PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 06 MAY 2020 6:44PM by PIB Bengaluru

 ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ ಒಟ್ಟು 14,183 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1457 ರೋಗಿಗಳು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆಯ ದರವನ್ನು ಶೇ.28.72ಕ್ಕೇರಿಸಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 49,391 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 2958 ಹೆಚ್ಚಳ ಕಂಡುಬಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621216

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ಗುಜರಾತ್ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಎರಡೂ ರಾಜ್ಯಗಳಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಳ್ಳುತ್ತಿರುವ ಕ್ರಮಗಳು, ಪರಿಸ್ಥಿತಿ ಮತ್ತು ಸಿದ್ಧತೆ ಕುರಿತು ಪರಿಶೀಲಿಸಿದರು. ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19 ರಿಂದ ಉಂಟಾಗಿರುವ ಹೆಚ್ಚಿನ ಸಾವಿನ ಪ್ರಮಾಣ ಕುರಿತು ಕಳವಳ ವ್ಯಕ್ತಪಡಿಸಿದ ಡಾ. ಹರ್ಷವರ್ಧನ್, "ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯಗಳು ಹೆಚ್ಚು ಪರಿಣಾಮಕಾರಿ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಆರಂಭಿಕ ರೋಗನಿರ್ಣಯದತ್ತ ಗಮನ ಹರಿಸಬೇಕಾಗಿದೆ" ಎಂದು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621455

ಕೊರೊನಾ ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ, ರೋಗ ನಿರ್ಣಯ ಮತ್ತು ಪರೀಕ್ಷೆ ಕುರಿತ ಕಾರ್ಯಪಡೆಯ ಸಭೆ ನಡೆಸಿದ ಪ್ರಧಾನಿ

ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ, ರೋಗನಿರ್ಣಯ ಮತ್ತು ಪರೀಕ್ಷೆಯಲ್ಲಿ ಭಾರತದ ಪ್ರಯತ್ನಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಧಾನಿಯವರು  ವಿವರವಾದ ಪರಾಮರ್ಶೆ ನಡೆಸಿದರು. 30 ಕ್ಕೂ ಹೆಚ್ಚು ಭಾರತೀಯ ಲಸಿಕೆಗಳು ಕೊರೊನಾ ಲಸಿಕೆ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ, ಕೆಲವು ಪ್ರಾಯೋಗಿಕ  ಹಂತಗಳಿಗೂ ಹೋಗಿವೆ. ಪ್ರಧಾನಮಂತ್ರಿಯವರ ಪರಿಶೀಲನೆಯು ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರದ ತ್ವರಿತ ಆದರೆ ಪರಿಣಾಮಕಾರಿ ನಿಯಂತ್ರಕ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟಿರುವ ಅಸಾಧಾರಣ ಸಹಯೋಗವನ್ನು ಗಮನಿಸಿತು. ಅಂತಹ ಸಮನ್ವಯ ಮತ್ತು ವೇಗವನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪ್ರಧಾನಿಯವರು ತಿಳಿಸಿದರು.  ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದದ್ದು ನಮ್ಮ ದಿನನಿತ್ಯದ ವೈಜ್ಞಾನಿಕ ಕಾರ್ಯಚಟುವಟಿಕೆಯ ಒಂದು ಭಾಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621317

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಇದುವರೆಗಿನ ಪ್ರಗತಿ

  • ಪಿಎಂ ಕಿಸಾನ್ ಅಡಿಯಲ್ಲಿ ರೈತರಿಗೆ 8.19 ಕೋಟಿ ರೈತರಿಗೆ ಮೊದಲ ಕಂತಿನ ಹಣ 16,394 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.
  • ಜನ್ ಧನ್ ಖಾತೆ ಹೊಂದಿರುವ 20.05 ಕೋಟಿ(98.33%) ಮಹಿಳೆಯರಿಗೆ ಮೊದಲ ಕಂತಿನ 10,025 ಕೋಟಿ ರೂ. ಜಮೆ ಮಾಡಲಾಗಿದೆ. ಗ್ರಾಹಕರಿಂದ ಪ್ರೇರೇಪಿತರಾಗಿ ಪಿಎಂಜೆಡಿವೈ ಖಾತೆ ಹೊಂದಿರುವ ಮಹಿಳೆಯರಿಗೆ, ಹಣ ಜಮೆ ಆಗಿಲ್ಲವೋ ಅಂತಹವರಿಗೆ 8.72 ಕೋಟಿ ರೂ. (44%). ಹಣ ಜಮೆ ಮಾಡಲಾಗಿದೆ. ಮೇ 5ರ ವೇಳೆಗೆ 5.57 ಮಹಿಳಾ ಜನ್ ಧನ್ ಖಾತೆದಾರರಿಗೆ ಎರಡನೇ ಕಂತಿನ 2,785 ಕೋಟಿ ರೂ. ಜಮೆ ಮಾಡಲಾಗಿದೆ.
  • ಸುಮಾರು 2.82 ಕೋಟಿ ವೃದ್ಧರು, ವಿಧವೆಯರು ಮತ್ತು ವಿಶೇಷಚೇತನರಿಗಾಗಿ 1405 ಕೋಟಿ ರೂ. ವಿತರಿಸಲಾಗಿದೆ ಎಲ್ಲ 2.812 ಕೋಟಿ ಫಲಾನುಭವಿಗಳಿಗೂ ನಗದನ್ನು ವರ್ಗಾಯಿಸಲಾಗಿದೆ.
  • 2.20 ಕೋಟಿ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರು 3492.57 ಕೋಟಿ ರೂ. ಆರ್ಥಿಕ ನೆರವು ಸ್ವೀಕರಿಸಿದ್ದಾರೆ.
  • ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಅಡಿಯಲ್ಲಿ ಈವರೆಗೆ ಒಟ್ಟು 5.09 ಕೋಟಿ ಸಿಲಿಂಡರ್ ಗಳನ್ನು ಬುಕ್ ಮಾಡಲಾಗಿದೆ. ಅದರಲ್ಲಿ ಯೋಜನೆಯಡಿ ಈವರೆಗೆ 4.82 ಕೋಟಿ ಪಿಎಂಯುವೈ ಉಚಿತ ಸಿಲಿಂಡರ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.
  • ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯ 9.6 ಲಕ್ಷ ಸದಸ್ಯರು ಮರುಪಾವತಿ ಮಾಡಲಾಗದ ಮುಂಗಡ ಸ್ವೀಕೃತಿಯಿಂದ ಆನ್ ಲೈನ್ ವಾಪಸಾತಿ ಮೂಲಕ ಇಪಿಎಫ್ಒ ಖಾತೆಗಳಿಂದ 2985 ಕೋಟಿ ರೂ.ಗಳನ್ನು ವಾಪಸ್ ಪಡೆದಿದ್ದಾರೆ.
  • ಶೇ.24ರಷ್ಟು ಇಪಿಎಫ್ ವಂತಿಗೆಯನ್ನು 44.97 ಲಕ್ಷ ಉದ್ಯೋಗಿಗಳ ಖಾತೆಗಳಿಗೆ ಸುಮಾರು 698 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621319

ದೇಶದ ಹೊರಗೆ ಸಿಲುಕಿರುವ ಭಾರತೀಯ ನಾಗರಿಕರು ಹಾಗೂ ಭಾರತದಲ್ಲಿ ಸಿಕ್ಕಿಬಿದ್ದಿರುವ ವಿದೇಶ ಪ್ರವಾಸ ಮಾಡಲು ಇಚ್ಛಿಸುವ ವ್ಯಕ್ತಿಗಳ ಸಂಚಾರಕ್ಕೆ ಶಿಷ್ಟಾಚಾರಗಳನ್ನು ಹೊರಡಿಸಲಾಗಿದೆ

ಲಾಕ್ ಡೌನ್ ಗೂ ಮೊದಲು ಉದ್ಯೋಗ, ಅಧ್ಯಯನ / ಇಂಟರ್ನ್ಶಿಪ್, ಪ್ರವಾಸೋದ್ಯಮ, ವ್ಯವಹಾರ ಮುಂತಾದ ವಿವಿಧ ಉದ್ದೇಶಗಳಿಗಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಿದ್ದ ಅನೇಕ ಭಾರತೀಯ ನಾಗರಿಕರು ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ದೀರ್ಘಕಾಲದಿಂದ ವಿದೇಶದಲ್ಲಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ತುರ್ತಾಗಿ ಭಾರತಕ್ಕೆ ಮರಳಲು ಬಯಸಿದ್ದಾರೆ. ಮೇಲಿನ ಪ್ರಕರಣಗಳ ಹೊರತಾಗಿಯೂ, ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಅಥವಾ ಕುಟುಂಬದ ಸದಸ್ಯರ ಸಾವಿಗೆ ಭಾರತಕ್ಕೆ ಭೇಟಿ ನೀಡಬೇಕಾದ ಇತರ ಭಾರತೀಯ ಪ್ರಜೆಗಳಿದ್ದಾರೆ. ಅಲ್ಲದೆ, ಅನೇಕ ವ್ಯಕ್ತಿಗಳು ಭಾರತದಲ್ಲಿಯೂ ಸಿಲುಕಿಕೊಂಡಿದ್ದಾರೆ, ಅವರು ವಿವಿಧ ಉದ್ದೇಶಗಳಿಗಾಗಿ ತುರ್ತಾಗಿ ವಿದೇಶ ಪ್ರವಾಸ ಮಾಡಲು ಬಯಸಿದ್ದಾರೆ. ಅಂತಹ ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಗೃಹಸಚಿವಾಲಯವು ಸಾಮಾನ್ಯ ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621290

ಭಾರತೀಯ ನೌಕಾಪಡೆಯಿಂದಸಮುದ್ರ ಸೇತುಕಾರ್ಯಾಚರಣೆ ಆರಂಭ

ಭಾರತೀಯ ನಾಗರಿಕರನ್ನು ವಿದೇಶದಿಂದ ಕರೆತರುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಭಾರತೀಯ ನೌಕಾಪಡೆಯು “ಸಮುದ್ರ ಸೇತು” ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಯ ಹಡಗುಗಳಾದ ಜಲಾಶ್ವ ಮತ್ತು ಮಗರ್ ಪ್ರಸ್ತುತ ಮಾಲ್ಡೀವ್ಸ್ ಮಾಲೆ ಬಂದರಿನತ್ತ ಹೊರಟಿದ್ದು ಪ್ರಥಮ ಹಂತದಲ್ಲಿ 8 ಮೇ 2020 ರಿಂದ ಸ್ಥಳಾಂತರ ಕಾರ್ಯಾಚರಣೆ ನಡೆಯಲಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621256

ಕೋವಿಡ್19 ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಉಳಿದಿರುವ ವಿದೇಶಿ ಪ್ರಜೆಗಳಿಗೆ ಕೆಲವು ರಾಯಭಾರ ಕಚೇರಿ ಸೇವೆಗಳ ಪ್ರದಾನ, ಅಂತಾರಾಷ್ಟ್ರೀ ವಿಮಾನಯಾನದ ಮೇಲಿನ ನಿರ್ಬಂಧ ತೆರೆವು ಬಳಿಕ 30 ದಿನಗಳೊಳಗೆ ಭಾರತದಿಂದ ಪ್ರಯಾಣಿಸಲು ಅವಕಾಶ

ವೀಸಾ ಅವಧಿ ಮುಗಿದಿರುವ ಅಥವಾ 01.02.2020ರ (ಮಧ್ಯರಾತ್ರಿ) ಯವರೆಗೆ ವೀಸಾ ಅವಧಿ ಮುಗಿಯಲಿರುವ ವಿದೇಶಿ ಪ್ರಜೆಗಳ ನಿಯಮಿತ ವೀಸಾ, ಇವೀಸಾ ಅಥವಾ ಷರತ್ತು ಬದ್ಧ ವಾಸ್ತವ್ಯದ ಅವಧಿಯನ್ನು ವಿದೇಶೀಯರು ಆನ್ ಲೈನ್ ಅರ್ಜಿ ಸಲ್ಲಿಸಿದಲ್ಲಿ, ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿರ್ಬಂಧವನ್ನು ಭಾರತ ಸರ್ಕಾರ ತೆಗೆದುಹಾಕುವ ದಿನಾಂಕದವರೆಗೆ ಉಚಿತ ಆಧಾರದ ಮೇಲೆ ವಿಸ್ತರಿಸಲಾಗುವುದು.ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿನ ನಿರ್ಬಂಧವನ್ನು ತೆರವು ಮಾಡಿದ 30 ದಿನಗಳವರೆಗೆ ಇಂಥ ವಿಸ್ತರಣೆಗಳನ್ನು ಅವಧಿ ಮೀರಿ ಉಳಿದ ಕಾರಣಕ್ಕಾಗಿ ವಿಧಿಸುವ ದಂಡವಿಲ್ಲದೆ ಮಂಜೂರು ಮಾಡಲಾಗುವುದು. ಅಂತಹ ವಿದೇಶಿ ಪ್ರಜೆಗಳು ತೆರಳಲು ಮನವಿ ಮಾಡಿದರೆ ಅನುಮತಿಸಲಾಗುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1621287

