PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 04 MAY 2020 6:44PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ, 11,706 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ನಮ್ಮ ಚೇತರಿಕೆಯ ಪ್ರಮಾಣ ಶೇ. 27.52 ಕ್ಕೇರಿದೆ. ಈಗ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 42,533. ನಿನ್ನೆಯಿಂದ ದೇಶದಲ್ಲಿ 2,553 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಎಲ್ಲಾ ಗುಣಮುಖವಾದ ಪ್ರಕರಣಗಳ ಫಲಿತಾಂಶದ ಅನುಪಾತವು (ಚೇತರಿಸಿಕೊಂಡ ವರ್ಸಸ್ ಸಾವು) ಆಸ್ಪತ್ರೆಗಳಲ್ಲಿನ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಸ್ಥಿತಿಯನ್ನು ಸೂಚಿಸುತ್ತದೆ, ಇದು ಏಪ್ರಿಲ್ 17, 2020 ಕ್ಕೆ (ಫಲಿತಾಂಶ ಅನುಪಾತವು 80:20 ಆಗಿತ್ತು) ಹೋಲಿಸಿದರೆ ದೇಶದಲ್ಲಿ ಸುಧಾರಣೆಯಾಗಿದೆ ಎಂದು ತೋರಿಸುತ್ತದೆ ಈಗ ಅದು 90:10 ಆಗಿದೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1621000

ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ಕೇಂದ್ರ ತಂಡಗಳ ನಿಯೋಜನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಇಪ್ಪತ್ತು ಕೇಂದ್ರ ಸಾರ್ವಜನಿಕ ಆರೋಗ್ಯ ತಂಡಗಳನ್ನು ರಚಿಸಿದ್ದ, ದೇಶದಲ್ಲಿ ಗರಿಷ್ಠ ಕೋವಿಡ್-19 ಪ್ರಕರಣಗಳು ವರದಿಯಾಗಿರುವ 20 ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಲಾಗುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620840

ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ದೇಶಕ್ಕೆ ಮರಳಲು ಭಾರತ ಸರ್ಕಾರದಿಂದ ನೆರವು

ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಂತಹಂತವಾಗಿ ಮರಳಲು ಭಾರತ ಸರ್ಕಾರ ಅನುಕೂಲ ಕಲ್ಪಿಸಲಿದೆ. ವಿಮಾನ ಮತ್ತು ನೌಕಾ ಹಡಗುಗಳ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ನಿಟ್ಟಿನಲ್ಲಿ ಎಸ್ಒಪಿ ಸಿದ್ಧಪಡಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು ಮತ್ತು ಹೈ ಕಮಿಷನ್ಗಳು ತೊಂದರೆಗೀಡಾದ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ. ಸೌಲಭ್ಯವನ್ನು ಪಾವತಿ ಆಧಾರದ ಮೇಲೆ ಲಭ್ಯವಾಗುವಂತೆ ಮಾಡಲಾಗುವುದು. ನಿಗದಿತ ವಾಣಿಜ್ಯ ವಿಮಾನಗಳನ್ನು ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಪ್ರಯಾಣವು ಮೇ 7 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ. ವಿಮಾನ ಪ್ರಯಾಣಕ್ಕೂ ಮೊದಲು ಪ್ರಯಾಣಿಕರನ್ನು ವೈದ್ಯಕೀಯವಾಗಿ ಪರೀಕ್ಷಿಸಲಾಗುವುದು. ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620994

ರಕ್ತದಾನವು ಜೀವಗಳನ್ನು ಉಳಿಸುತ್ತದೆ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸೋಣ ಮತ್ತು ಅಗತ್ಯವಿರುವವರಿಗೆ ಸುರಕ್ಷಿತ ಮತ್ತು ಗುಣಮಟ್ಟದ ರಕ್ತವು ಸಮಯಕ್ಕೆ ಸರಿಯಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳೋಣ: ಡಾ.ಹರ್ಷವರ್ಧನ್

ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, “ಕೋವಿಡ್-19 ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದ ನಿರ್ಣಾಯಕ ಪೂರೈಕೆಯನ್ನು ನಿರ್ವಹಿಸಲು ನಾವು ಸಮರ್ಥರಾಗಿದ್ದೇವೆ ಎಂದರು. ಸ್ವಯಂಪ್ರೇರಿತ ರಕ್ತದಾನವನ್ನು ಸಜ್ಜುಗೊಳಿಸಲು ರೆಡ್ ಕ್ರಾಸ್ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ರೆಡ್ ಕ್ರಾಸ್ ಸೊಸೈಟಿಯ ಕಾರ್ಮಿಕರು ಮತ್ತು ಅವರ ವಾಹನಗಳಿಗೆ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವಲ್ಲಿ ತೊಡಗಿರುವ 30,000 ಪಾಸ್ ಗಳನ್ನು ವ್ಯವಸ್ಥೆ ಮಾಡುವ ಮೂಲಕ ಅವರಿಗೆ ಸಹಾಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620883

ಮಧ್ಯಪ್ರದೇಶದಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದ ಡಾ. ಹರ್ಷವರ್ಧನ್

ಕೋವಿಡ್-19 ರಿಂದಾಗಿ ಹೆಚ್ಚುತಿರುವ ಸಾವಿನ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಾ. ಹರ್ಷವರ್ಧನ್, "ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿರುವುದು ನೋವಿನ ಸಂಗತಿ" ಎಂದು ಹೇಳಿದ್ದಾರೆ. SARI / Influenza ದಂತಹ ಕಾಯಿಲೆ ಪ್ರಕರಣಗಳ ಹುಡುಕಾಟ, ಕಣ್ಗಾವಲು ಮತ್ತು ಪರೀಕ್ಷೆಯನ್ನು ನಡೆಸುವ ಮೂಲಕ ರಾಜ್ಯವು ಬಾಧಿತವಲ್ಲದ ಜಿಲ್ಲೆಗಳತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು, ಇದರಿಂದ ಇತರ ಪ್ರದೇಶಗಳಲ್ಲಿ ಪ್ರಕರಣಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಕೋವಿಡ್-19 ನಿರ್ವಹಣೆಗೆ ಒತ್ತು ನೀಡುವುದರಿಂದ ಕೋವಿಡ್ ಅಲ್ಲದ ಸೇವೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಮದು ಸಚಿವರು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620978

