ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಸೆಂಟ್ರಲ್ ಪೂಲ್ ಅಡಿ ಗೋಧಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿ

Posted On: 27 APR 2020 7:36PM by PIB Bengaluru

ಸೆಂಟ್ರಲ್ ಪೂಲ್ ಅಡಿ ಗೋಧಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿ

ಋತುವಿನ ಅಗತ್ಯದ 400 ಎಲ್.ಎಂ.ಟಿ ಗುರಿ ಸಾಧಿಸುವ ಸಾಧ್ಯತೆಯಿದೆ

ಲಾಕ್‌ ಡೌನ್ ಸಮಯದಲ್ಲಿ ಎಫ್‌.ಸಿ.ಐ ರವಾನೆ ಮಾಡುವ ರೈಲು ಲೋಡ್‌ಗಳ ಸಂಖ್ಯೆ 2000 ದಾಟಿದೆ

ಸುಮಾರು 58.44 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು 2087 ರೈಲು ಲೋಡ್ ಗಳ ಮೂಲಕ ದೇಶಾದ್ಯಂತ ರವಾನೆ

 

ದೇಶದ ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಗೋಧಿ ಸಂಗ್ರಹಣೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕೇಂದ್ರ ಸಂಗ್ರಹ ಖಾತೆಯಲ್ಲಿ, 26.04.2020ರವರೆಗೆ ಈಗಾಗಲೇ 88.61 ಲಕ್ಷ ಮೆಟ್ರಿಕ್ ಟನ್ (ಎಲ್‌.ಎಂ.ಟಿ) ಗೋಧಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಪ್ರಮುಖ ಕೊಡುಗೆಯಾಗಿ ಪಂಜಾಬ್‌ನಿಂದ 48.27 ಎಲ್.‌ಎಂ.ಟಿ ಮತ್ತು ಹರಿಯಾಣ 19.07 ಎಲ್‌.ಎಂ.ಟಿ ಗೋಧಿ ಹೊಂದಿದೆ. ಪ್ರಸ್ತುತ ಸಂಗ್ರಹಣೆಯ ವೇಗದಲ್ಲಿ ಹೋದರೆ, ಋತುವಿನ ಆವಶ್ಯಕ 400 ಎಲ್‌ಎಂಟಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಗುರಿಯನ್ನು ಸಾಧಿಸಬಹುದು. ಕೊವಿಡ್-19 ವೈರಸ್ ಹರಡುವ ಅಪಾಯವನ್ನು ಪರಿಗಣಿಸಿ, ಸಾಕಷ್ಟು ಪೂರ್ವ-ಎಚ್ಚರಿಕೆಗಳನ್ನು ತೆಗೆದುಕೊಂಡ ನಂತರ ಮತ್ತು ಮಂಡಿಯಲ್ಲಿ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಂಡು ಸಂಗ್ರಹಣೆ ಕಾರ್ಯವನ್ನು ಕೈಗೊಳ್ಳಲಾಗುವುದು.

ರೈತರು ಯಾವುದೇ ರೀತಿಯ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೆಚ್ಚುವರಿ ಆಹಾರ ಧಾನ್ಯಗಳ ಸಂಗ್ರಹನ್ನು ಹೆಚ್ಚು ಬಳಕೆ ಮಾಡುವ ಪ್ರದೇಶಗಳಿಗೆ ರವಾನಿಸುವ ಆರೋಗ್ಯಕರ ವಿಧಾನ ಮುಂದುವರಿದಿದೆ. ಭಾರತದ ಆಹಾರ ನಿಗಮವು (ಎಫ್‌.ಸಿ.ಐ) ಲಾಕ್‌ ಡೌನ್ ಅವಧಿಯಲ್ಲಿ 2000 ರೈಲು ಹೊರೆಗಳಷ್ಟು ಧಾನ್ಯಗಳನ್ನು ರವಾನೆ ಸಾಗಾಟ ಮಾಡಿದೆ.