ಕೆಲವು ವರ್ಗಗಳನ್ನು ಹೊರತುಪಡಿಸಿ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳು ಭಾರತದಿಂದ/ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಅಮಾನತು

ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನಾ ವಿಭಾಗಗಳಿಗೆ ಸೇರಿದವರನ್ನು ಹೊರತುಪಡಿಸಿ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳ ಅಮಾನತನ್ನು ಭಾರತದಿಂದ/ಭಾರತಕ್ಕೆ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ಭಾರತ ಸರ್ಕಾರವು ಹಿಂತೆಗೆದುಕೊಳ್ಳುವವರೆಗೆ ಮುಂದುವರೆಸಲು ಗೃಹ ಸಚಿವಾಲಯ ನಿರ್ಧರಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621285

ಭಾರತಕ್ಕೆ ಭೇಟಿ ನೀಡಲು ಬಹು ಪ್ರವೇಶದ ಹಕ್ಕು ಹೊಂದಿರುವ ಒಸಿಐ ಕಾರ್ಡುದಾರರ ಜೀವಿತಾವಧಿಯ ವೀಸಾ ಸೌಲಭ್ಯವನ್ನು, ಭಾರತದಿಂದ/ ಭಾರತಕ್ಕೆಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಸ್ಥಗಿತಗೊಳಿಸಲಾಗಿದೆ

ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡುದಾರರಾಗಿ ನೋಂದಾಯಿಸಲ್ಪಟ್ಟ ವ್ಯಕ್ತಿಗಳಿಗೆ ನೀಡಲಾಗುವ ಭಾರತಕ್ಕೆ ಭೇಟಿಯ ಬಹು ಪ್ರವೇಶದ ಜೀವಿತಾವಧಿಯ ವೀಸಾ ಸೌಲಭ್ಯದ ಹಕ್ಕನ್ನು ಭಾರತದಿಂದ / ಭಾರತಕ್ಕೆ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ಭಾರತ ಸರ್ಕಾರವು ತೆಗೆದುಹಾಕುವವರೆಗೆ ಸ್ಥಗಿತಗೊಳಿಸಿ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಆದೇಶ ಹೊರಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621283

ಲಾಕ್ಡೌನ್ ಸಮಯದಲ್ಲಿ ಹೆಚ್ಚುವರಿ ಬಾಧ್ಯತೆಗಳನ್ನು ಪೂರೈಸಿದ ನಂತರವೂ ಎಫ್ಸಿಐನಲ್ಲಿ ಸಾಕಷ್ಟು ದಾಸ್ತಾನಿದೆ:ಶ್ರೀ ರಾಮ್ ವಿಲಾಸ್ ಪಾಸ್ವಾನ್

04.05.2020 ರ ವರದಿಯ ಪ್ರಕಾರ ಎಫ್‌ಸಿಐ ಪ್ರಸ್ತುತ 276.61 ಎಲ್‌ಎಂಟಿ ಅಕ್ಕಿ ಮತ್ತು 353.49 ಎಲ್‌ಎಂಟಿ ಗೋಧಿಯನ್ನು ಹೊಂದಿದೆ ಎಂದು ಸಚಿವರು ಹೇಳಿದರು. ಎನ್‌ಎಫ್‌ಎಸ್‌ಎ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಒಂದು ತಿಂಗಳಿಗೆ ಸುಮಾರು 60 ಎಲ್‌ಎಂಟಿ ಆಹಾರ ಧಾನ್ಯಗಳು ಬೇಕಾಗುತ್ತವೆ. ಲಾಕ್‌ಡೌನ್ ಆದಾಗಿನಿಂದ ಸುಮಾರು 69.52 ಎಲ್‌ಎಂಟಿ ಆಹಾರ ಧಾನ್ಯಗಳನ್ನು 2483 ರೈಲು ಬೋಗಿಗಳ ಮೂಲಕ ಸಾಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ರೈಲು ಮಾರ್ಗದ ಹೊರತಾಗಿ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕವೂ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಒಟ್ಟು 137.62 ಎಲ್‌ಎಂಟಿ ಆಹಾರ ಧಾನ್ಯ ಸಾಗಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621259

2020-21 ಅವಧಿಯ ರಾಬಿ ಋತುವಿನ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಗೋಧಿ ಖರೀದಿ ಪೂರ್ಣ ಪ್ರಮಾಣದಲ್ಲಿ ನಡೆದಿದೆ

2020-21ರ ರಾಬಿ ಋತುವಿನಲ್ಲಿ 02.05.2020 ರವರೆಗೆ 2,682 ಕೋಟಿ ರೂ. ಮೂಲ್ಯದ 2,61,565 ಮೆ.ಟನ್ ದ್ವಿದಳ ಧಾನ್ಯಗಳು ಮತ್ತು 3,17,473 ಮೆ.ಟನ್ ಎಣ್ಣೆಕಾಳುಗಳನ್ನು 3,25,565 ರೈತರಿಗೆ ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿದೆ. ಇದರಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ 2020 ರ ಮೇ 1 ಮತ್ತು 2 ರಂದು 14,859 ಮೆ.ಟನ್ ದ್ವಿದಳ ಧಾನ್ಯಗಳು ಮತ್ತು 6706 ಮೆ.ಟನ್ ಎಣ್ಣೆಕಾಳುಗಳನ್ನು ಖರೀದಿಸಲಾಗಿದೆ. ಅಲ್ಲದೆ, ರಾಬಿ ಮಾರುಕಟ್ಟೆ 2020-21ರ ಋತುವಿನಲ್ಲಿ ಒಟ್ಟು 1,87,97,767 ಮೆ.ಟನ್ ಗೋಧಿ ಎಫ್‌ಸಿಐಗೆ ಬಂದಿದ್ದು, ಅದರಲ್ಲಿ 1,81,36,180 ಮೆ.ಟನ್ ಖರೀದಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621222

ಫೀಚರ್ ಫೋನ್ ಅಥವಾ ಸ್ಥಿರ ದೂರವಾಣಿ ಹೊಂದಿರುವ ಜನರ ಸೇವೆಗೆ ಆರೋಗ್ಯ ಸೇತು ಐವಿಆರ್ಎಸ್ ಸೇವೆಗಳನ್ನು ಜಾರಿಗೆ ತರಲಾಗಿದೆ

