ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೊವಿಡ್-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ವೆಬ್‌ ನಾರ್ ಮೂಲಕ ದೇಶಾದ್ಯಂತ ಪೋಷಕರೊಂದಿಗೆ ಸಂವಾದ

Posted On: 27 APR 2020 6:46PM by PIB Bengaluru

ಕೊವಿಡ್-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ವೆಬ್‌ ನಾರ್ ಮೂಲಕ ದೇಶಾದ್ಯಂತ ಪೋಷಕರೊಂದಿಗೆ ಸಂವಾದ

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬದ್ಧವಾಗಿದೆ - ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್ '

ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಏಪ್ರಿಲ್ 28, 2020ರಂದು ಸಂವಾದ ನಡೆಸಲಿದ್ದಾರೆ

 

ಕೊವಿಡ್-19 ನಿಂದ ಉಂಟಾದ ಪರಿಸ್ಥಿತಿ-ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ದೇಶಾದ್ಯಂತ ಪೋಷಕರೊಂದಿಗೆ ವೆಬ್‌ನಾರ್ ಮೂಲಕ ಸಂವಾದ ನಡೆಸಿದರು. ಸಚಿವರು ತಮ್ಮ ವೆಬ್‌ನಾರ್ ಸಂವಾದದ ಮೂಲಕ ಎಲ್ಲಾ ಪೋಷಕರಿಗೆ ಸಚಿವಾಲಯವು ನಡೆಸುತ್ತಿರುವ ಆನ್‌ಲೈನ್ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳ ಮತ್ತು ಅಭಿಯಾನಗಳು ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ದೇಶದ ಪೋಷಕರಿಗೆ ಧನ್ಯವಾದ ಹೇಳುತ್ತಾ, ಕೇಂದ್ರ ಸಚಿವರು, ಸಚಿವಾಲಯವು ತನ್ನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸುತ್ತಿದೆ ಮತ್ತು ಅದಕ್ಕಾಗಿಯೇ ನಾವು ಯುದ್ಧೋಪಾದಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಇದರಿಂದ ದೇಶದ 33 ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಮಯ ಪೋಷಕರಿಗೆ ತಮ್ಮ ಮಕ್ಕಳ ಅಧ್ಯಯನ ಮತ್ತು ಭವಿಷ್ಯದ ಬಗ್ಗೆ ಚಿಂತೆ ಸಹಜವಾಗಿರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಮಾನವ ಸಂಪನ್ಮೂಲ ಸಚಿವಾಲಯ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವ ಶ್ರೀ ಪೋಖ್ರಿಯಾಲ್ ಪೋಷಕರಿಗೆ ಭರವಸೆ ನೀಡಿದರು. ಈ ದಿಕ್ಕಿನಲ್ಲಿ ಸಚಿವಾಲಯವು ಎಲ್ಲಾ ವಿದ್ಯಾರ್ಥಿಗಳ ಶಿಕ್ಷಣವನ್ನು ಇ-ಪಾಠಶಾಲಾ, ಮುಕ್ತ ಶಿಕ್ಷಣ ಸಂಪನ್ಮೂಲಗಳ ರಾಷ್ಟ್ರೀಯ ಭಂಡಾರ (ಎನ್.‌ಆರ್‌.ಒ.ಇ.ಆರ್), ಸ್ವಯಂ, ಡಿಟಿಎಚ್ ಚಾನೆಲ್ ಸ್ವಯಂ ಪ್ರಭು ಇತ್ಯಾದಿಗಳ ಮೂಲಕ ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಆನ್‌ಲೈನ್ ಶಿಕ್ಷಣ ನೀತಿಯನ್ನು ಬಲಪಡಿಸಲು ನಾವು ಭಾರತ್ ಕಲಿಯಿರಿ’ (ಪಢೆ) ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರಲ್ಲಿ ದೇಶಾದ್ಯಂತದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದರು. ಸಚಿವಾಲಯವು 10,000 ಕ್ಕೂ ಹೆಚ್ಚು ಸಲಹೆಗಳನ್ನು ನಾವು ಸ್ವೀಕರಿಸಿದ್ದೇವೆ, ಶೀಘ್ರದಲ್ಲೇ ಮಾರ್ಗಸೂಚಿ ತರಲಿದ್ದೇವೆ.

 

Dr Ramesh Pokhriyal Nishank@DrRPNishank

Interacting with parents from across India @PMOIndia @HMOIndia @HRDMinistry @mygovindia @PIB_India @MIB_India @DDNewslive https://www.pscp.tv/w/cXUx1zFlV0t5WFdhb014UUF8MXluSk9wd1Zaa1Z4UoRWlSog50vxUvs9wTuc76eo57EL2rfSJgKYSixdM3Js …

Dr.Ramesh Pokhriyal @DrRPNishank

Interacting with parents from across India #EducationMinisterGoesLive @PMOIndia @HMOIndia @HRDMinistry @mygovindia @PIB_India @MIB_India @DDNewslive

pscp.tv

1,750

1:08 PM - Apr 27, 2020

Twitter Ads info and privacy

2,570 people are talking about this

ವಿದ್ಯಾದಾನ್ 2.0 ಬಗ್ಗೆ ಪೋಷಕರಿಗೆ ತಿಳಿಸುವಾಗ ಕೇಂದ್ರ ಸಚಿವರು, ಈ ಅಭಿಯಾನದ ಭಾಗವಾಗಿ, ವಿವಿಧ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಠ್ಯಕ್ರಮದ ಪ್ರಕಾರ ವಿಷಯವನ್ನು ಅಭಿವೃದ್ಧಿಪಡಿಸಲು ಮತ್ತು ಕೊಡುಗೆ ನೀಡುವಂತೆ ದೇಶದ ಶಿಕ್ಷಣ ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯ ಒತ್ತಾಯಿಸಿದೆ ಎಂದು ಹೇಳಿದರು. ಶೀಘ್ರದಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಇದರ ಅಡಿಯಲ್ಲಿ ಸಾಕಷ್ಟು ಪಠ್ಯ ಸಾಮಗ್ರಿಗಳು ಸಿಗುತ್ತವೆ ಎಂದು ಶ್ರೀ ಪೋಖ್ರಿಯಾಲ್ ಆಶಿಸಿದ್ದಾರೆ.

ಸಂವಾದದ ಸಮಯದಲ್ಲಿ, ಪೋಷಕರು ತಾವು ಎದುರಿಸುತ್ತಿರುವ ಕೆಲವು ನಿರ್ಣಾಯಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಮುಂದಿಟ್ಟರು. ಎನ್‌ಸಿಇಆರ್‌ಟಿ ಪುಸ್ತಕಗಳ ಲಭ್ಯತೆಯ ಪ್ರಶ್ನೆಯ ಮೇರೆಗೆ ಎನ್‌ಸಿಇಆರ್‌ಟಿ ಬಹುತೇಕ ಎಲ್ಲ ರಾಜ್ಯಗಳಿಗೆ ಪುಸ್ತಕಗಳನ್ನು ಕಳುಹಿಸಿದೆ ಮತ್ತು ಶೀಘ್ರದಲ್ಲೇ ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

ಸಿಬಿಎಸ್‌ಇ 10 ಮತ್ತು 12 ರ ಉಳಿದ ಪರೀಕ್ಷೆಗಳನ್ನು ನಡೆಸುವ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, 29 ಪ್ರಮುಖ ವಿಷಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿದರು.

ಲಾಕ್ ಡೌನ್‌ನಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ನಷ್ಟವನ್ನು ಹೇಗೆ ಕಡಿಮೆ ಮಾಡುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವಾಲಯದ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದರು. ಸಚಿವಾಲಯದ ಡಿ.ಕೆ.ಎಸ್.ಎ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ 80,000 ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಕೆಲವು ವಾರಗಳಲ್ಲಿ ದೇಶದಲ್ಲಿ ಇ-ಕಲಿಕೆ ಗಮನಾರ್ಹ ಏರಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ಲಾಕ್-ಡೌನ್ ಕಾರಣದಿಂದಾಗಿ ಶಿಕ್ಷಣದ ನಷ್ಟವನ್ನು ತಪ್ಪಿಸಲು, ಎನ್‌ಸಿಇಆರ್‌ಟಿಯಿಂದ ಪರ್ಯಾಯ ಕ್ಯಾಲೆಂಡರ್ ರಚಿಸಲಾಗಿದೆ ಎಂದು ಹೇಳಿದರು. ಸಿ.ಬಿ.ಎಸ್‌.ಇಗೆ ಹೊಸ ಶೈಕ್ಷಣಿಕ ಕ್ಯಾಲೆಂಡರ್ ಹೊರಡಿಸಲು ನಿರ್ದೇಶಿಸಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳ ವೃತ್ತಿಜೀವನ, ಪರೀಕ್ಷೆಗೆ ಸಂಬಂಧಿಸಿದ ಮತ್ತು ಇತರ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಉತ್ತರಿಸಿದರು.

ವೆಬ್ನಾರ್ ಸಮಯದಲ್ಲಿ, ಸಚಿವಾಲಯವು ಎಲ್ಲಾ ರಾಜ್ಯಗಳ ಶಿಕ್ಷಣ ಮಂತ್ರಿಗಳು ಮತ್ತು ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಮತ್ತು ಏಪ್ರಿಲ್ 28 2020ರಂದು ಕೊವಿಡ್-19 ಅನ್ನು ನಿರ್ವಹಿಸುವಂತಹ ವಿಷಯಗಳನ್ನು ಚರ್ಚಿಸಲು ಅವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಲಿದ್ದಾರೆ ಎಂದು ಮಾನವ ಸಂಪನ್ಮೂಲ ಸಚಿವರು ಮಾಹಿತಿ ನೀಡಿದರು.

ಈ ವೆಬ್‌ನಾರ್‌ಗೆ ಸೇರ್ಪಡೆಗೊಂಡಿದ್ದ ಎಲ್ಲಾ ಪೋಷಕರಿಗೆ ಶ್ರೀ ಪೋಖ್ರಿಯಾಲ್ ಧನ್ಯವಾದ ಅರ್ಪಿಸಿದ್ದು, ಮುಂದಿನ ವಾರ ಅವರು ವೆಬ್‌ನಾರ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಹೇಳಿದರು. ಪೋಷಕರೊಂದಿಗಿನ ತನ್ನ ಸಂವಾದವನ್ನು ಮುಕ್ತಾಯಗೊಳಿಸುವ ಮೊದಲು, ಸಾಮಾಜಿಕ ದೂರವಾಣಿಯ ಮಾರ್ಗಸೂಚಿಗಳನ್ನು ಅನುಸರಿಸಿ, ಕಠಿಣ ಸಮಯದಲ್ಲಿ ಲಾಕ್‌ ಡೌನ್ ಸೂಚನೆಗಳನ್ನು ತಾಳ್ಮೆಯಿಂದ ಪಾಲಿಸಿದ್ದಕ್ಕಾಗಿ ಸಚಿವರು ಎಲ್ಲಾ ಪೋಷಕರಿಗೆ ಧನ್ಯವಾದ ಅರ್ಪಿಸಿದರು.

***



(Release ID: 1619016) Visitor Counter : 127