ಕೊರೊನಾ ಯೋಧರಿಗೆ ಭಾರತೀಯ ನೌಕಾಪಡೆಯಿಂದ ಭೂಮಿ, ವಾಯು ಮತ್ತು ಸಾಗರಗಳಲ್ಲಿ ಗೌರವ ಸಲ್ಲಿಕೆ

ಮೇ 03 ಭಾನುವಾರದಂದು ಕೊರೊನಾ ಯೋಧರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಲು ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರ ಪಡೆಗಳ ಪ್ರತಿನಿಧಿಯಾಗಿ ಇಡೀ ರಾಷ್ಟ್ರದೊಂದಿಗೆ ಸೇರಿಕೊಂಡಿತು. ನಮ್ಮ ಕೊರೊನಾ ಯೋಧರಿಗೆ - ವೈದ್ಯಕೀಯ ವೃತ್ತಿಪರರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸರ್ಕಾರಿ ಸಿಬ್ಬಂದಿ ಮತ್ತು ಮಾಧ್ಯಮಗಳು ದೃಢನಿಶ್ಚಯ ಮತ್ತು ಬದ್ಧತೆಯಿಂದ ಕೋವಿಡ್- 19 ವಿರುದ್ಧ ಹಲವಾರು ಚಟುವಟಿಕೆಗಳ ಮೂಲಕ ಸತತ ಪ್ರಯತ್ನ ಮಾಡಿದ್ದಕ್ಕಾಗಿ 03 ಮೇ 2020 ರಂದು ನೆಲ, ಗಾಳಿ ಮತ್ತು ನೀರಿನ ಮೇಲೆ  ಅವರಿಗೆ ಇಡೀ ರಾಷ್ಟ್ರದ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620788

ಕೊರೊನಾ ಯೋಧರಿಗೆ ಗೌರವ ಸಲ್ಲಿಸಿದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ರಕ್ಷಣಾ ಸಚಿವರು

ಕೊರೊನಾ ವೈರಾಣು ಹರಡುವುದನ್ನು ತಡೆಯಲು ಸತತವಾಗಿ ಹೋರಾಡುತ್ತಿರುವ ಕೊರೊನಾ ಯೋಧರಿಗೆ ಅಭಿನಂದನೆ ಸಲ್ಲಿಸಲು ದೇಶಾದ್ಯಂತ ವಿವಿಧ ನೆಲ, ನೀರು ಮತ್ತು ಗಾಳಿಯಲ್ಲಿ ನೂರಾರು ಚಟುವಟಿಕೆಗಳನ್ನು ಕೈಗೊಂಡ ಸಶಸ್ತ್ರ ಪಡೆಗಳ ಕ್ರಮವನ್ನು ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಸಶಸ್ತ್ರ ಪಡೆಗಳು ಭಾರತದ ಕೊರೊನಾ ಯೋಧರಿಗೆ ಭಾನುವಾರ ವಿಶಿಷ್ಟ ಮಿಲಿಟರಿ ರೀತಿಯಲ್ಲಿ ಗೌರವ ಸಲ್ಲಿಸಿದವು. ಶ್ರೀನಗರದಿಂದ ತಿರುವನಂತಪುರಂ ಮತ್ತು ದಿಬ್ರುಗಢ ದಿಂದ ಕಚ್ಚ್ ವರೆಗೆ ಸೇನೆಯು ಪೊಲೀಸ್ ಸ್ಮಾರಕಗಳಿಗೆ ಮಾಲಾರ್ಪಣೆ ಮಾಡುವುದು, ಆರೋಗ್ಯ ವೃತ್ತಿಪರರು ಮತ್ತು ತುರ್ತು ಸರಬರಾಜು ಕಾರ್ಯಕರ್ತರನ್ನು ಗೌರವಿಸುವುದು ಮತ್ತು ಸನ್ಮಾನಿಸುವುದು ಮುಂತಾದ ವಿವಿಧ ಚಟುವಟಿಕೆಗಳನ್ನು ನಡೆಸಿತು. ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳ ನೂರಾರು ಪಟ್ಟಣಗಳ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೇನಾ ಬ್ಯಾಂಡ್ ತಂಡಗಳು ಕೊರೊನಾ ವಿರುದ್ಧದ ರಾಷ್ಟ್ರದ ಮುಂಚೂಣಿ ಯೋಧರಿಗೆ ಗೌರವ ಸಲ್ಲಿಕೆಯಾಗಿ  ದೇಶಭಕ್ತಿ ಹಾಡುಗಳನ್ನು ನುಡಿಸಿದವು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620861

ಖಾದಿಬ್ರಾಂಡ್ ಹೆಸರು ಬಳಸಿ ನಕಲಿ ಪಿಪಿಇ ಕಿಟ್ಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಗಳು; ಕೆವಿಐಸಿಯಿಂದ ಕಾನೂನು ಕ್ರಮ

ಕೆಲವು ನಿರ್ಲಜ್ಜ ವ್ಯಾಪಾರ ಸಂಸ್ಥೆಗಳು ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕಿಟ್ಗಳನ್ನು ತಯಾರಿಸಿ ಖಾದಿ ಇಂಡಿಯಾಟ್ರೇಡ್ಮಾರ್ಕ್ ಅನ್ನು ಮೋಸದಿಂದ ಬಳಸಿ ಮಾರಾಟ ಮಾಡುತ್ತಿರುವುದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಗಮನಕ್ಕೆ ಬಂದಿದೆ. ಕೆವಿಐಸಿ ಇದುವರೆಗೆ ಯಾವುದೇ ಪಿಪಿಇ ಕಿಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಕೆವಿಐಸಿ ತನ್ನ ಉತ್ಪನ್ನಗಳಿಗೆ ನಿರ್ದಿಷ್ಟವಾಗಿ ಡಬಲ್-ಟ್ವಿಸ್ಟೆಡ್ ಹ್ಯಾಂಡ್-ಸ್ಪನ್, ಕೈಯಿಂದ ನೇಯ್ದ ಖಾದಿ ಬಟ್ಟೆಯನ್ನು ಬಳಸುತ್ತದೆ ಆದ್ದರಿಂದ, ಪಾಲಿಯೆಸ್ಟರ್ ಮತ್ತು ಪಾಲಿಪ್ರೊಪಿಲೀನ್ನಂತಹ ನೇಯ್ದ ವಸ್ತುಗಳಿಂದ ತಯಾರಿಸಿದ ಕಿಟ್ಗಳು ಖಾದಿ ಉತ್ಪನ್ನಗಳು ಅಥವಾ ಕೆವಿಐಸಿ ಅನುಮೋದಿತ ಉತ್ಪನ್ನಗಳಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620928

ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ ಸಶಕ್ತ ಗುಂಪು 6,  ಸಿಎಸ್ಒಗಳು/ ಎನ್ಜಿಒಗಳು/ ಕೈಗಾರಿಕೆ/ ವಿದೇಶಿ ಸಂಸ್ಥೆಗಳನ್ನು ತೊಡಗಿಸಿಕೊಂಡಿದೆ

ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ದೇಶವು ಅಸಾಧಾರಣ ಸವಾಲನ್ನು ಎದುರಿಸುತ್ತಿರುವ ಕಾರಣ, ಭಾರತ ಸರ್ಕಾರವು ರಚಿಸಿರುವ ಮತ್ತು ನೀತಿ ಆಯೋಗದ ಸಿಇಒ ಅಧ್ಯಕ್ಷರಾಗಿರುವ ಸಶಕ್ತ ಗುಂಪು 6 (ಇಜಿ 6), ನಾಗರಿಕ ಸಮಾಜದ ಸಂಘಟನೆಗಳು, ಎನ್ಜಿಒಗಳು, ಅಭಿವೃದ್ಧಿ ಪಾಲುದಾರರು, ಕೈಗಾರಿಕಾ ಪಾಲುದಾರರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತ ಸರ್ಕಾರದೊಂದಿಗೆ ಸಹಯೋಗ ಸೃಷ್ಟಿಸಲು ಪ್ರಮುಖ ಪಾತ್ರ ವಹಿಸುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620908

ಡಿಆರ್ಡಿಒ ದಿಂದ ಯುವಿ ಸೋಂಕುನಿವಾರಕ ಗೋಪುರದ  ಅಭಿವೃದ್ಧಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹೆಚ್ಚಿನ ಸೋಂಕು ಪೀಡಿತ ಪ್ರದೇಶಗಳ ಕ್ಷಿಪ್ರ ಮತ್ತು ರಾಸಾಯನಿಕ ಮುಕ್ತ ಸೋಂಕುನಿವಾರಕಕ್ಕಾಗಿ ಅಲ್ಟ್ರಾ ವೈಲೆಟ್ (ಯುವಿ) ಸೋಂಕುನಿವಾರಕ ಗೋಪುರವನ್ನು ಅಭಿವೃದ್ಧಿಪಡಿಸಿದೆ. ಯುವಿ ಬ್ಲಾಸ್ಟರ್ ಹೆಸರಿನ ಉಪಕರಣಗಳು ಯುವಿ ಆಧಾರಿತ ಏರಿಯಾ ಸ್ಯಾನಿಟೈಸರ್ ಆಗಿದ್ದು, ಇದನ್ನು ದೆಹಲಿ ಮೂಲದ ಡಿಆರ್ಡಿಒ ಪ್ರಧಾನ ಪ್ರಯೋಗಾಲಯವಾದ ಲೇಸರ್ ಸೈನ್ಸ್ & ಟೆಕ್ನಾಲಜಿ ಸೆಂಟರ್ (ಲ್ಯಾಸ್ಟೆಕ್) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620991

ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಸರ್ಕಾರಿ -ಮಾರ್ಕೆಟ್ಪ್ಲೇಸ್ (ಜಿಎಂ) ಪೋರ್ಟಲ್ನಲ್ಲಿದಿ ಸರಸ್ ಕಲೆಕ್ಷನ್ಗೆ ಚಾಲನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಸರ್ಕಾರಿ -ಮಾರ್ಕೆಟ್ಪ್ಲೇಸ್ (ಜಿಎಂ) ಪೋರ್ಟಲ್ನಲ್ಲಿಸರಸ್ ಕಲೆಕ್ಷನ್ಗೆ ಇಂದು ಚಾಲನೆ ನೀಡಿದರು. -ಮಾರ್ಕೆಟ್ಪ್ಲೇಸ್ ಮತ್ತು ದೀನ್ ದಯಾಳ್ ಆಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM), ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅನನ್ಯ ಉಪಕ್ರಮವಾದ ಸರಸ್ ಸಂಗ್ರಹವು ಗ್ರಾಮೀಣ ಸ್ವ-ಸಹಾಯ ಗುಂಪುಗಳು (ಸ್ವಸಹಾಯ ಸಂಘಗಳು) ತಯಾರಿಸಿದ ದೈನಂದಿನ ಉಪಯುಕ್ತತೆ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳ ಸ್ವಸಹಾಯ ಗುಂಪುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಖರೀದಿದಾರರಿಗೆ ಮಾರುಕಟ್ಟೆ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620881

ಕೋವಿಡ್-19 ಸಾಂಕ್ರಾಮಿಕದಿಂದ ಹಿನ್ನೆಲೆಯಲ್ಲಿ ಬುಡಕಟ್ಟು ಸಂಗ್ರಾಹಕರು ಮತ್ತು ಕುಶಲಕರ್ಮಿಗಳ ಜೀವನೋಪಾಯ ಮತ್ತು ಸುರಕ್ಷತೆಗಾಗಿ ಸರ್ಕಾರದಿಂದ ತಕ್ಷಣದ ಕ್ರಮಗಳು

ಬುಡಕಟ್ಟು ಕುಶಲಕರ್ಮಿಗಳು ಎದುರಿಸುತ್ತಿರುವ ಸಂಕಷ್ಟದ ಹಿನ್ನೆಲೆಯಲ್ಲಿ, ಬುಡಕಟ್ಟು ಸಂಗ್ರಹಕಾರರು ಮತ್ತು ಬುಡಕಟ್ಟು ಕುಶಲಕರ್ಮಿಗಳಿಗೆ ಬೆಂಬಲ ನೀಡಲು ಸರ್ಕಾರ ಹಲವಾರು ತ್ವರಿತ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620856

2020, ಮೇ 31 ರಂದು ನಿಗದಿಯಾಗಿದ್ದ ನಾಗರಿಕ ಸೇವಾ (ಪ್ರಾಥಮಿಕ) ಪರೀಕ್ಷೆ ಮುಂದೂಡಿಕೆ

ನಿರ್ಬಂಧಗಳ ವಿಸ್ತರಣೆಯನ್ನು ಗಮನಿಸಿದ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಸದ್ಯಕ್ಕೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ. 2020 ಮೇ 31 ರಂದು ನಿಗದಿಯಾಗಿದ್ದ ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆಯನ್ನು ಮುಂದೂಡಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620970

ಕೋವಿಡ್-19 ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ: ಮನ್ಸುಖ್ ಮಾಂಡವೀಯ

ಕೋವಿಡ್ -19 ಪರಿಸ್ಥಿತಿಯಲ್ಲಿ ಜನೌಷಧಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಏಕೆಂದರೆ ದಿನಕ್ಕೆ ಸುಮಾರು 10 ಲಕ್ಷ ಜನರು 6000 ಜನೌಷಧಿ ಕೇಂದ್ರಗಳಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳಿಗಾಗಿ ಭೇಟಿ ನೀಡುತ್ತಿದ್ದಾರೆ. ಕೇಂದ್ರಗಳು ಹೈಡ್ರಾಕ್ಸಿಕ್ಲೋರೋಕ್ವಿನೈನ್ ಅನ್ನು ಸಹ ಮಾರಾಟ ಮಾಡುತ್ತಿವೆ ಎಂದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620941

ಕೋವಿಡ್-19 ಸಿದ್ಧತೆಗಳ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯೊಂದಿಗೆ ಡಾ.ಹರ್ಷವರ್ಧನ್ ಚರ್ಚೆ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಭೂ ವಿಜ್ಞಾನಗಳ ಸಚಿವ ಡಾ.ಹರ್ಷವರ್ಧನ್ ಅವರು 50 ನೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಸ್ಥಾಪನಾ ದಿನದಂದು ಅದರ ಎಲ್ಲಾ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಕಚೇರಿಗಳೊಂದಿಗೆ ಎಸ್ & ಟಿ ಉಪಕ್ರಮಗಳ ಹಾಗೂ ನಿರ್ದಿಷ್ಟವಾಗಿ ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಅವರ ಪ್ರಯತ್ನಗಳನ್ನು ಕುರಿತು ಸಂವಾದ ನಡೆಸಿದರು. ಸಂದರ್ಭದಲ್ಲಿ ಕೋವಿಡ್-19 ಕುರಿತು ಮಲ್ಟಿಮೀಡಿಯಾ ಮಾರ್ಗದರ್ಶಿ “COVID KATHA” ಗೆ ಸಚಿವರು ಚಾಲನೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ರಾಷ್ಟ್ರದ ಸೇವೆಯಲ್ಲಿ 50 ವರ್ಷಗಳಿಗೆ ಪಾದಾರ್ಪಣೆ ಮಾಡುತ್ತಿರುವ ಡಿಎಸ್ಟಿಯ ಸುವರ್ಣ ಮಹೋತ್ಸವ ಆಚರಣೆಯನ್ನು ಸಹ ಪ್ರಾರಂಭಿಸಲಾಯಿತು, ವರ್ಷಪೂರ್ತಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620755

ಮಹಾರಾಷ್ಟ್ರದ 34 ಕೇಂದ್ರಗಳಲ್ಲಿ ಬೆಂಬಲ ಬೆಲೆಯ ಮೂಲಕ ಮುಂದುವರೆದ ಹತ್ತಿ ಖರೀದಿ; ಲಾಕ್ಡೌನ್ ಅವಧಿಯಲ್ಲಿ 6900 ಬೇಲ್ಗಳಿಗೆ ಸಮನಾದ ಒಟ್ಟು 36,500 ಕ್ವಿಂಟಾಲ್ ಹತ್ತಿ ಖರೀದಿ

ಮಹಾರಾಷ್ಟ್ರದಲ್ಲಿ ಉತ್ಪಾದನೆಯಾದ ಸುಮಾರು ಶೇ.77.40 ರಷ್ಟು ಹತ್ತಿ ಈಗಾಗಲೇ ಮಾರುಕಟ್ಟೆಗೆ ಬಂದಿದೆ ಮತ್ತು 2020 ಮಾರ್ಚ್ 25 ರವರೆಗೆ ಇದು ಮಾರಾಟವಾಗಿದೆ. ಭಾರತೀಯ ಹತ್ತಿ ನಿಗಮವು 18.66 ಲಕ್ಷ ಬೇಲ್ ಹತ್ತಿಗೆ ಸಮನಾದ 4995 ಕೋಟಿ ರೂ. ಮೌಲ್ಯದ 91.90 ಲಕ್ಷ ಕ್ವಿಂಟಲ್ ಹತ್ತಿಯನ್ನು ರೈತರಿಂದ ಖರೀದಿಸಿದೆ. ಖರೀದಿಸಿದ ಹತ್ತಿಗೆ ರೈತರಿಗೆ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟು ಖರೀದಿ ಮೌಲ್ಯದಲ್ಲಿ, ಈಗಾಗಲೇ 4987 ಕೋಟಿ ರೂ.ಗಳು ಈಗಾಗಲೇ ರೈತರಿಗೆ ತಲುಪಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620986

ಕೋವಿಡ್-19 ರಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ದೇಶದ ಎಲ್ಲಾ ಭಾಗಗಳ ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ನೆರವಾಗುವ ಉಪಕ್ರಮಗಳನ್ನು ಕೈಗೊಂಡಿವೆ

ಸಿಲಾಕ್ ಡೌನ್ ನಿಂದ ಇತರೆಡೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವುದು, ಕ್ವಾರಂಟೈನ್ ನಲ್ಲಿರುವವರ ಪ್ರಯಾಣದ ಮಾರ್ಗಗಳು ಮತ್ತು ಸಂಪರ್ಕ ಹೊಂದಿರುವವರನ್ನು ಗುರುತಿಸುವುದು ಮತ್ತು ಲಾರಿ ಚಾಲಕರು ಸೇರಿದಂತೆ ಗಡಿಗಳನ್ನು ದಾಟಿದವರು, ಸಂದೇಹಗಳನ್ನು ನಿವಾರಿಸುವುದು; ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ನಿರ್ವಹಿಸುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವ ಕಾರ್ಯವಿಧಾನಗಳನ್ನು ಸೂಚಿಸುವುದು; ಕೃಷಿ ಉತ್ಪನ್ನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವ್ಯವಸ್ಥೆ ಮಾಡುವುದು ಇನ್ನಿತರ ಸಾರ್ವಜನಿಕ ನೆರವು ಕಾರ್ಯಗಳನ್ನು ಸ್ಥಳೀಯ ಆಡಳಿತಗಳು ಮಾಡುತ್ತಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620741

ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಗೆ ನಾಮನಿರ್ದೇಶನಗಳ ಕೊನೆಯ ದಿನಾಂಕ ಜೂನ್ 30, 2020 ರವರೆಗೆ ವಿಸ್ತರಣೆ

ಭಾರತದ ಏಕತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರಿನಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿ ಭಾರತ ಸರ್ಕಾರ ಸ್ಥಾಪಿಸಿದೆ. ಕ್ಷೇತ್ರದಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ನೀಡಿದ ಗಮನಾರ್ಹ ಮತ್ತು ಸ್ಪೂರ್ತಿದಾಯಕ ಕೊಡುಗೆಯನ್ನು ಗುರುತಿಸುವುದು ಮತ್ತು ಏಕೀಕೃತ ಭಾರತದ ಮೌಲ್ಯವನ್ನು ಬಲಪಡಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620863

ಪ್ರವಾಸೋದ್ಯಮ ಸಚಿವಾಲಯವು ದೇಖೋ ಅಪ್ನಾ ದೇಶ್ ವೆಬಿನಾರ್ ಸರಣಿಯಡಿ ಡಾರ್ಜಿಲಿಂಗ್ ಶ್ರೀಮಂತ ಪರಂಪರೆ ಕುರಿತು ತನ್ನ 14 ನೇ ವೆಬಿನಾರ್ ನಲ್ಲಿ ಹಿಮಾಲಯದಿಂದ ಬಂಗಾಳಪ್ರಸ್ತತಪಡಿಸಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620975

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಲಾಕ್ಡೌನ್ ಅವಧಿಯಲ್ಲಿ "ಎನ್ಜಿಎಂಎ ಕೆ ಸಂಗ್ರಾಹ್ ಸೆ" ಎಂಬ ಇದುವರೆಗೆ ಕಾಣದ, ಅಪರೂಪದ ಕಲಾಕೃತಿಗಳನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620925

 

