ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌.ಟಿ.ಎ) ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ/ ಪರಿಷ್ಕರಣೆ

Posted On: 30 APR 2020 7:42PM by PIB Bengaluru

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌.ಟಿ.ಎ) ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ/ ಪರಿಷ್ಕರಣೆ

 

ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿ ನಮೂನೆಗಳನ್ನು ಸಲ್ಲಿಸುವ ದಿನಾಂಕಗಳನ್ನು ವಿಸ್ತರಿಸಲು / ಪರಿಷ್ಕರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸಲಹೆ ನೀಡಿದರು. ಅದರಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿ ನಮೂನೆಗಳನ್ನು ಸಲ್ಲಿಸುವ ದಿನಾಂಕಗಳನ್ನು ಮತ್ತಷ್ಟು ವಿಸ್ತರಿಸಿದೆ / ಪರಿಷ್ಕರಿಸಿದೆ.

 

ವಿಸ್ತೃತ / ಪರಿಷ್ಕೃತ ದಿನಾಂಕಗಳು ಈ ಕೆಳಗಿನಂತಿವೆ-

 

ಕ್ರ. ಸ

ಪರೀಕ್ಷೆ

ಪ್ರಸ್ತುತ ದಿನಾಂಕ

ವಿಸ್ತರಿಸಿದ / ಪರಿಷ್ಕರಿಸಿದ ದಿನಾಂಕಗಳು*

ರಿಂದ

ವರೆಗೆ

ರಿಂದ

ವರೆಗೆ

 

01

ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ (ಎನ್‌ಸಿಎಚ್‌ಎಂ) ಜೆಇಇ -2020

01.01.2020

30.04.2020

01.03.2020

15.05.2020

 

02

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಪ್ರವೇಶ ಪರೀಕ್ಷೆ -2020 ಪಿಎಚ್‌ಡಿ
ಮತ್ತು
ಓಪನ್‌ಮ್ಯಾಟ್ (ಎಂಬಿಎ

28.02.2020

30.04.2020

01.03.2020

15.05.2020

 

03

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) -2020

01.03.2020

30.04.2020

01.03.2020

15.05.2020

 

 

04

ಜವಾಹರಲಾಲ್ ನೆಹರು

 

ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಜೆಎನ್‌ಯುಇಇ) -2020

02.03.2020

30.04.2020

02.03.2020

15.05.2020

 

05

ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (ಎ.ಐ.ಎ.ಪಿ.ಜಿ.ಇ.ಟಿ)-2020

01.05.2020

31.05.2020

06.05.2020

05.06.2020

 

‘*’ ಆನ್‌ಲೈನ್ ಅರ್ಜಿ ನಮೂನೆಗಳ ಸಲ್ಲಿಕೆಯನ್ನು ನಮೂದಿಸಿದ ದಿನಾಂಕಗಳ ಸಂಜೆ 04.00 ರವರೆಗೆ ಸ್ವೀಕರಿಸಲಾಗುವುದು ಮತ್ತು ಶುಲ್ಕವನ್ನು 11.50 ರಾತ್ರಿ ವರೆಗೆ ಸಲ್ಲಿಸಬಹುದು

ಅಗತ್ಯ ಶುಲ್ಕವನ್ನು ಕ್ರೆಡಿಟ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮತ್ತು ಪೇಟಿಮ್ ಮೂಲಕ ಪಾವತಿಸಬಹುದು.

ಪ್ರವೇಶ ಕಾರ್ಡ್‌ಗಳ ಡೌನ್‌ಲೋಡ್ ದಿನಾಂಕ ಮತ್ತು ಪರೀಕ್ಷೆಯ ದಿನಾಂಕಗಳನ್ನು ನಮೂದಿಸುವ ವಿವರವಾದ ವೇಳಾಪಟ್ಟಿಯನ್ನು 15.05.2020 ರ ನಂತರ ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ ಆಯಾ ಪರೀಕ್ಷಾ ವೆಬ್‌ಸೈಟ್ (ಗಳು) ಮತ್ತು www.nta.ac.in ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.

ಶೈಕ್ಷಣಿಕ ಕ್ಯಾಲೆಂಡರ್ ಮತ್ತು ವೇಳಾಪಟ್ಟಿಯ ಮಹತ್ವವನ್ನು ಎನ್‌ಟಿಎ ಅರ್ಥಮಾಡಿಕೊಂಡಿದೆ, ಆದರೆ ಇದು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಯೋಗಕ್ಷೇಮದ ಬಗ್ಗೆ ಸಮಾನವಾಗಿ ಕಾಳಜಿ ಕೂಡಾ ವಹಿಸುತ್ತದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಚಿಂತಿಸಬಾರದು ಎಂದು ಎನ್‌ಟಿಎ ನಿರೀಕ್ಷಿಸುತ್ತದೆ. ಇದಲ್ಲದೆ, ಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ತಯಾರಿಗಾಗಿ ಈ ಸಮಯವನ್ನು ಬಳಸಿಕೊಳ್ಳಲು ಸಹಾಯ ಮಾಡಲು ಮತ್ತು ಕಲಿಕೆಯ ಅಂತರಗಳು ಯಾವುದಾದರೂ ಇದ್ದರೆ ಅದನ್ನು ಮುಚ್ಚುವ ಸಲುವಾಗಿ ವಿಮರ್ಶಾತ್ಮಕ ಪರಿಕಲ್ಪನೆಗಳತ್ತ ಗಮನಹರಿಸಲು ಪೋಷಕರಿಗೆ ವಿನಂತಿಸಲಾಗಿದೆ. ಎನ್‌ಟಿಎ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಕಾಲಿಕ ಪರಿಷ್ಕೃತ ಮಾಹಿತಿ ನೀಡಿ ಮತ್ತು ಸಾಕಷ್ಟು ಪೂರ್ವ ಸಮಯ ನೀಡುವ ಮೂಲಕ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ.

ಅಭ್ಯರ್ಥಿಗಳು ಮತ್ತು ಅವರ ಪೋಷಕರು ಇತ್ತೀಚಿನ ಪರಿಷ್ಕೃತ ಮಾಹಿತಿಗಾಗಿ ಆಯಾ ಪರೀಕ್ಷಾ ವೆಬ್‌ಸೈಟ್ (ಗಳು) ಮತ್ತು www.nta.ac.in ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಯಾವುದೇ ಸ್ಪಷ್ಟೀಕರಣಕ್ಕಾಗಿ ವಿದ್ಯಾರ್ಥಿಗಳು ದೂ. 8287471852, 8178359845, 9650173668, 9599676953, 8882356803 ಗೆ ಸಂಪರ್ಕಿಸಬಹುದು.

***


(Release ID: 1619916) Visitor Counter : 306