ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಕೋವಿಡ್ ನಂತರದ ಪರಿಸ್ಥಿತಿ ಭಾರತಕ್ಕೆ ಬೃಹತ್ ಪ್ರಮಾಣದ ಬಿದಿರಿನ ಸಂಪನ್ಮೂಲದೊಂದಿಗೆ ಆರ್ಥಿಕತೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಿದೆ: ಡಾ ಜಿತೇಂದ್ರ ಸಿಂಗ್

Posted On: 03 MAY 2020 5:07PM by PIB Bengaluru

ಕೋವಿಡ್ ನಂತರದ ಪರಿಸ್ಥಿತಿ ಭಾರತಕ್ಕೆ ಬೃಹತ್ ಪ್ರಮಾಣದ ಬಿದಿರಿನ ಸಂಪನ್ಮೂಲದೊಂದಿಗೆ ಆರ್ಥಿಕತೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಿದೆ: ಡಾ ಜಿತೇಂದ್ರ ಸಿಂಗ್

 

ಕೋವಿಡ್ ನಂತರ ಭಾರತಕ್ಕೆ ಆರ್ಥಿಕತೆ ಹೆಚ್ಚಿಸುವ ಅತ್ಯಂತ ಪ್ರಮುಖ ಉತ್ಪನ್ನ ಬಿದಿರಾಗಿದೆ ಮತ್ತು ಭಾರತ ತನ್ನ ಬಿದಿರು ಸಂಪನ್ಮೂಲದೊಂದಿಗೆ ಒಂದು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಅವಕಾಶ ಕಲ್ಪಿಸಲಿದೆ ಎಂದು ಈಶಾನ್ಯ ಭಾಗದ ಅಭಿವೃದ್ಧಿ (ಡೋನೇರ್) (ಸ್ವತಂತ್ರ ಸ್ಥಾನಮಾನ) ಪ್ರಧಾನ ಮಂತ್ರಿಗಳ ಕಛೇರಿ ಸಹಾಯಕ ಸಚಿವ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರಾದ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.  

ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾದ ಬಿದಿರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಈ ಸಮಾರಂಭದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ (ಡೋನೇರ್) ಪ್ರತಿನಿಧಿಗಳು, ಕೇಂದ್ರ ಕೃಷಿ ಸಚಿವಾಲಯ ಮತ್ತು ವಿವಿಧ ಕ್ಷೇತ್ರಗಳ ಪಾಲುದಾರರು ಭಾಗವಹಿಸಿದ್ದರು. ಈಶಾನ್ಯ ಪ್ರದೇಸ ಭಾರತದ 60%  ಬಿದಿರು ಸಂಪನ್ಮೂಲವನ್ನು ಹೊಂದಿದೆ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಈ ಸರ್ಕಾರ ಕಳೆದ 6 ವರ್ಷಗಳಿಂದ ಈಶಾನ್ಯ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಅತ್ಯಂತ ಲಾಭದಾಯಕವಾಗಿದೆ. ಸ್ವಾತಂತ್ರ್ಯಾ ನಂತರದಿಂದಲೂ ದೊರೆಯದಂತಹ ಉತ್ತೇಜನವನ್ನು ಈ ಬಿದಿರು ಕ್ಷೇತ್ರಕ್ಕೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ, ಅವರು 2017 ರಲ್ಲಿ ಮೋದಿ ಸರ್ಕಾರ ತಂದಂತಹ 100 ವರ್ಷಗಳ ಪುರಾತನ ಭಾರತೀಯ ಅರಣ್ಯ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ಉಲ್ಲೇಖಿಸಿದ್ದಾರೆ, ಇದರಿಂದಾಗಿ ಬಿದಿರಿನ ಮೂಲಕ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಮನೆಯಲ್ಲೇ ಬೆಳೆದ ಬಿದಿರಿಗೆ ವಿನಾಯ್ತಿ ನೀಡಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.           

https://ci3.googleusercontent.com/proxy/mLTJrbgmR-3VxdcfaraZ3NVJBn_LBPZAi3XuxfzghFu3gEVbSNuxvKoSObDShgnJRXazaCD8mNBS-7msrsUlrNeP0PGvYfLI2O16NHq_nncFlBotAjP4=s0-d-e1-ft#https://static.pib.gov.in/WriteReadData/userfiles/image/image001XUUJ.jpg

ಲಾಕ್ ಡೌನ್ ನಡುವೆಯೂ ಏಪ್ರೀಲ್ 16 ರಂದು ಗೃಹಸಚಿವಾಲಯ ವಿವಿಧ ಕ್ಷೇತ್ರಗಳಿಗೆ ನಿಯಮಿತ ಚಟುವಟಿಕೆಗಳ ಅವಕಾಶವನ್ನು ನೀಡಿತ್ತು, ಜೊತೆಗೆ ಬಿದಿರು ಸಂಬಂಧಿತ ಚಟುವಟಿಕೆಗಳಾದ ನಾಟಿ ಮಾಡುವುದು, ಪ್ರಕ್ರಿಯೆ ಇತ್ಯಾದಿ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಬಿದಿರಿನ ಪ್ರಚಾರಕ್ಕೆ ಮೋದಿ ಸರ್ಕಾರ ೆಷ್ಟು ಮಹತ್ವ ನೀಡುತ್ತಿದೆ ಎಂಬುದನ್ನು ಕಾಣಬಹುದಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ಭಾರತದಲ್ಲಿ ಗಂಧದ ಕಡ್ಡಿಯ ವಾರ್ಷಿಕ ಅವಶ್ಯಕತೆ ಸುಮಾರು 2,30,000 ಇದೆ ಮತ್ತು ಇದರ ಮಾರುಕಟ್ಟೆ ಮೌಲ್ಯ ಸುಮಾರು ರೂ. 5000 ಕೋಟಿ ಆದರೆ ನಾವು ಚೀನಾ ಮತ್ತು ವಿಯೇಟ್ನಾಂ ನಂತಹ ದೇಶಗಳಿಂದ ಇದರ ಕಚ್ಚಾ ಸಾಮಗ್ರಿಗಳ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂಬುದು ಒಂದು ವಿಪರ್ಯಾಸ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಕೋವಿಡ್ ನಂತರದ ದಿನಗಳಲ್ಲಿ ಮತ್ತು ಬದಲಾದ ಸನ್ನಿವೇಶಗಳಲ್ಲಿ ಜಾಗತಿಕ ಸ್ಪರ್ಧೆಗೆ ಭಾರತ ಸ್ವಾವಲಂಬಿಯಾಗಿ ಭಾಗವಹಿಸಲು ಸಹಾಯ ಮಾಡಲು ಈಶಾನ್ಯ ರಾಜ್ಯಗಳಿಗೆ ಇದೊಂದು ಅವಕಾಶವಾಗಿದೆ ಎಂದು ಸಹ ಅವರು ಹೇಳಿದರು

ಮುಂಬರುವ ದಿನಗಳಲ್ಲಿ ಈಶಾನ್ಯ ಸಚಿವಾಲಯ ಬಿದಿರು ಉತ್ಪಾದನೆ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡಲು ಸಮಯೋಚಿತ ಯೋಜನೆ ರೂಪಿಸಲು ಪ್ರಯತ್ನಿಸುತ್ತಿದೆ ಮತ್ತು ಈ ವಲಯದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ (ಪಿಪಿಪಿ) ಕರ್ಯಸಾಧ್ಯತೆಗಳನ್ನು ರೂಪಿಸಲಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಜೈವಿಕ ಡಿಸೇಲ್ ಮತ್ತು ಹಸಿರು ಇಂಧನ, ಮರದ ದಿಮ್ಮಿಗಳು ಮತ್ತು ಪ್ಲೈವುಡ್ ಸೇರಿದಂತೆ ಬಿದಿರನ್ನು ವಿವಿಧ ಉತ್ಪನ್ನಗಳಾಗಿ ಸಂಸ್ಕರಿಸಬಹುದು. ಇದರಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು  ಸೃಷ್ಟಿಸುವುದರ ಜೊತೆಗೆ ಆರ್ಥಿಕತೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಬಹುದು ಎಂದು ಅವರು ಹೇಳಿದರು.

ಡೊನೇರ್ ನ ವಿಶೇಷ ಕಾರ್ಯದರ್ಶಿ ಇಂದೇವರ್ ಪಾಂಡೆ, ಕೇಂದ್ರ ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ  ಅಲ್ಕಾ ಭಾರ್ಗವ್, ಡೊನೇರ್ ನ ಜಂಟಿ ಕಾರ್ಯದರ್ಶಿ ರಾಂ ವೀರ್ ಸಿಂಗ್, ಸಿಬಿಟಿಸಿ ಮತ್ತು ಈಶಾನ್ಯ ಕರಕುಶಲ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮ (ಎನ್ ಇ ಹೆಚ್ ಹೆಚ್ ಡಿ ಸಿ ) ಯ ಎಂಡಿ ಶೈಲೇಂದ್ರ ಚೌಧರಿ ಮತ್ತು ರಾಷ್ಟ್ರೀಯ ಬಿದಿರು ಯೋಜನೆ ಸದಸ್ಯರು ಹಾಗೂ ಮಾಜಿ ಸಚಿವರಾದ ಅಣ್ಣಾಸಾಹೇಬ್ ಎಂ ಕೆ ಪಾಟೀಲ್ ಅವರು ಈ ಸಭೆಯಲ್ಲಿ ಮತನಾಡಿದರು. ಭಾರತೀಯ ಹಸಿರು ಇಂಧನ ಒಕ್ಕೂಟದ (ಐ ಎಫ್ ಜಿ ಇ) ಮಹಾ ನಿರ್ದೇಶಕರಾದ ಸಂಜಯ್ ಗಂಜು ಅವರು ಸಮಾವೇಶದ ನೇತೃತ್ವವಹಿಸಿದ್ದರು.

***


(Release ID: 1620762) Visitor Counter : 270