ರೈಲ್ವೇ ಸಚಿವಾಲಯ

ನವದೆಹಲಿಯಿಂದ ಇಂದು 03 ವಿಶೇಷ ರೈಲುಗಳನ್ನು ಭಾರತೀಯ ರೈಲ್ವೇ ಪುನರಾರಂಭಿಸಿದೆ

Posted On: 12 MAY 2020 3:24PM by PIB Bengaluru

ನವದೆಹಲಿಯಿಂದ ಇಂದು 03 ವಿಶೇಷ ರೈಲುಗಳನ್ನು ಭಾರತೀಯ ರೈಲ್ವೇ ಪುನರಾರಂಭಿಸಿದೆ

ನವದೆಹಲಿ-ಬಿಲಾಸ್ ಪುರ್ ವಿಶೇಷ ರೈಲಿನಲ್ಲಿ ಒಟ್ಟು 1177 ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ,  ನವದೆಹಲಿ-ದಿಬ್ರೂ ಘರ್ ನಲ್ಲಿ ಒಟ್ಟು 1122 ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ ಮತ್ತು ನವದೆಹಲಿ-ಬೆಂಗಳೂರು ವಿಶೇಷ ರೈಲಿನಲ್ಲಿ ಒಟ್ಟು 1162 ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ,

ಒಟ್ಟು 3461 ಪ್ರಯಾಣಿಕರು ಇಂದು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ

ರೈಲು ಸಂಖ್ಯೆ 02442 ನವದೆಹಲಿಯಿಂದ ನಿಲಾಸ್ ಪುರ್ ಇಂದು ಪ್ರಯಾಣ ಆರಂಭಿಸಿದ ಪ್ರಥಮ ವಿಶೇಷ ರೈಲಾಗಿದೆ

ಈ ರೈಲು ಆರಂಭಿಸುವುದರೊಂದಿಗೆ, ಭಾರತೀಯ ರೈಲು ಪ್ರಯಾಣಿಕರ ರೈಲು ಸೇವೆಗಳನ್ನು ಕ್ರಮೇಣ ಆರಂಭಿಸಿದೆ.

ಈ ಸೇವೆಗಳು ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ ಹೆಚ್ಚುವರಿಯಾಗಿರುತ್ತವೆ

 

ಕೊವಿಡ್ – 19 ಹಿನ್ನೆಲೆಯಲ್ಲಿ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಇಂದು ಅಂದರೆ, 12 ಮೇ 2020 ರಂದು ನವದೆಹಲಿ ರೈಲ್ವೇ ನಿಲ್ದಾಣದಿಂದ ಪ್ರಥಮ ವಿಶೇಷ ರೈಲು ಸಂಖ್ಯೆ 02442 ನವದೆಹಲಿಯಿಂದ ಬಿಲಾಸ್ ಪುರ್ ವಿಶೇಷ ರೈಲು ತನ್ನ ಪ್ರಯಾಣವನ್ನು ಆರಂಭಿಸಿತು. ಈ ಈ ರೈಲು ಆರಂಭಿಸುವುದರೊಂದಿಗೆ, ಭಾರತೀಯ ರೈಲು ಪ್ರಯಾಣಿಕರ ರೈಲು ಸೇವೆಗಳನ್ನು ಕ್ರಮೇಣ ಆರಂಭಿಸಿದೆ. ನವದೆಹಲಿಯಿಂದ ಒಟ್ಟು 03 ವಿಶೇಷ ರೈಲುಗಳು ಪ್ರಯಾಣ ಆರಂಭಿಸಿದರೆ ಇತರ ನಗರಗಳಿಂದ ದೆಹಲಿಗೆ ಒಟ್ಟು 05 ವಿಶೇಷ ರೈಲುಗಳು ಇಂದು ಪ್ರಯಾಣಿಸಲಿವೆ. ಈ ವಿಶೇಷ ರೈಲು ಸೇವೆಗಳುಮ ಭಾರತೀಯ ರೈಲ್ವೇ ಆರಂಭಿಸಿರುವ ಶ್ರಮಿಕ್ ವಿಶೇಷ ರೈಲುಗಳೊಂದಿಗೆ ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ಇಂದು ನವದೆಹಲಿಯಿಂದ ವಿವಿಧ ಗಮ್ಯದೆಡೆಗೆ ಒಟ್ಟು 03 ರೈಲುಗಳು ಪ್ರಯಾಣಿಸಲಿವೆ. ಆ ರೈಲುಗಳ ವಿವಿರ ಈ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ರೈಲು ಸಂಖ್ಯೆ

ಇಂದ

ಗೆ

1

02692

ನವ ದೆಹಲಿ

ಬೆಂಗಳೂರು

2

02424

ನವ ದೆಹಲಿ

ದಿಬ್ರೂ ಘರ್

3

02442

ನವ ದೆಹಲಿ

ಬಿಲಾಸ್ ಪುರ್

 

ನವದೆಹಲಿ-ಬಿಲಾಸ್ ಪುರ್ ವಿಶೇಷ ರೈಲಿನಲ್ಲಿ 1177 ಪ್ರಯಾಣಿಕರಿಗೆ ಒಟ್ಟು 741 ಪಿ ಎನ್ ಆರ್ ಗಳನ್ನು ರಚಿಸಲಾಗಿದೆ; ನವದೆಹಲಿ-ದಿಬ್ರೂ ಘರ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ 1122 ಪ್ರಯಾಣಿಕರಿಗಾಗಿ ಒಟ್ಟು 442 ಪಿ ಎನ್ ಆರ್ ಗಳನ್ನು ರಚಿಸಲಾಗಿದೆ ಮತ್ತು ನವದೆಹಲಿ-ಬೆಂಗಳೂರು ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿರುವ 1162 ಪ್ರಯಾಣಿಕರಿಗಾಗಿ ಒಟ್ಟು 804 ಪಿ ಎನ್ ಆರ್ ಗಳನ್ನು ರಚಿಸಲಾಗಿದೆ.

ನವದೆಹಲಿಯೂ ಸೇರಿದಂತೆ ವಿವಿಧ ನಗರಗಳಿಂದ ಇಂದು ಒಟ್ಟು 08 ರೈಲುಗಳು ಪ್ರಯಾಣಿಸುತ್ತಿವೆ. ಆ ರೈಲುಗಳ ವಿವರ ಈ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ರೈಲು ಸಂಖ್ಯೆ

ಇಂದ

ಗೆ

1

02301

ಹೌರಾ

ನವ ದೆಹಲಿ

2

02951

ಮುಂಬೈ ಸೆಂಟ್ರಲ್

ನವ ದೆಹಲಿ

3

02957

ಅಹಮದಾಬಾದ್

ನವ ದೆಹಲಿ

4

02309

ರಾಜೇಂದ್ರನಗರ್ (ಟಿ)

ನವ ದೆಹಲಿ

5

02691

ಬೆಂಗಳೂರು

ನವ ದೆಹಲಿ

6

02692

ನವ ದೆಹಲಿ

ಬೆಂಗಳೂರು

7

02424

ನವ ದೆಹಲಿ

ದಿಬ್ರೂ ಘರ್

8

02442

ನವ ದೆಹಲಿ

ಬಿಲಾಸ್ ಪುರ್

 

***


(Release ID: 1623383) Visitor Counter : 257