ಆರೋಗ್ಯ ಸೇತು ರಕ್ಷಣೆಯಲ್ಲಿ ಫೀಚರ್ ಫೋನ್‌ಗಳು ಮತ್ತು ಸ್ಥಿರ ದೂರವಾಣಿ ಹೊಂದಿರುವ ನಾಗರಿಕರನ್ನು ಸೇರಿಸಲು, “ಆರೋಗ್ಯ ಸೇತು ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್)” ಅನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ಟೋಲ್-ಫ್ರೀ ಸೇವೆ ಲಭ್ಯವಿದ್ದು, ನಾಗರಿಕರು 1921 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ಅವರಿಗೆ ಮರಳಿ ಕರೆ ಬರುತ್ತದೆ. ಮತ್ತು ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಕೇಳಲಾಗುತ್ತದೆ. ಕೇಳಲಾದ ಪ್ರಶ್ನೆಗಳನ್ನು ಆರೋಗ್ಯ ಸೇತು ಅಪ್ಲಿಕೇಶನ್‌ನೊಂದಿಗೆ ಹೊಂದಿಸಲಾಗುತ್ತದೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ನಾಗರಿಕರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಎಸ್‌ಎಂಎಸ್ ಪಡೆಯುತ್ತಾರೆ ಮತ್ತು ಅವರ ಆರೋಗ್ಯದ ಹೆಚ್ಚಿನ ಎಚ್ಚರಿಕೆಗಳನ್ನು ಸಹ ಪಡೆಯುತ್ತಾರೆ. ಮೊಬೈಲ್ ಅಪ್ಲಿಕೇಶನ್‌ನಂತೆಯೇ 11 ಪ್ರಾದೇಶಿಕ ಭಾಷೆಗಳಲ್ಲಿ ಸೇವೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621368

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ನಡುವೆ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋರ್ಚುಗಲ್ ಪ್ರಧಾನಿ ಶ್ರೀ  ಆಂಟೋನಿಯೊ ಕೋಸ್ಟಾ ಅವರೊಡನೆ ದೂರವಾಣಿ ಮಾತುಕತೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕದ ಸ್ಥಿತಿ ಮತ್ತು ಅದರ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ನಿಯಂತ್ರಿಸಲು ಉಭಯ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ಪ್ರಧಾನಿ ಕೋಸ್ಟಾ ಅವರನ್ನು ಪ್ರಧಾನಿ ಶ್ಲಾಘಿಸಿದರು. ಸಕ್ರಿಯ ರಾಷ್ಟ್ರೀಯ ಕ್ರಮಗಳು ವೈರಸ್ ಹರಡುವಿಕೆಯ ನಿಗ್ರಹದಲ್ಲಿವೆ ಎಂದು ನಾಯಕರು ಗಮನಿಸಿದರು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪರಸ್ಪರರಿಗೆ ನೆರವಾಗುವ ಬಗ್ಗೆ ಮತ್ತು ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಬಗ್ಗೆ ಪರಸ್ಪರರು ಸಹಕರಿಸಲು ಒಪ್ಪಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621248

GARUD ಪೋರ್ಟಲ್ ಮೂಲಕ ಕೋವಿಡ್-19 ಸಂಬಂಧಿತ ಡ್ರೋನ್ /RPAS ಕಾರ್ಯಾಚರಣೆಗಳಿಗೆ ಸರ್ಕಾರಿ ಸಂಸ್ಥೆಗಳಿಗೆ ಷರತ್ತುಬದ್ಧ ವಿನಾಯಿತಿ

ಕೋವಿಡ್-19 ಸಂಬಂಧಿತ ಆರ್‌ಪಿಎಎಸ್ (ರಿಮೋಟ್ ಪೈಲಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್) / ಡ್ರೋನ್ ಕಾರ್ಯಾಚರಣೆಗಳಿಗೆ ಸರ್ಕಾರಿ ಸಂಸ್ಥೆಗಳಿಗೆ ತ್ವರಿತಗತಿಯ ಷರತ್ತುಬದ್ಧ ವಿನಾಯಿತಿಗಳನ್ನು ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಗರುಡ ಪೋರ್ಟಲ್ ಅನ್ನು ಪ್ರಾರಂಭಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621250

ಮಂದಗತಿ ಆರ್ಥಿಕತೆಯಿಂದ ಹೊರಬರಲು ಬಸ್ಸು ಮತ್ತು ಕಾರು  ಆಪರೇಟರ್ಗಳಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ ಶ್ರೀ ಗಡ್ಕರಿ

ಬಸ್ ಮತ್ತು ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಶ್ರೀ ಗಡ್ಕರಿ, ಸಾರಿಗೆ ಮತ್ತು ಹೆದ್ದಾರಿಗಳನ್ನು ತೆರೆಯುವುದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸಲಿದೆ. ಕೆಲವು ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದರು. ಸರ್ಕಾರದ ಧನಸಹಾಯ ಕಡಿಮೆಯಿದ್ದು ಮತ್ತು ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿರುವ ಲಂಡನ್ ಮಾದರಿಯ ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳಲು ತಮ್ಮ ಸಚಿವಾಲಯ ಚಿಂತಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621376

ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ 465 ವಿಮಾನಗಳು ಲೈಫ್ಲೈನ್ ಉಡಾನ್ ಯೋಜನೆಯಡಿಯಲ್ಲಿ ಕಾರ್ಯನಿರ್ವಹಣೆ

465 ವಿಮಾನಗಳನ್ನು ಲೈಫ್ಲೈನ್ ಉಡಾನ್ ಅಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಸಾಗಿಸಿರುವ ಸರಕು ಸುಮಾರು 835.94 ಟನ್. ಇಲ್ಲಿಯವರೆಗೆ ಲೈಫ್ಲೈನ್ ಉಡಾನ್ ವಿಮಾನಗಳು ಕ್ರಮಿಸಿರುವ ವೈಮಾನಿಕ ದೂರ 4,51,038 ಕಿ.ಮೀ. ಪವನ್ ಹನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಮೇ 5, 2020 ರವರೆಗೆ ಪವನ್ ಹನ್ಸ್ 7,729 ಕಿ.ಮೀ ಕ್ರಮಿಸಿ 2.27 ಟನ್ ಸರಕುಗಳನ್ನು ಸಾಗಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=16213409

