ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ಅವರಿಂದ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರ ಹಾಗು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ನಿರ್ವಹಣೆಯ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ

Posted On: 12 MAY 2020 5:13PM by PIB Bengaluru

ಡಾ. ಹರ್ಷವರ್ಧನ್ ಅವರಿಂದ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರ ಹಾಗು ಲಡಾಖ್ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ನಿರ್ವಹಣೆ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ರವರು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು, ಲಡಾಕ್ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್ರವರ ಜೊತೆ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆಯವರ ಉಪಸ್ಥಿತಿಯಲ್ಲಿ ಇಂದು ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ನಿರ್ವಹಣೆಗೆ ಸಿದ್ಧತೆ ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ರಾಜ್ಯ ಆರೋಗ್ಯ ಮಂತ್ರಿಗಳು ಮತ್ತು ಕೆಂಪು ವಲಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗಿನ ವೈಯಕ್ತಿಕ ಸಂವಾದಗಳ ಒಂದು ಭಾಗವಾಗಿದೆ.

ಆರಂಭದಲ್ಲಿ, ಡಾ. ಹರ್ಷವರ್ಧನ್ ರವರು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 12, 2020 ಹೊತ್ತಿಗೆ ದೇಶದಲ್ಲಿ ಒಟ್ಟು 70,756 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 22,455 ಜನರನ್ನು ಗುಣಪಡಿಸಲಾಗಿದೆ ಮತ್ತು 2,293 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ, 3,604 ಹೊಸ ದೃಢಪಡಿಸಿದ ಪ್ರಕರಣಗಳನ್ನು ದಾಖಲಾಗಿದೆ ಮತ್ತು 1538 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಕಳೆದ 14 ದಿನಗಳಲ್ಲಿ ದ್ವಿಗುಣಗೊಳಿಸುವ ಅವಧಿ 10.9 ಆಗಿದ್ದರೆ, ಕಳೆದ ಮೂರು ದಿನಗಳಲ್ಲಿ ಇದು 12.2 ಕ್ಕೆ ಸುಧಾರಿಸಿದೆ ಎಂದು ಅವರು ಗಮನಿಸಿದರು. ಸಾವಿನ ಪ್ರಮಾಣ 3.2% ಮತ್ತು ಚೇತರಿಕೆ ದರವನ್ನು 31.74% ಎಂದು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ನಿನ್ನೆಯ ಹೊತ್ತಿಗೆ ಐಸಿಯುನಲ್ಲಿ 2.37% ಸಕ್ರಿಯ ಕೋವಿಡ್-19 ರೋಗಿಗಳು, ವೆಂಟಿಲೇಟರ್ಗಳಲ್ಲಿ 0.41% ಮತ್ತು ಆಮ್ಲಜನಕದ ಸೌಲಭ್ಯದಲ್ಲಿ 1.82% ರೋಗಿಗಳಿದ್ದಾರೆ ಎಂದು ಅವರು ಹೇಳಿದರು. ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದೆ ಮತ್ತು 347 ಸರ್ಕಾರಿ ಪ್ರಯೋಗಾಲಯಗಳು ಮತ್ತು 137 ಖಾಸಗಿ ಪ್ರಯೋಗಾಲಯಗಳೊಂದಿಗೆ ದಿನಕ್ಕೆ 1, 00,000 ಪರೀಕ್ಷೆಗಳ ಸಾಮರ್ಥ್ಯವಿದೆ ಎಂದು ಡಾ.