ಕೃಷಿ ಸಚಿವಾಲಯ

ಲಾಕ್ ಡೌನ್ ನಡುವೆಯೂ ದೇಶಾದ್ಯಂತ ಚುರುಕಾದ ಗೋಧಿ ಕೊಯ್ಲು

Posted On: 28 APR 2020 1:34PM by PIB Bengaluru

ಲಾಕ್ ಡೌನ್ ನಡುವೆಯೂ ದೇಶಾದ್ಯಂತ ಚುರುಕಾದ ಗೋಧಿ ಕೊಯ್ಲು

2020-21 ಹಿಂಗಾರು ಬೇಸಾಯ (ರಬಿ) ದ್ವಿದಳ ಧಾನ್ಯ ಮತ್ತು ಎಣ್ಣೆಬೀಜಗಳ ಖರೀದಿ ಪ್ರಗತಿಯಲ್ಲಿದೆ

 

ಲಾಕ್‌ ಡೌನ್ ನಡುವೆ ದೇಶಾದ್ಯಂತ ಚುರುಕು ವೇಗದಲ್ಲಿ ಗೋಧಿ ಕೊಯ್ಲು ಮುಂದುವರೆದಿದೆ. ಖಾರಿಫ್ 2020 ರ ಅವಧಿಯಲ್ಲಿ ಬೆಳೆ ಕೊಯ್ಲು ಮತ್ತು ಸಂಸ್ಕರಣೆಗೆ ಸಂಬಂಧಿಸಿದ ಗುಣಮಟ್ಟದ ನಿರ್ವಹಣಾ ಪದ್ಧತಿಗಳ (ಎಸ್‌..ಪಿ.) ಮಾನದಂಡವನ್ನು ರೈತರು ಮತ್ತು ಕೃಷಿಕಾರ್ಮಿಕರು ಈಗಲೂ ಅನುಸರಿಸುತ್ತಿದ್ದಾರೆ. ರೈತರು ಮತ್ತು ಕೃಷಿ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಮತ್ತು ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಅನುಸರಣೆಗಾಗಿ ರಾಜ್ಯಗಳಿಗೆ ಗುಣಮಟ್ಟದ ನಿರ್ವಹಣಾ ಪದ್ಧತಿಗಳ (ಎಸ್‌..ಪಿ.) ಮಾನದಂಡವನ್ನು ವಿತರಿಸಿದೆ.

ವಿವಿಧ ರಾಜ್ಯಗಳು ವರದಿ ಮಾಡಿದಂತೆ ಗೋಧಿ ಬೆಳೆ ಮಾಹಿತಿ ಹೀಗಿದೆ. ಮಧ್ಯಪ್ರದೇಶದಲ್ಲಿ ಸುಮಾರು 98-99% ಗೋಧಿ ಬೆಳೆ, ರಾಜಸ್ಥಾನದಲ್ಲಿ 92-95%, ಉತ್ತರ ಪ್ರದೇಶದಲ್ಲಿ 85-88%, ಹರಿಯಾಣದಲ್ಲಿ 55-60%, ಪಂಜಾಬ್‌ನಲ್ಲಿ 60-65% ಮತ್ತು ಇತರ ರಾಜ್ಯಗಳಲ್ಲಿ 87-88%.

ಪ್ರಸ್ತುತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ 2020-21 ರಬಿ ಋತುವಿನಲ್ಲಿ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್) ಯೋಜನೆಯಡಿ ರೈತರಿಂದ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಲಾಕ್‌ ಡೌನ್ ಅವಧಿಯಲ್ಲಿ ಈ ಬೆಳೆಗಳ ಖರೀದಿ ಸ್ಥಿತಿ ಈ ಕೆಳಗಿನಂತಿರುತ್ತದೆ:

· ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳಿಂದ ಒಟ್ಟು 72,415.82 ಎಂಟಿ ಗ್ರಾಂ (ಬೇಳೆ/ಚನಾ) ಸಂಗ್ರಹಿಸಲಾಗಿದೆ.

· ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಒಡಿಶಾ ಸೇರಿದಂತೆ 7 ರಾಜ್ಯಗಳಿಂದ ಒಟ್ಟು 1,20,023.29 ಎಂಟಿ ತೊಗರಿ ಬೇಳೆ (ತೂರ್ ದಳ)ಯನ್ನು ಸಂಗ್ರಹಿಸಲಾಗಿದೆ.

· ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ 3 ರಾಜ್ಯಗಳಿಂದ ಒಟ್ಟು 1,83,400.87 ಮೆ.ಟನ್ ಸಾಸಿವೆ ಸಂಗ್ರಹಿಸಲಾಗಿದೆ.

ಏತನ್ಮಧ್ಯೆ, ದೇಶಾದ್ಯಂತದ 618 ಎನ್‌ಎಚ್‌ಬಿ ಮಾನ್ಯತೆ ಪಡೆದ ನರ್ಸರಿಗಳಿಂದ ಹಣ್ಣುಗಳು ಮತ್ತು ತರಕಾರಿಗಳ ಲಭ್ಯವಿರುವ ನೆಡುವ ಸಸಿ/ವಸ್ತುಕುರಿತು ಮಾಹಿತಿಯನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್‌ಎಚ್‌ಬಿ) ಸಂಗ್ರಹಿಸಿದೆ. ಈ ಮಾಹಿತಿಯನ್ನು ಕಾನ್ಫೆಡರೇಶನ್ ಆಫ್ ಇಂಡಿಯನ್ ಹಾರ್ಟಿಕಲ್ಚರ್ (ಸಿಐಹೆಚ್), ಸರಕು ಆಧಾರಿತ ಬೆಳೆಗಾರರ ಸಂಘಗಳು, ರಾಜ್ಯ ತೋಟಗಾರಿಕೆ ಕಾರ್ಯಾಚರಣೆಗಳು, ಎನ್‌ಎಚ್‌ಬಿ ರಾಜ್ಯ ಕಚೇರಿಗಳು ಮತ್ತು ಎಲ್ಲಾ ಸಂಬಂಧಿತ ಪಾಲುಗಾರರಿಗೆ ಹಂಚಿಕೆ/ಪ್ರಸಾರ ಮಾಡಲಾಗಿದೆ. ರೈತರಿಗೆ ನೆಡುವ ಸಸಿ/ವಸ್ತುಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ, ಎನ್‌ಎಚ್‌ಬಿ ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ www.nhb.gov.in ಅಪ್‌ಲೋಡ್ ಮಾಡಿದೆ.

***



(Release ID: 1619083) Visitor Counter : 153