀನುಗಾರರು, ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಮೇಲೆ ದೀರ್ಘಕಾಲೀನ ಮತ್ತು ನಿರಂತರ ಪರಿಣಾಮ ಬೀರುತ್ತವೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಮೂಲಸೌಕರ್ಯ ಲಾಜಿಸ್ಟಿಕ್ಸ್ ಮತ್ತು ಸಾಮರ್ಥ್ಯ ವೃದ್ಧಿಗೆ ಹಣಕಾಸು ಸಚಿವರು ಪ್ರಕಟಿಸಿದ ಕ್ರಮಗಳು:
1. ರೈತರಿಗೆ ಫಾರ್ಮ್ ಗೇಟ್ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿ
ಕೃಷಿ ಮೂಲಸೌಕರ್ಯ ಯೋಜನೆಗಳಿಗೆ ಪಾರ್ಮ್-ಗೇಟ್ ಮತ್ತು ಸಮೂಹ ಸ್ಥಳಗಳಲ್ಲಿ (ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಇತ್ಯಾದಿ) ಧನಸಹಾಯಕ್ಕಾಗಿ 1,00,000 ಕೋಟಿ ರೂ. ನೀಡಲಾಗುವುದು. ಫಾರ್ಮ್-ಗೇಟ್ ಮತ್ತು ಸಮೂಹ ಸ್ಥಳಗಳಲ್ಲಿ, ಕೈಗೆಟುಕುವ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಕೊಯ್ಲು ನಂತರದ ನಿರ್ವಹಣಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ. ನಿಧಿಯನ್ನು ಕೂಡಲೇ ಸ್ಥಾಪಿಸಲಾಗುವುದು.
2. ಮೈಕ್ರೋ ಫುಡ್ ಎಂಟರ್ಪ್ರೈಸಸ್ (ಎಂಎಫ್ಇ) ಔಪಚಾರಿಕೀಕರಣಕ್ಕಾಗಿ 10,000 ಕೋಟಿ ರೂ.
ಎಫ್ಎಸ್ಎಸ್ಎಐ ಆಹಾರ ಮಾನದಂಡಗಳನ್ನು ಸಾಧಿಸಲು, ಬ್ರಾಂಡ್ಗಳನ್ನು ನಿರ್ಮಿಸಲು ಮತ್ತು ಮಾರ್ಕೆಟಿಂಗ್ ಮಾಡಲು ಅಸ್ತಿತ್ವದಲ್ಲಿರುವ ಸಣ್ಣ ಆಹಾರ ಉದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ಬೆಂಬಲಿಸಬೇಕಾಗಿದೆ. ತಾಂತ್ರಿಕ ಉನ್ನತೀಕರಣದ ಅಗತ್ಯವಿರುವ 2 ಲಕ್ಷ ಎಂಎಫ್ಇಗಳಿಗೆ ಸಹಾಯ ಮಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಉತ್ತೇಜಿಸುವ ಯೋಜನೆ ‘ವೋಕಲ್ ಫಾರ್ ಲೋಕಲ್ ವಿಥ್ ಗ್ಲೋಬಲ್ ಔಟ್ ರೀಚ್’ ಪ್ರಾರಂಭಿಸಲಾಗುವುದು. ಮಹಿಳೆಯರು ಮತ್ತು ಎಸ್ಸಿ / ಎಸ್ಟಿ ಒಡೆತನದ ಘಟಕಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗುವುದು ಮತ್ತು ಕ್ಲಸ್ಟರ್ ಆಧಾರಿತ ವಿಧಾನ (ಉದಾ. ಉತ್ತರ ಪ್ರದೇಶದಲ್ಲಿ ಮಾವು, ಕರ್ನಾಟಕದಲ್ಲಿ ಟೊಮೆಟೊ, ಆಂಧ್ರಪ್ರದೇಶದಲ್ಲಿ ಮೆಣಸಿನಕಾಯಿ, ಮಹಾರಾಷ್ಟ್ರದಲ್ಲಿ ಕಿತ್ತಳೆ ಇತ್ಯಾದಿ) ಅನುಸರಿಸಲಾಗುವುದು.
3. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಮೂಲಕ ಮೀನುಗಾರರಿಗೆ 20,000 ಕೋಟಿ ರೂ.
ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆಯ ಸಮಗ್ರ, ಸುಸ್ಥಿರ, ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಪಿಎಂಎಂಎಸ್ವೈ ಅನ್ನು ಪ್ರಾರಂಭಿಸುತ್ತದೆ. ಸಾಗರ, ಒಳನಾಡು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಚಟುವಟಿಕೆಗಳಿಗೆ 11,000 ಕೋಟಿ ರೂ. ಮೂಲಸೌಕರ್ಯಕ್ಕಾಗಿ - ಮೀನುಗಾರಿಕೆ ಬಂದರುಗಳು, ಕೋಲ್ಡ್ ಚೈನ್, ಮಾರ್ರುಕಟ್ಟೆ ಇತ್ಯಾದಿಗಳು-9000 ಕೋಟಿ ರೂ. ಒದಗಿಸಲಾಗುವುದು. ಕಡಲಕಳೆ ಕೃಷಿ, ಅಲಂಕಾರಿಕ ಮೀನುಗಾರಿಕೆ ಜೊತೆಗೆ ಹೊಸ ಮೀನುಗಾರಿಕೆ ಹಡಗುಗಳು, ಪತ್ತೆಹಚ್ಚುವಿಕೆ, ಪ್ರಯೋಗಾಲಯ ಜಾಲ ಇತ್ಯಾದಿಗಳು ಪ್ರಮುಖ ಚಟುವಟಿಕೆಗಳಾಗಲಿವೆ. ಮೀನುಗಾರರಿಗೆ ನಿಷೇಧದ ಅವಧಿಯ ಬೆಂಬಲ (ಮೀನುಗಾರಿಕೆಗೆ ಅನುಮತಿ ಇಲ್ಲದ ಅವಧಿಯಲ್ಲಿ), ವೈಯಕ್ತಿಕ ಮತ್ತು ದೋಣಿ ವಿಮೆ ಇರುತ್ತದೆ. ಇದು 5 ವರ್ಷಗಳಲ್ಲಿ 70 ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆಗೆ ಕಾರಣವಾಗುತ್ತದೆ. 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಮತ್ತು ರಫ್ತು 1,00,000 ಕೋಟಿ ರೂ. ಗಳಿಗೆ ದುಪ್ಪಟ್ಟಾಗುತ್ತದೆ ದ್ವೀಪಗಳು, ಹಿಮಾಲಯನ್ ರಾಜ್ಯಗಳು, ಈಶಾನ್ಯ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳತ್ತ ಹೆಚ್ಚು ಗಮನ ಹರಿಸಲಾಗುವುದು.
4. ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ
ಜಾನುವಾರು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳ (ಒಟ್ಟು 53 ಕೋಟಿ ಪ್ರಾಣಿಗಳು) ಕಾಲು ಮತ್ತು ಬಾಯಿ ಮತ್ತು ಬ್ರೂಸೆಲೋಸಿಸ್ ರೋಗಕ್ಕೆ (ಎಫ್ಎಂಡಿ) ಶೇ.100 ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಕಾಲು ಮತ್ತು ಬಾಯಿ ಹಾಗೂ ಬ್ರೂಸೆಲೋಸಿಸ್ ಕಾಯಿಲೆಗಾಗಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎಫ್ಎಂಡಿ) ವನ್ನು ಒಟ್ಟು 13,343 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿದೆ. ಇಲ್ಲಿಯವರೆಗೆ, 1.5 ಕೋಟಿ ಹಸುಗಳು ಮತ್ತು ಎಮ್ಮೆಗಳನ್ನು ಟ್ಯಾಗ್ ಮಾಡಿ ಲಸಿಕೆ ಹಾಕಲಾಗಿದೆ.
5. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ - ರೂ. 15,000 ಕೋಟಿ
ಡೈರಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಜಾನುವಾರುಗಳ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಗೆ ಬೆಂಬಲ ನೀಡುವ ಉದ್ದೇಶದಿಂದ 15,000 ಕೋಟಿ ರೂ.ಗಳ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುವುದು. ಉತ್ತಮ ಉತ್ಪನ್ನಗಳ ರಫ್ತು ಮಾಡುವ ಘಟಕಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
6. ಗಿಡಮೂಲಿಕೆ ಕೃಷಿಗೆ ಉತ್ತೇಜನ: 4,000 ಕೋಟಿ ರೂ
ಔಷಧೀಯ ಸಸ್ಯಗಳ ಕೃಷಿ ಅಡಿಯಲ್ಲಿ 2.25 ಲಕ್ಷ ಹೆಕ್ಟೇರ್ ಪ್ರದೇಶವನ್ನು ರಾಷ್ಟ್ರೀಯ ಔಷಧ ಸಸ್ಯಗಳ ಮಂಡಳಿ (ಎನ್ಎಂಪಿಬಿ) ಬೆಂಬಲಿಸಿದೆ. ಮುಂದಿನ ಎರಡು ವರ್ಷಗಳಲ್ಲಿ 4,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 10,00,000 ಹೆಕ್ಟೇರ್ ಗಿಡಮೂಲಿಕೆ ಕೃಷಿಯ ವ್ಯಾಪ್ತಿಗೆ ಬರಲಿದೆ. ಇದು ರೈತರಿಗೆ 5,000 ಕೋಟಿ ಆದಾಯ ತರಲಿದೆ. ಔಷಧೀಯ ಸಸ್ಯಗಳಿಗೆ ಪ್ರಾದೇಶಿಕ ಮಾರುಕಟ್ಟೆಗಳ ಜಾಲ ಇರುತ್ತದೆ. ಎನ್ಎಂಪಿಬಿ ಗಂಗಾ ತೀರದಲ್ಲಿ 800 ಹೆಕ್ಟೇರ್ ಪ್ರದೇಶವನ್ನು ಔಷಧೀಯ ಸಸ್ಯಗಳ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಿದೆ.
7. ಜೇನುಸಾಕಣೆಗೆ ಉಪಕ್ರಮಗಳು - 500 ಕೋಟಿ ರೂ
ಇದಕ್ಕಾಗಿ ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತರುತ್ತದೆ:
ಎ. ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರಗಳು, ಸಂಗ್ರಹಣೆ, ಮಾರುಕಟ್ಟೆ ಮತ್ತು ಶೇಖರಣಾ ಕೇಂದ್ರಗಳು, ಕೊಯ್ಲು ನಂತರದ ಮತ್ತು ಮೌಲ್ಯವರ್ಧನೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿ
ಬಿ. ಮಾನದಂಡಗಳ ಅನುಷ್ಠಾನ ಮತ್ತು ಪತ್ತೆಹಚ್ಚುವಿಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು
ಸಿ. ಮಹಿಳೆಯರನ್ನು ಗುರಿಯಾಗಿಸಿ ಸಾಮರ್ಥ್ಯ ವೃದ್ಧಿ
ಡಿ. ಗುಣಮಟ್ಟದ ನ್ಯೂಕ್ಲಿಯಸ್ ಸ್ಟಾಕ್ ಮತ್ತು ಜೇನುನೊಣ ತಳಿಗಳ ಅಭಿವೃದ್ಧಿ.
ಇದು 2 ಲಕ್ಷ ಜೇನುಸಾಕಣೆದಾರರಿಗೆ ಆದಾಯ ಹೆಚ್ಚಿಸಲು ಮತ್ತು ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ಸಿಗಲು ಕಾರಣವಾಗುತ್ತದೆ.
8. ‘TOP’ to TOTAL - 500 ಕೋಟಿ ರೂ
ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ (ಎಂಒಎಫ್ಪಿಐ) ನಡೆಸುತ್ತಿರುವ “ಆಪರೇಷನ್ ಗ್ರೀನ್ಸ್” ಅನ್ನು ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆಯಿಂದ ಎಲ್ಲಾ ಹಣ್ಣು ಮತ್ತು ತರಕಾರಿಗಳಿಗೆ ವಿಸ್ತರಿಸಲಾಗುವುದು. ಈ ಯೋಜನೆಯು ಹೆಚ್ಚುವರಿಯಿಂದ ಕೊರತೆಯಿರುವ ಮಾರುಕಟ್ಟೆಗಳಿಗೆ ಸಾಗಣೆಗೆ ಶೇ.50 ಸಹಾಯಧನ ಒದಗಿಸುತ್ತದೆ, ಶೀತಲ ಸಂಗ್ರಹಾಗಾರಗಳು ಸೇರಿದಂತೆ ಸಂಗ್ರಹಗಾರಗಳಿಗೆ ಶೇ.50% ಸಬ್ಸಿಡಿ ನೀಡುತ್ತದೆ. ಮುಂದಿನ 6 ತಿಂಗಳವರೆಗೆ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು ಮತ್ತು ವಿಸ್ತರಿಸಲಾಗುವುದು ಇದು ರೈತರಿಗೆ ಉತ್ತಮ ಬೆಲೆ ಪಡೆಯಲು, ಕೆಡುವಿಕೆಯನ್ನು ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ಪನ್ನಗಳು ಸಿಗಲು ಕಾರಣವಾಗುತ್ತದೆ.