ಹರ್ಷವರ್ಧನ್ ಎತ್ತಿ ತೋರಿಸಿದರು. ಒಟ್ಟಾರೆಯಾಗಿ, ಕೋವಿಡ್-19 ಕ್ಕಾಗಿ ಇದುವರೆಗೆ 17, 62,840 ಪರೀಕ್ಷೆಗಳನ್ನು ಮಾಡಲಾಗಿದೆ. ನಿನ್ನೆ 86,191 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಡಾ. ಹರ್ಷ ವರ್ಧನ್, “ಕೋವಿಡ್-19 ಅನ್ನು ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಪ್ರಯತ್ನದಿಂದ, ಸಮರ್ಪಕವಾಗಿ ಹೆಚ್ಚುತ್ತಿರುವ ಮೀಸಲಾದ ಕೋವಿಡ್ ಆಸ್ಪತ್ರೆಗಳು, ಪ್ರತ್ಯೇಕತೆ ಮತ್ತು ಐಸಿಯು ಹಾಸಿಗೆಗಳು ಮತ್ತು ಸಂಪರ್ಕತಡೆಯ ಕೇಂದ್ರಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗಿದೆ. ಕೋವಿಡ್-19 ಕಾರಣದಿಂದಾಗಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶವು ಸಿದ್ಧವಾಗಿದೆ ಎಂಬ ಭರವಸೆಯನ್ನು ಇದು ನಮಗೆ ನೀಡುತ್ತದೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮತ್ತು ಕೇಂದ್ರ ಸಂಸ್ಥೆಗಳಿಗೆ ಸಾಕಷ್ಟು ಸಂಖ್ಯೆಯ ಮುಖಗವಸುಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸುವ ಮೂಲಕ ಕೇಂದ್ರವು ಸಹಕರಿಸುತ್ತಿದೆ ಎಂದು ಅವರು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೋವಿಡ್-19 ಪ್ರಕರಣಗಳ ಸ್ಥಿತಿ ಮತ್ತು ಅದರ ನಿರ್ವಹಣೆಯ ಬಗ್ಗೆ ಸಂಕ್ಷಿಪ್ತ ಪ್ರಸ್ತುತಿಯ ನಂತರ, ಡಾ. ಹರ್ಷವರ್ಧನ್, “ಹಿಂದಿರುಗಿದ ವಲಸೆ ಕಾರ್ಮಿಕರ ಗಣನೀಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಪರಿಣಾಮಕಾರಿ ಕಣ್ಗಾವಲು, ಹಿಂತಿರುಗಿದ ಎಲ್ಲರ ಪತ್ತೆ, ಸಮರ್ಪಕ ಪರೀಕ್ಷೆ ಮತ್ತು ಸಮಯೋಚಿತ ಚಿಕಿತ್ಸೆ, ಸಂಪರ್ಕಗಳ ಬಗ್ಗೆ ಗಮನ ಹರಿಸಬೇಕಾಗಿದೆ. ವಿದೇಶದಿಂದ ಹಿಂದಿರುಗಿದವರೂ ಇದರಲ್ಲಿ ಸೇರಿದ್ದಾರೆ”. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪರೀಕ್ಷೆಯನ್ನು ಇಳಿಯುವ ಹಂತದಲ್ಲಿ, ಕ್ವಾರಂಟೈನ್ ಮಾಡುವುದರಲ್ಲಿ, ಪರೀಕ್ಷೆ ಮತ್ತು ಹೆಚ್ಚಿನ ಚಿಕಿತ್ಸೆಯ ಹಂತದಲ್ಲಿ ಮಾಡಲಾಗುತ್ತಿರುವ ಸಿದ್ಧತೆಗಳನ್ನು ವಿವರಿಸಿದವು. ಸಂಪರ್ಕದ ಉತ್ತಮ ಕಣ್ಗಾವಲು ಮತ್ತು ಸೂಕ್ತ ವೈದ್ಯಕೀಯ ಮಧ್ಯಸ್ಥಿಕೆಗಳಿಗಾಗಿ ಹಿಂದಿರುಗಿದ ಎಲ್ಲರಿಗೂ ಆರೋಗ್ಯ ಸೇತು ಡೌನ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಬಾಧಿತ ಮತ್ತು ಬಾಧಿತವಲ್ಲದ ಜಿಲ್ಲೆಗಳಲ್ಲಿ ತೀವ್ರವಾದ ತೀವ್ರ ಉಸಿರಾಟದ ಸೋಂಕುಗಳ (ಎಸ್ಎಆರ್ ) / ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್) ಕ್ಕಾಗಿ ಕಣ್ಗಾವಲು ಹೆಚ್ಚಿಸುವುದರ ಬಗ್ಗೆ ಡಾ.