ಹಣಕಾಸು ಸಚಿವಾಲಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಈವರೆಗಿನ ಪ್ರಗತಿ

Posted On: 06 MAY 2020 11:41AM by PIB Bengaluru

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಈವರೆಗಿನ ಪ್ರಗತಿ

ಪಿಎಂಜಿಕೆಪಿ ಅಡಿಯಲ್ಲಿ ಸುಮಾರು 39 ಕೋಟಿ ಬಡಜನರಿಗೆ 34,800 ಕೋಟಿ ರೂ. ಆರ್ಥಿಕ ನೆರವು

 

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ 2020ರ ಮೇ 5ರ ವರೆಗೆ   ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬಳಸಿಕೊಂಡು, ಸುಮಾರು 39 ಕೋಟಿ ಬಡಜನರು 34,800 ಕೋಟಿ ರೂ. ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಕೋವಿಡ್-19 ಲಾಕ್ ಡೌನ್ ಪರಿಣಾಮದಿಂದಾಗಿ ಬಡಜನರನ್ನು ರಕ್ಷಿಸಲು 2020ರ ಮಾರ್ಚ್ 26ರಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಪ್ಯಾಕೇಜ್ ಅನ್ನು ಘೋಷಿಸಿದ್ದರು.

ಪಿಎಂಜಿಕೆಪಿ ಭಾಗವಾಗಿ ಸರ್ಕಾರ ಉಚಿತ ಆಹಾರಧಾನ್ಯಗಳಲ್ಲದೆ, ಮಹಿಳೆಯರು, ಬಡವರು, ಹಿರಿಯ ನಾಗರಿಕರು ಮತ್ತು ರೈತರಿಗೆ ನಗದು ಪಾವತಿ ಪ್ರಕಟಿಸಿದೆ. ಕ್ಷಿಪ್ರವಾಗಿ ಪ್ಯಾಕೇಜ್ ಅನುಷ್ಠಾನಗೊಳಿಸಲಾಗಿದ್ದು, ಆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ನಿಗಾ ಇರಿಸಿವೆ. ಹಣಕಾಸು ಸಚಿವಾಲಯ ಮತ್ತು ಸಂಬಂಧಿಸಿದ ಸಚಿವಾಲಯಗಳು, ಸಂಪುಟ ಸಚಿವಾಲಯ ಮತ್ತು ಪ್ರಧಾನಮಂತ್ರಿಗಳ ಕಚೇರಿ, ಲಾಕ್ ಡೌನ್ ಅವಧಿಯಲ್ಲಿ ಯಾವ ಉದ್ದೇಶದಿಂದ ಪರಿಹಾರಗಳನ್ನು ಪ್ರಕಟಿಸಲಾಗಿದೆಯೋ ಅವುಗಳನ್ನು ಕ್ಷಿಪ್ರಗತಿಯಲ್ಲಿ ಅಗತ್ಯವಿರುವವರಿಗೆ ತಲುಪುವಂತೆ ಮಾಡುವಲ್ಲಿ ಸರ್ವ ಪ್ರಯತ್ನಗಳನ್ನು ಕೈಗೊಂಡಿವೆ.

ಫಿಂಟೆಕ್ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು, ಕ್ಷಿಪ್ರಗತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ನೇರ ನಗದು ವರ್ಗಾವಣೆ(ಡಿಬಿಟಿ) ಅಂದರೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ಜಮೆ ಆಗುವುದನ್ನು ಖಾತ್ರಿಪಡಿಸುತ್ತದೆ. ಇದರಿಂದಾಗಿ ಸೋರಿಕೆ ತಡೆಗಟ್ಟುವುದಲ್ಲದೆ, ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆ ತರಲಾಗಿದೆ. ಇದರಿಂದಾಗಿ ಫಲಾನುಭವಿಗಳು ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಅವರು ಭೌತಿಕವಾಗಿ ಯಾವುದೇ ಬ್ಯಾಂಕ್ ಶಾಖೆಗೆ ಹೋಗುವ ಅಗತ್ಯವಿಲ್ಲ.

ಪಿಎಂಜಿಕೆಪಿ ಅಡಿಯಲ್ಲಿ ನಾನಾ ವರ್ಗದಲ್ಲಿ ಈವರೆಗೆ ಸಾಧಿಸಿರುವ ಪ್ರಗತಿ ಈ ಕೆಳಗಿನಂತಿದೆ:

  • ಪಿಎಂ ಕಿಸಾನ್ ಅಡಿಯಲ್ಲಿ ರೈತರಿಗೆ 8.19 ಕೋಟಿ ರೈತರಿಗೆ ಮೊದಲ ಕಂತಿನ ಹಣ 16,394 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.
  • ಜನ್ ಧನ್ ಖಾತೆ ಹೊಂದಿರುವ 20.05 ಕೋಟಿ(98.33%) ಮಹಿಳೆಯರಿಗೆ ಮೊದಲ ಕಂತಿನ 10,025 ಕೋಟಿ ರೂ. ಜಮೆ ಮಾಡಲಾಗಿದೆಗ್ರಾಹಕರಿಂದ ಪ್ರೇರೇಪಿತರಾಗಿ ಪಿಎಂಜೆಡಿವೈ ಖಾತೆ ಹೊಂದಿರುವ ಮಹಿಳೆಯರಿಗೆ, ಹಣ ಜಮೆ ಆಗಿಲ್ಲವೋ ಅಂತಹವರಿಗೆ 8.72 ಕೋಟಿ ರೂ. (44%). ಹಣ ಜಮೆ ಮಾಡಲಾಗಿದೆ. ಮೇ 5ರ ವೇಳೆಗೆ 5.57 ಮಹಿಳಾ ಜನ್ ಧನ್ ಖಾತೆದಾರರಿಗೆ ಎರಡನೇ ಕಂತಿನ 2,785 ಕೋಟಿ ರೂ. ಜಮೆ ಮಾಡಲಾಗಿದೆ.
  • ಸುಮಾರು 2.82 ಕೋಟಿ ವೃದ್ಧರು, ವಿಧವೆಯರು ಮತ್ತು ವಿಶೇಷಚೇತನರಿಗಾಗಿ 1405 ಕೋಟಿ ರೂ. ವಿತರಿಸಲಾಗಿದೆ ಎಲ್ಲ 2.812 ಕೋಟಿ ಫಲಾನುಭವಿಗಳಿಗೂ ನಗದನ್ನು ವರ್ಗಾಯಿಸಲಾಗಿದೆ.
  • 2.20 ಕೋಟಿ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರಿಗೆ 3492.57 ಕೋಟಿ ರೂ. ಆರ್ಥಿಕ ನೆರವು ಸ್ವೀಕರಿಸಿದ್ದಾರೆ.
  • ಈವರೆಗೆ ಏಪ್ರಿಲ್ ತಿಂಗಳಿಗೆ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 67.65 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ಎತ್ತುವಳಿ ಮಾಡಿವೆ. 2020ರ ಏಪ್ರಿಲ್ ನಲ್ಲಿ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 60.33 ಕೋಟಿ ಫಲಾನುಭವಿಗಳಿಗೆ 30.16 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಿವೆ. ಮೇ 2020ರಲ್ಲಿ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 12.39 ಕೋಟಿ ಫಲಾನುಭವಿಗಳಿಗೆ 6.19 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ವಿತರಿಸಲಾಗಿದೆ.
  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 2.42 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ರವಾನಿಸಲಾಗಿದೆ. ಈವರೆಗೆ 19.4 ಕೋಟಿ ಫಲಾನುಭವಿಗಳ ಪೈಕಿ 5.21 ಕೋಟಿ ಫಲಾನುಭವಿಗಳಿಗೆ ಬೇಳೆಗಳನ್ನು ವಿತರಿಸಲಾಗಿದೆ.
  • ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಅಡಿಯಲ್ಲಿ ಈವರೆಗೆ ಒಟ್ಟು 5.09 ಕೋಟಿ ಸಿಲಿಂಡರ್ ಗಳನ್ನು ಬುಕ್ ಮಾಡಲಾಗಿದೆ. ಅದರಲ್ಲಿ ಯೋಜನೆಯಡಿ ಈವರೆಗೆ 4.82 ಕೋಟಿ ಪಿಎಂಯುವೈ ಉಚಿತ ಸಿಲಿಂಡರ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.
  • ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ)9.6 ಲಕ್ಷ ಸದಸ್ಯರು ಮರುಪಾವತಿ ಮಾಡಲಾಗದ ಮುಂಗಡ ಸ್ವೀಕೃತಿಯಿಂದ ಆನ್ ಲೈನ್ ವಾಪಸಾತಿ ಮೂಲಕ ಇಪಿಎಫ್ಒ ಖಾತೆಗಳಿಂದ 2985 ಕೋಟಿ ರೂ.ಗಳನ್ನು ವಾಪಸ್ ಪಡೆದಿದ್ದಾರೆ.
  • ಶೇ.24ರಷ್ಟು ಇಪಿಎಫ್ ವಂತಿಗೆಯನ್ನು 44.97 ಲಕ್ಷ ಉದ್ಯೋಗಿಗಳ ಖಾತೆಗಳಿಗೆ ಸುಮಾರು 698 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
  • ಮನ್ರೇಗಾ ಅಡಿಯಲ್ಲಿ ನೀಡಲಾಗುವ ಕೂಲಿಯನ್ನು ಹೆಚ್ಚಿಸಿ, 01.04.2020 ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 5.97 ಕೋಟಿ ವ್ಯಕ್ತಿಗಳ ಮಾನವ ದಿನಗಳ ಕೆಲಸವನ್ನು ಸೃಷ್ಟಿಸಲಾಗಿದೆ ಅಲ್ಲದೆ 21,032 ಕೋಟಿ ರೂ.ಗಳನ್ನು  ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿದ್ದ ವೇತನ ಪಾವತಿ ಮತ್ತು ಸಾಮಗ್ರಿಗಾಗಿ ಬಿಡುಗಡೆ ಮಾಡಲಾಗಿದೆ.
  • ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಮೂಲಕ  ಜಾರಿಗೊಳಿಸಲಾಗಿದ್ದು, ಅದರ ವ್ಯಾಪ್ತಿಗೆ 22.12 ಲಕ್ಷ ಆರೋಗ್ಯ ಕಾರ್ಯಕರ್ತರು ಒಳಪಡಲಿದ್ದಾರೆ.

