ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರದಿಂದ ಬುಡಕಟ್ಟು ಜನಾಂಗದ ಸುಗಮ ಬದುಕಿಗೆ ತ್ವರಿತ ಕ್ರಮಗಳು
Posted On:
04 MAY 2020 1:45PM by PIB Bengaluru
ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರದಿಂದ ಬುಡಕಟ್ಟು ಜನಾಂಗದ ಸುಗಮ ಬದುಕಿಗೆ ತ್ವರಿತ ಕ್ರಮಗಳು
ದೇಶದಾದ್ಯಂತ ಇರುವ ಬುಡಕಟ್ಟು ಕರಕುಶುಲ ಕರ್ಮಿಗಳಿಂದ ರೂ. 23 ಕೋಟಿಯಷ್ಟು ಮೌಲ್ಯದ ಬುಡಕಟ್ಟು ಉತ್ಪನ್ನಗಳನ್ನು ಖರೀದಿಸಿದ ಟ್ರೈಫೈಡ್
ಪ್ರಸ್ತುತ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಕರಕುಶಲಕರ್ಮಿಗಳು ಎದುರಿಸಿದ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಹಲವು ಕ್ರಮಗಳನ್ನು ಕೈಗೊಂಡಿದೆ. ಬುಡಕಟ್ಟು ಕುಶಲಕರ್ಮಿಗಳಿಗೆ ನೆರವಾಗಲು ಈ ಕ್ರಮಗಳು ಪೂರಕವಾಗಿವೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕಿರು ಅರಣ್ಯ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಈಗಾಗಲೇ ಹೆಚ್ಚಿಸಿದೆ. ‘ಬುಡಕಟ್ಟು ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಗೆ ಸಾಂಸ್ಥಿಕ ಬೆಂಬಲ’ ಯೋಜನೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆ ಅಡಿಯಲ್ಲಿ ಬುಡಕಟ್ಟು ಸಚಿವಾಲಯದ ಟ್ರೈಫೈಡ್ ಸುಮಾರು 10 ಲಕ್ಷ ಕುಟುಂಬಗಳ ಜತೆ ಸಂಪರ್ಕದಲ್ಲಿದೆ. ದೇಶದಾದ್ಯಂತ ಕಳೆದ 30 ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ಬುಡಕಟ್ಟು ಕುಶಲಕರ್ಮಿಗಳ ವಾಣಿಜ್ಯ ಚಟುವಟಿಕೆಗಳು ಸಹ ಸಂಪೂರ್ಣ ಸ್ಥಗಿತಗೊಂಡವು. ಹೀಗಾಗಿ, ಕುಶಲಕರ್ಮಿಕಗಳ ಬದುಕು ಸಹ ಅನಿಶ್ಚಿತತೆಯಿಂದ ಸಿಲುಕಿ ಸಂಕಷ್ಟಕ್ಕೆ ಒಳಗಾದರು. ಅಪಾರ ಪ್ರಮಾಣದಲ್ಲಿ ತಯಾರಿಸಿದ್ದ ಉತ್ಪನ್ನಗಳು ಹಾಗೆಯೇ ಉಳಿದವು. ಈ ಉತ್ಪನ್ನಗಳ ಮಾರಾಟವೇ ನಡೆಯಲಿಲ್ಲ. ಕುಶಲಕರ್ಮಿಗಳ ಬಳಿ ವಿವಿಧ ರೀತಿಯ ಉತ್ಪನ್ನಗಳು ಲಭ್ಯ: ಜವಳಿ, ಕಾಣಿಕೆ ನೀಡುವ ವಸ್ತುಗಳು, ವನ ಧನ್ ನೈಸರ್ಗಿಕ ಉತ್ಪನ್ನಗಳು, ಲೋಹ, ಆಭರಣಗಳು, ಬುಡಕಟ್ಟು ಪೇಂಟಿಂಗ್‌ಗಳು, ಬಿದಿರು, ಮಡಿಕೆ ಮತ್ತಿತರ ವಸ್ತುಗಳು ಲಭ್ಯ.
ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ತುರ್ತಾಗಿ ಬೆಂಬಲ ನೀಡಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ:
ಎ) ಮಾರಾಟವಾಗದ ವಸ್ತುಗಳನ್ನು ಖರೀದಿಸುವುದು:
ಬಹುತೇಕ ಬುಡಕಟ್ಟು ಕುಶಲಕರ್ಮಿಗಳು ಬುಡಕಟ್ಟು ಉತ್ಪನ್ನಗಳ ಮಾರಾಟದ ಮೇಲೆ ಅವಲಂಬನೆಯಾಗಿರುತ್ತಾರೆ. ಹೀಗಾಗಿ, ಅವರಿಗೆ ತುರ್ತು ಪರಿಹಾರ ಅಗತ್ಯವಿರುತ್ತದೆ. ಬುಡಕಟ್ಟು ಕುಟುಂಬಗಳಿಗೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸದ್ಯ ಲಭ್ಯವಿರುವ ಉತ್ಪನ್ನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ರೂ. 23 ಕೋಟಿ ಮೊತ್ತದ ಬುಡಕಟ್ಟು ಕರಕುಶಲ ವಸ್ತುಗಳನ್ನು ದೇಶದಾದ್ಯಂತ ಟ್ರೈಫೈಡ್ ಖರೀದಿಸಿ ಸಂಗ್ರಹಿಸಲು ಉದ್ದೇಶಿಸಿದೆ.
ಹೆಚ್ಚುವರಿಯಾಗಿ, ಟ್ರೈಫೈಡ್ ಕೈಗಾರಿಕೆ ಒಕ್ಕೂಟಗಳು, ಪ್ರಮುಖ ಕಾರ್ಪೋರೇಟ್‌ಗಳು ಮತ್ತು ಉದ್ಯಮ ಸಂಸ್ಥೆಗಳನ್ನು ವಿಡಿಯೊ ಕಾನ್ಫೆರೆನ್ಸ್ ಮೂಲಕ ಸಂಪರ್ಕಿಸಿ ಬುಡಕಟ್ಟು ಕರಕುಶಲ ವಸ್ತುಗಳನ್ನು ಖರೀದಿಸುವಂತೆ ಉತ್ತೇಜಿಸಲಾಗುತ್ತಿದೆ. ಈ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸಬಹುದಾಗಿದೆ. ವಿವರ ಇಂತಿದೆ:
* ಸಮಗ್ರವಾಗಿ ಖರೀದಿಸಿ ಮಾರಾಟ ಮಾಡುವುದು
* ಕಾಣಿಕೆಯಾಗಿ ನೀಡುವುದು
* ಕಾನ್ಫೆರೆನ್ಸ್ ಮತ್ತು ಸೆಮಿನಾರ್‌ಗಳಲ್ಲಿ ಫೋಲ್ಡರ್‌ಗಳು, ಸ್ಟೇಷನರಿ ಇತ್ಯಾದಿ ವಸ್ತುಗಳು
* ಕಚೇರಿಗಳ ಅಲಂಕಾರಕ ವಿವಿಧ ವಸ್ತುಗಳು. ಪೇಂಟಿಂಗ್ಸ್, ದೊಕ್ರಾ ಇತ್ಯಾದಿ ವಸ್ತುಗಳು
* ಫ್ರಾಂಚೈಸಿ ಮಾದರಿ ಬಗ್ಗೆ ಯೋಚಿಸಬಹುದಾಗಿದೆ.
* ಬೃಹತ್ ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು (ವನ ಧನ್ ನೈಸರ್ಗಿಕಗಳು) ಖರೀದಿಸಬಹುದಾಗಿದೆ. ಜೇನು, ಸೂಪ್ಸ್, ಮಸಾಲೆ ವಸ್ತುಗಳು, ಅಕ್ಕಿ, ಸಿರಿ ಧಾನ್ಯಗಳು, ಚಹಾ, ಕಾಫಿ ಮತ್ತಿತರರ ವಸ್ತುಗಳನ್ನು ಖರೀದಿಸಬಹುದು
* ಪ್ರಸ್ತುತ ಸನ್ನಿವೇಶದಲ್ಲಿ ಮಾಸ್ಕ್ಸ್ ಮತ್ತು ಹ್ಯಾಂಡ್ ಸಾನಿಟೈಸರ್ಸ್‌ಗಳನ್ನು ಬುಡಕಟ್ಟು ಕುಶಲಕರ್ಮಿಕರು ತಯಾರಿಸುತ್ತಿದ್ದಾರೆ. ಡಬ್ಲ್ಯೂಎಚ್ಒ, ಯುನಿಸೆಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದ ಅನ್ವಯವೇ ಇವುಗಳನ್ನು ತಯಾರಿಸಲಾಗುತ್ತಿದೆ.
(ಮಣಿಪುರದ ಮೂಲ ವನ ಧನ್ ಕೇಂದ್ರವಾದ ಚುರಾಚಂದಾಪುರದ ವನಧನ್ ಉತ್ಪನ್ನಗಳ ಮೊಬೈಲ್ ವೆಂಡಿಂಗ್ ಶಾಪ್‌ಗೆ ಚಾಲನೆ ನೀಡಲಾಯಿತು)
ಬಿ) ಬುಡಕಟ್ಟು ಕುಶಲರ್ಮಿಗಳಿಗೆ ಪ್ರತಿ ತಿಂಗಳು ರೇಷನ್ ಒದಗಿಸುವ ಸೌಲಭ್ಯ
ಬುಡಕಟ್ಟು ಕುಶಲಕರ್ಮಿಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಟ್ರೈಫೈಡ್ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡಿದೆ. ‘ಮಾನವೀಯತೆ ಜತೆ ನಿಲ್ಲು’ ಎನ್ನುವ ಅಭಿಯಾನ ಕೈಗೊಂಡಿರುವ ಆರ್ಟ್ ಆಫ್ ಲಿವಿಂಗ್ ಜತೆ ಬುಡಕಟ್ಟು ಕುಟುಂಬಗಳಿಗೂ ಬೆಂಬಲವಾಗಿ ಎನ್ನುವ ಸಂದೇಶವನ್ನು ಸೇರಿಸಲಾಗಿದೆ. ಭಾರತದಲ್ಲಿ ಬುಡಕಟ್ಟು ಕುಟುಂಬಗಳಿಗೆ ರೂ. 1000 ಮೌಲ್ಯದ ಕಿಟ್‌ಗಳನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು(ಸಾಮಾಜಿಕ ಅಂತರದ ಮಾರ್ಗದರ್ಶಿಗಳನ್ನು ಪಾಲಿಸುವುದು). ಪ್ರತಿಯೊಂದು ರೇಷನ್ ಕಿಟ್‌ನಲ್ಲಿ 5 ಕಿಲೋ ಗ್ರಾಂ ಗೋಧಿ ಹಿಟ್ಟು, 2 ಕೆ.ಜಿ. ಬೇಳೆ, 3 ಕೆ.ಜಿ. ಅಕ್ಕಿ, 500 ಮಿ.ಲೀ., 100 ಗ್ರಾಂ ಅರಿಶಿನ ಪುಡಿ, 100 ಗ್ರಾಂ ಕೆಂಪು ಮೆಣಸಿನಕಾಯಿ ಪುಡಿ, 100 ಗ್ರಾಂ ಕಪ್ಪು ಮೆಣಸಿನಕಾಳು, 100 ಗ್ರಾಂ ಮಸಾಲಾ ಮತ್ತು ಎರಡು ಸೋಪುಗಳನ್ನು ಒಳಗೊಂಡಿದೆ.
ಸಿ) ಸಣ್ಣ ಕುಶಲಕರ್ಮಿಗಳಿಗೆ ಬಂಡವಾಳ
ಕುಶಲಕರ್ಮಿಗಳಿಗೆ ಮೃದು ಸಾಲ ಒದಗಿಸುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳ ಜತೆ ಟ್ರೈಫೈಡ್ ಮಾತುಕತೆ ನಡೆಸಿದೆ. ದಾಸ್ತಾನು ಇರುವ ಉತ್ಪನ್ನಗಳ ಆಧಾರದ ಮೇಲೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ, ಈಗಿರುವ ಸಂಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಲು ಮತ್ತು ದುಡಿಯುವ ಬಂಡವಾಳ ಪಡೆಯಲು ಅನುಕೂಲವಾಗುತ್ತದೆ.
ಡಿ) ಬುಡಕಟ್ಟು ಪ್ರದೇಶದಲ್ಲಿ ಮಾಸ್ಕ್ಸ್, ಸೋಪ್ಸ್, ಗ್ಲೋವ್ಸ್ ಮತ್ತು ಪಿಪಿಇಗಳನ್ನು ಒದಗಿಸುವುದು
ಕೋವಿಡ್–19 ರಿಂದ ಬಡವರು ಮತ್ತು ಅತಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳ ಬದುಕು ತೀವ್ರ ಸಂಕಷ್ಟದಲ್ಲಿದೆ. ಈ ಋತು ಕೊಯ್ಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಇದು ಸಕಾಲಿಕವಾಗಿತ್ತು. ಹಲವು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಕ್ಕೆ ಚಾಲನೆ ನೀಡಲು ಇದು ಸುಸಂದರ್ಭವಾಗಿತ್ತು. ಆದರೆ, ಕೋವಿಡ್‌ನಿಂದ ಬದುಕು ಅಭದ್ರತೆಗೆ ಒಳಗಾಗಬೇಕಾಗಿದೆ. ಬುಡಕಟ್ಟು ಕುಶಲಕರ್ಮಿಗಳ ಸುರಕ್ಷತೆ ನಿಟ್ಟಿನಲ್ಲಿ ಟ್ರೈಫೈಡ್ 10 ಲಕ್ಷ ಮಾಸ್ಕ್‌ಗಳು, ಸೋಪ್ಸ್, ಗ್ಲೋವ್ಸ್ ನೀಡಲು ಉದ್ದೇಶಿಸಿದೆ. ಜತೆಗೆ, 20,000 ಪಿಪಿಇ ಕಿಟ್‌ಗಳನ್ನು ಬುಡಕಟ್ಟು ಫಲಾನುಭವಿಗಳಿಗೆ ನೀಡಲಾಗುವುದು.
