ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
30 APR 2020 5:37PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19ರ ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಹೊರತಾದ ಆರೋಗ್ಯ ಸೇವೆಗಳನ್ನು ವಿಶೇಷವಾಗಿ ಥಲಸ್ಸೆಮಿಯಾ, ಹಿಮೋಫಿಲಿಯಾ ಮತ್ತು ಸಿಕಲ್ ಸೆಲ್ ರಕ್ತಹೀನತೆಯಂತಹ ರಕ್ತದ ಕಾಯಿಲೆ ಇರುವ ಜನರಿಗೆ ರಕ್ತ ದಾನ ಮತ್ತು ರಕ್ತ ವರ್ಗಾವಣೆ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳುಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ನಿರ್ಣಾಯಕ ಸೇವೆಗಳ ಅಗತ್ಯವಿರುವ ರೋಗಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಎಲ್ಲಾ ಆರೋಗ್ಯ ಸೌಲಭ್ಯಗಳು, ವಿಶೇಷವಾಗಿ ಖಾಸಗಿ ವಲಯದಲ್ಲಿ, ಕಾರ್ಯನಿರ್ವಹಿಸುತ್ತಿರುವಂತೆ ಮತ್ತು ನಿರ್ಣಾಯಕ ಸೇವೆಗಳನ್ನು ಒದಗಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಖಾಸಗಿ ವಲಯದ ಅನೇಕ ಆಸ್ಪತ್ರೆಗಳು ತಮ್ಮ ನಿಯಮಿತ ರೋಗಿಗಳಿಗೆ ಡಯಾಲಿಸಿಸ್, ರಕ್ತ ವರ್ಗಾವಣೆ, ಕೀಮೋಥೆರಪಿ ಮತ್ತು ಸಾಂಸ್ಥಿಕ ವಿತರಣೆಗಳಂತಹ ಮುಖ್ಯವಾದ ಸೇವೆಗಳನ್ನು ನೀಡಲು ಹಿಂಜರಿಯುತ್ತಿರುವುದು ಗಮನಕ್ಕೆ ಬಂದಿದೆ ಮತ್ತು ಇದು ಸ್ವೀಕಾರಾರ್ಹವಲ್ಲ ಎಂದು ರಾಜ್ಯಗಳಿಗೆ ತಿಳಿಸಲಾಗಿದೆ. 15 ಏಪ್ರಿಲ್ 2020ರಂದು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಆರೋಗ್ಯ ಸೇವೆಗಳು ಲಾಕ್‌ಡೌನ್ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸೇವಾ ಪೂರೈಕೆದಾರರ ಸಾರಿಗೆಯನ್ನು ಸುಗಮಗೊಳಿಸಬಹುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 7 ಏಪ್ರಿಲ್2020 ರಂದು ಡಯಾಲಿಸಿಸ್‌ಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ದಲ್ಲಿ ವಿವರವಾದ ಮಾರ್ಗಸೂಚಿಯನ್ನು ಮತ್ತು 9 ಏಪ್ರಿಲ್ 2020 ರಂದು ರಕ್ತದಾನ ಮತ್ತು ವರ್ಗಾವಣೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇವುಗಳು ಈ ಕೊಂಡಿಯಲ್ಲಿ ಲಭ್ಯವಿವೆ https://www.mohfw.gov.in .
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ಆರೋಗ್ಯ ಸೇವೆಗಳನ್ನು ತಲುಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದ ಟಿಪ್ಪಣಿಯನ್ನು 20 ಏಪ್ರಿಲ್ 2020ರಂದು ನೀಡಲಾಗಿದೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್), ರೋಗನಿರೋಧಕ ಶಕ್ತಿ, ಟಿಬಿ, ಕುಷ್ಠರೋಗ ಮತ್ತು ವೆಕ್ಟರ್‌ನಿಂದ ಹರಡುವ ರೋಗಗಳಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಮತ್ತು ಡಯಾಲಿಸಿಸ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವುದು ಇದರಲ್ಲಿ ಸೇರಿದೆ.
17 ಏಪ್ರಿಲ್ 2020ರಂದು ಐಸಿಎಂಆರ್ ಹೊರಡಿಸಿದ ಕೋವಿಡ್-19 ಪರೀಕ್ಷೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಪ್ರೋಟೋಕಾಲ್ ಅನ್ನು ಆರೋಗ್ಯ ಸೇವಾ ಪೂರೈಕೆದಾರರಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಬೇಕು ಮತ್ತು ಕೋವಿಡ್-19 ಪರೀಕ್ಷೆಯು ನಿಯಮಾವಳಿ ಪ್ರಕಾರ ಇರಬೇಕು. ಆರೋಗ್ಯ ಸೇವೆ ಒದಗಿಸುವವರು ವೈಯಕ್ತಿಕ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಆರೋಗ್ಯ ಸಚಿವಾಲಯದ 24 ಮಾರ್ಚ್ 2020ರ ಮಾರ್ಗಸೂಚಿಗಳ ಪ್ರಕಾರ ಪಿಪಿಇ ಅನ್ನು ತರ್ಕಬದ್ಧವಾಗಿ ಬಳಸಬೇಕಾಗುತ್ತದೆ. ಸೋಂಕು ತಡೆಗಟ್ಟುವಿಕೆ ಮತ್ತು ಆರೋಗ್ಯ ಸೌಲಭ್ಯಗಳಲ್ಲಿನ ನಿಯಂತ್ರಣದ ಮಾರ್ಗಸೂಚಿಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಬೇಕು.