ಭಾರತ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಆಹಾರ ಧಾನ್ಯಗಳ ಅವಶ್ಯಕತೆಗಳನ್ನು ಪೂರೈಸಲು 27.04.20 ರವರೆಗೆ, ಒಟ್ಟು 2087 ರೈಲು ಲೋಡ್‌ಗಳಲ್ಲಿ ಸುಮಾರು 58.44 ಲಕ್ಷ ಮೆ.ಟನ್ ಧಾನ್ಯ ರವಾನಿಸಲಾಗಿದೆ. ಅನೇಕ ರಾಜ್ಯಗಳ ಪ್ರಮುಖ ಇಳಿಸುವಿಕೆಯ ಕೇಂದ್ರಗಳನ್ನು ಹಾಟ್‌ಸ್ಪಾಟ್‌ಗಳು ಮತ್ತು ಸೂಕ್ಷ್ಮ ಧಾರಕ ವಲಯಗಳೆಂದು ಘೋಷಣೆಯಾದ ತೀವ್ರ ನಿರ್ಬಂಧಗಳು ಎದುರಾದರೂ, ಈ ಅವಧಿಯಲ್ಲಿ 1909 ರೇಕ್‌ಗಳ 53.47 ಎಲ್‌.ಎಮ್‌.ಟಿ ಸ್ಟಾಕ್‌ಗಳನ್ನು ಇಳಿಸುವ ಕಾರ್ಯಮಾಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮೇಣ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ, ಮುಂದಿನ ದಿನಗಳಲ್ಲಿ ಇಳಿಸುವಿಕೆಯ ವೇಗವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಆನ್ ಯೋಜನೆ (ಪಿ.ಎಂ.ಜಿ.ಕೆ..) ಅಡಿಯಲ್ಲಿ 3 ತಿಂಗಳವರೆಗೆ (ಏಪ್ರಿಲ್ ನಿಂದ ಮೇ 2020 ರವರೆಗೆ) ನೀಡುವ ಉಚಿತ ಆಹಾರ ಧಾನ್ಯಗಳನ್ನು ಎತ್ತುವುದು, ಸಾಗಿಸುವುದು ಮತ್ತು ಇಳಿಸುವ ಕಾರ್ಯ ಪ್ರಗತಿಯಲ್ಲಿದೆ. ಲಡಾಖ್ ಮತ್ತು ಲಕ್ಷದ್ವೀಪದ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 3 ತಿಂಗಳವರೆಗೆ ಸಂಪೂರ್ಣ ಕೋಟಾ ಎತ್ತುವಿಕೆ, ಸಾಗಿಸುವುದು ಮತ್ತು ಇಳಿಸುವ ಕಾರ್ಯ ಈಗಾಗಲೇ ಪೂರ್ಣವಾಗಿದೆ.

ಇನ್ನೂ 7 ರಾಜ್ಯಗಳ ಜೂನ್ ತಿಂಗಳ ಕೋಟಾವನ್ನು ಹಾಗೂ 20 ರಾಜ್ಯಗಳ ಪ್ರಸ್ತುತ ಮೇ ತಿಂಗಳ ಕೋಟಾವನ್ನು ಸಾಗಾಟಕ್ಕೆ ತುಂಬುತ್ತಿವೆ. 8 ರಾಜ್ಯಗಳು ಏಪ್ರಿಲ್ ತಿಂಗಳ ಕೋಟಾವನ್ನು ಸ್ವೀಕರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಎಲ್ಲಾ ರಾಜ್ಯಗಳ ಅಗತ್ಯತೆಗಳನ್ನು ಪೂರೈಸಲು ಎಫ್‌.ಸಿ.ಐ ಸಾಕಷ್ಟು ಪಾಲುಗಳ ವ್ಯವಸ್ಥೆ ಮಾಡಿದೆ. ಪಶ್ಚಿಮ ಬಂಗಾಳದ ವಿಷಯದಲ್ಲಿ, 3 ತಿಂಗಳ ಹಂಚಿಕೆಗಾಗಿ ಸುಮಾರು 9 ಲಕ್ಷ ಮೆ.ಟನ್ ಹೆಚ್ಚುವರಿ ಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ 4 ರಾಜ್ಯಗಳಿಂದ ಅಂದರೆ ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್ ಗಡ ಮತ್ತು ಒಡಿಶಾದಿಂದ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಸುಮಾರು 227 ರೈಲು ಲೋಡ್ ಅಕ್ಕಿಯನ್ನು ಅಲ್ಪಾವಧಿಯಲ್ಲಿಯೇ ಹೊಂದಿಸಿ ಸಾಗಿಸಲು ಈಗಾಗಲೇ ಕಾರ್ಯಯೋಜಿಸಲಾಗಿದೆ.

***



(Release ID: 1619008) Visitor Counter : 155