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ವಿಸ್ತೃರಿಸಿದ ಲಾಕ್ಡೌನ್ಗಾಗಿ ರಾಜ್ಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ದೇಶದ ಇತರ ಭಾಗಗಳಿಂದ ಕೇರಳಿಗರನ್ನು ಮರಳಿ ಕರೆತರಲು ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿಯನ್ನು ಕೋರಿದ್ದಾರೆ. 30,000 ಮಲಯಾಳಿಗಳಿಗೆ -ಪಾಸ್ ವ್ಯವಸ್ಥೆಯ ಮೂಲಕ ಇತರ ರಾಜ್ಯಗಳಿಂದ ಮರಳಲು ಅನುಮತಿ ನೀಡಲಾಗಿದೆ. ಪಾಟ್ನಾಕ್ಕೆ ವಲಸೆ ಕಾರ್ಮಿಕರಿಗೆ 5 ವಿಶೇಷ ರೈಲುಗಳು ಬಿಹಾರ ಅನುಮತಿ ನಿರಾಕರಿಸಿದ್ದರಿಂದ ರದ್ದುಗೊಂಡಿವೆ. ಪಶ್ಚಿಮ ಬಂಗಾಳ ಕೇರಳದಿಂದ 2 ರೈಲುಗಳಿಗೆ ಅನುಮತಿ ನೀಡಿದೆ. ನಿನ್ನೆಯವರೆಗೆ ಒಟ್ಟು ದೃಢ ಪಡಿಸಿದ ಪ್ರಕರಣಗಳು: 499, ಸಕ್ರಿಯ ಪ್ರಕರಣಗಳು: 95.
  • ತಮಿಳುನಾಡು: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ಲೀಟರ್ಗೆ 3.25 ಮತ್ತು 2.50 ರೂ.ಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿರುವುದರಿಂದ ಚೆನ್ನೈ ಆಸ್ಪತ್ರೆಗಳಲ್ಲಿರುವ ಸ್ಥಿರವಾದ ಕೋವಿಡ್ 19 ರೋಗಿಗಳನ್ನು ಪ್ರಕರಣಗಳನ್ನು ಕ್ವಾರಂಟೈನ್ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತಿದೆ. ಕಡಲೂರಿನ ಕೊಯಂಬೇಡು ಕ್ಲಸ್ಟರ್ನಿಂದ 114, ವಿಲ್ಲುಪುರಂನಲ್ಲಿ 39  ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ನಿನ್ನೆಯವರೆಗೆ  ಒಟ್ಟು ಪ್ರಕರಣಗಳು: 3023, ಸಕ್ರಿಯ ಪ್ರಕರಣಗಳು: 1611, ಸಾವು: 30, ಬಿಡುಗಡೆ: 1379. ಚೆನ್ನೈನಲ್ಲಿ ಅತಿ ಹೆಚ್ಚು 1458  ಪ್ರಕರಣಗಳು ವರದಿಯಾಗಿವೆ.
  • ಕರ್ನಾಟಕ: ವಲಸೆ ಕಾರ್ಮಿಕರಿಗೆ ರಾಜ್ಯವು ಇನ್ನೂ ಎರಡು ದಿನಗಳವರೆಗೆ ಉಚಿತ ಬಸ್ ಸೇವೆಯನ್ನು ವಿಸ್ತರಿಸಿದೆ. ಇಂದು 28 ಹೊಸ ಪ್ರಕರಣಗಳು ದೃಢಪಟ್ಟಿವೆ: ದಾವಣಗೆರೆಯಲ್ಲಿ 21, ಕಲ್ಬುರ್ಗಿ ಮತ್ತು ಮಂಡ್ಯದಲ್ಲಿ ತಲಾ ಎರಡು ಮತ್ತು ಚಿಕ್ಕಬಳ್ಳಾಪುರ, ಹಾವೇರಿ ಮತ್ತು ವಿಜಯಪುರದಲ್ಲಿ ತಲಾ ಒಂದು ಪ್ರಕರಣ. ಕಲ್ಬುರ್ಗಿಯಲ್ಲಿ ಇಂದು ಒಂದು ಸಾವು (56  ವರ್ಷ ಗಂಡಸು) ವರದಿಯಾಗಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು: 642, ಸಾವುಗಳು: 26, ಬಿಡುಗಡೆ: 304.
  • ಆಂಧ್ರಪ್ರದೇಶ: ತುರ್ತು ಸಂದರ್ಭಗಳಿಗಾಗಿ 108 ಆಂಬ್ಯುಲೆನ್ಸ್ ಗಳನ್ನು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ಎಎಲ್ಎಸ್) ಆಂಬ್ಯುಲೆನ್ಸ ಗಳಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 19,584 ನೈರ್ಮಲ್ಯ ಕಾರ್ಮಿಕರಿಗೆ ವಿಶೇಷ ಕಿಟ್ಗಳನ್ನು ಒದಗಿಸಲು ರಾಜ್ಯವು 3.84 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ 67 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, 36 ಮಂದಿ ಬಿಡುಗಡೆಯಾಗಿದ್ದು, ಯಾವುದೇ ಸಾವುಗಳು ವರದಿಯಾಗಿಲ್ಲ. ಒಟ್ಟು ಪ್ರಕರಣಗಳು 1650. ಸಕ್ರಿಯ ಪ್ರಕರಣಗಳು: 1062, ಗುಣಮುಖ: 524, ಸಾವುಗಳು: 33. ಪಾಸಿಟಿವ್ ಪ್ರಕರಣಗಳಲ್ಲಿ ಪ್ರಮುಖ ಜಿಲ್ಲೆಗಳು: ಕರ್ನೂಲ್ (491), ಗುಂಟೂರು (338), ಕೃಷ್ಣಾ (278).
  • ತೆಲಂಗಾಣ: ಕೋವಿಡ್ -19 ಲಾಕ್ಡೌನ್ ನಿರ್ಗಮನ ಯೋಜನೆಯ ಭಾಗವಾಗಿ ಕೆಲವು ಕ್ಷೇತ್ರಗಳ ನಿಯಮಗಳ ಸಡಿಲಿಕೆಗೆ ಸಂಬಂಧಿಸಿದಂತೆ ನಾಳೆ ರಾಜ್ಯ ಸಚಿವ ಸಂಪುಟ ಚರ್ಚಿಸಲಿದೆ. ಇತರೆಡೆ ಸಿಲುಕಿರುವ ವಲಸೆ ಕಾರ್ಮಿಕರು ಹೈದರಾಬಾದ್ ಬೀದಿಗಳಿದು ತಮ್ಮನ್ನು ಮನೆಗೆ ಕಳುಹಿಸಬೇಕೆಂದು ಒತ್ತಾಯಿಸಿದರು. ನಿನ್ನೆ ಟೋಲಿಚೌಕಿಯಲ್ಲಿ ವಲಸೆ ಕಾರ್ಮಿಕರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ನಕಲಿ ಸುದ್ದಿಗಳಿಗಾಗಿ ಕೋಮು ಅಶಾಂತಿಯನ್ನು ಪ್ರಚೋದನೆಯ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರನ ದಾಖಲಿಸಲಾಗಿದೆ. ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳು 1082, ಸಕ್ರಿಯ ಪ್ರಕರಣಗಳು: 508, ಗುಣಮುಖ: 545, ಸಾವುಗಳು: 29.