 

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್:

05/05/2020ರ ವರೆಗೆ ಒಟ್ಟು ನೇರ ನಗದು ವರ್ಗಾವಣೆ

 

ಯೋಜನೆ

ಫಲಾನುಭವಿಗಳ ಸಂಖ್ಯೆ

ಮೊತ್ತ

ಪಿಎಂಜೆಡಿವೈ ಮಹಿಳಾ ಖಾತೆ ಹೊಂದಿರುವವರಿಗೆ ಬೆಂಬಲ

1ನೇ ಕಂತು - 20.05 ಕೋಟಿ (98.3%)

2ನೇ ಕಂತು - 5.57 ಕೋಟಿ

1ನೇ ಕಂತು - 10025 ಕೋಟಿ

2ನೇ ಕಂತು – 2785 ಕೋಟಿ

ಎನ್ಎಸ್ಎಪಿಗೆ ಬೆಂಬಲ(ವಯಸ್ಸಾದ ವಿಧವೆಯರು, ದಿವ್ಯಾಂಗ, ಹಿರಿಯ ನಾಗರಿಕರು)

2.82 ಕೋಟಿ (100%)

1405 ಕೋಟಿ

ಪಿಎಂ-ಕಿಸಾನ್ ಅಡಿಯಲ್ಲಿ ರೈತರಿಗೆ ಮೊದಲ ಕಂತಿನ ಹಣ ಪಾವತಿ

8.19 ಕೋಟಿ

16394 ಕೋಟಿ

ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರಿಗೆ ಬೆಂಬಲ

2.20 ಕೋಟಿ

3493 ಕೋಟಿ

ಇಪಿಎಫ್ಒಗೆ ಶೇ.24ರಷ್ಟು ವಂತಿಗೆ ಪಾವತಿ

.45 ಕೋಟಿ

698 ಕೋಟಿ

 

ಒಟ್ಟು

39.28 ಕೋಟಿ

34800 ಕೋಟಿ

 

***


(Release ID: 1621499) Visitor Counter : 308