ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ ಮತ್ತು ಕೋವಿಡೇತರ ತುರ್ತು ಸಂದರ್ಭಗಳನ್ನು ಎದುರಿಸಲು ಅತ್ಯವಶ್ಯಕವಾದ, ಎಲ್ಲ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಮತ್ತು ಪ್ರಯೋಗಾಲಯಗಳ ಆರಂಭಕ್ಕೆ ಹಾಗೂ ಎಲ್ಲ ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿಯ ಸುಗಮ ಸಂಚಾರ ಖಾತ್ರಿಪಡಿಸಬೇಕು: ರಾಜ್ಯಗಳಿಗೆ ಎಂಎಚ್ಎ ನಿರ್ದೇಶನ

Posted On: 11 MAY 2020 12:10PM by PIB Bengaluru

ಕೋವಿಡ್ ಮತ್ತು ಕೋವಿಡೇತರ ತುರ್ತು ಸಂದರ್ಭಗಳನ್ನು ಎದುರಿಸಲು ಅತ್ಯವಶ್ಯಕವಾದ, ಎಲ್ಲ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಮತ್ತು ಪ್ರಯೋಗಾಲಯಗಳ ಆರಂಭಕ್ಕೆ ಹಾಗೂ ಎಲ್ಲ ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿಯ ಸುಗಮ ಸಂಚಾರ ಖಾತ್ರಿಪಡಿಸಬೇಕು: ರಾಜ್ಯಗಳಿಗೆ ಎಂಎಚ್ಎ ನಿರ್ದೇಶನ

 

ಕೇಂದ್ರ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020 ಮೇ 10ರಂದು ನಡೆದ ವಿಡಿಯೋ ಸಂವಾದದಲ್ಲಿ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿರುವ ವಿಷಯ ಪ್ರಸ್ತಾಪವಾಯಿತು.

ಸಭೆಯ ಮುಂದುವರಿದ ಭಾಗವಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಅತ್ಯಮೂಲ್ಯವಾದ ಮಾನವರ ಜೀವ ಉಳಿಸಲು ಮತ್ತು ಸಾರ್ವಜನಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಅಗತ್ಯವಾದ ವೈದ್ಯಕೀಯ ವೃತ್ತಿಪರರ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ವೈದ್ಯಕೀಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಚಾರಕ್ಕೆ ಯಾವುದಾದರೂ ನಿರ್ಬಂಧಗಳನ್ನು ವಿಧಿಸಿದರೆ ಅದರಿಂದ ಕೋವಿಡ್ ಮತ್ತು ಕೋವಿಡೇತರ ವೈದ್ಯಕೀಯ ಸೇವೆಗಳಲ್ಲಿ ಗಂಭೀರ ತೊಂದರೆಗಳಾಗುತ್ತವೆ ಎಂದು ಹೇಳಲಾಗಿದೆ.

ಹಿನ್ನೆಲೆಯಲ್ಲಿ ಸಂವಹನದಲ್ಲಿ ಎಲ್ಲ ವೈದ್ಯಕೀಯ ಸಿಬ್ಬಂದಿ, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಆಂಬುಲೆನ್ಸ್ ಗಳ ಸುಗಮ ಸಂಚಾರವನ್ನು ಖಾತ್ರಿಪಡಿಸಬೇಕೆಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಇದರಿಂದ ಯಾವುದೇ ನಿರ್ಬಂಧವಿಲ್ಲದೆ ಕೋವಿಡ್ ಮತ್ತು ಕೋವಿಡೇತರ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ ಮೇಲೆ ತಿಳಿಸಲಾದ ಎಲ್ಲ ವೃತ್ತಿಪರರು ಅಂತರ-ರಾಜ್ಯ ಸಂಚಾರ ಕೈಗೊಳ್ಳಲೂ ಸಹ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅನುಕೂಲ ಮಾಡಿಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಲ್ಲ ಖಾಸಗಿ ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು ಮತ್ತು ಪ್ರಯೋಗಾಲಯಗಳು, ಸೀಮಿತ ವೃತ್ತಿಪರರು ಮತ್ತು ಸಿಬ್ಬಂದಿಯೊಂದಿಗೆ ಕಾರ್ಯಾರಂಭಕ್ಕೆ ಒತ್ತು ನೀಡಬೇಕು ಎಂದು ಸೂಚಿಸಲಾಗಿದೆ. ಇದರಿಂದಾಗಿ ಎಲ್ಲ ಕೋವಿಡ್ ಮತ್ತು ಕೋವಿಡೇತರ ತುರ್ತುಗಳನ್ನು ಎದುರಿಸುತ್ತಿರುವವರು ವೈದ್ಯಕೀಯ ಸೇವೆಗಳನ್ನು ಪಡೆಯಲು ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಆಸ್ಪತ್ರೆಗಳ ಮೇಲಿನ ಹೊರೆ ತಗ್ಗಲಿದೆ ಎಂದು ತಿಳಿಸಲಾಗಿದೆ.

ವೈದ್ಯಕೀಯ ವೃತ್ತಿಪರರ ಸಂಚಾರಕ್ಕೆ ಸಂಬಂಧಿಸಿದ ಅಧಿಕೃತ ಸಂವಹನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

 

***



(Release ID: 1622887) Visitor Counter : 272