ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಹೊಸ ಮಾಹಿತಿ

Posted On: 27 APR 2020 6:25PM by PIB Bengaluru

ಕೋವಿಡ್ – 19 ಹೊಸ ಮಾಹಿತಿ

 

ಸನ್ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಕೆಂಪು ವಲಯ ಮತ್ತು ಕಿತ್ತಳೆ ವಲಯದಲ್ಲಿ ಬರುವ ಜಿಲ್ಲೆಗಳಿಗೆ ಕಟ್ಟುನಿಟ್ಟಾಗಿ ವೈರಸ್ ಹರಡುವ ಸರಪಳಿಯನ್ನು ಮುರಿಯಬೇಕು ಎಂದು ಅವರು ಸಲಹೆ ನೀಡಿದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಾಟ್ಸ್ಪಾಟ್ಗಳಲ್ಲಿ ಅಂದರೆ ಕೆಂಪು ವಲಯ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಇರುವ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಕೆಂಪು ವಲಯಗಳನ್ನು ಕಿತ್ತಳೆ ಬಣ್ಣಕ್ಕೆ ಮತ್ತು ನಂತರ ಹಸಿರು ವಲಯಗಳಾಗಿ ಪರಿವರ್ತಿಸುವತ್ತ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಯತ್ನಗಳನ್ನು ನಿರ್ದೇಶಿಸಬೇಕು ಎಂದು ಅವರು ಹೇಳಿದ್ದಾರೆ. ಕೊರೊನಾವೈರಸ್ ಖಾಯಿಲೆಯೊಂದಿಗೆ ಯಾವುದೇ ಕಳಂಕವು ಅಂಟಬಾರದು ಮತ್ತು ಆರೋಗ್ಯ ಕೋವಿಡ್-19ಅನ್ನು ಹೊರತುಪಡಿಸಿ ಅಗತ್ಯವಿರುವ ಇತರ ಆರೋಗ್ಯ ಸೇವೆಗಳನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ. ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಗಳು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.

ಹಿಂದೆ ಸೋಂಕಿನ ಪ್ರಕರಣಗಳನ್ನು ಹೊಂದಿದ್ದ ದೇಶದ 16 ಜಿಲ್ಲೆಗಳು ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ. ಪಟ್ಟಿಗೆ ಸೇರ್ಪಡೆಗೊಂಡ 3 ಹೊಸ ಜಿಲ್ಲೆಗಳು ಹೀಗಿವೆ (ಏಪ್ರಿಲ್ 24):

  • ಮಹಾರಾಷ್ಟ್ರದ ಗೊಂಡಿಯಾ
  • ಕರ್ನಾಟಕದ ದಾವಣಗೆರೆ
  • ಬಿಹಾರದ ಲಖಿ ಸರಾಯ್

ಹಿಂದೆ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳಿಲ್ಲದ ಉತ್ತರ ಪ್ರದೇಶದ ಪಿಲಿಭಿತ್ ಮತ್ತು ಪಂಜಾಬ್ ಶಾಹೀದ್ ಭಗತ್ ಸಿಂಗ್ ನಗರ ಜಿಲ್ಲೆಗಳಲ್ಲಿ ಈಗ ಹೊಸ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, (25 ರಾಜ್ಯಗಳು / ಕೇಂದ್ರಾಡಳಿತ ಪ್ರಧೇಶಗಳು) ಒಟ್ಟು 85 ಜಿಲ್ಲೆಗಳು ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತ ಸರ್ಕಾರದ ಅಧಿಕಾರಯುಕ್ತ ಸಮಿತಿ 5 (ಇಜಿ 5) ಯು ಕೋವಿಡ್-19 ಹರಡುವಿಕೆಯ ಆರಂಭದ ನಂತರ ಸಾಂಕ್ರಾಮಿಕ ರೋಗದಿಂದಾಗುವ ಸವಾಲುಗಳನ್ನು ಎದುರಿಸಲು ಮತ್ತು ದೇಶದಲ್ಲಿ ಅದರ ಹರಡುವಿಕೆಯನ್ನು ನಿಯಂತ್ರಿಸಲು ಸರಬರಾಜು ಸರಪಳಿ ಮತ್ತು ಸಾಗಾಣಿಕೆಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಮಾಹಿತಿಗಳನ್ನು ಹಂಚಿಕೊಂಡಿತು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯದರ್ಶಿ ಮತ್ತು ಇಜಿ 5 ಸಂಚಾಲಕರಾದ ಶ್ರೀ ಪರಮೇಶ್ವರನ್ ಅಯ್ಯರ್ ಅವರು ನಾಲ್ಕು ನಿರ್ಣಾಯಕ ಕ್ಷೇತ್ರಗಳ ಅಂದರೆ ಕೃಷಿ, ಉತ್ಪಾದನೆ, ಸಾಗಾಣಿಕೆ ಮತ್ತು ದುರ್ಬಲವರ್ಗದ ಸವಾಲುಗಳನ್ನು ಎದುರಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿಯನ್ನು ಹಂಚಿಕೊಂಡರು ಆಹಾರ ಮತ್ತು ಔಷಧಿಗಳನ್ನು ಸಾಗಿಸುತ್ತಿರುವ ಟ್ರಕ್ಗಳ ಶೇಕಡಾವಾರು ಪ್ರಮಾಣವು ಮಾರ್ಚ್ 30 ರಂದು 46% ರಿಂದ 25 ಏಪ್ರಿಲ್ 2020ರವರೆಗೆ 76% ಕ್ಕೆ ಏರಿದೆ ಎಂದು ಅವರು ಹೇಳಿದರು. ಅದೇ ಅವಧಿಯಲ್ಲಿ, ರೈಲ್ವೆ ರೇಕ್ಗಳ ಸಾಗಣಿಯು ಶೇಕಡಾ 67% ರಿಂದ 76% ಕ್ಕೆ ಏರಿದೆ, ಶೇಕಡಾವಾರು ಬಂದರುಗಳ ಸಂಚಾರ ನಿರ್ವಹಿಸುವಿಕೆಯು 70% ರಿಂದ 87% ಕ್ಕೆ ಏರಿದೆ, ಮತ್ತು ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಂಡಿಗಳ ಶೇಕಡಾವಾರು ಪ್ರಮಾಣವು 61% ರಿಂದ 79% ಕ್ಕೆ ಏರಿದೆ. ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಉದ್ಯಮಗಳಿಂದ ಪ್ರತಿದಿನ 1.5 ಕೋಟಿಗೂ ಹೆಚ್ಚು ಜನರಿಗೆ ಬಿಸಿಯೂಟ ನೀಡಲಾಗುತ್ತಿದೆ.

