ಪ್ರಧಾನ ಮಂತ್ರಿಯವರ ಕಛೇರಿ

ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

Posted On: 01 MAY 2020 9:45PM by PIB Bengaluru

ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

 

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ಅಗತ್ಯ ಸುಧಾರಣೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ನಡೆಸಿದರುಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಆನ್ಲೈನ್ ತರಗತಿಗಳುಶಿಕ್ಷಣ ಪೋರ್ಟಲ್ ಮತ್ತು ಸಮರ್ಪಿತ ಶಿಕ್ಷಣ ಚಾನೆಲ್ಗಳಲ್ಲಿ ತರಗತಿವಾರು ಪ್ರಸಾರ ಮುಂತಾದ ತಂತ್ರಜ್ಞಾನದ ಬಳಕೆಯಿಂದ ಕಲಿಕೆ ಮತ್ತು ಹೊಂದಾಣಿಕೆಯನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಯಿತು.

ಬಹುಭಾಷಿಕ, 21 ನೇ ಶತಮಾನದ ಕೌಶಲ್ಯಗಳುಕ್ರೀಡೆ ಮತ್ತು ಕಲೆಯ ಸಂಯೋಜನೆಪರಿಸರ ಸಮಸ್ಯೆಗಳು ಇತ್ಯಾದಿಗಳನ್ನು ಕೇಂದ್ರೀಕರಿಸಿದ ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಶಿಕ್ಷಣದಲ್ಲಿ ಏಕರೂಪತೆಯನ್ನು ತರುವತ್ತ ಗಮನ ಹರಿಸಲಾಯಿತುಶಾಲೆಯಲ್ಲಿ ಮತ್ತು ಉನ್ನತ ಮಟ್ಟದ ಶಿಕ್ಷಣದಲ್ಲಿ ತಂತ್ರಜ್ಞಾನದ ವಿವಿಧ ವಿಧಾನಗಳು - ಅಂದರೆ ಆನ್ಲೈನ್ ಮೋಡ್ಟಿವಿ ಚಾನೆಲ್ಗಳುರೇಡಿಯೋಪಾಡ್ಕಾಸ್ಟ್ಗಳು ಇತ್ಯಾದಿಗಳ ಬಳಕೆ ಮತ್ತು ಪ್ರೋತ್ಸಾಹದ ಬಗ್ಗೆ ವಿವರವಾಗಿ ಚರ್ಚಿಸಲಾಯಿತುಸಮಕಾಲೀನ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ಪರಿಣಾಮಕಾರಿಅಂತರ್ಗತ ಶಿಕ್ಷಣದ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಜಾಗತಿಕ ಮಾನದಂಡಳಿಗೆ ಸಮನಾಗಿ ಮಾಡುವ ಮೂಲಕ ಉನ್ನತ ಶಿಕ್ಷಣದ ಪರಿಸ್ಥಿತಿಯನ್ನು ಸುಧಾರಿಸುವುದುಒಟ್ಟಾರೆಯಾಗಿಬಾಲ್ಯದ ಆರೈಕೆ ಮತ್ತು ಶಿಕ್ಷಣತಳಮಟ್ಟದ ಸಾಕ್ಷರತೆ ಮತ್ತು ಸಮಕಾಲೀನ ಶಿಕ್ಷಣಶಾಸ್ತ್ರವನ್ನು ಅಳವಡಿಸಿಕೊಳ್ಳುವುದುಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಕಾಪಾಡುವುದು ಶಿಕ್ಷಣದ ಆರಂಭಿಕ ವೃತ್ತಿಪರತೆಗೆ ವಿಶೇಷ ಗಮನವನ್ನು ನೀಡುವ ಬಗ್ಗೆ ಚರ್ಚಿಸಲಾಯಿತು.

ಭಾರತವನ್ನು ‘ಜಾಗತಿಕ ಜ್ಞಾನದ ಸೂಪರ್ ಪವರ್’ ಆಗಿ ಪರಿವರ್ತಿಸಲುಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ಮೂಲಕ ಜ್ಞಾನ ಸಮಾಜವನ್ನು ಸೃಷ್ಟಿಸಲು ಶೈಕ್ಷಣಿಕ ಸುಧಾರಣೆಗಳನ್ನು ತರಲು ನಿರ್ಧರಿಸಲಾಯಿತು.

 ಎಲ್ಲಾ ಗುರಿಗಳನ್ನು ಸಾಧಿಸಲು ಮತ್ತು ದಕ್ಷ ಶೈಕ್ಷಣಿಕ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಉತ್ತೇಜಿಸಲಾಗುತ್ತದೆ.

***(Release ID: 1620303) Visitor Counter : 36