ಹರ್ಷವರ್ಧನ್ ಒತ್ತಿ ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೈದ್ಯಕೀಯ ಕಾಲೇಜುಗಳು ಇದ್ದಲ್ಲಿ ಸಹಾಯ ಪಡೆಯಲು ಸೂಚಿಸಲಾಯಿತು. "ಇಂತಹ ಕ್ರಮಗಳು ಯಾವುದೇ ಆರಂಭಿಕ ಗುಪ್ತ ಸೋಂಕಿನ ಉಪಸ್ಥಿತಿಯನ್ನು ಆರಂಭಿಕ ಹಂತದಲ್ಲಿ ಸೂಚಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅದರ ಸಮಯೋಚಿತ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಉತ್ತರಾಖಂಡದಲ್ಲಿ ಎಸ್ಎಆರ್ ಮತ್ತು ಐಎಲ್ಐ ಕಣ್ಗಾವಲಿಗಾಗಿ ಮಾಡಿದ ಕಾರ್ಯಗಳನ್ನು, ಸಂಪರ್ಕ ಪತ್ತೆ ಮತ್ತು ಮೇಲ್ವಿಚಾರಣೆಗಾಗಿ ಐಡಿಎಸ್ ಪಿ ಸಂಸ್ಥೆಯು ಕೈಗೊಂಡ ಕಾರ್ಯವನ್ನು ಅವರು ಶ್ಲಾಘಿಸಿದರು. ಕೋವಿಡ್ ಅಲ್ಲದ ಅಗತ್ಯ ಸೇವೆಗಳನ್ನು ಒದಗಿಸಲು ದೂರದ ಪ್ರದೇಶಗಳಿಗೆ ತಲುಪಲು ಅವರು ಸಂಚಾರಿ ವೈದ್ಯಕೀಯ ವ್ಯಾನ್ಗಳನ್ನು ಪ್ರಾರಂಭಿಸಿದ್ದಾರೆ ಎಂದು ಲಡಾಖ್ಕೇಂದ್ರಾಡಳಿತ ಪ್ರದೇಶವು ಹೇಳಿದೆ. ಶ್ರೀ ಆರ್ ಕೆ ಮಾಥುರ್ ಅವರು ಕೋವಿಡ್-19 ಪೂರ್ಣ ಸಮಯದ ನಿರ್ವಹಣೆಗಾಗಿ ಆವರ್ತಕ ಆಧಾರದ ಮೇಲೆ ನಿಯೋಜಿಸಲು ಕೆಲವು ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿಯನ್ನು ಮೀಸಲು ಇಡಲಾಗಿದೆ. ಜಾಗೃತಿ ಮೂಡಿಸುವಿಕೆ ಮತ್ತು ವಿಶ್ವಾಸ ಬೆಳೆಸುವ ಸಲುವಾಗಿ ಅವರು ಪಂಚಾಯಿತಿಗಳು ಮತ್ತು ಸಮುದಾಯದ ಹಿರಿಯರೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಎಲ್ಲಾ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರವು ನಿರಂತರವಾಗಿ ಒದಗಿಸುತ್ತಿರುವ ತಾಂತ್ರಿಕ ಮತ್ತು ಇತರ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯು ಕ್ಷೌರಿಕರು ಮತ್ತು ಸಲೂನಿನವರಿಗೆ ಕೋವಿಡ್-19 ಬಗ್ಗೆ ಸೂಕ್ತ ನಡವಳಿಕೆಯೊಂದಿಗೆ ತರಬೇತಿ ನೀಡುತ್ತಿದ್ದು, ಅವರುಗಳನ್ನು ಲಾಕ್ಡೌನ್ ನಂತರದ ಸೇವೆಗಳಿಗೆ ಸಿದ್ಧಪಡಿಸುತ್ತದೆ. ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಮತ್ತು ಅರೆಸೈನಿಕ ಪಡೆಗಳಿಗೆ ಆಯುರ್ವೇದ ರೋಗನಿರೋಧಕ ವರ್ಧಕಗಳನ್ನು ಒದಗಿಸಲಾಗಿದೆ ಎಂದು ಶ್ರೀ ಜೈ ರಾಮ್ ತಹಕೂರ್ ಹೇಳಿದರು.

ಲಡಾಖ್ನಲ್ಲಿ ತಂಬಾಕು ಬಳಕೆ ತಕ್ಕಮಟ್ಟಿಗೆ ಹೆಚ್ಚಿರುವುದರಿಂದ, ಹಿಂದೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸುವ ಅಗತ್ಯವಿದೆ ಎಂದು ಡಾ.ಹರ್ಷ್ ವರ್ಧನ್ ಗಮನಸೆಳೆದರು.

ರೋಗನಿರೋಧಕ ಕಾರ್ಯಕ್ರಮಗಳು, ಟಿಬಿ ಪ್ರಕರಣ ಪತ್ತೆ ಮತ್ತು ಚಿಕಿತ್ಸೆ, ಡಯಾಲಿಸಿಸ್ ರೋಗಿಗಳಿಗೆ ರಕ್ತ ವರ್ಗಾವಣೆ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ಗರ್ಭಿಣಿ ಮಹಿಳೆಯರ ಎಎನ್ಸಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೋವಿಡ್ ಅಲ್ಲದ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವುದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ರಾಜ್ಯಗಳಿಗೆ ಮತ್ತೆ ತಿಳಿಸಲಾಯಿತು. ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂರು ರೀತಿಯ ಕ್ಯಾನ್ಸರ್ ಗಳ ತಪಾಸಣೆಗಾಗಿ ಬಳಸಬಹುದು. ರೋಗತಡೆಗಟ್ಟುವ ಔಷಧಿಗಳು ಮತ್ತು ರೋಗನಿರೋಧಕ ವರ್ಧಕಗಳನ್ನು ಅಗತ್ಯವಿರುವಂತೆ ಪರೀಕ್ಷೆಯೊಂದಿಗೆ ಒದಗಿಸುವಂತೆ ಅವರು ರಾಜ್ಯಗಳಿಗೆ ನೆನಪಿಸಿದರು. ಅಗತ್ಯ ಔಷಧಿಗಳ ಸಮರ್ಪಕ ದಾಸ್ತಾನು ಇಡಲು ರಾಜ್ಯಗಳಿಗೆ ಸೂಚಿಸಲಾಯಿತು. ಕೋವಿಡ್ ಅಲ್ಲದ ಅಗತ್ಯ ಸೇವೆಗಳಿಗೆ ಕುಂದುಕೊರತೆ ನಿವಾರಣೆಗೆ 1075 ಜೊತೆಗೆ ಸಹಾಯವಾಣಿ ಸಂಖ್ಯೆ 104 ಅನ್ನು ಬಳಸಬಹುದು ಮತ್ತು ಸೇವೆಗಳ ಲಭ್ಯತೆಯ ಬಗ್ಗೆ ಪ್ರಚಾರಮಾಡಲು ರಾಜ್ಯಗಳಿಗೆ ತಿಳಿಸಲಾಯಿತು. ವೆಕ್ಟರ್ ಕಾಯಿಲೆಗಳ ತಡೆಗಟ್ಟುವಿಕೆಗೆ ಸಾಕಷ್ಟು ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ವೇತನ ಮತ್ತು ಪ್ರೋತ್ಸಾಹಕಗಳನ್ನು ಸಕಾಲಿಕವಾಗಿ ಪಾವತಿಸುವುದರಿಂದ ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಮನೋಸ್ಥೈರ್ಯ ಹೆಚ್ಚಾಗುತ್ತದೆ ಎಂದು ಸೂಚಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವುಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ವಿನಂತಿಸಲಾಯಿತು.

ಹಿಮಾಚಲ ಪ್ರದೇಶದ ಉನಾ, ಚಂಬಾ, ಹಮೀರ್ಪುರ, ಸಿರ್ಮೌರ್, ಸೋಲನ್ ಮತ್ತು ಕಾಂಗ್ರಾಗಳಂತಹ ವಿವಿಧ ಜಿಲ್ಲಾ ದಂಡಾದಿಕಾರಿಗಳೊಂದಿಗೆ ಡಾ.ಹರ್ಷವರ್ಧನ್ ಸುದೀರ್ಘ ಮಾತುಕತೆ ನಡೆಸಿದರು; ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಶೋಪಿಯಾನ್, ಶ್ರೀನಗರ, ಬಂಡಿಪೋರಾ ಮತ್ತು ಅನಂತನಾಗ್; ಉತ್ತರಾಖಂಡದ ಹರಿದ್ವಾರ; ಮತ್ತು ಲಡಾಖ್ಕೇಂದ್ರಾಡಳಿತ ಪ್ರದೇಶದ ಲೇಹ್ ಮತ್ತು ಕಾರ್ಗಿಲ್ ಮತ್ತು ಜಿಲ್ಲೆಗಳಲ್ಲಿ ಕೋವಿಡ್-19 ಸ್ಥಿತಿ ಮತ್ತು ನಿರ್ವಹಣೆಯನ್ನು ವಿವರವಾಗಿ ಚರ್ಚಿಸಿದರು. ಇಂತಹ ಸಭೆಗಳು ಹೆಚ್ಚು ಒಗ್ಗಟ್ಟಿನಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ ಮತ್ತು ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲು ಸಹಾಯ ಮಾಡುತ್ತದೆ ಮತ್ತು ಸಮಸ್ಯೆಗಳನ್ನು ಹೆಚ್ಚು ನಿಕಟವಾಗಿ ಮತ್ತು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ - ಎಚ್ಎಫ್ಡಬ್ಲ್ಯು) ಶ್ರೀಮತಿ ಪ್ರೀತಿ ಸುಧನ್ ರವರು, ವಿಶೇಷ ಕಾರ್ಯದರ್ಶಿ (ಆರೋಗ್ಯ) ಶ್ರೀ ಸಂಜೀವ ಕುಮಾರ್, ವಿಶೇಷ ಕರ್ತವ್ಯದ ಅಧಿಕಾರಿ ( ಒಎಸ್ಡಿ - ಎಚ್ಎಫ್ಡಬ್ಲ್ಯು), ಶ್ರೀ ರಾಜೇಶ್ ಭೂಷಣ್, ಎಎಸ್ ಮತ್ತು ಎಂಡಿ (ಎನ್ಎಚ್ಎಂ) ಶ್ರೀಮತಿ ವಂದನಾ ಗುರ್ನಾನಿ, ಜಂಟಿ ಕಾರ್ಯದರ್ಶಿ(ಎಂಒಹೆಚ್ಡಬ್ಲ್ಯು) ಶ್ರೀ ವಿಕಾಸ್ ಶೀಲ್, ಎನ್ಸಿಡಿಸಿ ನಿರ್ದೇಶಕರಾದ ಡಾ.ಎಸ್.ಕೆ. ಸಿಂಗ್, ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಮತ್ತು ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1623457) Visitor Counter : 250