ಕೃಷಿ ಕ್ಷೇತ್ರದ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದ ಕ್ರಮಗಳು:
1. ರೈತರಿಗೆ ಉತ್ತಮ ಬೆಲೆಯನ್ನು ಒದಗಿಸಲು ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ
ಅಗತ್ಯ ಸರಕುಗಳ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲಿದೆ. ಧಾನ್ಯಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ಬೇಳೆಕಾಳುಗಳು, ಈರುಳ್ಳಿ ಮತ್ತು ಆಲೂಗಡ್ಡೆ ಸೇರಿದಂತೆ ಕೃಷಿ ಆಹಾರ ಪದಾರ್ಥಗಳನ್ನು ಅನಿಯಂತ್ರಿತಗೊಳಿಸಬೇಕು. ರಾಷ್ಟ್ರೀಯ ವಿಪತ್ತುಗಳು, ಬರಗಾಲದಂತಹ ಸಂದರ್ಭಗಳಲ್ಲಿ ಸಂಗ್ರಹಕ್ಕೆ ಮಿತಿಯನ್ನು ವಿಧಿಸಲಾಗುವುದು. ಇದನ್ನು ಹೊರತುಪಡಿಸಿ ಸಂಸ್ಕರಣೆ ಅಥವಾ ಮೌಲ್ಯ ಸರಪಳಿಯಲ್ಲಿರುವವರಿಗೆ ಅವುಗಳ ಸ್ಥಾಪಿತ ಸಾಮರ್ಥ್ಯ ಒಳಪಟ್ಟಂತೆ ಅಥವಾ ರಫ್ತು ಬೇಡಿಕೆಗೆ ಒಳಪಟ್ಟ ಯಾವುದೇ ರಫ್ತುದಾರರಿಗೆ.ಯಾವುದೇ ಸಂಗ್ರಹ ಮಿತಿಯು ಅನ್ವಯಿಸುವುದಿಲ್ಲ,
2. ರೈತರಿಗೆ ಮಾರುಕಟ್ಟೆ ಆಯ್ಕೆಗಳನ್ನು ಒದಗಿಸಲು ಕೃಷಿ ಮಾರುಕಟ್ಟೆ ಸುಧಾರಣೆಗಳು
ಇವುಗಳನ್ನು ಒದಗಿಸಲು ಕೇಂದ್ರದ ಕಾನೂನನ್ನು ರೂಪಿಸಲಾಗುವುದು –
- ರೈತರಿಗೆ ತಮ್ಮ ಉತ್ಪನ್ನಗಳನ್ನು ಲಾಭದ ದರದಲ್ಲಿ ಮಾರಾಟ ಮಾಡಲು ಸಾಕಷ್ಟು ಆಯ್ಕೆಗಳು
- ಅಡೆತಡೆಯಿಲ್ಲದ ಅಂತರ-ರಾಜ್ಯ ವ್ಯಾಪಾರ
- ಕೃಷಿ ಉತ್ಪನ್ನಗಳ ಇ-ವ್ಯಾಪಾರಕ್ಕಾಗಿ ಒಂದು ಚೌಕಟ್ಟು
3. ಕೃಷಿ ಉತ್ಪಾದನೆಯ ಬೆಲೆ ಮತ್ತು ಗುಣಮಟ್ಟದ ಭರವಸೆ
ಸಂಸ್ಕರಣೆದಾರರು, ಸಂಗ್ರಹಕಾರರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರು ಮತ್ತಿತರರೊಂದಿಗೆ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ತೊಡಗಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಸರ್ಕಾರವು ಕಾನೂನುಬದ್ಧ ಚೌಕಟ್ಟನ್ನು ಅಂತಿಮಗೊಳಿಸುತ್ತದೆ. ರೈತರಿಗೆ ಅಪಾಯವನ್ನು ಕಡಿಮೆ ಮಾಡುವುದು, ಆಶ್ವಾಸಿತ ಆದಾಯ ಮತ್ತು ಗುಣಮಟ್ಟದ ಪ್ರಮಾಣೀಕರಣವು ಚೌಕಟ್ಟಿನ ಅವಿಭಾಜ್ಯ ಅಂಗವಾಗಿರುತ್ತದೆ.
***
(Release ID: 1624229)
Visitor Counter : 496
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam