ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಎಂ.ಎಸ್‌.ಎಂ.ಇ. ಗಳ ಯೋಜನೆ, ಚಿಂತನೆ, ನಾವಿನ್ಯತೆ ಮತ್ತು ಸಂಶೋಧನೆಗಳ ಕುರಿತ ನೂತನ ಜಾಲತಾಣಕ್ಕೆ ಸಚಿವ ಶ್ರೀ ನಿತಿನ್ ಗಡ್ಕರಿ ಚಾಲನೆ

Posted On: 30 APR 2020 3:56PM by PIB Bengaluru

ಎಂ.ಎಸ್‌.ಎಂ.ಇ. ಗಳ ಯೋಜನೆ, ಚಿಂತನೆ, ನಾವಿನ್ಯತೆ ಮತ್ತು ಸಂಶೋಧನೆಗಳ ಕುರಿತ ನೂತನ ಜಾಲತಾಣಕ್ಕೆ ಸಚಿವ ಶ್ರೀ ನಿತಿನ್ ಗಡ್ಕರಿ ಚಾಲನೆ

ಅಸ್ತಿತ್ವದಲ್ಲಿರುವ ಮತ್ತು ಮಹತ್ವಾಕಾಂಕ್ಷೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿವರ್ತನೆಗೆ ಪ್ರಾಮುಖ್ಯತೆ ನೀಡುತ್ತಿರುವುದನ್ನು ಎಂ.ಎಸ್‌.ಎಂ.ಇ. ನೂತನ ಜಾಲತಾಣ ಸಾಬೀತುಪಡಿಸುತ್ತಿದೆ: ಸಚಿವ ಶ್ರೀ ನಿತಿನ್ ಗಡ್ಕರಿ

 

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂ.ಎಸ್‌.ಎಂ.ಇ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ನಾಗ್ಪುರದಿಂದ ವಿಡಿಯೋ ಸಂವಾದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಎಂ.ಎಸ್‌.ಎಂ.ಇ.ಗಳಲ್ಲಿ ಲಭ್ಯ ಯೋಜನೆಗಳು, ಚಿಂತನೆ/ಐಡಿಯಾಸ್, ನಾವಿನ್ಯತೆಗಳು/ಇನ್ನೋವೇಶನ್ ಮತ್ತು ಸಂಶೋಧನಾ ಜಾಲತಾಣ http://ideas.msme.gov.in/ ನ್ನು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಎಂ.ಎಸ್‌.ಎಂ.ಇ ರಾಜ್ಯ ಸಚಿವ ಶ್ರೀ ಪ್ರತಾಪ್ ಚಂದ್ರ ಸರಂಗಿ, ಕಾರ್ಯದರ್ಶಿ ಎಂಎಸ್ಎಂಇ ಡಾ.ಅರುಣ್ ಕುಮಾರ್ ಪಾಂಡ ಮತ್ತು ಡಿಸಿ, ಎಂಎಸ್ಎಂಇ ಶ್ರೀ ರಾಮ್ ಮೋಹನ್ ಮಿಶ್ರಾ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಈ ಜಾಲತಾಣವು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಎಲ್ಲಾ ಯೋಜನೆಗಳಿಗೆ ಮಾಹಿತಿ ಪೂರೈಕೆ ಜೊತೆಗೆ ಒಂದಡೆಯ ಪ್ರವೇಶ ಅವಕಾಶವನ್ನು ನೀಡುತ್ತದೆ. ಈ ವಲಯದಲ್ಲಿ ಚಿಂತೆ/ಐಡಿಯಾಸ್, ನಾವಿನ್ಯತೆ/ ಇನ್ನೋವೇಶನ್ಸ್ ಮತ್ತು ಸಂಶೋಧನೆಗಳನ್ನು ಅಪ್‌ಲೋಡ್ ಮಾಡಲು ಈ ಜಾಲತಾಣ ಅವಕಾಶ ಹೊಂದಿದೆ. ಐಡಿಯಾಸ್‌ನ ಕ್ರೌಡ್ ಸೋರ್ಸಿಂಗ್ ಮಾತ್ರವಲ್ಲದೆ ಕ್ರೌಡ್ ಸೋರ್ಸಿಂಗ್ ಮೂಲಕ ಆಲೋಚನೆಗಳ ಮೌಲ್ಯಮಾಪನ ಮಾಡುವುದು ಮತ್ತು ರೇಟಿಂಗ್ ಮಾಡುವ ವಿಶಿಷ್ಟ ಲಕ್ಷಣಗಳನ್ನು ಈ ಜಾಲತಾಣ ಹೊಂದಿದೆ. ಇದು ವೆಂಚರ್ ಹೂಡಿಕೆ/ ಬಂಡವಾಳ, ವಿದೇಶಿ ಸಹಯೋಗ ಇತ್ಯಾದಿಗಳ ಒಳಹರಿವನ್ನು ಸಹ ಸುಗಮಗೊಳಿಸುತ್ತದೆ.

ಈ ಜಾಲತಾಣದ ಮಹತ್ವದ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಗಡ್ಕರಿ ಅವರು, ಇದು ತುಂಬಾ ಒಳ್ಳೆಯ ಆರಂಭವಾಗಿದೆ. ಈ ಜಾಲತಾಣವು ವಿಶೇಷವಾಗಿ ಎಂ.ಎಸ್‌.ಎಂ.ಇ.ಗಳಿಗೆ ಮತ್ತು ಸಾಮಾನ್ಯವಾಗಿ ಆರ್ಥಿಕತೆಗೆ ಹೆಚ್ಚಿನ ಪರಿವರ್ತನೆಯ ಮಹತ್ವವನ್ನು ನೀಡುತ್ತದೆ ಎಂದು ಶ್ರೀ ಗಡ್ಕರಿ ಹೇಳಿದರು. ವರ್ಗವಾರು ವರ್ಗೀಕರಣ ಮತ್ತು ಮಾಹಿತಿಯ ವಿಶ್ಲೇಷಣೆ ಮತ್ತು ಪ್ರಕಟಿಸಬಹುದಾದ ಸಾಧನೆಗಳು ಇತರರು ಯಶಸ್ವಿ ಅನುಭವಗಳಿಂದ ಪಾಠಗಳನ್ನು ಕಲಿಯಲು / ತೆಗೆದುಕೊಳ್ಳಲು ಸಚಿವರು ಸಲಹೆ ನೀಡಿದರು. ಜಾಲತಾಣವನ್ನು ಗುಣಮಟ್ಟದ ವೃತ್ತಿಪರರು ನಿರ್ವಹಿಸಬೇಕು, ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವ ಅಗತ್ಯವಿದೆ, ಸಂಶೋಧನೆ, ತಂತ್ರಜ್ಞಾನ, ನಾವೀನ್ಯತೆ ಕುರಿತು ಹೆಚ್ಚಿನ ಕೆಲಸ ಮಾಡುವ ಅವಶ್ಯಕತೆಯಿದೆ, ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೇಂದ್ರ ಸಚಿವ ಶ್ರೀ ಗಡ್ಕರಿ ಹೇಳಿದರು.

ಜಾಲತಾಣವು ಎಂ.ಎಸ್‌.ಎಂ.ಇ.ಗಳಿಗೆ ಮಾಹಿತಿ ಹಂಚಿಕೆಯ ಮೂಲಕ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ. ಇದು ಗ್ರಾಮೀಣ ಬುಡಕಟ್ಟು ಜ್ಞಾನದಂತಹ ಸಂಶೋಧನಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತದೆ, ಕೌಶಲ್ಯಗಳು ತಮ್ಮ ಜ್ಞಾನವನ್ನು ಹರಡಲು ಅವಕಾಶವನ್ನು ಪಡೆಯುತ್ತವೆ, ಅದೇ ರೀತಿ ಇದು ರೈತರಿಗೆ ತಮ್ಮ ಉತ್ಪನ್ನಗಳ ಯೋಜನೆ, ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ಸಹಾಯ ಮಾಡುತ್ತದೆ ಎಂದು ಎಂ.ಎಸ್‌.ಎಂ.ಇ.ಗಾಗಿ ಎಂಒಎಸ್ ಶ್ರೀ ಪ್ರತಾಪ್ ಚಂದ್ರ ಸರಂಗಿ ಅವರು ಹೇಳಿದರು.

ಯಾರು ಬೇಕಾದರೂ ಕಲ್ಪನೆ, ನಾವೀನ್ಯತೆ ಅಥವಾ ಸಂಶೋಧನೆ ಹೊಂದಿರುವ ಬಳಕೆದಾರರು ಈ ವೇದಿಕೆಯಲ್ಲಿ ಹಂಚಿಕೊಳ್ಳಬಹುದು, ಅದನ್ನು ಸಂಬಂಧಪಟ್ಟ ಅಧಿಕಾರಿ ಪರಿಶೀಲಿಸುತ್ತಾರೆ ಮತ್ತು ಅವುಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರಕಟಿಸುತ್ತಾರೆ. ನೋಂದಾಯಿತ ಬಳಕೆದಾರರು ತಮ್ಮ ಉತ್ತಮ ಆಲೋಚನೆಗಳನ್ನು ಕ್ರೌಡ್ ಸೋರ್ಸಿಂಗ್ ಮಾಡಬಹುದು ಮತ್ತು ವೆಂಚರ್ ಹೂಡಿಕೆ, ಬಂಡವಾಳಶಾಹಿ, ಬಳಕೆದಾರರ ಕಲ್ಪನೆ, ನಾವೀನ್ಯತೆ ಮತ್ತು ಸಂಶೋಧನೆಯೊಂದಿಗೆ ಪರಸ್ಪರ ಸಂಪರ್ಕ ಸಾಧಿಸಬಹುದು.

