ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ 19 ಹೊಸ ಮಾಹಿತಿ
Posted On:
08 MAY 2020 5:55PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ವಿವಿಧ ಕ್ರಮಗಳನ್ನು ಕೈಗೊಂಡಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇಂದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದರು, ಇದರಲ್ಲಿ ಅವರು ಕೋವಿಡ್-19ಕ್ಕೆ ಸಂಬಂಧಿಸಿದ ಸಿದ್ಧತೆಯ ಪ್ರಯತ್ನಗಳು ಮತ್ತು ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದರು. ಇದಲ್ಲದೆ, ಇತರ ರಾಜ್ಯಗಳಿಂದ ಹಿಂದಿರುಗಿದ ವಲಸೆ ಕಾರ್ಮಿಕರ ಸರಿಯಾದ ಸಂಪರ್ಕತಡೆಯನ್ನು ವ್ಯವಸ್ಥೆಗೊಳಿಸುವುದರ ಜೊತೆಗೆ, ಎಸ್ ಎ ಆರ್ ಐ ಮತ್ತು ಐಎಲ್ ಐ ಪ್ರಕರಣಗಳ ಮಾದರಿ ಪಡೆದುಕೊಳ್ಳುವ ಮತ್ತು ಪರೀಕ್ಷೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಐಸಿಎಂಆರ್ ಪಿಎಲ್ಸಿಐಡಿ ಟ್ರಯಲ್ ಎಂಬ ಬಹು ಕೇಂದ್ರಗಳ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ, “ಮಧ್ಯಮ ಕಾಯಿಲೆಯಲ್ಲಿ ಕೋವಿಡ್-19ಕ್ಕೆ ಸಂಬಂಧಿತ ತೊಡಕುಗಳನ್ನು ಮಿತಿಗೊಳಿಸಲು ಕಾನ್ವೆಲೆಸೆಂಟ್ ಪ್ಲಾಸ್ಮಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಹಂತ II ಓಪನ್-ಲೇಬಲ್, ಯಾದೃಚ್ಛಿಕ ನಿಯಂತ್ರಿತ ಪ್ರಯೋಗ”. ಈ ಅಧ್ಯಯನಕ್ಕೆ ಏಪ್ರಿಲ್ 29 ರಂದು ಕೋವಿಡ್-19 ರಾಷ್ಟ್ರೀಯ ನೈತಿಕ ಸಮಿತಿಯಿಂದ (CONEC) ಅನುಮೋದನೆ ದೊರೆತಿದೆ. ಐಸಿಎಂಆರ್ ಪಿಎಲ್ಎಸಿಐಡಿ ಪ್ರಯೋಗಕ್ಕಾಗಿ 21 ಸಂಸ್ಥೆಗಳ ಆಯ್ದಪಟ್ಟಿ ಮಾಡಿದೆ. ಇವುಗಳಲ್ಲಿ ಮಹಾರಾಷ್ಟ್ರದ 5 ಆಸ್ಪತ್ರೆಗಳು ಸೇರಿವೆ; ಗುಜರಾತಿನ 4; ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ತಲಾ 2; ಮತ್ತು ಪಂಜಾಬ್, ಕರ್ನಾಟಕ, ತೆಲಂಗಾಣ ಮತ್ತು ಚಂಡೀಗಢದ ತಲಾ 1 ಇವೆ.
216 ಜಿಲ್ಲೆಗಳಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಕಳೆದ 28 ದಿನಗಳಲ್ಲಿ 42 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ, 29 ಜಿಲ್ಲೆಗಳಲ್ಲಿ ಕಳೆದ 21 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಕಳೆದ 14 ದಿನಗಳಲ್ಲಿ ಒಟ್ಟು 36 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ, ಮತ್ತು 46 ಜಿಲ್ಲೆಗಳಲ್ಲಿ ಕಳೆದ 7 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.
ವಿದೇಶದಿಂದ ಹಿಂದಿರುಗಿದವರಿಗೆ/ ಸಂಪರ್ಕಗಳಿಗೆ/ ಸೋಂಕು ಶಂಕಿತರು, ದೃಢಪಟ್ಟ ಪ್ರಕರಣದವರಿಗಾಗಿ ಆರೋಗ್ಯ ಸಚಿವಾಲಯವು ರಾಜ್ಯಗಳಲ್ಲಿನ ಕ್ವಾರಂಟೈನ್ (ಸಂಪರ್ಕತಡೆ) ಸೌಲಭ್ಯ ಆಥವಾ ಪ್ರತ್ಯೇಕತೆ ಸೌಲಭ್ಯಗಳಿರುವ ಹೋಟೆಲ್ಗಳಲ್ಲಿ, ಸರ್ವಿಸ್ ಅಪಾರ್ಟ್ ಮೆಂಟ್ಗಳು, ವಸತಿಗೃಹಗಳಿಗೆ ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೆಚ್ಚಿನ ವಿವರಗಳಿಗಾಗಿ ಮಾರ್ಗಸೂಚಿಗಳನ್ನು ಇಲ್ಲಿ ನೋಡಬಹುದು:
https://www.mohfw.gov.in/pdf/Additionalguidelinesforquarantineofreturneesfromabroadcontactsisolationofsuspectorconfirmedcaseinprivatefacilities.pdf
ಈವರೆಗೆ ಒಟ್ಟು 16,540 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1273 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟು ಗುಣಮುಖರಾದ ಪ್ರಮಾಣವು 29.36% ಆಗಿದೆ. ಈ ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದೆ, ಅಂದರೆ ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಪ್ರತಿ ಮೂರು ರೋಗಿಗಳಲ್ಲಿ ಒಬ್ಬರು ಚೇತರಿಸಿಕೊಂಡಿದ್ದಾರೆ ಅಥವಾ ಗುಣಪಡಿಸಲಾಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 56,342 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 3390 ಹೆಚ್ಚಳ ಕಂಡುಬಂದಿದೆ. ಸರಾಸರಿ, 3.2% ರೋಗಿಗಳು ಆಮ್ಲಜನಕದ ಆಸರೆಯಲ್ಲಿದ್ದಾರೆ, 4.7% ರೋಗಿಗಳು ಐಸಿಯುನಲ್ಲಿದ್ದಾರೆ ಮತ್ತು 1.1% ರೋಗಿಗಳು ವೆಂಟಿಲೇಟರ್ ನಲ್ಲಿದ್ದಾರೆ ಎಂದು ಗಮನಿಸಲಾಗಿದೆ.
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1622325)
Visitor Counter : 194
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam