ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬೈ ಅಹ್ಮದ್ ಅಲಿ ನಡುವೆ ದೂರವಾಣಿ ಸಂಭಾಷಣೆ

Posted On: 06 MAY 2020 7:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬೈ ಅಹ್ಮದ್ ಅಲಿ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯ ಒಕ್ಕೂಟದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬೈ ಅಹ್ಮದ್ ಅಲಿ ಅವರೊಂದಿಗೆ ದೂರವಾಣಿ ಮಾತಕತೆ ನಡೆಸಿದರು.

ಪ್ರಧಾನಮಂತ್ರಿಯವರು ಭಾರತ ಮತ್ತು ಇಥಿಯೋಫಿಯಾ ನಡುವಿನ ಆಪ್ತ ಬಾಂಧವ್ಯ ಮತ್ತು ಎರಡೂ ರಾಷ್ಟ್ರಗಳ ನಡುವಿನ ಅದ್ಭುತ ಅಭಿವೃದ್ಧಿ ಪಾಲುದಾರಿಕೆಯನ್ನು ಸ್ಮರಿಸಿದರು.

ಇಬ್ಬರೂ ನಾಯಕರು ಕೋವಿಡ್ -19 ಒಡ್ಡಿರುವ ದೇಶೀಯ, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಿದರು ಮತ್ತು ಆರೋಗ್ಯ ಬಿಕ್ಕಟ್ಟಿನ ಕಾಲದಲ್ಲಿ ಪರಸ್ಪರರಿಗೆ ಏಕಮತ್ಯ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಇಥಿಯೋಫಿಯಾಕ್ಕೆ ಭಾರತದಿಂದ ಅತ್ಯಾವಶ್ಯಕ ವೈದ್ಯಕೀಯ ಪೂರೈಕೆ ಖಾತ್ರಿ ಪಡಿಸುವ ಮತ್ತು ಸಾಂಕ್ರಾಮಿಕದಿಂದ ಎದುರಾಗಿರುವ ಆರ್ಥಿಕ ಪರಿಣಾಮಗಳಿಂದ ಹೊರಬರಲು ಬೆಂಬಲ ನೀಡುವ ಬಗ್ಗೆ ಡಾ. ಅಬೈ ಅಹ್ಮದ್ ಅಲಿಯೋಫ್ ಅವರಿಗೆ ಭರವಸೆ ನೀಡಿದರು.

ಪ್ರಧಾನಮಂತ್ರಿಯವರು, ಭಾರತದ ಜನರ ಪರವಾಗಿ ಮತ್ತು ವೈಯಕ್ತಿಕವಾಗಿ ಇಥಿಯೋಫಿಯಾದ ಜನತೆಗೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.

***



(Release ID: 1621634) Visitor Counter : 141