ಕೋವಿಡ್ ಹೊರತಾದ ಆರೋಗ್ಯ ಸೌಲಭ್ಯದಲ್ಲಿ ಶಂಕಿತ ಅಥವಾ ದೃಢೀರಿಸಲ್ಪಟ್ಟ ಕೋವಿಡ್-19 ಪ್ರಕರಣ ಪತ್ತೆಯಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 20 ಏಪ್ರಿಲ್ 2020ರಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಿರ್ಣಾಯಕ ಸೇವೆಗಳನ್ನು ವಿಶೇಷವಾಗಿ ಪರೀಕ್ಷೆಯ ಒತ್ತಾಯದ ಕಾರಣದಿಂದಾಗಿ ನಿರಾಕರಿಸುವ ಕುರಿತಾದ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಆರೋಗ್ಯ ಸಿಬ್ಬಂಧಿಯವರೊಂದಿಗೆ ಸಮಾಲೋಚಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಇದರಿಂದ ಅವರ ಅನುಮಾನಗಳು ಕಡಿಮೆಯಾಗುತ್ತದೆ ಮತ್ತು ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತವೆ.
ಈವರೆಗೆ ಒಟ್ಟು 8,324 ಜನರನ್ನು ಗುಣಪಡಿಸಲಾಗಿದೆ. ಇದರಿಂದ ನಮ್ಮ ಒಟ್ಟು ಚೇತರಿಕೆ ಪ್ರಮಾಣವು 25.19% ಆಗಿದೆ. ದೃಢ ಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 33,050 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 1718 ಹೆಚ್ಚಳ ಕಂಡುಬಂದಿದೆ.
ಇಲ್ಲಿಯವರೆಗಿನ ಸಾವುಗಳನ್ನು ವಿಶ್ಲೇಷಿಸಿದಾಗ, ಪ್ರಕರಣದ ಸಾವಿನ ಪ್ರಮಾಣ 3.2% ಎಂದು ಗಮನಿಸಲಾಗಿದೆ, ಅದರಲ್ಲಿ 65% ಪುರುಷರು ಮತ್ತು 35% ಮಹಿಳೆಯರು. ವಯಸ್ಸಿನ ವಿತರಣೆಯನ್ನು ನೋಡಿದರೆ, 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 14% ರಷ್ಟಿದ್ದಾರೆ; 45 ರಿಂದ 60 ವರ್ಷ ವಯಸ್ಸಿನವರ ನಡುವೆ 34.8%; 51.2% ರಷ್ಟು , 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು 42%ರಷ್ಟು, 60-75 ವರ್ಷ ವಯಸ್ಸಿನವರು 9.2% ರಷ್ಟು, 75 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆಗಳನ್ನು ಹೊಂದಿರುವವರು 78% ರಷ್ಟಿದ್ದಾರೆ.
ದೇಶಾದ್ಯಂತ ದ್ವಿಗುಣಗೊಳಿಸುವ ದರದ ವಿಶ್ಲೇಷಣೆಯು ರಾಷ್ಟ್ರೀಯ ಸರಾಸರಿ ಪ್ರಸ್ತುತ 11 ದಿನಗಳು ಲಾಕ್‌ಡೌನ್‌ಗೆ ದಿನಗಳ ಮೊದಲು ಹೋಲಿಸಿದರೆ 3.4 ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣಗೊಳ್ಳುವ ಅವಧಿ ಉತ್ತಮವಾಗಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಹೀಗಿವೆ:
ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ಪಂಜಾಬ್ 11 ರಿಂದ 20 ದಿನಗಳ ನಡುವೆ ದ್ವಿಗುಣಗೊಳ್ಳುವ ಅವಧಿ ಹೊಂದಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು. ಕರ್ನಾಟಕ, ಲಡಾಕ್, ಹರಿಯಾಣ, ಉತ್ತರಾಖಂಡ ಮತ್ತು ಕೇರಳ 20 ರಿಂದ 40 ದಿನಗಳ ನಡುವೆ ದ್ವಿಗುಣ ದರವನ್ನು ಹೊಂದಿರುವವು. ಅಸ್ಸಾಂ, ತೆಲಂಗಾಣ, ಛತ್ತೀಸ್‌ಗಢ್, ಮತ್ತು ಹಿಮಾಚಲ ಪ್ರದೇಶದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 40 ದಿನಗಳಿಗಿಂತ ಹೆಚ್ಚು ದ್ವಿಗುಣಗೊಳಿಸುವ ದರವನ್ನು ಹೊಂದಿವೆ.
ಈವರೆಗೆ ಒಟ್ಟು 7695 ಜನರನ್ನು ಗುಣಪಡಿಸಲಾಗಿದೆ. ಇದು ನಮ್ಮ ಒಟ್ಟು ಚೇತರಿಕೆಯ ಪ್ರಮಾಣವನ್ನು 24.5%ರಷ್ಟನ್ನಾಗಿ ಮಾಡಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 31,332 ಆಗಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in, ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ತು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1619912)
Visitor Counter : 256
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam