ಪ್ರಧಾನ ಮಂತ್ರಿಯವರ ಕಛೇರಿ

ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರಧಾನ ಮಂತ್ರಿಯವರ ಭಾಷಣ

Posted On: 07 MAY 2020 12:34PM by PIB Bengaluru

ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರಧಾನ ಮಂತ್ರಿಯವರ ಭಾಷಣ

 

ನಮಸ್ಕಾರ,

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ನಿಮಗೆ ಹಾಗೂ ಜಗತ್ತಿನಾದ್ಯಂತ ಇರುವ ಭಗವಾನ್ ಬುದ್ಧನ ಅನುಯಾಯಿಗಳೆಲ್ಲರಿಗೂ ವೈಶಾಖ ಆಚರಣೆಯ ಶುಭಾಶಯಗಳು.

ಇಂತಹ ಪವಿತ್ರ ದಿನದಂದು ತಮ್ಮನ್ನು ಭೇಟಿಯಾಗುತ್ತಿರುವುದು ಹಾಗೂ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಮೊದಲೂ ಸಹ ಇಂತಹ ಅನೇಕ ಅವಕಾಶಗಳು ನನಗೆ ದೊರೆತಿವೆ. 2015 ಹಾಗೂ 2018 ರಲ್ಲಿ ದೆಹಲಿಯಲ್ಲಿ ಹಾಗೂ  2017 ರಲ್ಲಿ ಕೊಲಂಬೋದಲ್ಲಿ ಆಚರಣೆಗಳಲ್ಲಿ ನಾನು ನಿಮ್ಮೊಂದಿಗೆ ಭಾಗಿಯಾಗಿದ್ದೆ.

ಆದರೆ, ಬಾರಿಯ ಸನ್ನಿವೇಶ ಸ್ವಲ್ಪ ಭಿನ್ನವಾಗಿದೆ. ಆದ್ದರಿಂದ ನಾವು ಮುಖಾಮುಖಿಯಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ಸ್ನೇಹಿತರೇ, ಭಗವಾನ್ ಬುದ್ಧ ಹೇಳಿದ್ದರು-

मनो पुब्बं-गमा धम्मा,

मनोसेट्ठा मनोमया,

ಇದರರ್ಥ, ಧಮ್ಮ ಅಥವಾ ಧರ್ಮ ಮನಸ್ಸಿನಲ್ಲಿರುತ್ತದೆ. ಮನಸ್ಸು ಸರ್ವೋಚ್ಛವಾದುದು. ಇದೇ ಎಲ್ಲವನ್ನೂ ಮಾಡಿಸುತ್ತದೆ. ಅದೇ ಮನಸ್ಸು ನನ್ನನ್ನು ನಿಮ್ಮೊಂದಿಗೆ ಬೆಸೆದಿದೆ. ಆದ್ದರಿಂದ ಭೌತಿಕವಾಗಿ ನಾವು ಹತ್ತಿರವಿಲ್ಲ ಎಂದು ಅನ್ನಿಸುತ್ತಲೇ ಇಲ್ಲ. ನಿಮ್ಮೊಂದಿಗೇ ಇದ್ದ್ದಿದ್ದರೆ ತುಂಬಾ ಆನಂದದಾಯಕವಾಗಿರುತ್ತಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ.

ದೂರದಲ್ಲಿ ಇದ್ದರೂ, ತಂತ್ರಜ್ಞಾನದ ನೆರವಿನಿಂದ ನಾವು ಪರಸ್ಪರ ಸಂವಾದ ನಡೆಸಬಹುದಾದ ಅವಕಾಶ ಹೊಂದಿದ್ದೇವೆ. ಇದರಿಂದ ಸಾಕಷ್ಟು ತೃಪ್ತಿಯಾಗಿದೆ.