ಐಡಿಯಾ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ಆನ್‌ಲೈನ್ ಫಾರ್ಮ್‌ಗಳನ್ನು 5-6 ನಿಮಿಷಗಳಲ್ಲಿ ಸುಲಭವಾಗಿ ಇದರಲ್ಲಿ ಭರ್ತಿ ಮಾಡಬಹುದು. ವ್ಯಕ್ತಿಯು ತನ್ನ ಕಾರ್ಯಕ್ಷೇತ್ರ/ಪ್ರದೇಶಗಳನ್ನು (ಕ್ರೆಡಿಟ್ / ಹಣಕಾಸು, ಮಾನವ ಬಂಡವಾಳ ಅಭಿವೃದ್ಧಿ, ತಂತ್ರಜ್ಞಾನ, ಮೂಲಸೌಕರ್ಯ, ಮಾರ್ಕೆಟಿಂಗ್, ನೀತಿ, ಇತ್ಯಾದಿ) ಆಯ್ಕೆ ಮಾಡಬಹುದು. ವ್ಯಕ್ತಿಯು ತನ್ನ ವಲಯವನ್ನು (ಗ್ರಾಮೀಣ ತಂತ್ರಜ್ಞಾನ ನಾವೀನ್ಯತೆ, ತ್ಯಾಜ್ಯದಿಂದ ಸಂಪತ್ತು, ಕೃಷಿ-ಸಂಸ್ಕರಣೆ, ಉತ್ಪಾದನೆ, ಸೇವೆಗಳು, ಖಾದಿ, ಕಾಯಿರ್, ಇತ್ಯಾದಿ) ಸೂಚಿಸಬಹುದು

ಹೆಚ್ಚು ಬಳಕೆದಾರ ಸ್ನೇಹಿಯಾಗಲು ಐಡಿಯಾ (ಪರಿಕಲ್ಪನೆ, ಮೂಲಮಾದರಿ ಅಥವಾ ವಾಣಿಜ್ಯೀಕೃತ) ಹಂತವನ್ನು ಸೂಚಿಸುವ ಸೌಲಭ್ಯವನ್ನು ಈ ಜಾಲತಾಣ ಹೊಂದಿದೆ. ಐಡಿಯಾ ಮತ್ತು ವಿಡಿಯೋ ಮತ್ತು ಸೋಷಿಯಲ್ ಮೀಡಿಯಾ ಲಿಂಕ್‌ಗಳಿಗೆ ಸಂಬಂಧಿಸಿದ ಪೇಪರ್‌ಗಳು ಮತ್ತು ಫೋಟೋವನ್ನು ಸಹ ಅಪ್‌ಲೋಡ್ ಮಾಡಬಹುದು.

ವಾಣಿಜ್ಯೀಕರಣಕ್ಕೆ ಸಿದ್ಧವಾಗಿರುವ ಚಿಂತನೆ/ಐಡಿಯಾಸ್, ನಾವೀನ್ಯತೆ ಮತ್ತು ಸಂಶೋಧನೆಗಳ ಮಾಹಿತಿಗಳ ಸಂಗ್ರಹಕೋಶವಾಗಿ (ಒನ್ ಸ್ಟಾಪ್ ಕಂಪೆಂಡಿಯಂ ) ಸಂಭಾವ್ಯ ಉದ್ಯಮಿಗಳಿಗೆ ಜಾಲತಾಣ ಪ್ರಯೋಜನವನ್ನು ನೀಡುತ್ತದೆ. ರೇಟಿಂಗ್ ಆಫ್ ಐಡಿಯಾಸ್ ಅನ್ನು ಸಾರ್ವಜನಿಕವಾಗಿ ನೋಡಬಹುದು, ಇದು ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ವೆಂಚರ್ ಕ್ಯಾಪಿಟಲಿಸ್ಟ್ ಗಳ ಐಡಿಯಾ ಅಥವಾ ನಾವೀನ್ಯತೆಯನ್ನು ಹೊಂದಿರುವ ವ್ಯಕ್ತಿ ಮತ್ತು ಎಂ.ಎಸ್‌.ಎಂ.ಇ ಜೊತೆ ಸಂವಹನ ನಡೆಸಬಹುದು. ಭವಿಷ್ಯದಲ್ಲಿ ಬ್ಯಾಂಕುಗಳು, ಸರ್ಕಾರಿ ಲ್ಯಾಬ್‌ಗಳು, ಇನ್ಕ್ಯುಬೇಟರ್ಗಳು, ವೇಗವರ್ಧಕಗಳು, ವಿದೇಶಿ ಸಹಯೋಗವನ್ನು ಸೇರಿಸಲು ಜಾಲತಾಣದಲ್ಲಿ ಆಯ್ಕೆಗಳು ಲಭ್ಯವಿದೆ.

***



(Release ID: 1620241) Visitor Counter : 273