ಉದ್ಯೋಗದಾತರಿಂದ ಇಪಿಎಫ್ ಅನುಸರಣೆಯ ಪ್ರಕ್ರಿಯೆಯನ್ನು ಸರಾಗಗೊಳಿಸಲು -ಸೈನ್ ಪಡೆಯಲು ಇಪಿಎಫ್ಒ ಇಮೇಲ್ ಕಾರ್ಯವಿಧಾನವನ್ನು ಪರಿಚಯಿಸಿದೆ. ಉದ್ಯೋಗದಾತರು ಡಿಜಿಟಲ್ ಅಥವಾ ಆಧಾರ್ ಆಧಾರಿತ -ಸೈನ್ ಅನ್ನು ಬಳಸುವುದು ಲಾಕ್ಡೌನ್ ಅವಧಿಯಲ್ಲಿ ಕಷ್ಟಕರವಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1621380

ವಿಡಿಯೋ ಕಾನ್ಫರೆನ್ಸ್ ಅಥವಾ ಒಎವಿಎಂ ಮೂಲಕ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲು ಕಂಪನಿಗಳಿಗೆ ಅವಕಾಶ

ಸಾಮಾಜಿಕ ಅಂತರದ ನಿಯಮಗಳು ಮತ್ತು ವ್ಯಕ್ತಿಗಳ ಚಲನೆಗೆ ಇರುವ ನಿರ್ಬಂಧಗಳನ್ನು ನಿರಂತರವಾಗಿ ಪಾಲಿಸುವ ಅಗತ್ಯವಿರುವುದರಿಂದ ಕಂಪೆನಿಗಳು 2020 ಕ್ಯಾಲೆಂಡರ್ ವರ್ಷದಲ್ಲಿ ತಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಅಥವಾ ಆಡಿಯೊ ದೃಶ್ಯ ಸಾಧನಗಳು (OAVM) ಮೂಲಕ ನಡೆಸಲು ಅನುಮತಿ ನೀಡಲಾಗಿದೆ. ಅದರ ಪ್ರಕಾರ, ಉದ್ದೇಶಕ್ಕಾಗಿ ಸಾಮಾನ್ಯ ಸುತ್ತೋಲೆಯನ್ನು ಸಂಖ್ಯೆ: 20/2020 ಅನ್ನು ಹೊರಡಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621265

ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗೂನ್ಯಾ ನಿಯಂತ್ರಣ ಕುರಿತು ದಿಲ್ಲಿಯಲ್ಲಿ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಾಮರ್ಶನಾ ಸಭೆ

ಕೋವಿಡ್ ನಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಸೋಂಕು ರೋಗಗಳನ್ನು ತಡೆಗಟ್ಟಲು ನವೀನ ಜಾಗೃತಿ ಅಭಿಯಾನಗಳ ಪ್ರಾಮುಖ್ಯತೆ, ಸಮುದಾಯದ ಭಾಗವಹಿಸುವಿಕೆ ಮತ್ತು ಎಲ್ಲಾ ಪಾಲುದಾರರ ಸಹಕಾರ ಕುರಿತು ಸಚಿವರು ಒತ್ತಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621267

ಲಾಕ್ಡೌನ್ ಅವಧಿಯಲ್ಲಿ ಪಾರ್ಸೆಲ್ ರೈಲುಗಳಲ್ಲಿ 54,292 ಟನ್ ಸರಕುಗಳನ್ನು ಲೋಡ್ ಮಾಡಲಾಗಿದೆ; ಪಾರ್ಸೆಲ್ ರೈಲುಗಳ ಒಟ್ಟು ಸಂಖ್ಯೆ 2000 ದಾಟಿದೆ

-ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಂದ ತ್ವರಿತ ಸಾಮೂಹಿಕ ಸಾಗಣೆಗೆ ಅನುಕೂಲವಾಗುವಂತೆ ರೈಲ್ವೆಯು ಪಾರ್ಸೆಲ್ ವ್ಯಾನ್ಗಳನ್ನು ಲಭ್ಯಗೊಳಿಸಿದೆ. ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಆಯ್ದ ಮಾರ್ಗಗಳಲ್ಲಿ ನಿಗದಿತ ವೇಳಾಪಟ್ಟಿಯ ಪಾರ್ಸೆಲ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪಾರ್ಸೆಲ್ ವಿಶೇಷ ರೈಲುಗಳ ಮಾರ್ಗಗಳನ್ನು ವಲಯ ರೈಲ್ವೆ ನಿಯಮಿತವಾಗಿ ಗುರುತಿಸುತ್ತಿದೆ. ಪ್ರಸ್ತುತ ರೈಲುಗಳನ್ನು ಎಂಭತ್ತೆರಡು ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621440

ಸಿಎಸ್ಐಆರ್ ಐಜಿಐಬಿ ಮತ್ತು ಟಾಟಾ ಸನ್ಸ್ ಕೋವಿಡ್-19 ತ್ವರಿತ ಮತ್ತು ನಿಖರವಾದ ರೋಗನಿರ್ಣಯಕ್ಕಾಗಿ ಕಿಟ್ ಅಭಿವೃದ್ಧಿಗೆ ಸಂಬಂಧಿಸಿದ ಜ್ಞಾನವನ್ನು ಪರವಾನಗಿ ಪಡೆಯಲು ಒಪ್ಪಂದಕ್ಕೆ ಸಹಿ ಹಾಕಿವೆ

ಇದು ಸಂಪೂರ್ಣವಾಗಿ ದೇಶೀಯ ವೈಜ್ಞಾನಿಕ ಆವಿಷ್ಕಾರವಾಗಿದೆ ಮತ್ತು ಕೋವಿಡ್-19ಕ್ಕಾಗಿ ಫೆಲುಡಾವನ್ನು ಸದ್ಯದ ಕೋವಿಡ್-19 ಪರಿಸ್ಥಿತಿಯನ್ನು ತಗ್ಗಿಸಲು ಮತ್ತು ಸಾಮೂಹಿಕ ಪರೀಕ್ಷೆಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದರ ಮುಖ್ಯ ಅನುಕೂಲವೆಂದರೆ ಅದರ ಕೈಗೆಟುಕುವ ಬೆಲೆ, ಸುಲಭ ಬಳಕೆ ಮತ್ತು ದುಬಾರಿ ಕ್ಯೂ-ಪಿಸಿಆರ್ ಯಂತ್ರಗಳ ಮೇಲಿನ ಅವಲಂಬನೆ ಇಲ್ಲದಿರುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1621254 

 