ಸ್ನೇಹಿತರೇ, ಇಂತಹ ಸಂಕಷ್ಟದ ಲಾಕ್ ಡೌನ್ ಸಂದರ್ಭದಲ್ಲಿ ವರ್ಚುವಲ್ ವೈಶಾಖ ಬುದ್ಧ ಪೂರ್ಣಿಮೆ ದಿನವನ್ನು ಆಯೋಜಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಬೌದ್ಧ ಸಂಘಟನೆಯು ಪ್ರಶಂಸೆಗೆ ಅರ್ಹವಾಗಿದೆ. ನಿಮ್ಮ ನವೀನ ಪ್ರಯತ್ನಗಳಿಂದಾಗಿ, ಜಗತ್ತಿನಾದ್ಯಂತದ ಲಕ್ಷಾಂತರ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಲುಂಬಿನಿ, ಬೋಧಗಯಾ, ಸಾರನಾಥ ಮತ್ತು ಕುಶಿನಗರಗಳಲ್ಲದೆ, ಶ್ರೀಲಂಕಾದ ಶ್ರೀಅನುರಾಧಪುರ ಸ್ತೂಪ ಮತ್ತು ವಸ್ಕಾದುವಾ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು ನಿಜವಾಗಿಯೂ ಬಹಳ ಸುಂದರವಾಗಿವೆ.

ಎಲ್ಲೆಡೆ ನಡೆಯುವ ಪೂಜಾ ಕಾರ್ಯಕ್ರಮಗಳ ಆನ್ಲೈನ್ ಸ್ಟ್ರೀಮಿಂಗ್ ಸ್ವತಃ ಅದ್ಭುತ ಅನುಭವವಾಗಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಪ್ರಪಂಚದಾದ್ಯಂತದ ಮುಂಚೂಣಿ ಯೋಧರ ಪ್ರಾರ್ಥನಾ ವಾರವಾಗಿ ಕಾರ್ಯಕ್ರಮನ್ನು ಆಚರಿಸಲು ನೀವು ಸಂಕಲ್ಪ ಮಾಡಿದ್ದೀರಿ. ಸಹಾನುಭೂತಿಯ ಉಪಕ್ರಮಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ.

ಇಂತಹ ಸಂಘಟಿತ ಪ್ರಯತ್ನಗಳಿಂದ ನಾವು ಕಠಿಣ ಸವಾಲಿನಲ್ಲಿ ಮಾನವೀಯತೆಯನ್ನು ಮೆರೆಯಲು ಮತ್ತು ಜನರ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಸ್ನೇಹಿತರೇ, ಪ್ರತಿಯೊಬ್ಬರ ಜೀವನದ ಕಷ್ಟವನ್ನು ನಿವಾರಿಸುವ ಸಂದೇಶ ಮತ್ತು ಸಂಕಲ್ಪವು ಯಾವಾಗಲೂ ಭಾರತದ ನಾಗರಿಕತೆ, ಸಂಸ್ಕೃತಿಯಾಗಿದೆ. ಭಗವಾನ್ ಬುದ್ಧ ಭಾರತದ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾನೆ.

ಭಗವಾನ್ ಬುದ್ಧನು ತನ್ನ ಜೀವನದಲ್ಲಿ ಜ್ಞಾನೋದಯದ ನಂತರ ಇತರರ ಜೀವನವನ್ನು ಸಮೃದ್ಧಗೊಳಿಸಿದನು. ಅವನ ಸಂದೇಶವು ಯಾವುದೇ ಒಂದು ಸಂದರ್ಭಕ್ಕೆ ಅಥವಾ ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿಲ್ಲ.

ಅನೇಕ ಶತಮಾನಗಳಿಂದ, ಸಿದ್ಧಾರ್ಥನ ಜನನದ ಮೊದಲು ಮತ್ತು ನಂತರ, ಸಿದ್ಧಾರ್ಥನನ್ನು ಗೌತಮನನ್ನಾಗಿ ಮಾಡಿದ ನಂತರ, ಕಾಲಚಕ್ರವು ಅನೇಕ ಸನ್ನಿವೇಶಗಳು ಮತ್ತು ಪರಿಸ್ಥಿತಿಗಳ ಮೂಲಕ ನಮ್ಮನ್ನು ಕರೆದೊಯ್ಯುತ್ತಲೇ ಇದೆ.

ಕಾಲಬದಲಾಯಿತು, ಪರಿಸ್ಥಿತಿ ಬದಲಾಯಿತು, ಸಮಾಜದ ಕಾರ್ಯವೈಖರಿ ಬದಲಾಯಿತು, ಆದರೆ ಭಗವಾನ್ ಬುದ್ಧನ ಸಂದೇಶವು ನಮ್ಮ ಜೀವನದಲ್ಲಿ ನಿರಂತರವಾಗಿದೆ. ಇದು ಸಾಧ್ಯವಾಗಿದ್ದು ಬುದ್ಧ ಕೇವಲ ಹೆಸರಲ್ಲದಿರುವುದರಿಂದ, ಅದೊಂದು ಪವಿತ್ರವಾದ ಆಲೋಚನೆ, ಪ್ರತಿ ಮಾನವ ಹೃದಯದಲ್ಲಿ ಮಿಡಿಯುವ ಹಾಗೂ ಮನುಕಿಲಕ್ಕೆ ದಾರಿದೀಪವಾಗಿರುವ ಆಲೋಚನೆ. ಬುದ್ಧ ತ್ಯಾಗ ಮತ್ತು ತಪಸ್ಸಿನ ಮಿತಿ.

ಸೇವೆ ಮತ್ತು ಸಮರ್ಪಣೆಗೆ ಸಮಾನಾರ್ಥಕವಾದದ್ದು ಬುದ್ಧ. ಬುದ್ಧ, ಬಲವಾದ ಇಚ್ಛಾಶಕ್ತಿ, ಸಾಮಾಜಿಕ ಬದಲಾವಣೆಯ ಪರಾಕಾಷ್ಠೆ. ಪರಿಶ್ರಮ, ಪರಿತ್ಯಾಗ ಮತ್ತು ಸಂತೋಷವನ್ನು ಪ್ರಪಂಚದಾದ್ಯಂತ ಹರಡಿದವನು ಬುದ್ಧ. ನಮ್ಮೆಲ್ಲರ ಅದೃಷ್ಟವನ್ನು ನೋಡಿ, ಸಂದರ್ಭದಲ್ಲಿ ನಾವು ನಮ್ಮ ಸುತ್ತಮುತ್ತ ಅನೇಕ ಜನರನ್ನು ನೋಡುತ್ತಿದ್ದೇವೆ, ಅವರು ಇತರರಿಗೆ ಸೇವೆ ಸಲ್ಲಿಸುತ್ತಿದ್ದಾರೆ, ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಬಡವರಿಗೆ ಆಹಾರವನ್ನು ನೀಡುತ್ತಿದ್ದಾರೆ, ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ, ರಸ್ತೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ, ಅವರೆಲ್ಲರೂ ದಿನವಿಡೀ ದುಡಿಯುತ್ತಿದ್ದಾರೆ. ಕೆಲಸ. ಭಾರತದಲ್ಲಿ ಹಾಗೂ ಭಾರತದ ಹೊರಗೂ ಸಹ, ಅಂತಹ ಪ್ರತಿಯೊಬ್ಬರೂ ಒಂದು ಅಭಿನಂದನೆ, ಒಂದು ಗೌರವಕ್ಕೆ ಅರ್ಹರಾಗಿದ್ದಾರೆ.

ಸ್ನೇಹಿತರೇ, ಜಗತ್ತಿನಲ್ಲಿ ಪ್ರಕ್ಷುಬ್ಧತೆ ಇರುವ ಸಮಯದಲ್ಲಿ, ಅನೇಕ ಬಾರಿ ದುಃಖ, ನಿರಾಸೆ ಮತ್ತು ಹತಾಶೆಯ ಭಾವ ಕಂಡುಬರುತ್ತದೆ, ಅಂತಹ ಸಂದರ್ಭದಲ್ಲಿ ಭಗವಾನ್ ಬುದ್ಧನನ್ನು ಓದುವುದು ಇನ್ನಷ್ಟು ಪ್ರಸ್ತುತವಾಗುತ್ತದೆ. ಕಷ್ಟದ ಸಂದರ್ಭಗಳನ್ನು ನಿವಾರಿಸಲು, ಅವುಗಳಿಂದ ಹೊರಬರಲು ಮಾನವರು ನಿರಂತರವಾಗಿ ಶ್ರಮಿಸಬೇಕು ಎಂದು ಅವರು ಹೇಳುತ್ತಿದ್ದರು. ದಣಿಯುವುದು ಮತ್ತು ಸುಸ್ತಾಗುವುದು ಒಂದು ಆಯ್ಕೆಯಾಗಿಲ್ಲ. ಇಂದು, ನಾವೆಲ್ಲರೂ ಸಹ ಕಠಿಣ ಪರಿಸ್ಥಿತಿಯಿಂದ ಹೊರಬರಲು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ಭಗವಾನ್ ಬುದ್ಧ ಹೇಳಿದ ನಾಲ್ಕು ಸತ್ಯಗಳು-

ಕರುಣೆ,

ಸಹಾನುಭೂತಿ,

ಸಂತೋಷ ಮತ್ತು ದುಃಖದಲ್ಲಿ ನಿರುದ್ವೇಗ,

ಮತ್ತು ಎಲ್ಲಾ ಸದ್ಗುಣಗಳು ಮತ್ತು ದೋಷಗಳೊಂದಿಗೆ ಮತ್ತೊಬ್ಬರನ್ನು ಒಪ್ಪಿಕೊಳ್ಳುವುದು

- ಸತ್ಯಗಳು ಭರತ ಭೂಮಿಯ ಸ್ಫೂರ್ತಿಯಾಗಿ ಮುಂದುವರಿಯುತ್ತವೆ.

ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವವರೊಂದಿಗೆ ನಿಸ್ವಾರ್ಥದಿಂದ, ಭೇದಭಾವವಿಲ್ಲದೆ ದೃಢವಾಗಿ ನಿಂತಿರುವುದನ್ನು ನೀವು ಇಂದು ನೋಡುತ್ತಿದ್ದೀರಿ.

ಲಾಭ ಮತ್ತು ನಷ್ಟಗಳಾಚೆ, ಸಾಮರ್ಥ್ಯವಿರಲಿ, ಇಲ್ಲದಿರಲಿ ನಮ್ಮ ಹೊತ್ತಿನ ಕತರ್ವ್ಯವೆಂದರೆ, ಸಾಧ್ಯವಾದಷ್ಟು ಮತ್ತೊಬ್ಬರಿಗೆ ನೆರವಾಗುವುದು, ಅವರಿಗೆ ಸಹಾಯ ಹಸ್ತ ಚಾಚುವುದು.

ಸಂಕಷ್ಟದ ಸಮಯದಲ್ಲಿ ವಿಶ್ವದ ಅನೇಕ ದೇಶಗಳು ಭಾರತವನ್ನು ಸ್ಮರಿಸಿಕೊಳ್ಳಲು ಇದು ಕಾರಣವಾಗಿದೆ ಮತ್ತು ಪ್ರತೀ ನಿರ್ಗತಿಕರನ್ನು ತಲುಪಲು ಭಾರತವು ಯಾವುದೇ ಅವಕಾಶವನ್ನೂ ಬಿಟ್ಟಿಲ್ಲ.

ಇಂದು, ಭಾರತವು ಪ್ರತಿಯೊಬ್ಬ ಭಾರತೀಯನ ಜೀವ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ತನ್ನ ಜಾಗತಿಕ ಬದ್ಧತೆಗಳನ್ನೂ ಅಷ್ಟೇ ಗಂಭೀರವಾಗಿ ಪಾಲಿಸುತ್ತಿದೆ.