ವೆಬಿನಾರ್ಸ್ ಮತ್ತು ಕೋವಿಡ್ 19 ಸಲಹೆಗಳು
ಸಾಮಾಜಿಕ ಅಂತರ ಕಾಪಾಡಲು ಮತ್ತು ಸ್ವಚ್ಛತೆ ಕಾಪಾಡುವ ಕುರಿತು ಬುಡಕಟ್ಟು ಮಂದಿಗೆ ಜಾಗೃತಿ ಮೂಡಿಸಲು ಯುನಿಸೆಫ್ ಸಹಯೋಗದಲ್ಲಿ ಟ್ರೈಫೈಡ್ ರಾಷ್ಟ್ರಮಟ್ಟದ ವೆಬಿನಾರ್ ಅನ್ನು 2020ರ ಏಪ್ರಿಲ್ 9ರಂದು ಎಲ್ಲ ರಾಜ್ಯ ನೋಡಲ್ ಮತ್ತು ಅನುಷ್ಠಾನ ಸಂಸ್ಥೆಗಳು, ವನ ಧನ್ ಕೇಂದ್ರಗಳು ಮತ್ತು ಇತರ ಸಹಭಾಗಿತ್ವ ಸಂಸ್ಥೆಗಳ ಸಹಯೋಗದಲ್ಲಿ ಕೈಗೊಳ್ಳಲಾಯಿತು.
ಜತೆಗೆ, ಎಲ್ಲ ರಾಜ್ಯಗಳ ನೋಡಲ್ ಇಲಾಖೆಗಳು ಮತ್ತು ಅನುಷ್ಠಾನ ಸಂಸ್ಥೆಗಳ ಸಹಯೋಗದಲ್ಲಿ ಟ್ರೈಫೈಡ್ ರಾಜ್ಯಮಟ್ಟದ ವೆಬಿನಾರ್ಸ್‌ಗಳನ್ನು 2020ರ 14 ಏಪ್ರಿಲ್‌ರಿಂದ 17ರವರೆಗೆ ನಡೆಸಿತು. ಯುನಿಸೆಫ್ ಪ್ರಾದೇಶಿಕ ಘಟಕಗಳು ಮತ್ತು ಜಿಲ್ಲಾ ಸಂಸ್ಥೆಗಳು, ವನ ಧನ್ ಕೇಂದ್ರಗಳು ಸಹ ಭಾಗಿಯಾಗಿದ್ದವು. ಯುನಿಸೆಫ್ ವತಿಯಿಂದ ಪ್ರಾದೇಶಿಕ ಭಾಷೆಗಳಲ್ಲಿ ವಿಷಯಗಳನ್ನು ಒದಗಿಸಲಾಗಿತ್ತು. ಫ್ಲೈಯರ್ಸ್, ಡಿಜಿಟಲ್ ಪಾಕೆಟ್ ಪುಸ್ತಕ, ಆಡಿಯೊ ಸಂದೇಶಗಳ ವಿವರಗಳನ್ನು ಒದಗಿಸಲಾಗಿತ್ತು.
ಕೋವಿಡ್ 19 ಕುರಿತು ಟ್ರೈಫೈಡ್ ರಾಜ್ಯ ಸರ್ಕಾರದ ಸಂಸ್ಥೆಗಳಿಗೆ, ನೋಡಲ್ ಇಲಾಖೆಗಳಿಗೆ, ಅನುಷ್ಠಾನ ಸಂಸ್ಥೆಗಳಿಗೆ, ವಿಡಿವಿಕೆ ಸದಸ್ಯರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಲಹೆ ಸೂಚನೆಗಳನ್ನು ನೀಡಿತ್ತು. ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು.
***
(Release ID: 1621109)
Visitor Counter : 255
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Odia
,
Tamil
,
Telugu
,
Malayalam