ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ವೇಳೆ 2020ರ ಏಪ್ರಿಲ್ ನಲ್ಲಿ ಜನೌಷಧಿ ಕೇಂದ್ರಗಳಿಂದ ದಾಖಲೆಯ 52 ಕೋಟಿ ರೂ. ವಹಿವಾಟು ಸಾಧನೆ

Posted On: 03 MAY 2020 1:48PM by PIB Bengaluru

ಕೋವಿಡ್-19 ಲಾಕ್ ಡೌನ್ ವೇಳೆ 2020 ಏಪ್ರಿಲ್ ನಲ್ಲಿ ಜನೌಷಧಿ ಕೇಂದ್ರಗಳಿಂದ ದಾಖಲೆಯ 52 ಕೋಟಿ ರೂ. ವಹಿವಾಟು ಸಾಧನೆ

 

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಗಾಣೆ ಮತ್ತು ಖರೀದಿ ಸಮಸ್ಯೆಗಳ ನಡುವೆಯೇ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಪಿಎಂಬಿಜೆಎಕೆ, 2020 ಏಪ್ರಿಲ್ ತಿಂಗಳಿನಲ್ಲಿ ದಾಖಲೆಯ 52 ಕೋಟಿ ರೂ. ಮಾರಾಟ ವಹಿವಾಟು ನಡೆಸಿವೆ. 2020 ಮಾರ್ಚ್ ತಿಂಗಳಲ್ಲಿ ಕೇಂದ್ರಗಳು 42 ಕೋಟಿ ರೂ. ವಹಿವಾಟು ನಡೆಸಿದ್ದವು. 2019 ಏಪ್ರಿಲ್ ನಲ್ಲಿ 17 ಕೋಟಿ ವಹಿವಾಟನ್ನು ಇವು ನಡೆಸಿದ್ದವು.

ಕೋವಿಡ್-19 ಸಾಂಕ್ರಾಮಿಕದಿಂದ ಇಡೀ ದೇಶ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇದರಿಂದಾಗಿ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳಿಗೆ ಭಾರೀ ಬೇಡಿಕೆ ಎದುರಾಗಿದೆ. ಬೇಡಿಕೆಗಳನ್ನು ಪೂರೈಸಲು ಜನೌಷಧಿ ಕೇಂದ್ರಗಳು ದಾಖಲೆಯ 52 ಕೋಟಿ ರೂ. ವಹಿವಾಟನ್ನು ನಡೆಸಿ, 2020 ಏಪ್ರಿಲ್ ನಲ್ಲಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸಿವೆ. ಇದರಿಂದಾಗಿ ಜನೌಷಧಿ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಔಷಧಗಳು ಶೇಕಡ 50 ರಿಂದ 90ರಷ್ಟು ಕಡಿಮೆ ಬೆಲೆಗೆ ದೊರಕಿದ್ದು, ಸಾರ್ವಜನಿಕರು ಸುಮಾರು ಅಂದಾಜು 300 ಕೋಟಿ ರೂ.ಗಳನ್ನು ಉಳಿತಾಯ ಮಾಡಿದ್ದಾರೆ.

Sadananda Gowda@DVSadanandGowda

@pmbjpbppi is committed to ensure uninterrupted availability of medicines to people of the country. In spite of lockdown and problems in procurement & logistics, Janaushadhi has achieved an appreciable sales turnover of Rs 52 Cr in April 2020 as compared to Rs 42 Cr in March 2020

View image on Twitter

12

6:05 PM - May 1, 2020

Twitter Ads info and privacy

See Sadananda Gowda's other Tweets

Mansukh Mandaviya@mansukhmandviya

.@pmbjpbppi के इस संकट की घड़ी में राष्ट्रसेवा का जज्बा लिए जन-जन तक सस्ती एवं गुणवत्ता वाली दवाएं पहुंचे इसे सुनिश्चित कर रहें हैं।

निःसंदेह इन कर्म-योगियों का योगदान सराहनीय है, आइए हम सब मिलकर इन योद्धाओं को नमन करें, सम्मान करें।

Embedded video

278

8:30 AM - May 3, 2020

Twitter Ads info and privacy

139 people are talking about this

 

ದೇಶಾದ್ಯಂತ ಜನರಿಗೆ ಯಾವುದೇ ಅಡೆತಡೆ ಇಲ್ಲದೆ ಔಷಧಗಳನ್ನು ಪೂರೈಸಲು @pmbjpbppi ಬದ್ಧವಾಗಿದೆ. ಲಾಕ್ ಡೌನ್ ನಡುವೆಯೇ ಸಾರಿಗೆ ಮತ್ತು ಖರೀದಿ ಸಮಸ್ಯೆಗಳ ಮಧ್ಯೆಯೇ ಜನೌಷಧಿ ಕೇಂದ್ರಗಳು, 2020 ಮಾರ್ಚ್ ಗೆ ಹೋಲಿಸಿದರೆ 42 ಕೋಟಿ ರೂ. ಇದ್ದ ವಹಿವಾಟು 2020 ಏಪ್ರಿಲ್ ನಲ್ಲಿ 52 ಕೋಟಿ ರೂ. ವಹಿವಾಟು ನಡೆಸಿ, ದಾಖಲೆ ಮಾಡಿವೆ.