ಸ್ನೇಹಿತರೇ, ಭಗವಾನ್ ಬುದ್ಧನ ಪ್ರತಿಯೊಂದು ನುಡಿ, ಪ್ರತಿಯೊಂದು ಪ್ರವಚನವು ಮನುಕುಲದ ಸೇವೆ ಮಾಡುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ಬುದ್ಧ ಭಾರತದ ಜ್ಞಾನೋದಯ ಮತ್ತು ಆತ್ಮಸಾಕ್ಷಾತ್ಕಾರ ಸಂಕೇತ. ಆತ್ಮ-ಸಾಕ್ಷಾತ್ಕಾರದೊಂದಿಗೆ, ಭಾರತವು ಇಡೀ ಮನುಕುಲದ, ಇಡೀ ಜಗತ್ತಿನ ಹಿತಕ್ಕಾಗಿ ಕೆಲಸ ಮಾಡುತ್ತದೆ. ವಿಶ್ವದ ಪ್ರಗತಿಗೆ ಭಾರತದ ಪ್ರಗತಿ ಯಾವಾಗಲೂ ಸಹಾಯಕವಾಗಿರುತ್ತದೆ.

ಸ್ನೇಹಿತರೇ, ನಮ್ಮ ಮಾಪಕಗಳು ಮತ್ತು ಯಶಸ್ಸಿನ ಗುರಿಗಳು ಎರಡೂ ಕಾಲಕ್ರಮೇಣ ಬದಲಾಗುತ್ತವೆ. ಆದಾಗ್ಯೂ, ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ನಮ್ಮ ಕೆಲಸವನ್ನು ನಿರಂತರ ಸೇವೆಯೊಂದಿಗೆ ಮಾಡಬೇಕು. ಇತರರ ಬಗ್ಗೆ ಕರುಣೆ, ಸಹಾನುಭೂತಿ ಮತ್ತು ಸೇವಾ ಮನೋಭಾವನೆಗಳು ನಮ್ಮಲ್ಲಿ ಶಕ್ತಿ ತುಂಬುತ್ತವೆ, ಇದರಿಂದ ನೀವು ಎಂತಹುದೇ ದೊಡ್ಡ ಸವಾಲನ್ನೂ ಜಯಿಸಬಹುದು.

सुप्प, सदा गोतम सावका, ಅಂದರೆ, ಹಗಲು-ರಾತ್ರಿಯೆನ್ನದೇ ಎಲ್ಲ ಸಮಯದಲ್ಲೂ ಮಾನವೀಯ ಸೇವೆಯಲ್ಲಿ ತೊಡಗಿರುವವರು ಬುದ್ಧನ ನಿಜವಾದ ಅನುಯಾಯಿಗಳು. ಇದೇ ಸ್ಫೂರ್ತಿಯು ನಮ್ಮ ಜೀವನವನ್ನು ಬೆಳಗಿಸುತ್ತದೆ, ಮುಂದಕ್ಕೆ ಚಲಿಸುವಂತೆ ಮಾಡುತ್ತದೆ.

ಸದಾಶಯಗಳೊಂದಿಗೆ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಸಂಕಷ್ಟದ ಪರಿಸ್ಥಿತಿಯಲ್ಲಿ, ನೀವು, ನಿಮ್ಮ ಕುಟುಂಬ ಮತ್ತು ನೀವು ವಾಸಿಸುವ ದೇಶವನ್ನು ನೋಡಿಕೊಳ್ಳಿ, ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ.

ಪ್ರತಿಯೊಬ್ಬರ ಆರೋಗ್ಯವು ಉತ್ತಮವಾಗಿರಲಿ, ಸದಾಶಯದಿಂದ ನಾನು ನನ್ನ ಭಾಷಣವನ್ನು ಮುಕ್ತಾಯ ಮಾಡುತ್ತಿದ್ದೇನೆ.

ಧನ್ಯವಾದಗಳು!!

ಸರ್ವ ಮಂಗಳಂ !!!

***



(Release ID: 1621877) Visitor Counter : 250