  • ಚಂಡೀಗಢ: ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಗೊತ್ತುಪಡಿಸಿದ ನಿಗ್ರಹ ಪ್ರದೇಶವನ್ನು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಸ್ಪಷ್ಟ ಪ್ರವೇಶ ಮತ್ತು ನಿರ್ಗಮನ ಬಿಂದುಗಳೊಂದಿಗೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಹಣ್ಣು ಮತ್ತು ತರಕಾರಿಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ವ್ಯಕ್ತಿಗಳ ಸಂಚಾರವನ್ನು ಮಾತ್ರ ಅನುಮತಿಸಲಾಗಿದೆ. ಜನರು ಮತ್ತು ಸಾರಿಗೆಯ ಅನಿಯಂತ್ರಿತ ಒಳಹರಿವು ಇರುವುದಿಲ್ಲ. ನಿಗ್ರಹ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ಹೊರಗೆ ಚಲಿಸುವ ಜನರ ವಿವರಗಳ ದಾಖಲು ಇರುತ್ತದೆ. ಶಿಷ್ಟಾಚಾರದ ಪ್ರಕಾರ, ನಿಗ್ರಹ ಪ್ರದೇಶದೊಳಗೆ ಎಲ್ಲಾ ನಿವಾಸಿಗಳನ್ನು ತೀವ್ರವಾಗಿ ಪರೀಕ್ಷೆ ಮತ್ತು ಎಲ್ಲಾ ಶಂಕಿತ ಪ್ರಕರಣಗಳ ಪರೀಕ್ಷೆ ಇರುತ್ತದೆ. ಯಾವುದೇ ಅಂಗಡಿಗಳು, ಕಚೇರಿಗಳು, ಕಾರ್ಖಾನೆಗಳು, ಔಷಧಾಲಯಗಳು ನಿಗ್ರಹ ಪ್ರದೇಶದೊಳಗೆ ಕಾರ್ಯನಿರ್ವಹಿಸಲು ಅನುಮತಿ ಇಲ್ಲ.
  • ಪಂಜಾಬ್: ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಸರ್ಕಾರ ಒಂದು ಮೈಲಿಗಲ್ಲನ್ನು ಪೂರ್ಣಗೊಳಿಸಿದೆ, ಒಟ್ಟು ಆರ್ಟಿ-ಪಿಸಿಆರ್ ಪರೀಕ್ಷೆಗಳ ಸಂಖ್ಯೆ 20,000 ದಾಟಿದೆ. ಮೊಬೈಲ್ ಮಾದರಿ ಸಂಗ್ರಹಣೆ ಕಿಯೋಸ್ಕ್ ಗಳ ಬಳಕೆ, ಸಮೂಹ ಪರೀಕ್ಷೆ ಮುಂತಾದ ನವೀನ ಪರೀಕ್ಷಾ ತಂತ್ರಗಳನ್ನು ರಾಜ್ಯವು ಬಳಸಿಕೊಂಡಿದೆ. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯದಲ್ಲಿ ಸಮೂಹ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ. 2020 ಏಪ್ರಿಲ್ 30 ರವರೆಗೆ 5788 ಸಮೂಹ ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದೊಳಗೆ ವಾಸಿಸುವ ವಲಸಿಗರನ್ನು ನೋಂದಾಯಿಸುವಲ್ಲಿ ಪಂಜಾಬ್ ಮುಂದಾಗಿದೆ. ಉದ್ದೇಶಕ್ಕಾಗಿ ವಿಶೇಷ ಆನ್ಲೈನ್ ಪೋರ್ಟಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ರಾಜ್ಯಗಳಿಗೆ ಮರಳಲು ಆಸಕ್ತಿ ಹೊಂದಿರುವ 6.44 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ರಾಜ್ಯವು ಯಶಸ್ವಿಯಾಗಿ ನೋಂದಾಯಿಸಿದೆ.
  • ಹರಿಯಾಣ: ಹರಿಯಾಣದಲ್ಲಿ ಸಿಲುಕಿರುವ ಭಾರತದ ಇತರ ರಾಜ್ಯಗಳ ಎಲ್ಲಾ ಕೃಷಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಸುರಕ್ಷಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಬೇಗನೆ ತಲುಪುವಂತೆ ಮಾಡಲು ಹರಿಯಾಣ ಸರ್ಕಾರ ಬದ್ಧವಾಗಿದೆ. ಗಡಿ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶದ ಕೃಷಿ ಕಾರ್ಮಿಕರನ್ನು ಬಸ್ಗಳಲ್ಲಿ ಅವರ ತಮ್ಮ ಮನೆಗರಾಜ್ಯಗಳಿಗೆ ಕಳುಹಿಸಲಾಗುವುದು. ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶದವರನ್ನು ಹರಿಯಾಣದ ವಿವಿಧ ನಿಲ್ದಾಣಗಳಿಂದ ವಿಶೇಷ ಶ್ರಮಿಕ್ ರೈಲುಗಳಿಂದ ಕಳುಹಿಸಲು  ನಿರ್ಧರಿಸಲಾಗಿದೆ. ಉಳಿದ ರಾಜ್ಯಗಳ ವಲಸೆ ಕಾರ್ಮಿಕರ ಮರಳುವಿಕೆ, ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ, ಅವರನ್ನು ನವದೆಹಲಿಯಿಂದ ವಿಶೇಷ ರೈಲುಗಳ ಮೂಲಕ ಕಳುಹಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ.
  • ಹಿಮಾಚಲ ಪ್ರದೇಶ: ರಾಜ್ಯ ಸರ್ಕಾರದ ಸಾಮೂಹಿಕ ಪ್ರಯತ್ನ ಮತ್ತು ಜನರ ಸಕ್ರಿಯ ಸಹಕಾರದಿಂದಾಗಿ ಹಿಮಾಚಲ ಪ್ರದೇಶ ಶೀಘ್ರದಲ್ಲೇ ಕೊರೊನಾ ಮುಕ್ತ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗುವುದು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಅವರು ಹೇಳಿದರು. ರಾಜ್ಯ ಪ್ರವೇಶಿಸುವ ಜನರಿಗೆ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಕಡ್ಡಾಯವಾಗಿರಬೇಕು ಎಂದು ಹೇಳಿದರು. ತಮ್ಮ ಗ್ರಾಮಕ್ಕೆ ಪ್ರವೇಶಿಸುವ ವ್ಯಕ್ತಿಯು ಕ್ವಾರಂಟೈನ್ ನಲ್ಲಿ ಇರುವಂತೆ ನೋಡಿಕೊಳ್ಳುವುದು ಪಂಚಾಯತಿ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
  • ಅರುಣಾಚಲ ಪ್ರದೇಶ: ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಿಗೆ ರಾಜ್ಯ ಸರ್ಕಾರವು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಸಿಕೆ ದೊರೆಯುವವರೆಗೆ ಕೋವಿಡ್-19 ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕೆಂದು ಮುಖ್ಯಮಂತ್ರಿಯವರು ನಾಗರಿಕರನ್ನು ಕೋರಿದ್ದಾರೆ.
  • ಅಸ್ಸಾಂ: ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು COVID19 ಪರಿಸ್ಥಿತಿಯನ್ನು ತಿಳಿಯಲು ಬೊಂಗೈಗಾಂವ್ ಜಿಲ್ಲೆಯ ಕಂಟೈನ್ಮೆಂಟ್ ವಲಯಗಳು, ಕ್ವಾರಮಟೈನ್ ಪ್ರದೇಶಗಳಿಗೆ ಭೇಟಿ ನೀಡಿದರು.
  • ಮೇಘಾಲಯ: ಇತರ ರಾಜ್ಯಗಳಲ್ಲಿ ಸಿಲುಕಿರುವ ವ್ಯಕ್ತಿಗಳು ಮೇ 5 ರಿಂದ ಮನೆಗೆ ಮರಳಲು ಪ್ರಾರಂಭಿಸುವುದರಿಂದ ಅಗತ್ಯ ಸಿದ್ಧತೆಗಾಗಿ ಷಿಲ್ಲಾಂಗ್ ಸಿವಿಲ್ ಆಸ್ಪತ್ರೆಯ ವೈದ್ಯರೊಂದಿಗೆ ಮುಖ್ಯಮಂತ್ರಿಯವರು ಪರಿಶೀಲನಾ ಸಭೆ ನಡೆಸಿದರು.
  • ಮಣಿಪುರ: ರಾಜ್ಯವು ಹಸಿರು ವಲಯದಲ್ಲಿರುವುದರ ಲಾಭವನ್ನು ಪಡೆದುಕೊಂಡು, ಲುವಾಂಗ್ಸಂಗ್ಬಾಮ್ ಬೆಟ್ಟಗಳಲ್ಲಿ ಹಣ್ಣಿನ ಸಸಿಗಳನ್ನು ನೆಡಲು ಸರ್ಕಾರ ಪ್ರಾರಂಭಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
  • ಮಿಜೋರಾಂ: ರಾಜ್ಯದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಅದರ ಉಲ್ಲಂಘನೆ ಅಪರಾಧವಾಗುತ್ತದೆ.
  • ನಾಗಾಲ್ಯಾಂಡ್: ರಾಜ್ಯದಿಂದ ಹೊರಗೆ ಸಿಲುಕಿರುವ 16,526 ಜನರಿಗೆ ಈವರೆಗೆ 6.47 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
  • ಸಿಕ್ಕಿಂ: COVID19 ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಮಾಧ್ಯಮ ವ್ಯಕ್ತಿಗಳ ಬಳಕೆಗಾಗಿ ರಾಜ್ಯಪಾಲರು ಸಿಕ್ಕಿಂನ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಗೆ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಹಸ್ತಾಂತರಿಸಿದರು.
  • ತ್ರಿಪುರ: ರಾಜ್ಯ ಸರ್ಕಾರವು 33,000 ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಹೆಚ್ಚಾಗಿ ರೈಲಿನ ಮೂಲಕ ಕಳುಹಿಸಿದೆ.
  • ಮಹಾರಾಷ್ಟ್ರ: 678 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸಂಖ್ಯೆ 12,974 ಕ್ಕೆ ಮತ್ತು ಸಾವುಗಳು 548 ಕ್ಕೆ ತಲುಪಿವೆ. ಮುಂಬೈನಲ್ಲಿ 441 ಹೊಸ ಪ್ರಕರಣಗಳು ಮತ್ತು 21 ಸಾವುಗಳು ಸಂಭವಿಸಿವೆ. ಮುಂಬೈನಲ್ಲಿಯೇ ಒಟ್ಟು 8,800 ಪ್ರಕರಣಗಳು ದಾಖಲಾಗಿವೆ. 10,223 ಪಾಸಿಟಿವ್ ಪ್ರಕರಣಗಳೊಂದಿಗೆ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶವು ರಾಜ್ಯದ ಎಲ್ಲಾ ಪಾಸಿಟಿವ್ ಪ್ರಕರಣಗಳಲ್ಲಿ ಶೇ. 80 ರಚ್ಟು ಹೊಂದಿದೆ.
  • ಗುಜರಾತ್: ಗುಜರಾತ್ನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 5,428 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 290 ಆಗಿದೆ, ಇದು ಮಹಾರಾಷ್ಟ್ರದ ನಂತರ ದೇಶದ ಎರಡನೇ ಅತಿ ಹೆಚ್ಚು ಪ್ರಕರಣಗಳು. ಈವರೆಗೆ 1,042 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
  • ರಾಜಸ್ಥಾನ: ಜೈಪುರದಲ್ಲಿ ಕೋವಿಡ್-19 ಪ್ರಕರಣಗಳು ಇಂದು 1,000 ದಾಟಿದೆ, ಇಂದು ವರದಿಯಾದ 12 ಹೊಸ ಪ್ರಕರಣಗಳಿಂದ ಒಟ್ಟು 1,005 ಕ್ಕೆ ತಲುಪಿವೆ. ರಾಜ್ಯದಲ್ಲಿ ಒಟ್ಟು 3,009 ಪ್ರಕರಣಗಳು ದಾಗಲಾಗಿವೆ. ಒಟ್ಟಾರೆಯಾಗಿ, ರಾಜ್ಯದಲ್ಲಿ ಇದುವರೆಗೆ 75 ಸಾವುಗಳು ವರದಿಯಾಗಿವೆ, ಜೈಪುರವೊಂದರಲ್ಲೇ 45 ಮಂದಿ ಸಾವನ್ನಪ್ಪಿದ್ದಾರೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಉಜ್ಜಯಿನಿಯು ಹೊಸ ಕೋವಿಡ್-19 ಹಾಟ್ಸ್ಪಾಟ್ ಆಗಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ವೈದ್ಯರ ವಿಶೇಷ ತಂಡವನ್ನು ಕಳುಹಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಉಜ್ಜಯಿನಿಯು 150 ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದು, 30 ಸಾವುಗಳಿಗೆ ಸಾಕ್ಷಿಯಾಗಿದೆ, ಇದು ರಾಜ್ಯದಲ್ಲಿ ಅತಿ ಹೆಚ್ಚು ಮರಣ ಪ್ರಮಾಣವನ್ನು ದಾಖಲಿಸಿದೆ. 1,568 ಪ್ರಕರಣಗಳನ್ನು ಹೊಂದಿರುವ ಇಂದೋರ್ ಅತ್ಯಂತ ಕೆಟ್ಟ ಪೀಡಿತ ನಗರವಾಗಿ ಮುಂದುವರೆದಿದೆ.
  • ಗೋವಾ: ಲಾಕ್ ಡೌನ್ ಘೋಷಣೆಯಾದ ಮಾರ್ಚ್ 24 ರಿಂದ ಗೋವಾದಲ್ಲಿ ಸಿಲುಕಿರುವ ಸುಮಾರು 90 ಪ್ರತಿಶತ ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ಸ್ಥಳಗಳಿಗೆ ಮರಳಲು ಬಯಸಿದ್ದಾರೆ ಎಂದು ಪಂಚಾಯತ್ ಮಟ್ಟದ ದತ್ತಾಂಶ ಸಂಗ್ರಹದ ಆಧಾರದ ಮೇಲೆ ರಾಜ್ಯ ಕಾರ್ಯಕಾರಿ ಸಮಿತಿ ಹೇಳಿದೆ. ನೆರೆಯ ಕರ್ನಾಟಕದ ವಲಸೆ ಕಾರ್ಮಿಕರು ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ ಮತ್ತು ಬಿಹಾರದವರು ನಂತರದ ಸ್ಥಾನದಲ್ಲಿದ್ದಾರೆ.

 

ಪಿ ಐ ಬಿ ವಾಸ್ತವ ಪರೀಶೀಲನೆ

***



(Release ID: 1621070) Visitor Counter : 249