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು, ದಾಖಲೆಯ ಮಾರಾಟ ವಹಿವಾಟು ಸಾಧಿಸಿದ್ದಕ್ಕಾಗಿ ಜನೌಷಧಿ ಮಳಿಗೆಗಳ ಆಪರೇಟರ್ ಗಳನ್ನು ಅಭಿನಂದಿಸಿದ್ದಾರೆ ಮತ್ತು ದೇಶಕ್ಕೆ ಅಗತ್ಯವಿರುವ ಸಂದರ್ಭಗಳಲ್ಲಿ, ಕಷ್ಟಕರ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಶ್ರೀ ಸದಾನಂದ ಗೌಡ ಅವರು, ತಮ್ಮ ಸಚಿವಾಲಯ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ(ಪಿಎಂಬಿಜೆಪಿ) ಮೂಲಕ ದೇಶದ ಜನರಿಗೆ ಕೈಗೆಟಕುವ ದರದಲ್ಲಿ ಯಾವುದೇ ತೊಂದರೆ ಇಲ್ಲದೆ, ಔಷಧಗಳನ್ನು ಪೂರೈಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ಮಧ್ಯೆಯೇ, ಪಿಎಂಬಿಜೆಪಿ ಅಂತಹ ಗಮನಾರ್ಹ ಯೋಜನೆಗಳ ಮೂಲಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದು, ಮೂಲಕ ದೇಶಾದ್ಯಂತ ಸುಮಾರು 900 ಗುಣಮಟ್ಟದ ಜನರಿಕ್ ಔಷಧಿಗಳನ್ನು ಮತ್ತು 154 ಬಗೆಯ ಸರ್ಜಿಕಲ್ ಉಪಕರಣಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಒದಗಿಸುತ್ತಿದೆ.

ಭಾರತದಲ್ಲಿನ ಫಾರ್ಮ ಪಿಎಸ್ ಯುಗಳ ಬ್ಯೂರೋ(ಬಿಪಿಪಿಐ) ಸಿಇಒ ಸಚಿನ್ ಕುಮಾರ್ ಸಿಂಗ್, ಬಿಪಿಪಿಎಲ್ ಜನೌಷಧಿ ಸುಗಮ ಮೊಬೈಲ್ ಆಪ್ಅನ್ನು ಅಭಿವೃದ್ಧಿಪಡಿಸಿದೆ. ಇದು ಜನರಿಗೆ ತಮ್ಮ ಸಮೀಪದಲ್ಲಿರುವ ಜನೌಷಧಿ ಕೇಂದ್ರಗಳನ್ನು ಗುರುತಿಸಲು ಮತ್ತು ಕೈಗೆಟಕುವ ದರದಲ್ಲಿ ಲಭ್ಯವಿರುವ ಔಷಧಗಳು ಮತ್ತು ಅದರ ದರ ವಿವರ ದೊರಕಲಿವೆ, ಇದು ದೊಡ್ಡ ಮಟ್ಟದಲ್ಲಿ ಜನರಿಗೆ ಸಹಾಯಕವಾಗಿದೆ. ಸದ್ಯ 325000 ಜನರು ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಅವರು ಜನೌಷಧಿ ಕೇಂದ್ರಗಳನ್ನು ಗುರುತಿಸಲು ಗೂಗಲ್ ಮ್ಯಾಪ್ ಆಧರಿಸಿದ ನಕ್ಷೆಯನ್ನು ಬಳಸುವ ಬಳಕೆದಾರರ ಸ್ನೇಹಿ ಆಯ್ಕೆಗಳನ್ನು ಬಳಸುತ್ತಿದ್ದಾರೆ. ಜೊತೆಗೆ ಜನೌಷಧಿ ಜನರಿಕ್ ಔಷಧಿಗಳ ಆಯ್ಕೆ, ಬ್ರಾಂಡೆಡ್ ಔಷಧಗಳ ಎಂಆರ್ ಪಿ ದರ ಮತ್ತು ಜನರಿಕ್ ದರಗಳನ್ನು ಹೋಲಿಕೆ ಮಾಡಿ, ವಿಶ್ಲೇಷಿಸುವುದು ಮತ್ತು ಒಟ್ಟು ಉಳಿತಾಯ ಇತ್ಯಾದಿಗಳನ್ನು ಆಪ್ ಮೂಲಕ ಮಾಡುತ್ತಿದ್ದಾರೆ. ಆಪ್ ಆಂಡ್ರಾಯ್ಡ್ ಮತ್ತು -ಫೋನ್ ಎರಡೂ ಪ್ಲಾಟ್ ಫಾರಂಗಳಲ್ಲಿ ಲಭ್ಯವಿದೆ.

ಪ್ರಸ್ತುತ ದೇಶಾದ್ಯಂತ 726 ಜಿಲ್ಲೆಗಳ ವ್ಯಾಪ್ತಿಯಲ್ಲಿ 6300ಕ್ಕೂ ಅಧಿಕ ಪಿಎಂಜೆಎಕೆಗಳು ಕಾರ್ಯ ನಿರ್ವಹಿಸುತ್ತಿವೆ. ಲಾಕ್ ಡೌನ್ ಅವಧಿಯಲ್ಲಿ ಪಿಎಂಬಿಜೆಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿಯುಕ್ತ ಪೋಸ್ಟ್ ಗಳನ್ನು ಹಾಕಿ, ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದಲ್ಲದೆ, ಕೊರೊನಾ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರಿಗೆ ನೆರವಾಗುತ್ತಿದೆ.

***



(Release ID: 1620775) Visitor Counter : 182