ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್ -19 ಪರಿಸ್ಥಿತಿ ನಿಯಂತ್ರಿಸುವಲ್ಲಿ ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳು (ಪಿ.ಎಂ.ಬಿ.ಜೆ.ಪಿ) ಪ್ರಮುಖ ಪಾತ್ರ

Posted On: 04 MAY 2020 5:44PM by PIB Bengaluru

ಕೋವಿಡ್ -19 ಪರಿಸ್ಥಿತಿ ನಿಯಂತ್ರಿಸುವಲ್ಲಿ ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳು (ಪಿ.ಎಂ.ಬಿ.ಜೆ.ಪಿ) ಪ್ರಮುಖ ಪಾತ್ರವಹಿಸುತ್ತಿವೆ:

ಶ್ರೀ ಮನ್ಸುಖ್ ಮಾಂಡವಿಯಾ

ಗುಣಮಟ್ಟದ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ದಿನಕ್ಕೆ 10 ಲಕ್ಷ ಜನರು ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ

 

ಕೋವಿಡ್ -19 ಪರಿಸ್ಥಿತಿ ನಿಯಂತ್ರಿಸುವಲ್ಲಿ ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳು (ಪಿ.ಎಂ.ಬಿ.ಜೆ.ಪಿ) ಪ್ರಮುಖ ಪಾತ್ರವಹಿಸುತ್ತಿವೆ ಎಂದು ಕೇಂದ್ರ ನೌಕಾಯಾನ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರಗಳ ರಾಜ್ಯ (ಸ್ವ/ನಿ) ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಹೇಳಿದ್ದಾರೆ. ಈ ಕೇಂದ್ರಗಳು ಕೈಗೆಟುಕುವ ಬೆಲೆಗಳಲ್ಲಿ ಹೈಡ್ರಾಕ್ಸಿ ಕ್ಲೋರೊಕ್ವಿನ್ ಔಷಧಿಗಳನ್ನು ಕೂಡಾ ಮಾರಾಟ ಮಾಡುತ್ತಿವೆ ಎಂದು ಸಚಿವರು ಹೇಳಿದರು.

ಭಾರತ ಸರ್ಕಾರದ ಕೇಂದ್ರ ಔಷಧ ಇಲಾಖೆಯ ಉದಾತ್ತ ಉಪಕ್ರಮಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನ್ ಔಷಧಿ ಪರಿಯೋಜನ (ಪಿ.ಎಂ.ಬಿ.ಜೆ.ಪಿ) ಒಂದಾಗಿದೆ, ಮತ್ತು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವ ಪ್ರಧಾನಮಂತ್ರಿಯವರ ಕನಸನ್ನು ನನಸಾಗಿಸಲು ಈ ಜನಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ.

ಅಧಿಕಾರವಹಿಸಿಕೊಂಡಾಗಿನಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನ ಔಷಧಿ ಕೇಂದ್ರಗಳನ್ನು ತೆರೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ. ಈ 5.5 ವರ್ಷಗಳ ಆಡಳಿತದಲ್ಲಿ, ದೇಶಾದ್ಯಂತ ಸುಮಾರು 6000 ಜನ ಔಷಧಿ ಕೇಂದ್ರಗಳು ಉತ್ತಮ ಔಷಧಿ ಪೂರೈಕೆಗಾಗಿ ಪ್ರಾರಂಭವಾಗಿವೆ, ಹಾಗೂ ಈ ಕೇಂದ್ರಗಳಲ್ಲಿ ಕೈಗೆಟುಕುವ ಮತ್ತು ಗುಣಮಟ್ಟ ಔಷಧಿಗಳನ್ನು ಸರಾಸರಿ ಮಾರುಕಟ್ಟೆ ಬೆಲೆಯ 50% ರಿಂದ 90% ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಅನೇಕ ಜನ ಔಷದಿ ಕೇಂದ್ರಗಳು ಕೈಗೆಟುಕುವ ಮತ್ತು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡುವುದರ ಹೊರತಾಗಿ, ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಿರುವ ಜನರಿಗೆ ಪಡಿತರ ಕಿಟ್, ಬೇಯಿಸಿದ ಆಹಾರಗಳ ಪೊಟ್ಟಣ, ಉಚಿತ ಔಷಧಿ ಹಾಗೂ ಇತರ ಅಗತ್ಯ ವಸ್ತುಗಳನ್ನು ವಿತರಿಸಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಕೋವಿಡ್-19 ನಂತಹ ವಿಶೇಷ ಸಂದಿಗ್ಧ ಪರಿಸ್ಥಿತಿಯಲ್ಲಿ, ಜನ ಔಷಧಿ ಕೇಂದ್ರಗಳ ಪಾತ್ರ ಬಹಳ ಮುಖ್ಯವಾಗಿದೆ. ದೇಶದಾದ್ಯಂತ 6000 ಜನ ಔಷಧಿ ಕೇಂದ್ರಗಳು ಬಡವರಿಗೆ ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸಲು ಹಗಲು ರಾತ್ರಿ ದಣಿವರಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಏಪ್ರಿಲ್‌ 2020ನಲ್ಲಿ ದೇಶಾದ್ಯಂತ ಸುಮಾರು ರೂ.52 ಕೋಟಿ ಮೌಲ್ಯದ ಔಷಧಿಗಳನ್ನು ಈ ಜನ ಔಷಧಿ ಕೇಂದ್ರಗಳು ಸರಬರಾಜು ಮಾಡಿವೆ. ಜನ ಔಷಧಿ ಕೇಂದ್ರಗಳು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌.ಸಿ.ಕ್ಯು), ಎನ್-95 ಮುಖಕವಚಗಳು, ಮೂರು-ಪ್ಲೈ ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಜರ್‌ಗಳು ಇತ್ಯಾದಿಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಕೋವಿಡ್ -19ರ ಸಾಂಕ್ರಾಮಿಕ ಸಮಯದಲ್ಲಿ ಪರಿಹಾರನಿಟ್ಟಿನಲ್ಲಿ ಜನ ಔಷಧಿ ಕೇಂದ್ರಗಳ ಪ್ರಮುಖ ಪಾತ್ರವನ್ನು ಗುರುತಿಸಿ ಒಪ್ಪಿಕೊಂಡ ಕೇಂದ್ರ ಸಚಿವ ಶ್ರೀ ಮಾಂಡವಿಯಾ ಅವರು "ಈ ಜನ ಔಷಧಿ ಅಂಗಡಿಗಳ ಮಾಲೀಕರು ಅಗತ್ಯವಿರುವ ಜನರಿಗೆ ಸಲ್ಲಿಸಿದ ಆದರ್ಶಪ್ರಾಯ ಮತ್ತು ಶ್ಲಾಘನೀಯ ಸಾಮಾಜಿಕ ಸೇವೆಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ಹೇಳಿದರು.

***



(Release ID: 1621107) Visitor Counter : 233