ಪಿ  ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಸೋಂಕನ್ನು ತಡೆಗಟ್ಟಲು ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಚಂಡೀಗಢ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಪಿಜಿಐಎಂಇಆರ್.ಗೆ ಹೆಚ್ಚುವರಿ ಪರೀಕ್ಷಾ ಕಿಟ್ ಗಳನ್ನು ನೀಡಲು ಸಮ್ಮತಿಸಿದೆ. ನಗರದಲ್ಲಿ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ನಿರ್ದೇಶಿಸಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಸುಮಾರು 1.55 ಲಕ್ಷ ಬೇಯಿಸಿದ ಆಹಾರ ಪೊಟ್ಟಣಗಳನ್ನು ಅಗತ್ಯವಿರುವ ಜನರಿಗೆ ವಿತರಿಸಲಾಗುತ್ತಿದೆ. ನಗರದಲ್ಲಿ ಈಗಾಗಲೇ 2,42,000 ಜನರು ಆರೋಗ್ಯಸೇತು ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂದ್ದಾರೆ.
  • ಪಂಜಾಬ್: ತನ್ನ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ಕಚೇರಿಗಳ ಸುರಕ್ಷಿತ ಕಾರ್ಯಾಚರಣೆಗಾಗಿ ಪಂಜಾಬ್ ಸರ್ಕಾರ ವಿವರವಾದ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದ್ದು, ಅವರ ಆರೋಗ್ಯದ ನಿಯಮಿತ ಮೇಲ್ವಿಚಾರಣೆ ಮಾಡಲು ಪ್ರತಿ ಇಲಾಖೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವ್ಯಾಪಾರಿಗಳು ಪಂಜಾಬ್ನಲ್ಲಿ 3,89,478 ಮೆಟ್ರಿಕ್ ಟನ್ ಗೋಧಿಯನ್ನು 20 ನೇ ದಿನದ ದಾಸ್ತಾನಿನಲ್ಲಿ ಸಂಗ್ರಹಿಸಿದ್ದಾರೆ. ಸರ್ಕಾರಿ ಸಂಸ್ಥೆಗಳು 3,87,688 ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಿದ್ದರೆ, ಖಾಸಗಿ ವ್ಯಾಪಾರಿಗಳು 1,790 ಮೆಟ್ರಿಕ್ ಟನ್ ಅನ್ನು ದಾಸ್ತಾನು ಮಾಡಿದ್ದಾರೆ.
  • ಹರಿಯಾಣ: ಡಯಾಲಿಸಿಸ್ ಅಗತ್ಯವಿರುವ ಕೋವಿಡ್-19 ರೋಗಿಗಳಿಗೆ ಪ್ರತ್ಯೇಕವಾಗಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಕಾಯ್ದಿರಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಎಲ್ಲಾ 11 ವಿಶೇಷ ಕೋವಿಡ್ -19 ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗೆ 100-150 ಹಾಸಿಗೆಗಳನ್ನು ಕಾಯ್ದಿರಿಸಿದ ನಂತರ, ಉಳಿದ ಒಪಿಡಿಗಳು ಮತ್ತು ವಾರ್ಡ್ಗಳು ಇತರ ಎಲ್ಲ ರೋಗಿಗಳ ಚಿಕಿತ್ಸೆಯ ಸಾಮಾನ್ಯ ಕೆಲಸವನ್ನು ಪುನರಾರಂಭಿಸಲಿವೆ.
  • ಹಿಮಾಚಲ ಪ್ರದೇಶ: ದೇಶದ ಇತರ ರಾಜ್ಯಗಳಿಂದ ಬರುವ ರಾಜ್ಯದ ಜನರ ಕುಟುಂಬ ಸದಸ್ಯರನ್ನು ಸರಿಯಾಗಿ ಸಂವೇದನಶೀಲಗೊಳಿಸಲು ಮತ್ತು ತಿಳಿವಳಿಕೆ ನೀಡಲು ಸರ್ಕಾರವು 'ನಿಗಾ' ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ, ಇದರಿಂದಾಗಿ ಸಾಮಾಜಿಕ ದೂರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ. ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರ ತಂಡವು ಇತರ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಮಾಜಿಕ ಅಂತರದ ಪ್ರಾಮುಖ್ಯತೆಯ ಬಗ್ಗೆ ಸಂವೇದನೆ ಮತ್ತು ತಿಳಿವಳಿಕೆ ನೀಡುತ್ತದೆ ಮತ್ತು ಇದರಿಂದ ಅವರುಗಳನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ. ಮುಖ್ಯಮಂತ್ರಿ ಕೋವಿಡ್ 19 ಸಾಂಕ್ರಾಮಿಕ ತಡೆಯಲು ಹಿಮಾಚಲ ಮಾದರಿಯು ಸಾಂಕ್ರಾಮಿಕದ ತಪಾಸಣೆಗೆ ಸಮರ್ಥವಾಗಿದ್ದು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
  • ಕೇರಳ: ವಿದೇಶದಿಂದ ಹಿಂದಿರುಗುವ ಕೇರಳಿಗರಿಗೆ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 7 ರಿಂದ 14 ದಿನಗಳಿಗೆ ರಾಜ್ಯ ಸರ್ಕಾರ ಬದಲಾಯಿಸಿದೆ. ವಂದೇ ಭಾರತ್ ಮಿಷನ್ ಭಾಗವಾಗಿ ನಾಳೆಯ ಮೊದಲ ಎರಡು ವಿಶೇಷ ವಿಮಾನಗಳು ಯುಎಇಯಲ್ಲಿ ಉಳಿದಿದ್ದ ಕೇರಳಿಗರನ್ನು ಸ್ಥಳಾಂತರಿಸುತ್ತಿವೆ. ಮೊದಲ ವಿಮಾನ ಗುರುವಾರ ರಾತ್ರಿ ನೆಡುಂಬಸ್ಸೆರಿ ವಿಮಾನ ನಿಲ್ದಾಣವನ್ನು ತಲುಪಲಿದೆ. ಪ್ರವೇಶ ಅನುಮತಿಯ ಕೊರತೆಯಿಂದಾಗಿ ಯುಎಇಯಿಂದ ಹಡಗುಗಳ ಮೂಲಕ ಮರಳುತ್ತಿರುವವರು ಹಿಂತಿರುಗುವುದು ವಿಳಂಬವಾಗುತ್ತಿದೆ. ಯಾವುದೇ ಸಮಯದಲ್ಲಿ ರಾಜ್ಯದ ಮದ್ಯದಂಗಡಿಗಳು ಶೀಘ್ರದಲ್ಲೇ ತೆರೆಯಲಾರವು. ವಲಸೆ ಕಾರ್ಮಿಕರಿಗಾಗಿ ಇಂದು ಮೂರು ರೈಲುಗಳು ರಾಜ್ಯದಿಂದ ಸಂಚರಿಸಿವೆ.
