ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 05 MAY 2020 5:44PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಇಲ್ಲಿಯವರೆಗೆ 12,726 ಜನರನ್ನು ಗುಣಪಡಿಸಲಾಗಿದೆ

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಗ್ರೂಪ್ ಆಫ್ ಮಿನಿಸ್ಟರ್ಸ್ (ಜಿಒಎಂ) 14ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು ಕೋವಿಡ್-19 ಅನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಮತ್ತು ಕೇಂದ್ರ ಮತ್ತು ವಿವಿಧ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಆಳವಾದ ಚರ್ಚೆಯನ್ನು ನಡೆಸಿದರು. ಪಿಪಿಇಗಳು, ಮುಖಗವಸುಗಳು, ವೆಂಟಿಲೇಟರ್ಗಳು, ಔಷಧಗಳು ಮತ್ತು ಇತರ ಅಗತ್ಯ ಉಪಕರಣಗಳ ಅಗತ್ಯಕ್ಕೆ ತಕ್ಕಂತೆ ಇರುವ ಸಮರ್ಪಕತೆ ಮತ್ತು ಲಭ್ಯತೆಯನ್ನು ಪರಿಶೀಲಿಸಿತು. ಆರೋಗ್ಯ ಸೇತು ಆ್ಯಪ್ ಕಾರ್ಯಕ್ಷಮತೆ, ಪರಿಣಾಮ ಮತ್ತು ಪರಿಣಾಮಕಾರಿತ್ವವನ್ನು ಸಹ ಜಿಒಎಂಗೆ ನೀಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ಕಾರ್ಯಕರ್ತರು ಮತ್ತು ಇತರರಿಗೆ ಪಿಒಪಿಇ ಅನ್ನು ತರ್ಕಬದ್ಧವಾಗಿ ಬಳಸುವುದಕ್ಕಾಗಿ ಹೆಚ್ಚುವರಿ ಮಾರ್ಗಸೂಚಿಯನ್ನು ಹೊರಡಿಸಿದೆ. ಇದು ಮಾರ್ಚ್ 24, 2020 ರಂದು ಪಿಪಿಇನ ತರ್ಕಬದ್ಧ ಬಳಕೆಯ ಕುರಿತು ಈಗಾಗಲೇ ಹೊರಡಿಸಲಾದ ಮಾರ್ಗಸೂಚಿಗಳಿಗೆ ಸೇರ್ಪಡೆಯಾಗಿದೆ.

ಆಸ್ಪತ್ರೆಯ ವಿವಿಧ ಕ್ಷೇತ್ರಗಳಿಗೆ ಒಪಿಡಿ, ವೈದ್ಯರ ಕೋಣೆಗಳು, ಪೂರ್ವ ಅರಿವಳಿಕೆ ತಪಾಸಣೆ ಕ್ಲಿನಿಕ್, ಐಪಿಡಿ- ವಾರ್ಡ್ / ಐಸಿಯು, ಹೆರಿಗೆ ಕೋಣೆ, ಶಸ್ತ್ರಚಿಕಿತ್ಸಾ ಕೊಠಡಿ ಮುಂತಾದ ವಿವಿಧ ಹಂತಗಳಲ್ಲಿನ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸೂಚಿಸಲಾಗಿದೆ. ವಿವರವಾದ ಮಾರ್ಗಸೂಚಿಗಳು ಇಲ್ಲಿ ಲಭ್ಯವಿದೆ : https://www.mohfw.gov.in/pdf/AdditionalguidelinesonrationaluseofPersonalProtectiveEquipmentsettingapproachforHealthfunctionariesworkinginnonCOVIDareas.pdf

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಏಪ್ರಿಲ್ 14, 2020 ರಂದು ಅಗತ್ಯೇತರ ಆರೋಗ್ಯ ಸೇವೆಗಳನ್ನು ತಲುಪಿಸಲು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮಾರ್ಗಸೂಚಿಗಳಿಗೆ ಅನುಸಾರವಾಗಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರೋಗನಿರೋಧಕ ಶಕ್ತಿ, ತಾಯಿಯ-ಮಕ್ಕಳ ಆರೋಗ್ಯ ಸೇವೆಗಳು ಮತ್ತು ಡಯಾಲಿಸಿಸ್, ಕ್ಯಾನ್ಸರ್, ಮಧುಮೇಹ, ಟಿಬಿನಂತಹ ತೀವ್ರ ಅನಾರೋಗ್ಯ ಪೀಡಿತ ರೋಗಿಗಳಿಗೆ ಎಲ್ಲಾ ರೀತಿಯ ಸೇವೆಗಳನ್ನು ಜೊತೆಗೆ ರಕ್ತದಾನ ಸೇವೆಗಳನ್ನು ವಿವಿಧ ವಲಯಗಳಲ್ಲಿ ನೀಡಲಾಗುವ ವಿನಾಯತಿಯ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಕೋವಿಡ್ ರಹಿತ ಸೌಲಭ್ಯಗಳಲ್ಲಿ ಒದಗಿಸಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು,

ಈವರೆಗೆ ಒಟ್ಟು 12,726 ಜನರನ್ನು ಗುಣಪಡಿಸಲಾಗಿದೆ. ಇದು ನಮ್ಮ ಒಟ್ಟು ಗುಣಮುಖರಾದ ಪ್ರಮಾಣವನ್ನು 27.41% ಕ್ಕೆ ಏರಿಸಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 46,433 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢ ಪಟ್ಟಿರುವ ಪ್ರಕರಣಗಳ ಸಂಖ್ಯೆಯಲ್ಲಿ 3,900 ಹೆಚ್ಚಳ ಕಂಡುಬಂದಿದೆ. ಈವರೆಗೆ ವರದಿಯಾದ ಒಟ್ಟು ಸಾವುಗಳ ಸಂಖ್ಯೆ 1568 ಆಗಿದ್ದು, ನಿನ್ನೆಯಿಂದ 195 ಸಾವುಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಇದುವರೆಗಿನ ಅತ್ಯಧಿಕ ಹೆಚ್ಚಿನ ಸಂಖ್ಯೆಯ ದೃಢಪಡಿಸಿದ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿರುವುದರಿಂದ, ಸಂಪರ್ಕ ವ್ಯಕ್ತಿಗಳ ಪತ್ತೆಹಚ್ಚುವಿಕೆ, ಸಕ್ರಿಯ ಪ್ರಕರಣಗಳ ಹುಡುಕಾಟ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1621523) Visitor Counter : 178