ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ದಾಖಲೆಯ ರಸಗೊಬ್ಬರ ಮಾರಾಟ

Posted On: 28 APR 2020 5:08PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ ದಾಖಲೆಯ ರಸಗೊಬ್ಬರ ಮಾರಾಟ

 

ರಾಷ್ಟ್ರೀಯ ಮಟ್ಟದ ಕೋವಿಡ್ -19 ಲಾಕ್‌ ಡೌನ್ ಮಧ್ಯೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಸಗೊಬ್ಬರಗಳ ಇಲಾಖೆ, ರೈತ ಸಮುದಾಯಕ್ಕೆ ರಸಗೊಬ್ಬರಗಳ ದಾಖಲೆಯ ಮಾರಾಟ ಮಾಡಿದೆ.

ಏಪ್ರಿಲ್ 1 ರಿಂದ 22 ರ ಅವಧಿಯಲ್ಲಿ ರೈತರಿಗೆ ರಸಗೊಬ್ಬರಗಳ ಪಿ.ಒ.ಎಸ್ ಮಾರಾಟವು 10.63 ಲಕ್ಷ ಮೆ.ಟನ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 8.02 ಲಕ್ಷ ಮೆ.ಟನ್ ಮಾರಾಟಕ್ಕಿಂತ ಇದು 32 ಶೇಕಡಾ ಹೆಚ್ಚಾಗಿದೆ.

ಏಪ್ರಿಲ್ 1 ರಿಂದ 22 ರ ಅವಧಿಯಲ್ಲಿ ವಿತರಕರು 15.77 ಲಕ್ಷ ಮೆ.ಟನ್ ರಸಗೊಬ್ಬರಗಳನ್ನು ಖರೀದಿಸಿದರು, ಇದು ಕಳೆದ ವರ್ಷದ ಇದೇ ಅವಧಿಯ 10.79 ಲಕ್ಷ ಮೆ.ಟನ್ ಮಾರಾಟಕ್ಕಿಂತ 46 ಶೇಕಡಾ ಹೆಚ್ಚಾಗಿದೆ.

ರಾಷ್ಟ್ರೀಯ ಮಟ್ಟದ ಕೊವಿಡ್ -19 ಲಾಕ್‌ ಡೌನ್ ಕಾರಣದಿಂದಾಗಿ ಸಾಕಷ್ಟು ಚಲನೆಯ ನಿರ್ಬಂಧಗಳ ಹೊರತಾಗಿಯೂ, ಕೇಂದ್ರ ರಸಗೊಬ್ಬರಗಳು, ರೈಲ್ವೆಗಳು, ರಾಜ್ಯಗಳು ಮತ್ತು ಬಂದರುಗಳ ಇಲಾಖೆಗಳ ಸಂಘಟಿತ ಪ್ರಯತ್ನದಿಂದ ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆ ಮತ್ತು ಪೂರೈಕೆ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ.

ಇದು ಮುಂಬರುವ ಖಾರಿಫ್ ಋತುವಿನಲ್ಲಿ ರೈತರಿಗೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮಾಡಿದ ಬದ್ಧತೆಗೆ ಅನುಗುಣವಾಗಿದೆ.

ರಸಗೊಬ್ಬರಗಳ ಸಮಸ್ಯೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ರಾಜ್ಯ ಸರ್ಕಾರಗಳು ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಹೊಂದಿದೆ. ನಾವು ರಾಜ್ಯಗಳ ಕೃಷಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ. ಸಮಯವನ್ನು ಬಿತ್ತನೆ ಮಾಡುವ ಮೊದಲು ರೈತ ಸಮುದಾಯಕ್ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸಚಿವಾಲಯ ಬದ್ಧವಾಗಿದೆ ಎಂದು ಸಚಿವ ಶ್ರೀ ಗೌಡ ಹೇಳಿದರು.

ಏಪ್ರಿಲ್ 17 ರಂದು, 41 ರಸಗೊಬ್ಬರ ರೇಕ್‌ಗಳು ಘಟಕ ಮತ್ತು ಬಂದರುಗಳಿಂದ ಸಾಗಾಟವಾದವು. ಲಾಕ್‌ಡೌನ್ ಅವಧಿಯಲ್ಲಿ , ಇದು ರಸಗೊಬ್ಬರಗಳ ಬೃಹತ್ ಸಾಗಾಟವಾಗಿದೆ. ಒಂದು ರೇಕ್ ಒಂದು ಸಮಯದಲ್ಲಿ 3000 ಮೆ.ಟನ್ ಲೋಡ್ ಅನ್ನು ಹೊಂದಿರುತ್ತದೆ. ರಸಗೊಬ್ಬರ ಕಂಪನಿಗಳಲ್ಲಿ ಉತ್ಪಾದನೆ ಪೂರ್ಣ ಸಾಮರ್ಥ್ಯದಲ್ಲಿ ನಡೆಯುತ್ತಿದೆ.

ಭಾರತ ಸರ್ಕಾರವು, ಅಗತ್ಯ ಸರಕುಗಳ ಕಾಯ್ದೆಯಡಿ ದೇಶದಲ್ಲಿ ರಸಗೊಬ್ಬರ ಘಟಕಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ, ಇದರಿಂದಾಗಿ ಕೃಷಿ ಕ್ಷೇತ್ರವು ಲೊಕ್ ಡೌನ್ ಸಮಸ್ಯೆ ಅನುಭವಿಸಬೇಕಿಲ್ಲ.

ರೈಲ್ವೆ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ರಸಗೊಬ್ಬರಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಪೂರ್ಣ ಪ್ರಮಾಣದಲ್ಲಿ ಸಾಗುತ್ತಿದೆ. ಹಾಗೂ ಕೊವಿಡ್-19 ಅನ್ನು ತಪ್ಪಿಸಲು ಮುನ್ನೆಚ್ಚರಿಕೆಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಮುಖಕವಚಗಳು ಮತ್ತು ಇತರ ಎಲ್ಲಾ ತಡೆಗಟ್ಟುವ ಸಾಧನಗಳನ್ನು ಕಾರ್ಮಿಕರಿಗೆ ಮತ್ತು ಇತರ ಎಲ್ಲ ಕಾರ್ಯ ಸಿಬ್ಬಂದಿಗೆ ಒದಗಿಸಲಾಗುತ್ತದೆ.

***



(Release ID: 1619162) Visitor Counter : 221