ಗೃಹ ವ್ಯವಹಾರಗಳ ಸಚಿವಾಲಯ

ಲಾಕ್ ಡೌನ್ ಅವಧಿಯ ಬಳಿಕ ಉತ್ಪಾದನಾ ಕೈಗಾರಿಕೆಗಳ ಆರಂಭಕ್ಕೆ ಎನ್.ಡಿ.ಎಂ.ಎ.. (ಎಂ.ಎಚ್.ಎ.) ನಿಂದ ಮಾರ್ಗದರ್ಶಿಗಳು ಪ್ರಕಟ

Posted On: 11 MAY 2020 12:46PM by PIB Bengaluru

ಲಾಕ್ ಡೌನ್ ಅವಧಿಯ ಬಳಿಕ ಉತ್ಪಾದನಾ ಕೈಗಾರಿಕೆಗಳ ಆರಂಭಕ್ಕೆ ಎನ್.ಡಿ.ಎಂ... (ಎಂ.ಎಚ್..) ನಿಂದ ಮಾರ್ಗದರ್ಶಿಗಳು ಪ್ರಕಟ

ಮಾರ್ಗದರ್ಶಿಗಳ ಕಟ್ಟು ನಿಟ್ಟಿನ ಅನುಸರಣೆ ಖಾತ್ರಿಪಡಿಸಲು ಕ್ಷೇತ್ರೀಯ ಕಾರ್ಯನಿರ್ವಾಹಕರು

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್..) ವಿಪತ್ತು ನಿರ್ವಹಣಾ ಕಾಯ್ದೆ, 2005 ರಡಿಯಲ್ಲಿ ಲಾಕ್ ಡೌನ್ ಅವಧಿಯ ಬಳಿಕ ಉತ್ಪಾದನಾ ಕೈಗಾರಿಕೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿ ವಿವರವಾದ ಮಾರ್ಗದರ್ಶಿಗಳನ್ನು ಹೊರಡಿಸಿದೆ.

ಕೋವಿಡ್ -19 ಕ್ಕೆ ಸಾಕಷ್ಟು ಮುಂಚಿತವಾಗಿ ಮಾರ್ಚ್ 25 ರಿಂದ ರಾಷ್ಟ್ರವ್ಯಾಪೀ ಲಾಕ್ ಡೌನ್ ಆದೇಶಿಸಲಾಗಿತ್ತು. ಕೆಲವು ವಲಯಗಳಲ್ಲಿ ಲಾಕ್ ಡೌನ್ ನಿಧಾನವಾಗಿ ಸಡಿಲಿಕೆ ಮಾಡುತ್ತಿದ್ದಂತೆ , ನಿರ್ದಿಷ್ಟ ಆರ್ಥಿಕ ಚಟುವಟಿಕೆಗಳನ್ನು ಎನ್.ಡಿ.ಎಂ.. ಆದೇಶಗಳ ಸಂಖ್ಯೆ 1-29/2020-ಪಿಪಿ., ದಿನಾಂಕ 1 ನೇ ಮೇ 2020 ರನ್ವಯ ಮತ್ತು ಎಂ.ಎಚ್..ಆದೇಶ ಸಂಖ್ಯೆ 40- 3/2020-ಡಿ.ಎಂ. () ದಿನಾಂಕ 1 ನೇ ಮೇ 2020 ರನ್ವಯ ಅನುಮತಿಸಲಾಗುತ್ತಿದೆ.

ಹಲವು ವಾರಗಳ ಲಾಕ್ ಡೌನ್ ಕಾರಣದಿಂದಾಗಿ ಮತ್ತು ಲಾಕ್ ಡೌನ್ ಅವಧಿಯಲ್ಲಿ ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟಿರುವುದರಿಂದ ಕೆಲವು ಆಪರೇಟರುಗಳು ಸ್ಥಾಪಿತ/ ಜಾರಿಯಲ್ಲಿರುವ ಎಸ್..ಪಿ.ಗಳನ್ನು ಪಾಲಿಸದೇ ಇರುವ ಸಾಧ್ಯತೆಗಳೂ ಇವೆ. ಇದರ ಪರಿಣಾಮವಾಗಿ ಕೆಲವು ಉತ್ಪಾದನಾ ಸೌಲಭ್ಯಗಳು , ಪೈಪ್ ಲೈನ್ ಗಳು, ವಾಲ್ವ್ ಗಳು ಇತ್ಯಾದಿ ಉಳಿಕೆ ಅಥವಾ ತ್ಯಾಜ್ಯ ರಾಸಾಯನಿಕಗಳನ್ನು ಹೊಂದಿರುವ ಸಾಧ್ಯತೆ ಇದೆ.ಇವು ಅಪಾಯವನ್ನು ತರಬಲ್ಲವು. ಇಂತಹದೇ ಪರಿಸ್ಥಿತಿ ದಾಸ್ತಾನು ಸೌಲಭ್ಯಗಳಲ್ಲೂ ಹಾಗು ದಹನಾನುಕೂಲಿ ವಸ್ತುಗಳ ಸಂದರ್ಭದಲ್ಲಿಯೂ ಉಂಟಾಗಬಹುದಾಗಿದೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೆಳಗಿನ ಮಾರ್ಗದರ್ಶಿಗಳನ್ನು ಹೊರಡಿಸಿದೆ.

1. ರಾಸಾಯನಿಕ ವಿಪತ್ತುಗಳ ಮಾರ್ಗದರ್ಶಿಗಳು , 2007

2.ರಾಸಾಯನಿಕ (ಭಯೋತ್ಪಾದನಾ ) ವಿಪತ್ತುಗಳ ನಿರ್ವಹಣಾ ಮಾರ್ಗದರ್ಶಿಗಳು, 2009 ಮತ್ತು

3. ಪಿ..ಎಲ್. ಟ್ಯಾಂಕರುಗಳ ಸಾರಿಗೆಯಲ್ಲಿ ಸುರಕ್ಷೆ ಮತ್ತು ಭದ್ರತೆಯನ್ನು ಬಲಪಡಿಸುವಿಕೆ 2010,ಇವು ರಾಸಾಯನಿಕ ಕೈಗಾರಿಕೆಗಳಿಗೆ ಅನ್ವಯಿಸುವವು. ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪಾಯಕಾರಿ ರಾಸಾಯನಿಕಗಳ ಉತ್ಪಾದನೆ, ದಾಸ್ತಾನು, ಮತ್ತು ಆಮದು ನಿಯಮಗಳು, 1989 ಕೆಲವು ಶಾಸನಾತ್ಮಕ ಆವಶ್ಯಕತೆಗಳನ್ನು ಕೈಗಾರಿಕೆಗಳಿಗಾಗಿ ನಿಗದಿ ಮಾಡುತ್ತದೆ.

ಲಾಕ್ ಔಟ್/ಟ್ಯಾಗ್ ಔಟ್ ಪ್ರಕ್ರಿಯೆಗಳು ಜಾರಿಯಲ್ಲಿಲ್ಲದೇ ಇರುವ ಸಂದರ್ಭದಲ್ಲಿ ಹಲವು ಇಂಧನ ಮೂಲಗಳು ವಿದ್ಯುತ್, ಮೆಕ್ಯಾನಿಕಲ್ ಅಥವಾ ರಾಸಾಯನಿಕ ಉಪಕರಣಗಳನ್ನು ನಿರ್ವಹಿಸುವ ಯಾ ಸರ್ವಿಸಿಂಗ್ ಮಾಡುವ ನಿರ್ವಾಹಕರಿಗೆ/ ಮೇಲ್ವಿಚಾರಕರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಬೃಹತ್ ಯಂತ್ರೋಪಕರಣಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದೇ ಇದ್ದ ಪಕ್ಷದಲ್ಲಿ ಅವು ಕೂಡಾ ಆಪರೇಟರುಗಳಿಗೆ/ ಇಂಜಿನಿಯರುಗಳಿಗೆ ಅಪಾಯಕಾರಿಯಾಗಬಲ್ಲವು.

ದಹನಾನುಕೂಲಿ ದ್ರವಗಳು, ಒತ್ತಡದಲ್ಲಿಟ್ಟ ಅನಿಲಗಳು, ತೆರೆದಿರುವ ವಯರುಗಳು , ಕನ್ವೇಯರ್ ಬೆಲ್ಟ್ ಗಳು ಮತ್ತು ಸ್ವಯಂಚಾಲಿತ ವಾಹನಗಳು ಉತ್ಪಾದನಾ ಸೌಲಭ್ಯವನ್ನು ಹೆಚ್ಚು ಅಪಾಯಕಾರಿ ವಾತಾವರಣವನ್ನಾಗಿ ಮಾರ್ಪಡಿಸುತ್ತವೆ. ಸುರಕ್ಷತಾ ಸಂಕೇತಗಳನ್ನು ಸರಿಯಾಗಿ ಜಾರಿಗೊಳಿಸದಿರುವುದು ಮತ್ತು ರಾಸಾಯನಿಕಗಳನ್ನು ಸರಿಯಾಗಿ ಲೇಬಲ್ ಮಾಡದಿರುವುದರಿಂದ ಗಂಭೀರ ಆರೋಗ್ಯ ಅಪಾಯಗಳು ಎದುರಾಗುವ ಸಾಧ್ಯತೆಗಳಿವೆ.

ಯಾವುದಾದರೂ ಅನಿರೀಕ್ಷಿತ ಅಹಿತಕರ ಘಟನೆ ಸಂಭವಿಸಿದರೆ , ಕ್ಷಿಪ್ರವಾಗಿ ಪ್ರತಿಕ್ರಿಯೆಯನ್ನು ನಿಭಾಯಿಸುವುದು ಸವಾಲಿನ ಕೆಲಸ . ಅಪಾಯವನ್ನು ಕನಿಷ್ಟ ಪ್ರಮಾಣಕ್ಕಿಳಿಸಲು ಮತ್ತು ಕೈಗಾರಿಕಾ ಘಟಕಗಳ ಯಶಸ್ವೀ ಪುನರಾರಂಭಕ್ಕೆ ಪ್ರೇರೇಪಣೆ ನೀಡಲು ಕೆಳಗಿನ ಮಾರ್ಗದರ್ಶಿಗಳನ್ನು ಹೊರಡಿಸಲಾಗಿದೆ.

ರಾಜ್ಯ ಸರಕಾರಗಳು ಆಯಾ ಪ್ರಮುಖ ಅಪಘಾತ ಅಪಾಯ (ಎಂ..ಎಚ್.) ಘಟಕಗಳಿಗೆ ಸಂಬಂಧಿಸಿ ವಿಪತ್ತು ನಿರ್ವಹಣಾ ಯೋಜನೆಯನ್ನು ಖಾತ್ರಿಪಡಿಸಬೇಕು ಮತ್ತು ಅವುಗಳನ್ನು ಸಕಾಲಿಕಗೊಳಿಸಿ ಅನುಷ್ಟಾನ ಸಿದ್ದ ಮಾಡಿಟ್ಟುಕೊಂಡಿರಬೇಕು.ಮತ್ತು ಜಿಲ್ಲೆಯ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳು ಕೈಗಾರಿಕಾ ಸ್ಥಳದಲ್ಲಿಯ ವಿಪತ್ತು ನಿರ್ವಹಣಾ ಯೋಜನೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಹಾಗು ಕೋವಿಡ್ -19 ಲಾಕ್ ಡೌನ್ ಬಳಿಕ ಅಥವಾ ಅವಧಿಯಲ್ಲಿ ಕೈಗಾರಿಕೆಗಳ ಸುರಕ್ಷಿತ ಪುನರಾರಂಭಕ್ಕೆ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಅವುಗಳು ಒಳಗೊಂಡಿರುವಂತೆ ನೋಡಿಕೊಳ್ಳಬೇಕು.

ವಿವರವಾದ ಮಾರ್ಗದರ್ಶಿಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ

 

***



(Release ID: 1623167) Visitor Counter : 180