  • ತಮಿಳುನಾಡು: ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯ ಅಡುಗೆ ಮನೆ ಕಾರ್ಮಿಕರ ಕೋವಿಡ್ 19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಕೊಯಾಂಬೆಡು ಸಗಟು ಮಾರುಕಟ್ಟೆ ಸ್ಥಗಿತಗೊಂಡ ನಂತರ ಚೆನ್ನೈ ತರಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಚೆನ್ನೈನಲ್ಲಿ ಸದ್ಯಕ್ಕೆ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ. ತಮಿಳುನಾಡಿನ ಶೇಕಡಾ 20-25ರಷ್ಟು ಚಿಲ್ಲರೆ ವ್ಯಾಪಾರಿಗಳು ಲಾಕ್ಡೌನ್ಬಳಿಕ ವ್ಯಾಪಾರದಿಂದ ಹೊರಗುಳಿದಿದ್ದಾರೆ ಎಂದು ವಾಣಿಜ್ಯ ಸಂಘಟನೆಗಳು ತಿಳಿಸಿವೆ. ನಿನ್ನೆ ತನಕ ಒಟ್ಟು ಸೋಂಕಿನ ಪ್ರಕರಣಗಳು: 4058, ಸಕ್ರಿಯ ಪ್ರಕರಣಗಳು: 2537, ಸಾವು: 33.
  • ಕರ್ನಾಟಕ: ಬಾಗಲಕೋಟೆಯಲ್ಲಿ ಕೋವಿಡ್ 19 13 ಪ್ರಕರಣ ದೃಢಪಟ್ಟಿದ್ದು. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 692 ಕ್ಕೆ ಏರಿದೆ. ರಾಜ್ಯ ಸರ್ಕಾರ 1,610 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಕೋವಿಡ್ 19 ಪರಿಹಾರವನ್ನು ಬೆಂಬಲಿಸಲು ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಶೇಕಡಾ 17 ರಷ್ಟು ಹೆಚ್ಚಿಸಿದೆ. ಕರ್ನಾಟಕವು ವಲಸೆ ಕಾರ್ಮಿಕರನ್ನು ಮರಳಿ ಹೋಗದಂತೆ ತಡೆದಿದ್ದು, ಅವರಿಗೆ ಉದ್ಯೋಗ, ವೇತನದ ಭರವಸೆ ನೀಡಿದೆ. ರಾಜ್ಯ ಸರ್ಕಾರ ವಿದೇಶಗಳಿಂದ ಮರಳುತ್ತಿರುವ 10,823 ಪ್ರಯಾಣಿಕರಿಗೆ ಎಸ್..ಪಿ. ನಿಗದಿ ಮಾಡಿದೆ.
  • ಆಂಧ್ರಪ್ರದೇಶ: ಮೂರು ತಿಂಗಳವರೆಗಿನ ಉದ್ಯೋಗ ನಷ್ಟವನ್ನು ಸರಿದೂಗಿಸಲು ಒಟ್ಟು 1,09,231 ಮೀನುಗಾರರಿಗೆ ಅನುಕೂಲವಾಗುವಂತೆ 10,000 ರೂ. ಪರಿಹಾರವನ್ನು ಒದಗಿಸಲಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಿಲುಕಿದ್ದ ಅನಂತಪುರಕ್ಕೆ ಸೇರಿದ ಸುಮಾರು 1,100 ವಲಸೆ ಕಾರ್ಮಿಕರು ಇಂದು ಗುಂತ್ಕಲ್ ತಲುಪಿದ್ದಾರೆ. 7782 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 60 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದೆ, 140 ಜನರು ಬಿಡುಗಡೆಯಾಗಿದ್ದಾರೆ ಮತ್ತು ಎರಡು ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 1777ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳು: 1012, ಸಾವು: 36.
  • ತೆಲಂಗಾಣ: ವಲಸಿಗರಿಗಾಗಿ ಹೆಚ್ಚಿನ ವಿಶೇಷ ರೈಲುಗಳು ಹೈದರಾಬಾದ್ ಹೊರವಲಯದಲ್ಲಿರುವ ವಿವಿಧ ರೈಲು ನಿಲ್ದಾಣಗಳಿಂದ ಹೊರಡಲಿವೆ. ರಾಜ್ಯದಲ್ಲಿ 42 ದಿನಗಳ ನಂತರ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ. 1,750 ತೆಲಂಗಾಣ ಕಾರ್ಮಿಕರು ಏಳು ದಿನಗಳ ಅವಧಿಯಲ್ಲಿ ಮೇ 7 ರಿಂದ ಮೊದಲ ತಂಡದಲ್ಲಿ ಕೊಲ್ಲಿ ರಾಷ್ಟ್ರ ಮತ್ತು ಇತರ ದೇಶಗಳಿಂದ ಮನೆಗೆ ಮರಳಲು ಸಿದ್ಧರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳು 1096, ಸಕ್ರಿಯ ಪ್ರಕರಣಗಳು: 439, ಗುಣವಾದವರು: 628, ಸಾವು: 29.
  • ಅರುಣಾಚಲ ಪ್ರದೇಶ: ಇಟಾನಗರ ಆಡಳಿತವು ನಿರ್ಮಾಣ ಸಾಮಗ್ರಿಗಳು ಮತ್ತು ಹಾರ್ಡ್ವೇರ್ ವಸ್ತುಗಳ ಸಾಗಣೆಗೆ ವಾಹನಗಳ ಸಂಚಾರ, ಹೊರಗಿನಿಂದ ಸರಕುಗಳ ಸಾಗಣೆಯನ್ನು ಬೆಳಗ್ಗೆ 6 ರಿಂದ ಬೆಳಗ್ಗೆ 8 ರವರೆಗೆ ಮತ್ತು ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ಅನುಮತಿಸಿದೆ.
  • ಅಸ್ಸಾಂ: ಮೂರು ಪುನರಾವರ್ತಿತ ಪರೀಕ್ಷೆಗಳ ನಂತರವೂ ಕೋವಿಡ್-19 ಸೋಂಕು ಇಲ್ಲದಿರುವುದು ದೃಢವಾಗಿದ್ದು, ಇನ್ನೂ ಇಬ್ಬರು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು ಈಗ 44 ಆಗಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಅವರನ್ನು ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ದೇಶದ ವಿವಿಧ ಭಾಗಗಳಿಂದ ಈಶಾನ್ಯಕ್ಕೆ ಹಿಂತಿರುಗುವ ಜನರ ರೈಲು ವೆಚ್ಚವನ್ನು ಭರಿಸಲು ರಾಜ್ಯ ಸಂಪುಟ ಸಮ್ಮತಿಸಿದೆ ಮತ್ತು ರಾಜಧಾನಿಗೆ ನಾಗರಿಕರು ಮರಳುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂಫಾಲದ ದೊಡ್ಡ ಮಾರುಕಟ್ಟೆಗಳನ್ನು ಮುಚ್ಚಲು ನಿರ್ಧರಿಸಿದೆ.