ಇಜಿ 5 ಪಾತ್ರದ ಬಗ್ಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಸರಬರಾಜು ಸರಪಳಿಗಳಲ್ಲಿ ನೀತಿ ಮತ್ತು ಅನುಷ್ಠಾನದ ಅಡಚಣೆಗಳನ್ನು ಸರಾಗಗೊಳಿಸುವ ಬಗ್ಗೆ, ಕ್ಷೇತ್ರಗಳಲ್ಲಿ ನಿರ್ದಿಷ್ಟ ಅಡಚಣೆಗಳ ನಿವಾರಣೆ ಮತ್ತು ಪ್ರಮುಖ ಸೂಚಕಗಳನ್ನು ಪತ್ತೆಹಚ್ಚುವ ಮತ್ತು ಪೂರೈಕೆ ಯೋಧರ ಉತ್ತಮ ಅಭ್ಯಾಸಗಳನ್ನು ಪ್ರಸಾರ ಮಾಡುವ ಬಗ್ಗೆ ಸರ್ಕಾರ ಗಮನ ಹರಿಸಿದೆ. ಇದಕ್ಕಾಗಿ ಅವರು ಸಂಬಂಧಪಟ್ಟ ಇಲಾಖೆಗಳು, ಗೃಹ ವ್ಯವಹಾರಗಳ ಸಚಿವಾಲಯ, ಮತ್ತು ಆಹಾರ, ಔಷಧ ಸಾಗಣೆದಾರರು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಮಂಡಿಗಳು ಸೇರಿದಂತೆ ಉದ್ಯಮದ ಇತರ ಪ್ರಮುಖ ಪಾಲುದಾರರೊಂದಿಗೆ ಸಹಯೋಗ ಹೊಂದುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಸ್ತುತ, 6,184 ಜನರನ್ನು ಗುಣಪಡಿಸಲಾಗಿದೆ ಇದರಿಂದ ಚೇತರಿಕೆಯ ಪ್ರಮಾಣವು 22.17% ರಷ್ಟು ಆಗಿದೆ.. ನಿನ್ನೆಯಿಂದ, 1396 ಹೊಸ ಪ್ರಕರಣಗಳ ವರದಿಯಾಗಿದೆ. ಅಲ್ಲದೆ, ಭಾರತದಲ್ಲಿ ಒಟ್ಟು ಧೃಡಪಟ್ಟ ಕೋವಿಡ್-19 ಸೋಂಕಿತರ ಸಂಖ್ಯೆ 27,892 ಆಗಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ವರದಿಯಾದ 48 ಹೊಸ ಸಾವಿನ ಪ್ರಕರಣ ಸೇರಿ ಒಟ್ಟು 872 ಸಾವುಗಳು ವರದಿಯಾಗಿವೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು  technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1618839) Visitor Counter : 263