ಪ್ರಧಾನ ಮಂತ್ರಿಯವರ ಕಛೇರಿ
ಬುದ್ಧ ಪೌರ್ಣಿಮೆಯ ಜಾಗತಿಕ ಸಂಭ್ರಮ ವರ್ಚುವಲ್ ವಿಶಾಖ್ ನಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ
Posted On:
06 MAY 2020 8:45PM by PIB Bengaluru
2020ರ ಮೇ 7ರಂದು ಬುದ್ಧ ಪೌರ್ಣಿಮೆಯ ಜಾಗತಿಕ ಸಂಭ್ರಮ ವರ್ಚುವಲ್ ವಿಶಾಖ್ ನಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ
ಈ ಸಂದರ್ಭದಲ್ಲಿ ಪ್ರಧಾನ ಭಾಷಣ ಮಾಡಲಿರುವ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬುದ್ಧ ಪೌರ್ಣಿಮೆಯ ಸಮಾರಂಭದಲ್ಲಿ ನಾಳೆ ಅಂದರೆ 2020ರ ಮೇ 7ರಂದು ಭಾಗಿಯಾಗುತ್ತಿದ್ದಾರೆ.
ಜಾಗತಿಕ ಬೌದ್ಧ ಸಂಘಟನೆಯಾದ ಅಂತಾರಾಷ್ಟ್ರೀಯ ಬೌದ್ಧರ ಒಕ್ಕೂಟ (ಐಬಿಸಿ) ಸಹಯೋಗದಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ಈ ವರ್ಚುಯಲ್ ಪ್ರಾರ್ಥನಾ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತದ ಎಲ್ಲ ಪ್ರಮುಖ ಬೌದ್ಧ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗುತ್ತಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳಗ್ಗೆ ಪ್ರಧಾನ ಭಾಷಣ ಮಾಡಲಿದ್ದಾರೆ.
ಬುದ್ಧ ಪೌರ್ಣಿಮೆ ಆಚರಣೆಯನ್ನು ಜಗತ್ತಿನಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಪರಿಣಾಮದ ಹಿನ್ನೆಲೆಯಲ್ಲಿ ವರ್ಚುಯಲ್ ವಿಶಾಖ ದಿನ ಎಂದು ಆಯೋಜಿಸಲಾಗುತ್ತಿದೆ
ಈ ಕಾರ್ಯಕ್ರಮವನ್ನು ಕೋವಿಡ್ -19 ಸಂತ್ರಸ್ತರು ಮತ್ತು ಮುಂಚೂಣಿಯ ಯೋಧರ ಗೌರವಾರ್ಥ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಾರ್ಥನಾ ಸಮಾರಂಭಗಳನ್ನು ಪವಿತ್ರ ಲುಂಬಿನಿ ಉದ್ಯಾನ, ನೇಪಾಳ, ಮಹಾಬೋಧಿ ದೇವಸ್ಥಾನ, ಬೋಧಗಯಾ, ಭಾರತ, ಮುಲ್ಗಂಧ ಕುಟಿ ವಿಹಾರ, ಸಾರಾನಾಥ್, ಭಾರತ, ಪರಿನಿರ್ವಾಣ ಸ್ತೂಪ, ಕುಶಿನಗರ, ಭಾರತ ಇಲ್ಲಿಂದ ನೇರವಾಗಿ ಪ್ರಸಾರ ಮಾಡಲಾಗುವುದು. ಪೃತ್ ಪಠಣವನ್ನು ಪವಿತ್ರ ಮತ್ತು ಐತಿಹಾಸಿಕ ಅನುರಾಧಾಪುರ ಸ್ತೂಪ ಆವರಣದ ರುವಾನ್ವೇಲಿ ಮಹಾ ಸೇಯ, ಶ್ರೀಲಂಕಾ, ಬೌದ್ಧನಾಥ್, ಸ್ವಯಂಭು, ನಮೋ ಸ್ತೂಪ, ನೇಪಾಳ ಮತ್ತಿತರ ಜನಪ್ರಿಯ ಬೌದ್ಧ ತಾಣಗಳಲ್ಲಿ ನಡೆಸಲಾಗುತ್ತಿದೆ.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ವಿಶಾಖ್ ಬುದ್ಧ ಪೌರ್ಣಿಮೆಯನ್ನು ತಥಾಗತ ಗೌತಮ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣದ ಮೂರು ಆಶೀರ್ವಾದದ ದಿನವಾಗಿ ಆಚರಿಸಲಾಗುತ್ತದೆ.
***
(Release ID: 1621724)
Visitor Counter : 204
Read this release in:
Punjabi
,
Malayalam
,
Marathi
,
Assamese
,
Bengali
,
English
,
Urdu
,
Hindi
,
Manipuri
,
Gujarati
,
Odia
,
Tamil
,
Telugu