  • ಮಿಜೋರಾಂ: ಯಾವುದೇ ಮಾಧ್ಯಮದಲ್ಲಿ ಕೋವಿಡ್-19 ರೋಗಿಗಳ ಗುರುತನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ. ಉಲ್ಲಂಘಿಸುವವರಿಗೆ ರೂ .5000 ದಂಡ ಅಥವಾ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿನ ಲಾಂಗ್ಲೆಂಗ್ ಜಿಲ್ಲಾಡಳಿತ ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಜಂಟಿಯಾಗಿ ಕೋವಿಡ್-19 ಸಂತ್ರಸ್ತರನ್ನು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಸಮಾಧಿ ಮಾಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ನಿರಾಕ್ಷೇಪಣೆ ನೀಡಿವೆ.
  • ಮಹಾರಾಷ್ಟ್ರ: ರಾಜ್ಯದಲ್ಲಿ 984 ಕೊರೊನಾ ವೈರಸ್ ಪ್ರಕರಣಗಳು ವರದಿ ಯಾಗಿವೆ, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 15,525 ತಲುಪಿದೆ; ರಾಜ್ಯದಲ್ಲಿ 34 ಸಾವು ದಾಖಲಾಗಿದ್ದು, ಕೋವಿಡ್ -19 ಸಾವಿನ ಒಟ್ಟು ಸಂಖ್ಯೆ 617 ಕ್ಕೆ ತಲುಪಿದೆ. ಒಟ್ಟು ಹೊಸ ಪ್ರಕರಣಗಳಲ್ಲಿ 635 ಮುಂಬೈನಲ್ಲಿ ದಾಖಲಾಗಿದೆ, ಜೊತೆಗೆ ಮಂಗಳವಾರ 26 ಸಾವು ಇಲ್ಲಿ ಸಂಭವಿಸಿವೆ. ಮುಂಬೈನ ಒಟ್ಟಾರೆ ಸೋಂಕಿತರ ಸಂಖ್ಯೆ 9,758 ಆಗಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಮರಣ ಪ್ರಮಾಣವು ಒಂದು ತಿಂಗಳ ಹಿಂದೆ ಇದ್ದ ಶೇ. 7.2 ರಿಂದ ಶೇ.4.0 ಕ್ಕೆ ಇಳಿದಿದೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.3.2 ಆಗಿದೆ. ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿರುವ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ರೈಲ್ವೆ, ಬಂದರು ಹಾಗೂ ಇತರ ಕೇಂದ್ರೀಯ ಸಂಸ್ಥೆಗಳಿಗೆ ತುರ್ತು ನಿಗಾ ಘಟಕದ ಹಾಸಿಗೆಗಳನ್ನು ಕೋವಿಡ್ 19 ರೋಗಿಗಳ ಆರೈಕೆಗೆ ನೀಡುವಂತೆ ಕೋರಿದೆ. ಸಂಬಂಧಿತ ಬೆಳವಣಿಗೆಯಲ್ಲಿ ಮುಂಬೈ ಮುನಿಸಿಪಲ್ ಆಯುಕ್ತರು ಎಲ್ಲ ವಾರ್ಡ್ ಅಧಿಕಾರಿಗಳಿಗೆ ಅಗತ್ಯ ಇರುವ ಹೆಚ್ಚುವರಿ ಹಾಸಿಗೆ/ವಾರ್ಡ್/ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ಕೋವಿಡ್ -19 ರೋಗಿಗಳಿಗಾಗಿ ಕೋರಿಕೆ ಸಲ್ಲಿಸುವ ಅಧಿಕಾರ ನೀಡಿದ್ದಾರೆ.
  • ಗುಜರಾತ್: ಗುಜರಾತ್ನಲ್ಲಿ 441 ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 6,245 ಕ್ಕೆ ತಲುಪಿದೆ. ದಿನಾಂಕದವರೆಗೆ ಒಟ್ಟು ಸೋಂಕಿತರಲ್ಲಿ 1,381 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 368 ಮಂದಿ ಮೃತಪಟ್ಟಿದ್ದಾರೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ, ಕೋವಿಡ್- 19 ಸೋಂಕಿತರ ಸಂಖ್ಯೆ 3193 ಕ್ಕೆ ಏರಿದೆ, 35 ಹೊಸ ವ್ಯಕ್ತಿಗಳಲ್ಲಿ ಇಂದು ಸೋಂಕು ದೃಢಪಟ್ಟಿದೆ. ಜೈಪುರದಲ್ಲಿ 22 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1069 ಕ್ಕೆ ಏರಿದೆ..
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 3,000 ದಾಟಿದ್ದು, 107 ಹೊಸ ಸೋಂಕುಗಳು ರಾಜ್ಯದಲ್ಲಿ ವರದಿಯಾಗಿವೆ ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,049 ಕ್ಕೆ ತಲುಪಿದೆ. ಸುಮಾರು 1,000 ಜನರು ಗುಣವಾಗಿ ಆಸ್ಪತ್ರೆಗಳಿಂದ ಬಿಡುಗಡೆ ಯಾಗಿದ್ದಾರೆ.. ಇಂದೋರ್, ಭೋಪಾಲ್ ಮತ್ತು ಉಜ್ಜಯಿನಿ ಸೋಂಕಿನ ಹರಡುವಿಕೆ ವಿಚಾರದಲ್ಲಿ ಕಟ್ಟುನಿಟ್ಟಿನ ನಿಗಾದಲ್ಲಿದೆ.
  • ಛತ್ತೀಸ್ಗಢ: ಜನದಟ್ಟಣೆ ತಪ್ಪಿಸಲು ಹಸಿರು ವಲಯಗಳಲ್ಲಿ ಮದ್ಯವನ್ನು ಮನೆಗೇ ತಲುಪಿಸಲು ಪ್ರಾರಂಭಿಸಿರುವ ಪಂಜಾಬ್ ನಂತರ ಎರಡನೇ ರಾಜ್ಯ ಛತ್ತೀಸ್ಗಢವಾಗಿದೆ. ಆದೇಶವನ್ನು ಆನ್ಲೈನ್ನಲ್ಲಿ ಅಥವಾ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಬಹುದು, ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳನ್ನು ನೀಡಬೇಕು.

ಪಿ ಐ ಬಿ ವಾಸ್ತವ ಪರೀಶೀಲನೆ

***

 



(Release ID: 1621628) Visitor Counter : 244